ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ – Kannada News | Bigg Boss Kannada 12: Dhanush family arrives at Bigg Boss house

ಬಿಗ್​ಬಾಸ್ ಕನ್ನಡದಲ್ಲಿ (Bigg Boss) ಈ ವಾರ ಫ್ಯಾಮಿಲಿ ವಾರವಾಗಿದೆ. ಬಿಗ್​​ಬಾಸ್ ಸ್ಪರ್ಧಿಗಳ ಮನೆ ಮಂದಿ ಒಬ್ಬೊಬ್ಬರಾಗಿ ಬಿಗ್​ಬಾಸ್ ಮನೆಗೆ ಬರುತ್ತಿದ್ದಾರೆ. ರಾಶಿಕಾ ಅವರ ತಾಯಿ, ಸಹೋದರ ಬಂದ ಬೆನ್ನಲ್ಲೆ ಇದೀಗ ಧನುಶ್ ಅವರ ಕುಟುಂಬದವರೂ ಸಹ ಬಂದಿದ್ದಾರೆ. ಆದರೆ ಧನುಶ್​​ ಅವರನ್ನು ಬಿಗ್​​ಬಾಸ್ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಧನುಶ್ ಅವರ ತಾಯಿ ಹಾಗೂ ಪತ್ನಿ ಇಬ್ಬರನ್ನೂ ಕರೆಸಿದ ಬಿಗ್​​ಬಾಸ್ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಒಳಗೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ಆಯ್ಕೆ ಕೇಳಿ ಸ್ವತಃ ಧನುಶ್ ಕಣ್ಣೀರು ಹಾಕಿದ್ದಾರೆ. ಧನುಶ್ ಅವರಿಗೆ ಬಂದ ಪರಿಸ್ಥಿತಿ ಕಂಡು ಇಡೀ ಮನೆ ಕಣ್ಣೀರು ಹಾಕಿದೆ. ವಿಡಿಯೋ ನೋಡಿ..

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಬಾಂಗ್ಲಾದಲ್ಲಿ ಹಿಂದೂಗಳ ಹಿಂಸಾಚಾರ; ಕೆಕೆಆರ್ ತಂಡಕ್ಕೆ ಭಾರತೀಯರಿಂದ ಹಿಡಿಶಾಪ

Source link

ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ವಿವೇಕಾನಂದ ಕುಟುಂಬ ಕಂಗಾಲು – Kannada News | Hubballi Incident: Dalit Leaders Demand Justice and Payment of Hospital Bills for Maanya Family

ಹುಬ್ಬಳ್ಳಿ, ಡಿಸೆಂಬರ್​ 23: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ತಂದೆಯಿಂದಲೇ ಮಗಳ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 2 ದಿನ ಕಳೆದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಂತ್ರಸ್ತ ಕುಟುಂಬವು ಆಸ್ಪತ್ರೆ ಬಿಲ್ ಪಾವತಿಸಲು ಪರದಾಡುವಂತ್ತಾಗಿದೆ. ಡಿಸಿ ಸೇರಿದಂತೆ ಅಧಿಕಾರಿಗಳು ಕುಟುಂಬಕ್ಕೆ ನೆರವು ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪ ಕೇಳಿಬಂದಿದೆ. ಸರ್ಕಾರವೇ ಆಸ್ಪತ್ರೆ ಬಿಲ್ ಭರಿಸಬೇಕು ಎಂದು ಆಗ್ರಹಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

VBL Deal: 1,118 ಕೋಟಿ ರೂಗೆ ಸೌತ್ ಆಫ್ರಿಕಾದ ಟ್ವಿಜ್ಜಾ ಖರೀದಿಸಲಿರುವ ಭಾರತದ ವರುಣ್ ಬೆವರೇಜಸ್ – Kannada News | Varun Beverages to acquire Twizza, a beverage firm in South Africa for over 1,118 crore of enterprise value

ನವದೆಹಲಿ, ಡಿಸೆಂಬರ್ 23: ಭಾರತದ ವರುಣ್ ಬೆವರೇಜಸ್ ಲಿಮಿಟೆಡ್ ಸಂಸ್ಥೆಯು ಸೌತ್ ಆಫ್ರಿಕಾ ಮೂಲದ ಟ್ವಿಜ್ಜಾ ಎನ್ನುವ ಕಂಪನಿಯನ್ನು ಪೂರ್ಣವಾಗಿ ಖರೀದಿಸಲಿದೆ. ಈ ವಿಷಯವನ್ನು ಸ್ವತಃ ವರುಣ್ ಬೆವರೇಜಸ್ ಸಂಸ್ಥೆಯೇ ಬಹಿರಂಗಪಡಿಸಿದೆ. ಸೌತ್ ಅಫ್ರಿಕಾದಲ್ಲಿರುವ ತನ್ನ ಅಂಗಸಂಸ್ಥೆಯಾದ ಬೆವ್​ಕೋ (ದಿ ಬೆವರೇಜಸ್ ಕಂಪನಿ ಪ್ರಾಪ್ರಿಯೇಟರಿ ಲಿ) ಮೂಲಕ ಟ್ವಿಜ್ಜಾವನ್ನು ಖರೀದಿಸುತ್ತಿರುವುದಾಗಿ ಹೇಳಿದೆ. ವರದಿ ಪ್ರಕರ 1,118.7 ಕೋಟಿ ರೂ ಬೆಲೆಗೆ (ಎಂಟರ್​ಪ್ರೈಸ್ ಮೌಲ್ಯ) ಖರೀದಿಸಲು ಡೀಲ್ ನಡೆದಿದೆ ಎನ್ನಲಾಗಿದೆ.

ವರುಣ್ ಬೆವರೇಜಸ್ ಸಂಸ್ಥೆಯು ಪೆಪ್ಸಿಕೋದ ಅತಿದೊಡ್ಡ ಫ್ರಾಂಚೈಸಿ ಬಾಟ್ಲರ್ ಕಂಪನಿ ಎನಿಸಿದೆ. ಟ್ವಿಜ್ಜಾ ಕಂಪನಿಯು ಅದರದ್ದೇ ಬ್ರ್ಯಾಂಡ್​ನ ಪಾನೀಯಗಳನ್ನು ತಯಾರಿಸಿ ವಿತರಿಸುವ ಬ್ಯುಸಿನೆಸ್ ಹೊಂದಿದೆ. ಸೌತ್ ಆಫ್ರಿಕಾದ ಕೇಪ್​ಟೌನ್, ಕ್ವೀನ್ಸ್​ಟೌನ್ ಮತ್ತು ಮಿಟಲ್​ಬರ್ಗ್​ನಲ್ಲಿ ಮೂರು ಉತ್ಪಾದನಾ ಘಟಕಗಳನ್ನು ಹೊಂದಿದೆ. ಇಲ್ಲಿ ಒಟ್ಟು 100 ಮಿಲಿಯನ್ ಕೇಸ್​​ಗಳ ಉತ್ಪಾದನೆ ಒಂದು ವರ್ಷದಲ್ಲಿ ಆಗುತ್ತದೆ ಎನ್ನಲಾಗಿದೆ. ಈ ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ ನಡೆಸಿದ ಒಟ್ಟು ವಹಿವಾಟು ಮೌಲ್ಯ 901 ಕೋಟಿ ರೂ ಎಂದು ತಿಳಿದುಬಂದಿದೆ.

ಇದನ್ನೂ ಓದಿ: WhatsApp vs Govt: ತಿಂಗಳಿಗೆ ಕೋಟಿ ನಂಬರ್ಸ್ ನಿಷೇಧಿಸಿದರೂ ಸರ್ಕಾರಕ್ಕೆ ಗುಟ್ಟು ಬಿಟ್ಟುಕೊಡದ ವಾಟ್ಸಾಪ್

2026ರ ಜೂನ್ 30ರೊಳಗೆ ಈ ಖರೀದಿ ಪೂರ್ಣಗೊಳ್ಳಬಹುದು ಎಂದು ವರುಣ್ ಬೆವರೇಜಸ್ ಸಂಸ್ಥೆಯು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ತಿಳಿಸಿದೆ. ಟ್ವಿಜ್ಜಾವನ್ನು ಖರೀದಿಸಲು ಬಳಸಿದ ದಿ ಬೆವರೇಜ್ ಕಂಪನಿಯು ವರುಣ್ ಬೆವರೇಜಸ್​ನ ಪಾಲಾಗಿದ್ದು 2024ರಲ್ಲಿ. ಆ ಡೀಲ್​ನಿಂದಾಗಿ ವಿಬಿಎಲ್ ಅಥವಾ ವರುಣ್ ಬೆವರೇಜಸ್ ಲಿಮಿಟೆಡ್ ಕಂಪನಿಯು ಸೌತ್ ಆಫ್ರಿಕಾ, ಲೆಸೋತೋ, ಇಸ್ವಾಟಿನಿ ಮೊದಲಾದೆಡೆ ತನ್ನ ಉಪಸ್ಥಿತಿ ಹೆಚ್ಚಿಸಿಕೊಳ್ಳಲು ಸಹಾಯವಾಗಿದೆ. ನಮೀಬಿಯಾ, ಬೋಟ್ಸ್​ವಾನ, ಮೊಜಾಂಬಿಕ್ ಮತ್ತು ಮಡಗಾಸ್ಕರ್​ನಲ್ಲೂ ಇದಕ್ಕೆ ಉಪಸ್ಥಿತಿ ಹೆಚ್ಚಿದಂತಾಗಿದೆ.

ಪೆಪ್ಸಿಕೋ ವಿತರಣೆಯ ಬ್ಯುಸಿನೆಸ್ ಅನ್ನು ಆಫ್ರಿಕಾದ ಹೆಚ್ಚಿನ ದೇಶಗಳಲ್ಲಿ ನೆಲೆಗೊಳಿಸಲು ವಿಬಿಎಲ್ ಯಶಸ್ವಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Haveri: ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು! – Kannada News | Serial Home Thefts Reported in Nagendramatti, Haveri

ಹಾವೇರಿ, ಡಿಸೆಂಬರ್​​ 23: ನಾಗೇಂದ್ರಮಟ್ಟಿಯಲ್ಲಿ ಮನೆಗಳ‌ ಸರಣಿ ಕಳ್ಳತನ ನಡೆದಿದ್ದು, ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳರು ಕೈಚಳಕ ತೋರಿದ್ದಾರೆ. 7ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ ನಡೆದಿದ್ದು, ನಗದು ಮತ್ತು ಚಿನ್ನಾಭರಣ ಸೇರಿದಂತೆ ವಿವಿಧ ವಸ್ತುಗಳನ್ನ ಕದ್ದು ಖದೀಮರು ಎಸ್ಕೇಪ್​​ ಆಗಿದ್ದಾರೆ. ಜೊತೆಗೆ ಚಳಿಯ ವಾತಾವರಣ ಹಿನ್ನೆಲೆ ಕಳವು ಮಾಡಿರುವ ಮನೆಯಲ್ಲೇ ಚಹಾ ಮಾಡಿಕೊಂಡು ಸೇವಿಸಿ ಹೋಗಿದ್ದಾರೆ. ಕಳ್ಳರ ಕೃತ್ಯಕ್ಕೆ ನಾಗೇಂದ್ರಮಟ್ಟಿ ಜನ ಕಂಗಾಲಾಗಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹಾವೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Shimoga Zilla Panchayat: ಶಿವಮೊಗ್ಗ ಜಿಲ್ಲಾ ಪಂಚಾಯತ್​ನಲ್ಲಿ ನೇಮಕಾತಿ; MBA / M.Com ಪದವೀಧರರು ಅರ್ಹರು – Kannada News | Shimoga Zilla Panchayat Accounts Manager Recruitment 2025: Apply Online

ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆಯ ಮೂಲಕ ಖಾತೆ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರದಡಿಯಲ್ಲಿ ಶಿವಮೊಗ್ಗದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 01ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಶೈಕ್ಷಣಿಕ ಅರ್ಹತೆ:

ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹಣಕಾಸು ವಿಷಯದಲ್ಲಿ MBA / M.Com ಅನ್ನು ಪೂರ್ಣಗೊಳಿಸಿರಬೇಕು .

ವಯೋಮಿತಿ:

ಶಿವಮೊಗ್ಗ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 21 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಶಿವಮೊಗ್ಗ ಜಿಲ್ಲಾ ಪಂಚಾಯತ್ ಅಕೌಂಟ್ಸ್ ಮ್ಯಾನೇಜರ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ Submit ಬಟನ್ ಮೇಲೆ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಿಯಾಂಕಾ ಚೋಪ್ರಾಗೆ ಪತಿ ನಿಕ್ಕಿ ಕೊಟ್ಟ ಸರ್ಪ್ರೈಸ್ ಯಾರೂ ಕೊಡಲಾರರೇನೊ? – Kannada News | Priyanka Chopra talks about her Husaband Nick Jonas’s surprise

ಪ್ರಿಯಾಂಕಾ ಚೋಪ್ರಾ (Priyanka Chopra) ಹಾಲಿವುಡ್​ಗೆ ಹಾರಿ ಬಹು ಸಮಯವಾಗಿದೆ. ಆದರೆ ಇದೀಗ ‘ವಾರಣಾಸಿ’ ಸಿನಿಮಾ ಮೂಲಕ ಮತ್ತೆ ಭಾರತೀಯ ಚಿತ್ರರಂಗಕ್ಕೆ ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಕಪಿಲ್ ಶರ್ಮಾ ನಡೆಸಿಕೊಡುವ ಟಾಕ್ ಶೋಗೂ ಬಂದಿದ್ದರು. ಈ ವೇಳೆ ‘ವಾರಣಾಸಿ’ ಸಿನಿಮಾದ ಬಗ್ಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ತಮ್ಮ ಪತಿ ನಿಕ್ ಜೋನಸ್ ನೀಡಿದ ವಿಶೇಷ ಸರ್ಪ್ರೈಸ್ ಬಗ್ಗೆಯೂ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ನೆಲೆಸಿರುವುದು ವಿದೇಶದಲ್ಲಿ ಆದರೂ ಭಾರತದ ಹಬ್ಬಗಳ ಆಚರಣೆಗಳನ್ನು ತಪ್ಪದೇ ಮಾಡುತ್ತಾರೆ. ಹೋಳಿ, ಗಣೇಶ ಚತುರ್ಥಿ, ದೀಪಾವಳಿ ಇನ್ನಿತರೆಗಳನ್ನು ಆಚರಿಸುವ ಅವರು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇವುಗಳ ಜೊತೆಗೆ ಕರ್ವಾ ಚೌತ್ ಹೆಸರಿನ ಉತ್ತರದಲ್ಲಿ ಬಹಳ ಜನಪ್ರಿಯವಾಗಿರುವ ವೃತವೊಂದನ್ನು ಸಹ ಪ್ರಿಯಾಂಕಾ ಚೋಪ್ರಾ ಆಚರಿಸುತ್ತಾರಂತೆ. ಈ ವೃತ್ತದಲ್ಲಿ ಕರ್ವಾ ಚೌತ್ ದಿನ ಪತ್ನಿ ಆದವರು, ಪತಿಗಾಗಿ ಉಪವಾಸವಿದ್ದು ವೃತ ಆಚರಿಸುತ್ತಾರೆ. ಸಂಜೆ ಆದ ಬಳಿಕ ಹುಣ್ಣಿಮೆ ಚಂದ್ರನ ಜೊತೆಗೆ ಪತಿಯ ಮುಖ ನೋಡಿ ಪತಿಯ ಕೈಯ್ಯಿಂದ ನೀರು ಸೇವಿಸಿ ವೃತ ಅಂತ್ಯ ಮಾಡುತ್ತಾರೆ.

ಪ್ರಿಯಾಂಕಾ ಚೋಪ್ರಾ ಸಹ ಪತಿ ನಿಕ್ ಜೋನಸ್ ಅವರಿಗಾಗಿ ಕರ್ವಾ ಚೌತ್ ವೃತ ಆಚರಿಸಿದ್ದರಂತೆ. ಆದರೆ ಸಂಜೆ ಆಗುತ್ತಲೇ ಅವರಿದ್ದ ಕಡೆ ಮೋಡಗಳುಂಟಾಗಿ, ಜೋರು ಮಳೆ ಬಂದು ಚಂದ್ರನೇ ಕಾಣಿಸಲಿಲ್ಲವಂತೆ. ಆದರೆ ಚಂದ್ರನ ನೋಡದೆ ವೃತ ಮುರಿಯುವಂತಿಲ್ಲ. ಆಗ ನಿಕ್ ಜೋನಸ್, ಖಾಸಗಿ ವಿಮಾನ ಬುಕ್ ಮಾಡಿ, ಮೋಡಗಳಿಗಿಂತಲೂ ಮೇಲೆ ಅದನ್ನು ಹಾರಿಸಿ ಚಂದ್ರನ ತೋರಿಸಿದರಂತೆ. ವಿಮಾನದ ಮೂಲಕ ಚಂದ್ರನ ನೋಡಿದ ಅದರ ಜೊತೆಯಲ್ಲೇ ಪತಿಯನ್ನು ನೋಡಿ, ಅಲ್ಲಿಯೇ ವೃತ ಬಿಟ್ಟರಂತೆ ಪ್ರಿಯಾಂಕಾ ಚೋಪ್ರಾ.

ಇದನ್ನೂ ಓದಿ:ಮಹೇಶ್ ಬಾಬು vs ಪ್ರಿಯಾಂಕಾ ಚೋಪ್ರಾ; ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

ಅಂದಹಾಗೆ ಪ್ರಿಯಾಂಕಾ ಚೋಪ್ರಾ ಇದನ್ನೆಲ್ಲ ಹೇಳಿದ ಬಳಿಕ ಕಮಿಡಿಯನ್ ಕಪಿಲ್ ಶರ್ಮಾ ಒಂದು ತುಂಟ ಪ್ರಶ್ನೆ ಕೇಳಿದ್ದಾರೆ. ವೃತ ಮುಗಿದ ಬಳಿಕ ಏನು ಮಾಡಿದಿರಿ? ಎಂದು. ಆದರೆ ಕಪಿಲ್ ಶರ್ಮಾ ಅವರ ಆ ತುಂಟ ಪ್ರಶ್ನೆಗೆ ನಕ್ಕು ಸುಮ್ಮನಾಗಿದ್ದಾರೆ.

ನಿಕ್ ಜೋನಸ್, ಹಾಲಿವುಡ್​ನ ಖ್ಯಾತ ಪಾಪ್ ಗಾಯಕ. ವಿಶ್ವದಾದ್ಯಂತ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೆಲವಾರು ಹಾಲಿವುಡ್ ಸಿನಿಮಾಗಳಲ್ಲಿಯೂ ಸಹ ನಿಕ್ ಜೋನಸ್ ನಟಿಸಿದ್ದಾರೆ. ಇಬ್ಬರೂ 2018ರ ಡಿಸೆಂಬರ್ ನಲ್ಲಿ ವಿವಾಹವಾದರು. ಇಬ್ಬರಿಗೂ ಮಾಲತಿ ಹೆಸರಿನ ಮುದ್ದಾದ ಮಗಳಿದ್ದಾಳೆ. ಇದೀಗ ಪ್ರಿಯಾಂಕಾ ಚೋಪ್ರಾ ‘ವಾರಣಾಸಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಒಂದು ಹಿಂದಿ ಸಿನಿಮಾನಲ್ಲಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಕುರ್ಚಿ ಕದನ: ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು – Kannada News | Don’t We Have the Right to Express Our Opinion on Who Should Be CM: Pranavananda Swamiji

ದೆಹಲಿ, ಡಿಸೆಂಬರ್​​ 23: ವೋಟ್‌ಗೆ ನಾವು ಬೇಕು, ಸಿಎಂ ಯಾರಾಗಬೇಕು ಎನ್ನುವ ಅಭಿಪ್ರಾಯ ಹೇಳಬಾರ್ದಾ? ರಾಜಕೀಯ ವಿಷಯಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಭಾರತದ ಸಂವಿಧಾನ ಸ್ವಾಮೀಜಿಗಳಿಗೆ ಹಕ್ಕು ನೀಡಿದೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ದೆಹಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಡಿ.ಕೆ. ಶಿವಕುಮಾರ್ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ರಾಜಕಾರಣಿ. ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಡಿಕೆ ಶಿವಕುಮಾರ್​ರನ್ನು ಸಿಎಂ ಮಾಡುವಂತೆ ಒತ್ತಾಯಿಸಲಾಗುವುದು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ತೀವ್ರಗೊಂಡ ಕುರ್ಚಿ ಕಿತ್ತಾಟ: ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ – Kannada News | Power Tussle In Karnataka Congress: CM Siddaramaiah supporters plan Ahinda meet in Mysuru

ಮೈಸೂರು, (ಡಿಸೆಂಬರ್ 23): ಹೈಕಮಾಂಡ್.. ಹೈಕಮಾಂಡ್.. ಹೈಕಮಾಂಡ್.. ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ (Congress)​​ ನಾಯಕರಲ್ಲಿ ಯಾರನ್ನೇ ಕೇಳಿದರೂ ಸಹ ಎಲ್ಲರ ಬೆರಳು ನೇರವಾಗಿ ಹೈಕಮಾಂಡ್ ಕಡೆಗೆ ತಿರುಗುತ್ತೆ. ಆದ್ರೆ ಗೊಂದಲ ಬಗೆಹರಿಸಿಬೇಕಿದ್ದ ಹೈಕಮಾಂಡ್​ನ ಭಾಗವಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೊಂದಲ ಸೃಷ್ಟಿ ಮಾಡಿದ್ದು ಹೈಕಮಾಂಡ್ ಅಲ್ಲ.ಇಲ್ಲಿ ಲೋಕಲ್ ಆಗಿ ಏನ್ ಆಗಿದೆಯೋ ಇಲ್ಲೇ ಸೆಟಲ್ ಮಾಡಿಕೊಳ್ಳಿ ಎಂದಿದ್ದಾರೆ. ಇದರಿಂದ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಬಣಗಳಲ್ಲಿ ಗೊಂದಲ ಸೃಷ್ಟಿಸಿದೆ. ಹೇಗಾದರೂ ಮಾಡಿ ಸಿಎಂ ಆಗಲೇಬೇಕೆಂದು ಹಠಕ್ಕೆ ಬಿದ್ದಿರುವ ಡಿಸಿಎಂ ಡಿಕೆ ಶಿವಕುಮಾರ್ ಇಂದು (ಡಿಸೆಂಬರ್ 23) ದೆಹಲಿ ತೆರಳಿದ್ದು, ಅಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಆದ್ರೆ, ಇತ್ತ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶಿಸಲು ಅಹಿಂದ ಸಮಾವೇಶಕ್ಕೆ ಸಿದ್ಧತೆಗಳು ನಡೆದಿವೆ.

ಇದನ್ನೂ ನೋಡಿ: ಸಿಎಂ ಕುರ್ಚಿ ಕಿತ್ತಾಟ ತಾರಕಕ್ಕೆ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ

ಹೌದು..ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕೆಂದು ಹಠಕ್ಕೆ ಬಿದ್ದಿದ್ದರಿಂದ ಇತ್ತ ಸಿದ್ದರಾಮಯ್ಯ ಪರವಾಗಿ ಅಹಿಂದ ಸಮಾವೇಶ ಮಾಡಲು ಸಿದ್ಧತೆಗಳು ನಡೆದಿವೆ. ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಚರ್ಚಿಸಲು ನಾಳೆ (ಡಿಸೆಂಬರ್ 23) ಬೆಳಗ್ಗೆ 11.30ಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಪೂರ್ವಭಾವಿ ಸಭೆ ಕರೆದಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ್ದು, ಸಮಾವೇಶ ಯಾವಾಗ ನಡೆಸಬೇಕೆನ್ನುವುದನ್ನು ನಾಳಿನ ಸಭೆಯಲ್ಲಿ ತೀರ್ಮಾನವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಬಾಂಗ್ಲಾದೇಶದ ತಂಟೆಗೆ ಹೋದರೆ ನಾವು ಉತ್ತರ ನೀಡುತ್ತೇವೆ; ಪಾಕ್​​ನಿಂದ ಯುದ್ಧದ ಬೆದರಿಕೆ – Kannada News | If India dares to attack Bangladesh Pakistan leader Kamran Saeed Usmanis war threat

ನವದೆಹಲಿ, ಡಿಸೆಂಬರ್ 23: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್)ನ ಯುವ ವಿಭಾಗದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಇಂದು ಭಾರತಕ್ಕೆ ಬೆದರಿಕೆ ಹಾಕಿದ್ದು, ಬಾಂಗ್ಲಾದೇಶದ ಮೇಲೆ ಭಾರತದಿಂದ ಯಾವುದೇ ದಾಳಿ ನಡೆದರೆ ಪಾಕಿಸ್ತಾನದ ಸೈನ್ಯ ಮತ್ತು ಕ್ಷಿಪಣಿಗಳು ಅದಕ್ಕೆ ಪ್ರತಿಕ್ರಿಯಿಸುತ್ತವೆ ಎಂದು ಹೇಳಿದ್ದಾರೆ. ಅಲ್ಲದೆ, ಅವರು ಪಾಕಿಸ್ತಾನ (Pakistan) ಮತ್ತು ಬಾಂಗ್ಲಾದೇಶದ ನಡುವೆ ಮಿಲಿಟರಿ ಮೈತ್ರಿಗೆ ಕರೆ ನೀಡಿದ್ದಾರೆ.

ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಪಾಕಿಸ್ತಾನದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ, ಬಾಂಗ್ಲಾದೇಶವನ್ನು ಭಾರತದ ಸೈದ್ಧಾಂತಿಕ ಪ್ರಾಬಲ್ಯಕ್ಕೆ ತಳ್ಳುವುದನ್ನು ಪಾಕಿಸ್ತಾನ ಒಪ್ಪುವುದಿಲ್ಲ. ಒಂದುವೇಳೆ ಭಾರತ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ ಅಥವಾ ಅದರ ಸ್ವಾಯತ್ತತೆಯ ಮೇಲೆ ದುಷ್ಟ ದೃಷ್ಟಿ ಬೀರಿದರೆ, ಪಾಕಿಸ್ತಾನ ಅದಕ್ಕೆ ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್​!

“ಭಾರತವು ಬಾಂಗ್ಲಾದೇಶದ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದರೆ, ಯಾರಾದರೂ ಬಾಂಗ್ಲಾದೇಶವನ್ನು ಕೆಟ್ಟ ಉದ್ದೇಶದಿಂದ ನೋಡಲು ಧೈರ್ಯ ಮಾಡಿದರೆ ಪಾಕಿಸ್ತಾನದ ಜನರು, ಪಾಕಿಸ್ತಾನಿ ಸಶಸ್ತ್ರ ಪಡೆಗಳು ಮತ್ತು ನಮ್ಮ ಕ್ಷಿಪಣಿಗಳು ಸುಮ್ಮನಿರುವುದಿಲ್ಲ, ನಾವು ಬಾಂಗ್ಲಾದೇಶದ ಸಹಾಯಕ್ಕೆ ರೆಡಿ ಇರುತ್ತೇವೆ ಎಂಬುದನ್ನು ನೆನಪಿಡಿ” ಎಂದು ಅವರು ಹೇಳಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ, ಉಸ್ಮಾನಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಔಪಚಾರಿಕ ಮಿಲಿಟರಿ ಮೈತ್ರಿಗೆ ಕರೆ ನೀಡುವ ಮೂಲಕ ಪಾಕಿಸ್ತಾನದ ಜೊತೆ ಕೈಜೋಡಿಸಲು ಬಾಂಗ್ಲಾದೇಶವನ್ನು ಆಹ್ವಾನಿಸಿದ್ದಾರೆ. ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶಕ್ಕೆ ಕಾಟ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಭಾರತವು ಅಖಂಡ ಭಾರತ ಸಿದ್ಧಾಂತದ ಅಡಿಯಲ್ಲಿ ಬಾಂಗ್ಲಾದೇಶವನ್ನು ಕೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

“ನಮ್ಮ ಪ್ರಸ್ತಾಪವೆಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಿಲಿಟರಿ ಮೈತ್ರಿಯನ್ನು ರಚಿಸಬೇಕು. ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು ಮತ್ತು ಬಾಂಗ್ಲಾದೇಶ ಪಾಕಿಸ್ತಾನದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು. ಪಾಕಿಸ್ತಾನ-ಬಾಂಗ್ಲಾದೇಶ ಮಿಲಿಟರಿ ಪಾಲುದಾರಿಕೆಯು ಪ್ರಾದೇಶಿಕ ಶಕ್ತಿಯ ಚಲನಶೀಲತೆಯನ್ನು ಬದಲಾಯಿಸುತ್ತದೆ ಮತ್ತು ಜಾಗತಿಕವಾಗಿ ಎರಡೂ ದೇಶಗಳು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬಾಂಗ್ಲಾದೇಶ ಪಾಕಿಸ್ತಾನದ ಈ ಆಫರ್​​ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version