ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು: ಸಿದ್ದೇಶ್ವರನ ಸುತ್ತ ನಾಗಸರ್ಪ ಕಾವಲು – Kannada News | Siddeshwara Temple Architecture of Chalukya Period In Jantli Shirur at gadag

ಗದಗ, (ಫೆಬ್ರವರಿ 10): ಗದಗ ಜಿಲ್ಲೆಯ ಮುಂಡರಗಿ ಜಂತ್ಲಿಶಿರೂರ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಸಿರಿ ಸಂಪತ್ತು ಇದೆ ಎನ್ನುವ ಚರ್ಚೆ ಶುರುವಾಗಿದೆ. ಹಳೇ ಕಾಲದ ಸಿದ್ದೇಶ್ವರ ದೇಗುಲ ಸಂಪೂರ್ಣ ಹಾಳಾಗಿದೆ. ನಿಧಿಗಳ್ಳರ ಅಟ್ಟಹಾಸಕ್ಕೆ ದೇವಸ್ಥಾನ ನಾಶವಾಗಿದೆ. ಇನ್ನು ಈ ದೇವಸ್ಥಾನದ ಕೆಳಗೆ ಮತ್ತೊಂದು ದೇಗುಲ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸಂಜೀವ್ ಪಾಂಡ್ರೆ ಅವರು ಪ್ರತ್ಯಕ್ಷ ವರದಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

2027ರಿಂದ ಉದ್ಯೋಗಪತನ ಶುರು; ಶೇ. 99 ಮಂದಿಗೆ ಕೆಲಸವೇ ಇರಲ್ಲ: ಡಾ. ಯಾಂಪೋಲ್​ಸ್ಕಿ ಭಯಾನಕ ಭವಿಷ್ಯ – Kannada News | AGI’s Job Apocalypse: Expert Predicts Mass Unemployment by 2027. Are YOU Ready?

ನವದೆಹಲಿ, ಫೆಬ್ರುವರಿ 10: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI Technology) ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಟೆಕ್ನಾಲಜಿಯ ಮುಂದುವರಿದ ಭಾಗವಾಗಿರುವ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಅಥವಾ ಎಜಿಐ ಅನ್ನು ಸಾಧಿಸಲು ವಿಜ್ಞಾನಿಗಳು ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಒಂದು ವೇಳೆ ಎಜಿಐ ಸಿದ್ಧವಾಯಿತೆಂದರೆ ಯಂತ್ರದ ಬುದ್ಧಿಮತ್ತೆಯು ಮನುಷ್ಯರನ್ನು ಮೀರಿ ಹೆಚ್ಚುತ್ತದೆ. ಮನುಷ್ಯರ ಬಹುತೇಕ ಎಲ್ಲಾ ಕೆಲಸಗಳನ್ನೂ ಯಂತ್ರಗಳು ಮಾಡಬಲ್ಲುವು. ಆದರೆ, ಇಂಥದ್ದೊಂದು ಸ್ಥಿತಿ ಯಾವಾಗ ಬರುತ್ತೆ? ಅಮೆರಿಕದ ಲೂಯಿಸ್​ವಿಲೆ ಯೂನಿವರ್ಸಿಟಿಯ ಪ್ರೊಫೆಸರ್ ಹಾಗೂ ಕಂಪ್ಯೂಟರ್ ವಿಜ್ಞಾನಿ ಡಾ. ರೋಮನ್ ಯಾಂಪೋಲ್​ಸ್ಕಿ (Dr. Roman Yampolskiy) ಅವರ ಪ್ರಕಾರ ಮುಂದಿನ ವರ್ಷವೇ ಎಜಿಐ ಬಂದುಬಿಡಬಹುದು.

ದಿ ಡೈರಿ ಆಫ್ ಎ ಸಿಇಒ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ಡಾ. ಯಾಂಪೋಲ್​ಸ್ಕಿ ಅವರು, 2027ರಲ್ಲೇ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಆಗಮನ ಆಗಬಹುದು. ಎಲ್ಲಾ ಉದ್ಯಮಗಳಲ್ಲೂ ಸಾಲು ಸಾಲಾಗಿ ಉದ್ಯೋಗಗಳು ಇನ್ನಿಲ್ಲದಂತಾಗಬಹುದು ಎನ್ನುವ ಭಯಾನಕ ಸಂಗತಿಯನ್ನು ಈ ಕಂಪ್ಯೂಟರ್ ವಿಜ್ಞಾನಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?

ಈಗಿರುವ ಸಾಮಾನ್ಯ ಎಐ ಮಾಡಲ್​ಗಳೇ ಈಗಿರುವ ಮನುಷ್ಯರ ಶೇ. 60ರಷ್ಟು ಕೆಲಸಗಳನ್ನು ಮಾಡಬಲ್ಲುವು. ಮನುಷ್ಯರಿಗೆ ಮಾಡಲು ಸಾಧ್ಯವಿರುವ ಪ್ರತಿಯೊಂದು ಕೆಲಸವನ್ನೂ ಎಜಿಐ ಮಾಡಬಲ್ಲುದು. ಎಜಿಐ ಅಡಿ ಇಟ್ಟ ಬಳಿಕ ಐದು ವರ್ಷದಲ್ಲಿ ಶೇ. 99ರಷ್ಟು ಕೆಲಸಗಳೇ ಇಲ್ಲವಾಗುತ್ತವಂತೆ.

ಡಾ. ರೋಮನ್ ಯಾಂಪೋಲ್ಸ್​ಕಿ ಅವರು ಎಐ ಸುರಕ್ಷತೆ ಮತ್ತು ಅಪಾಯದ ಕುರಿತು 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದು ಮುದ್ರಿಸಿದ್ದಾರೆ. ಅವರ ಪ್ರಕಾರ, ಆಟೊಮೇಶನ್ ಸಾಧ್ಯವೇ ಇಲ್ಲದ ವೃತ್ತಿ ಯಾವುದೂ ಇಲ್ಲ. ಈ ಹಿಂದೆ ತಂತ್ರಜ್ಞಾನ ಆವಿಷ್ಕಾರಗಳ ಅಳವಡಿಕೆಗೆ ಮನುಷ್ಯರ ನೆರವು ಬೇಕಾಗಿತ್ತು. ಆದರೆ, ಈಗ ಎಐ ಸ್ವತಂತ್ರವಾಗಿ ಆಪರೇಟ್ ಮಾಡಲು ಸಮರ್ಥವಾಗಿದೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಬಹಳ ದಟ್ಟವಾಗಿದೆ ಎನ್ನುವುದು ಇವರ ಅನಿಸಿಕೆ.

ಕಂಪ್ಯೂಟರ್ ಆಧಾರಿತ ಉದ್ಯೋಗಗಳು ಮೊದಲು ನಶಿಸುತ್ತವೆ. ಕಾರ್ಮಿಕರ ಕೆಲಸಗಳು ಹೋಗುತ್ತವೆ. 2030ರೊಳಗೆ ಮನುಷ್ಯರ ಬಹುತೇಕ ಎಲ್ಲಾ ದೈಹಿಕ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆಯಂತೆ.

ಇದನ್ನೂ ಓದಿ: ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?

ಈ ಕೆಲ ಕೆಲಸಗಳು ಉಳಿದುಕೊಳ್ಳಬಹುದು

ಡಾ. ರೋಮನ್ ಯಾಂಪೋಲ್​ಸ್ಕಿ ಪ್ರಕಾರ ಎಜಿಐ ಆರ್ಭಟದ ಮಧ್ಯೆ ಮನುಷ್ಯರಿಗೆ ಕೆಲ ಕೆಲಸಗಳು ಉಳಿದುಕೊಳ್ಳಬಹುದು. ಶ್ರೀಮಂತರಿಗೆ ಸಹಾಯಕರು ಬೇಕಾಗಬಹುದು; ವೈಯಕ್ತಿಕ ಕಾಳಜಿ, ಆರೈಕೆ ಬಯಸುವ ಕೆಲಸಗಳು; ಎಐ ಸಿಸ್ಟಂಗಳನ್ನು ಗಮನಿಸಬಲ್ಲ ತಜ್ಞರು; ಕಂಪನಿಗಳಿಗೆ ಎಐ ಅಳವಡಿಕೆ ಮಾಡಲು ನೆರವಾಗುವ ತಜ್ಞರು, ಈ ಕೆಲಸಗಳು ಮಾತ್ರ ಚಾಲನೆಯಲ್ಲಿ ಇರಬಹುದು ಎಂದು ಯಾಂಪೋಲ್​ಸ್ಕಿ ಭಯಾನಕ ಭವಿಷ್ಯ ನುಡಿದಿದ್ದಾರೆ.

ಉದ್ಯೋಗ ಇಲ್ಲವೆಂದರೆ ಮನುಷ್ಯರಿಗೆ ಹಣ ಎಲ್ಲಿಂದ?

ಪ್ರತಿಯೊಂದು ಕೆಲಸವನ್ನೂ ಯಂತ್ರಗಳೇ ಮಾಡುವುದರಿಂದ ಮನುಷ್ಯರಿಗೆ ಕೆಲಸ ಇರಲ್ಲ. ಜೊತೆಗೆ ಉತ್ಪಾದನೆಯೂ ಕೂಡ ಗರಿಷ್ಠ ಮಟ್ಟಕ್ಕೆ ಹೋಗುತ್ತದೆ. ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರೊಡಕ್ಟಿವಿಟಿ ಇರುತ್ತದೆ. ಇದರ ಫಲ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದರೆ ಯಾರಿಗೂ ಕೂಡ ಯಾವುದರ ಕೊರತೆಯಾಗದು. ವಿಶ್ವದಲ್ಲಿ ಯೂನಿವರ್ಸಲ್ ಬೇಸಿಕ್ ಇನ್ಕಮ್​ನಂತಹ ವ್ಯವಸ್ಥೆ ಬರಬಹುದು. ಇಲಾನ್ ಮಸ್ಕ್ ಅವರು ಬಾರಿ ಬಾರಿ ಇದನ್ನೇ ಹೇಳುತ್ತಾ ಬರುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ: 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ – Kannada News | Hoskote Teen Kalyani’s Suspicious Death: Inter District Body Transfer Raises Police Questions

ಚಿಕ್ಕಬಳ್ಳಾಪುರ, ಫೆ.10: ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ಕಲ್ಯಾಣಿಯ ನಿಗೂಢ ಸಾವು ಮತ್ತು ಆಕೆಯ ಶವವನ್ನು ಪೊಲೀಸರಿಗೆ ತಿಳಿಸದೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸಾಗಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ದೊಡ್ಡಪ್ಪ-ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದ ಕಲ್ಯಾಣಿ ಇಂದು ಬೆಳಿಗ್ಗೆ ಗಿಡ್ನಹಳ್ಳಿ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿ ಸಾವನ್ನಪ್ಪಿದ ನಂತರ, ಪೋಷಕರು ಮತ್ತು ಸಂಬಂಧಿಕರು ಸ್ಥಳೀಯ ನಂದಗುಡಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಶವವನ್ನು ನೇರವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಈತಮಾಕಲಹಳ್ಳಿ ಗ್ರಾಮಕ್ಕೆ ಸಾಗಿಸಿದ್ದಾರೆ.

ಇನ್ನೇನು ಶವ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದಾಗ, ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಸ್ಕಾರವನ್ನು ನಿಲ್ಲಿಸಿದ್ದಾರೆ. ಸ್ಮಶಾನ ಸೇರಬೇಕಿದ್ದ ಶವವನ್ನು ಪೊಲೀಸರು ವಾಪಸ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದಾಳೆ, ಸಾವಿನ ಹಿಂದೆ ಯಾವುದೇ ಅನುಮಾನವಿಲ್ಲ ಎಂದು ಮೃತಳ ದೊಡ್ಡಮ್ಮ ಮುನಿರತ್ನಮ್ಮ ಸಮಜಾಯಿಷಿ ನೀಡಿದ್ದಾರೆ.

ಸರಿಯಾದ ಮಾಹಿತಿ ಇಲ್ಲದೆ ಇದ್ದಕ್ಕಿದ್ದಂತೆ ಶವ ತಂದಿದ್ದಕ್ಕೆ ಈತಮಾಕಲಹಳ್ಳಿಯ ಕೆಲವು ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಅಸಹಜ ಸಾವು ಸಂಭವಿಸಿದಾಗ ಪೊಲೀಸರಿಗೆ ತಿಳಿಸುವುದು ಕಡ್ಡಾಯ. ಈ ಪ್ರಕರಣದಲ್ಲಿ ಪೊಲೀಸರಿಗೆ ತಿಳಿಸದೆ ಶವ ಸಾಗಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ? ಸಾವಿನ ಹಿಂದೆ ಯಾರದ್ದಾದರೂ ಪ್ರಚೋದನೆ ಇದೆಯೇ? ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ಶವವನ್ನು ತರಾತುರಿಯಲ್ಲಿ ಸಾಗಿಸಲಾಯಿತೇ? ಎಂಬ ಅನುಮಾನಗಳು ಮೂಡಿದೆ.

ಇದನ್ನೂ ಓದಿ: ಬೆಂಗಳೂರು: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ ಯುವಕ

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಕಲ್ಯಾಣಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಸ್ತುತ ಚಿಕ್ಕಬಳ್ಳಾಪುರ ಮತ್ತು ನಂದಗುಡಿ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಕಲ್ಯಾಣಿಯ ದೊಡ್ಡಪ್ಪ ಹಾಗೂ ದೊಡ್ಡಮ್ಮ ಮುನಿರತ್ನಮ್ಮ , ತಮಗೆ ಮಕ್ಕಳಿಲ್ಲವೆಂದು, ಮುನಿರತ್ನಮ್ಮ ತಂಗಿ ನರಸಮ್ಮಳ ಎರಡನೆ ಮಗಳನ್ನು ದತ್ತು ಪಡೆದುಕೊಂಡಿದ್ದರು. ಇನ್ನು ವೈದ್ಯರ ವರದಿಯ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ನಡೆಸಲಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2 ಲಕ್ಷಕ್ಕಾಗಿ 14 ವರ್ಷದ ಮಗಳನ್ನು ಕೋಲಾರದ 54 ವರ್ಷದ ವ್ಯಕ್ತಿಗೆ ಮಾರಿದ ತಾಯಿ! – Kannada News | Mother Sold 14 year old Daughter for Rs 2 Lakhs to 54 year Old Kolar Man in Andhra Pradesh

ಹೈದರಾಬಾದ್, ಫೆಬ್ರವರಿ 10: ಆಂಧ್ರಪ್ರದೇಶದ (Andhra Pradesh) ಅಣ್ಣಮಯ್ಯ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ತಾಯಿಯೊಬ್ಬಳು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 2 ಲಕ್ಷ ರೂ.ಗೆ ತಾಯಿ ತನ್ನನ್ನೇ ನಂಬಿಕೊಂಡಿದ್ದ ಮಗಳ ಜೀವನವನ್ನೇ ಹಾಳು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುಂಗನೂರಿನ ಬೀಡಿ ಕಾಲೋನಿಯ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ರಾಜಶೇಖರ್ ರೆಡ್ಡಿ ಎಂಬ 54 ವರ್ಷದ ವ್ಯಕ್ತಿಗೆ ಮಾರಾಟ ಮಾಡಲಾಗಿದೆ.

ಬೀಡಿ ಕಾಲೋನಿಯಲ್ಲಿ ವಾಸಿಸುವ ರಾಮರಾಜು ಹಾಗೂ ಶೋಭಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ತಾಯಿ ಶೋಭಾ ತನ್ನ ಹಿರಿಯ ಮಗಳನ್ನು ಹಣದ ಆಸೆಗೆ ಮಾರಿದ್ದಾಳೆ. ರಾಮರಾಜು ಮತ್ತು ಶೋಭಾ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಪತಿ ರಾಮರಾಜು ಜೊತೆಗಿನ ಜಗಳದ ನಂತರ ಶೋಭಾ 2 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು. ಪುಂಗನೂರಿನ ಟಿಡ್ಕೊ ಮನೆಗಳಲ್ಲಿ ವಾಸಿಸುವ ಶೋಭಾ, ರೆಡ್ಡೆಪ್ಪ ಎಂಬ ಮಧ್ಯವರ್ತಿಯ ಮೂಲಕ ತನ್ನ ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದಳು. ಇದಕ್ಕಾಗಿ ಪ್ಲಾನ್ ಮಾಡಿದ ಆಕೆ ನೋಡಬೇಕೆಂದು ಆಸೆಯಾಗುತ್ತಿದೆ ಎಂದು ಹೇಳಿ ತನ್ನ ಹಿರಿಯ ಮಗಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು.

ಕರ್ನಾಟಕದ ಕೋಲಾರ ಜಿಲ್ಲೆಯ ರಾಯಲ್ಪಡುವಿನ 54 ವರ್ಷದ ರಾಜಶೇಖರ್ ರೆಡ್ಡಿ ಎರಡನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದ ವಿಷಯ ತಿಳಿದ ಆಕೆ ರೆಡ್ಡಪ್ಪ ಮೂಲಕ 2 ಲಕ್ಷ ರೂ.ಗೆ ಒಪ್ಪಂದ ಕುದುರಿಸಿದ್ದಳು. 2 ಲಕ್ಷ ಕೊಟ್ಟು ಆ ಬಾಲಕಿಯನ್ನು ರಾಜಶೇಖರ್ ಎರಡನೇ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಮದ್ಯ ಕುಡಿಯಬೇಡಮ್ಮ ಎಂದಿದ್ದಕ್ಕೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ

ಒಪ್ಪಂದದ ಪ್ರಕಾರ ಶೋಭಾಗೆ ಹಣ ನೀಡಿ 10 ದಿನಗಳ ಹಿಂದೆ ಬೆಂಗಳೂರಿನಲ್ಲಿ ಆ ಹುಡುಗಿಯನ್ನು ಮದುವೆಯಾದ ರಾಜಶೇಖರ್ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋದರು. ನಂತರ, ರಾಜಶೇಖರ್ ಅಪ್ರಾಪ್ತ ಬಾಲಕಿಯನ್ನು ಚಿತ್ರಹಿಂಸೆ ನೀಡಿದ್ದು, ಆಕೆಗೆ ಅದು ಸಹಿಸಲಾಗಲಿಲ್ಲ. ಇದರ ಪರಿಣಾಮವಾಗಿ, ಆ ಹುಡುಗಿ ತನ್ನ ಅಣ್ಣನಿಗೆ ಫೋನ್ ಮೂಲಕ ಮಾಹಿತಿ ನೀಡಿದಳು. ನಂತರ, ತನ್ನ ಅಣ್ಣನ ಸಹಾಯದಿಂದ ಅವಳು ಪುಂಗನೂರನ್ನು ತಲುಪಿದಳು. ಬಳಿಕ ಈ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲಾಯಿತು.

ಆ ಬಾಲಕಿಯನ್ನು ಐಸಿಡಿಎಸ್ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡರು. ಕರ್ನಾಟಕದಲ್ಲಿ ನಡೆದ ಘಟನೆ ಎಂದು ಪರಿಗಣಿಸಿ ಪುಂಗನೂರು ಪೊಲೀಸರು ಪ್ರಕರಣ ದಾಖಲಿಸಲಿಲ್ಲ. ಸೂಕ್ತ ಆರೈಕೆ ನೀಡಲು ಬಾಲಕಿಯನ್ನು ಐಸಿಡಿಎಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದ ನಂತರ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಐಸಿಡಿಎಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಪೋಷಕರಿಗೆ ಕೌನ್ಸೆಲಿಂಗ್ ನಡೆಸಿದ ಐಸಿಡಿಎಸ್ ಸಿಬ್ಬಂದಿ, ಮುಂದೆ ವಿದ್ಯಾಭ್ಯಾಸ ಮಾಡಲು ಬಯಸುವ ಆ ಹುಡುಗಿಯ ಕನಸನ್ನು ನನಸಾಗಿಸಲು ಕ್ರಮ ಕೈಗೊಂಡರು. ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು ಆ ಬಾಲಕಿಗೆ ಅಧ್ಯಯನ ಮಾಡಲು ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಇದನ್ನೂ ಓದಿ: ಸಾವಿರ ರೂಪಾಯಿಗೆ ಹೆಂಡತಿಯನ್ನು ಸ್ನೇಹಿತರಿಗೆ ಮಾರಿದ ವ್ಯಕ್ತಿ, ಆಮೇಲೆ ನಡೀಬಾರದ್ದು ನಡೆದೇ ಹೋಯ್ತು

ಪುಂಗನೂರಿನ ಅಪ್ರಾಪ್ತ ಬಾಲಕಿಯನ್ನು ಮಾರಾಟ ಮಾಡಿದ ತಾಯಿಯ ನಡವಳಿಕೆಯ ಬಗ್ಗೆ ಐಸಿಡಿಎಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ಹೇಳಿದ ತಾಯಿ ಶೋಭಾ ಅವರನ್ನು ವಿಚಾರಣೆ ನಡೆಸಿ ವಿವರಗಳನ್ನು ಸಂಗ್ರಹಿಸಿದ್ದಾರೆ. ತನ್ನ ಪತಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದ ಕಾರಣ ಮನೆಯಿಂದ ಹೊರಬಂದಿದ್ದೇನೆ ಎಂದು ಹೇಳಿದ್ದ ಶೋಭಾ ತಿಳಿಯದೆ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರರಂಗದ 93ನೇ ವರ್ಷದ ಸಂಭ್ರಮಾಚರಣೆ ಬೇಡ: ಪ್ರಿಯಾ ಹಾಸನ್ – Kannada News | Priya Hassan said sandalwood 93 year celebration is not needed

ಕನ್ನಡ ಚಿತ್ರರಂಗದ (Sandalwood) 93ನೇ ವರ್ಷದ ಸಂಭ್ರಮಾಚರಣೆ ಮಾಡಬೇಕು ಎಂಬ ನಿರ್ಣಯದ ಬಗ್ಗೆ ಈಗ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಫಿಲಂ ಚೇಂಬರ್ ವತಿಯಿಂದ ಸಂಭ್ರಮಾಚರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಕೆಲವು ನಿರ್ಮಾಪಕರುಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು (ಫೆಬ್ರವರಿ 10) ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕಿ ಪ್ರಿಯಾ ಹಾಸನ್, 93ರ ಸಂಭ್ರಮಾಚರಣೆ ಬೇಡ, ಚಿತ್ರರಂಗ ಈಗ ಸಂಕಷ್ಟದಲ್ಲಿದೆ, ಹೀಗಿರುವಾಗ ದುಂದು ವೆಚ್ಚ ಬೇಡ, 100ನೇ ವರ್ಷದ ಆಚರಣೆ ಮಾಡುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು? – Kannada News | Ranbir Kapoor to act in Dhoom 4 as villain here is the detail in Kannada

ರಣ್​​ಬೀರ್ ಕಪೂರ್ (Ranbir Kapoor) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಕಳೆದ ಕೆಲ ವರ್ಷಗಳಲ್ಲಿ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಅನಿಮಲ್ ಪಾರ್ಕ್’ ಚಿತ್ರೀಕರಣವೂ ಶೀಘ್ರವೇ ಪ್ರಾರಂಭ ಆಗಲಿದೆ. ಬಾಲಿವುಡ್​ನ ಸೂಪರ್ ಸ್ಟಾರ್ ಆಗಿರುವ ರಣ್​​ಬೀರ್ ಕಪೂರ್ ವಿಲನ್ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಆದರೆ ರಣ್​​ಬೀರ್ ನಟಿಸುತ್ತಿರುವುದು ಸಾಮಾನ್ಯ ವಿಲನ್ ಆಗಿ ಅಲ್ಲ.

ರಣ್​​ಬೀರ್ ಕಪೂರ್ ವಿಲನ್ ಆಗುತ್ತಿರುವುದು ‘ಧೂಮ್’ ಸಿನಿಮಾ ಸರಣಿಯ ಹೊಸ ಸಿನಿಮಾನಲ್ಲಿ. ‘ಧೂಮ್’ ಸಿನಿಮಾನಲ್ಲಿ ವಿಲನ್ ಪಾತ್ರವೇ ಪ್ರಮುಖವಾದುದು, ಹಾಗಾಗಿ ಈ ಸಿನಿಮಾ ಸರಣಿಯಲ್ಲಿ ಸ್ಟಾರ್ ನಟರೇ ವಿಲನ್ ಆಗಿ ನಟಿಸುತ್ತಾರೆ. ಈ ಹಿಂದೆ ಜಾನ್ ಅಬ್ರಹಾಂ, ಹೃತಿಕ್ ರೋಷನ್, ಆಮಿರ್ ಖಾನ್ ಅವರುಗಳು ವಿಲನ್​​ಗಳಾಗಿ ನಟಿಸಿದ್ದಾರೆ. ಇದೀಗ ‘ಧೂಮ್’ ಸಿನಿಮಾದ ಹೊಸ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ವಿಲನ್ ಆಗಿ ನಟಿಸಲಿದ್ದಾರೆ.

‘ಧೂಮ್’ ಸಿನಿಮಾ ಸರಣಿ ಭಾರತದ ಬಲು ಜನಪ್ರಿಯ ಮತ್ತು ಯಶಸ್ವಿ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಈ ಸರಣಿಯ ಕೊನೆಯ ಸಿನಿಮಾ ‘ಧೂಮ್ 3’ 2013 ರಲ್ಲಿ ಬಿಡುಗಡೆ ಆಗಿತ್ತು. ಇದೀಗ 13 ವರ್ಷಗಳ ಬಳಿಕ ‘ಧೂಮ್ 4’ಗೆ ಸಿದ್ಧತೆ ಆರಂಭವಾಗಿದೆ. ಸಿನಿಮಾದ ನಿರ್ಮಾಣ ಸಂಸ್ಥೆ ಆಗಿರುವ ಯಶ್ ರಾಜ್ ಫಿಲಮ್ಸ್, ‘ಧೂಮ್ 4’ ಬಗ್ಗೆ ಹೆಚ್ಚುವರಿ ಆಸಕ್ತಿ ವಹಿಸಿದ್ದು, ಈವರೆಗೆ ನಾಲ್ಕು ಚಿತ್ರಕತೆಗಳನ್ನು ನಿರಾಕರಿಸಿದೆಯಂತೆ. ಇದೀಗ ಒಂದು ಚಿತ್ರಕತೆ ಅಂತಿಮ ಹಂತ ತಲುಪಿದ್ದು, ಆ ಸಿನಿಮಾಕ್ಕೆ ರಣ್​​ಬೀರ್ ಕಪೂರ್ ಅನ್ನು ವಿಲನ್ ಆಗಿ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಾಲಿವುಡ್​ನ ಸ್ಟಾರ್ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಸಿನಿಮಾ?

ಮತ್ತೊಂದು ವಿಶೇಷವೆಂದರೆ ‘ಧೂಮ್’ ಸಿನಿಮಾ ಪ್ರಾರಂಭ ಆದಾಗಿನಿಂದಲೂ ಸಿನಿಮಾದ ನಾಯಕ ಪಾತ್ರದಲ್ಲಿ ಅಂದರೆ ಎಸಿಪಿ ಜೈ ದೀಕ್ಷಿತ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ನಟಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಎಸಿಪಿ ಪಾತ್ರವೂ ಸಹ ಬದಲಾಗುತ್ತಿದ್ದು, ಅಭಿಷೇಕ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುವ ಸಾಧ್ಯತೆ ಇದೆ.

ರಣ್​​ಬೀರ್ ಕಪೂರ್ ಅವರು ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾದ ಚಿತ್ರೀಕರಣವೂ ನಡೆಯುತ್ತಿದೆ. ಈ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ಜೊತೆಗೆ ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಸಹ ಇದ್ದಾರೆ. ಅದಾದ ಬಳಿಕ ‘ಬ್ರಹ್ಮಾಸ್ತ್ರ 2’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಅದರ ಬಳಿಕ ‘ಅನಿಮಲ್ ಪಾರ್ಕ್’ ಸಿನಿಮಾ ಶುರುವಾಗಲಿದೆ. ಈ ಎಲ್ಲ ಸಿನಿಮಾಗಳ ಬಳಿಕವಷ್ಟೆ ‘ಧೂಮ್ 4’ ಸಿನಿಮಾ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Patanjali: ನಿಮ್ಮ ಜೀವನದಿಂದ ಈ ವಸ್ತುಗಳು ದೂರವೇ ಇರಲಿ: ಬಾಬಾ ರಾಮದೇವ್ ಸಲಹೆ – Kannada News | Baba Ramdev recommends quitting few things for healthier life

ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ಸ್ವದೇಶಿ ಉತ್ಪನ್ನಗಳ ಅಳವಡಿಕೆಗೆ ಒತ್ತು ನೀಡುತ್ತಾರೆ. ಅವರು ಯೋಗ ಮತ್ತು ಆಯುರ್ವೇದ ಎರಡನ್ನೂ ಪ್ರತಿ ಮನೆಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಪತಂಜಲಿ ವೆಲ್ನೆಸ್ ಮೂಲಕ, ಅವರು ಆಗಾಗ್ಗೆ ಆರೋಗ್ಯದ ವಿಚಾರಗಳಲ್ಲಿ ಸಲಹೆ ನೀಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ನಮ್ಮ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆರೋಗ್ಯಕ್ಕೆ ಹಾನಿ ಆಗುತ್ತಿದೆ. ವಯಸ್ಸಾದಾಗ ಬರುತ್ತಿದ್ದ ಕಾಯಿಲೆಗಳು ಈಗ ಕಿರಿಯ ವಯಸ್ಸಿನವರಲ್ಲೇ ಕಾಣಿಸಿಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ, ಜನರು ಆಯುರ್ವೇದ ಉತ್ಪನ್ನಗಳು ಮತ್ತು ಮನೆಯಲ್ಲಿ ಬೇಯಿಸಿದ ಆಹಾರದ ಸೇವನೆ ಹೆಚ್ಚು ಮಾಡುತ್ತಿದ್ದರು. ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದ ಉತ್ಪನ್ನಗಳ ಬಳಕೆ ಎಷ್ಟು ಮಹತ್ವದ್ದು ಎಂದು ಸಹ ಬಾಬಾ ರಾಮದೇವ್ ಒತ್ತಿಹೇಳುತ್ತಾರೆ. ನಮ್ಮ ಜೀವನದಿಂದ ಯಾವ ವಿಷಯಗಳನ್ನು ತೆಗೆದುಹಾಕಬೇಕು ಎಂಬುದನ್ನು ಸಹ ಅವರು ವಿವರಿಸಿದ್ದಾರೆ.

ನಮ್ಮ ಅನಾರೋಗ್ಯಕರ ಜೀವನಶೈಲಿ ನಿಧಾನವಾಗಿ ನಮಗೆ ಗೊತ್ತೇ ಆಗದಂತೆ ನಮ್ಮನ್ನು ಅನಾರೋಗ್ಯಕ್ಕೆ ಕೊಂಡೊಯ್ಯುತ್ತದೆ. ಚಿಕಿತ್ಸೆಗಾಗಿ ಆಸ್ಪತ್ರೆ, ಕ್ಲಿನಿಕ್​ಗಳನ್ನು ಸುತ್ತುತ್ತೇವೆ. ಇದಕ್ಕೆ ಹಣ ವ್ಯಯವಾಗುವುದು ಮಾತ್ರವಲ್ಲ, ದೈಹಿಕ ಮತ್ತು ಮಾನಸಿಕ ಬಳಲಿಕೆಯೂ ಆಗುತ್ತದೆ. ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದು ಸರಿ. ಆದರೆ, ಕಾಯಿಲೆ ಬರದಂತೆಯೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಇನ್ನೂ ಉತ್ತಮ. ನಿಮ್ಮ ಜೀವನಶೈಲಿ ಮತ್ತು ಆಹಾರಕ್ರಮದಲ್ಲಿ ವಕ್ಕರಿಸಿರುವ ಕೆಲ ಅನಾರೋಗ್ಯಕರ ಸಂಗತಿಗಳನ್ನು ತೆಗೆದುಹಾಕಿದರೆ ಇದು ಸಾಧ್ಯವಾಗುತ್ತದೆ. ಬಾಬಾ ರಾಮದೇವ್ ಯಾವ ವಿಷಯಗಳನ್ನು ತೆಗೆದುಹಾಕಲು ಸಲಹೆ ನೀಡಿದ್ದಾರೆ, ಅದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಿಡ್ನಿ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಮನೆಮದ್ದುಗಳು; ಬಾಬಾ ರಾಮದೇವ್ ಸಲಹೆ ಇದು

ಬಿಳಿ ವಸ್ತುಗಳನ್ನು ತೆಗೆದುಹಾಕಿ

ನಮ್ಮ ಜೀವನದಿಂದ ತೊಲಗಬೇಕೆಂದು ಬಾಬಾ ರಾಮದೇವ್ ಶಿಫಾರಸು ಮಾಡುವ ಬಿಳಿ ಆಹಾರಗಳಲ್ಲಿ ಸಕ್ಕರೆಯೂ ಒಂದು. ಇದು ಇಂದಿನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಬೊಜ್ಜು ಹೆಚ್ಚಿಸಿ ಮಧುಮೇಹಕ್ಕೆ ಕಾರಣವಾಗುತ್ತದೆ. ಅಲ್ಲದೆ, ಇದನ್ನು ಚರ್ಮಕ್ಕೆ ಹಾನಿಕಾರಕ ಆಹಾರವೆಂದೂ ಸಹ ಪರಿಗಣಿಸಲಾಗುತ್ತದೆ. ಬಿಳಿ ಹಿಟ್ಟು ಅಥವಾ ಮೈದಾವನ್ನು ನಮ್ಮ ಜೀವನದಿಂದ ತೆಗೆದುಹಾಕಬೇಕು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಇದಲ್ಲದೆ, ಬಿಳಿ ಅಕ್ಕಿಯನ್ನು ತಪ್ಪಿಸಬೇಕು ಮತ್ತು ರೀಫೈನ್ಡ್ ಆಯಿಲ್ ಅನ್ನೂ ವ್ಯರ್ಜಿಸಬೇಕು ಎನ್ನುತ್ತಾರೆ.

ಸಿಂಥೆಟಿಕ್ ಪ್ರಾಡಕ್ಟ್ ತಪ್ಪಿಸಿ

ಬಾಬಾ ರಾಮದೇವ್ ಸ್ಥಳೀಯ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ. ರಾಸಾಯನಿಕ ಆಧಾರಿತ ಶಾಂಪೂಗಳು, ಸೋಪುಗಳು, ಟೂತ್‌ಪೇಸ್ಟ್‌ಗಳು ಅಥವಾ ಪರ್ಸನಲ್ ಕೇರ್ ಐಟಂನಂತಹ ಸಿಂಥೆಟಿಕ್ ಉತ್ಪನ್ನಗಳಿಂದ ದೂರ ಉಳಿಯುವುದು ಒಳ್ಳೆಯದು. ಇದರ ಬದಲಾಗಿ, ನಾವು ನೈಸರ್ಗಿಕ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿ, ಶುಚಿಗೊಳಿಸುವ ಉತ್ಪನ್ನಗಳ ಬಳಕೆಯುಇ ಸಹ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ರಾಸಾಯನಿಕ ಆಧಾರಿತ ಉತ್ಪನ್ನಗಳು ನಿಮ್ಮ ಲಿವರ್​ನಿಂದ ಹಿಡಿದು ಕಿಡ್ನಿವರೆಗೆ ಅನೇಕ ಅಂಗಗಳಿಗೆ ಹಾನಿಗೊಳಿಸಬಹುದು.

ಇದನ್ನೂ ಓದಿ: Hair Fall Treatment: ಕೂದಲು ಉದುರುವಿಕೆ ನಿಲ್ಲಿಸಲು ಮನೆಮದ್ದುಗಳು: ಸರಳ ಪರಿಹಾರ ಸೂಚಿಸುವ ಬಾಬಾ ರಾಮದೇವ್

ಹಲವು ಆಯ್ಕೆಗಳು ಲಭ್ಯ

ರಾಸಾಯನಿಕ ಆಧಾರಿತ ಉತ್ಪನ್ನಗಳಿಗೆ ಪರ್ಯಾಯವಾಗಿರುವ ಅನೇಕ ಆರೋಗ್ಯಕರ ಉತ್ಪನ್ನಗಳು ಲಭ್ಯ ಇವೆ. ರೀಫೈನ್ಡ್ ಆಯಿಲ್ ಬದಲು ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆಯಂತಹ ನೈಸರ್ಗಿಕ ಎಣ್ಣೆಗಳನ್ನು ಬಳಸಬಹುದು. ಹಣ್ಣುಗಳು, ಬೀಜಗಳಿಂದ ಕೋಲ್ಡ್ ಪ್ರೆಸ್ ಮೂಲಕ ತೆಗೆಯುವ ವರ್ಜಿನ್ ಆಯಿಲ್ ಕೂಡ ಪ್ರಕೃತಿಯ ಶುದ್ಧ ರೂಪವೆಂದು ಬಾಬಾ ರಾಮದೇವ್ ಹೇಳುತ್ತಾರೆ. ಸಕ್ಕರೆ ಬದಲು ಬೆಲ್ಲ ಅಥವಾ ಕಚ್ಚಾ ಸಕ್ಕರೆಯನ್ನು (ಬ್ಲೀಚಿಂಗ್ ಏಜೆಂಟ್‌ಗಳನ್ನು ಬಳಸದ ಸಕ್ಕರೆಯ ಒಂದು ರೂಪ) ಬದಲಾಯಿಸಬಹುದು.

ಸಿಂಥೆಟಿಕ್ ವಸ್ತುಗಳು ರೋಗಕ್ಕೆ ಕಾರಣ

ಬಾಬಾ ರಾಮದೇವ್ ಹೇಳುವಂತೆ ನಾವು ಯಾವುದೇ ರೀತಿಯ ಸಿಂಥೆಟಿಕ್ ಉತ್ಪನ್ನಗಳ ಬಳಕೆ ತಪ್ಪಿಸಬೇಕು. ಇದರಲ್ಲಿ ದಂತ ಆರೈಕೆ, ಚರ್ಮ ಮತ್ತು ಕೂದಲಿನ ಆರೈಕೆ, ಮತ್ತು ಪಾತ್ರೆಗಳು, ಬಟ್ಟೆ ಮತ್ತು ಮನೆಯ ಕ್ಲೀನರ್‌ಗಳು ಸಹ ಸೇರಿವೆ. ಈ ರಾಸಾಯನಿಕಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಉತ್ಪನ್ನಗಳು ಕ್ಯಾನ್ಸರ್ ಹಾಗು, ಕಿಡ್ನಿ ಮತ್ತು ಮೂತ್ರಪಿಂಡದ ಸಮಸ್ಯೆಗಳಂತಹ ಗಂಭೀರ ಕಾಯಿಲೆಗಳಿಗೆ ಸಹ ಕಾರಣವಾಗಬಹುದು. ಆದ್ದರಿಂದ, ನಾವು ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದು ಬಾಬಾ ಸಲಹೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’: ಸತತ 3 ಗಂಟೆಗಳ ಮನರಂಜನೆ – Kannada News | BBK 12 Gilli Nata Colors Dodmane Habba special show on 14 February on Colors Kannada

ಬಿಗ್ ಬಾಸ್ ಮುಗಿಯಿತು, ಮುಂದೇನು ಎಂದು ಕೇಳುತ್ತಿದ್ದ ವೀಕ್ಷಕರಿಗೆ ಇಲ್ಲಿದೆ ಮಸ್ತ್ ಅವಕಾಶ. ‘ಬಿಗ್ ಬಾಸ್ ಕನ್ನಡ 12’ (BBK 12) ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’ (Colors Dodmane Habba) ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಸತತ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ ಈ ಕಾರ್ಯಕ್ರಮ. ಫೆಬ್ರವರಿ 14ರಂದು ಕರುನಾಡಿನ ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ ಎಂದು ವಾಹಿನಿ ಹೇಳಿದೆ.

‘ಕಲರ್ಸ್‌ ದೊಡ್ಮನೆ ಹಬ್ಬ’ ಕಾರ್ಯಕ್ರಮ ಫೆ.14ರಂದು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ. ‘ಬಿಗ್ ಬಾಸ್ ಕನ್ನಡ ಸೀಸನ್‌ 12’ರ ಎಲ್ಲ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಈ ಕಾರ್ಯಕ್ರಮದ ವಿಶೇಷ ಆಗಿರಲಿದೆ.

ಬಿಗ್ ಬಾಸ್ ಮನೆಯೊಳಗಿನ ಗಂಭೀರ ವಾತಾವರಣದ ಬದಲು ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ನಕ್ಕು ನಗಿಸುವ ಸಾಕಷ್ಟು ಝಲಕ್‌ಗಳು ‘ಕಲರ್ಸ್‌ ದೊಡ್ಮನೆ ಹಬ್ಬ’ದ ಹೈಲೈಟ್‌ ಆಗಿರಲಿವೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ಅವರು ಲವಲವಿಕೆಯಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇವಲ ಹಾಡು, ಕುಣಿತ ಮಾತ್ರವಲ್ಲದೇ ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ತಮಾಷೆಯ ಗೇಮ್‌ಗಳನ್ನು ಸುಷ್ಮಾ ಅವರು ಆಡಿಸಿ ರಂಜಿಸಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸಲಿದೆ. ಈ ಬಾರಿ ಬಿಗ್ ಬಾಸ್‌ ಮನೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಗಿಲ್ಲಿ ನಟ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ.

ಇದನ್ನೂ ಓದಿ: ಫೆ.27ಕ್ಕೆ ಗಿಲ್ಲಿ ಸಿನಿಮಾ ‘ಸೂಪರ್ ಹಿಟ್’ ರಿಲೀಸ್; ಈಗಲೇ ಬಂದಿದೆ ಒಟಿಟಿ ಡಿಮ್ಯಾಂಡ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ ಅವರ ಅಭಿಮಾನಿಗಳಿಗಾಗಿಯೇ ಈ ಕಾರ್ಯಕ್ರಮದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್‌ ಬಾಸ್‌ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್‌ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಾಟರಿ ಹೊಡೆಯುತ್ತಿದ್ದ ಸುಚಿತ್ರಾ ಜೀವನವನ್ನೇ ಬದಲಾಯಿಸಿದ್ದೇಗೆ ಕಮಲಾಕರ್​​ ಭಟ್​​ ಪರಿಚಯ? ಸತ್ಯ ಬಿಚ್ಚಿಟ್ಟ ಸ್ನೇಹಿತೆ – Kannada News | Suchitra’s Life Transformed from Lottery to Luxury After Relationship with Kamalakar Bhat

ಕಮಲಾಕರ್​​ ಭಟ್​ ಮತ್ತು ಸುಚಿತ್ರಾ

ಕಾರವಾರ, ಫೆಬ್ರವರಿ 10: ಸಿದ್ದಾಪುರದ ವಸಂತ್​​ ನಾಯ್ಕ್​​ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ಸುಚಿತ್ರಾಳ ಕುರಿತ ಒಂದೊಂದೇ ಮಾಹಿತಿಯೀಗ ಬಯಲಾಗುತ್ತಿದೆ. ಜ್ಯೋತಿಷಿ ಕಮಲಾಕರ್​​ ಭಟ್​​ ಸೇರಿದಂತೆ ಸಿರಿವಂತರನ್ನು ಬುಟ್ಟಿಗೆ ಹಾಕಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಇದೇ ಸುಚಿತ್ರಾ ಒಂದು ಕಾಲದಲ್ಲಿ 10 ರೂಪಾಯಿಗೂ ಲಾಟರಿ ಹೊಡೆಯುತ್ತಿದ್ದಳು. ಅಷ್ಟಕ್ಕೂ ಈಕೆ ಜ್ಯೋತಿಷಿ ಕಮಲಾಕರ್​​ ಭಟ್​​ಗೆ ಪರಿಚಯವಾಗಿದ್ದು ಹೇಗೆ ಎಂಬ ಮಾಹಿತಿಯೀಗ ಬಹಿರಂಗಗೊಂಡಿದೆ. ಸುಚಿತ್ರಾಳನ್ನು ಕಮಲಾಕರ ಭಟ್​ಗೆ ಪರಿಚಯಿಸಿದ್ದು ನಾನೇ ಎಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಮೂಲದ ಸುಮಾ ಎಂಬವರು ಟಿವಿ9ಗೆ ತಿಳಿಸಿದ್ದಾರೆ.

ಕಮಲಾಕರ ಭಟ್ ಪರಿಚಯದ ಬಳಿಕ ಸುಚಿತ್ರಾ ಜೀವನವೇ ಬದಲು!

ಸಿದ್ದಾಪುರದಲ್ಲಿ ಕವಡೆ ಕಾಸಿಗೂ ಪರದಾಡುತ್ತಿದ್ದ ಸುಚಿತ್ರಾ ಕಮಲಾಕರ ಭಟ್ ಪರಿಚಯದ ನಂತರ ಹೈಫೈ ಆಗಿಬಿಟ್ಟಳು. ಒಮ್ಮೆ ಆಶ್ರಮಕ್ಕೆ ಹೋದಾಗ ನನ್ನನ್ನೇ ಯಾರೋ ಅನ್ನೋ ತರ ನೋಡಿದ್ಲು. ಕಮಲಾಕರ ಭಟ್​ನ ಆಶ್ರಮವನ್ನು ಮ್ಯಾನೇಜ್ ಮಾಡ್ತಿದ್ದ ಈಕೆ ಒಂದು ಹೋಮ ಕಾರ್ಯಕ್ರಮಕ್ಕೆ ಮದುವೆ ಹೆಣ್ಣಿನ ತರ ಬಂದಿದ್ಲು. ಹೊಸ ತಾಳಿ, ಕಾಲುಂಗುರ ಧರಿಸಿ ಕಮಲಾಕರ ಭಟ್ ಜೊತೆ ಹೋಮದಲ್ಲಿ ಭಾಗಿಯಾಗಿದ್ದಳು. ಹೀಗಾಗಿ ಸುಚಿತ್ರಾಳನ್ನು ಮದುವೆ ಆಗಿದ್ದೀರಾ ಎಂದು ಕಮಲಾಕರ ಭಟ್​ಗೆ ಕೇಳಿದ್ದೆ. ಧರ್ಮಸ್ಥಳದ ಅಣ್ಣಪ್ಪನ ಆಣೆಗೂ ಮದುವೆಯಾಗಿಲ್ಲವೆಂದು ಈ ವೇಳೆ ಅವರು ಹೇಳಿದ್ದರು. ಆರೋಗ್ಯ ಸರಿಯಿಲ್ಲ, ಅದೆಲ್ಲ ನಂಗ್ಯಾಕೆ ಎಂದು ನನಗೆ ತಿಳಿಸಿದ್ದರು. ನನ್ನನ್ನು ಮಗಳೇ ಎಂದು ಕರೆಯುತ್ತಿದ್ದ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾಳ ಬಂಧನ ವಿಚಾರ ಕೇಳಿ ತನಗೆ ಶಾಕ್​​ ಆಗಿದೆ ಎಂದು ಸುಮಾ ಹೇಳಿದ್ದಾರೆ.

ಇದನ್ನೂ ಓದಿ: ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ ಬಹಿರಂಗ

ಹಣದ ದಾಹಕ್ಕೆ ಪ್ರೀತಿಸಿ ಮದುವೆ ಆಗಿದ್ದವನನ್ನೇ ತೊರೆದ ಸುಚಿತ್ರಾ

ಇನ್ನು ಐಷಾರಾಮಿ ಜೀವನದ ಕನಸು ಕಂಡಿದ್ದ ಸುಚಿತ್ರಾ ಅದನ್ನು ಪಡೆಯಲು ನಾನಾ ಸರ್ಕಸ್​​ ನಡೆಸಿದ್ದಳು. ಕಮಲಾಕರ್​​ ಭಟ್​​ ಮಾತ್ರವಲ್ಲದೆ ಕಲಬುರಗಿ ಜಿಲ್ಲೆಯ ಜಮೀನ್ದಾರನ ಜೊತೆ ಲವ್ ರಿಲೇಷನಲ್ಲಿದ್ದ ಈಕೆ ಆತನ ಹಣದಲ್ಲೇ ಆರ್ಕೆಸ್ಟ್ರಾ ಕೂಡ ನಡೆಸುತ್ತಿದ್ದಳು. ಸಾಲದ್ದಕ್ಕೆ ಆತನ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ಬಿಡುತ್ತಿದ್ದಳು. ಬಳಿಕ ಕಮಲಾಕರ್​​ ಭಟ್​​ನಿಂದಲೂ ಸುಲಿಗೆಗೆ ಇಳಿದಿದ್ದ ಸುಚಿತ್ರಾ ಕಾರು, ಬೈಕ್​​ಗಳನ್ನ ಉಡುಗರೆಯಾಗಿ ಪಡೆದಿದ್ದಳು. ಈಕೆಗಾಗಿ ಜ್ಯೋತಿಷಿ ಜಮೀನು ಕೂಡ ಖರೀದಿಸಿದ್ದ ಎಂಬ ಸುದ್ದಿಯೂ ಇದೆ. ಹಣದ ಆಸೆಗೆ ಪ್ರೀತಿಸಿ ಮದುವೆಯಾಗಿದ್ದವನನ್ನೇ ತೊರೆದು ಹೋಗಿದ್ದ ಈಕೆ, ಹೆತ್ತ ಮಕ್ಕಳಿಗೂ ಹಿಂಸೆ ಕೊಡುತ್ತಿದ್ದಳು ಎಂಬ ವಿಚಾರವೀಗ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿ ಗಂಧದ ಮರ ಕಡಿದು ರೈತ ಆಕ್ರೋಶ – Kannada News | Chikkamagaluru Farmer Protest Against Governmnet via a Cutting Sandalwood Tree Near Vidhana Soudha

ಬೆಂಗಳೂರು, (ಫೆಬ್ರವರಿ 10): ಅಭಿವೃದ್ಧಿ ಹೆಸರಿನಲ್ಲಿ ಜಮೀನಿನಲ್ಲಿ 30 ಮರಗಳನ್ನು ಕಡಿದು ಪರಿಹಾರ ಕೊಡದ ಸರ್ಕಾರದ ವಿರುದ್ಧ ರೈತ ಆಕ್ರೋಶಗೊಂಡಿದ್ದು, ವಿಧಾನಸೌಧದ ಮುಂದೆ ಇರುವ ಶ್ರೀಗಂಧದ ಮರ ಕಡಿದು ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ವಿಶುಕುಮಾರ್ ಎನ್ನುವರ ಜಮೀನಿನಲ್ಲಿ 30 ಮರಗಳನ್ನು ಕಡಿಯಲಾಗಿದೆ. ಆದ್ರೆ, ಇದಕ್ಕೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸೇಡಿಗಾಗಿ ವಿಧಾನಸೌಧದ ಬಳಿ ಇರುವ ಗಂಧದ ಮರವನ್ನು ಕಡಿದು ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿಶುಕುಮಾರ್,ಪರಿಹಾರ ಕೊಟ್ಟಿಲ್ಲ, ನನ್ನ ಮಕ್ಕಳ ಬರ್ತಡೆ ನೆನಪಿಗಾಗಿ ಗಿಡ ನೆಟ್ಟಿದ್ದೆ. ಹೆದ್ದಾರಿ ಪಕ್ಕ ಇದೆ ಎಂದು ಮರವನ್ನು ಕಡಿದುಹಾಕಿದ್ದಾರೆ. ಕೋರ್ಟ್ ನಲ್ಲಿ ಪರಿಹಾರವನ್ನು ನೀಡಬೇಕೆಂದು ಆದೇಶವಾದರೂ ಸಹ ಅರಣ್ಯ ಇಲಾಖೆ ಕೊಟ್ಟಿಲ್ಲ. ಮೂವತ್ತು ಮರ ಕಡಿದಿದ್ದಾರೆ. ಅದಕ್ಕಾಗಿ ನಾನು ಮುನ್ನೂರು ಮರ ಕಡಿಯುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version