IPL 2026: ಐಪಿಎಲ್ 2026 ರ ಸಮಾರೋಪ ಸಮಾರಂಭಕ್ಕೆ ಬಿಸಿಸಿಐ ಭರ್ಜರಿ ತಯಾರಿ

2026 ರ ಮೇ 31 ರಂದು ನಡೆಯಲಿರುವ ಫೈನಲ್ (IPL 2026) ಪಂದ್ಯದೊಂದಿಗೆ 19ನೇ ಆವೃತ್ತಿಯ ಐಪಿಎಲ್​ಗೆ ತೆರೆ ಬೀಳಲಿದೆ. ಈ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈ-ವೋಲ್ಟೇಜ್ ಫೈನಲ್ ಪಂದ್ಯವನ್ನು ಇನ್ನಷ್ಟು ವಿಶೇಷಗೊಳಿಸಲು ಬಿಸಿಸಿಐ ಕೂಡ ಸಮಾರೋಪ ಸಮಾರಂಭವನ್ನು (IPL 2026 Closing Ceremony) ಪ್ರತಿ ಬಾರಿಯಂತೆ ಈ ಬಾರಿಯೂ ಆಯೋಜಿಸಲಿದೆ ಎಂದು…

Read More

ಪ್ರಜ್ವಲ್​​ ವಿಡಿಯೋ ವೈರಲ್​​ ಹಿಂದೆ ಜೆಡಿಎಸ್​​ನವರದ್ದೂ ಕೈವಾಡ: ಚಾರ್ಜ್​​ಶೀಟ್​​ನಲ್ಲಿ ಸ್ಫೋಟಕ ಮಾಹಿತಿ ರಿವೀಲ್​​

ಹಾಸನ, ಮಾರ್ಚ್​​ 19: ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್​ ಸಂಬಂಧ SIT ಸಲ್ಲಿಕೆ ಮಾಡಿರುವ ದೋಷಾರೋಪ ಪಟ್ಟಿ ಜೆಡಿಎಸ್ ವಲಯದಲ್ಲಿಯೇ ತಲ್ಲಣ ಮೂಡಿಸಿದೆ. ಪೆನ್​ಡ್ರೈವ್​ ಹಂಚಿದ ಕೇಸ್​ನ ಆರೋಪಿಗಳ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್​​ ಜೊತೆ ಜೆಡಿಎಸ್ ಕಾರ್ಯಕರ್ತರನ್ನೂ ಕೂಡ SIT ಆರೋಪಿಗಳಾಗಿಸಿರೋದು ನಾಯಕರ ಅಚ್ಚರಿಗೆ ಕಾರಣವಾಗಿದೆ. ಚಾರ್ಜ್​ಶೀಟ್​ನಲ್ಲಿ ಶಾಸಕ ಸ್ವರೂಪ್ ಚಿಕ್ಕಪ್ಪ ಹರ್ಷ ಅವರ ಪುತ್ರ ರೇವಂತ್, ರೇವಂತ್ ಸ್ನೇಹಿತ ತೇಜಸ್, ಭವಾನಿ ರೇವಣ್ಣ ಆಪ್ತ ಎನ್​.ಸಿ.ಹರೀಶ್, JDS ಕಾರ್ಯಕರ್ತ ಬೂವನಹಳ್ಳಿ…

Read More

ಎಐ ಬಳಸಿ ಬಿಕಿನಿ ವಿಡಿಯೋ: ರುಕ್ಮಿಣಿ ವಸಂತ್ ಹೇಳಿದ್ದೇನು? – Kannada News | Actress Rukmini Vasanth talks about her AI video

ಎಐ ಬಳಸಿ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ನಕಲಿ ವಿಡಿಯೋವನ್ನು ಕೆಲ ದುರುಳರು ಹರಿಬಿಟ್ಟಿದ್ದಾರೆ. ಮಹಿಳೆಯೊಬ್ಬಳು ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್​​ನಲ್ಲಿ ಇಳಿಯುತ್ತಿರುವ ದೃಶ್ಯ ಅದಾಗಿದ್ದು, ಆ ಮಹಿಳೆಯ ಮುಖವನ್ನು ರುಕ್ಮಿಣಿ ಮುಖದೊಂದಿಗೆ ಬದಲಾಯಿಸಲಾಗಿದೆ. ಎಐ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ಕಮೆಂಟುಗಳು ಹರಿದಾಡುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಟಿ, ತೀವ್ರ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮಾಧ್ಯಮಗಳ ಮುಂದೆ ಇದೇ ವಿಷಯವಾಗಿ ಮೊದಲ…

Read More

ದರ್ಶನ್ ಮಾನಸಿಕ ಸ್ಥಿತಿ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ವಿಜಯಲಕ್ಷ್ಮೀ – Kannada News | Vijayalakshmi Confirms Darshan’s Strength: Dispels Rumors, Reassures Fans

ನಟ ದರ್ಶನ್ (Darshan) ಅವರು ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬಿತ್ಯಾದಿ ವದಂತಿಗಳು ಈ ಮೊದಲು ಹರಿದಾಡಿದ್ದವು. ಆ ಬಳಿಕ ಮಾತನಾಡಿದ್ದ ವಿಜಯಲಕ್ಷ್ಮೀ ದರ್ಶನ್ ಅವರು, ಇದು ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದರು. ಈಗ ವಿಜಯಲಕ್ಷ್ಮೀ ದರ್ಶನ್ ಅವರು ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. ಧನ್ವೀರ್ ನಟನೆಯ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್​​ನಲ್ಲಿ ಅವರು ಮಾತನಾಡಿ, ದರ್ಶನ್ ಫ್ಯಾನ್ಸ್​​ಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಮಂಡ್ಯದಲ್ಲಿ ‘ಹಯಗ್ರೀವ’ ಟ್ರೇಲರ್ ಲಾಂಚ್ ಈವೆಂಟ್ ನಡೆಯಿತು. ಇದಕ್ಕೆ ವಿಜಯಲಕ್ಷ್ಮೀ ಅವರು ಮುಖ್ಯ ಅತಿಥಿಯಾಗಿ…

Read More

ಇರಾನ್ ಮೇಲೆ ಟ್ರಂಪ್ ಯುದ್ಧ ಘೋಷಿಸಲು ಕಾರಣರಾದ ಪೀಟ್ ಹೆಗ್ಸೆತ್ ಯಾರು?

ವಾಷಿಂಗ್ಟನ್, ಮಾರ್ಚ್ 24: ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಲ್ಲಿ ಇದೀಗ ಗಮನ ಸೆಳೆಯುತ್ತಿರುವ ವ್ಯಕ್ತಿ ಅಮೆರಿಕದ ಪೀಟ್ ಹೆಗ್ಸೆತ್. ಇವರು ಡೊನಾಲ್ಡ್ ಟ್ರಂಪ್ (Donald Trump) ಅವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರು. ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿರುವ ಪೀಟ್ ಹೆಗ್ಸೆತ್ ಅವರೇ ಇರಾನ್ ಮೇಲೆ ದಾಳಿ ನಡೆಸೋಣ ಎಂದು ಟ್ರಂಪ್​ ಕಿವಿಯೂದಿದ್ದಾರೆ ಎಂಬ ವಿಷಯ ಬಯಲಾಗಿದೆ. ಹೀಗಾಗಿ, ಈ ಪೀಟ್ ಹೆಗ್ಸೆತ್ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿವೆ. ಇರಾನ್ ಮೇಲೆ ಯುದ್ಧ ಮಾಡೋಣ ಎಂದು ಮೊದಲು ಹೇಳಿದ್ದೇ ಪೀಟ್ ಹೆಗ್ಸೆತ್ ಎಂದು…

Read More

Horoscope Today 15 January; ಇಂದು 12 ರಾಶಿಗಳ ಅದೃಷ್ಟ ಫಲ ಹೇಗಿದೆ? – Kannada News | Makara Sankranti 2026: Astrological Forecasts for All Zodiac Signs by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 15ರ ಗುರುವಾರದ ದಿನ ಭವಿಷ್ಯದ ಬಗ್ಗೆ ತಿಳಿಸಿದ್ದಾರೆ. ಇದು ವಿಶ್ವಾವಸುನಾಮ ಸಂವತ್ಸರ, ಪುಷ್ಯಮಾಸ, ಕೃಷ್ಣಪಕ್ಷ ದ್ವಾದಶಿ, ಜೇಷ್ಠಾ ನಕ್ಷತ್ರ, ವೃದ್ಧಿಯೋಗ ಮತ್ತು ಕೌಲವಕರಣ ಇರುವ ದಿನವಾಗಿದೆ. ರಾಹುಕಾಲವು ಮಧ್ಯಾಹ್ನ 1:54 ರಿಂದ 3:20ರ ವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಮಧ್ಯಾಹ್ನ 12:29 ರಿಂದ 1:53ರ ವರೆಗೆ ಇರುತ್ತದೆ. ಈ ದಿನದ ಪ್ರಮುಖ ಘಟನೆ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ…

Read More

ಗಣರಾಜ್ಯೋತ್ಸವ ಅಂಗವಾಗಿ ಜ 14ರಿಂದ ಲಾಲ್​​ಬಾಗ್​ನಲ್ಲಿ ಫ್ಲವರ್ ಶೋ: ಈ ಬಾರಿ ಥೀಮ್ ಯಾವುದು? ಟಿಕೆಟ್​ ದರವೆಷ್ಟು? – Kannada News | Bengaluru: Lalbagh Flower Show to Begin on January 14 as Part of Republic Day Celebrations; Full Details Here

ಫ್ಲವರ್ ಶೋಗೆ ಸಿದ್ಧತೆ ನಡೆದಿರುವುದು ಬೆಂಗಳೂರು, ಜನವರಿ 12: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫ್ಲವರ್ ಶೋ (Flower Show)  ಅನಾವರಣಗೊಳ್ಳಲಿದೆ. ಗಣರಾಜ್ಯೋತ್ಸವ (Republic Day) ದಿನಾಚರಣೆ ಅಂಗವಾಗಿ ತೋಟಗಾರಿಕಾ ಇಲಾಖೆ ಜನವರಿ 14ರಿಂದ 26ರವರೆಗೆ 219ನೇ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದೆ. ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜೀವನಕ್ಕೆ ಸಂಬಂಧಿಸಿದಂತೆ ಫ್ಲವರ್ ಶೋ ಆಯೋಜಿಸಲಾಗಿದ್ದು, ಜ.14ರ ಸಂಜೆ 4 ಗಂಟೆಗೆ ಸಿಎಂ, ಡಿಸಿಎಂ ಮತ್ತು ಸಂಸದ ತೇಜಸ್ವಿ ಸೂರ್ಯ ಕುಟುಂಬ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ತೋಟಗಾರಿಕಾ…

Read More

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ! – Kannada News | Owner locks to Anganwadi centre for not provide job to his family member at Belagavi

ಬೆಳಗಾವಿ, (ಜನವರಿ 08):  ಅಂಗನವಾಡಿಯಲ್ಲಿ (Anganwadi centre) ತಮ್ಮ ಕುಟುಂಬಸ್ಥರಿಗೆ ಕೆಲಸ ನೀಡದ ಕೋಪದಲ್ಲಿ ಜಾಗದ ಮಾಲೀಕ ಕಟ್ಟಡಕ್ಕೆ ಬೀಗ ಹಾಕಿರುವ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ವಂಜೇರಿ ತೋಟದ ಅಂಗನವಾಡಿ ಕೇಂದ್ರಕ್ಕೆ ಕಳೆದ ನಾಲ್ಕು ದಿನಗಳಿಂದ ಬಾಬುರಾವ್ ವಂಜೇರಿ ಎಂಬವರು ಬೀಗ ಹಾಕಿದ್ದಾರೆ. ಇದರಿಂದಾಗಿ ಮಕ್ಕಳು ಅಂಗನವಾಡಿಯ ಆವರಣದಲ್ಲಿಯೇ ಕುಳಿತು ಆಟವಾಡುತ್ತಿದ್ದಾರೆ. ಶಾಲೆಗೆ ಸ್ಥಳ ಕೊಟ್ಟಿರುವ ಬಾಬುರಾವ್ ವಂಜೇರಿ…

Read More

TV9 Kannada Live: ರಾಜ್ಯ, ದೇಶ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು

ಕೇಂದ್ರದಲ್ಲಿ NDA ಸರ್ಕಾರ 12 ವರ್ಷ ಪೂರೈಸಿದ ಹಿನ್ನೆಲೆ ಪ್ರಧಾನಿ ಮೋದಿ ಎನ್​​ಡಿಎ ನಾಯಕರ ಜೊತೆ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​ ತನ್ನದೇ ಆದ ರಾಜಕೀಯ ಲೆಕ್ಕಾಚಾರಗಳನ್ನು ಹಾಕುತ್ತಿದ್ದು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿಗಳ ಜೊತೆಗಿನ ಸಭೆ ಕುತೂಹಲ ಮೂಡಿಸಿದೆ. ಇತ್ತ ಕರ್ನಾಟಕದಲ್ಲಿ ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿದಿದ್ದು, ಸಚಿವಾಕಾಂಕ್ಷಿಗಳಿಂದ ಲಾಬಿ ಜೋರಾಗಿದೆ. ಯುವ ಮುಖಗಳಿಗೆ ಹೈಕಮಾಂಡ್​​…

Read More

Iran Israel War: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹುಗೆ ಪಿಎಂ ಮೋದಿ ಕರೆ: ಯುದ್ಧ ನಿಲ್ಲಿಸಲು ಆಗ್ರಹ – Kannada News | PM Modi Calls Israeli PM Benjamin Netanyahu, Urges Immediate End to War Amid Iran Missile Attacks

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತ್ಯಾನಹು (ಸಂಗ್ರಹ ಚಿತ್ರ)Image Credit source: X/@narendramodi ನವದೆಹಲಿ, ಮಾರ್ಚ್​ 2: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತ್ಯಾನಹು (Benjamin Netanyahu) ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಕುರಿತು ಚರ್ಚಿಸಿದರು. ಇದೇ ವೇಳೆ, ಯುದ್ಧ ತಕ್ಷಣ ನಿಲ್ಲಿಸುವ ಅಗತ್ಯವಿದೆ ಎಂದು ಭಾರತ ಪುನರುಚ್ಚರಿಸಿರುವುದಾಗಿ ಮೋದಿ ತಿಳಿಸಿದ್ದಾರೆ. ಇಸ್ರೇಲ್‌, ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್‌ ಕ್ಷಿಪಣಿ…

Read More