ಡ್ರಿಂಕ್ಸ್ ಅಂದ್ಕೊಂಡು ಸ್ಪಿರಿಟ್ ಕುಡಿದ್ರಾ? ಐವರು ಸ್ನೇಹಿತರ ಪೈಕಿ ಇಬ್ಬರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ – Kannada News | Koppal Tragedy: Friends Party Kills Two, One Critical; Survivors Under Suspicion

ಕೊಪ್ಪಳ, ಫೆಬ್ರವರಿ 08: ಅವರೆಲ್ಲಾ ಒಂದೇ ಗ್ರಾಮದವರು. ಅದರಲ್ಲೂ ಐವರು ಸ್ನೇಹಿತರು. ನಾಲ್ಕು ದಿನಗಳ ಹಿಂದೆ ಪಾರ್ಟಿ ಮಾಡಿದ್ದರು. ಐವರಲ್ಲಿ ಇಬ್ಬರು ಸಾವನ್ನಪ್ಪಿದ್ದರೆ (death), ಇನ್ನೊಬ್ಬ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಬಣ್ಣಕ್ಕೆ ಮಿಕ್ಸ್ ಮಾಡುವ ಸ್ಪಿರಿಟ್‌ (Spirit) ಕುಡಿದಿದ್ದಾರೆ ಎನ್ನಲಾಗುತ್ತಿದೆ. ಮತ್ತಿಬ್ಬರು ಅರೆಸ್ಟ್ ಆಗಿದ್ದಾರೆ. ಪಾರ್ಟಿಯಲ್ಲಿ ಇಬ್ಬರು ಸ್ಪಿರಿಟ್ ಕುಡಿಯದಿರುವುದು ಸದ್ಯ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಅಮರಯ್ಯ ಹಿರೇಮಠ, ರಮೇಶ್ ಹೊಸಹಳ್ಳಿ, ಶರಣಪ್ಪ ಹಂಚಿನಾಳ, ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಕೊಪ್ಪಳ ತಾಲೂಕಿನ ಕೂಕನಪಳ್ಳಿ ನಿವಾಸಿಗಳು. ಇವರ ಪೈಕಿ ಅಮರಯ್ಯ ಹಿರೇಮಠ (35) ಮತ್ತು ರಮೇಶ್ ಹಿರೇಮಠ (25) ಸಾವನ್ನಪ್ಪಿದ್ದಾರೆ. ಶರಣಪ್ಪ ಹಂಚಿನಾಳ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.

ನಡೆದಿದ್ದೇನು? 

ಫೆಬ್ರವರಿ 4ರಂದು ಅಮರಯ್ಯ, ರಮೇಶ್ ಹಾಗೂ ಶರಣಪ್ಪ ಸ್ಪಿರಿಟ್ ಸೇವನೆ ಮಾಡಿದ್ದರು. ಸ್ಪಿರಿಟ್ ಸೇವನೆ ಮಾಡಿದ ಮರುದಿನವೇ ಅಸ್ವಸ್ಥರಾದ ಹಿನ್ನಲೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ನಿನ್ನೆ ರಮೇಶ್ ಹೊಸಹಳ್ಳಿ ಹಾಗೂ ತಡರಾತ್ರಿ ಅಮರಯ್ಯ ಹಿರೇಮಠ ಮೃತಪಟ್ಟಿದ್ದಾರೆ. ಶರಣಪ್ಪ ಹಂಚಿನಾಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಒಟ್ಟು ಐವರು ಸ್ನೇಹಿತರು ಪಾರ್ಟಿ ಮಾಡಿದ್ದರು. ಆದರೆ ಇದರಲ್ಲಿ ಮಾರುತಿ ಬಂಡಿ ಹಾಗೂ ಶರಣಪ್ಪ ಗುರಿಕಾರ ಸ್ಪಿರಿಟ್ ಸೇವನೆ ಮಾಡಿರಲಿಲ್ಲ. ಹೀಗಾಗಿ ಈ ಘಟನೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ

ಮೃತ ರಮೇಶ್ ತಂದೆ ಯಮನೂರಪ್ಪ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಸ್ಪಿರಿಟ್ ನೀಡಿರುವ ಆರೋಪದಡಿ ಮಾರುತಿ ಹಾಗೂ ಶರಣಪ್ಪ ಗುರಿಕಾರನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಮಾರುತಿಗೆ ಸ್ಪಿರಿಟ್ ಸಿಕ್ಕಿದ್ದು ಹೇಗೆ ಎನ್ನುವುದು ಸದ್ಯದ ಪ್ರಶ್ನೆ. ಮಾರುತಿ ಹೆದ್ದಾರಿ ಪಕ್ಕದಲ್ಲಿ ಲಾರಿಗಳ ವಾಶಿಂಗ್ ಕೆಲಸ ಮಾಡುತ್ತಿದ್ದ. ಮೂಲತಃ ಕೊಪ್ಪಳ ತಾಲೂಕಿನ ದದೇಗಲ್ ನಿವಾಸಿಯಾಗಿದ್ದು, ಆದರೆ ಕೂಕನಪಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದ.

ಇಬ್ಬರ ಸಾವಿನ ಹಿಂದೆ ಮತ್ತೊಂದು ಟ್ವಿಸ್ಟ್

ಈ ಘಟನೆ ಬಗ್ಗೆ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಇವರ ಜೊತೆಗಿದ್ದ ರಮೇಶ್ ಹೊಸಹಳ್ಳಿಯನ್ನ ವಿಚಾರಣೆ ಮಾಡಿದ್ದಾರೆ. ಯಾವುದೇ ದೂರು ದಾಖಲಾಗದಿದ್ದರೂ ಮುನಿರಾಬಾದ್ ಪೊಲೀಸರು ವಿಚಾರಣೆ ಮಾಡುತ್ತಾರೆ. ಆದರೆ ವಿಚಾರಣೆಗೆ ಹೋಗಿ ಬಂದ ಬಳಿಕ ರಮೇಶ್ ಅದೇ ಸ್ಪಿರಿಟ್ ಕುಡಿದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾನೆ. ನಿನ್ನೆ ಮುಂಜಾನೆ ಆತ ಸಾವನ್ನಪ್ಪಿದ್ದಾನೆ. ಘಟನೆ ನಡೆದು ಎರಡು-ಮೂರು ದಿನಗಳಾಗಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದು ಕೂಡ ಹಲವು ಅನುಮಾನಕ್ಕೆ ಕಾರಣವಾಗಿತ್ತು.

ರಮೇಶ್​ ಏಕೆ ಪೊಲೀಸರ ವಿಚಾರಣೆ ಬಳಿಕ ಮೃತಪಟ್ಟ ಅನ್ನೋದು ಕೂಡ ದೊಡ್ಡ ಪ್ರಶ್ನೆ ಆಗಿದೆ. ಈ ಐವರ ಪಾರ್ಟಿ ಹಿಂದೆ ಇರುವ ಉದ್ದೇಶ ಏನೂ ಅನ್ನೋದು ನಿಗೂಢವಾಗಿದೆ. ಸ್ಪಿರಿಟ್ ಆತನಿಗೆ ಸಿಕ್ಕಿದ್ದು ಹೇಗೆ ಅನ್ನೋದು ಪ್ರಶ್ನೆಯಾಗಿದೆ. ಇನ್ನು ಮಾರುತಿ ಪಕ್ಕಾ ಪ್ಲ್ಯಾನ್ ಮಾಡಿ ಸ್ಪಿರಿಟ್ ಸಂಗ್ರಹ ಮಾಡಿದ್ದ ಎನ್ನಲಾಗುತ್ತಿದೆ. ಕಳೆದ ಹದಿನೈದು ದಿನಗಳ ಹಿಂದೆಯೇ ಆತ ಸ್ಪಿರೀಟ್ ಸಂಗ್ರಹಿಸಿದ್ದ ಎನ್ನಲಾಗಿದೆ. ಕೂಕನಪಳ್ಳಿ ಗ್ರಾಮದಲ್ಲಿ ಮೊದಲೇ ಆತ ಸ್ಪಿರಿಟ್ ಸಂಗ್ರಹ ಮಾಡಿದ್ದ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಮುಗಿಲು ಮುಟ್ಟಿದೆ ಕುಟುಂಬಸ್ಥರ ಆಕ್ರಂದನ 

ಇನ್ನು ಪೊಲೀಸರ ಮಾಹಿತಿ ಪ್ರಕಾರ, ಗೋವಾ ಡ್ರಿಂಕ್ಸ್ ಅಂದುಕೊಂಡು ಸ್ಪಿರಿಟ್ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಬಣ್ಣಕ್ಕೆ ಮಿಕ್ಸ್ ಮಾಡುವ ಸ್ಪಿರಿಟ್ ಅನ್ನು ಲಾರಿ ಚಾಲಕ ಮಾರುತಿ ಬಳಿ ಕೊಟ್ಟಿದ್ದ. ಅದೇ ಬಾಟಲ್​ ಅನ್ನು ಗೋವಾದ ಕಾಜು ಡ್ರಿಂಕ್ಸ್ ಎಂದು ಕುಡಿದಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರು ಮೃತಪಟ್ಟಿದ್ದು, ಇಬ್ಬರ ಮನೆಯಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮೃತ ಅಮರಯ್ಯ ಕೆಇಬಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡತಿದ್ದ. ರಮೇಶ್ ಹೊಸಹಳ್ಳಿ ಮದುವೆ ವಯಸ್ಸಿಗೆ ಬಂದಿದ್ದ. ತಂದೆ ತಾಯಿಗೆ ಒಬ್ಬನೇ ಮಗ. ಮಗನನ್ನ ಕಳೆದುಕೊಂಡ ಹೆತ್ತವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ: 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ

ಒಟ್ಟಾರೆ ಸ್ಪೀರಿಟ್ ಕುಡಿದು ಇಬ್ಬರು ಸಾನ್ನಪ್ಪಿರುವ ಪ್ರಕರಣ ಇದೀಗ ನಿಗೂಢವಾಗಿದೆ. ಸ್ಪಿರಿಟ್ ಕುಡಿದೆ ಸಾವನ್ನಪ್ಪಿದ್ರಾ ಅಥವಾ ಕುಡಿಯೋದ್ರಲ್ಲಿ ಏನಾದರೂ ಮಿಕ್ಸ್ ಮಾಡಿದಾರಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಸ್ಪಿರಿಟ್ ಸಿಕ್ಕಿದ್ದು ಕೂಡ ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದ್ದು, ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:08 pm, Sun, 8 February 26

Source link

ಈಗ ನನಗೆ ಜ್ಞಾನೋದಯವಾಗಿದೆ, ಇನ್ಮೇಲೆ ನಾನು ಕೊಡೋದೆ ಬೇರೆ: ಆರ್ ಚಂದ್ರು – Kannada News | R Chandru talks about his realization and upcoming movies

ಆರ್ ಚಂದ್ರು (R Chandru) ಕನ್ನಡದ ಜನಪ್ರಿಯ ನಿರ್ದೇಶಕ. ‘ತಾಜ್ ಮಹಲ್’, ‘ಕಬ್ಜ’ ಸೇರಿದಂತೆ ಕೆಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೆ ಆರ್ ಚಂದ್ರು ಅವರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಚಂದ್ರು, ‘ನಾನು ನಿರ್ದೇಶಕ ಆಗಿರುವ ಜೊತೆಗೆ ಕೃಷಿಕ ಸಹ ಹೌದು. ದಾಳಿಂಬೆ, ದ್ರಾಕ್ಷಿ, ರೇಷ್ಮೆ ಇನ್ನೂ ಕೆಲವು ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಕೃಷಿಯ ಜೊತೆಗೆ ಸಿನಿಮಾ ಅನ್ನೂ ಸಹ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಇಷ್ಟು ದಿನ ಬೇರೆಯವರಿಂದ ಕಲಿಯುತ್ತಿದ್ದೆ, ಈಗ ನನಗೆ ಜ್ಞಾನೋದಯವಾಗಿದೆ, ಇನ್ನು ಮುಂದೆ ನಾನು ಕೊಡುವ ಕಂಟೆಂಟ್, ನಾನು ಇಡುವ ಹೆಜ್ಜೆಗಳು ಬೇರೆ ರೀತಿ ಇರುತ್ತವೆ’ ಎಂದಿದ್ದಾರೆ ಆರ್ ಚಂದ್ರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ENG vs NEP: ಕೊನೆಯ 3 ಓವರ್​ಗಳಲ್ಲಿ ಆಂಗ್ಲರನ್ನು ನಡುಗಿಸಿದ ನೇಪಾಳ – Kannada News | Nepal’s Thrilling 4 Run Loss to England in 2026 T20 World Cup Shocker

2026 ರ ಟಿ20 ವಿಶ್ವಕಪ್‌ನ (T20 World Cup 2026) ಐದನೇ ಪಂದ್ಯದಲ್ಲಿ ನೇಪಾಳ ತಂಡ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್‌ (Nepal vs England) ತಂಡಕ್ಕೆ ಕಠಿಣ ಸವಾಲು ನೀಡಿತು. ಇಂಗ್ಲೆಂಡ್ ನೀಡಿದ 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೇಪಾಳ, ಕೊನೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಡಿತು. ಆದರೆ, ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ನ ಬಿಗಿಯಾದ ಬೌಲಿಂಗ್‌ನಿಂದ ನೇಪಾಳ 4 ರನ್‌ಗಳಿಂದ ಸೋಲಬೇಕಾಯಿತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 7 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ತಂಡದ ಪರ ಜಾಕೋಬ್ ಬೆಥೆಲ್ 55 ಮತ್ತು ಹ್ಯಾರಿ ಬ್ರೂಕ್ 53 ರನ್ ಗಳಿಸಿದರು. ನೇಪಾಳ ಪರ ದೀಪೇಂದ್ರ ಸಿಂಗ್ ಐರಿ ಮತ್ತು ನಂದನ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

ಆರ್ಚರ್​ಗೆ 1 ಓವರ್​ನಲ್ಲಿ 3 ಸಿಕ್ಸರ್

ಈ ಗುರಿ ಬೆನ್ನಟ್ಟಿದ ನೇಪಾಳ 17 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 139 ರನ್ ಕಲೆಹಾಕಿತ್ತು. ಅಂದರೆ ಕೊನೆಯ 3 ಓವರ್​ಗಳಲ್ಲಿ ನೇಪಾಳದ ಗೆಲುವಿಗೆ 45 ರನ್​ಗಳು ಬೇಕಾಗಿದ್ದವು. ಇಂಗ್ಲೆಂಡ್​ನ ಬೌಲಿಂಗ್ ವಿಭಾಗವನ್ನು ನೋಡಿದರೆ, ನೇಪಾಳಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿತ್ತು. ಇದಕ್ಕೆ ಪೂರಕವಾಗಿ 18ನೇ ಓವರ್ ಬೌಲ್ ಮಾಡಲು ಬಂದಿದ್ದು, ವಿಶ್ವದ ಅಗ್ರಗಣ್ಯ ವೇಗದ ಬೌಲರ್​ಗಳಲ್ಲಿ ಒಬ್ಬರಾದ ಜೋಪ್ರಾ ಆರ್ಚರ್. ಆದರೆ ಆರ್ಚರ್​ನಂತಹ ಘಾತುಕ ವೇಗಿಗೂ ನೇಪಾಳದ ಬ್ಯಾಟ್ಸ್‌ಮನ್​ಗಳು ಬೆವರಿಳಿಸಿದರು.

ENG vs NEP: ಕ್ರಿಕೆಟ್ ಜನಕ ಇಂಗ್ಲೆಂಡ್​ಗೆ ಸೋಲಿನ ಭಯ ಹುಟ್ಟಿಸಿ ಸೋತ ಕ್ರಿಕೆಟ್ ಶಿಶು ನೇಪಾಳ

ಈ ಓವರ್​ನ ಮೊದಲ ಎಸೆತ ವೈಡ್ ಆದರೆ, ನಂತರದ ಎಸೆತವನ್ನು ಆರಿಫ್ ಸಿಕ್ಸರ್​ಗಟ್ಟಿದರು. ಆದರೆ ನಂತರದ ಎಸೆತದಲ್ಲಿ ಔಟಾದರು. ಆ ನಂತರ ಲೋಕೇಶ್ ಓವರ್​ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಮೂಲಕ ಈ ಓವರ್​ನಲ್ಲಿ 22 ರನ್ ಬಂದವು. ಹೀಗಾಗಿ ಕೊನೆಯ 2 ಓವರ್​ಗಳಲ್ಲಿ ನೇಪಾಳ ಗೆಲುವಿಗೆ 23 ರನ್ ಬೇಕಿದ್ದವು. ಲ್ಯುಕ್ ವುಡ್​ ಬೌಲಿಂಗ್ ಮಾಡಿದ 19ನೇ ಓವರ್​ನಲ್ಲಿ ನೇಪಾಳ 13 ರನ್ ಕಲೆಹಾಕಿತು. ಈ ಓವರ್​ನಲ್ಲೂ ಲೋಕೇಶ್ 2 ಬೌಂಡರಿ ಬಾರಿಸಿದರು. ಅಂತಿಮವಾಗಿ ಕೊನೆಯ ಓವರ್​ನಲ್ಲಿ ನೇಪಾಳಕ್ಕೆ 10 ರನ್ ಬೇಕಿದ್ದವು. ಆದರೆ 20ನೇ ಓವರ್​ ಬೌಲ್ ಮಾಡಿದ ಸ್ಯಾಮ್ ಕರನ್ ತಮ್ಮ ಸ್ಲೋ ಯಾರ್ಕರ್​ಗಳಿಂದ ನೇಪಾಳಿ ಬ್ಯಾಟ್ಸ್‌ಮನ್​ಗಳನ್ನು ಬಿಗ್ ಶಾಟ್ ಹೊಡೆಯದಂತೆ ತಡೆದರು. ಈ ಓವರ್​ನಲ್ಲಿ ಒಂದೇ ಒಂದು ಬೌಂಡರಿಯಾಗಲಿ ಅಥವಾ ಸಿಕ್ಸರ್ ಆಗಲಿ ಬರಲಿಲ್ಲ. ಇದರ ಪರಿಣಾಮವಾಗಿ ನೇಪಾಳ ತಂಡ 4 ರನ್​ಗಳ ಸೋಲು ಕಾಣಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಸ್ತೆ ಅಪಘಾತ: ಒಂದೇ ದಿನ 8 ಜನ ಬಲಿ, ಹಲವರಿಗೆ ಗಾಯ – Kannada News | 8 death, several Injured In Road Accident at various districts In Karnataka On February 8th

ಬೀದರ್/ತಮಕೂರು, (ಫೆಬ್ರವರಿ 08): ಬ್ರಿಡ್ಜ್​​ಗೆ ಬೈಕ್​ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೀದರ್​  (Bidar) ಜಿಲ್ಲೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಬಳಿಯ ನಾಗಣ್ಣ ಕ್ರಾಸ್ ಹತ್ತಿರ ನಡೆದಿದೆ. ರಾಜೇಶ್ವರ ಗ್ರಾಮದ ವೆಂಕಟ್ ಕರಟ್ಮಲ್(40) ಹಾಗೂ ಪತ್ನಿ ಶಿಲ್ಪಾ(35), ಪುತ್ರಿ ರಕ್ಷಿತಾ(12) ಸ್ಥಳದಲ್ಲೇ ಸಾವನ್ನಪ್ಪಿದ್ದು,ಮಗ ದಿಗಂಬರ್(15) ಎಂಬುವವನ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರೂ ಒಂದೇ ಬೈಕ್​​ನಲ್ಲಿ ಬೀದರ್‌ನಿಂದ ರಾಜೇಶ್ವರ ಗ್ರಾಮಕ್ಕೆ ತೆರಳುತ್ತಿರುವಾಗ ರಸ್ತೆ ಪಕ್ಕದ ಬ್ರಿಡ್ಜ್‌ಗೆ ಬೈಕ್ ಡಿಕ್ಕಿ ಹೊಡೆದಿದೆ.

ತುಮಕೂರಿನಲ್ಲಿ ಸರಣಿ ಅಪಘಾತ

ತುಮಕೂರು: ಇನ್ನೊಂದೆಡೆ 3 ಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತುಮಕೂರು ತಾಲೂಕಿನ ಬಾಣಾವರ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಕ್ವಾಲಿಸ್ ಹಾಗೂ ಮುಂದೆ ಬರುತಿದ್ದ ಎಸ್ಟೀಮ್ ಹಾಗೂ ಬೋಲೆನೋ ಕಾರಿನ ನಡುವೆ ಸರಣಿ ಅಪಘಾತ‌ ನಡೆದಿದೆ. ಘಟನಾ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆ ರವಾನೆ ಮಾಡಲಾಗಿದೆ. ಮುರುಳಿ, ಸುರೇಶ್ ಮೃತ ದುರ್ವೈವಿಗಳು. ಇನ್ನು ಅಪಘಾತದಲ್ಲಿ ತುಮಕೂರು ಸೆನ್ ಇನ್ಸ್ ಪೆಕ್ಟರ್ ರಾಮಕೃಷ್ಣ ಸೇರಿದಂತೆ ಗಾಯಾಳುಗಳನ್ನು ತಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: 9 ಕಾಡಾನೆಗಳ ಹಿಂಡು ದಾಳಿಗೆ ರೈತ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ

ಚಿಕ್ಕಬಳ್ಳಾಪುರ: ಚಿಂತಾಮಣಿ ಹೊರವಲಯದಲ್ಲಿ ಕಾರು ಡಿಕ್ಕಿ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಹೊರವಲಯದಲ್ಲಿ ದುರ್ಘಟನೆ ನಡೆದಿದೆ. ಕಾರು ಬೈಕ್​ಗೆ ಡಿಕ್ಕಿ ಹೊಡೆದು 200 ಮೀಟರ್ ಎಳೆದೊಯ್ದಿದೆ. ಬೈಕ್​​​ನಲ್ಲಿದ್ದ ನಾಗರಾಜು(68), ವೆಂಕಟರೆಡ್ಡಿ(50) ಮೃತಪಟ್ಟಿದ್ದಾರೆ.

ಆಟೋ ಡಿಕ್ಕಿಯಾಗಿ ವೃದ್ಧ ಸಾವು

ಚಿಕ್ಕಮಗಳೂರು: ಆಟೋ ಡಿಕ್ಕಿಯಾಗಿ ಸ್ಕೂಟಿಯಲ್ಲಿ ತೆರಳ್ತಿದ್ದ ವೃದ್ಧ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಬ್ಬಿಣಸೇತುವೆ ಗ್ರಾಮ ಬಳಿಯ ಹೆದ್ದಾರಿಯಲ್ಲಿ ನಡೆದಿದೆ. ಉದ್ದೇಗೌಡ(68) ಎನ್ನುವ ಸ್ಕೂಟಿಯಲ್ಲಿ ಹೋಗುತ್ತಿದ್ದು, ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಆಟೋ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸದ್ಯ ಆಲ್ದೂರು ಪೊಲೀಸರು ಆಟೋ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL – Kannada News | Bengaluru: Relief for Metro commuters as BMRCL drops ticket fare hike following Central government order

ಬೆಂಗಳೂರು, ಫೆಬ್ರವರಿ 08: ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವೆ ಮಾತಿನ ಸಮರಕ್ಕೆ ಕಾರಣವಾಗಿದ್ದ ಮೆಟ್ರೋ (Metro) ಟಿಕೆಟ್ ದರ ಏರಿಕೆ ಜಟಾಪಟಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ನಾಳೆಯಿಂದ ಅಂದರೆ ಫೆಬ್ರವರಿ 09ರಿಂದ ಮೆಟ್ರೋ ಟಿಕೆಟ್​​​​ ದರ ಏರಿಸಲು ಮುಂದಾಗಿದ್ದ ಬಿಎಂಆರ್​ಸಿಎಲ್​ (BMRCL) ಇದೀಗ ಆ ನಿರ್ಧಾರವನ್ನು ಕೈಬಿಟ್ಟಿದೆ. ದರ ಏರಿಕೆ ಮಾಡದಂತೆ ಬಿಎಂಆರ್​ಸಿಎಲ್​ ಎಂಡಿಗೆ ಕೇಂದ್ರದಿಂದ ಇ-ಮೇಲ್ ರವಾನೆ ಬೆನ್ನಲ್ಲೇ​ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಮುಂದಿನ ಆದೇಶದವರೆಗೆ ದರ ಏರಿಕೆ ತಾತ್ಕಾಲಿಕ ಸ್ಥಗಿತವಾಗಿದೆ. ಹಾಗಾಗಿ ನಾಳೆಯಿಂದ ಮೆಟ್ರೋ ಟಿಕೆಟ್ ದರ ಏರಿಕೆ ಆಗೋದಿಲ್ಲ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ನಾಳೆಯಿಂದ ದರ ಏರಿಕೆಯಾಗಲ್ಲ ಅಂತಾ ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. ಬಿಎಂಆರ್‌ಸಿಯಲ್ ಎಂಡಿ ನಮಗೆ ಆದೇಶ ಬಂದಿಲ್ಲ. ನಾವು ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದಿದ್ದರು. ಇದರ ನಡುವೆ ಬಿಎಂಆರ್‌ಸಿಯಲ್‌ಗೆ ಕೇಂದ್ರ ಸರ್ಕಾರದಿಂದ ಇ-ಮೇಲ್ ಬಂದಿದೆ. ಹಾಗಾಗಿ ಬಿಎಂಆರ್‌ಸಿಯಲ್ ದರ ಏರಿಕೆ ನಿರ್ಧಾರದಿಂದ ಹಿಂದೆ ಸರಿದಿದೆ.

ನಮ್ಮ ಮೆಟ್ರೋ ಟ್ವೀಟ್​

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸುವುದೇನೆಂದರೆ, ಫೆಬ್ರವರ 5ರಂದು ಪ್ರಕಟಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ಫೆಬ್ರವರಿ 9ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಸಮರ: ಎಲ್ಲವೂ ನಿಮ್ಮ ಕೈಯಲ್ಲಿದೆ, ಡ್ರಾಮಾ ಮಾಡಬೇಡಿ; ಸಿಎಂ ವಿರುದ್ಧ ಸೂರ್ಯ ಕಿಡಿ

ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು. ಬಿಎಂಆರ್‌ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಕಸ್ಥ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಜಟಾಪಟಿ: ಕೇಂದ್ರದತ್ತ ಬೊಟ್ಟು ಮಾಡಿದ ಸಿಎಂಗೆ ದಾಖಲೆ ಸಮೇತ ಟಾಂಗ್ ಕೊಟ್ಟ ಸಂಸದ

ಫೆಬ್ರವರಿ 9ರಿಂದ ಮೆಟ್ರೋ ಪ್ರಯಾಣ ದರ ಏರಿಕೆಗೆ ನಿರ್ಧಾರವಾಗುತ್ತಿದ್ದಂತೆ ಕೇಂದ್ರ ಸಚಿವ ಮನೋಹರ್‌ ಲಾಲ್ ಖಟ್ಟರ್‌ ಅವರನ್ನ ಭೇಟಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ, ದರ ಏರಿಕೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ನಿನ್ನೆ ಮಾತನಾಡಿದ್ದ ತೇಜಸ್ವಿ ಸೂರ್ಯ, ಸೋಮವಾರದಿಂದ ದರ ಏರಿಕೆಯಾಗಲ್ಲ ಅಂತಾ ಘೋಷಿಸಿದ್ದರು.

ಇದು ಬೆಂಗಳೂರು ಜನರಿಗೆ ಸಂದ ಜಯ: ತೇಜಸ್ವಿ ಸೂರ್ಯ

ದರ ಏರಿಕೆ ಕೈಬಿಟ್ಟಿದ್ದನ್ನ ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಸೂರ್ಯ, ಇದು ಬೆಂಗಳೂರು ಜನರಿಗೆ ಸಂದ ಜಯ. ರಾಜ್ಯ ಸರ್ಕಾರದ ಜನವಿರೋಧಿ ನೀತಿ ಕೇಂದ್ರ ತಡೆಹಿಡಿದಿದೆ. ಟಿಕೆಟ್ ದರ ಏರಿಕೆ ಸ್ಥಗಿತ ಕೇವಲ ತಾತ್ಕಾಲಿಕ ರಿಲೀಫ್​ ಅಷ್ಟೇ ಎಂದು ಹೇಳಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್​

ಒಟ್ಟಿನಲ್ಲಿ ದರ ಏರಿಕೆಯಾಗುತ್ತಾ ಇಲ್ವಾ? ನಾಳೆಯಿಂದ ಬರೆ ಬೀಳುತ್ತಾ ಅಂತಾ ಗೊಂದಲದಲ್ಲಿದ್ದ ಪ್ರಯಾಣಿಕರಿಗೆ ಸದ್ಯ ರಿಲೀಫ್ ಸಿಕ್ಕಿದೆ. ಗೊಂದಲಕ್ಕೆ ಕ್ಲ್ಯಾರಿಟಿ ಸಿಕ್ಕಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:42 pm, Sun, 8 February 26

Source link

ಕಟ್ಟಪ್ಪನ ಜೀವನದ ಕಹಿ: ಜೀವಂತ ಶವವಾಗಿರೊ ಪತ್ನಿ, ಆದರೂ ಮರೆತಿಲ್ಲ ನಗು – Kannada News | Bahubali actor Sathyaraj wife is in Coma for last six years

ಬಾಹುಬಲಿ’ (Bahubali) ಸಿನಿಮಾನಲ್ಲಿ ಬಾಹುಬಲಿ, ಬಲ್ಲಾಳ ದೇವನಷ್ಟೆ ಕಟ್ಟಪ್ಪನ ಪಾತ್ರವೂ ಜನಪ್ರಿಯ. ಆ ಪಾತ್ರದಲ್ಲಿ ನಟಿಸಿದ್ದು ತಮಿಳಿನ ಹಿರಿಯ ನಟ ಸತ್ಯರಾಜ್. ಕನ್ನಡಿಗರ ಪಾಲಿಗೆ ಸತ್ಯರಾಜ್ ಅಪ್ಪಟ ವಿಲನ್. ನಟನಾಗಿರುವ ಜೊತೆಗೆ ಮಾಜಿ ರಾಜಕಾರಣಿಯೂ ಆಗಿರುವ ಸತ್ಯರಾಜ್, ಕನ್ನಡಿಗರ ವಿರುದ್ಧ ಕಟು ಪದಗಳಲ್ಲಿ ಈ ಹಿಂದೆಲ್ಲ ಮಾತನಾಡಿದ್ದಿದೆ. ಆದರೆ ‘ಬಾಹುಬಲಿ’ ಬಿಡುಗಡೆ ಸಂದರ್ಭದಲ್ಲಿ ಇದಕ್ಕೆ ವಿಷಾಧವನ್ನೂ ಸಹ ಅವರು ವ್ಯಕ್ತಪಡಿಸಿದ್ದರು. ಸಿನಿಮಾಗಳಲ್ಲಿ ಕಠಿಣ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಸತ್ಯರಾಜ್, ನಿಜ ಜೀವನದಲ್ಲಿ ಪ್ರತಿ ದಿನ ನೋವುಣ್ಣುತ್ತಿದ್ದಾರೆ.

ಸತ್ಯರಾಜ್, ಮಹೇಶ್ವರಿ ಎಂಬುವರೊಟ್ಟಿಗೆ ಬಹಳ ಹಿಂದೆ ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಸತ್ಯರಾಜ್ ಅವರ ಪತ್ನಿ ಮಹೇಶ್ವರಿ ಕಳೆದ ಆರು ವರ್ಷಗಳಿಂದಲೂ ಕೋಮಾದಲ್ಲಿದ್ದು, ಜೀವಂತ ಶವವಾಗಿದ್ದಾರೆ. ಮಹೇಶ್ವರಿ ಅವರು 2020ರ ಸುಮಾರಿಗೆ ಬ್ರೇನ್ ಹೆಮರೇಜ್​​ಗೆ ತುತ್ತಾಗಿದ್ದು, ಆಗಿನಿಂದಲೂ ಕೋಮಾದಲ್ಲಿಯೇ ಇದ್ದಾರೆ. ವೈದ್ಯರು ಸಹ ಮಹೇಶ್ವರಿ ಅವರ ಬಗ್ಗೆ ಆಗಲೇ ಕೈಚೆಲ್ಲಿದ್ದರು. ಇನ್ನು ಮಹೇರ್ಶವರಿ ಅವರ ರಿಕವರಿ ಅಸಾಧ್ಯ ಎಂದು ಹೇಳಿಬಿಟ್ಟಿದ್ದರು. ಆದರೆ ಸತ್ಯರಾಜ್, ನಂಬಿಕೆ ಕಳೆದುಕೊಂಡಿಲ್ಲ. ಈಗಲೂ ಸಹ ಅವರನ್ನು ಲೈಫ್ ಸಪೋರ್ಟ್​​ನಲ್ಲಿ ಇರಿಸಲಾಗಿದೆ.

ಈ ಬಗ್ಗೆ ಹಿಂದೊಮ್ಮೆ ಪೋಸ್ಟ್ ಹಂಚಿಕೊಂಡಿದ್ದ ಸತ್ಯರಾಜ್ ಪುತ್ರಿ ದಿವ್ಯಾ, ‘ನನ್ನ ತಾಯಿ ಕಳೆದ ನಾಲ್ಕು (2024ರ ಪೋಸ್ಟ್) ವರ್ಷದಿಂದ ಕೋಮಾನಲ್ಲಿದ್ದಾರೆ. ಅವರನ್ನು ನಮ್ಮ ಮನೆಯಲ್ಲೇ ಇರಿಸಿಕೊಂಡಿದ್ದೇವೆ. ಅವರಿಗೆ ಪ್ರತಿದಿನ ನಾವು ಪಿಇಜಿ ಟ್ಯೂಬ್ ಮೂಲಕ ಆಹಾರ ನೀಡುತ್ತೇವೆ. ನನ್ನ ತಂದೆ ಕಳೆದ ಕೆಲ ವರ್ಷಗಳಿಂದಲೂ ಸಿಂಗಲ್ ಪೇರೆಂಟ್ ಆಗಿ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ನಮಗೆ ಗೊತ್ತಿದೆ ನಾವು ಅಮ್ಮನನ್ನು ಮರಳಿ ಪಡೆಯುತ್ತೇವೆ. ನಾವು ಆ ಒಂದು ವೈದ್ಯಕೀಯ ಅದ್ಭುತಕ್ಕಾಗಿ ಕಾಯುತ್ತಿದ್ದೇವೆ’ ಎಂದಿದ್ದರು.

ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ?

ವೈದ್ಯರ ನಿರಾಕರಣೆಯ ಹೊರತಾಗಿಯೂ ಸತ್ಯರಾಜ್ ಪತ್ನಿಯನ್ನು ಮನೆಯಲ್ಲಿಯೇ ವೈದ್ಯಕೀಯ ಉಪಕರಣಗಳ ಸಹಾಯದಿಂದ ಜೀವಂತ ಇರಿಸಿಕೊಂಡಿದ್ದಾರೆ. ಅವರ ಆರೈಕೆಯನ್ನು ಮಾಡುತ್ತಿದ್ದಾರೆ. ಆ ನೋವಿನ ನಡುವೆಯೂ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಲೇ ಇದ್ದಾರೆ. ಅಂದಹಾಗೆ ಮಹೇಶ್ವರಿ ಅವರು 2018 ರಲ್ಲಿ ಸಿನಿಮಾ ನಿರ್ಮಾಪಕಿ ಆಗಿ ಎಂಟ್ರಿ ಕೊಟ್ಟಿದ್ದರು, ಎರಡು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದರು. ಆದರೆ ಅನಾರೋಗ್ಯದಿಂದ ಎಲ್ಲವೂ ನಿಂತು ಹೋಯ್ತು.

ಮೊದಲೆಲ್ಲ ಸತ್ಯರಾಜ್ ಕಾರ್ಯಕ್ರಮಗಳಲ್ಲಿ, ರಾಜಕೀಯ ಸಭೆಗಳಲ್ಲಿ ಬಹಳ ಕಟು ಮಾತುಗಳನ್ನಾಡುತ್ತಿದ್ದರು. ವಾಟಾಳ್ ನಾಗರಾಜ್ ಬಗ್ಗೆ, ಕನ್ನಡಿಗರ ಬಗ್ಗೆ, ಕರ್ನಾಟಕದ ಸರ್ಕಾರಗಳ ಬಗ್ಗೆ ಕಟುವಾಗಿ ಟೀಕಿಸಿದ್ದರು. ನಟ ರಜನೀಕಾಂತ್ ಅವರ ಬಗ್ಗೆಯೂ ಕೀಳು ಹೇಳಿಕೆಗಳನ್ನು ನೀಡಿದ್ದರು. ರಜನೀಕಾಂತ್ ಜೊತೆಗೆ ದಶಕಗಳ ಕಾಲ ವೈರತ್ವ ಸಾಧಿಸಿದ್ದರು. ಆದರೆ ಕಳೆದ ವರ್ಷ ರಜನೀಕಾಂತ್ ಜೊತೆಗಿನ ದ್ವೇಷಕ್ಕೆ ಪೂರ್ಣ ವಿರಾಮವಿಟ್ಟ ಸತ್ಯರಾಜ್ ‘ಕೂಲಿ’ ಸಿನಿಮಾನಲ್ಲಿ ರಜನಿ ಗೆಳೆಯನಾಗಿ ನಟಿಸಿದ್ದು ಮಾತ್ರವಲ್ಲದೆ, ರಜನಿಯನ್ನು ನಿಜವಾದ ಸೂಪರ್ ಸ್ಟಾರ್ ಎಂದು ಒಪ್ಪಿಕೊಂಡರು. ವಯಸ್ಸಾದಂತೆ ಸತ್ಯರಾಜ್ ಸಹ ಮಾಗುತ್ತಿದ್ದಾರೆ ಅನಿಸುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಭಾರತಕ್ಕೆ ಬಂದ ಯುವ ಚಾಂಪಿಯನ್ಸ್​ಗೆ ಅದ್ಧೂರಿ ಸ್ವಾಗತ – Kannada News | U19 World Cup 2026 Champions: India Beats England, Grand Welcome in Mumbai

ಫೆಬ್ರವರಿ 6, ಶುಕ್ರವಾರದಂದು ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ಯುವ ತಂಡವು ಇಂಗ್ಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸುವ ಮೂಲಕ 2026 ರ ಅಂಡರ್-19 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತವು 19 ವರ್ಷದೊಳಗಿನವರ ಚಾಂಪಿಯನ್ ಆಗಿದ್ದು ಇದು ಆರನೇ ಬಾರಿ. ಈ ಐತಿಹಾಸಿಕ ಗೆಲುವಿನ 2 ದಿನಗಳ ನಂತರ, ನಾಯಕ ಆಯುಷ್ ಮ್ಹಾತ್ರೆ ಮತ್ತು ಭಾರತೀಯ ತಂಡದ ಆಟಗಾರರು ತವರಿಗೆ ಮರಳಿದ್ದಾರೆ. ಮುಂಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಂದಿಳಿದ ಯುವ ಚಾಂಪಿಯನ್ ಪಡೆಗೆ ಭವ್ಯ ಸ್ವಾಗತ ನೀಡಲಾಯಿತು.

ಯುವ ತಂಡವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು. ಅಲ್ಲದೆ, ಆಯುಷ್ ಅವರ ಕುಟುಂಬ ಮತ್ತು ಉಪನಾಯಕ ವಿಹಾನ್ ಮಲ್ಹೋತ್ರಾ ಅವರ ಕುಟುಂಬ ವಿಶ್ವ ಚಾಂಪಿಯನ್ ಪುತ್ರರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಯುಷ್‌ಗೆ ಭವ್ಯ ಸ್ವಾಗತ ನೀಡಲಾಯಿತು. ಅಭಿಮಾನಿಗಳು ನೀಡಿದ ಸ್ವಾಗತದಿಂದ ಇಡೀ ತಂಡವೇ ಅಚ್ಚರಿಗೊಳಗಾಯಿತು.

ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2026 ರ ಫೈನಲ್‌ನಲ್ಲಿ ಇಂಗ್ಲೆಂಡ್ ಅಂಡರ್-19 ತಂಡವನ್ನು 100 ರನ್‌ಗಳಿಂದ ಸೋಲಿಸಿ ಭಾರತ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್‌ಗಳ ನಷ್ಟಕ್ಕೆ 411 ರನ್ ಗಳಿಸಿತು. ವೈಭವ್ ಸೂರ್ಯವಂಶಿ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ 175 ರನ್ ಗಳಿಸಿದರು. ನಾಯಕ ಆಯುಷ್ ಮಾತ್ರೆ 51 ಎಸೆತಗಳಲ್ಲಿ 53 ರನ್ ಸೇರಿಸಿದರೆ, ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್ ಗಳಿಸಿದರು. ಇತ್ತ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ಕ್ಯಾಲೆಬ್ ಫಾಕ್ನರ್ 115 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಏಕಾಂಗಿ ಹೋರಾಟ ನೀಡಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಅದು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉದ್ಯಮಿಗೆ ಬೆದರಿಕೆ ಪ್ರಕರಣ: ನಟಿ ಕೃಷಿ ತಾಪಂಡಗೆ ನೊಟೀಸ್ – Kannada News | Actress Krishi Tapanda friend arrested in blackmail case

ಕೃಷಿ ತಾಪಂಡ (Krishi Tapanda) ಕಳೆದ ಕೆಲ ತಿಂಗಳುಗಳಿಂದಲೂ ಸುದ್ದಿಯಲ್ಲಿದ್ದಾರೆ. ಎಆರ್‌ವಿ ಗ್ರೂಪ್‌ ಮಾಲೀಕ ಅರವಿಂದ್‌ ರೆಡ್ಡಿ ವಿರುದ್ಧ ದೂರು ನೀಡಿದ್ದ ನಟಿ, ಉದ್ಯಮಿ ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದಿದ್ದರು. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಆ ಬಳಿಕ ಆ ಉದ್ಯಮಿ, ತಾವು ನಟಿಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾಗಿ, ನಟಿ ತಮ್ಮನ್ನು ಹಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದೆಲ್ಲ ಪ್ರತ್ಯಾರೋಪಗಳನ್ನು ಮಾಡಿದ್ದರು. ಇದೀಗ ಅದೇ ಉದ್ಯಮಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.

ಕೃಷಿ ತಾಪಂಡ ಈ ಹಿಂದೆ ದೂರು ನೀಡಿದ್ದ ಉದ್ಯಮಿ ಅರವಿಂದ್‌ ರೆಡ್ಡಿಗೆ ಇತ್ತೀಚೆಗೆ ಬೆದರಿಕೆ ಪತ್ರವೊಂದು ಬಂದಿತ್ತು. ಅನಾಮಿಕನೊಬ್ಬ ಅರವಿಂದ ರೆಡ್ಡಿ ಬಳಿ ಏಳು ಕೋಟಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಬೆದರಿಕೆ ಸಹ ಹಾಕಲಾಗಿತ್ತು. ಈ ಬಗ್ಗೆ ಅರವಿಂದ ರೆಡ್ಡಿ ಸಂಜಯ್​​ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡ ಆಪ್ತ ಎನ್ನಲಾಗಿದೆ.

ಅರವಿಂದ ರೆಡ್ಡಿಗೆ ಬರೆಯಲಾಗಿದ್ದ ಪತ್ರದಲ್ಲಿ ಮಹಿಳೆಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸಬೇಕು ಜೊತೆಗೆ ಏಳು ಕೋಟಿ ರೂಪಾಯಿ ಹಣ ನೀಡಬೇಕು ಎಂದು ಬೆದರಿಕೆ ಹಾಕಲಾಗಿತ್ತು. ಪತ್ರವನ್ನು ಅರವಿಂದ ರೆಡ್ಡಿ ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪತ್ರವನ್ನು ಬನಶಂಕರಿಯಿಂದ ಕೊರಿಯರ್ ಮಾಡಿದ್ದು ಪತ್ತೆ ಹಚ್ಚಿದರು. ಬಳಿಕ ಮೆಕ್ಯಾನಿಕ್ ಓರ್ವ ಆ ಪತ್ರವನ್ನು ಕೊರಿಯರ್ ಮಾಡಿದ್ದು ಪತ್ತೆ ಹಚ್ಚಿದರು. ಆ ಯುವಕ, ವೈಶಾಖ್ ಎಂಬಾತ ತಮಗೆ ಪತ್ರ ಕೊರಿಯರ್ ಮಾಡಲು ಎಂಬುದಾಗಿ ಹೇಳಿದ್ದಾನೆ.

ಇದನ್ನೂ ಓದಿ:ನಟಿ ಕೃಷಿ ತಾಪಂಡ ಈಗ ಹೇಗಿದ್ದಾರೆ ನೋಡಿ

ಇದೀಗ ಪೊಲೀಸರು ವೈಶಾಖ್ ಎಂಬಾತನನ್ನು ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡಗೆ ಆಪ್ತ ಎನ್ನಲಾಗಿದ್ದು, ವೈಶಾಖ್, ಕೃಷಿ ತಾಪಂಡ ಮನೆಯನ್ನೇ ಬಂಧನಕ್ಕೆ ಒಳಗಾಗಿದ್ದಾನೆ ಎಂದ ಸುದ್ದಿಯೂ ಹರಿದಾಡುತ್ತಿದೆ. ವೈಶಾಖ್ ತನ್ನ ಮೊಬೈಲ್ ಅನ್ನು ಕೃಷಿ ತಾಪಂಡ ಮನೆಯಲ್ಲೇ ಅಡಗಿಸಿಟ್ಟಿದ್ದಾನೆ ಎಂಬುದು ಪೊಲೀಸರ ಗುಮಾನಿ ಆಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಟಿ ಕೃಷಿ ತಾಪಂಡಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದ್ದಾರೆ.

ಈ ಹಿಂದೆ ಇದೇ ಕೃಷಿ ತಾಪಂಡ ಅವರು ಉದ್ಯಮಿ ಅರವಿಂದ ರೆಡ್ಡಿ ವಿರುದ್ಧ ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದರು. ಇದೀಗ ಕೃಷಿ ತಾಪಂಡ ಆಪ್ತನೇ ಅರವಿಂದ ರೆಡ್ಡಿಗೆ ಬ್ಲಾಕ್​​ಮೇಲ್ ಮಾಡಲು ಯತ್ನಿಸಿದ್ದು, ಏಳು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಪೊಲೀಸರ ತನಿಖೆಯಲ್ಲಿ ಇನ್ನಷ್ಟು ಅಂಶಗಳು ಹೊರಬರಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:43 pm, Sun, 8 February 26

Source link

Power Tariff : ಕರ್ನಾಟಕದ ಜನರಿಗೆ ಕರೆಂಟ್ ಶಾಕ್‌ ‘ಗ್ಯಾರಂಟಿ’, ಎಷ್ಟು-ಯಾವಾಗಿನಿಂದ? – Kannada News | Karnataka electricity supply companies submits Report for power tariff from April 1st

ಬೆಂಗಳೂರು, (ಫೆಬ್ರವರಿ 08): ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನ ದಿಂದ ದಿನಕ್ಕೆ ಹೆಚ್ಚಾಗಿ ಹೈರಾಣಾಗಿರುವ ಕರ್ನಾಟಕ(Karnataka) ಜನತೆಗೆ ಮತ್ತೊಂದು ಶಾಕ್‌ ಎದುರಾಗಿದ್ದು, ಶೀಘ್ರವೇ ವಿದ್ಯುತ್‌ ದರ ಏರಿಕೆಯಾಗುವ (Power Price Hike)  ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದ ವಿದ್ಯುತ್‌ ಪೂರೈಕೆ ಮಾಡುವ ಬಹುತೇಕ ಕಂಪನಿಗಳು ನಷ್ಟದ ಹಳಿಯಲ್ಲಿದ್ದು, ಆದಾಯ ಸರಿದೂಗಿಸಲು ವಿದ್ಯುತ್‌ ದರ ಏರಿಕೆ ಮಾಡುವಂತೆ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಯೂನಿಟ್‌ಗೆ 1 ರೂಪಾಯಿಯಂತೆ ವಿದ್ಯುತ್‌ ದರ ಏರಿಕೆ ಮಾಡಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಏಪ್ರಿಲ್ 1ರಿಂದ ವಿದ್ಯುತ್ ದರ ಏರಿಕೆ ಸಾಧ್ಯತೆ?

ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದು, ಸಾರ್ವಜನಿಕ ವಿಚಾರಣೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಹೆಚ್ಚಳವು ಪ್ರತಿ ಯೂನಿಟ್‌‍ಗೆ 8 ರಿಂದ 10 ಪೈಸೆಗಳಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಏಪ್ರಿಲ್‌ 1 ರಿಂದ ಜಾರಿಗೆ ಬರುವ ಸಾಧ್ಯತೆ ಇದ್ದು, ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆದಾರರ ಮೇಲೆ ಪರಿಣಾಮ ಬೀರಬಹುದು. ಕರ್ನಾಟಕದಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು 4,900 ಕೋಟಿಗೂ ಹೆಚ್ಚು ಆದಾಯದ ಕೊರತೆಯನ್ನು ಸರಿದೂಗಿಸಲು 2026ರ ಏಪ್ರಿಲ್‌‍ನಿಂದ ವಿದ್ಯುತ್‌ ದರವನ್ನು ಮತ್ತೆ ಪರಿಷ್ಕರಿಸುವ (ಹೆಚ್ಚಿಸುವ) ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL

ಎಸ್ಕಾಂಗಳ ಆದಾಯದ ಕೊರತೆಯನ್ನು ಸರಿದೂಗಿಸಲು ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಲಾಗಿದೆ. 2025 ರ ಮಾರ್ಚ್‌ನಲ್ಲಿ, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌‍ಗೆ 36 ಪೈಸೆಯಷ್ಟು ವಿದ್ಯುತ್‌ ದರವನ್ನು ಹೆಚ್ಚಿಸಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್‌ ದರವನ್ನು ಹೆಚ್ಚಿಸುವ ಮೂಲಕ ತಮ 4,620 ಕೋಟಿ ರೂಪಾಯಿಗಳ ಆದಾಯದ ಅಂತರವನ್ನು ಸರಿದೂಗಿಸಲು ವಿದ್ಯುತ್‌ ಸರಬರಾಜು ನಿಗಮ ನಿಯಮಿತ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವನ್ನು ಕೋರಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ದರ ಪರಿಷ್ಕರಣೆ ಮಾಡಿದಾಗ ಕೆಇಆರ್‌ಸಿ ಅಂದಾಜು ಮಾಡಿದ್ದ ಲೆಕ್ಕಾಚಾರದಲ್ಲಿ ವೆಚ್ಚ ಹೆಚ್ಚಾಗಿದ್ದರೆ, ಆದಾಯದಲ್ಲಿ ಖೋತಾ ಆಗಿದೆ. ಇದರ ನಡುವೆ ಸಮತೋಲನ ಕಾಪಾಡಲು ದರ ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಎಸ್ಕಾಂಗಳು ಕೆಇಆರ್‌ಸಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿವೆ.

ಒಟ್ಟಾರೆ ಪ್ರಸ್ತುತ ಹಾಗೂ ಮುಂದಿನ ಎರಡೂ ಆರ್ಥಿಕ ವರ್ಷಗಳಿಗೆ ವಿದ್ಯುತ್ ದರ ನಿಗದಿ ಮಾಡಲಾಗಿದ್ದರೂ, ಈ ಹಿಂದಿನ ವರ್ಷದ ನಷ್ಟ ಸರಿದೂಗಿಸಲು ಹೆಚ್ಚುವರಿ ವಿದ್ಯುತ್ ದರ ಏರಿಕೆಯೇ KERCಗೆ ಇರುವ ಮಾರ್ಗ ಎನ್ನಲಾಗುತ್ತಿದೆ.

ರಾಜ್ಯದ ಅಗತ್ಯ ವಸ್ತು ಹಾಗೂ ಸೇವೆಗಳ ಬೆಲೆ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಹೈರಾಣಾಗುತ್ತಿದ್ದಾರೆ. ಈ ಮಧ್ಯೆ ವಿದ್ಯುತ್ ಏರಿಕೆಗೂ ತರೆಮರೆಯ ತಯಾರಿ ನಡೆದಿದೆ. ಆದಾಯ ಕೊರತೆ ಹಿನ್ನೆಲೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಪರ್ಯಾಯ ವ್ಯವಸ್ಥೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಗೆ ಪ್ರಸ್ತಾವನೆ ಸಲ್ಲಿಸಿವೆ. ಬೆಸ್ಕಾಂ ಸೇರಿ ರಾಜ್ಯದ ಹಲವು ಎಸ್ಕಾಂಗಳಿಂದ KERCಗೆ ವಾರ್ಷಿಕ ವರದಿ ಸಲ್ಲಿಕೆಯಾಗಿದ್ದು, ಫೆಬ್ರವರಿ 16 ರಿಂದ ರಾಜ್ಯದ ನಾನಾ ಭಾಗಗಳಲ್ಲಿ KERC ಸಾರ್ವಜನಿಕರ ಆಕ್ಷೇಪಣೆ ಆಲಿಸಲಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:52 pm, Sun, 8 February 26

Source link

JNU: ವಿದ್ಯಾರ್ಥಿ ಒಕ್ಕೂಟದ ಇಡೀ ನಾಯಕತ್ವವನ್ನು ಅಮಾನತುಗೊಳಿಸಿದ ಜೆಎನ್​ಯು ಆಡಳಿತ – Kannada News | JNU rusticates entire elected students union leadership, banned for 2 semesters

ನವದೆಹಲಿ, ಫೆಬ್ರುವರಿ 8: ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ ಸೆಂಟ್ರಲ್ ಲೈಬ್ರರಿ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಕೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟಿಸುವಾಗ ಸಿಸಿಟಿವಿ ಮತ್ತಿತರ ಆಸ್ತಿಗಳಿಗೆ ಹಾನಿ ಮಾಡಿದ ಕಾರಣಕ್ಕೆ ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ (JNU students’ Union) ಎಲ್ಲಾ ಚುನಾಯಿತ ನಾಯಕತ್ವವನ್ನು ಅಮಾನತುಗೊಳಿಸಲಾಗಿದೆ. ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಅಧ್ಯಕ್ಷೆ ಅದಿತಿ ಮಿಶ್ರಾ, ಉಪಾಧ್ಯಕ್ಷೆ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿ ಸುನೀಲ್ ಯಾದವ್, ಜಂಟಿ ಕಾರ್ಯದರ್ಶಿ ದಾನಿಶ್ ಆಲಿ ಅವರಲ್ಲದೇ ಮಾಜಿ ಅಧ್ಯಕ್ಷ ನಿತೀಶ್ ಕುಮಾರ್, ಸೇರಿ ಒಟ್ಟು ಐವರನ್ನು ಎರಡು ಸೆಮಿಸ್ಟರ್​ಗಳವರೆಗೆ ಅಮಾನತುಗೊಳಿಸಲಾಗಿದೆ.

ಈ ಐವರು ವಿದ್ಯಾರ್ಥಿ ಮುಖಂಡರಿಗೆ ಈ ವರ್ಷದ (2026) ವಿಂಟರ್ ಮತ್ತು ಮಾನ್ಸೂನ್ ಸೆಮಿಸ್ಟರ್​ಗಳಿಗೆ ಕ್ಯಾಂಪಸ್ ಪ್ರವೇಶದಿಂದ ನಿರ್ಬಂಧಿಸಲಾಗಿದೆ. ಜೊತೆಗೆ ಎಲ್ಲರಿಗೂ 20,000 ರೂ ದಂಡ ಹಾಕಲಾಗಿದೆ. ಕಳೆದ ವಾರ (ಫೆ. 2) ಜವಾಹರಲಾಲ್ ಯೂನಿವರ್ಸಿಟಿ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡು ನೋಟೀಸ್ ಕೊಟ್ಟಿದೆ.

ಜೆಎನ್​ಯು ಕ್ಯಾಂಪಸ್​ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸೆಂಟ್​ರಲ್ ಲೈಬ್ರರಿಯ ಪ್ರವೇಶದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಿರುವುದನ್ನು ವಿರೋಧಿಸಿ ಹಲವು ವಿದ್ಯಾರ್ಥಿಗಳು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗಲಾಟೆಯಾಗಿ ಬಯೋಮೆಟ್ರಿಕ್ ಸಿಸ್ಟಂ ಇದ್ದ ಗೇಟ್​​ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗೆ ಹಾನಿ ಮಾಡಿದ್ದರು. ಇದರಿಂದ ಜೆಎನ್​ಯು ಆಡಳಿತಕ್ಕೆ ಅಂದಾಜು 20 ಲಕ್ಷ ರೂ ನಷ್ಟವಾಗಿತ್ತು ಎನ್ನಲಾಗಿದೆ. 2025ರ ನವೆಂಬರ್ 21ರಂದು ತನಿಖೆ ನಡೆಸಲಾಯಿತು. ಇದೀಗ ಯೂನಿವರ್ಸಿಟಿಯ ಆಡಳಿತವು ವಿದ್ಯಾರ್ಥಿ ಸಂಘದ ನಾಯಕತ್ವದ ಮೇಲೆ ಶಿಸ್ತಿನ ಕ್ರಮ ಜರುಗಿಸಿದೆ.

ಇದನ್ನೂ ಓದಿ: ಶತ್ರು ಉಪಗ್ರಹಗಳ ಮೇಲೆ ಬೇಹುಗಾರಿಕೆ ಮಾಡಬಲ್ಲ ಸೆಟಿಲೈಟ್​ಗಳು ಭಾರತದಿಂದ

ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವ ನಿರ್ಧಾರಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದು ವಿದ್ಯಾರ್ಥಿಗಳ ಧ್ವನಿ ಅಡಗಿಸುವ ಕೆಲಸ ಎಂದು ಎಐಎಸ್​ಎ ಮುಂತಾದ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಕಾಂಗ್ರೆಸ್, ಸಿಪಿಐ ಎಂಎಲ್, ಭಾರತ್ ಆದಿವಾಸಿ ಪಾರ್ಟಿ, ಆರ್​ಜೆಡಿ ಪಕ್ಷದ ಕೆಲ ಸಂಸದರು, ಈ ಐವರು ವಿದ್ಯಾರ್ಥಿಗಳ ವಿರುದ್ಧದ ಅಮಾನತು ಕ್ರಮವನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version