ರಾಜಕೀಯ ನಾಯಕನ ಮನೆಗೆ ಬೆಂಕಿ ಇಟ್ಟ ದುರುಳರು; 7 ವರ್ಷದ ಬಾಲಕಿ ಸಜೀವ ದಹನ; ಮೂವರಿಗೆ ಸುಟ್ಟಗಾಯ – Kannada News | Bangladesh violence, mob torches political leader’s house, 7 yr old daughter burnt alive

ಢಾಕಾ, ಡಿಸೆಂಬರ್ 21: ಷರೀಫ್ ಉಸ್ಮಾನ್ ಹದಿ ಹತ್ಯೆ ಬಳಿಕ ಬಾಂಗ್ಲಾದೇಶದಾದ್ಯಂತ ಉದ್ಭವಿಸಿರುವ ಹಿಂಸಾಚಾರ ಹಲವರನ್ನು ಬಲಿತೆಗೆದುಕೊಂಡಿದೆ. ಪ್ರತಿಭಟನಾಕಾರರ ಗುಂಪೊಂದು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ಮುಖಂಡ ಬಿಲಾನ್ ಹುಸೇನ್ (Belal Hossain) ಅವರ ಮನೆಗೆ ಕೊಳ್ಳಿ ಇಟ್ಟಿದ್ದಾರೆ. ಲಕ್ಷ್ಮೀಪುರ್​ನಲ್ಲಿರುವ ಅವರ ಮನೆಗೆ ಬೆಂಕಿ ಇಟ್ಟ ಪರಿಣಾಮ, ಮನೆಯೊಳಗಿದ್ದ 7 ವರ್ಷದ ಬಾಲಕಿಯೊಬ್ಬಳು ಸಜೀವವಾಗಿ ಸುಟ್ಟುಹೋಗಿದ್ದಾಳೆ. ಬಿಲಾಲ್ ಹುಸೇನ್ ಹಾಗೂ ಅವರ ಇನ್ನಿಬ್ಬರು ಮಕ್ಕಳು ಪಾರಾದರೂ ಸುಟ್ಟ ಗಾಯಗಳಾಗಿವೆ.

ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಬಿಎನ್​ಪಿ ಪಕ್ಷದ ನಾಯಕ ಬಿಲಾನ್ ಹುಸೇನ್ ಅವರ ಕುಟುಂಬ ಸದಸ್ಯರು ಮನೆಯೊಳಗೆ ಇರುವಾಗಲೇ ಪ್ರತಿಭಟನಾಕಾರರು ಮನೆಗೆ ಬೆಂಕಿ ಇಟ್ಟಿದ್ದಾರೆ. ಬಿಲಾಲ್ ಅವರ ಏಳು ವರ್ಷದ ಮಗಳಾದ ಆಯೇಶಾ ಅಖ್ತರ್ ಸುಟ್ಟ ಗಾಯಗಳಿಂದ ಅಸುನೀಗಿದ್ದಾಳೆ. ಬಿಲಾಲ್ ಅದೃಷ್ಟ ರೀತಿಯಲ್ಲಿ ಬದುಕುಳಿದಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್​ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ

‘ಒಂದು ಮಗು ಮೃತಪಟ್ಟಿರುವುದು ಗೊತ್ತಾಗಿದೆ. ಮೂವರನ್ನು ರಕ್ಷಿಸಲಾಗಿದೆ. ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಲಕ್ಷ್ಮೀಪುರ್​ನ ಫೈರ್ ಸರ್ವಿಸ್​ನ ರಜಿಂತ್ ಕುಮಾರ್ ಹೇಳಿದ್ದಾರೆ.

ಬಿಲಾಲ್ ಹುಸೇನ್ ಅವರು ಬದುಕುಳಿದಿದ್ದಾರೆ. ಅವರ ಜೊತೆ ಅವರ ಇಬ್ಬರು ಹೆಣ್ಮಕ್ಕಳಾದ 16 ವರ್ದ ಸಲ್ಮಾ ಅಖ್ತರ್ ಮತ್ತು 14 ವರ್ಷದ ಸಾಮಿಯಾ ಅಖ್ತರ್ ಅವರೂ ಬದುಕಿದ್ದಾರೆ. ಆದರೆ ಈ ಇಬ್ಬರು ಹೆಣ್ಮಕ್ಕಳಿಗೆ ತೀವ್ರ ರೀತಿಯಲ್ಲಿ ಸುಟ್ಟಗಾಯಗಳಾಗಿದ್ದು, ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಅವರನ್ನು ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?

ಬಿಲಾನ್ ಹುಸೇನ್ ಅವರ ತಾಯಿ ನೀಡಿರುವ ಹೇಳಿಕೆ ಪ್ರಕಾರ, ದುಷ್ಕರ್ಮಿಗಳು ಮನೆಗೆ ಹೊರಗಿನಿಂದ ಬೀಗ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿದ್ದಾರೆ.

ಶೇಖ್ ಹಸೀನಾ ಪ್ರಧಾನಿಯಾಗಿದ್ದಾಗ ದೇಶಾದ್ಯಂತ ಹಿಂಸಾಚಾರ ಹೊತ್ತಿಸಿದ್ದ ವಿದ್ಯಾರ್ಥಿ ಮುಖಂಡ ಷರೀಫ್ ಉಸ್ಮಾನ್ ಹದಿಯ ಮೇಲೆ ಆಗಂತುಕರು ಇತ್ತೀಚೆಗೆ ಗುಂಡಿನ ದಾಳಿ ಮಾಡಿದ್ದರು. ತಲೆಗೆ ಗುಂಡು ತಗುಲಿ ಗಾಯಗೊಂಡು ಆತ ಸಾವನ್ನಪ್ಪಿದ್ದಾನೆ. ಅದಾದ ಬಳಿಕ ದೇಶದಾದ್ಯಂತ ಹಿಂಸಾಚಾರಗಳು ಸಂಭವಿಸುತ್ತಿವೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಕನ್ನಡ 12: ವೋಟಿಂಗ್ ಇಲ್ಲದೆ ಇಬ್ಬರು ಹೊರಕ್ಕೆ: ಯಾರದು? – Kannada News | Chaithra Kundapur and Rajath came out of Bigg Boss Kannada house

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಮನೆಯಲ್ಲಿ ಕಳೆದ ವಾರ ಎಲಿಮಿನೇಷನ್ ನಡೆದಿಲ್ಲ. ಎಲಿಮಿನೇಷನ್ ಹೆಸರಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಹೊರಗೆ ಕಳಿಸಿದ್ದ ಬಿಗ್​​ಬಾಸ್ ಅವರಿಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಿ, ಅವರನ್ನೂ ಸಹ ಟಾಸ್ಕ್​​ನ ಒಂದು ಭಾಗವಾಗಿಸಿದ್ದರು. ನಿನ್ನೆ (ಶನಿವಾರ) ಎಪಿಸೋಡ್​​ನಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮರಳಿ ಮನೆಗೆ ಕರೆಸಿಕೊಂಡ ಬಿಗ್​​ಬಾಸ್ ಇದೀಗ ಈ ವಾರವೂ ಯಾವುದೇ ಎಲಿಮಿನೇಷನ್ ಮಾಡಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ.

ಕೆಲ ವಾರಗಳ ಹಿಂದೆ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಂ, ಮೋಕ್ಷಿತಾ ಅವರುಗಳು ಅತಿಥಿಗಳಾಗಿ ಬಂದಿದ್ದರು. ಒಂದು ವಾರಗಳ ನಂತರ ಉಗ್ರಂ ಮಂಜು, ತ್ರಿವಿಕ್ರಂ, ಮೋಕ್ಷಿತಾ ಮನೆಯಿಂದ ಹೊರಗೆ ಹೋದರು. ಆದರೆ ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿಗಳು ಎಂದು ಹೇಳಿ, ಇನ್ನು ಮುಂದೆ ಅವರೂ ಸಹ ನಿಮ್ಮೊಂದಿಗೆ ಸ್ಪರ್ಧೆಯಲ್ಲಿರುತ್ತಾರೆ ಎಂದು ಇತರೆ ಸ್ಪರ್ಧಿಗಳಿಗೆ ಹೇಳಿ ಮನೆಯಲ್ಲಿ ಉಳಿಸಲಾಗಿತ್ತು.

ರಜತ್ ಮತ್ತು ಚೈತ್ರಾ ಅವರುಗಳು ಸುಮಾರು ನಾಲ್ಕು ವಾರಗಳ ಕಾಲ ಬಿಗ್​​ಬಾಸ್ ಮನೆಯಲ್ಲಿದ್ದರು. ಚೆನ್ನಾಗಿ ಆಟ ಆಡಿದ್ದಾರೆ. ಕೆಲವರ ವಿರೋಧ ಕಟ್ಟಿಕೊಂಡರು. ರಜತ್ ಅಂತೂ ಕಳೆದ ವಾರ, ‘ನಾನು, ಗಿಲ್ಲಿ ಹಾಗೂ ಇನ್ನಿತರರನ್ನು ಮನೆಯಿಂದ ಹೊರಗೆ ಹಾಕಿಯೇ ಈ ಮನೆ ಬಿಟ್ಟು ಹೋಗೋದು ಎಂದು ಅಬ್ಬರಿಸಿದ್ದರು. ಆದರೆ ಈ ವಾರ ಅವರೇ ಮನೆಯಿಂದ ಹೊರಗೆ ಹೋಗಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಸುದೀಪ್ ಅವರು ಈ ವಾರ ರಜತ್ ಮತ್ತು ಚೈತ್ರಾ ಅವರುಗಳನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾರೆ. ರಜತ್ ಮತ್ತು ಚೈತ್ರಾ ಅವರುಗಳು ಸ್ಪರ್ಧಿಗಳಾಗಿರಲಿಲ್ಲ, ಅವರು ಅತಿಥಿಗಳೇ ಆಗಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳಾಗಿರಲಿಲ್ಲ ಎಂದರು ಸುದೀಪ್. ಆ ಇಬ್ಬರೂ ಯಾರ ಪದವಿಯನ್ನೂ ಕಿತ್ತುಕೊಳ್ಳಲು ಬಂದಿಲ್ಲ. ಇಬ್ಬರೂ ಸಹ ನಾವು ಕೇಳಿದ ಕೂಡಲೇ ಸಮಯ ಮಾಡಿಕೊಂಡು, ಕೆಲಸಗಳ್ನು ಬದಿಗೊತ್ತಿ ಮನೆಗೆ ಬಂದರು. ಮಾತ್ರವಲ್ಲದೆ, ಅವರು ಸ್ಪರ್ಧಿಗಳಲ್ಲ ಎಂಬುದು ಗೊತ್ತಿದ್ದರೂ ಸಹ ಅದನ್ನು ಎಲ್ಲಿಯೂ ಬಿಟ್ಟುಕೊಡದೆ ಎಲ್ಲರೊಟ್ಟಿಗೆ ಸೇರಿ ಆಟ ಆಡಿದರು. ನನ್ನಿಂದಲೂ ಸಹ ಪಾಪ ಕೆಲವೊಮ್ಮೆ ಬೈಸಿಕೊಂಡರು’ ಎಂದರು ಸುದೀಪ್.

ಅತಿಥಿಗಳಾಗಿ ಬಂದು ಬಿಗ್​​ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ, ಮನೆಯ ಸದಸ್ಯರೊಟ್ಟಿಗೆ ಆಟ ಆಡಿದ್ದಕ್ಕೆ ರಜತ್ ಮತ್ತು ಚೈತ್ರಾ ಅವರಿಗೆ ಧನ್ಯವಾದ ಹೇಳಿದರು ಸುದೀಪ್. ಹೋಗುವ ಸಮಯದಲ್ಲಿ ತುಸು ಭಾವುಕರಾದ ಚೈತ್ರಾ, ಸುದೀಪ್ ಎದುರು ಮಾತನಾಡುತ್ತಾ, ‘ಈ ಬಿಗ್​​ಬಾಸ್ ನನಗೆ ನನ್ನ ಜೀವನ ಮರಳಿ ಕೊಟ್ಟಿದೆ. ನಾನು ಸೋತಿದ್ದಾಗ ನನಗೆ ಮತ್ತೆ ವೇದಿಕೆ ಕೊಟ್ಟಿದೆ. ನಾನು ಮದುವೆ ಆಗಿ ಸುಮಂಗಲಿಯಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ಬಿಗ್​​ಬಾಸ್ ಕಾರಣ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:55 pm, Sun, 21 December 25

Source link

ಆ ನಿಮ್ಮ ದೇವರಿಗಿಂತ ಮೋದಿಯೇ ಉತ್ತಮ: ಮುಫ್ತಿ ಷಮಾಯಿಲ್ ನದ್ವಿಗೆ ಕುಟುಕಿದ ಜಾವೇದ್ ಅಖ್ತರ್ – Kannada News | Javed Akhtar and Mufti Shamail Nadwi debate on existence of The God

ನವದೆಹಲಿ, ಡಿಸೆಂಬರ್ 21: ಜಗತ್ತಿನ ಎಲ್ಲಾ ಧರ್ಮಗಳನ್ನು ಯಾವುದೇ ಭೇದವಿಲ್ಲದೇ ಕುಟುಕುವ ಬಾಲಿವುಡ್ ಚಿತ್ರ ಸಾಹಿತಿ, ಕವಿ ಹಾಗೂ ವಿಚಾರವಂತರಾದ ಜಾವೇದ್ ಅಖ್ತರ್ (Javed Akhtar), ಮತ್ತೊಮ್ಮೆ ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದಾರೆ. ದಿ ಲಲ್ಲನ್​ಟಾಪ್ ಎನ್ನುವ ಯೂಟ್ಯೂಬ್ ಪೋಡ್​ಕ್ಯಾಸ್ಟ್​ನಲ್ಲಿ ಇಸ್ಲಾಮೀ ವಿದ್ವಾಂಸ ಮುಫ್ತಿ ಷಮಾಯಿಲ್ ನದ್ವಿ (Mufti Shamail Nadwi) ಮತ್ತು ಜಾವೇದ್ ಅಖ್ತರ್ ನಡುವೆ ದೇವರ ಅಸ್ತಿತ್ವ ವಿಚಾರ ಕುರಿತು ನಡೆದ ಚರ್ಚೆ ಸಾಕಷ್ಟು ಪ್ರತಿಕ್ರಿಯೆ ಪಡೆಯುತ್ತಿದೆ.

ಈ ವೇಳೆ, ಅಖ್ತರ್ ಅವರು ಪ್ಯಾಲೆಸ್ಟೀನ್ ಹಿಂಸೆಯ ಪರಿಸ್ಥಿತಿ ಉಲ್ಲೇಖಿಸಿ, ಆ ದೇವರಿಗಿಂತ ನರೇಂದ್ರ ಮೋದಿಯೇ ವಾಸಿ ಎಂದು ಈ ಡಿಬೇಟ್​ನಲ್ಲಿ ವಾದಿಸಿದ್ದೂ ಉಂಟು. ದೇವರು ಅಸ್ತಿತ್ವದಲ್ಲಿದ್ದಾನಾ ಇಲ್ಲವಾ ಎಂಬುದು ಈ ಡಿಬೇಟ್​ನ ಮುಖ್ಯ ವಿಷಯವಾಗಿತ್ತು. ಚರ್ಚೆಯ ವೇಳೆ, ಜಾವೇದ್ ಅಖ್ತರ್ ಅವರು ಗಾಜಾ ಸಂಘರ್ಷದ ಘಟನೆಗಳನ್ನು ಉಲ್ಲೇಖಿಸಿ ವಾದಿಸಿದರು.

ಇದನ್ನೂ ಓದಿ: ಅಸ್ಸಾಮ್​ನಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ಎಲ್ಲಾ ಸಮಸ್ಯೆಗಳಿಗೆ ವಿಪಕ್ಷಗಳನ್ನೇ ಹೊಣೆ ಮಾಡುವುದೇಕೆ? ಖರ್ಗೆ ಪ್ರಶ್ನೆ

‘ಇಸ್ರೇಲ್-ಪ್ಯಾಲೆಸ್ಟೀನ್ ಭಾಗದ ಗಾಜಾದಲ್ಲಿ 70,000 ಪ್ಯಾಲೆಸ್ಟೀನಿಯನ್ನರು ಬಲಿಯಾಗಿದ್ದಾರೆ. ನೀನು (ದೇವರು) ಸರ್ವಾಂತರ್ಯಾಮಿಯೇ ಆಗಿದ್ದರೆ ಗಾಜಾದಲ್ಲೂ ಇರಬೇಕು. ಅಲ್ಲಿ ಮಕ್ಕಳ ನರಮೇಧ ಆಗುತ್ತಿರುವುದನ್ನು ಕಂಡಿರಬೇಕು. ಆದರೂ ಸುಮ್ಮನಿದ್ದೀಯ ಎಂದರೆ ನಿನ್ನನ್ನು ಹೇಗೆ ನಂಬಲು ಸಾಧ್ಯ?’ ಎಂದು ಜಾವೇದ್ ಅಖ್ತರ್ ಹೇಳುತ್ತಾ, ಈ ವಾದಕ್ಕೆ ನರೇಂದ್ರ ಮೋದಿ ಅವರನ್ನೂ ಪ್ರಸ್ತಾಪಿಸಿದರು.

‘ಅದಕ್ಕೆ (ದೇವರು) ಹೋಲಿಸಿದರೆ ನಮ್ಮ ಪ್ರಧಾನಿಯೇ ಉತ್ತಮ ಎನಿಸುತ್ತದೆ. ಅವರು ನಮ್ಮಗಳ ಯೋಗಕ್ಷೇಮವನ್ನಾದರೂ ನೋಡಿಕೊಳ್ಳುತ್ತಾರೆ’ ಎಂದು ಜಾವೇದ್ ಅಖ್ತರ್ ಆ ಡಿಬೇಟ್​ನಲ್ಲಿ ಹೇಳಿದರು.

‘ಈ ದೇವರ ವಿಷಯ ಬಂದರೆ ಯಾಕೆ ಎಲ್ಲವೂ ನಿಂತುಬಿಡುತ್ತದೆ? ನಾವು ಯಾಕೆ ಪ್ರಶ್ನಿಸೋದನ್ನೇ ನಿಲ್ಲಿಸಬೇಕು? ಮಕ್ಕಳ ಮೇಲೆ ಬಾಂಬ್ ಹಾಕಲು ಅನುಮತಿಸುವ ದೇವರು ಎಂಥವನು? ಅವನು ಅಸ್ತಿತ್ವದಲ್ಲಿದ್ದೂ ಇದಕ್ಕೆ ಅವಕಾಶ ಕೊಡುತ್ತಾನೆಂದರೆ ಹೇಗೆ’ ಎಂದು ಅಖ್ತರ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್​ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ

ಜಾವೇದ್ ಅಖ್ತರ್ ಅವರ ತೀಕ್ಷ್ಣ ಪ್ರಶ್ನೆಗಳಿಗೆ ಇಸ್ಲಾಮೀ ಧರ್ಮಗುರು ಮುಫ್ತಿ ಷಮಾಯಿಲ್ ನದ್ವಿ ಒಂದಷ್ಟು ಸಮಾಧಾನದ ಉತ್ತರ ಕೊಡಲು ಯತ್ನಿಸಿದರು. ದೇವರಿಂದ ಕೆಟ್ಟದ್ದೂ ಸೃಷ್ಟಿಯಾಗಿದೆಯೇ ವಿನಃ ದೇವರೇ ಕೆಟ್ಟವನಲ್ಲ. ಜನರು ತಮಗೆ ಸಿಕ್ಕಿರುವ ಮುಕ್ತ ವಿವೇಚನೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ದುರುಳರು. ಹಿಂಸಾಚಾರ, ಅತ್ಯಾಚಾರ ಇವೆಲ್ಲವೂ ಮನುಷ್ಯನ ಆಯ್ಕೆಯೇ ಹೊರತು ದೇವರ ಉದ್ದೇಶವಲ್ಲ ಎಂದು ಧರ್ಮಗುರು ವಾದಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್: ಕೊನೆಯಲ್ಲಿ ಕೈಕೊಟ್ಟ ಅದೃಷ್ಟ, ರನ್ನರ್ ಅಪ್ ಆದ ಕನ್ನಡತಿ ತನುಜಾ – Kannada News | Bigg Boss Telugu Tanuja Puttaswamy became runner up, Kalyan is winner

ತೆಲುಗು ಬಿಗ್​​ಬಾಸ್ (Bigg Boss) ಫಿನಾಲೆ ಇಂದು (ಡಿಸೆಂಬರ್ 21) ನಡೆದಿದೆ. ಬರೋಬ್ಬರಿ 106 ದಿನಗಳ ಶೋ ಇದಾಗಿದ್ದು, ಫಿನಾಲೆಗೆ ಕರ್ನಾಟಕದ ಇಬ್ಬರು ಸ್ಪರ್ಧಿಯರು ಬಂದಿದ್ದರು. ಈ ಕಾರಣಕ್ಕೆ ಈ ಬಾರಿಯ ತೆಲುಗು ಬಿಗ್​​ಬಾಸ್ ಗಮನ ಸೆಳೆದಿತ್ತು. ನಟಿ ಸಂಜನಾ ಗಲ್ರಾನಿ ಮತ್ತು ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಈಗ ತೆಲುಗು ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್​​ಬಾಸ್ ಫಿನಾಲೆಗೆ ಬಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಅದೃಷ್ಟ ಕೈಕೊಟ್ಟಿದೆ.

ಒಟ್ಟು ಐದು ಜನ ಫಿನಾಲೆಗೆ ಬಂದಿದ್ದರು. ಕಲ್ಯಾಣ್, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಪವನ್ ಅವರುಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಐವರಲ್ಲಿ ಕಲ್ಯಾಣ್ ಮತ್ತು ತನುಜಾ ನಡುವೆ ಬಹಳ ಗಟ್ಟಿಯಾದ ಸ್ಪರ್ಧೆ ಇತ್ತು. ತನುಜಾ ಅವರು ಗೆಲ್ಲುವ ನಿರೀಕ್ಷೆ ಬಹಳ ಇತ್ತು. ಕಲ್ಯಾಣ್​​ಗೂ ಸಹ ಸಾಕಷ್ಟು ಅಭಿಮಾನಿಗಳಿದ್ದರು. ಇಂದು ನಡೆದ ಫಿನಾಲೆಯಲ್ಲಿ ಕಲ್ಯಾಣ್ ಅವರು ಬಿಗ್​​ಬಾಸ್ ತೆಲುಗು ಸೀಸನ್ 09ರ ವಿಜೇತರಾಗಿದ್ದಾರೆ. ತನುಜಾ ಅವರು ರನ್ನರ್ ಅಪ್ ಆಗಿದ್ದಾರೆ. ಆ ಮೂಲಕ ತನುಜಾ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗಿದೆ.

ಫಿನಾಲೆ ವಾರದಲ್ಲಿ ಒಟ್ಟು ಐದು ಮಂದಿ ಸ್ಪರ್ಧಿಗಳಿದ್ದರು. ಅದರಲ್ಲಿ ಮೊದಲಿಗೆ ಇಮಾನ್ಯುಯೆಲ್ ನಾಲ್ಕನೇ ರನ್ನರ್ ಅಪ್ ಆದರು. ಬಳಿಕ ಸಂಜನಾ ಅವರು ಮೂರನೇ ರನ್ನರ್ ಅಪ್ ಆದರು. ಡಿಮಾನ್ ಪವನ್ ಎರಡನೇ ರನ್ನರ್ ಅಪ್ ಆದರೆ. ವೇದಿಕೆ ಹೋಗಿ ಮೊದಲ ರನ್ನರ್ ಅಪ್ ಆದರು ತನುಜಾ ಪುಟ್ಟಸ್ವಾಮಿ. ಕಲ್ಯಾಣ್ ಅವರು ವಿಜೇತರಾದರು. ತನುಜಾ ಅವರು ಇಡೀ ಸೀಸನ್ ಅದ್ಭುತವಾಗಿ ಆಟವಾಡುತ್ತಾ ಬಂದಿದ್ದರು ಆದರೆ ಕೊನೆಗೆ ರನ್ನರ್ ಅಪ್ ಆದರು.

ಇದನ್ನೂ ಓದಿ:ತಂದೆಯ ವಿರೋಧದ ನಡುವೆ ಸಾಧನೆ: ಕತೆ ಹೇಳಿಕೊಂಡ ತನುಜಾ

ತನುಜಾ ಅವರು ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿತವಾಗಿದ್ದರು. ಆದರೆ ಕೊನೆಯ ಒಂದು ವಾರದಲ್ಲಿ ತನುಜಾ ಅವರು ಕನ್ನಡಿಗರು, ತೆಲುಗು ರಾಜ್ಯದವರಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲು ಆರಂಭಿಸಿದರು. ಇದು ತನುಜಾ ಅವರಿಗೆ ಕೊನೆಯಲ್ಲಿ ತುಸು ನೆಗೆಟಿವ್ ಆಯ್ತು. ಆದರೂ ಸಹ ಪರಭಾಷೆ ನಟಿಯಾಗಿ ಫಿನಾಲೆ ವರೆಗೆ ಹೋಗಿದ್ದು ಸಾಮಾನ್ಯ ಸಾಧನೆಯಲ್ಲ.

ಇದರ ಜೊತೆಗೆ ಕಲ್ಯಾಣ್ ಸಹ ಒಳ್ಳೆಯ ಸ್ಪರ್ಧಿಯೇ ಆಗಿದ್ದರು. ಕಾಮನರ್ ಆಗಿ ಬಿಗ್​​ಬಾಸ್ ಮನೆಗೆ ಹೋಗಿದ್ದ ಕಲ್ಯಾಣ್ ತಮ್ಮ ಆಟ, ವ್ಯಕ್ತಿತ್ವದಿಂದ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಸೆಳೆದರು. ಅಂತಿಮವಾಗಿ ಬಿಗ್​​ಬಾಸ್ ವಿನ್ನರ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: ಲಂಕಾ ವಿರುದ್ಧ ಭಾರತ ಮಹಿಳಾ ಪಡೆಗೆ 8 ವಿಕೆಟ್ ಜಯ – Kannada News | India Women Dominate Sri Lanka in Vizag T20: Jemimah Rodrigues Shines

ವಿಶಾಖಪಟ್ಟಣಂನಲ್ಲಿ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿದೆ. ಜೆಮಿಮಾ ರೊಡ್ರಿಗಸ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತೀಯ ಮಹಿಳಾ ತಂಡವು ಶ್ರೀಲಂಕಾವನ್ನು ಏಕಪಕ್ಷೀಯವಾಗಿ ಸೋಲಿಸಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಡಿದ ಶ್ರೀಲಂಕಾ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 120 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ಜೆಮಿಮಾ ಅವರ ಪ್ರಬಲ ಪ್ರದರ್ಶನದ ನೆರವಿನಿಂದ 14.4 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 122 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

122 ರನ್ ಗುರಿ ನೀಡಿದ ಶ್ರೀಲಂಕಾ

ಶ್ರೀಲಂಕಾ ಪರ ಚಾಮರಿ ಅಟಪಟ್ಟು ಮತ್ತು ವಿಷ್ಮಿ ಗುಣರತ್ನೆ ಇನ್ನಿಂಗ್ಸ್ ಆರಂಭಿಸಿದರು. ಆದಾಗ್ಯೂ ಭಾರತದ ಯುವ ಬೌಲರ್ ಕ್ರಾಂತಿ ಗೌಡ್, ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಚಾಮರಿ 12 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 15 ರನ್ ಗಳಿಸಿ ಔಟಾದರು. ಇದಾದ ಬಳಿಕ ಶ್ರೀಲಂಕಾ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದಿದ್ದರೂ, ರನ್ ವೇಗ ಕಡಿಮೆಯಾಯಿತು. ಇದೇ ವೇಳೆ ದಾಳಿಗಿಳಿದ ದೀಪ್ತಿ ಶರ್ಮಾ, ಹಸಿನಿ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಶ್ರೀಲಂಕಾಕ್ಕೆ ಎರಡನೇ ಹೊಡೆತ ನೀಡಿದರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ವಿಷ್ಮಿ ಗುಣರತ್ನೆ 43 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ಭಾರತ ಪರ ಕ್ರಾಂತಿ ಗೌಡ್, ದೀಪ್ತಿ ಶರ್ಮಾ ಮತ್ತು ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು.

ಜೆಮಿಮಾ ಗೆಲುವಿನ ಅರ್ಧಶತಕ

ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶೆಫಾಲಿ ವರ್ಮಾ ಅವರ ವಿಕೆಟ್ ಬೇಗನೆ ಪತನವಾಯಿತು. ಆದರೆ ಜೆಮಿಮಾ ಮತ್ತು ಮಂಧಾನ 50+ ರನ್‌ಗಳ ಜೊತೆಯಾಟವನ್ನು ಮಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ಮೂರನೇ ವಿಕೆಟ್‌ಗೆ 55 ರನ್‌ಗಳ ಅಜೇಯ ಪಾಲುದಾರಿಕೆಯನ್ನು ನಿರ್ಮಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿ20 ಯಲ್ಲಿ ಭಾರತ ಎರಡನೇ ಮತ್ತು ಮೂರನೇ ವಿಕೆಟ್‌ಗೆ 50+ ರನ್‌ಗಳ ಜೊತೆಯಾಟವನ್ನು ಮಾಡಿರುವುದು ಇದೇ ಮೊದಲು. ಅಂತಿಮವಾಗಿ ಜೆಮಿಮಾ 44 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಅಜೇಯ 69 ರನ್ ಗಳಿಸಿದರೆ, ಹರ್ಮನ್‌ಪ್ರೀತ್ 16 ಎಸೆತಗಳಲ್ಲಿ 15 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ಕಾವ್ಯ ಕವಿಂದಿ ಮತ್ತು ಇನೋಕಾ ರಣವೀರ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

U19 Asia Cup 2025: ಮೊಹ್ಸಿನ್ ನಖ್ವಿಗೆ ಮತ್ತೆ ಮುಖಭಂಗ; ಪದಕ ಸ್ವೀಕರಿಸದ ಟೀಂ ಇಂಡಿಯಾ – Kannada News | BCCI PCB Standoff: India Teams Decline Awards from Naqvi Amidst Trophy Row

ಸೆಪ್ಟೆಂಬರ್ 28 ರಂದು ನಡೆದಿದ್ದ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಕೈನಿಂದ ಟ್ರೋಫಿ ಪಡೆಯಲು ನಿರಾಕರಿಸಿತು. ಇದರ ಪರಿಣಾಮವಾಗಿ ಇದುವರೆಗೂ ಟೀಂ ಇಂಡಿಯಾಗೆ ಏಷ್ಯಾಕಪ್ ಟ್ರೋಫಿ ಸಿಕ್ಕಿಲ್ಲ. ಈಗಲೂ ನಖ್ವಿ ಹಾಗೂ ಬಿಸಿಸಿಐ ನಡುವೆ ಈ ಬಗ್ಗೆ ಪ್ರತಿಷ್ಠಯೆ ಹೋರಾಟ ಮುಂದುವರೆದಿದೆ. ಇದೀಗ ಅಂಡರ್-19 ಏಷ್ಯಾಕಪ್‌ನಲ್ಲೂ (U19 Asia Cup) ಭಾರತದ ಯುವ ಪಡೆ ಮೊಹ್ಸಿನ್ ನಖ್ವಿ ಕೈನಿಂದ ಪದಕ ಪಡೆಯಲು ನಿರಾಕರಿಸಿದೆ. ಇದರ ಪರಿಣಾಮವಾಗಿ ನಖ್ವಿ ಬದಲು ಅಸೋಸಿಯೇಟ್ ಸದಸ್ಯರ ಅಧ್ಯಕ್ಷ ಮುಬಾಸಿರ್ ಉಸ್ಮಾನಿ ಟೀಂ ಇಂಡಿಯಾ ಆಟಗಾರರಿಗೆ ಪದಕ ನೀಡಿದ್ದಾರೆ.

ಏಷ್ಯಾಕಪ್ ಫೈನಲ್ ಸೋತ ಭಾರತ

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ, ಭಾರತ ತಂಡವನ್ನು 191 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಭಾರತಕ್ಕೆ 348 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಯಾಗಿ, ಟೀಂ ಇಂಡಿಯಾ 156 ರನ್‌ಗಳನ್ನು ಆಲ್ ಔಟ್ ಆಯಿತು. ವಾಸ್ತವವಾಗಿ ಬಹುರಾಷ್ಟ್ರೀಯ ಸ್ಪರ್ಧೆಯ ಫೈನಲ್ ಪಂದ್ಯದ ನಂತರ ವಿಜೇತ ಮತ್ತು ರನ್ನರ್-ಅಪ್ ತಂಡಗಳಿಗೆ ಪದಕಗಳನ್ನು ನೀಡಲಾಗುತ್ತದೆ. ಆ ಪ್ರಕಾರ, ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರಿಗೆ ಪದಕ ನೀಡಲಾಯಿತು.

U19 Asia Cup 2025: ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ ಸೋತ ಟೀಂ ಇಂಡಿಯಾ

ನಖ್ವಿ ಕೈನಿಂದ ಪದಕ ಪಡೆಯದ ಯಂಗ್ ಇಂಡಿಯಾ

ವಾಸ್ತವವಾಗಿ ಈ ಪದಕಗಳನ್ನು ಉಭಯ ತಂಡಗಳ ಆಟಗಾರರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರು ನೀಡುವುದು ವಾಡಿಕೆ. ಹೀಗಾಗಿ ಪ್ರಸ್ತುತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿರುವ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಮೊಹ್ಸಿನ್ ನಖ್ವಿ ಅವರು ಆಟಗಾರರಿಗೆ ಪದಕ ನೀಡಬೇಕಾಗಿತ್ತು. ಆದರೆ ಟೀಂ ಇಂಡಿಯಾ ಆಟಗಾರರಿಗೆ ಪದಕಗಳನ್ನು ನೀಡುವ ಸರದಿ ಬಂದಾಗ, ಮೊಹ್ಸಿ ನಖ್ವಿ ಭಾರತದ ಆಟಗಾರರಿಗೆ ಪದಕಗಳನ್ನು ನೀಡಲಿಲ್ಲ. ನಖ್ವಿ ಬದಲಾಗಿ ಐಸಿಸಿ ಅಸೋಸಿಯೇಟ್ ಸದಸ್ಯರ ಅಧ್ಯಕ್ಷ ಮುಬಾಸಿರ್ ಉಸ್ಮಾನಿ ಅವರು ಟೀಂ ಇಂಡಿಯಾ ಆಟಗಾರರಿಗೆ ಪದಕಗಳನ್ನು ನೀಡಿದರು. ಇದಾದ ಬಳಿಕ ಮೊಹ್ಸಿನ್ ನಖ್ವಿ ಚಾಂಪಿಯನ್ ಪಾಕಿಸ್ತಾನ ತಂಡಕ್ಕೆ ಟ್ರೋಫಿಯನ್ನು ಪ್ರದಾನ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್ ​ ಲಕ್ಷ್ಮೀ ಬರ್ತಾಳೆ

ಬೆಂಗಳೂರು, (ಡಿಸೆಂಬರ್ 21): ವಿಪಕ್ಷ ಬಿಜೆಪಿ-ಜೆಡಿಎಸ್‌ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಬರುವ ಶನಿವಾರದೊಳಗೆ 24ನೇ ಕಂತಿನ ದುಡ್ಡು ಫಲಾನುಭವಿಗಳ ಖಾತೆಗೆ ಸೇರಲಿ.ಇದು ಸಹಜವಾಗಿಯೇ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪಂಚ ಗ್ಯಾರಂಟಿಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಿತ್ತು. ಚಳಿಗಾಲ ಅಧಿವೇಶನದಲ್ಲಿ ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಟ್ಟು ಬೇರೆ ತಿಂಗಳಿನ ಹಣ ಹಾಕಿದ್ದಾರೆ ಎಂದು ಬಿಜೆಪಿ ಹೋರಾಟ ನಡೆಸಿತ್ತು. 5 ಸಾವಿರ ಕೋಟಿ ರೂಪಾಯಿ ಎಲ್ಲಿ ಹೋಯ್ತು ಎಂದು ಬಿಜೆಪಿ ಪ್ರಶ್ನಿಸಿತ್ತು. ಫೆಬ್ರವರಿ, ಮಾರ್ಚ್‌ ಕಂತು ಬಿಡುಗಡೆಯಾಗದಿರೋದನ್ನ ಟಿವಿ9 ರಿಯಾಲಿಟಿ ಚೆಕ್‌ ಮೂಲಕ ಬಯಲು ಮಾಡಿತ್ತು. ಆದ್ರೆ, ಫೆಬ್ರವರಿ, ಮಾರ್ಚ್ ಕಂತಿನ ಬಗ್ಗೆ ಸಚಿವೆ ಸ್ಪಷ್ಟನೆ ಕೊಟ್ಟಿಲ್ಲ. ಈ ಮಧ್ಯೆ ವಿಪಕ್ಷಗಳು ವಾಗ್ದಾಳಿ ಮುಂದುವರೆಸಿದ್ದು, ಹಿಂದಿನ ಎರಡು ತಿಂಗಳ ಬಾಕಿ ಹಣದ ಕಥೆ ಏನು ಎನ್ನುವುದೇ ಇನ್ನೂ ನಿಗೂಢವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು? – Kannada News | Darshan wife Vijayalakshmi give indirect reply to Sudeep

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದ್ದು, ನಿನ್ನೆ (ಡಿಸೆಂಬರ್ 20) ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ತಮ್ಮ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರ ಮಾಡುತ್ತಿರುವ ದರ್ಶನ್ ಅಭಿಮಾನಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದರು. ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ ಮಾತನಾಡಿ ಸುದೀಪ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ದರ್ಶನ್ ಜೈಲಿನಲ್ಲಿದ್ದಾಗ ಕೆಲವರು ಅವರ ಬಗ್ಗೆ, ಅವರ ಫ್ಯಾನ್ಸ್‌ ಬಗ್ಗೆ, ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ, ಆದರೆ ದರ್ಶನ್‌ ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ, ಬೆಂಗಳೂರಿನಲ್ಲಿ ಇದ್ದಾರಾ ಎಂದು ಗೊತ್ತೇ ಆಗದಂತೆ ಇರುತ್ತಾರೆ, ದರ್ಶನ್‌ ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ದರ್ಶನ್ ಅಭಿಮಾನಿಗಳಾದ ನೀವೂ ತಲೆಕೆಡಿಸಿಕೊಳ್ಳಬೇಡಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಇಲ್ಲಿ ಕ್ಲಿಕ್ ಮಾಡಿ

 

Source link

ಅಸ್ಸಾಮ್​ನಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ಎಲ್ಲಾ ಸಮಸ್ಯೆಗಳಿಗೆ ವಿಪಕ್ಷಗಳನ್ನೇ ಹೊಣೆ ಮಾಡುವುದೇಕೆ? ಖರ್ಗೆ ಪ್ರಶ್ನೆ – Kannada News | Blames opposition if he fails, Mallikarjuna Kharge lashes out against PM Modi on Assam statement

ನವದೆಹಲಿ, ಡಿಸೆಂಬರ್ 21: ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷ ಅಸ್ಸಾಂ ಹಾಗೂ ಈಶಾನ್ಯ ಪ್ರದೇಶಗಳನ್ನು ಕಡೆಗಣಿಸಿದೆ. ವಲಸಿಗರನ್ನು ಬರಲು ಬಿಟ್ಟು ಪ್ರಾದೇಶೀಕ ಭದ್ರತೆಗೆ ಧಕ್ಕೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಭಾನುವಾರ ತಿರುಗೇಟು ನೀಡಿದ್ದಾರೆ. ಅಸ್ಸಾಮ್​ನಲ್ಲಿ ಡಬಲ್ ಎಂಜಿನ್ ಸರ್ಕಾರ ಹೊಂದಿರುವ ಬಿಜೆಪಿ, ಆ ರಾಜ್ಯದಲ್ಲಿ ಆಗಿರುವ ತನ್ನ ವೈಫಲ್ಯಗಳಿಗೆ ಜವಾಬ್ದಾರಿ ಹೊರುವುದು ಬಿಟ್ಟು ವಿಪಕ್ಷಗಳತ್ತಲೇ ಬೊಟ್ಟು ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅವರು ಅದ್ಹೇಗೆ ವಿಪಕ್ಷಗಳ ಮೇಲೆ ಆಪಾದಿಸುತ್ತಾರೆ? ಕೇಂದ್ರದಲ್ಲಿ ಅವರ ಸರ್ಕಾರ ಇದೆ. ಅಸ್ಸಾಮ್​ನಲ್ಲೂ ಅವರದ್ದೇ ಸರ್ಕಾರ ಇದೆ. ಡಬಲ್ ಎಂಜಿನ್ ಸರ್ಕಾರ ಆಗಿದೆ. ಅವರು ರಾಜ್ಯವನ್ನು ರಕ್ಷಿಸಲು ವಿಫಲರಾದರೆ, ವಿಪಕ್ಷಗಳನ್ನು ಹೇಗೆ ದೂಷಿಸುತ್ತಾರೆ? ನಾವಾ ಅಲ್ಲಿ ಆಡಳಿತ ನಡೆಸುತ್ತಿರುವುದು?’ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್​ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ

ಪ್ರಧಾನಿ ಮೋದಿ ಅವರಿಗೆ ತಮ್ಮ ಸರ್ಕಾರ ವಿಫಲ ಆದಾಗೆಲ್ಲಾ ಎಲ್ಲಾ ಸಮಸ್ಯೆಗಳಿಗೆ ವಿಪಕ್ಷಗಳನ್ನು ದೂಷಿಸುವುದನ್ನೇ ಪರಿಪಾಟವಾಗಿ ಹೋಗಿದೆ ಎಂದೂ ಖರ್ಗೆ ಆರೋಪಿಸಿದ್ದಾರೆ.

‘ಅವರು ವಿಫಲರಾದಾಗ ಎಲ್ಲವನ್ನೂ ವಿಪಕ್ಷಗಳ ತಲೆ ಮೇಲೆ ಹಾಕುತ್ತಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ದೇಶದ್ರೋಹಿಗಳು ಅವರೇ ಹೊರತು ನಾವಲ್ಲ. ನಾವ್ಯಾರನ್ನೂ ರಕ್ಷಿಸುತ್ತಲ್ಲ. ದೇಶದ ಹಿತಕ್ಕೆ ಏನು ಒಳ್ಳೆಯದೋ ಅದನ್ನು ಮಾಡುತ್ತೇವೆ. ಭಯೋತ್ಪಾದಕರನ್ನೂ ಅಥವಾ ನುಸುಳುಕೋರರನ್ನೋ ಅಥವಾ ಇನ್ನಾರನ್ನೋ ನಾವು ಬೆಂಬಲಿಸುವುದಿಲ್ಲ. ಇವರನ್ನು ನಿಗ್ರಹಿಸಲು ವಿಫಲರಾಗಿದ್ದಕ್ಕೆ ನಮ್ಮನ್ನು ದೂಷಿಸುತ್ತಿದ್ದಾರೆ ಅಷ್ಟೇ’ ಎಂದು ಕಾಂಗ್ರೆಸ್ ಅಧ್ಯಕ್ಷರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?

ನರೇಂದ್ರ ಮೋದಿ ನೀಡಿದ ಹೇಳಿಕೆ ಏನು?

ನರೇಂದ್ರ ಮೋದಿ ಅವರು ನಿನ್ನೆ ಶನಿವಾರ (ಡಿ. 20) ಅಸ್ಸಾಮ್ ರಾಜಧಾನಿ ಗುವಾಹಟಿಯ ಏರ್​ಪೋರ್ಟ್​ನ ಹೊಸ ಟರ್ಮಿನಲ್ ಉದ್ಘಾಟನೆ ಮಾಡಿ ಮಾತನಾಡುತ್ತಾ, ಅಸ್ಸಾಮ್ ಹಾಗೂ ಈಶಾನ್ಯವನ್ನು ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸುತ್ತಾ ಬಂದಿತ್ತೆಂದು ಆಪಾದಿಸಿದ್ದರು.

ದಶಕಗಳ ಕಾಲ ಈಶಾನ್ಯ ಪ್ರದೇಶಗಳಿಗೆ ನುಸುಳುಕೋರರನ್ನು ಬರಲು ಬಿಟ್ಟು ಅಲ್ಲಿನ ಭದ್ರತೆ ಮತ್ತು ಸಾಂಸ್ಕೃತಿಕ ಗುರುತನ್ನು ದುರ್ಬಲಗೊಳಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಮೋದಿ ಹೇಳೀದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎರಡೆರಡು ವಿಶ್ವಕಪ್‌; ಟೀಂ ಇಂಡಿಯಾಗೆ ನಾಯಕರೇ ದೊಡ್ಡ ತಲೆನೋವು – Kannada News | ICC World Cup 2026: India Captains Suryakumar, Ayush Mhatre’s Form Concerns

2026 ರಲ್ಲಿ ಕ್ರಿಕೆಟ್ ಲೋಕದಲ್ಲಿ ಪ್ರಮುಖ ಐಸಿಸಿ (ICC) ಈವೆಂಟ್​ಗಳು ನಡೆಯಲಿವೆ. ಈ ಪಂದ್ಯಾವಳಿಗಳು ಜನವರಿಯಿಂದಲೇ ಪ್ರಾರಂಭವಾಗುತ್ತಿದ್ದು, ಅಂಡರ್-19 ಪುರುಷರ ವಿಶ್ವಕಪ್ ಮತ್ತು ಆ ನಂತರ 2026 ರ ಪುರುಷರ ಟಿ20 ವಿಶ್ವಕಪ್ (ICC World Cup 2026) ಪ್ರಮುಖ ಪಂದ್ಯಾವಳಿಗಳಾಗಿವೆ. ಭಾರತ ತಂಡವು ಎರಡೂ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಸ್ಪರ್ಧಿಗಳಾಗಿ ಪ್ರವೇಶಿಸಲಿದೆ. ಈ ಎರಡೂ ತಂಡಗಳಲ್ಲೂ ಪ್ರತಿಭಾವಂತೆ ಆಟಗಾರರಿದ್ದಾರೆ. ಆದಾಗ್ಯೂ, ಈ ವಿಶ್ವಕಪ್‌ಗಳ ಆರಂಭಕ್ಕೂ ಮೊದಲು, ಈ ಎರಡೂ ತಂಡಗಳ ನಾಯಕರು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ. ಒಂದೆಡೆ ಹಿರಿಯರ ಪುರುಷರ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ರನ್ ಗಳಿಸಲು ಹೆಣಗಾಡುತ್ತಿದ್ದರೆ, ಇನ್ನೊಂದೆಡೆ ಅಂಡರ್-19 ತಂಡದ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಕೂಡ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ.

ಡಿಸೆಂಬರ್ 21 ರ ಭಾನುವಾರದಂದು, ಭಾರತದ ಅಂಡರ್-19 ತಂಡವು ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್‌ನಲ್ಲಿ ಸೋತಿತು. ಮುಂದಿನ ತಿಂಗಳು ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ ತಂಡ ಇದೇ ಆಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಎಲ್ಲಾ ಪಂದ್ಯಗಳಲ್ಲೂ ತಂಡವು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿತ್ತು. ಹೆಚ್ಚಿನ ಆಟಗಾರರು ಅದ್ಭುತ ಫಾರ್ಮ್​ನಲ್ಲಿದ್ದರು. ಆದ್ದರಿಂದ, ಈ ಸೋಲು ತಂಡದ ಭವಿಷ್ಯದ ಬಗ್ಗೆ ಹೆಚ್ಚಿನ ಕಳವಳವನ್ನು ಉಂಟುಮಾಡಿಲ್ಲ. ಆದಾಗ್ಯೂ, ಈ ಫೈನಲ್‌ನಲ್ಲಿ ನಾಯಕ ಆಯುಷ್ ಮ್ಹಾತ್ರೆ ಅವರ ವೈಫಲ್ಯವು ಮತ್ತೊಮ್ಮೆ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಯುಷ್ ಪ್ರದರ್ಶನ ಹೇಗಿದೆ?

ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲಲು 348 ರನ್‌ಗಳು ಬೇಕಾಗಿದ್ದವು, ಆದರೆ ಫೈನಲ್‌ನಲ್ಲಿ ನಾಯಕ ಆಯುಷ್ 8 ಎಸೆತಗಳಲ್ಲಿ ಕೇವಲ 2 ರನ್‌ಗಳಿಗೆ ಔಟಾದರು. ಇದು ಕೇವಲ ಫೈನಲ್ ಅಲ್ಲ, ಇಡೀ ಟೂರ್ನಮೆಂಟ್‌ನಲ್ಲಿ ಆಯುಷ್ ರನ್ ಗಳಿಸಲು ವಿಫಲರಾದರು. ಆಯುಷ್ ಮ್ಹಾತ್ರೆ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 13 ರ ಸಾಧಾರಣ ಸರಾಸರಿಯಲ್ಲಿ ಕೇವಲ 65 ರನ್‌ಗಳನ್ನು ಗಳಿಸಿದರು. ಇದರಲ್ಲಿ ಅವರ ಗರಿಷ್ಠ ಸ್ಕೋರ್ 38 ರನ್ ಅಷ್ಟೆ.

ಆದರೆ ಈ ಟೂರ್ನಮೆಂಟ್‌ನಲ್ಲಿ ಮಾತ್ರವಲ್ಲ, ತಮ್ಮ ಅಂಡರ್-19 ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಆಡಿರುವ ಎಲ್ಲಾ ಏಕದಿನ ಪಂದ್ಯಗಳಲ್ಲಿ, ಮ್ಹಾತ್ರೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ 14 ಅಂಡರ್-19 ಏಕದಿನ ಪಂದ್ಯಗಳನ್ನು ಆಡಿರುವ ಆಯುಷ್ ಒಂದೇ ಒಂದು ಅರ್ಧಶತಕವಿಲ್ಲದೆ ಕೇವಲ 143 ರನ್ ಗಳಿಸಿದ್ದಾರೆ. ಪರಿಣಾಮವಾಗಿ, ಮುಂದಿನ ತಿಂಗಳು ನಡೆಯಲಿರುವ ಅಂಡರ್-19 ವಿಶ್ವಕಪ್‌ನಲ್ಲಿ ಅವರು ಟೀಂ ಇಂಡಿಯಾಕ್ಕೆ ಪ್ರಮುಖ ಚಿಂತೆಯಾಗಿ ಪರಿಣಮಿಸಿದ್ದಾರೆ.

ಸೂರ್ಯಕುಮಾರ್ ಕಥೆಯೂ ಇದೆ

ನಾಯಕತ್ವ ವೈಫಲ್ಯದ ಕಥೆ ಕೇವಲ ಅಂಡರ್-19 ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿರಿಯರ ಟಿ20 ತಂಡ ಕೂಡ ಇದೇ ರೀತಿಯ ಪರಿಸ್ಥಿತಿಯಲ್ಲಿದೆ. ಅನುಭವಿ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿಯೂ ಸೂರ್ಯ ರನ್​ಗಳಿಸಲು ವಿಫಲರಾದರು. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 34 ರನ್ ಗಳಿಸಿದರು. ಅದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ಏಷ್ಯಾಕಪ್‌ನಲ್ಲಿಯೂ ಸೂರ್ಯ ಇದೇ ರೀತಿಯ ಪ್ರದರ್ಶನ ನೀಡಿದ್ದರು.

2024 ರ ವಿಶ್ವಕಪ್ ನಂತರ ಸೂರ್ಯ ಅವರನ್ನು ಟಿ20 ತಂಡದ ನಾಯಕನನ್ನಾಗಿ ನೇಮಿಸಲಾಯಿತು, ಆದರೆ ಅಂದಿನಿಂದ ಅವರು ನಿರಂತರವಾಗಿ ವಿಫಲರಾಗಿದ್ದಾರೆ. 2025 ರಲ್ಲಿ ಅವರ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕವಾಗಿದೆ. ಈ ವರ್ಷದುದ್ದಕ್ಕೂ, ಸೂರ್ಯ 21 ಟಿ20 ಪಂದ್ಯಗಳಲ್ಲಿ 13 ಸರಾಸರಿಯಲ್ಲಿ ಕೇವಲ 218 ರನ್ ಗಳಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕವಿಲ್ಲದಿರುವುದು ಅವರ ಕಳಪೆ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿದೆ. ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದ್ದು, ಸೂರ್ಯ ಅಷ್ಟರೊಳಗೆ ತಮ್ಮ ಫಾರ್ಮ್​ ಕಂಡುಕೊಳ್ಳಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version