ಅಂತಿಮ ಡೆಡ್​ಲೈನ್; ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು? – Kannada News | Aadhaar linking final deadline on 2025 Dec 31st, PAN will become inoperative from Jan 1st

ವಿವಿಧ ಸಕಾರಣಗಳಿಗಾಗಿ ಆದಾಯ ತೆರಿಗೆ ಇಲಾಖೆಯು (Income Tax) ಎಲ್ಲಾ ಪ್ಯಾನ್ ಕಾರ್​ಡ್​ಗಳನ್ನು ಆಧಾರ್​ಗೆ ಲಿಂಕ್ ಮಾಡಲು ಪದೇ ಪದೇ ಹೇಳುತ್ತಲೇ ಬಂದಿದೆ. ಈಗಲೂ ಕೂಡ ಬಹಳಷ್ಟು ಜನರು ಪಾನ್ ಮತ್ತು ಆಧಾರ್ ಲಿಂಕ್ ಮಾಡಿಲ್ಲ. ಸರ್ಕಾರ ಹಲವು ಬಾರಿ ಡೆಡ್​ಲೈನ್ ಕೊಟ್ಟಿದೆ. ಈಗ ಫೈನಲ್ ಡೆಡ್​ಲೈನ್ ಡಿಸೆಂಬರ್ 31ಕ್ಕೆ ಇದೆ. ಅಷ್ಟರೊಳಗೆ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರಬೇಕು. ಇಲ್ಲದಿದ್ದರೆ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಇನಾಪರೇಟಿವ್ ಆಗುತ್ತದೆ. ಅಂದರೆ, ಅದು ನಿಷ್ಕ್ರಿಯಗೊಳ್ಳುತ್ತದೆ. ಅದರ ಪರಿಣಾಮಗಳು ವಿವಿಧ ಸ್ತರಗಳಲ್ಲಿ ಆಗಬಹುದು.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ 2017ರ ಜುಲೈ 1ರ ನಂತರ ಅಲಾಟ್ ಆಗಿರುವ ಪ್ಯಾನ್ ನಂಬರ್​ಗಳೆಲ್ಲವೂ ಆಧಾರ್​ಗೆ ಲಿಂಕ್ ಆಗಿರುತ್ತವೆ. ಯಾಕೆಂದರೆ ಆ ಪ್ಯಾನ್​ಗೆ ಅರ್ಜಿ ಸಲ್ಲಿಸುವಾಗಲೇ ಕಡ್ಡಾಯವಾಗಿ ಆಧಾರ್ ದಾಖಲೆಯನ್ನು ಪಡೆದಿರಲಾಗುತ್ತದೆ. ಅಲಾಟ್ ಮಾಡುವಾಗಲೇ ಆಧಾರ್ ಅನ್ನು ಲಿಂಕ್ ಮಾಡಲಾಗಿರುತ್ತದೆ.

ಇದನ್ನೂ ಓದಿ: ಸಿಮ್ ವೆರಿಫಿಕೇಶನ್​ನಿಂದ ಹಿಡಿದು ಕ್ರೆಡಿಟ್ ಸ್ಕೋರ್​ವರೆಗೆ ಜನವರಿ 1ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

2017ರ ಜುಲೈ 1ಕ್ಕೆ ಮುಂಚೆ ಪ್ಯಾನ್ ಅಲಾಟ್ ಮಾಡುವಾಗ ಆಧಾರ್ ದಾಖಲೆ ಪಡೆಯುವುದು ಕಡ್ಡಾಯ ಇರಲಿಲ್ಲ. ಕೆಲವರು ಆಧಾರ್ ದಾಖಲೆ ಕೊಟ್ಟಿರುತ್ತಿದ್ದರು. ಕೆಲವರು ವೋಟರ್ ಐಡಿ ಇತ್ಯಾದಿ ದಾಖಲೆ ಕೊಡುತ್ತಿದ್ದರು. ಹೀಗಾಗಿ, ಡೂಪ್ಲಿಕೇಟ್ ಪ್ಯಾನ್​ಗಳು ಹೆಚ್ಚಾಗುತ್ತಿದ್ದುವು. ಇದನ್ನು ತಪ್ಪಿಸಲೆಂದು ಸರ್ಕಾರವು ಪ್ಯಾನ್​ಗೆ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಆಧಾರ್​ಗೆ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತದೆ?

  • ಬ್ಯಾಂಕುಗಳಲ್ಲಿ ಅಕೌಂಟ್ ತೆರೆಯಲು ಆಗುವುದಿಲ್ಲ
  • ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ
  • ರೀಫಂಡ್​ಗಳು ಬರುವುದಿಲ್ಲ
  • ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಸಹಾಯಧನ ಬಿಡುಗಡೆ ಆಗದೇ ಇರಬಹುದು.
  • ಫಿಕ್ಸೆಡ್ ಡೆಪಾಸಿಟ್ ಇತ್ಯಾದಿಗೆ ಎರಡು ಪಟ್ಟು ಹೆಚ್ಚು ಟಿಡಿಎಸ್ ಕಡಿತ ಆಗಬಹುದು.

ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?

ಪ್ಯಾನ್​ಗೆ ಆಧಾರ್ ಲಿಂಕ್ ಮಾಡುವ ಕ್ರಮ

  • ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್​ಗೆ ಹೋಗಬೇಕು: www.incometax.gov.in
  • ಮುಖ್ಯಪುಟದಲ್ಲಿ ಕ್ವಿಕ್ ಲಿಂಕ್ಸ್ ಸೆಕ್ಷನ್ ಅಡಿ ‘ಲಿಂಕ್ ಆಧಾರ್’ ಕ್ಲಿಕ್ ಮಾಡಿ.
  • ಪ್ಯಾನ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ.
  • ಆಧಾರ್​ನಲ್ಲಿರುವ ಹೆಸರು ನಮೂದಿಸಿ

ಇದನ್ನು ವ್ಯಾಲಿಡೇಟ್ ಮಾಡಬೇಕು. ನಂತರ, ಇ-ಪೇ ಟ್ಯಾಕ್ಸ್ ಪೇಜ್ ಮೂಲಕ 1,000 ರೂ ಪೆನಾಲ್ಟಿ ಕಟ್ಟಬೇಕಾಗುತ್ತದೆ. ದಂಡ ಕಟ್ಟಿದ ಬಳಿಕ ವಾಪಸ್ ಇಫೈಲಿಂಗ್ ಪೋರ್ಟಲ್​ಗೆ ಬಂದು ಮತ್ತೊಮ್ಮೆ ಪ್ಯಾನ್, ಆಧಾರ್ ವಿವರ ತುಂಬಿಸಿ. ಮೊಬೈಲ್​ಗೆ ಬರುವ ಒಟಿಪಿ ಹಾಕಿ, ವ್ಯಾಲಿಡೇಟ್ ಮಾಡಿ. ಈಗ ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್ – Kannada News | Tharun Sudhir talks about Darshan and Kichcha Sudeep Fans war

ಕನ್ನಡ ಚಿತ್ರರಂಗದಲ್ಲಿ ಸುದೀಪ್ (Kichcha Sudeep) ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಈ ಬಗ್ಗೆ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ತಾವು ಕಂಡಂತೆ ದರ್ಶನ್ ಫ್ಯಾನ್ಸ್ (Darshan Fans) ಎಂಥವರು ಎಂಬುದನ್ನು ತರುಣ್ ಸುಧೀರ್ ವಿವರಿಸಿದ್ದಾರೆ. ‘ಫ್ಯಾನ್ಸ್ ವಾರ್ ಎಲ್ಲ ಚಿತ್ರರಂಗದಲ್ಲೂ ಇದೆ. 10ರಲ್ಲಿ ಒಂದಾದರೂ ನೆಗೆಟಿವ್ ಕಮೆಂಟ್ ಇರತ್ತೆ. ವಿಕೃತ ಖುಷಿಪಡುವವರು ಯಾರ ಫ್ಯಾನ್ಸ್ ಕೂಡ ಅಲ್ಲ. ದರ್ಶನ್ ಅಭಿಮಾನಿಗಳನ್ನು ನಾನು ನೋಡಿದ್ದೇನೆ. ಅವರು ಆ ರೀತಿ ಇಲ್ಲ. ಅವರು ಸಿನಿಮಾಗೆ ಬೆಂಬಲ ಕೊಡುತ್ತಾರೆ. ಅವರು ಎಷ್ಟು ಚೆನ್ನಾಗಿ ಮಾತನಾಡುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ’ ಎಂದು ತರುಣ್ ಸುಧೀರ್ (Tharun Sudhir) ಅವರು ಹೇಳಿದ್ದಾರೆ. ನಟ ಸಾಧು ಕೋಕಿಲ ಕೂಡ ನೀಡಿದ ಪ್ರತಿಕ್ರಿಯೆ ಈ ವಿಡಿಯೋದಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

4 ಶಿಶುಗಳಿಗೆ ಜನ್ಮ ನೀಡಿ 7 ಹೆಣ್ಣುಮಕ್ಕಳ ತಾಯಿಯಾದ ಮಹಿಳೆ! – Kannada News | Viral news 30 year old woman gives birth to 4 Babies in Kannauj

ನವದೆಹಲಿ, ಡಿಸೆಂಬರ್ 23: ಉತ್ತರ ಪ್ರದೇಶದಲ್ಲೊಂದು ಅತ್ಯಂತ ಅಪರೂಪದ ಘಟನೆ ನಡೆದಿದೆ. ಮಹಿಳೆಯೊಬ್ಬರು ನಾರ್ಮಲ್ ಡೆಲಿವರಿ ಮೂಲಕ 4 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆ ಈಗಾಗಲೇ 3 ಹೆಣ್ಣುಮಕ್ಕಳ ತಾಯಿಯಾಗಿದ್ದು, ಒಟ್ಟಾರೆ 7 ಮಕ್ಕಳ ತಾಯಿಯಾಗಿದ್ದಾರೆ. ಇವರೆಲ್ಲರೂ ನಾರ್ಮಲ್ ಡೆಲಿವರಿ ಮೂಲಕವೇ ಜನಿಸಿದ್ದು ಎಂಬುದು ವಿಶೇಷ.

ಉತ್ತರ ಪ್ರದೇಶದ ಕನ್ನೌಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ವೈಷ್ಣವಿ ನರ್ಸಿಂಗ್ ಹೋಂನಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಅಪರೂಪದ ಘಟನೆ ಆಸ್ಪತ್ರೆ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದೆ. ಡಿಸೆಂಬರ್ 21ರಂದು ಅನಿತಾ ಎಂಬ ಮಹಿಳೆ ನಾರ್ಮಲ್ ಡೆಲಿವರಿ ಮೂಲಕ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅನಿತಾ ಜನ್ಮ ನೀಡಿದ 4 ಹೆಣ್ಣು ಮಕ್ಕಳ ಜನನಗಳ ನಡುವೆ ಎರಡರಿಂದ ಮೂರು ನಿಮಿಷಗಳ ಅಂತರವಿತ್ತು.

ಇದನ್ನೂ ಓದಿ: ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!

ತಥಿಯಾ ಪಟ್ಟಣದ ನಿವಾಸಿ 30 ವರ್ಷದ ಅನಿತಾ ಅವರನ್ನು ಡಿಸೆಂಬರ್ 20ರಂದು ಅವರ ಪತಿ ಅನುಜ್ ಸಿಂಗ್ ಹೆರಿಗೆಗಾಗಿ ಬರ್ಧೈಯಾ ರಸ್ತೆಯಲ್ಲಿರುವ ವೈಷ್ಣವಿ ನರ್ಸಿಂಗ್ ಹೋಂಗೆ ದಾಖಲಿಸಿದ್ದರು. ಇಬ್ಬರು ಹೆಣ್ಣು ಮಕ್ಕಳ ತೂಕ ಸುಮಾರು ಒಂದು ಕೆಜಿ ಆಗಿದ್ದರೆ, ಉಳಿದ ಶಿಶುಗಳು ಒಂದೂವರೆ ಕೆಜಿಗಿಂತಲೂ ಹೆಚ್ಚು ತೂಕವಿತ್ತು.

ಇದೇ ರೀತಿ ಕೆಲವು ದಿನಗಳ ಹಿಂದೆ, ಮಹಾರಾಷ್ಟ್ರದ ಸತಾರಾದ ಜಿಲ್ಲಾ ಆಸ್ಪತ್ರೆಯಲ್ಲಿ 30 ವರ್ಷದ ಮಹಿಳೆ 4 ಮಕ್ಕಳಿಗೆ ಜನ್ಮ ನೀಡಿದ್ದರು. ಅವರಿಗೂ ಮೂವರು ಮಕ್ಕಳಿದ್ದರು. ಈ ಮೂಲಕ ಅವರು ಕೂಡ 7 ಮಕ್ಕಳ ತಾಯಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: ಶಫಾಲಿ ಸಿಡಿಲಬ್ಬರದ ಬ್ಯಾಟಿಂಗ್‌; ಟೀಂ ಇಂಡಿಯಾಗೆ ಸತತ 2ನೇ ಗೆಲುವು – Kannada News | India Women vs Sri Lanka 2nd T20: Shafali Verma’s 69* Secures India’s 2 0 Series Lead

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಆತಿಥೇಯ ಭಾರತ ತಂಡ ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 129 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ, ಯುವ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನು 49 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಲಂಕಾಗೆ ಸ್ಫೋಟಕ ಆರಂಭ

ಈ ಪಂದ್ಯದಲ್ಲೂ ಟಾಸ್ ಗೆದ್ದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್‌ಗಳು ಶ್ರೀಲಂಕಾ ತಂಡ ಬೃಹತ್ ಮೊತ್ತ ಕಲೆಹಾಕದಂತೆ ತಡೆದರು. ಆದಾಗ್ಯೂ ಲಂಕಾ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ನಾಯಕಿ ಚಾಮರಿ ಅಟಪಟ್ಟು 31 ರನ್‌ಗಳ ಕೊಡುಗೆ ನೀಡಿದರು. ಚಾಮರಿ ಅಟಪಟ್ಟು ಇರುವವರೆಗೂ ಲಂಕಾ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವ ಸುಳಿವು ನೀಡಿತ್ತು. ಆದರೆ ಅವರು ಔಟಾದ ಬಳಿಕ ಎಂದಿನಂತೆ ತಂಡದ ಇನ್ನಿಂಗ್ಸ್ ಕುಸಿಯಿತು. ನಾಯಕಿ ಹೊರತುಪಡಿಸಿ, ಹರ್ಷಿತಾ ಸಮರವಿಕ್ರಮ 33 ರನ್‌ಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‌ಮನ್ 25 ರನ್‌ಗಳನ್ನು ತಲುಪಲು ಸಾಧ್ಯವಾಗಲಿಲ್ಲ.

ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಶ್ರೀ ಚರಣಿ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಪಡೆದರು . ವೈಷ್ಣವಿ ಶರ್ಮಾ ಕೂಡ 32 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಕ್ರಾಂತಿ ಗೌರ್ ಮತ್ತು ಸ್ನೇಹ್ ರಾಣಾ ಕೂಡ ತಲಾ ಒಂದು ವಿಕೆಟ್ ಪಡೆದರು .

ಶಫಾಲಿ ಸಿಡಿಲಬ್ಬರದ ಅರ್ಧಶತಕ

129 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಮೊದಲ ವಿಕೆಟ್‌ಗೆ 3.1 ಓವರ್‌ಗಳಲ್ಲಿ 29 ರನ್‌ಗಳ ಜೊತೆಯಾಟ ನಡೆಸಿದರು. ಆದಾಗ್ಯೂ ಸ್ಮೃತಿ ಮಂಧಾನ ಸತತ 2ನೇ ಪಂದ್ಯದಲ್ಲಿ ವಿಫಲರಾಗಿ 14 ರನ್​ಗಳಿಗೆ ಔಟಾದರು. ಆದರೆ ಶೆಫಾಲಿ ವರ್ಮಾ ಒಂದು ತುದಿಯಿಂದ ತಮ್ಮ ಸ್ಫೋಟಕ ಬ್ಯಾಟಿಂಗ್ ಅನ್ನು ಮುಂದುವರಿಸಿ ಕೇವಲ 34 ಎಸೆತಗಳಲ್ಲಿ ಅಜೇಯ 69 ರನ್ ಬಾರಿಸಿದರು . ಅವರ ಇನ್ನಿಂಗ್ಸ್​ನಲ್ಲಿ 11 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಕೂಡ ಸೇರಿತ್ತು. ಶೆಫಾಲಿ ವರ್ಮಾ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಜೆಮಿಮಾ ರೊಡ್ರಿಗಸ್ ಕೂಡ 15 ಎಸೆತಗಳಲ್ಲಿ 26 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಪರಿಣಾಮವಾಗಿ, ಟೀಂ ಇಂಡಿಯಾ ಕೇವಲ 11.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: ಟಾಸ್ ಗೆದ್ದ ಟೀಂ ಇಂಡಿಯಾ; ತಂಡದಲ್ಲಿ 1 ಬದಲಾವಣೆ – Kannada News | India vs Sri Lanka Women 2nd T20 toss and playing 11 updates

ಭಾರತ ಮತ್ತು ಶ್ರೀಲಂಕಾ ಮಹಿಳಾ (India vs Sri Lanka Women) ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಟಿ20 ಪಂದ್ಯ ವಿಶಾಖಪಟ್ಟಣದಲ್ಲಿ (Visakhapatnam) ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಭಾರತ 1-0 ಅಂತರದ ಮುನ್ನಡೆ ಸಾಧಿಸಿದ್ದು ಇದೀಗ ಈ ಪಂದ್ಯವನ್ನು ಗೆಲ್ಲುವ ಮೂಲಕ ಈ ಮುನ್ನಡೆಯನ್ನು 2-0 ಅಂತರಕ್ಕೆ ಕೊಂಡೊಯ್ಯಲು ಹರ್ಮನ್​ಪ್ರೀತ್ ಕೌರ್ ಪಡೆ ನೋಡುತ್ತಿದೆ. ಉಭಯ ತಂಡಗಳ ನಡುವೆ ಇದೇ ವಿಶಾಖಪಟ್ಟಣನಲ್ಲಿ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ ತಂಡ ಕೇವಲ 126 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಜೆಮಿಮಾ 44 ಎಸೆತಗಳಲ್ಲಿ 69 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಟಾಸ್ ಗೆದ್ದ ಟೀಂ ಇಂಡಿಯಾ

ಸತತ ಎರಡನೇ ಪಂದ್ಯದಲ್ಲೂ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್‌ ಮಾಡಲಿದೆ. ಆದಾಗ್ಯೂ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ತಂಡದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಅನಾರೋಗ್ಯ ಕಾರಣದಿಂದಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಸ್ನೇಹ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತ ಲಂಕಾ ತಂಡ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಆಟಗಾರ್ತಿಯರನ್ನೇ ಕಣಕ್ಕಿಳಿಸುತ್ತಿದೆ.

ಉಭಯ ತಂಡಗಳು

ಭಾರತ ತಂಡದ ಪ್ಲೇಯಿಂಗ್ 11: ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ಶ್ರೀ ಚರಣಿ.

ಶ್ರೀಲಂಕಾ ತಂಡ: ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ನೀಲಾಕ್ಷಿಕಾ ಸಿಲ್ವಾ, ಕೌಶಿನಿ ನುತ್ತಯಂಗನಾ (ವಿಕೆಟ್ ಕೀಪರ್), ಕವಿಶಾ ದಿಲ್ಹಾರಿ, ಮಲ್ಕಿ ಮುದಾರ, ಇನೋಕಾ ರಣವೀರ, ಕಾವ್ಯಾ ಕವಿಂದಿ, ಶಶಿನಿ ಗಿಮ್ಹಾನಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:37 pm, Tue, 23 December 25

Source link

ಬೆಂಗಳೂರಿನಲ್ಲಿ ಶೂಟೌಟ್: ವಿಚ್ಛೇದನ ಕೋರ್ಟ್​​​​​ನಲ್ಲಿರುವಾಗಲೇ ಹೆಂಡ್ತಿಯನ್ನ ಗುಂಡಿಕ್ಕಿ ಕೊಂದ ಪತಿ – Kannada News | A man shots his wife dead on a busy road In Bengaluru after she asking divorce

ಬೆಂಗಳೂರು, (ಡಿಸೆಂಬರ್ 23):  ಗಂಡ ಹೆಂಡತಿ (Husband And Wife) ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಹೆಂಡತಿ ಜೊತೆ ಜಗಳ ತೆಗೆದ ಪತಿ ಏಕಾಏಕಿ ಗನ್‌ ತೆಗೆದು ಹೆಂಡತಿ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್‌ ಬಳಿ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡು ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ವಿಚ್ಛೇದನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಬರುತ್ತಿರುವಾಗಲೇ ಬಾಲ ಮುರುಗನ್, ನಡುರಸ್ತೆಯಲ್ಲೇ ಹೆಂಡತಿ ಭುವನೇಶ್ವರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಶೂಟೌಟ್​​​ನಿಂದ ಬಸವೇಶ್ವರ ನಗರವೇ ಬೆಚ್ಚಿಬಿದ್ದಿದೆ.

ಹೆಂಡ್ತಿ ಮೇಲೆ ಅನುಮಾನಪಟ್ಟು ಶೂಟ್​

ಬಾಲಮುರುಗನ್​ ಹಾಗೂ ಭುವನೇಶ್ವರಿ 2011ರಲ್ಲಿ ಮದುವೆಯಾಗಿದ್ದು, ಬಳಿಕ ತಮಿಳುನಾಡಿನ ಸೇಲಂನಿಂದ ಬಂದು ಬೆಂಗಳೂರಿನ ರಾಜಾಜಿನಗರದಲ್ಲಿ ಎರಡು ಮಕ್ಕಳೊಂದಿಗೆ ನೆಲೆಸಿದ್ದರು. ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು.ಆದ್ರೆ, ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಆಗಾಗ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತು ಭುವನೇಶ್ವರಿ, ವಿಚ್ಛೇದನ ಕೇಳಿದ್ದಳು. ಇದಕ್ಕೆ ಮುರುಗನ್ ಒಪ್ಪಿರಲಿಲ್ಲ. ಕೊನೆಗೆ ಭುವನೇಶ್ವರಿ 2024ರಲ್ಲಿ ಮುರುಗನ್​​ನಿಂದ ದೂರವಾಗಿ ಕೆಪಿ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದರು. ಬಳಿಕ ಅವರು ಡಿವೋರ್ಸ್‌ ಗಾಗಿ ಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕೋರ್ಟ್​​ ಮುರುಗನ್​​ಗೆ ನೋಟಿಸ್ ನೀಡಿತ್ತು. ಅದರಂತೆ ಮುರುಗನ್ ನ್ಯಾಯಾಲಯಕ್ಕೆ ಹಾಜರಾಗಿದ್ದ. ಇತ್ತ ಭುವನೇಶ್ವರಿ ಸಹ ವಿಚಾರಣೆಗೆ ಹಾಜರಾಗಿದ್ದು, ಎಲ್ಲಾ ವಿಚಾರಣೆ ಮುಗಿಸಿ ಕೋರ್ಟ್​​​ನಿನಿಂದ ಇಬ್ಬರು ಆಚೆ ಬಂದಿದ್ದರು.

ಇದನ್ನೂ ಓದಿ: ತನಗೆ ಮರ್ಯಾದೆ ಕೊಡ್ಲಿಲ್ಲ ಅಂತಾ ಹೆಂಡತಿಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಪತಿ!

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತೀವ್ರ ಸ್ವರೂಪ ಹೋಗಿದೆ. ಇದರಿಂದ ಆಕ್ರೋಶಗೊಂಡ ಪತಿ ಮುರುಗನ್, ನಡು ರಸ್ತೆಯಲ್ಲೇ ಗನ್ ತೆಗೆದು ಪತ್ನಿ ಭುವನೇಶ್ವರಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಭುವನೇಶ್ವರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಹೆಂಡ್ತಿಗೆ ಶೂಟ್ ಮಾಡಿ ಪೊಲೀಸ್ ಠಾಣೆಗೆ

ಹೆಂಡತಿ ಮೇಲೆ ಗುಂಡು ಹಾರಿಸಿದ ಬಳಿಕ ಮುರುಗನ್​ ನೇರವಾಗಿ ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೂಡಲೇ ಪೊಲಿಸರು, ಶೂಟೌಟ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಅನೈತಿಕ ಸಂಬಂಧ ಅನುಮಾನ ಹಾಗೂ ಡಿವೋರ್ಸ್​​ ಕೇಳಿರುವುದಕ್ಕೆ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇನ್ನು ಆರೋಪಿ ಪಿಸ್ತೂಲನ್ನು ಅಕ್ರಮವಾಗಿ ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ  ತನಿಖೆ ಕೈಗೊಂಡಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಸರ್​​ಪ್ರೈಸ್ – Kannada News | Surprise Visit to Wedding Monkey jumps on bride during kanyadaan ritual watch viral video

ರಿಷಿಕೇಶ, ಡಿಸೆಂಬರ್ 23: ಉತ್ತರಾಖಂಡದ ರಿಷಿಕೇಶದಲ್ಲಿ ವಧು-ವರ ವಿವಾಹವಾಗುತ್ತಿದ್ದರು. ಮದುವೆ ಭರದಿಂದ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಕೋತಿ ಮದುವೆಯ ಮಂಟಪಕ್ಕೆ ನುಗ್ಗಿ ಕೋಲಾಹಲ ಸೃಷ್ಟಿಸಿತು. ನದಿಯ ದಡದಲ್ಲಿ ನಡೆದ ಮದುವೆಯಲ್ಲಿ ಪುರೋಹಿತರು ವೇದ ಮಂತ್ರಗಳನ್ನು ಪಠಿಸುತ್ತಿದ್ದಾಗ ಕೋತಿಯೊಂದು ಸರ್​​ಪ್ರೈಸ್ ವಿಸಿಟ್ ನೀಡಿದೆ. ಕನ್ಯಾದಾನದ ವೇಳೆ ಕೋತಿಯೊಂದು ಮದುಮಗಳ ಮೇಲೆ ಹಾರಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ವಿಡಿಯೋವನ್ನು (Viral Video) ನೋಡಿದ ಜನರು ಇದು ಕೇವಲ ತಮಾಷೆಯಲ್ಲ, ಬದಲಾಗಿ ಹನುಮಂತನ ಆಶೀರ್ವಾದ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್ – Kannada News | BJP leader harasses visually challenged woman in Madhya Pradesh jabalpur

ಜಬಲ್ಪುರ, ಡಿಸೆಂಬರ್ 23: ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿಯೊಬ್ಬರು ದೃಷ್ಟಿಹೀನ ಮಹಿಳೆಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ವೇಳೆ ಮಹಿಳಾ ನಾಯಕಿ ದೃಷ್ಟಿಹೀನ ಮಹಿಳೆಯ ಬಗ್ಗೆ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಬಿಜೆಪಿ ನಾಯಕಿ ಆ ದೃಷ್ಟಿಹೀನ ಮಹಿಳೆಗೆ ನೀನು ಮುಂದಿನ ಜನ್ಮದಲ್ಲೂ ಕುರುಡಿಯಾಗೇ ಹುಟ್ಟುತ್ತೀಯ ಎಂದು ಹೇಳುವುದನ್ನು ಕೇಳಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆಯ ಹವಾಮಾನ: ರಾಜ್ಯದ ಹಲವೆಡೆ ಚಳಿ, ಇರಲಿದೆ ಮಂಜಿನ ಅಬ್ಬರ – Kannada News | Tomorrow Weather: Severe cold wave expected in South and North Interior Karnataka tomorrow, heavy fog in Bengaluru

ಬೆಂಗಳೂರು, ಡಿಸೆಂಬರ್​​ 23: ರಾಜ್ಯದಾದ್ಯಂತ ನಾಳೆಯೂ ಚಳಿಯ ಪ್ರಭಾವ ಮುಂದುವರಿಯಲಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನ ಇಳಿಕೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬೆಳಗಿನ ಜಾವ ತೀವ್ರ ಚಳಿ ಹಾಗೂ ಮಂಜು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಲ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ದಿನದ ಹೊತ್ತಿನಲ್ಲಿ ಒಳಹವೆ ಇರಲಿದ್ದು, ತಾಪಮಾನ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆಯೇ ಇರಲಿದೆ. ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಸೇರಿದಂತೆ ಹಲವೆಡೆ ಶೀತಗಾಳಿ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾತಾವರಣ ಸಾಮಾನ್ಯವಾಗಿರಲಿದ್ದು, ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮಳೆಯ ಸಾಧ್ಯತೆ ಕಡಿಮೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ತಣ್ಣನೆಯ ವಾತಾವರಣ ಇರಲಿದ್ದು, ಬೆಳಿಗ್ಗೆ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ನಾಳೆ ಮಳೆಯ ಸಾಧ್ಯತೆ ಕಡಿಮೆ ಇದ್ದು, ಚಳಿ ಮತ್ತು ಮಂಜು ಬಹುತೇಕ ಜಿಲ್ಲೆಗಳಲ್ಲಿ ಕಂಡುಬರಲಿದೆ.

ಬೀದರ್​​ನಲ್ಲಿ ಕನಿಷ್ಠ 10.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

ಬಾಗಲಕೋಟೆ 12.1 ಡಿಗ್ರಿ ಸೆಲ್ಸಿಯಸ್​​, ಬಳ್ಳಾರಿ 13.8 ಡಿಗ್ರಿ ಸೆಲ್ಸಿಯಸ್, ಬೆಳಗಾವಿ 11.6 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಗ್ರಾಮಾಂತರ 14.1 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ದಕ್ಷಿಣ 13.6 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರ 15.2 ಡಿಗ್ರಿ ಸೆಲ್ಸಿಯಸ್, ಬೀದರ್ 10.4 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ 12.6 ಡಿಗ್ರಿ ಸೆಲ್ಸಿಯಸ್, ಚಿಕ್ಕಬಳ್ಳಾಪುರ 13.8 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರು 13 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗ 14 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 19.1 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 14.6 ಡಿಗ್ರಿ ಸೆಲ್ಸಿಯಸ್, ಧಾರವಾಡ 12.6 ಡಿಗ್ರಿ ಸೆಲ್ಸಿಯಸ್, ಗದಗ 13.2 ಡಿಗ್ರಿ ಸೆಲ್ಸಿಯಸ್, ಹಾಸನ 12.8 ಡಿಗ್ರಿ ಸೆಲ್ಸಿಯಸ್, ಹಾವೇರಿ 13.5 ಡಿಗ್ರಿ ಸೆಲ್ಸಿಯಸ್, ಕಲಬುರಗಿ 11.9 ಡಿಗ್ರಿ ಸೆಲ್ಸಿಯಸ್, ಕೊಡಗು 13 ಡಿಗ್ರಿ ಸೆಲ್ಸಿಯಸ್, ಕೋಲಾರ 13 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 12.4 ಡಿಗ್ರಿ ಸೆಲ್ಸಿಯಸ್, ಮಂಡ್ಯ 13.2 ಡಿಗ್ರಿ ಸೆಲ್ಸಿಯಸ್, ಮೈಸೂರು 12.8 ಡಿಗ್ರಿ ಸೆಲ್ಸಿಯಸ್, ರಾಯಚೂರು 13.6 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 13.7 ಡಿಗ್ರಿ ಸೆಲ್ಸಿಯಸ್, ತುಮಕೂರು 13 ಡಿಗ್ರಿ ಸೆಲ್ಸಿಯಸ್, ಉಡುಪಿ 19 ಡಿಗ್ರಿ ಸೆಲ್ಸಿಯಸ್, ಉತ್ತರ ಕನ್ನಡ 16.5 ಡಿಗ್ರಿ ಸೆಲ್ಸಿಯಸ್, ವಿಜಯಪುರ 12.7 ಡಿಗ್ರಿ ಸೆಲ್ಸಿಯಸ್, ವಿಜಯನಗರ 13.3 ಡಿಗ್ರಿ ಸೆಲ್ಸಿಯಸ್ ಮತ್ತು ಯಾದಗಿರಿಯಲ್ಲಿ 13.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರ ಅವಧಿಯಲ್ಲಿ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:01 pm, Tue, 23 December 25

Source link

ರೈತರ ಬದುಕಿನಲ್ಲಿ ಚೆಲ್ಲಾಟ: ಮೆಕ್ಕೆಜೋಳ ಬೆಳೆಗಾರರ ಪಾಲಿಗೆ ವಿಲನ್ ಆದ ಸರ್ಕಾರ – Kannada News | Dharwad Maize Farmers in Crisis: Support Price Delay Hits Hard

ಧಾರವಾಡ, ಡಿಸೆಂಬರ್​​ 23: ರೈತ (farmer) ದೇಶದ ಬೆನ್ನೆಲುಬು ಅಂತಾ ಹೇಳುತ್ತಲೇ ಬರುವ ಸರಕಾರ ಮತ್ತೊಂದೆಡೆ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನೂ ಮಾಡುತ್ತಲೇ ಇರುತ್ತೆ. ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಮೆಕ್ಕೆಜೋಳ (Maize) ಚೆನ್ನಾಗಿ ಬಂದಿದೆ. ಇದರಿಂದಾಗಿ ರೈತರು ಖುಷಿಯಾಗುವ ಹೊತ್ತಿಗೆ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡು, ರೈತರು ಕಂಗಾಲಾಗಿ ಹೋದರು. ಇದೇ ಕಾರಣಕ್ಕೆ ಬೆಂಬಲ ಬೆಲೆ ಅಡಿ ಮೆಕ್ಕೆಜೋಳವನ್ನು ಖರೀದಿಸುವಂತೆ ಹೋರಾಟ ಶುರುವಾಯಿತು. ಇದಕ್ಕೆ ಮಣಿದ ಸರಕಾರ ಖರೀದಿಯೇನೋ ಆರಂಭಿಸಿತು. ಆದರೆ ಅಲ್ಲಿಯೂ ಆಟವಾಡುವ ಮೂಲಕ ರೈತರ ಪಾಲಿಗೆ ಸರಕಾರ ವಿಲನ್ ಆಗಿ ಪರಿವರ್ತನೆಯಾಗಿದೆ.

50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಆದೇಶ

ರೈತರ ಹೋರಾಟಕ್ಕೆ ಮಣಿದು ಬೆಂಬಲ ಬೆಲೆ ಅಡಿ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದರೂ, ಜಿಲ್ಲೆಯಲ್ಲಿ ಫಸಲಿನ ಖರೀದಿ ನಡೆಯದಿರುವುದರಿಂದ ರೈತರು ಚಿಂತಿತರಾಗಿದ್ದಾರೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ 24 ಸಾವಿರ, ನವಲಗುಂದ 18 ಸಾವಿರ, ಕುಂದಗೋಳ 17 ಸಾವಿರ, ಧಾರವಾಡ 9 ಸಾವಿರ, ಹುಬ್ಬಳ್ಳಿ ಶಹರ, ಗ್ರಾಮೀಣ ಸೇರಿ 7 ಸಾವಿರ ಹಾಗೂ ಅಳ್ಳಾವರ, ಅಣ್ಣಿಗೇರಿಯಲ್ಲಿ 2500 ತಲಾ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಬಿತ್ತನೆ ಮಾಡಿದಾಗಿನಿಂದ ಮಳೆ ಕಾಡುತ್ತ ಬಂದಿತ್ತು.

ಇದನ್ನೂ ಓದಿ: ಕರ್ನಾಟಕ ರೈತರಿಗೆ ಗುಡ್​​ ನ್ಯೂಸ್: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಕೇಂದ್ರ ಅಸ್ತು

ಸಂಕಷ್ಟದ ಮಧ್ಯೆಯೂ ಮೆಕ್ಕೆಜೋಳ ಬೆಳೆದ ರೈತರಿಗೆ ದರ ಕುಸಿತದಿಂದಾಗಿ ಬರ ಸಿಡಿಲು ಬಡಿದಂತಾಯಿತು. ದರ ಕುಸಿತದಿಂದ ಕಂಗಾಲಾದ ರೈತರು ಬೆಂಬಲಬೆಲೆ ಅಡಿ ಮೆಕ್ಕೆಜೋಳ ಖರೀದಿಸುವಂತೆ ಹೋರಾಟ ಆರಂಭಿಸಿದರು. ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಮೊದಲಿಗೆ ತಲಾ ರೈತರಿಂದ 5 ಕ್ವಿಂಟಾಲ್ ಖರೀದಿಗೆ ಆದೇಶಿಸಿತು. ಇದು ರೈತರನ್ನು ಕೆರಳಿಸಿತು. ಮತ್ತೆ ಹೋರಾಟ ಹೆಚ್ಚಾಗಿದ್ದರಿಂದ ಸರ್ಕಾರ 20 ಕ್ವಿಂಟಾಲ್ ಖರೀದಿಗೆ ಮುಂದಾಯಿತು. ಇದಕ್ಕೂ ತೃಪ್ತರಾಗದ ರೈತರು ಹೆದ್ದಾರಿ ತಡೆದು ಹೋರಾಟ ನಡೆಸಲು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ, ಡಿ. 7 ರಂದೇ ಪ್ರತಿ ರೈತರಿಂದ 50 ಕ್ವಿಂಟಾಲ್‌ ಖರೀದಿಗೆ ಆದೇಶಿಸಿದೆ. ಆದರೆ ಆ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.

ಈಗಾಗಲೇ ಧಾರವಾಡದ ರಾಯಾಪುರದ ಕೆಎಂಎಫ್ ಪಶು ಆಹಾರ ರೈತರಿಂದ ತಲಾ 20 ಕ್ವಿಂಟಾಲ್ ಖರೀದಿ ನಡೆಯುತ್ತಿದೆ. ಆದರೆ, ಸಾವಿರಾರು ರೈತರಿಗೆ ಇನ್ನೂ ನೋಂದಣಿ, ಮಾರಾಟ ಸಾಧ್ಯವಾಗಿಲ್ಲ. ಕಾಳು ಇಟ್ಟುಕೊಂಡು ಖರೀದಿ ಪ್ರಕ್ರಿಯೆಗಾಗಿ ಕಾಯುತ್ತಿದ್ದಾರೆ. ಪಕ್ಕದ ಗದಗ, ಹಾವೇರಿ ಜಿಲ್ಲೆಯಲ್ಲಿ ಪ್ರತಿ ರೈತರಿಂದ 50 ಕ್ವಿಂಟಾಲ್ ಖರೀದಿ ನಡೆಯುತ್ತಿದೆ. ಆದರೆ, ಆದೇಶವಾಗಿ 15 ದಿನ ಕಳೆಯುತ್ತ ಬಂದರೂ ಧಾರವಾಡ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಕ್ವಿಂಟಾಲ್‌ಗೆ 1800 ರೂ. ವರೆಗೆ ದರ ಇದೆ. ಮಾರಾಟಕ್ಕೆ ಮುಂದಾದರೆ ಕ್ವಿಂಟಾಲ್‌ಗೆ ಕನಿಷ್ಠ 400ರಿಂದ 500 ರೂ.ವರೆಗೆ ನಷ್ಟವಾಗುತ್ತದೆ. ಹಾಗಂತ ರಾಶಿ ಮಾಡಿದ ಬಹಳ ದಿನಗಳವರೆಗೆ ಕಾಳು ಇಡುವಂತಿಲ್ಲ. ಇಷ್ಟೆಲ್ಲಾ ಆದರೂ ಸರಕಾರದ ಆದೇಶಕ್ಕೆ ಬೆಲೆ ಇಲ್ಲದಂತಾಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯಿಸಿದ್ದು, ಹಲವಾರು ದಿನಗಳ ಹಿಂದೆಯೇ ಈ ಬಗ್ಗೆ ಆದೇಶವಾಗಿದೆ. ಪ್ರತಿಯೊಬ್ಬ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಬೆಳಗಾವಿ ಅಧಿವೇಶನದಲ್ಲಿಯೇ ಸಿಎಂ ಅವರು ಹೇಳಿದ್ದಾರೆ. ಈ ಬಗ್ಗೆ ಸರಕಾರದಿಂದ ಆದೇಶವೂ ಬಂದಿದೆ. ಕೆಲ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲದೇ ಇರೋದ್ರಿಂದ ಗೊಂದಲವುಂಟಾಗಿದೆ. ಈ ಬಗ್ಗೆ ಎಲ್ಲಗೂ ಗಮನ ಹರಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾನಗರ ಪಾಲಿಕೆಗಳಲ್ಲಿ ಇನ್ನು ಇರಲ್ಲ ಆರೋಗ್ಯಾಧಿಕಾರಿ ಹುದ್ದೆ: ಕಾರಣ ಇಲ್ಲಿದೆ

ಆರಂಭದಿಂದಲೂ ಮೆಕ್ಕೆಜೋಳ ಬೆಳೆಗಾರರು ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಪ್ರತಿಕೂಲ ಹವಾಮಾನದ ವಿರುದ್ಧ ಹೋರಾಡಿ, ತಮ್ಮ ಬೆಳೆಯನ್ನು ಉಳಿಸಿಕೊಳ್ಳುವಲ್ಲಿಯೇನೋ ರೈತರು ಸಫಲರಾಗಿದ್ದಾರೆ. ಆದರೆ ಮಾರುಕಟ್ಟೆ ಲಾಬಿ ಹಾಗೂ ಇನ್ನಿತರ ಹೊಡೆತಗಳನ್ನು ತಡೆದುಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಒಟ್ಟಿನಲ್ಲಿ ಮೆಕ್ಕೆಜೋಳ ಬೆಳೆಗಾರರು ಸರಕಾರದ ತೀವ್ರ ನಿರ್ಲಕ್ಷದಿಂದಾಗಿ ಹೈರಾಣಾಗಿರುವುದು ಮಾತ್ರ ವಿಪರ್ಯಾಸದ ಸಂಗತಿಯೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:17 pm, Tue, 23 December 25

Source link

Exit mobile version