150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ ಸಂಜಯ್ ಮಿಶ್ರಾ
ಬಾಲಿವುಡ್ನ (Bollywood) ಖ್ಯಾತ ನಟ ಸಂಜಯ್ ಮಿಶ್ರಾ (Sanjay Mishra) ಅವರ ಬಳಿ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ. ಹಾಗಿದ್ದರೂ ಕೂಡ ಅವರು ಸರಳ ಜೀವನವನ್ನು ಮರೆತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರು ಇತ್ತೀಚೆಗೆ ಹಂಚಿಕೊಂಡ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಮಳೆಗಾಲ ಆರಂಭ ಆಗುವುದಕ್ಕೂ ಮುನ್ನ ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಸಿನಿಮಾ ಕೆಲಸಗಳಿಂದ ಬಿಡುವು ಪಡೆದಾಗ ಅವರು ತೋಟದ ಮನೆಯಲ್ಲಿ ಕಾಲ ಕಳೆಯುತ್ತಾರೆ. ಅಲ್ಲಿರುವ ಶಿವನ ದೇವಸ್ಥಾನದ ಕೆಲಸಗಳನ್ನು ಅವರು ಮಾಡಿದ್ದಾರೆ….