KMF SHIMUL Recruitment: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | KMF SHIMUL Jobs 2026: 194 Assistant Manager, Jr Technician Posts in Karnataka Milk Fed

ಕರ್ನಾಟಕದ ಹಾಲು ಒಕ್ಕೂಟದಲ್ಲಿ ನೇಮಕಾತಿ

ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಒದಗಿಸಿದೆ. ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ವ್ಯವಸ್ಥಾಪಕ ಹಾಗೂ ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಸಂಸ್ಥೆಯಲ್ಲಿ ಸ್ಥಿರ ಉದ್ಯೋಗ ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆಬ್ರವರಿ 21 ರವರೆಗೆ ವಿಸ್ತರಿಸಲಾಗಿದೆ.

ಸಂಸ್ಥೆಯ ವಿವರಗಳು:

  • ಸಂಸ್ಥೆ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ (KMF SHIMUL )
  • ಒಟ್ಟು ಹುದ್ದೆಗಳು: 194
  • ಉದ್ಯೋಗ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ
  • ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕರು, ಜೂನಿಯರ್ ಟೆಕ್ನಿಷಿಯನ್

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ಪದವಿ, B.Sc, B.Com, BBA, BBM, BE/B.Tech, BVSc & AH, M.Sc, MBA ಈಅರ್ಹತೆಗಳಲ್ಲಿ ಯಾವುದಾದರೂ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 35 ವರ್ಷ

ವಯಸ್ಸಿನ ಸಡಿಲಿಕೆ:

  • 2A/2B/3A/3B ಅಭ್ಯರ್ಥಿಗಳು – 3 ವರ್ಷ
  • SC/ST/ಪ್ರವರ್ಗ-I ಅಭ್ಯರ್ಥಿಗಳು – 5 ವರ್ಷ

ಅರ್ಜಿ ಶುಲ್ಕ:

  • SC/ST/ಪ್ರವರ್ಗ-I/PWD – 500ರೂ.
  • ಇತರರು – 1000 ರೂ.

ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಮೂಲಕ ನಡೆಯಲಿದೆ:

  • ಲಿಖಿತ ಪರೀಕ್ಷೆ
  • ಅರ್ಹತಾ ಪಟ್ಟಿ (ಮೆರಿಟ್ ಲಿಸ್ಟ್)
  • ಮೌಖಿಕ ಸಂದರ್ಶನ

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

ಅರ್ಜಿ ಸಲ್ಲಿಸುವ ವಿಧಾನ:

ಮೊದಲು KMF SHIMUL ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು. ನಂತರ ಆನ್‌ಲೈನಲ್ಲಿ ಅಧಿಕೃತ ವೆಬ್​ಸೈಟ್​​ ಮೂಲಕ ಅರ್ಜಿ ಸಲ್ಲಿಸಿ. ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳು ಮತ್ತು ಇತ್ತೀಚಿನ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ. ಬಳಿಕ ವರ್ಗಾನುಸಾರ ಅರ್ಜಿ ಶುಲ್ಕ ಪಾವತಿಸಿ ‘Apply’ ಬಟನ್ ಕ್ಲಿಕ್ ಮಾಡಿ. ಕೊನೆಗೆ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯ ಪ್ರಿಂಟ್​ ಕಾಪಿ ಡೌನ್ಲೋಡ್​ ಮಾಡಿ ಇಟ್ಟುಕೊಳ್ಳಿ.

ಈ ನೇಮಕಾತಿ ಕರ್ನಾಟಕದ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು; ಯಕ್ಷಗಾನದಲ್ಲೂ ಗಿಲ್ಲಿ ಹಾಡಿನದ್ದೇ ಹವಾ – Kannada News | Ghilli actor Doddava Doddava Dosa Kodu song sung by Yakshagana artists

ಕರಾವಳಿ ಗಂಡು ಕಲೆ ಯಕ್ಷಗಾನ (Yakshagana) ಎಂದಾಗ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಯಕ್ಷಗಾನ ವನ್ನು ನೋಡುವುದೇ ಕಣ್ಣಿಗೆ ಆನಂದ. ಪ್ರಸಂಗದಲ್ಲಿ ತಮಾಷೆಭರಿತವಾದ ಸಂಭಾಷಣೆಗಳು ಪ್ರೇಕ್ಷಕರನ್ನು ನಕ್ಕು ನಗಿಸುತ್ತವೆ. ಆದರೆ ಪೌರಾಣಿಕ ಪ್ರಸಂಗದ ನಡುವೆ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳು ಸೇರಿಸುತ್ತಾರೆ. ಆದರೆ ಇದೀಗ ಯಕ್ಷಗಾನದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ (Bigg Boss Winner Gilli) ಹಾಡಿನ ಹವಾ ಜೋರಾಗಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ನಟ ಹೇಳುತ್ತಿದ್ದ ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು ಹಾಡು ಹೇಳಿ ಕಲಾವಿದರು ಪ್ರೇಕ್ಷಕ ವರ್ಗವನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಯಕ್ಷ ಚರಿತ್ರೆ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಲಾವಿದರು ವೇದಿಕೆಯ ಮೇಲೆ ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು ಎಂದು ಹೇಳಿದ್ದು, ಈ ತಮಾಷೆ ಭರಿತ ಸಂಭಾಷಣೆಯನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಮಿತಿ ಮೀರಿದ ಹಾಸ್ಯ, ಇದು ಯಕ್ಷಗಾನಕ್ಕೆ ಅಗತ್ಯ ಇದೆಯೇ ಎಂದು ಕೇಳಿದ್ದಾರೆ. ಇನ್ನೊಬ್ಬರು, ಗಿಲ್ಲಿ ಸೂಪರ್ ಎಂದು ಹೇಳಿದರೆ, ಮತ್ತೊಬ್ಬರು, ನೆಗೆಟಿವ್ ಕಾಮೆಂಟ್ ಮಾಡುವವರು ಗಿಲ್ಲಿ ಹೇಟರ್ಸ್ ನೀವು ತಲೆ ಕೆಡಿಸಿಕೊಳ್ಳಬೇಡಿ ಅಷ್ಟಕ್ಕೂ ಆ ಹಾಡಲ್ಲಿ ಅಂತಹ ಕೆಟ್ಟ ಶಬ್ದ ಏನು ಇಲ್ಲ ಚನ್ನಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು – Kannada News | Hubballi: Crores in Transactions Found in Auto Driver’s Bank Account; Investigation Uncovers Source of Funds

ಆಟೋ ಚಾಲಕನ ಮನೆಯಲ್ಲಿ ಪೊಲೀಸ್ ತಪಾಸಣೆ, ಇರ್ಫಾನ್‌ Image Credit source: tv9 kannada

ಹುಬ್ಬಳ್ಳಿ, ಫೆಬ್ರವರಿ 11: ಆತ ಹೆಸರಿಗೆ ಬಡ ಆಟೋ ಚಾಲಕ, ಬ್ಯಾಂಕ್‌ ಖಾತೆಯಲ್ಲಿನ ಹಣ ವರ್ಗಾವಣೆಯಾಗಿದ್ದು, ಮಾತ್ರ ಲಕ್ಷ ಲಕ್ಷ ಹಣ. ಸೈಬರ್ ಅಪರಾಧಗಳ ಪ್ರಕರಣಗಳಿಗೆ (Cyber crime case)
ಸಂಬಂಧಿಸಿದಂತೆ ಆ ಅಕೌಂಟ್ ಬಳಕೆಯಾಗಿತ್ತು. ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡ ಹುಬ್ಬಳ್ಳಿ (Hubballi) ಸೆನ್ ಠಾಣೆಯ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಆ ಮೂಲಕ ಅನೇಕ ಅಂಶಗಳು ಹೊರಬರುತ್ತಿವೆ. ಮೂಲ ಅಕೌಂಟ್ ಮಾಲೀಕ, ತನ್ನ ಅಕೌಂಟ್​ನ್ನು ಮತ್ತೊಬ್ಬರಿಗೆ ನೀಡಿದ್ದು ತನಿಖೆಯಲ್ಲಿ ಬಯಲಾಗಿದೆ.

ಪ್ರಕರಣದ ಹಿನ್ನೆಲೆ 

ದೇಶದಲ್ಲಿ ಪ್ರತಿನಿತ್ಯ ಅನೇಕ ಕಡೆ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಹತ್ತಾರು ರೀತಿಯಿಂದ ಸೈಬರ್ ವಂಚಕರು ಜನರನ್ನು ವಂಚಿಸಿ ಲಕ್ಷದಿಂದ ಕೋಟಿ ಕೋಟಿವರಗೆ ಹಣ ಲಪಟಾಯಿಸುತ್ತಲೇ ಇದ್ದಾರೆ. ಇದೇ ರೀತಿಯ ಸೈಬರ್ ಅಪರಾಧಕ್ಕೆ ಹುಬ್ಬಳ್ಳಿಯ ಆಟೋ ಚಾಲಕನ ಅಕೌಂಟ್​ವೊಂದು ಬಳಕೆಯಾಗಿರುವುದು ಇತ್ತೀಚೆಗೆ ಗೊತ್ತಾಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ಒಂದೇ ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಜಮೆಯಾಗಿರುವ ಪ್ರಕರಣವೊಂದರ ಬೆನ್ನು ಬಿದ್ದಿರುವ ಹುಬ್ಬಳ್ಳಿಯ ಸಿಇಎನ್ ಠಾಣೆ ಪೊಲೀಸರು ಕಳೆದ ಫೆಬ್ರವರಿ 2 ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಜ್ಯ ಸೈಬರ್ ಕಮಾಂಡ್ ಘಟಕದ ಮಾಹಿತಿ ಆಧರಿಸಿ ಆಯುಕ್ತಾಲಯ ವ್ಯಾಪ್ತಿಯಲ್ಲಿ ಸಂಶಯಾಸ್ಪದ ಎನ್ನಿಸಿದ ಒಟ್ಟು 4,585 ಬ್ಯಾಂಕ್ ಖಾತೆಗಳ ಮಾಹಿತಿ ಪರಿಶೀಲಿಸಲಾಗಿದೆ. ಇದರಲ್ಲಿ ಒಟ್ಟು 69 ಬ್ಯಾಂಕ್ ಖಾತೆಗಳನ್ನು ಆರಂಭದಲ್ಲಿ ಪರಿಶೀಲನೆ ನಡೆಸಿದ್ದರು. ಅದರಲ್ಲಿ ಹುಬ್ಬಳ್ಳಿ ಗೋಪನಕೊಪ್ಪದ ನಿವಾಸಿ ಇರ್ಫಾನ್‌ ಅನ್ನೋ ವ್ಯಕ್ತಿಯ ಅಕೌಂಟ್​ನಿಂದ ಲಕ್ಷಾಂತರ ರೂ ಹಣ ಸೈಬರ್ ಅಪರಾಧ ಪ್ರಕರಣಗಳಿಂದ ಜಮೆ ಆಗಿರುವುದು ಬೆಳಕಿಗೆ ಬಂದಿತ್ತು.

80 ಲಕ್ಷಕ್ಕೂ ಅಧಿಕ ಹಣ ಜಮೆ

ಇರ್ಫಾನ್ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕುಕ್ಕಿಂಗ್ ವಿತ್ ಕೇಟರಿಂಗ್ ಹೆಸರಲ್ಲಿ ಚಾಲ್ತಿ ಖಾತೆಯನ್ನು ಆರಂಭಿಸಿದ್ದ. ಅದೇ ಅಕೌಂಟ್​ಗೆ ಲಕ್ಷಾಂತರ ರೂ ಹಣ ಜಮೆಯಾಗಿತ್ತು. ರಾಜ್ಯದ ನಾಲ್ಕು ಕಡೆ ಸೇರಿದಂತೆ ದೇಶದ ವಿವಿಧಡೆಯಿಂದ ಒಟ್ಟು ಹದಿನಾಲ್ಕು ಬಾರಿ ಈ ಅಕೌಂಟ್​ಗೆ ಸರಿಸುಮಾರು 80 ಲಕ್ಷಕ್ಕೂ ಅಧಿಕ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.

ಆಟೋ ಚಾಲಕನ ಅಕೌಂಟ್​ಗೆ ಸೈಬರ್ ಅಪರಾಧಗಳಿಂದ ಲಕ್ಷ ಲಕ್ಷ ಹಣ ಜಮೆಯಾಗಿದ್ದು, ಈಗಾಗಲೇ ನಗರದ ಗೋಪನಕೊಪ್ಪದಲ್ಲಿರುವ ಚಾಲಕ ಇರ್ಫಾನ್​​ನನ್ನು ಪೂರ್ವಾಪರ ಪರಿಶೀಲಿಸಿದ್ದು, ಬ್ಯಾಂಕ್‌ಗೆ ಸಂಬಂಧಿಸಿದ 16 ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇದರ ಮಧ್ಯೆ ಖಾಕಿ ಕೇಶ್ವಾಪುರದ ಅರುಣ ಜಮಖಂಡಿ ಎಂಬಾತನ ಮತ್ತೆಗೆ ಮುಂದಾಗಿದೆ. ಈತನ ಬ್ಯಾಂಕ್ ಖಾತೆಯನ್ನು ಅರುಣ ಜಮಖಂಡಿ ಪಡೆದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಸಂಬಂಧಿಗೆ ಬ್ಯಾಂಕ್ ಪಾಸ್ ಬುಕ್​​ ನೀಡಿರುವ ಆಟೋ ಚಾಲಕ

ಬಿಹಾರ, ದೆಹಲಿ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ 4 ಕಡೆ ಇರ್ಫಾನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾಣೆಯಾಗಿದೆ. ಈ ಕುರಿತು ಫೆಬ್ರವರಿ 2ರಂದು ಸಿಇಎನ್ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಸತತ ಒಂದು ವಾರದಿಂದ ಬೆನ್ನು ಬಿದ್ದ ಪೊಲೀಸರಿಗೆ ವಶದಲ್ಲಿರುವ ಇರ್ಫಾನ್ ತನ್ನ ಬ್ಯಾಂಕ್ ಖಾತೆ ಕುರಿತು ಇಂಚಿಂಚೂ ಮಾಹಿತಿ ಕೊಟ್ಟಿದ್ದಾನೆ. ಅಲ್ಲದೆ ತಾನು ತನ್ನ ಬ್ಯಾಂಕ್ ಪಾಸ್ ಬುಕ್​ನ್ನು ತನ್ನ ದೂರದ ಸಂಬಂಧಿ ಅರುಣ ಜಮಖಂಡಿಗೆ ಕೊಟ್ಟಿರುವುದನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಯಾಗಿರುವ ಅರುಣ್ ಜಮಖಂಡಿ ಪತ್ತೆಗೆ ಸೆನ್ ಠಾಣೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಆತ ಗೋವಾ ಸೇರಿದಂತೆ ಅನೇಕ ಕಡೆ ಓಡಾಡುತ್ತಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಓರ್ವ ವ್ಯಕ್ತಿ 19 ಖಾತೆಗಳ ಮೂಲಕ 11.48 ಕೋಟಿ ರೂ ವ್ಯವಹಾರ: ಪೊಲೀಸರ ರೋಚಕ ಕಾರ್ಯಚರಣೆ

ಸದ್ಯ ಅರುಣ ಜಮಖಂಡಿ ತಲೆಮರೆಸಿಕೊಂಡಿದ್ದು, ಆತನ ಮನೆಯನ್ನು ತಪಾಸಣೆ ಮಾಡಲಾಗಿದೆ. ಈತ ಎಷ್ಟು ಜನರ ಬ್ಯಾಂಕ್ ಪುಸ್ತಕಗಳನ್ನು ಪಡೆದಿದ್ದಾನೆ, ಎಷ್ಟು ಹಣ ವರ್ಗಾವಣೆಯಾಗಿದೆ, ಯಾರಿಗೆ ವರ್ಗಾವಣೆ ಮಾಡಿದ್ದಾನೆ ಎನ್ನುವುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup: ಆಸೀಸ್ ನಾಯಕ ಮಿಚೆಲ್ ಮಾರ್ಷ್​ಗೆ ಗಂಭೀರ ಗಾಯ; ಸ್ಟೀವ್ ಸ್ಮಿತ್​ಗೆ ಬುಲಾವ್

Source link

ಈ ತಿಂಗಳು ವೃಷಭ ರಾಶಿಯವರಿಗೆ ಯಾವ ಯಾವ ದಶೆ ಶುಭ ಮತ್ತು ಅಶುಭ? – Kannada News | Vrushabha Rashi February Horoscope: Good and Bad Planetary Effects on Your Life

ಫೆಬ್ರವರಿ ತಿಂಗಳಲ್ಲಿ ಗ್ರಹಗಳ ಸಂಚಾರವು ವಿಶೇಷವಾಗಿದ್ದು ಫಲವೂ ಅನುಕೂಲ ಮತ್ತು ಪ್ರತಿಕೂಲಗಳಿಂದ ಮಿಶ್ರಿತವಾಗಿರಲಿದೆ. ವೃಷಭ ರಾಶಿಯವರ ಜಾತಕದಲ್ಲಿ ಗ್ರಹಗಳ ಸಂಚಾರವು ಮಿಶ್ರಫಲಗಳನ್ನು ನೀಡುತ್ತವೆ. ಮುಖ್ಯವಾಗಿ ನಿಮ್ಮ ರಾಶ್ಯಧಿಪತಿ ಶುಕ್ರ ಮತ್ತು ಕರ್ಮಕಾರಕ ಶನಿ ಈ ತಿಂಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಶನಿಯ ರಾಶಿಯಲ್ಲಿಯೇ ಶುಕ್ರ ಹಾಗೂ ಶುಕ್ರನ ಉಚ್ಚ ಸ್ಥಾನದಲ್ಲಿ ಶನಿ ಇರುವರು. ಹಾಗಾಗಿ ಹೊಸ ರೀತಿಯ ಅನುಭವಗಳು ನಿಮಗೆ ಆಗುವ ಸಾಧ್ಯತೆ ಇದೆ. ​ಯಾವ ಗ್ರಹಗಳು ನಿಮಗೆ ಶುಭ ಮತ್ತು ಯಾವುದು ಅಶುಭ ಎಂಬುದರ ವಿವರ ಇಲ್ಲಿದೆ.

ಶುಭ ಫಲ ಗ್ರಹಗಳು

​ಶುಕ್ರ :

ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಈ ತಿಂಗಳು ನಿಮಗೆ ಅತ್ಯಂತ ಶುಭ ನೀಡಲಿದ್ದಾನೆ. ಇದು ನಿಮ್ಮ ವ್ಯಕ್ತಿತ್ವದಲ್ಲಿ ಮೆರುಗು ತರುತ್ತದೆ ಮತ್ತು ಸುಖ-ಸಂತೋಷಗಳನ್ನು ಹೆಚ್ಚಿಸುತ್ತದೆ. ಕಲಾತ್ಮಕ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಲಾಭ ಸಿಗಲಿದೆ.

​ಶನಿ :

ಶನಿಯು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಇರುವುದರಿಂದ ಉದ್ಯೋಗದಲ್ಲಿ ಸ್ಥಿರತೆ ನೀಡುತ್ತಾನೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಶೆ ಇದಾಗಿದೆ.

​ಬುಧ :

ಬುಧನ ಸಂಚಾರವು ನಿಮ್ಮ ವ್ಯಾಪಾರ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕವಾಗಿ ಹೊಸ ಮೂಲಗಳಿಂದ ಆದಾಯ ಬರಲು ಇದು ಸಹಕಾರಿ.

​ಅಶುಭ ಫಲ ಗ್ರಹಗಳು

​ಮಂಗಳ :

ಮಂಗಳನ ದಶೆ ಅಥವಾ ಸಂಚಾರವು ನಿಮ್ಮಲ್ಲಿ ಕೋಪ ಮತ್ತು ಆತುರವನ್ನು ಹೆಚ್ಚಿಸಬಹುದು. ಇದು ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರ ಅಗತ್ಯ.

​ರಾಹು :

ರಾಹು ಲಾಭ ಸ್ಥಾನದಲ್ಲಿದ್ದರೂ, ಅತಿಯಾದ ಆಸೆಯಿಂದಾಗಿ ತಪ್ಪು ಹೂಡಿಕೆ ಮಾಡುವಂತೆ ಪ್ರೇರೇಪಿಸಬಹುದು. ಅಡ್ಡ ದಾರಿಯಲ್ಲಿ ಹಣ ಗಳಿಸುವ ಆಲೋಚನೆಯಿಂದ ದೂರವಿರುವುದು ಒಳಿತು.

​ಸೂರ್ಯ :

ಸೂರ್ಯನ ಸಂಚಾರವು ವೃತ್ತಿ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಸ್ವಲ್ಪ ಘರ್ಷಣೆ ಉಂಟುಮಾಡುವ ಸಾಧ್ಯತೆ ಇರುತ್ತದೆ, ಆದ್ದರಿಂದ ಮಾತಿನ ಮೇಲೆ ನಿಗಾ ಇರಲಿ.

ಅಶುಭ, ಸಂಕಟ, ನೋವಿನ ಫಲಗಳನ್ನು ಕಡಿಮೆ ಮಾಡಿಕೊಳ್ಳಲು, ಪ್ರತಿ ಮಂಗಳವಾರ ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗಿ ಯಥಾಶಕ್ತಿ ಸೇವೆ, ಆರಾಧನೆ ಮಾಡಿ ಅಥವಾ ಶನಿವಾರ ಹನುಮಾನ್ ಚಾಲೀಸಾ ಪಠಿಸಿ, ಹನುಮನ ಸೇವಾ ಕಾರ್ಯಗಳನ್ನು ಮಾಡಿ.

– ಲೋಹಿತ ಹೆಬ್ಬಾರ್

Source link

Hug Day 2026: ಮಾನಸಿಕ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಪ್ಪುಗೆ ಸಖತ್‌ ಪ್ರಯೋಜನಕಾರಿಯಂತೆ – Kannada News | Hug Day 2026: Benefits of hugging for mental and physical health

ಪ್ರೇಮಿಗಳ ವಾರವು ಪ್ರೀತಿ ಮತ್ತು ಪ್ರಣಯದಿಂದ ತುಂಬಿದ ವಿಶೇಷ ಸಮಯವಾಗಿದ್ದು, ವ್ಯಾಲೆಂಟೈನ್‌ ವೀಕ್‌ನ  ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಅದರಲ್ಲೂ ಪ್ರೇಮಿಗಳ ವಾರದ ಆರನೇ ದಿನವಾದ ಹಗ್‌ ಡೇ (Hug Day) ಪ್ರೇಮಪಕ್ಷಿಗಳಿಗೆ ತುಂಬಾನೇ ವಿಶೇಷವಾದ ದಿನ.  ಈ ಸಂದರ್ಭದಲ್ಲಿ ಪರಸ್ಪರ ಅಪ್ಪಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ, ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಒಟ್ಟಾರೆಯಾಗಿ ಅಪ್ಪುಗೆ ಎನ್ನುವಂತಹದ್ದು ಪದಗಳಿಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದ್ದು, ಇದು ಸಂಬಂಧಗಳನ್ನು ಬಲಪಡಿಸುವುದು ಮಾತ್ರವಲ್ಲದೆ ಸಾಕಷ್ಟು ಪ್ರಯೋಜನಗಳನ್ನೂ ಹೊಂದಿವೆಯಂತೆ.  ಒಂದು ಅಪ್ಪುಗೆಯಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಅಪ್ಪುಗೆಯಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ?

ಒತ್ತಡ ಕಡಿಮೆಯಾಗುತ್ತದೆ: ನಾವು ಯಾರನ್ನಾದರೂ ತಬ್ಬಿಕೊಂಡಾಗ, ದೇಹವು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದನ್ನು ಪ್ರೀತಿಯ ಹಾರ್ಮೋನ್ ಎಂದೂ ಕರೆಯುತ್ತಾರೆ. ಈ ಹಾರ್ಮೋನ್ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಾನಸಿಕ ಆರೋಗ್ಯದಲ್ಲಿ ಸುಧಾರಣೆ: ಅಪ್ಪುಗೆಯು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದು ಖಿನ್ನತೆ, ಒಂಟಿತನ ಮತ್ತು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೌದು  ಅಪ್ಪುಗೆಯು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ. ಇದು ಒಂಟಿತನದ ಭಾವನೆಯನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಕ್ತಿಯನ್ನು ಭಾವನಾತ್ಮಕವಾಗಿ ಬಲಶಾಲಿಯನ್ನಾಗಿ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಅಧ್ಯಯನಗಳ ಪ್ರಕಾರ, ದೈನಂದಿನ ಅಪ್ಪುಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಭಯ ಮತ್ತು ಒಂಟಿತನ ದೂರವಾಗುತ್ತದೆ: ಅಪ್ಪುಗೆಯು ವ್ಯಕ್ತಿಗೆ ಸುರಕ್ಷಿತ ಭಾವನೆಯನ್ನು ನೀಡುತ್ತದೆ. ಯಾರಾದರೂ ಭಯಭೀತರಾಗಿದ್ದರೆ ಅಥವಾ ಒಂಟಿತನ ಅನುಭವಿಸುತ್ತಿದ್ದರೆ, ಪ್ರೀತಿಯ ಅಪ್ಪುಗೆಯು ಅವರ ಧೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರಿಗೆ ಮಾನಸಿಕ ಬೆಂಬಲವನ್ನು ನೀಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಒಂದು ಅಪ್ಪುಗೆಯು ನಿಮ್ಮ ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಅಪ್ಪುಗೆಯು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅನಾರೋಗ್ಯದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಬಲಪಡಿಸುತ್ತದೆ. ದೇಹವು ಬಾಹ್ಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವ್ಯಾಲೆಂಟೈನ್‌ ವೀಕ್‌ನಲ್ಲಿ ಹಗ್‌ ಡೇ ಆಚರಿಸುವ ಪದ್ಧತಿ ಆರಂಭವಾದದ್ದು ಹೇಗೆ ಗೊತ್ತೇ?

ಸಂಬಂಧಗಳನ್ನು ಬಲಪಡಿಸುತ್ತದೆ: ನಾವು ಯಾರನ್ನಾದರೂ ತಬ್ಬಿಕೊಂಡಾಗ, ನಮ್ಮ ಮೆದುಳು ಡೋಪಮೈನ್ ಮತ್ತು ಸಿರೊಟೋನಿನ್ ಎಂಬ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ನಮಗೆ ಸಂತೋಷ ಮತ್ತು ನಿರಾಳತೆಯನ್ನು ನೀಡುತ್ತದೆ. ಅಲ್ಲದೆ ಇದು  ಪರಸ್ಪರ ನಂಬಿಕೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ ದಂಪತಿಗಳ ನಡುವಿನ ಭಾವನಾತ್ಮಕ ಬಂಧಗಳನ್ನು  ಬಲಪಡಿಸುತ್ತದೆ.

ಉತ್ತಮ ನಿದ್ರೆಗೆ ಸಹಕಾರಿ: ಅಪ್ಪುಗೆಯು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ.

ರಕ್ತ ಪರಿಚಲನೆ ಸುಧಾರಿಸುತ್ತದೆ: ಅಪ್ಪುಗೆಯು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಆಮ್ಲಜನಕ ಪೂರೈಕೆ ಸುಧಾರಿಸುತ್ತದೆ. ಇದು ನಿಮ್ಮನ್ನು ಚೈತನ್ಯಶೀಲರನ್ನಾಗಿಸುತ್ತದೆ ಮತ್ತು ದೇಹದ ಕಾರ್ಯವನ್ನು ಸುಧಾರಿಸುತ್ತದೆ.

ಕೋಪ ಕಡಿಮೆಯಾಗುತ್ತದೆ: ಸಂಬಂಧಗಳಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಮತ್ತು ಮನಸ್ತಾಪಗಳು ಉಂಟಾಗುವುದು ಸಹಜ. ಅಂತಹ ಸಮಯದಲ್ಲಿ ಒಂದು ಅಪ್ಪುಗೆಯು ಇವೆಲ್ಲವನ್ನು ಶಮನಗೊಳಿಸುತ್ತದೆ. ಹೌದು ಅಪ್ಪುಗೆ ತಪ್ಪು ತಿಳುವಳಿಕೆಗಳನ್ನು ಪರಿಹರಿಸಲು ಮತ್ತು  ಸಂಬಂಧಗಳನ್ನು ಆರೋಗ್ಯಕರ ರೀತಿಯಲ್ಲಿ  ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋರಮಂಗಲದಲ್ಲಿ 70 ಸಾವಿರ ರೂ, ಬಾಡಿಗೆ ಕೇಳಲು ನಾಚಿಕೆ ಆಗುವುದಿಲ್ವಾ?: ಬರಿ ತೆರೆದ ಒಳಚರಂಡಿ, ರಸ್ತೆಯ ಗುಂಡಿ, ಸಿಡಿದೆದ್ದ ಮಹಿಳೆ – Kannada News | Koramangala Rent Crisis: 70,000 for 2BHK with Bad Roads? Bengaluru’s Infrastructure Debate

ಬೆಂಗಳೂರು, ಫೆ.11: ಬೆಂಗಳೂರಿನಲ್ಲಿ ತೆರೆದ ಚರಂಡಿ, ಗುಂಡಿ ರಸ್ತೆಗಳು, ಹೀಗೆ ಅನೇಕ ಮೂಲಸೌಕರ್ಯದ ಸಮಸ್ಯೆಗಳು ಇರಬೇಕಾದರೆ ಇಲ್ಲಿ ವಾಸಿಸುವುದು ಹೇಗೆ? ಇದೀಗ ಇಂತಹ ಪ್ರದೇಶಗಳಲ್ಲಿ ಮನೆಗಳಿಗೆ ಹೆಚ್ಚಿನ ಬಾಡಿಗೆ ಹೇಗೆ ನೀಡುವುದು ಎಂಬ ಪ್ರಶ್ನೆ ಎದ್ದಿದೆ.  ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ. ಕೋರಮಂಗಲದಲ್ಲಿ 2BHK ಮನೆಗೆ 70,000 ರೂ, ಬಾಡಿಗೆ ಇದೆ. ಆದರೆ ಇಲ್ಲಿನ ರಸ್ತೆ, ಚರಂಡಿಯನ್ನು ನೋಡಿದ್ರೆ ಇಷ್ಟೊಂದು ಬಾಡಿಗೆ ನೀಡುವುದರಲ್ಲಿ ಅರ್ಥವೇ ಇಲ್ಲ ಎಂದು ಲುಬ್ನಾ ಮಲ್ಹೋತ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೋರಮಂಗಲವು ತೆರೆದ ಒಳಚರಂಡಿ, ರಸ್ತೆಯ ಗುಂಡಿಗಳು ಮತ್ತು ಕೆಟ್ಟ ಸಂಚಾರ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಕೂಡಿದೆ. ಇದರ ಹೊರತಾಗಿಯೂ, ಈ ಪ್ರದೇಶದಲ್ಲಿನ ಫ್ಲಾಟ್‌ಗಳ ಬಾಡಿಗೆ 2 ಮಲಗುವ ಕೋಣೆ-ಹಾಲ್-ಅಡುಗೆ ಮನೆಗೆ  70,000 ರೂ. ವರೆಗೆ ಬಾಡಿಗೆ ಇದೆ. 2 ಬಿಎಚ್‌ಕೆಗೆ 70 ಸಾವಿರ? ಕೋರಮಂಗಲದಲ್ಲಿ ಇಷ್ಟೊಂದು ಬಾಡಿಗೆ ಕೇಳಲು ನಾಚಿಕೆ ಆಗಬೇಕು. ಇಲ್ಲಿನ ಟ್ರಾಫಿಕ್, ತೆರೆದ ಒಳಚರಂಡಿ ಮತ್ತು ಹಾಳಾದ ರಸ್ತೆಗಳಿವೆ. ಯಾವ ಕಾರಣಕ್ಕೆ ಇಷ್ಟು ಹಣವನ್ನು ಪಾವತಿಸುತ್ತಿದ್ದೇವೆ? ಎಂದು ಮಲ್ಹೋತ್ರಾ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​:

ಕೋರಮಂಗಲವು ಬೆಂಗಳೂರಿನ ಪ್ರಸಿದ್ಧ ಪ್ರದೇಶವಾಗಿದೆ. ಕೆಫೆಗಳು, ಪಬ್‌ಗಳು, ಸ್ಟಾರ್ಟ್-ಅಪ್‌ಗಳು, ಶಾಪಿಂಗ್ ಮಾಲ್​​ಗಳು, HSR ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರಮುಖ ತಂತ್ರಜ್ಞಾನ ಕೇಂದ್ರಗಳಿಗೆ ಹತ್ತಿರದಲ್ಲಿದೆ. ಬೆಂಗಳೂರು ಇತರ ದೊಡ್ಡ ಸಿಟಿಗಳು ಮತ್ತು ಎಲೆಕ್ಟ್ರಾನಿಕ್ ಸಿಟಿಗಳ ನಡುವೆಯೂ ಇದು ಒಂದು ದೊಡ್ಡ ನಗರವಾಗಿ ಹೊರಹೊಮ್ಮಿದೆ. 1990 ರ ದಶಕದ ಉತ್ತರಾರ್ಧದಲ್ಲಿ ಬೆಂಗಳೂರಿನ ತಂತ್ರಜ್ಞಾನ ಉತ್ಕರ್ಷದ ಸಮಯದಲ್ಲಿ ದೇಶಾದ್ಯಂತದ ವಲಸಿಗರು ಇಲ್ಲಿಗೆ ಆಕರ್ಷಿತರಾಗಿದ್ದರು. ಈ ಪೋಸ್ಟ್​​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿದೆ. ನೆಟ್ಟಿಗರಲ್ಲಿ ಕೆಲವರು ಲುಬ್ನಾ ಮಲ್ಹೋತ್ರಾ ಪರ ಮಾಡತನಾಡಿದ್ರೆ, ಇನ್ನು ಕೆಲವರು ಬೆಂಗಳೂರಿನಲ್ಲಿ ವಲಸಿಗರೇ ಹೆಚ್ಚಾಗಿದ್ದರೆ, ಹಾಗಾಗಿ ಬಾಡಿಗೆ ಹೆಚ್ಚಳಕ್ಕೆ ಕಾರಣ ಎಂದು ದೂಷಿಸಿದ್ದಾರೆ.

ಇದನ್ನೂ ಓದಿ: ‘Bengaluru is so crazy’ ಬ್ರೋ: ಇವರು ರಾಪಿಡೋ ಚಾಲಕ ಮಾತ್ರವಲ್ಲ, ಲಕ್ಷ ಲಕ್ಷ ದುಡಿಯುವ ಐಟಿ ಕಂಪನಿಯ ಉದ್ಯೋಗಿ

ಇಲ್ಲಿ ಲೂಟಿ ಮಾಡುವ ದಂಧೆ ಶುರುವಾಗಿದೆ. ಹೆಚ್ಚಿನ ಬಾಡಿಗೆ ತೆಗೆದುಕೊಂಡು ಶೋಷಿಸುತ್ತಿದ್ದಾರೆ ಎಂದು ಒಬ್ಬರು ಹೇಳಿದ್ದಾರೆ. ಭಾರತದಲ್ಲಿ ಈ ಬೆಲೆಗೆ ಯಾವುದೇ ಸಮರ್ಥನೆ ಇಲ್ಲ. ಇದಕ್ಕೆ ಈಗಲೇ ಮಿತಿ ಹೇರಬೇಕು, ಇಲ್ಲದಿದ್ದರೆ, ಇದು ನಡೆಯುತ್ತಲೇ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಉತ್ತರ ಭಾರತದಿಂದ ಬರುವ ಜನರಿಗೆ ಬೆಂಗಳೂರು ಇಂದಿರಾನಗರ ಮತ್ತು ಕೋರಮಂಗಲಕ್ಕೆ ಸೀಮಿತವಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ಈ ಬಾಡಿಗೆ ಉತ್ತಮ ಎಂದು ಹೇಳಿದ್ದಾರೆ. ವೈಟ್‌ಫೀಲ್ಡ್ ಪ್ರದೇಶದಲ್ಲಿ 2 BHK ಫ್ಲಾಟ್‌ಗೆ 75 ಸಾವಿರ ರೂ ಇರುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸ್ಥಾನಕ್ಕೆ ಬಿಗಿಪಟ್ಟು: ರಾಹುಲ್ ಗಾಂಧಿ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು? – Kannada News | Karnataka Power Tussle Reaches Delhi: DK Shivakumar Talks about Rahul Gandhi meet

ನವದೆಹಲಿ, (ಫೆಬ್ರವರಿ 11): ಕರ್ನಾಟಕ ಕಾಂಗ್ರೆಸ್​​​ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿದ್ದು, ಇದೀಗ ದೆಹಲಿ ಅಂಗಳ ತಲುಪಿದೆ. ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ರಾಹುಲ್​ ಗಾಂಧಿ ಮನವೊಲಿಕೆಗೆ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಅಸ್ಸಾಂ ಚುನಾವಣಾ ಪೂರ್ವ ಸಿದ್ಧತೆ ನೆಪದಲ್ಲಿ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಭೇಟಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ರಾಹುಲ್​ ಗಾಂಧಿ ಭೇಟಿಗೆ ಇನ್ನೂ ಸಮಯ ಕೇಳಿಲ್ಲ. ಅಸ್ಸಾಂ ರಾಜ್ಯದ ಚುನಾವಣೆ ವಿಚಾರದ ಜಂಜಾಟದಲ್ಲಿದ್ದೇನೆ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಸುಮ್ಮನೇ ವಿಭಿನ್ನ ರೀತಿಯಲ್ಲಿ ಬೇಡ, ಮಾತ‌ನಾಡುತ್ತೇನೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ನಿರೀಕ್ಷೆಯಲ್ಲಿರುವ ಡಿಕೆಶಿ ಖರೀದಿಸಿದ ಐಷಾರಾಮಿ ಕಾರಿನ ವಿಶೇಷತೆ ಏನು? – Kannada News | DCM dk shivakumar purchased lexus lm 350h Car, here Is Price And features details

ಬೆಂಗಳೂರು, (ಫೆಬ್ರವರಿ 11): ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಅರ್ಥಾತ್‌ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಲೆಕ್ಸಾಸ್ ಕಂಪನಿಯ ಹೊಸ ಐಷಾರಾಮಿ ಕಾರು ಖರೀದಿಸಿದ್ದು, ಡಿಕೆ ಶಿವಕುಮಾರ್, ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟಿರುವಾಗಲೇ ಇತ್ತ ಎರಡು ಕೋಟಿ ರೂಪಾಯಿಯ ಹೊಸ Lexus LM 350h 7 ಸೀಟರ್ ಕಾರು ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಬಂದಿದೆ. ಹೌದು..ಲೆಕ್ಸಾಸ್ ಕಂಪನಿಯ ಶೋರೂಮ್ ಸಿಬ್ಬಂದಿಯೇ ಇಂದು (ಫೆಬ್ರವರಿ 11) ಕಾರನ್ನು ಹೋಮ್ ಡೆಲಿವರಿ ಮಾಡಿದ್ದು, ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಅವರು ಮನೆಗೆ ಬರಮಾಡಿಕೊಂಡಿದ್ದಾರೆ.

2.8 ಕೋಟಿ ಬೆಲೆಯ ಐಷಾರಾಮಿ ಕಾರು

ಡಿಕೆ ಶಿವಕುಮಾರ್ ಅವರು 2.8 ಕೋಟಿ ರೂಪಾಯಿಯ Lexus LM 350h ಬಿಳಿ ಬಣ್ಣದ ಕಾರನ್ನು ಖರೀದಿಸಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿರುವುದರಿಂದ ಶೋರೂಮ್ ಸಿಬ್ಬಂದಿಯೇ ಹೋಂ ಡೆಲೆವರಿ ಮಾಡಿದ್ದಾರೆ. ಇನ್ನು KA 03 NZ 6666 ನಂಬರ್ ಪ್ಲೇಟ್ ಇರುವ  ಏಳು ಸೀಟಿನ ಹೊಸ ಬ್ರಾಂಡ್ ನ್ಯೂ ಕಾರು ಇದಾಗಿದ್ದು, ದೀರ್ಘ ಪ್ರಯಾಣಕ್ಕೆ ಅತ್ಯುತ್ತಮ ಎಂದು ಗುರುತಿಸಿಕೊಂಡಿದೆ. ಅರಾಮಾದಾಯಕ ಪ್ರಯಾಣ, ಆಯಾಸ ರಹಿತ ಪ್ರಯಾಣಕ್ಕೆ ಈ ಕಾರು ಬಳಕೆ ಮಾಡಲಾಗುತ್ತದೆ.

ಇದನ್ನೂ ನೋಡಿ: ಡಿಕೆ ಶಿವಕುಮಾರ್ ​ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ

ಡಿಕೆಶಿಯ ಹೊಸ ಲೆಕ್ಸಸ್ ಕಾರಿನ ವಿಶೇಷತೆ ಏನು?

ಡಿಕೆಶಿ ಖರೀದಿಸಿದ ಹೊಸ LM 350h ಕಾರು 7 ಸೀಟರ್ ಕಾರು. ಇದರಲ್ಲಿ ನಾಲ್ಕು ಸೀಟಿನ ಆಯ್ಕೆ ಕೂಡ ಇದೆ. eCVT ಹಾಗೂ ಇ ಫೋರ್ ಆಲ್ ವ್ಹೀಲ್ ಡ್ರೈವ್ ಸಾಮರ್ಥ್ಯ ಹೊಂದಿರುವ ಈ ಕಾರು 2.5 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಎಥೆನಾಲ್ ಇ20 ಇಂಧನ ಚಾಲಿತ ಎಂಜಿನ್ ಆಗಿದೆ.60 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಈ ಕಾರು ಬಳಕೆ ಮಾಡಿದ ಶೇಕಡಾ 93ರಷ್ಚು ಮಂದಿ ಇದರ ಕಂಫರ್ಟ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಶೇಕಡಾ 7ರಷ್ಟು ಮಂದಿ ಉತ್ತಮ ಎಂದಿದ್ದಾರೆ. 19 ಇಂಚಿನ ಅಲೋಯ್ ವ್ಹೀಲ್ಸ್, LED ಹೆಡ್‌ಲ್ಯಾಂಪ್ಸ್, LED ಟೈಲ್ ಲ್ಯಾಂಪ್ಸ್, 23 ಸೌಂಡ್ ಸ್ಪೀಕಸ್ ಸಿಸ್ಟಮ್, ಏರ್‌ಬ್ಯಾಕ್, ಎಬಿಎಸ್, ಇಬಿಡಿ ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

ಲೆಕ್ಸಸ್ LM 350h ಕಾರು ಬಳಸಿದ ಎರಡನೇ ರಾಜಕಾರಣಿ

ಲೆಕ್ಸಸ್ LM 350h ಕಾರು ಖರೀದಿಸಿದ ಎರಡನೇ ರಾಜಕಾರಣಿ ಡಿಕೆ ಶಿವಕುಮಾರ್. ಡಿಕೆ ಶಿವಕುಮಾರ್‌ಗೂ ಮೊದಲು ಇತ್ತೀಚೆಗೆ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ತಮಿಳು ನಟ ವಿಜಯ್ ಜೊಸೆಫ್ ಈ ಕಾರು ಬಳಕೆ ಮಾಡುತ್ತಿದ್ದಾರೆ. ರಾಜಕೀಯ ಓಡಾಟ, ಪಕ್ಷ ಸಂಘಟನೆಗಳಿಗಾಗಿ ಈ ಕಾರನ್ನು ವಿಜಯ್ ಬಳಕೆ ಮಾಡುತ್ತಿದ್ದಾರೆ. ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಾಟ ಮಾಡಿ ಲೆಕ್ಸಸ್ LM 350h ಕಾರು ಖರೀದಿಸಿದ್ದಾರೆ. ವಿಜಯ್ ಹೊರತುಪಡಿಸಿದರೆ ರಾಜಕಾರಣಿಗಳ ಪೈಕಿ ಡಿಕೆ ಶಿವಕುಮಾರ್ ಈ ಕಾರು ಖರೀದಿಸಿದ್ದಾರೆ.

7 ಸೆಲೆಬ್ರೆಟಿಗಳ ಬಳಿ ಇದೆ ಲೆಕ್ಸಸ್ LM 350h ಕಾರು

ಲೆಕ್ಸಸ್ LM 350h ಕಾರನ್ನು ಭಾರತದಲ್ಲಿ ಕೆಲವೇ ಕೆಲವು ಮಂದಿ ಬಳಕೆ ಮಾಡುತ್ತಿದ್ದಾರೆ. ಅಂಬಾನಿ ಕುಟುಂಬದಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ಲೆಕ್ಸಸ್ LM 350h ಕೂಡ ಒಂದಾಗಿದೆ. ಇನ್ನು ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ಇದೇ ಲೆಕ್ಸಸ್ LM 350h ಕಾರು ಬಳಸುತ್ತಾರೆ. ಬಾಲಿವುಡ್ ಕೆಲ ಸೆಲೆಬ್ರೆಟಿಗಳು ಇದೇ ಲೆಕ್ಸಸ್ LM 350h ಕಾರು ಬಳಸುತ್ತಿದ್ದಾರೆ. ಈ ಪೈಕಿ ಶಾರುಖ್ ಖಾನ್, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್, ವಿಕ್ಕಿ ಕೌಶಾಲ್, ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ಬಳಿ ಲೆಕ್ಸಸ್ LM 350h ಕಾರಿದೆ. ಇವರ ಸಾಲಿಗೆ ಈಗ ಡಿಕೆ ಶಿವಕುಮಾರ್ ಸೇರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:38 pm, Wed, 11 February 26

Source link

ಹುಬ್ಬಳ್ಳಿ ಕಿಮ್ಸ್​​ನಲ್ಲಿ ಹೆಣದ ಮೇಲೂ ಹಣ ಮಾಡ್ತಿರೋ ಸಿಬ್ಬಂದಿ!: ವ್ಯಾಪಕ ಆಕ್ರೋಶ – Kannada News | KIMS Hubballi Staff Allegedly Demand Bribes for Patient Services

ಹುಬ್ಬಳ್ಳಿ, ಫೆಬ್ರವರಿ 11: ನಗರದಲ್ಲಿರುವ ಕಿಮ್ಸ್​ನ ಬಡವರ ಪಾಲಿನ ಸಂಜೀವಿನಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಆದ್ರೆ ಇದೇ ಕಿಮ್ಸ್​​ನಲ್ಲಿ ಸತ್ತ ಹೆಣದ ಮೇಲೂ ದುಡ್ಡು ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದು, ಮೃತ ವ್ಯಕ್ತಿಯ ಶವ ಪ್ಯಾಕ್ ಮಾಡಿ ವಾಹನಕ್ಕ ಹಾಕುವುದರಿಂದ ಹಿಡಿದು ರೋಗಿಯನ್ನು ಶಿಫ್ಟ್​​ ಮಾಡೋದಕ್ಕೂ ಇಲ್ಲಿ ಹಣ ಕೊಡಲೇ ಬೇಕು. ಆಸ್ಪತ್ರೆಯಲ್ಲಿರುವ ಸ್ವಚ್ಚತಾ ಸಿಬ್ಬಂದಿ ಮತ್ತು ಡಿ ಗ್ರೂಪ್ ನೌಕರರು ರೋಗಿಗಳು ಮತ್ತು ಅವರ ಸಂಬಂಧಿಕರ ರಕ್ತ ಹೀರುವ ಕೆಲಸ ಮಾಡ್ತಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಾಳ ಅಡವಿಬಾವಿ ನಿವಾಸಿಯಾಗಿರೋ 52 ವರ್ಷದ ಗದ್ದೆಮ್ಮಾ ಎನ್ನುವ ಮಹಿಳೆ ಪಿತ್ತಕೋಶದ ಕಲ್ಲುಗಳಿಂದ ಅಸ್ವಸ್ಥರಾಗಿದ್ದರು. ಹೀಗಾಗಿ ಅವರನ್ನು ಕಳೆದ ಜನವರಿ 31ರಂದು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲಿಸಲಾಗಿತ್ತು. ಕಳೆದ ಶನಿವಾರ ಆಕೆಗೆ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದ್ರೆ ಗದ್ದೆಮ್ಮ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ಮೃತಪಟ್ಟಿದ್ದಾರೆ. ಅವರ ಶವವನ್ನು ಪ್ಯಾಕ್ ಮಾಡಿ ವಾಹನಕ್ಕೆ ಹಾಕಲು ಅಲ್ಲಿನ ಡ್ರಿ ಗ್ರೂಪ್ ಸಿಬ್ಬಂದಿ ಐನೂರು ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಕೊನೆಗೂ ಬೆನ್ನು ಬಿದ್ದು 200 ರೂಪಾಯಿ ಪಡೆದಿದ್ದಾರೆ. ಶವವನ್ನು ವಾಹನಕ್ಕೆ ಹಾಕಿದ ಮೇಲೆ ಮತ್ತೆ 200 ರೂಪಾಯಿಗಾಗಿ ಪೀಡಿಸಿದ್ದಾರೆ. ಇದರಿಂದ ನೊಂದ ಗದ್ದೆಮ್ಮ ಸಂಬಂಧಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರ ಕಳ್ಳಾಟ ಪ್ರಕರಣ; ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ

ಘಟನೆ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಕಿಮ್ಸ್ ನಿರ್ದಶಕ ಡಾ. ಈಶ್ವರ್ ಹೊಸಮನಿಗೆ ಕರೆ ಮಾಡಿ ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕ್ಕೂ ಸೂಚನೆ ನೀಡಿದ್ದಾರಂತೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಸ್ ನಿರ್ದೇಶಕ, ನಾನು ಕೂಡ ವಿಡಿಯೋ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಏಜನ್ಸಿ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿರೋ ಕೆಲವರು ಕಿಮ್ಸ್​​ಗೆ ಕಪ್ಪು ಮಸಿ ಬಳಿಯೋ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಏಜನ್ಸಿ ಹಾಗೂ ಹಣ ತಗೆದುಕೊಂಡವರ ವಿರುದ್ದ ಕಠೀಣ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಕೆಲಸದಿಂದ ತೆಗೆದುಹಾಕ್ತೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version