ಪಹಲ್ಗಾಮ್ ದಾಳಿ ತನಿಖೆಯಲ್ಲಿ ಮಹತ್ವದ ಸುಳಿವು: ಉಗ್ರರು ಬಳಸಿದ್ದ ಫೋನ್‌ಗೆ ಪಾಕಿಸ್ತಾನ ಬ್ಯಾಂಕ್ ಲಿಂಕ್
ಶ್ರೀನಗರ, ಜೂನ್ 01: ಕಳೆದ ವರ್ಷ ದಕ್ಷಿಣ ಕಾಶ್ಮೀರದ ಪಹಲ್ಗಾಮ್(Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಪ್ರಮುಖ ಸುಳಿವು ಲಭ್ಯವಾಗಿದೆ. ದಾಳಿ ನಡೆಸಿದ ಉಗ್ರರು ಬಳಸಿದ್ದ ಎರಡು ಪ್ರಮುಖ ಮೊಬೈಲ್ ಫೋನ್‌ಗಳ ಮೂಲವನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿ ಒಂದು ಫೋನ್‌ಗೆ ಪಾಕಿಸ್ತಾನದ ಕರಾಚಿ ಮೂಲದ ಪ್ರಮುಖ ಬ್ಯಾಂಕ್‌ವೊಂದು ಹಣಕಾಸು ನೆರವು ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ . ಈ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ದಾಳಿಕೋರರ…