ನಮ್ಮ ನಿಮ್ಮ ಎಸ್ಐಪಿಗಳು ವಿದೇಶೀ ಹೂಡಿಕೆದಾರರಿಗೆ ಆಹಾರವಾಗುತ್ತಿವೆಯಾ? ಜೆಫರೀಸ್ ಏಜೆನ್ಸಿ ಬಿಚ್ಚಿಟ್ಟಿದೆ ಘೋರ ಸತ್ಯ – Kannada News | Indians SIPs main reason behind falling rupee and exiting of FPIs, says Jefferies
ನವದೆಹಲಿ, ಮೇ 24: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ (Jefferies), ಭಾರತೀಯ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯಲ್ಲಿ ಸದ್ಯ ನಡೆಯುತ್ತಿರುವ ಮೂರು ಪ್ರಮುಖ ವಿದ್ಯಮಾನಗಳ ನಡುವಿನ ಆಸಕ್ತಿದಾಯಕ ನಂಟನ್ನು ಬಿಚ್ಚಿಟ್ಟಿದೆ. ಭಾರತೀಯರಲ್ಲಿ ಹೆಚ್ಚುತ್ತಿರುವ ಮ್ಯೂಚುಯಲ್ ಫಂಡ್ ಎಸ್‌ಐಪಿ (SIP) ಹೂಡಿಕೆ, ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರ (FPI) ಭಾರಿ ಪ್ರಮಾಣದ ಹಣದ ಹಿಂತೆಗೆತ (FPI outflows), ಮತ್ತು ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕುಸಿತ, ಈ ಮೂರು ಬೆಳವಣಿಗೆಗಳ ಮಧ್ಯೆ ಒಂದಕ್ಕೊಂಡು ನಂಟು ಬೆಸೆದುಕೊಂಡಿರುವುದನ್ನು ಜೆಫರೀಸ್…