ಮಹಿಳೆಯರ ಉದ್ಯೋಗ, ವಾಸಕ್ಕೆ ಬೆಂಗಳೂರೇ ಬೆಸ್ಟ್! ಸಿಲಿಕಾನ್ ಸಿಟಿ ದೇಶದಲ್ಲೇ ನಂ.1 ಎಂದ ಸಮೀಕ್ಷೆ – Kannada News | Bengaluru Ranked No 1 City in India for Working Women and Living, Says Survey
ಬೆಂಗಳೂರು, ಜನವರಿ 8: ಮಹಿಳೆಯರಿಗೆ ಉದ್ಯೋಗ ಹಾಗೂ ವಾಸಕ್ಕೆ ಅತ್ಯಂತ ಅನುಕೂಲಕರ ನಗರವಾಗಿ ಬೆಂಗಳೂರು ಹೊರಹೊಮ್ಮಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಉತ್ತಮ ಹವಾಮಾನದಿಂದ ದೇಶದ ಇತರ ಭಾಗಗಳ ಜನರನ್ನು ಆಕರ್ಷಿಸುತ್ತಿದ್ದ ಬೆಂಗಳೂರು (Bangalore) ಇದೀಗ ಮಹಿಳಾ ಸ್ನೇಹಿ ಉದ್ಯೋಗದ ವಾತಾವರಣದಲ್ಲಿಯೂ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಅವತಾರ್ ಗ್ರೂಪ್ (Avtar Group) ಎಂಬ ವರ್ಕ್ಪ್ಲೇಸ್ ಕಲ್ಚರ್ ಕನ್ಸಲ್ಟಿಂಗ್ ಫರ್ಮ್ ಬಿಡುಗಡೆ ಮಾಡಿದ ‘ಟಾಪ್ ಸಿಟೀಸ್ ವಿಮೆನ್ ಇನ್ ಇಂಡಿಯಾ’ ವರದಿಯಲ್ಲಿ, ಮಹಿಳೆಯರು ಕೆಲಸ ಮಾಡಲು ಹೆಚ್ಚು ಇಚ್ಛಿಸುವ ನಗರಗಳ…