ಬಾಕ್ಸ್ ಆಫೀಸ್ ದೂಳಿಪಟ ಮಾಡುತ್ತಿರುವ ‘ಧುರಂಧರ್’, ಮಂಕಾದ ‘ಅವತಾರ್’ – Kannada News | Dhurandhar and Avatar Fire and Ash movie Saturday collection

ಕೆಲವು ಸಿನಿಮಾಗಳು (Cinema) ಹಾಗೆಯೇ ಆರಂಭ ಸಾಮಾನ್ಯವಾಗಿರುತ್ತದೆ ಆದರೆ ದಿನಗಳು ಕಳೆದಂತೆ ಕಲೆಕ್ಷನ್ ಡಬಲ್, ತ್ರಿಬಲ್ ಆಗುತ್ತಾ ಸಾಗುತ್ತದೆ. ಕನ್ನಡದ ‘ಸು ಫ್ರಂ ಸೋ’ ಸಿನಿಮಾ ಹೀಗೆಯೇ ಆಗಿತ್ತು, ಲಕ್ಷಗಳಲ್ಲಿ ಪ್ರಾರಂಭವಾಗಿದ್ದ ದಿನದ ಗಳಿಕೆ, ಬಳಿಕ ಕೋಟಿ, ಹತ್ತು ಕೋಟಿ ಹೀಗೆ ಏರಿಕೆ ಆಗಿತ್ತು. ಇದೀಗ ಹಿಂದಿ ಸಿನಿಮಾ ‘ಧುರಂದರ್’ ಸಹ ಹೀಗೆಯೇ ಆಗಿದೆ. ಸಾಮಾನ್ಯ ಓಪನಿಂಗ್ ಕಂಡ ಈ ಸಿನಿಮಾ ಆ ನಂತರದ ದಿನಗಳಲ್ಲಿ ಕಲೆಕ್ಷನ್ ಅನ್ನು ದೊಡ್ಡ ಮಟ್ಟದಲ್ಲಿ ಏರಿಸಿಕೊಂಡಿದೆ. ಈಗ ದಿನದಿಂದ ದಿನಕ್ಕೆ ಕಲೆಕ್ಷನ್ ಏರಿಕೆ ಆಗುತ್ತಲೇ ಇದೆ. ಆದರೆ ಎರಡು ದಿನದ ಹಿಂದಷ್ಟೆ ಬಿಡುಗಡೆ ಆದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮಂಕಾಗಿದೆ.

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ 17 ದಿನಗಳಾಗಿದ್ದು, ಸಿನಿಮಾ ಬಿಡುಗಡೆ ಆದ ಮೂರು ವಾರಗಳು ಕಳೆಯುವ ಮುಂಚೆಯೇ ಭಾರತದಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ. ಆರಂಭದಲ್ಲಿ ದಿನಕ್ಕೆ 8 ಕೋಟಿ 10 ಕೋಟಿ ಗಳಿಸುತ್ತಿದ್ದ ಈ ಸಿನಿಮಾ ಈಗ ಕಲೆಕ್ಷನ್ ಅನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿದ್ದು 17ನೇ ದಿನ ಅಂದರೆ ಶನಿವಾರದಂದು ಬಾಕ್ಸ್ ಆಫೀಸ್​​ನಲ್ಲಿ 34 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಭಾರತದಲ್ಲೇ 500 ಕೋಟಿ ರೂ. ದಾಟಿದ ಧುರಂಧರ್ ಕಲೆಕ್ಷನ್: ಮುಂದಿನ ಟಾರ್ಗೆಟ್ ಏನು?

‘ಧುರಂಧರ್’ ಸಿನಿಮಾದ ಭಾರತದ ಕಲೆಕ್ಷನ್ ಈ ವರೆಗೆ (17 ದಿನಗಳಲ್ಲಿ) 548 ಕೋಟಿ ರೂಪಾಯಿಗಳಾಗಿದೆ. ಮೊದಲ ವಾರದಲ್ಲಿ 207 ಕೋಟಿ ಗಳಿಕೆ ಮಾಡಿದ್ದ ಈ ಸಿನಿಮಾ, ಎರಡನೇ ವಾರ 253 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಮೂರನೇ ವಾರ 300 ಕೋಟಿ ಗಳಿಸುವ ನಿರೀಕ್ಷೆ ಇದೆ. ‘ಧುರಂಧರ್’ ಸಿನಿಮಾ, ಭಾರತೀಯ ಸೈನಿಕನೋರ್ವ ಪಾಕಿಸ್ತಾನದಲ್ಲಿ ಗೂಢಚಾರಿಕೆ ಮಾಡುವ ಕತೆಯನ್ನು ಒಳಗೊಂಡಿದೆ. ಈ ಸಿನಿಮಾ ನಿಜ ಘಟನೆಗಳಿಂದ ಸ್ಪೂರ್ತಿ ಪಡೆದು ಮಾಡಲಾದ ಸಿನಿಮಾ ಆಗಿದೆ. ಸಿನಿಮಾದ ಹಾಡುಗಳು, ಸಿನಿಮಾದಲ್ಲಿ ನಟನೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.

ಜೇಮ್ಸ್ ಕ್ಯಾಮರನ್ ನಿರ್ದೇಶನದ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಶುಕ್ರವಾರವಷ್ಟೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಬಿಡುಗಡೆ ಆಗಿದೆ. ಇದು ‘ಅವತಾರ್’ ಸರಣಿಯ ಮೂರನೇ ಸಿನಿಮಾ ಆಗಿದ್ದು, ಈ ಮುಂಚಿನ ಎರಡು ‘ಅವತಾರ್’ ಸಿನಿಮಾಗಳು ಭಾರತದಲ್ಲಿ ಒಳ್ಳೆಯ ಗಳಿಕೆ ಮಾಡಿವೆ. ಆದರೆ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ನಿರೀಕ್ಷಿಸಿದಷ್ಟು ಗಳಿಕೆ ಮಾಡುತ್ತಿಲ್ಲ. ಮೊದಲ ದಿನ ಅಂದರೆ ಶುಕ್ರವಾರ ಈ ಸಿನಿಮಾ ಭಾರತದಲ್ಲಿ 19 ಕೋಟಿ ಗಳಿಸಿತ್ತು, ಎರಡನೇ ದಿನ ಅಂದರೆ ಶನಿವಾರ 22 ಕೋಟಿ ರೂಪಾಯಿ ಗಳಿಸಿದೆ. ಭಾನುವಾರದ ಬಳಿಕ ಸಿನಿಮಾದ ಕಲೆಕ್ಷನ್ ಕುಸಿಯುವ ಸಾಧ್ಯತೆ ದಟ್ಟವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೂರ್ತಿ ವಿಡಿಯೋ ಬೇಕಾದ್ರೆ ಫಾಲೋ- ಲೈಕ್ ಮಾಡುವಂತೆ ಪೋಸ್ಟ್​ ಹಾಕುವವರೇ ಹುಷಾರ್ – Kannada News | Bengaluru Cyber Police booked Case Against Social Media Users Who Post For Like And Comments

ಬೆಂಗಳೂರು, (ಡಿಸೆಂಬರ್ 21): ಸೋಶಿಯಲ್ ಮೀಡಿಯಾ (Social Media)  ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ದರು ಬಳಕೆ‌ ಮಾಡುತ್ತಿರುವ ಮಾಧ್ಯಮ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಪ್ರತಿ ದಿನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪರವಾಗಿಲ್ಲ ಮೊಬೈಲ್ ಗೆ  (Mobile ನೆಟ್ ಇರಬೇಕು ಅನ್ನೋ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರ ಮಧ್ಯೆ ಕಟೆಂಟ್ ಕ್ರಿಯೆಟ್ ಹೆಸರಲ್ಲಿ ಹಲವರು ಲೈಕ್, ಫಾಲೋ, ಕಾಮೆಂಟ್ ಗಾಗಿ ನಾನಾ ರೀತಿ ಸರ್ಕಸ್ ಕೂಡ ಮಾಡುತ್ತಿದ್ದಾರೆ. ಕೆಲವರಂತೂ ತಪ್ಪು ದಾರಿ ಹಿಡಿಯುತ್ತಿದ್ದಾರೆ. ಅಶ್ಲೀಲತೆ ಮೂಲಕ ತಮ್ಮ ಫಾಲೋವರ್ಸ್ ಹೆಚ್ಚಳಕ್ಕೆ ಕೈ ಹಾಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು..ಲೈಕ್, ಫಾಲೋವರ್ಸ್​​​​ಗಾಗಿ ಅಡ್ಡದಾರಿ ಹಿಡಿದಿರುವ ಸೋಷಿಯಲ್ ಮೀಡಿಯಾ ಅಕೌಂಟ್ ಗಳ ಬಳಕೆ ಮಾಡುವ ಕೆಲವರ ವಿರುದ್ಧ ಬೆಂಗಳೂರು ಪೊಲೀಸರು (Bengaluru Police) ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದ ಕೆಲವರು ಅಶ್ಲೀಲ ವಿಡಿಯೋ ತುಣುಕು, ಅಥವಾ ಪೋಟೋಗಳನ್ನ ಹಾಕಿ, ಆ ಪೂರ್ತಿ ವಿಡಿಯೋ ಬೇಕಾದ್ರೆ ತಮ್ಮ ಅಕೌಂಟ್ ಗಳನ್ನ ಫಾಲೋ ಮಾಡುವಂತೆ ಪೋಸ್ಟ್ ಮಾಡ್ತಿದ್ದಾರೆ. ಇದು ಸೋಶಿಯಲ್ ಮಿಡಿಯಾ ಓಪನ್ ಮಾಡುವ ಹಲವರಿಗೆ ಇರಿಸುಮುರಿಸು ಉಂಟು ಮಾಡುವಂತೆ ಮಾಡಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಶ್ರೀಹರ್ಷ ಎನ್ನುವಂತ ವ್ಯಕ್ತಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರಂತೆ ಸೈಬರ್ ಕ್ರೈಂ ಪೊಲೀಸರು ಒಟ್ಟು 28 ಅಕೌಂಟ್ ಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಜೊತೆಗೆ ಆ ಅಕೌಂಟ್ ಗಳಲ್ಲಿ ಹಾಕಲಾದ ಪೋಸ್ಟ್ ಗಳನ್ನ ಸಂಗ್ರಹ ಕೂಡ ಮಾಡಿದ್ದು, ಪೋಸ್ಡ್ ಹಾಕಿದವರ ಪತ್ತೆಗೆ ಮುಂದಾಗಿದ್ದಾರೆ.

ಮನರಂಜನೆಗೆ ಹಾಗೂ ಸಮಾಜದ ಒಳತಿಯ ವಿಚಾರಗಳನ್ನ ವಿನಿಮಯ ಮಾಡೋಕೆ ಬಳಕೆಯಾಗಬೇಕಿದ್ದ ಸೋಶಿಯಲ್ ಮೀಡಿಯಾ ಕೆಲವರಿಂದ ಸಮಾಜಕ್ಕೆ ಮಾರಕವಾಗುವ ಸ್ಥಿತಿ ತಲುಪುತ್ತಿದ್ದು, ಸದ್ಯ ಅಂತವರ ವಿರುದ್ಧ ಕ್ರಮಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ನೀವು ಏನಾದ್ರು ಲೈಕ್ ಕಾಮೆಂಟ್, ಫಾಲೋರ್ಸ್​​ ಗಾಗಿ ಈ ರೀತಿ ಮಾಡುತ್ತಿದ್ದರೆ ಹುಷಾರಾಗಿರಿ. ಇಲ್ಲ ಅಂದ್ರೆ ನಿಮ್ಮ ಮೇಲೂ ಕೇಸ್ ಬೀಳುವುದು ಗ್ಯಾರೆಂಟಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ಬೌಲರ್ ಜೊತೆ ಪಿಚ್ ಮಧ್ಯದಲ್ಲೇ ಜಗಳಕ್ಕಿಳಿದ ವೈಭವ್ ಸೂರ್ಯವಂಶಿ; ವಿಡಿಯೋ ವೈರಲ್ – Kannada News | U19 Asia Cup Final: India vs Pakistan Verbal Spat, Vaibhav Suryavanshi, Ali Raza Controversy

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಭಾನುವಾರ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 191 ರನ್​ಗಳಿಂದ ಸೋತ ಭಾರತ ಚಾಂಪಿಯನ್ ಪಟ್ಟಕ್ಕೇರುವ ಅವಕಾಶದಿಂದ ವಂಚತಿವಾಯಿತು.ಭಾನುವಾರ ನಡೆದ ಅಂಡರ್-19 ಏಷ್ಯಾಕಪ್‌ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಭಾರತಕ್ಕೆ ಗೆಲ್ಲಲು 348 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ತಂಡ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ತಂಡವು 26.2 ಓವರ್‌ಗಳಲ್ಲಿ ಕೇವಲ 156 ರನ್‌ಗಳಿಗೆ ಆಲೌಟ್ ಆಯಿತು.

ಇನ್ನು ಇದೇ ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಯುದ್ಧವೇ ನಡೆಯಿತು. ಭಾರತದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಐದನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು. ಇತ್ತ ವೈಭವ್ ವಿಕೆಟ್ ಪಡೆದ ಪಾಕಿಸ್ತಾನಿ ವೇಗದ ಬೌಲರ್ ಅಲಿ ರಜಾ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡುವುದರ ಜೊತೆಗೆ ಪೆವಿಲಿಯನ್​ತ್ತ ಹೋಗುತ್ತಿದ್ದ ವೈಭವ್ ಬಳಿ ಏನನ್ನೋ ಹೇಳಿದರು. ಇದರಿಂದ ಕೆರಳಿದ ವೈಭವ್ ಕೂಡ ಪಾಕ್ ವೇಗಿಗೆ ತಕ್ಕ ಪ್ರತ್ಯುತ್ತರ ನೀಡಿ ಪೆವಿಲಿಯನ್ ಸೇರಿಕೊಂಡರು. ಇದೀಗ ಇವರಿಬ್ಬರ ನಡುವೆ ವಾಗ್ಯುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Source link

ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಚಿತ್ತಗಾಂಗ್​ನಲ್ಲಿ ಅನಿರ್ದಿಷ್ಟಾವಧಿ ವೀಸಾ ಸೇವೆ ನಿಲ್ಲಿಸಿದ ಭಾರತ – Kannada News | Bangladesh violence, India suspends its visa operations for indefinite period in Chittagong

ಢಾಕಾ, ಡಿಸೆಂಬರ್ 21: ಮತ್ತೆ ತೀವ್ರ ರೀತಿಯಲ್ಲಿ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಭಾರತವು ಚಿತ್ತಗಾಂಗ್ ನಗರದಲ್ಲಿ ತನ್ನ ವೀಸಾ ಆಪರೇಷನ್ಸ್ ಅನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಳಿಸಿದೆ. ಚಿತ್ತಗಾಂಗ್ ನಗರದಲ್ಲಿ ಭಾರತೀಯ ಉಪರಾಯಭಾರ ಕಚೇರಿಯ (Chittagong Indian Assistant High Commission) ಮೇಲೆ ಬಾಂಗ್ಲಾ ಪ್ರತಿಭಟನಕಾರರು ದಾಳಿ ನಡೆಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೃಹತ್ ಸಂಖ್ಯೆಯಲ್ಲಿದ್ದ ಜನರ ಗುಂಪು ಭಾರತದ ಈ ರಾಜತಾಂತ್ರಿಕ ಕಚೇರಿಗೆ ನುಗ್ಗಲು ಯತ್ನಿಸಿತ್ತಾದರೂ ಭದ್ರತಾ ಪಡೆಗಳು ಅದನ್ನು ವಿಫಲಗೊಳಿಸಿದ್ದವು. ಈಗ ಮುನ್ನೆಚ್ಚರಿಕೆಯಾಗಿ ಕಚೇರಿಯಲ್ಲಿನ ವೀಸಾ ಕಾರ್ಯವನ್ನು ಮುಂದಿನ ಸೂಚನೆಯವರೆಗೂ ನಿಲ್ಲಿಸಲಾಗಿದೆ.

ಬಾಂಗ್ಲಾ ಹೊತ್ತಿ ಉರಿಯುತ್ತಿರುವುದು ಯಾಕೆ?

ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿ ಎಂಬುವವರನ್ನು ಮುಸುಕುಧಾರಿ ವ್ಯಕ್ತಿಗಳು ಡಿಸೆಂಬರ್ 12ರಂದು ಢಾಕಾದ ಬಿಜಯ್​ನಗರ್ ಬಳಿ ತಲೆಗೆ ಗುಂಡಿಕ್ಕಿದ್ದರು. ಸಿಂಗಾಪುರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾರೂ ಚಿಕಿತ್ಸೆ ಫಲಕಾರಿಯಾಗದೇ ಆತ ಡಿ. 18ರಂದು ನಿಧನವೊಂದಿದ್ದ. ಅದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ.

ಇದನ್ನೂ ಓದಿ: ದೇವರ ಹಾಡು ಹಾಡಿದ್ದಕ್ಕೆ ಕ್ರುದ್ಧಗೊಂಡ ಶಾಲಾ ಸಹ-ಮಾಲೀಕ; ಬಂಗಾಳಿ ಗಾಯಕಿ ಮೇಲೆ ಹಲ್ಲೆಗೆ ಯತ್ನ?

ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಚಿತ್ತಾಂಗ್, ಖುಲ್ನಾ ಮತ್ತು ರಾಜಷಾಹಿಯಲ್ಲಿರುವ ಉಪ ರಾಯಭಾರ ಕಚೇರಿಗಳ ಬಳಿ ತೀವ್ರ ಸ್ವರೂಪದಲ್ಲಿ ಪ್ರತಿಭಟನೆಗಳು ನಡೆದಿವೆ. ಬಂದರು ನಗರಿಯಾದ ಚಿತ್ತಗಾಂಗ್​ನ ಭಾರತದ ಉಪರಾಯಭಾರ ಕಚೇರಿಯಲ್ಲಿ ದುರುಳರು ದಾಂದಲೆ ನಡೆಸಲು ಯತ್ನಿಸಿದ ಹಿನ್ನೆಲೆಯಲ್ಲಿ ಇವತ್ತಿನಿಂದಲೇ ಎಲ್ಲಾ ವೀಸಾ ಸಂಬಂಧಿತ ಕೆಲಸಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಹತ್ಯೆಯಾದ ಷರೀಫ್ ಉಸ್ಮಾನ್ ಹದಿ ಕಳೆದ ವರ್ಷ ಶೇಖ್ ಹಸೀನಾ ವಿರುದ್ಧ ಎದ್ದ ದಂಗೆಯ ರೂವಾರಿ. ಈತನ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಮುಂಬರುವ ಚುನಾವಣೆಯಲ್ಲೂ ಈತ ಸ್ಪರ್ಧಿಸಿದ್ದ. ಈತನ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂಬುದು ಅಲ್ಲಿನ ಕೆಲವರ ಆರೋಪ. ಈ ಹತ್ಯೆ ಘಟನೆಯನ್ನು ಪಾಕ್ ಪ್ರಚೋದಿತ ಶಕ್ತಿಗಳು ತಮ್ಮ ದುರುದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಇದೆ. ಹಿಂದೂ ಧರ್ಮೀಯ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಹಲ್ಲೆ ಎಸಗಿ ಬೆಂಕಿಯಿಂದ ಸುಟ್ಟುಹಾಕಿದ ಘಟನೆಯೂ ಸೇರಿದಂತೆ ಭಾರತ ಹಾಗೂ ಹಿಂದೂ ವಿರೋಧಿ ಕೃತ್ಯಗಳು ಪ್ರತಿಭಟನೆಯಲ್ಲಿ ಹೆಚ್ಚಾಗಿ ಜರುಗುತ್ತಿವೆ. ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎನ್ನುವಂತೆ ದುಷ್ಟ ಶಕ್ತಿಗಳು ಬಿಂಬಿಸಲು ಯತ್ನಿಸುತ್ತಿವೆ.

ಇದನ್ನೂ ಓದಿ: ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ, 10 ಜನರಿಗೆ ಗಾಯ

ಹದಿಯ ಅಂತ್ಯ ವಿಧಿ ಕಾರ್ಯಕ್ರಮದಲ್ಲಿ ಸಾವಿರಾರು ಜನರು ನೆರೆದಿದ್ದರು. ಅಲ್ಲಿ ಭಾರತ ವಿರೋಧಿ ಘೋಷಣೆಗಳು ಜೋರಾಗಿ ಮೊಳಗಿವೆ. ಕಾಶ್ಮೀರದಲ್ಲಿ ಉಗ್ರಗಾಮಿಗಳು ಅನುಸರಿಸುತ್ತಿದ್ದ ತಂತ್ರಗಳೇ ಅಲ್ಲಿ ಕಾಣಿಸುತ್ತಿವೆ. ‘ಡೆಲ್ಲಿ ಆರ್ ಢಾಕಾ- ಢಾಕಾ ಢಾಕಾ’ (ಡೆಲ್ಲಿಯೋ ಢಾಕಾವೋ- ಢಾಕಾ ಢಾಕಾ) ಎಂಬಿತ್ಯಾದಿ ಭಾರತ ವಿರೋಧಿ ಘೋಷಣೆಗಳು ಷರೀಫ್ ಉಸ್ಮಾನ್ ಹದಿ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಕೇಳಿವೆ. ಶೇಖ್ ಹಸೀನಾ ನಿರ್ಗಮನದ ಬಳಿಕ ಬಾಂಗ್ಲಾದೇಶದಲ್ಲಿ ಪಾಕಿಸ್ತಾನೀ ಪರ ಶಕ್ತಿಗಳ ಕೈ ಮೇಲಾಗಿರುವುದು ಸ್ಪಷ್ಟವಾಗಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:37 pm, Sun, 21 December 25

Source link

NZ vs WI: ಐಪಿಎಲ್​ನಲ್ಲಿ ಹರಾಜಾಗದ ಆಟಗಾರ ಒಂದೇ ಪಂದ್ಯದಲ್ಲಿ 327 ರನ್ ಚಚ್ಚಿದ

Source link

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ

ಮಲಯಾಳಂ ಸ್ಟಾರ್ ನಟ ಮೋಹನ್​​ಲಾಲ್ (Mohanlal) ನಟಿಸಿ, ನಂದ ಕಿಶೋರ್ ನಿರ್ದೇಶನ ಮಾಡಿರುವ ‘ವೃಷಭ’ ಸಿನಿಮಾದ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಯಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ ಅವರು, ತಾವು ಮುಂಬೈಗೆ, ಮಾಜಿ ಸಿಎಂ ಮಗಳ ಮದುವೆಗೆ ಹೋಗಿದ್ದಾಗ ಅಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ನಡೆದ ಚರ್ಚೆಯ ಬಗ್ಗೆ ಹೇಳಿದರು. ಬಾಲಿವುಡ್​ನ ಕೆಲವರು ನನ್ನೊಂದಿಗೆ ಅಂದು ಮಾತನಾಡಿದರು, ‘ಬಾಲಿವುಡ್ ಬಿದ್ದು ಹೋಗಿದೆ, ಆದರೆ ಸ್ಯಾಂಡಲ್​​ವುಡ್ ಬೆಳೆದು ನಿಂತಿದೆ’ ಎಂದು ಅವರು ಹೇಳಿದರೆಂದು ಡಿಕೆಶಿ ಹೇಳಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ, ವಿಡಿಯೋ ಇಲ್ಲಿದೆ – Kannada News | Shivalinga Found during Cleaning Oldest Kalyani at devanahalli

ದೇವನಹಳ್ಳಿ, (ಡಿಸೆಂಬರ್ 21): ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ (Bengaluru Rural)   ಜಿಲ್ಲೆ ದೇವನಹಳ್ಳಿ  (Devanahalli) ಪಟ್ಟಣದ ಪುಟ್ಟಪನಗುಡಿ ಬೀದಿಯಲ್ಲಿರುವ ಪುರಾತನ ಕಾಲದ ಕಲ್ಯಾಣಿಯ ಆಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಸ್ಥಳೀಯರು ಸೇರಿಕೊಂಡು ಕಲ್ಯಾಣಿಯಲ್ಲಿ ತುಂಬಿಕೊಂಡಿದ್ದ ಹೂಳು ತೆಗೆದು ಸ್ವಚ್ಚತೆ ಮಾಡುತ್ತಿದ್ದು, ನೀರು ಖಾಲಿಯಾಗುತ್ತಿದ್ದಂತೆ ಕಲ್ಯಾಣಿ ಮಧ್ಯ ಭಾಗದಲ್ಲಿ ಶಿವಲಿಂಗ ಕಂಡುಬಂದಿದೆ. ಶಿವಲಿಂಗ ಕಣ್ಣಿಗೆ ಬೀಳುತ್ತಿದ್ದಂತೆಯೇ ಸ್ಥಳಿಯರು ಅಚ್ಚರಿಗೊಂಡು ಪೂಜೆ ಸಲ್ಲಿಸಿದರು.

Source link

Vastu Tips for Money: ಪರ್ಸ್‌ನಲ್ಲಿ ಈ 4 ವಸ್ತುಗಳಿದ್ದರೆ ಜೀವನದಲ್ಲಿ ಹಣಕ್ಕೆಂದು ಕೊರತೆಯಾಗದು! – Kannada News | Vastu Tips for Money: Keep These 4 Items in Your Wallet to Attract Wealth

ಎಷ್ಟೇ ಕಷ್ಟ ಪಟ್ಟು ದುಡಿದರೂ, ಹಣ ಕೈಯಲ್ಲಿ ಉಳಿಯುವುದೇ ಇಲ್ಲ, ಜೊತೆಗೆ ಸಾಲವೂ ಹೆಚ್ಚಾಗುತ್ತಾ ಹೋಗುತ್ತಿದೆ ಎಂಬ ಸಮಸ್ಯೆಯನ್ನು ನೀವೂ ಕೂಡ ಅನುಭವಿಸುತ್ತಿದ್ದೀರಾ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವಾಸ್ತು ಸಲಹೆ ಅನುಸರಿಸುವುದು ಅಗತ್ಯ. ಕೆಲವು ಸರಳ ಪರಿಹಾರಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಜೀವನದಲ್ಲಿ ಪ್ರಗತಿಗೆ ಅನೇಕ ಅವಕಾಶಗಳನ್ನು ತರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಈ ನಾಲ್ಕು ವಸ್ತುಗಳನ್ನು ನಿಮ್ಮ ಪರ್ಸ್​ನಲ್ಲಿ ಇಟ್ಟುವುದರಿಂದ ನೀವು ಆರ್ಥಿಕ ಸಮಸ್ಯೆಯಿಂದ ಹೊರಬರಬಹುದಾಗಿದೆ.

ಅಕ್ಕಿ ಕಾಳು:

ವಾಸ್ತು ಶಾಸ್ತ್ರದ ಪ್ರಕಾರ, ಅಕ್ಕಿ ಕಾಳುಗಳನ್ನು ಬೆಳವಣಿಗೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಯಾವಾಗಲೂ ನಿಮ್ಮ ಪರ್ಸ್​ನಲ್ಲಿ ಅಕ್ಕಿ ಕಾಳುಗಳನ್ನು ಇರಿಸಿ. ಈ ಸರಳ ಪರಿಹಾರವು ನಿಮಗೆ ಲಕ್ಮೀ ದೇವಿಯ ಆಶೀರ್ವಾದವನ್ನು ತರುತ್ತದೆ, ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ ಮತ್ತು ನಿಮ್ಮ ಪರ್ಸ್​ನಲ್ಲಿ ಯಾವಾಗಲೂ ಹಣದಿಂದ ತುಂಬಿರುತ್ತದೆ.

ಕುಬೇರ ಯಂತ್ರ:

ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯು ಸಂಪತ್ತಿನ ದೇವತೆಯಾಗಿರುವಂತೆ, ಕುಬೇರನನ್ನು ಸಹ ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಯಾವಾಗಲೂ ಕುಬೇರ ಯಂತ್ರವನ್ನು ನಿಮ್ಮ ಪರ್ಸ್​ನಲ್ಲಿ ಇರಿಸಿ, ಅದು ನಿಮ್ಮ ಕೈಯಲ್ಲಿ ಹಣವನ್ನು ಉಳಿಸಿಕೊಳ್ಳುತ್ತದೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಗೋಮತಿ ಚಕ್ರ:

ಗೋಮತಿ ಚಕ್ರವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ, ಆದ್ದರಿಂದ ವಾಸ್ತು ಶಾಸ್ತ್ರವು ಗೋಮತಿ ಚಕ್ರವನ್ನು ನಿಮ್ಮ ಪರ್ಸ್​ನಲ್ಲಿ ಇಟ್ಟುಕೊಳ್ಳಲು ಸಲಹೆ ನೀಡುತ್ತದೆ. ನಿಮ್ಮ ಕೈಚೀಲದಲ್ಲಿ ಗೋಮತಿ ಚಕ್ರವಿದ್ದರೆ, ನೀವು ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ.

ಬೆಳ್ಳಿ ನಾಣ್ಯ:

ವಾಸ್ತು ಶಾಸ್ತ್ರವು ಹೇಳುವಂತೆ, ಬೆಳ್ಳಿ ನಾಣ್ಯವನ್ನು ಯಾವಾಗಲೂ ಪರ್ಸ್​ನಲ್ಲಿ ಇಟ್ಟುಕೊಳ್ಳಬೇಕು, ಏಕೆಂದರೆ ಅದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ ಮತ್ತು ಪರ್ಸ್​ ಹಣದಿಂದ ತುಂಬಿರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND-W vs SL-W: ಲಂಕಾ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ; ಪ್ಲೇಯಿಂಗ್ 11 ಹೀಗಿದೆ – Kannada News | India Women vs Sri Lanka T20 Series Begins: World Cup Prep, Toss Update

ಭಾರತ ಹಾಗೂ ಶ್ರೀಲಂಕಾ ಮಹಿಳಾ ತಂಡಗಳು ನಡುವಿನ ಟಿ20 ಸರಣಿ ಇಂದಿನಿಂದ ಆರಂಭವಾಗಿದೆ. ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಭಾರತೀಯ ಮಹಿಳಾ ತಂಡ ಮೈದಾನಕ್ಕಿಳಿಯುತ್ತಿರುವುದು ಇದೇ ಮೊದಲು. ಹೀಗಾಗಿ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಉಭಯ ತಂಡಗಳ ನಡುವಿನ ಈ ಮೊದಲ ಪಂದ್ಯ ವಿಶಾಖಪಟ್ಟಣಂನಲ್ಲಿರುವ ACA-VDCA ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದೊಂದಿಗೆ ಭಾರತೀಯ ಮಹಿಳಾ ತಂಡವು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ತನ್ನ ಔಪಚಾರಿಕವಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

Source link

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್

ಬಿಗ್​​ಬಾಸ್ (Bigg Boss) ಮನೆಯಲ್ಲಿ ಭಾನುವಾರದ ಎಪಿಸೋಡ್ ಫನ್ ಎಪಿಸೋಡ್ ಆಗಿರುತ್ತದೆ. ಸುದೀಪ್ ಅವರು ಸ್ಪರ್ಧಿಗಳನ್ನು ನಗಿಸುವ ಜೊತೆಗೆ ತಾವೂ ನಕ್ಕು, ಪ್ರೇಕ್ಷಕರನ್ನೂ ನಗಿಸಿ ಕೊನೆಗೆ ಒಬ್ಬರನ್ನೋ ಅಥವಾ ಇಬ್ಬರನ್ನೋ ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾರೆ. ಇದೀಗ ಮತ್ತೊಂದು ಭಾನುವಾರದ ಎಪಿಸೋಡ್ ಬಂದಿದೆ. ಸುದೀಪ್, ಸ್ಪರ್ಧಿಗಳೊಡನೆ ತುಸು ಫನ್ ಮಾಡಿದ್ದಾರೆ. ಗಿಲ್ಲಿ ಹಾಗೂ ರಜತ್ ಇಬ್ಬರಿಗೂ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ. ಅವರು ಮಾಡುವ ಕಾಮಿಡಿಗೆ ಸುದೀಪ್ ಸೇರಿ, ಇಡೀ ಮನೆ ಮಂದಿಯೇ ನಕ್ಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version