ನಮ್ಮ ದಿಗ್ಬಂಧನ ಸನಿಹ ಬಂದರೆ ಇರಾನಿನ ಹಡಗುಗಳ ನಿರ್ನಾಮ ನಿಶ್ಚಿತ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ – Kannada News | Trump’s Stern Warning to Iran: Destroy Any Ship Nearing Blockade in Hormuz Strait

ಡೊನಾಲ್ಡ್​ ಟ್ರಂಪ್ -ಸಾಂದರ್ಭಿಕ ಚಿತ್ರ Image Credit source: Google Gemini

ವಾಷಿಂಗ್ಟನ್, ಏಪ್ರಿಲ್ 14: ವಿಶ್ವದ ಅತಿ ದೊಡ್ಡ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿ(Hormuz Strait)ಯಲ್ಲಿ ಯುದ್ಧದ ಕಾರ್ಮೋಡಗಳು ಕವಿದಿವೆ. ಅಮೆರಿಕದ ನೌಕಾ ದಿಗ್ಬಂಧನವನ್ನು ಮೀರಿ ಬರುವ ಯಾವುದೇ ಇರಾನಿನ ಹಡಗುಗಳನ್ನು ತಕ್ಷಣವೇ ಧ್ವಂಸಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಜಾಗತಿಕ ಸಂಚಲನಕ್ಕೆ ಕಾರಣವಾಗಿದೆ. ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ ಇರಾನ್ ವಿರುದ್ಧ ಕಿಡಿಕಾರಿರುವ ಟ್ರಂಪ್, ಈಗಾಗಲೇ ಅಮೆರಿಕದ ದಾಳಿಗೆ ಇರಾನಿನ 158 ಹಡಗುಗಳು ನಾಶವಾಗಿವೆ ಎಂದು ಹೇಳಿದ್ದಾರೆ. ಹಡಗುಗಳಲ್ಲಿ ಯಾವುದಾದರೂ ನಮ್ಮ ದಿಗ್ಬಂಧನದ ಹತ್ತಿರ ಬಂದರೆ, ಅವುಗಳನ್ನು ತಕ್ಷಣವೇ ನಾಶಪಡಿಸಲಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಸಂಘರ್ಷವನ್ನು ತಡೆಯಲು ಪಾಕಿಸ್ತಾನದ ಆತಿಥ್ಯದಲ್ಲಿ ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವೆ ನಡೆದ ಸಂಧಾನ ಮಾತುಕತೆಗಳು ಸಂಪೂರ್ಣವಾಗಿ ಹಳಿತಪ್ಪಿವೆ. ಹಲವು ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಗಳು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಕುಸಿದುಬಿದ್ದವು. ಇರಾನ್ ತನ್ನ ನಿಲುವಿನಿಂದ ಹಿಂದೆ ಸರಿಯದ ಕಾರಣ, ಅಮೆರಿಕವು ತನ್ನ ಮುಂದಿನ ಕಠಿಣ ಹೆಜ್ಜೆಯನ್ನು ಇರಿಸಿದೆ.

ಮಾತುಕತೆ ವಿಫಲವಾದ ಬೆನ್ನಲ್ಲೇ ಆಕ್ರೋಶಭರಿತ ಆದೇಶ ಹೊರಡಿಸಿದ ಅಧ್ಯಕ್ಷ ಟ್ರಂಪ್, ವಿಶ್ವದ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸುವ ಅಥವಾ ಅಲ್ಲಿಂದ ನಿರ್ಗಮಿಸುವ ಎಲ್ಲಾ ಹಡಗುಗಳ ಮೇಲೆ ದಿಗ್ಬಂಧನ ಹೇರಿದ್ದಾರೆ.

ಮತ್ತಷ್ಟು ಓದಿ: ಇರಾನ್ ಬಯಸಿದರೂ ಹಾರ್ಮುಜ್ ಜಲಸಂಧಿ ತೆರೆಯಲು ಸಾಧ್ಯವಿಲ್ಲ; ಇಲ್ಲಿದೆ ಕಾರಣ

ಟ್ರಂಪ್ ಅವರ ಈ ಕಟು ಎಚ್ಚರಿಕೆಯ ಬೆನ್ನಲ್ಲೇ ಜಾಗತಿಕ ಇಂಧನ ಮಾರುಕಟ್ಟೆ ಅಕ್ಷರಶಃ ನಡುಗಿದೆ. ಸೋಮವಾರ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದ್ದು, ಆರ್ಥಿಕ ಕುಸಿತದ ಭೀತಿ ಮೂಡಿಸಿದೆ. ನೈಮೆಕ್ಸ್ (NYMEX) ಕಚ್ಚಾ ತೈಲ, ಶೇ. 8 ಏರಿಕೆ, ಬ್ರೆಂಟ್ ಕಚ್ಚಾ ತೈಲವು ಶೇ. 7 ಏರಿಕೆ ಕಂಡಿದ್ದು ತಜ್ಞರ ಪ್ರಕಾರ, ಬಿಕ್ಕಟ್ಟು ಮುಂದುವರೆದರೆ ಬೆಲೆ 132 ಡಾಲರ್ ತಲುಪುವ ಸಾಧ್ಯತೆಯಿದೆ. ಅಮೆರಿಕವು ಇರಾನ್‌ನ ದೊಡ್ಡ ನೌಕೆಗಳನ್ನು ನಾಶಪಡಿಸಿದ್ದರೂ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಳಿ ಇರುವ ಸಣ್ಣ ಮತ್ತು ವೇಗದ ದಾಳಿ ದೋಣಿಗಳು (Fast Attack Craft) ದೊಡ್ಡ ತಲೆನೋವಾಗಿ ಪರಿಣಮಿಸಿವೆ.

ಇವು ಕಿರಿದಾದ ಜಲಸಂಧಿಯಲ್ಲಿ ಅಡಗಿಕೊಂಡು ಕ್ಷಿಪಣಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಕಲ್ಲಿನ ಭೂಪ್ರದೇಶದ ಭೂಗತ ಸೌಲಭ್ಯಗಳಲ್ಲಿ ಇವುಗಳನ್ನು ಅಡಗಿಸಿಡಲಾಗಿದ್ದು, ಪತ್ತೆಹಚ್ಚುವುದು ಕಷ್ಟಕರವಾಗಿದೆ. ಫೆಬ್ರವರಿ 28 ರಂದು ಸಂಘರ್ಷ ಆರಂಭವಾಗುವ ಮೊದಲು ಪ್ರತಿದಿನ ಸುಮಾರು 125 ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದವು. ಆದರೆ ಈಗಿನ ಉದ್ವಿಗ್ನತೆಯಿಂದಾಗಿ ಈ ಸಂಖ್ಯೆ ಏಕ ಅಂಕೆಗೆ ಕುಸಿದಿದೆ.

ಜಾಗತಿಕ ತೈಲ ಪೂರೈಕೆಯಲ್ಲಿ ಸುಮಾರು ಶೇ.20 ನಷ್ಟು ಕೊರತೆ ಉಂಟಾಗುವ ಆತಂಕವಿದ್ದು, ಇದು ಹಿಂದಿನ ಎಲ್ಲಾ ಇಂಧನ ಬಿಕ್ಕಟ್ಟುಗಳಿಗಿಂತ ಭೀಕರವಾಗಿರಲಿದೆ ಎಂದು ವಿಶ್ಲೇಷಿಸಲಾಗಿದೆ. ಹಾರ್ಮುಜ್ ಜಲಸಂಧಿಯು ಕೇವಲ 20 ಮೈಲುಗಳಷ್ಟು ಅಗಲವಿದ್ದು, ಇದು ಜಗತ್ತಿನ ಕುತ್ತಿಗೆಯಂತಿದೆ. ಟ್ರಂಪ್ ಅವರ ನೇರ ಬೆದರಿಕೆ ಮತ್ತು ಇರಾನ್‌ನ ರಹಸ್ಯ ನೌಕಾ ತಂತ್ರಗಳು ಮುಖಾಮುಖಿಯಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಪ್ರದೇಶವು ಜಾಗತಿಕ ಮಹಾಯುದ್ಧದ ಕಿಡಿಯಾಗುವ ಲಕ್ಷಣಗಳು ದಟ್ಟವಾಗಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಜನ ನಾಯಗನ್’ ಬೆನ್ನಲ್ಲೇ ‘ವಾರಣಾಸಿ’ ಚಿತ್ರಕ್ಕೂ ಲೀಕ್ ಕಾಟ; ಪ್ರಮುಖ ದೃಶ್ಯವೇ ಸೋರಿಕೆ – Kannada News | Rajamouli’s ‘Varanasi’ Faces Devastating Leak: Action Scenes Emerge Online

‘ಜನ ನಾಯಗನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಕೆಲ ಕಾಣದ ಕೈಗಳು ಹಾಳು ಮಾಡಿವೆ. ಸಿನಿಮಾ ರಿಲೀಸ್​​ಗೂ ಮೊದಲೇ ಪ್ರಮುಖ ದೃಶ್ಯಗಳನ್ನು ಲೀಕ್ ಮಾಡಲಾಯಿತು. ಈಗ ಎಸ್​​ಎಸ್​ ರಾಜಮೌಳಿ (SS Rajamouli) ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕೂ ಇದೇ ರೀತಿಯ ತೊಂದರೆ ಎದುರಾಗಿದೆ. ಸಿನಿಮಾದ ಕೆಲ ಆ್ಯಕ್ಷನ್ ದೃಶ್ಯಗಳನ್ನು ಸೋರಿಕೆ ಮಾಡಲಾಗಿದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.

ರಾಜಮೌಳಿ ಅವರು ತಮ್ಮ ಸಿನಿಮಾ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಯಾವುದೇ ಘೋಷಣೆ ಇದ್ದರೂ ದೊಡ್ಡ ಮಟ್ಟದಲ್ಲಿ ಮಾಡಲು ಅವರು ಬಯಸುತ್ತಾರೆ. ಈಗ ಈ ಎಲ್ಲಾ ಎಗ್ಸೈಟ್​​ಮೆಂಟ್​​ಗಳನ್ನು ಹಾಳು ಮಾಡುವ ಕೆಲಸ ಆಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಿನಿಮಾದ ಸೆಟ್ ಹಾಕಿ ಶೂಟ್ ಮಾಡುತ್ತಿದ್ದರೂ ಕೆಲವರು ಪ್ರಮುಖ ದೃಶ್ಯಗಳನ್ನು ಲೀಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಆ್ಯಕ್ಷನ್ ದೃಶ್ಯ ಶೂಟ್ ಮಾಡಲಾಗಿದೆ. ಅವುಗಳನ್ನು ಸೋರಿಕೆ ಮಾಡಲಾಗಿದೆ. ಈ ಮೊದಲು ವಿದೇಶದಲ್ಲಿ ಶೂಟ್ ಮಾಡಿದ ದೃಶ್ಯಗಳನ್ನು ಕೂಡ ಲೀಕ್ ಮಾಡಲಾಗಿತ್ತು.

ದೊಡ್ಡ ಸಿನಿಮಾಗಳ ಬಗ್ಗೆ ಎಲ್ಲರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ, ಈ ರೀತಿಯ ದೃಶ್ಯಗಳನ್ನು ಲೀಕ್ ಮಾಡಿದರೆ ಆ ಪೇಜ್​​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂಬಾಲಕರು ಸಿಗುತ್ತಾರೆ. ಹೀಗಾಗಿ ಆ ರೀತಿ ಮಾಡಲಾಗಿದೆ ಎನ್ನಲಾಗಿದೆ.

ರಾಜಮೌಳಿ ಸಿನಿಮಾ ಆಲೋಚನೆಗಳು ಬೇರೆಯದೇ ರೀತಿ ಇರುತ್ತವೆ. ಸಾಮಾನ್ಯ ದೃಶ್ಯಗಳನ್ನು ವಿಎಫ್​ಎಕ್ಸ್ ಬಳಸಿ ಅದ್ದೂರಿಯಾಗಿ ಕಾಣುವಂತೆ ಮಾಡುತ್ತಾರೆ. ಹೀಗಾಗಿ, ಲೀಕ್ ಆಗುವ ದೃಶ್ಯಗಳನ್ನು ನೋಡಿದರೂ ಏನೂ ವಿಶೇಷ ಎನಿಸುವುದಿಲ್ಲ. ಸಿನಿಮಾ ಮೇಲಿನ ನಿರೀಕ್ಷೆ ಇದರಿಂದ ಕಡಿಮೆ ಆಗುವ ಭಯ ರಾಜಮೌಳಿ ಅವರನ್ನು ಬಹುವಾಗಿ ಕಾಡುತ್ತಿದೆ.

ಇದನ್ನೂ ಓದಿ: ಜೂ ಎನ್​​ಟಿಆರ್ ಋಣ ತೀರಿಸಲಿರುವ ರಾಜಮೌಳಿ, ‘ವಾರಣಾಸಿ’ಯಲ್ಲಿ ಸರ್ಪ್ರೈಸ್

‘ವಾರಣಾಸಿ’ ಸಿನಿಮಾಗೆ ರಾಜಮೌಳಿ ನಿರ್ದೇಶನ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್​​ನಲ್ಲಿ ಚಿತ್ರ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

33 ಕೋಟಿ ದೇವತೆಗಳಿದ್ದರೂ ಒಬ್ಬನೇ ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸುವುದು ಯಾಕೆ ಮುಖ್ಯ?: ಇಲ್ಲಿದೆ ಅಸಲಿ ಕಾರಣ

ಬೆಂಗಳೂರು, ಏ.14: ಏಕದೇವೋಪಾಸನೆಯ ಮಹತ್ವದ ಬಗ್ಗೆ ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳಿದ್ದರೂ, ಜೀವನದಲ್ಲಿ ಏಕದೇವೋಪಾಸನೆಯನ್ನು ಅಳವಡಿಸಿಕೊಂಡರೆ ಅದು ಅತ್ಯಂತ ಸಾರ್ಥಕವಾಗುತ್ತದೆ ಎಂದು ತಿಳಿಸಲಾಗಿದೆ. “ಸರ್ವದೇವ ನಮಸ್ಕಾರಾಃ ಕೇಶವಂ ಪ್ರತಿಗಚ್ಛತಿ” ಎಂಬ ಮಾತಿನಂತೆ, ಎಲ್ಲಾ ದೇವರುಗಳಿಗೆ ನಮಸ್ಕಾರ ಸಲ್ಲಿಸಿದರೂ, ಒಬ್ಬ ದೇವರನ್ನು ಹೃದಯದಲ್ಲಿ ಸ್ಥಾಪಿಸಿಕೊಳ್ಳುವುದು ಮುಖ್ಯ. ಏಕದೇವೋಪಾಸನೆಯು ನಮ್ಮಲ್ಲಿ ಏಕಾಗ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ನಮ್ಮ ಜೀವನದಲ್ಲಿ ಬರುವ ಕಂಟಕಗಳು, ಕರ್ಮಗಳು ಸರಿಯಾದ ದಾರಿಯಲ್ಲಿ ಸಾಗಲು ಸಹಾಯ ಮಾಡುತ್ತದೆ. ಗಣಪತಿ, ಶಿವ, ವಿಷ್ಣು, ವೆಂಕಟೇಶ್ವರ ಮುಂತಾದ ಅನೇಕ ದೇವರುಗಳಲ್ಲಿ ನಿಮಗೆ ಇಷ್ಟವಾದ ಅಥವಾ ಕುಲದೇವರನ್ನು ಆರಿಸಿ, ನಿರಂತರವಾಗಿ ಅವರ ನಾಮಸ್ಮರಣೆ, ದರ್ಶನ ಹಾಗೂ ಪೂಜೆಯನ್ನು ಯಥಾವಿಧಿಯಾಗಿ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ. ಒಂದೇ ದೋಣಿಯಲ್ಲಿ ಪ್ರಯಾಣಿಸಿದಂತೆ, ಒಂದೇ ದೇವರಿಗೆ ನಿಷ್ಠೆ ತೋರುವುದರಿಂದ ಆಧ್ಯಾತ್ಮಿಕವಾಗಿ ದಡ ಸೇರಲು ಸಾಧ್ಯ ಎಂದು ವಿವರಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ಷಯ ತೃತೀಯಕ್ಕೆ ಬಂಗಾರ ದುಬಾರಿ? ಚಿನ್ನದ ದರದಲ್ಲಿ ಹಾವು-ಏಣಿ ಆಟ: ಆಫರ್‌ಗಳ ಮೊರೆ ಹೋದ ಗ್ರಾಹಕ! – Kannada News | Akshaya Tritiya 2026: Gold Prices Fluctuate Amid Global Tensions; Jewelers Offer Massive Discounts to Attract Buyers

ಬೆಂಗಳೂರು, ಏಪ್ರಿಲ್ 14: ಶ್ರೇಷ್ಠ ದಿನವಾದ ಅಕ್ಷಯ ತೃತೀಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದರೆ, ಹಳದಿ ಲೋಹದ ಬೆಲೆ ಮಾತ್ರ ಸ್ಥಿರವಾಗಿಲ್ಲದೆ ಗ್ರಾಹಕರನ್ನು ಚಿಂತೆಗೆ ಈಡುಮಾಡಿದೆ. ಕಳೆದ ಒಂದು ತಿಂಗಳಿನಿಂದ ಗಲ್ಫ್ ರಾಷ್ಟ್ರಗಳ ಯುದ್ಧ ಮತ್ತು ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚಿನ್ನದ ದರ (Gold Price) ಹಾವು-ಏಣಿ ಆಟದಂತೆ ಏರಿಕೆ ಮತ್ತು ಇಳಿಕೆ ಕಾಣುತ್ತಿದೆ.

ಚಿನ್ನದ ದರ ಏರಿಕೆಯ ಆತಂಕ

ಯುದ್ಧದ ಕದನ ವಿರಾಮದ ಸುದ್ದಿಗಳ ಬೆನ್ನಲ್ಲೇ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ಸ್ಥಿರವಾಗಿದ್ದ ದರ, ಏಪ್ರಿಲ್ ವೇಳೆಗೆ ಗಮನಾರ್ಹ ಏರಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,000 ರೂ. ಗಡಿ ದಾಟಿ ಮುನ್ನುಗ್ಗುತ್ತಿದ್ದು, ಅಕ್ಷಯ ತೃತೀಯದ ವೇಳೆಗೆ ಇದು ಮತ್ತಷ್ಟು ದುಬಾರಿಯಾಗುವ ಆತಂಕ ಮೂಡಿದೆ.

ಗ್ರಾಹಕರನ್ನು ಸೆಳೆಯಲು ಆಫರ್‌ಗಳ ಸುರಿಮಳೆ!

ಬೆಲೆ ಏರಿಕೆಯ ನಡುವೆಯೂ ಗ್ರಾಹಕರನ್ನು ಆಕರ್ಷಿಸಲು ಜ್ಯುವೆಲರಿ ಮಳಿಗೆಗಳು ಭರ್ಜರಿ ಆಫರ್‌ಗಳನ್ನು ಘೋಷಿಸಿವೆ. ಸದ್ಯ ಬೆಂಗಳೂರಿನಲ್ಲಿ ಆಭರಣ ಮಳಿಗೆಗಳು ನೀಡುತ್ತಿರುವ ಆಫರ್​ ವಿವರ ಹೀಗಿದೆ;

  • ಚಿನ್ನದ ಆಭರಣಗಳ ಮೇಲೆ ಶೇ 20 ರಷ್ಟು ವೇಸ್ಟೇಜ್ (ಸೇತುವಾರಿ) ರಿಯಾಯಿತಿ.
  • ಹಳೆ ಚಿನ್ನದ ವಿನಿಮಯದ ಮೇಲೆ ಪ್ರತಿ ಗ್ರಾಂಗೆ 100 ರೂಪಾಯಿ ಹೆಚ್ಚುವರಿ ಲಾಭ.
  • ಡೈಮಂಡ್ ಮತ್ತು ಅನ್‌ಕಟ್ ಡೈಮಂಡ್ ಆಭರಣಗಳ ಮೇಲೆ ಶೇ 12.5 ರಷ್ಟು ಡಿಸ್ಕೌಂಟ್.
  • ಅಕ್ಷಯ ತೃತೀಯದ ದಿನದ ದರ ಏರಿಕೆಯಿಂದ ಬಚಾವಾಗಲು ಈಗಲೇ ‘ಪ್ರೀ-ಬುಕ್ಕಿಂಗ್’ ಮಾಡುವ ಸೌಲಭ್ಯ.

ಏಪ್ರಿಲ್ 13 ರಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿತ್ತು. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಅಂದಾಜು 13,975 ರೂ. (10 ಗ್ರಾಂಗೆ 1,39,750 ರೂ.) ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,246 ರೂ. (10 ಗ್ರಾಂಗೆ 1,52,460 ರೂ.) ನಷ್ಟಿತ್ತು. ಹಿಂದಿನ ದಿನಕ್ಕೆ, ಅಂದರೆ ಏಪ್ರಿಲ್ 12ಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂಗೆ ಸುಮಾರು 350 ರಿಂದ 400 ರೂಪಾಯಿಗಳಷ್ಟು ಕುಸಿತ ದಾಖಲಾಗಿದೆ.

ಇದನ್ನೂ ಓದಿ: ಚಿನ್ನದ ದರ ಹಾವು-ಏಣಿ ಆಟದ ಮಧ್ಯೆ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳಲ್ಲಿ ಕ್ಯೂ

ಏಪ್ರಿಲ್ 19 ರಂದು ಅಕ್ಷಯ ತೃತೀಯ ಇದೆ. ಹೀಗಾಗಿ, ಒಟ್ಟಿನಲ್ಲಿ ಬೆಲೆ ಎಷ್ಟೇ ಏರಿಕೆಯಾದರೂ ಅಕ್ಷಯ ತೃತೀಯದಂದು ಸ್ವಲ್ಪವಾದರೂ ಚಿನ್ನ ಖರೀದಿಸಬೇಕು ಎಂಬ ಪದ್ಧತಿಯನ್ನು ಅನುಸರಿಸುವ ಗ್ರಾಹಕರು ಈಗಿನಿಂದಲೇ ಮಳಿಗೆಗಳಿಗೆ ಭೇಟಿ ನೀಡಿ ಪ್ಲಾನ್ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Horoscope: ಸೂರ್ಯನ ಸಂಚಾರ ಬದಲಾವಣೆ; ಈ ರಾಶಿಯವರಿಗೆ ಸಿಗಲಿದೆ ಬಲವಾದ ಯಶಸ್ಸು!

ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಟಿವಿ9 ಕನ್ನಡದ ಮೂಲಕ 14 ಏಪ್ರಿಲ್ 2026, ಮಂಗಳವಾರದ ದೈನಂದಿನ ರಾಶಿಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ ದ್ವಾದಶಿ, ಶತಭಿಷ ನಕ್ಷತ್ರ, ಶುಕ್ಲ ಯೋಗ ಮತ್ತು ಕೌಲವಕರಣದೊಂದಿಗೆ ಕೂಡಿರುತ್ತದೆ. ದಿನದ ರಾಹುಕಾಲವು ಮಧ್ಯಾಹ್ನ 3:25 ರಿಂದ ಸಂಜೆ 4:58 ರವರೆಗೆ ಇರುತ್ತದೆ, ಆದರೆ ಸರ್ವಸಿದ್ಧಿ ಕಾಲ ಸಂಕಲ್ಪ ಕಾಲವು ಮಧ್ಯಾಹ್ನ 12:20 ರಿಂದ 1:53 ರವರೆಗೆ ಇರುತ್ತದೆ. ಇಂದು ಡಾ. ಅಂಬೇಡ್ಕರ್ ಜಯಂತೋತ್ಸವ ಮತ್ತು ಸೌರ ಯುಗಾದಿಯನ್ನು ಸಹ ಆಚರಿಸಲಾಗುತ್ತಿದೆ. ಬೆಳಿಗ್ಗೆ 9:38 ಕ್ಕೆ ಸೂರ್ಯ ಭಗವಾನ್ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರಯಾಣ ಬೆಳೆಸುತ್ತಾರೆ, ಇದು ಮೇಷ ಸಂಕ್ರಾಂತಿ ಮತ್ತು ಬಂಗಾಳಿ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ರವಿಯು ಮೇಷ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ ಬಲಶಾಲಿಯಾಗಿರುತ್ತಾನೆ. ಡಾ ಬಸವರಾಜ ಗುರೂಜಿ ಅವರು ಪ್ರತಿಯೊಂದು ರಾಶಿಚಕ್ರದ ಚಿಹ್ನೆಗೆ ನಿರ್ದಿಷ್ಟವಾದ ಆರ್ಥಿಕ ಸ್ಥಿತಿ, ಆರೋಗ್ಯ, ಕುಟುಂಬ ಸಂಬಂಧಗಳು, ವೃತ್ತಿಪರ ಅವಕಾಶಗಳು, ಅದೃಷ್ಟದ ಬಣ್ಣಗಳು, ಸಂಖ್ಯೆಗಳು, ಪ್ರಯಾಣದ ದಿಕ್ಕುಗಳು ಮತ್ತು ಶುಭ ಮಂತ್ರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಲಿನ ತಾಪಕ್ಕೆ ಬೆಂದ ಕರುನಾಡು: ಈ ಜಿಲ್ಲೆಗಳಲ್ಲಿ ಸಂಜೆ ಮಳೆ ಸಂಭವ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು? – Kannada News | Bengaluru Weather Today: Scorching 37°C Heat, Karnataka Temperature Alert and Tips

ಬೆಂಗಳೂರು, ಏ.14: ಇಂದು (ಏ.14) ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಬಿಸಿಲಿನ ಶಾಖ ಹೆಚ್ಚಾಗಲಿದೆ. ಈ ಬಗ್ಗೆ ಹವಾಮಾನ ವರದಿ ಮಾಹಿತಿ ನೀಡಿದೆ. ರಾಜಧಾನಿಯಲ್ಲಿ ಇಂದು ಗರಿಷ್ಠ ತಾಪಮಾನ 35°C ರಿಂದ 37°C ಆಸುಪಾಸಿನಲ್ಲಿ ಇರಲಿದೆ. ಬೆಳಿಗ್ಗೆಯಿಂದಲೇ ಬಿಸಿಲ ಧಗೆ ಇರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬರಬಹುದು ಎಂದು ಹೇಳಲಾಗಿದೆ.

ಇನ್ನು ಮಂಗಳೂರು, ಉಡುಪಿ ಮತ್ತು ಕಾರವಾರ ಭಾಗಗಳಲ್ಲಿ ತಾಪಮಾನದ ಜೊತೆಗೆ ತೇವಾಂಶ ಹೆಚ್ಚಿರಲಿದ್ದು, ಸೆಖೆಯ ಅನುಭವ ಜಾಸ್ತಿ ಇರಲಿದೆ. ಗರಿಷ್ಠ ತಾಪಮಾನ 34°C ದಾಖಲಾಗುವ ಸಾಧ್ಯತೆ ಇದೆ. ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ತೀವ್ರವಾಗಿರಲಿದೆ. ಇಲ್ಲಿ ತಾಪಮಾನವು 40°C ದಾಟುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಾದ ಕೊಡಗು, ಚಾಮರಾಜನಗರ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ನಗರ ಗರಿಷ್ಠ ತಾಪಮಾನ ಕನಿಷ್ಠ ತಾಪಮಾನ ಸ್ಥಿತಿ
ಬೆಂಗಳೂರು 36°C 22°C ಶುಭ್ರ ಆಕಾಶ / ಸಂಜೆ ಮೋಡ
ಮೈಸೂರು 37°C 21°C ಸಾಧಾರಣ ಮೋಡ
ಮಂಗಳೂರು 34°C 26°C ಸೆಖೆ ಮತ್ತು ಆರ್ದ್ರತೆ
ಕಲಬುರಗಿ 41°C 25°C ತೀವ್ರ ಬಿಸಿಲು
ಹುಬ್ಬಳ್ಳಿ-ಧಾರವಾಡ 38°C 23°C ಬಿಸಿಲು

ಹೊರಗೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿ ನೀರು, ಎಳನೀರು ಅಥವಾ ಮಜ್ಜಿಗೆ ಸೇವಿಸಿ. ಮಧ್ಯಾಹ್ನ 12:00 ರಿಂದ 4:00 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ತಜ್ಞರು ಹೇಳಿದ್ದಾರೆ. ಬಿಸಿಲಿನ ತಾಪ ಹೆಚ್ಚಿರುವುದರಿಂದ ಎಣ್ಣೆ ಪದಾರ್ಥಗಳಿಗಿಂತ ತಂಪು ಪಾನೀಯ ಹಾಗೂ ಹಣ್ಣುಗಳಿಗೆ ಆದ್ಯತೆ ನೀಡಿ ಎಂದು ಹೇಳಿದ್ದಾರೆ. ಕೊಡಗಿನಲ್ಲಿ ಇಂದು ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ 21°C ಇರಲಿದೆ. ಹಗಲಿನಲ್ಲಿ ಶುಭ್ರ ಸೂರ್ಯನ ಪ್ರಕಾಶವಿರಲಿದ್ದು, ರಾತ್ರಿ ವೇಳೆ ಮೋಡ ಕವಿದ ವಾತಾವರಣದೊಂದಿಗೆ ಶೇ. 20ರಷ್ಟು ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಯಶಸ್ಸಿಗೆ ಪ್ರಯತ್ನ, ದೈವಾನುಕೂಲದಿಂದ ಕಾರ್ಯಸಿದ್ಧಿ

ಮೈಸೂರಿನ ಇಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದ್ದು, ಗರಿಷ್ಠ ತಾಪಮಾನ 36°C ದಾಖಲಾಗಲಿದೆ. ದಿನವಿಡೀ ಬಿಸಿಲಿದ್ದರೂ ಸಂಜೆ ವೇಳೆಗೆ ಸ್ವಲ್ಪ ಮೋಡ ಕವಿಯುವ ನಿರೀಕ್ಷೆಯಿದೆ. ಚಿಕ್ಕಮಗಳೂರಿನಲ್ಲಿ ಗರಿಷ್ಠ ತಾಪಮಾನ 33°C ವರೆಗೆ ಇರಲಿದ್ದು, ಹವಾಮಾನವು ಸಾಮಾನ್ಯವಾಗಿ ಶುಭ್ರವಾಗಿರಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮೋಡಗಳಿರಬಹುದು. ಇನ್ನು ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆಯಿದೆ. ಕಲಬುರಗಿ ಮತ್ತು ಬಾಗಲಕೋಟೆ ಭಾಗಗಳಲ್ಲಿ ಗರಿಷ್ಠ ತಾಪಮಾನ 41°C ದಾಟುವ ಮೂಲಕ ಬಿಸಿಗಾಳಿಯ ಪ್ರಭಾವ ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:18 am, Tue, 14 April 26

Source link

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಸತತ 2ನೇ ವರ್ಷವೂ ಶುಲ್ಕ ಏರಿಕೆ; ಪೋಷಕರ ಜೇಬಿಗೆ ಕತ್ತರಿ! – Kannada News | Karnataka Engineering Fee Hike: Students Shocked as Govt Increases Fees by 7.5 percent for Second Consecutive Year

ಬೆಂಗಳೂರು, ಏಪ್ರಿಲ್ 14: ಕರ್ನಾಟಕದಲ್ಲಿ (Karnataka) ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ತಾಂತ್ರಿಕ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. 2026-27ನೇ ಸಾಲಿನ ಎಂಜಿನಿಯರಿಂಗ್ (Engineering) ಕೋರ್ಸ್‌ಗಳ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಮಧ್ಯಮ ವರ್ಗದ ಪೋಷಕರಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಶುಲ್ಕದ ಪಟ್ಟಿ ಹೀಗಿದೆ

ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ (CET) ಸೀಟು ಪಡೆಯುವ ವಿದ್ಯಾರ್ಥಿಗಳು ಇನ್ನು ಮುಂದೆ ಹೆಚ್ಚಿನ ಹಣ ಪಾವತಿಸಬೇಕಿದೆ.

  • ಟೈಪ್-1 ಕಾಲೇಜುಗಳು: ಪ್ರಸ್ತುತ ಇರುವ 81,800 ರೂ. ಶುಲ್ಕವು ಇನ್ನು ಮುಂದೆ 87,935 ರೂ. ಗೆ ಏರಿಕೆಯಾಗಲಿದೆ.
  • ಟೈಪ್-2 ಕಾಲೇಜುಗಳು: ಪ್ರಸ್ತುತ ಇರುವ 91,000 ರೂ. ಶುಲ್ಕವು ಇನ್ನು ಮುಂದೆ 97,825 ರೂ. ಗೆ ಏರಲಿದೆ.

ಸತತ ಏರಿಕೆಗೆ ವಿದ್ಯಾರ್ಥಿಗಳು, ಪೋಷಕರ ಆಕ್ರೋಶ

ಕಳೆದ 2025-26ನೇ ಸಾಲಿನಲ್ಲಿಯೂ ಸಹ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಸತತ ಎರಡನೇ ವರ್ಷವೂ ಶುಲ್ಕ ಏರಿಕೆಯಾಗುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿದ್ದೇವೆ. ಈಗ ಶಿಕ್ಷಣದ ಶುಲ್ಕವನ್ನೂ ಹೆಚ್ಚಿಸಿದರೆ ಉನ್ನತ ಶಿಕ್ಷಣ ಸಾಮಾನ್ಯರಿಗೆ ಗಗನಕುಸುಮವಾಗಲಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ?

ಈ ವರ್ಷ ಪಿಯುಸಿ ಬಳಿಕ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಶುಲ್ಕ ಏರಿಕೆ ಮಾಡುವುದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಹುದು. ಸರ್ಕಾರ ಕೂಡಲೇ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಯಶಸ್ಸಿಗೆ ಪ್ರಯತ್ನ, ದೈವಾನುಕೂಲದಿಂದ ಕಾರ್ಯಸಿದ್ಧಿ – Kannada News | Daily Horoscope April 14, 2026: Zodiac wise Astrology Forecast and Tips

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಮಂಗಳವಾರದಂದು ಒತ್ತಡದಿಂದ ಕೆಲಸ, ಅನಪೇಕ್ಷಿತ ಮಾತು, ವ್ಯಾಪಾರ ಸುಗಮ, ವಾಹನದಿಂದ ಲಾಭ, ಮಿತ್ರರ ಜೊತೆ ಯಾತ್ರೆ, ಹಣದ ಆಗಮನ ಇವೆಲ್ಲ ಈ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರಾ, ಯೋಗ : ಶುಭ, ಕರಣ : ಭದ್ರ, ಸೂರ್ಯೋದಯ – 06 – 12 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:31 – 17:04, ಯಮಗಂಡ ಕಾಲ 09:19 – 10:52, ಗುಳಿಕ ಕಾಲ 12:25 – 13:58

ಮೇಷ ರಾಶಿ :

ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅಸತ್ಯವನ್ನು ಹೇಳುವಿರಿ. ಅಲ್ಪಾವಧಿಯ ಹೂಡಕೆಯಿಂದ ಅಲ್ಪ ಲಾಭ. ಇಂದು ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಕೆಲಸವನ್ನು ಇಂದು ಮನಸ್ಸಿನಿಂದ ಮಾಡಿ.

ವೃಷಭ ರಾಶಿ :

ದೂರ ಪ್ರಯಾಣದಿಂದ ಪ್ರಯಾಸ. ಅನಾರೋಗ್ಯಕ್ಕೆ ಕಾರಣ. ಮನಸ್ಸು ಶುದ್ಧವಾಗಿದ್ದು ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದ ಕೌಟುಂಬಿಕ ವಿವಾದವನ್ನು ಮುಕ್ತಾಯ ಮಾಡಿಕೊಳ್ಳುವುದು ಉತ್ತಮ. ನೀವು ಹಳೆಯ ಸ್ನೇಹವು ಪುನಃ ನವೀಕರಣವಾಗುಉದು. ಧಾರ್ಮಿಕ ಕಾರ್ಯದಲ್ಲಿ ತೊಡಗುವಿಕೆ, ಮನಸ್ಸಿಗೆ ಅಲ್ಪ ಶಾಂತತೆ. ತಾಯಿಯ ಕಡೆಯಿಂದ ಲಾಭದ ಭರವಸೆ ಇರುತ್ತದೆ.

ಮಿಥುನ ರಾಶಿ :

ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ಅತಿಥಿಗಳಿಗೆ ಊಟೋಪಾಚರದಲ್ಲಿ ಗಮನ ಕೊಡುವಿರಿ. ಸಹಾಯವನ್ನು ಪಡೆದುಕೊಂಡವರ ಭೇಟಿಯಾಗಲಿದೆ. ಅವರಿಂದ ಗೌರವವಾದರು ಸಿಗಲಿವೆ. ಸಾಕಷ್ಟು ಸಂಪತ್ತು ಇದ್ದರೂ, ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರುತ್ತದೆ. ವಾಹನ ದುರಸ್ತಿಯಿಂದ ಧನನಷ್ಟ ಮತ್ತು ವಾಹನ ಮೇಲಿನ ನಂಬಿಕೆ ಹೋಗುವುದು. ಯಾರೆದುರೂ ನಿಮ್ಮ ಪರಾಕ್ರಮವನ್ನು ಪ್ರದರ್ಶಿಸುವುದು ಬೇಡ. ಸ್ನೇಹಿತರ ಸಹಕಾರವು ನಿಮಗೆ ಸಾಕು ಎನಿಸಬಹುದು.

ಕರ್ಕಾಟಕ ರಾಶಿ :

ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಏನನ್ನಾದರೂ ಜನಬಲದ ಮೂಲಕ ಸಾಧಿಸುವುದು ಸುಲಭ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಆರ್ಥಿಕ ವಿಷಯಗಳಲ್ಲಿ ಪ್ರಯೋಜನವಿದೆ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಉತ್ಸಾಹವು ಹೆಚ್ಚಾಗುತ್ತದೆ

ಸಿಂಹ ರಾಶಿ :

ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಉತ್ಸಾಹಕ್ಕೆ ಬರುವ ಅಡ್ಡಿಗಳನ್ನು ನೀವು ಸಹಿಸಲಾರಿರಿ. ನಿಮ್ಮ ಮೇಲಿನ ಪ್ರಕರಣಗಳು ಒಂದೊಂದಾಗಿ ಬಗೆಹರಿಯುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ದುಃಖಿಸಬೇಕಾದೀತು. ದಾಂಪತ್ಯ ಸುಖವು ಹೆಚ್ಚಾಗುವುದು. ಸಂಕೀರ್ಣ ಕಾರ್ಯಗಳನ್ನು ಸರಳ ಮಾಡಿಕೊಂಡು ಕಾರ್ಯಗತ ಗೊಳಿಸಲಾಗುವುದು.

ಕನ್ಯಾ ರಾಶಿ :

ಸಂಗಾತಿಯ ಮುನಿಸಿಗೆ ನೀವು ಆಹಾರವಾಗುವಿರಿ. ಹೆಚ್ಚು ಲಾಭ ಪಡೆಯಲು ಹೋಗಿ ಯಾರಿಗಾದರೂ ಸಿಕ್ಕಿಹಾಕಿಕೊಳ್ಳುವಿರಿ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಪಿರ್ತಾರ್ಜಿತ ಆಸ್ತಿಯನ್ನು ಗೊಂದಲಗಳು ಇರಬಹುದು. ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಇಂದು ಶುಭಕರವಾಗಿದ್ದು ಅಹಿತಕರ ವಾತಾವರಣಕ್ಕೆ ಆಸ್ಪದವನ್ನು ಕೊಡಲಾರಿರಿ.

ತುಲಾ ರಾಶಿ :

ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ. ಮಂದಿರಗಳಿಗೆ ಭೇಟಿ ನೀಡಿ ಸ್ವಲ್ಪ ಸಮಯವನ್ನು ಅಲ್ಲಿ ಕಳೆದು ಬರುವುದು ಒಳಿತು. ಇಂದು ನೀವು ನಿಮ್ಮ ಕುಟುಂಬದ ಜೊತೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಿರಿ. ಅನಪೇಕ್ಷಿತ ಚರ್ಚೆಯು ನಿಮ್ಮ ನೆಮ್ಮದಿಯನ್ನು ಹಾಳುಮಾಡೀತು.

ವೃಶ್ಚಿಕ ರಾಶಿ :

ಅಪ್ರಿಯಾವಾದ ಆಪಾದನೆಗಳು ಬರಬಹುದು. ಹಠದ ಸ್ವಭಾವವು ನಿಮ್ಮನ್ನು ಒಂಟಿಗನನ್ನಾಗಿ ಮಾಡುತ್ತದೆ‌. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು. ಸಜ್ಜನರ ಸಂಯೋಗದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಅನುಭವಗಳನ್ನು ನೀವು ಪಡೆಯುತ್ತೀರಿ. ಪ್ರತಿಭೆಯ ಖ್ಯಾತಿಯನ್ನು ನೀವು ಪಡೆಯಬಹುದು.

ಧನು ರಾಶಿ :

ಇಂದು ಗೊತ್ತಿಲ್ಲದೇ ನಿಮ್ಮ ಸಮಯವು ವ್ಯರ್ಥವಾಗಬಹುದು. ವಿದೇಶದ ವ್ಯಕ್ತಿಗಳಿಂದ ತೊಂದರೆ. ಸಂಗಾತಿಯ ಜೊತೆಗೆ ಸಣ್ಣ ಕಲಹವು ಆಗಬಹುದು. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಕೃಷಿಯಲ್ಲಿ ನೆಮ್ಮದಿಯನ್ನು ಕಾಣುವಿರಿ. ನೀವು ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಬರಬಹುದು. ನಿಮ್ಮ ಪಾಲಿನ ಕರ್ತವ್ಯಗಳನ್ನು ಮುಂದುವರಿಸಿ. ಪ್ರೇಮವು ವಿಪರೀತ ಹೊದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು.

ಮಕರ ರಾಶಿ :

ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ಅದಕ್ಕೆ ಇಲ್ಲವೆನ್ನಬೇಡಿ. ಸುರಕ್ಷತೆಯ ಗಮನಾಗಮನ ಇಂದು ಬಹಳ ಮುಖ್ಯ. ಯಾರ ಸಹಕಾರವೂ ನಿಮ್ಮನ್ನು ಏನೂ ಮಾಡಲಾಗದು. ಜೊತೆಗಾರರನ್ನು ಆತ್ಮೀಯವಾಗಿ ಕಾಣುವಿರಿ. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು.

ಕುಂಭ ರಾಶಿ :

ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯವು ಮುನ್ನಡೆದರೆ ಸೊಗಸು. ನ್ಯಾಯಾಲಯದಲ್ಲಿ ವಾದ-ವಿವಾದಗಳನ್ನು ಮಾಡಲಿದ್ದೀರಿ. ದೂರಪ್ರಯಾಣವನ್ನು ಮಾಡಿ ಆಯಾಸಗೊಳ್ಳಬೇಡಿ. ಸ್ಥಿರಾಸ್ತಿಯ ಮಾಹಿತಿಯನ್ನು ಕೊಡಬೇಕಾಗುವುದು. ಸಂತೃಪ್ತಿಯಿಂದ ನೀವು ನಿಮ್ಮ ಹಳೆಯ ಎಲ್ಲವನ್ನೂ ಮರೆಯುವಿರಿ. ಹಣದ ಅನಿವಾರ್ಯತೆಯು ಬರಲಿದ್ದು, ಹೇಗೋ ಹೊಂದಿಕೆಯಾಗಲಿದೆ. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವುದೂ ಇಷ್ಟವಾಗದು.

ಮೀನ ರಾಶಿ :

ನೀವಿಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದೀರಿ. ನಿಮ್ಮ ಮಾತಿಗೆ ಮನ್ನಣೆ ಸಿಗಲಿಲಿದೆ. ಶ್ರಮದ ಫಲವನ್ನು ಉಣ್ಣುವ ಕಾಲ ಬಂದಿರುತ್ತದೆ. ಇಂದು ನೀವು ಅಪರಿಚಿತರಿಂದ ಬೆಂಬಲ ಪಡೆಯಬಹುದು. ಲಾಭದ ಹಾದಿಯು ಅಡ್ಡಿಯಿಂದ ಚಿಂತೆ ಕಾಡಬಹುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು – Kannada News | TCS sexual harassment case, six women cops undercover operation at the office for 40 days

ಮುಂಬೈ, ಏಪ್ರಿಲ್ 13: ದೇಶದ ಅತಿದೊಡ್ಡ ಐಟಿ ಸರ್ವಿಸಸ್ ಸಂಸ್ಥೆಯಾದ ಟಿಸಿಎಸ್​ನ ನಾಶಿಕ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ (Sexual harassment) ಇತ್ಯಾದಿ ಅನ್ಯಾಯ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೆಲ ಟಿಸಿಎಸ್ (TCS) ಉದ್ಯೋಗಿಗಳು ನೀಡಿದ ದೂರಿನ ಆಧಾರದ ಮೇಲೆ ಸತ್ಯಾಂಶ ಪತ್ತೆ ಮಾಡಲು ಆರು ಮಹಿಳಾ ಪೊಲೀಸರು ಅಂಡರ್​ಕವರ್ ಆಪರೇಷನ್ ಮಾಡಿ ಕಾಮಾಂಧರ ಬಣ್ಣ ಬಯಲು ಮಾಡಲು ನೆರವಾಗಿದ್ದಾರೆ. ಟಿಸಿಎಸ್​ನ ಎಚ್​ಆರ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರು ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್

ಟಿಸಿಎಸ್​ನ ನಾಶಿಕ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ ಇತ್ಯಾದಿ ಘಟನೆಗಳು ನಡೆಯುತ್ತಿವೆ ಎಂದು ಸಾಲು ಸಾಲಾಗಿ ಕೆಲ ಉದ್ಯೋಗಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸರನ್ನು ಅಂಡರ್​ಕವರ್ ಆಪರೇಷನ್​ಗೆ ಕಳುಹಿಸಲಾಯಿತು. ಟಿಸಿಎಸ್ ಉದ್ಯೋಗಿಗಳ ಸೋಗಿನಲ್ಲಿ ಈ ಆರು ಮಹಿಳಾ ಪೊಲೀಸರು ಕಚೇರಿಯಲ್ಲಿ ಪ್ರತಿಯೊಬ್ಬರ ಚಲನವಲನ, ವರ್ತನೆಗಳ ಮೇಲೆ ಕಣ್ಣಿಡುತ್ತಾ ಹೋಗಿದ್ದರು. ಅದರಲ್ಲೂ ದೂರಿನಲ್ಲಿ ಪ್ರಸ್ತಾಪವಾದ ಆರೋಪಿಗಳ ಮೇಲೆ ಅವರು ನಿಗಾ ಇರಿಸಿದ್ದರು.

ಇದನ್ನೂ ಓದಿ: ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

40 ದಿನಗಳವರೆಗೆ ಈ ಆಪರೇಷನ್ ನಡೆದಿತ್ತು. ಬಿಪಿಒ ಕಚೇರಿಯಲ್ಲಿ ಮೀಟಿಂಗ್​ಗಳು ಮತ್ತು ವರ್ಕ್​ಸ್ಟೇಶನ್​ಗಳಲ್ಲಿ ಆರೋಪಿಗಳ ವರ್ತನೆಯನ್ನು ಗಮನಿಸತೊಡಗಿದ್ದರು. ಕಚೇರಿಯಲ್ಲಿ ತಮ್ಮ ಕೆಲಸದ ಅವಧಿ ಮುಗಿದ ಬಳಿಕ ಈ ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳಿಗೆ ಎಲ್ಲಾ ಮಾಹಿತಿಯನ್ನೂ ಒಪ್ಪಿಸುತ್ತಿದ್ದರು. ಆರೋಪಿಗಳ ವಿರುದ್ಧ ಕೇಳಿಬಂದ ಆರೋಪಗಳಲ್ಲಿ ಹುರುಳಿದೆ ಎನ್ನುವುದು ಪೊಲೀಸರಿಗೆ ಮನವರಿಕೆ ಆಗಿತ್ತು.

ಟಿಸಿಎಸ್​ನ ಮಹಿಳಾ ಉದ್ಯೋಗಿಯೊಬ್ಬರು ಮಾರ್ಚ್ 26ರಂದು ದೇವಲಾಲಿ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾರೆ. ತನ್ನ ಮೇಲೆ ಹಿರಿಯ ಸಹೋದ್ಯೋಗಿಯಿಂದ ರೇಪ್ ಆಗಿದೆ ಎಂದು ಆರೋಪಿಸುತ್ತಾರೆ. ತನಿಖೆ ನಡೆಯುತ್ತಿರುವಂತೆಯೇ ಮತ್ತಷ್ಟು ಉದ್ಯೋಗಿಗಳು ಮುಂದೆ ಬಂದು ಕಂಪ್ಲೇಂಟ್ ನೀಡುತ್ತಾರೆ. ಮಾರ್ಚ್ 26ರಿಂದ ಏಪ್ರಿಲ್ 3ರವರೆಗೆ ಎಂಟು ಎಫ್​ಐಆರ್​ಗಳು ದಾಖಲಾಗುತ್ತವೆ.

ಟಿಸಿಎಸ್​ನ ಈ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯದ ದೂರುಗಳನ್ನು ಆಲಿಸಲು ಇಂಟರ್ನಲ್ ಕಂಪ್ಲೇಂಟ್ ಕಮಿಟಿ ಇದೆ. ಆದರೆ, ಉದ್ಯೋಗಿಗಳು ಇಲ್ಲಿ ದೂರು ಕೊಡಲು ಹಿಂಜರಿದಿದ್ದರು. ಆದರೆ, ಎಚ್​ಆರ್​ಗೆ ಉದ್ಯೋಗಿಗಳು ನೀಡಿದ ದೂರಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು 

ಪೊಲೀಸರು ಈ ಎಚ್​ಆರ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ನಾಶಿಕ್ ಟಿಸಿಎಸ್ ಬಿಪಿಒದಲ್ಲಿ ಲೈಂಗಿಕ ಕಿರುಕುಳ ಘಟನೆಗಳು ಮಾತ್ರವಲ್ಲ, ದಬ್ಬಾಳಿಕೆ, ಬೆದರಿಕೆ, ಧಾರ್ಮಿಕ ಅವಹೇಳನ ಇತ್ಯಾದಿ ಪೀಡನೆಗಳು ನಡೆಯುತ್ತಿವೆ ಎಂಬುದು ದೂರುಗಳಿಂದ ತಿಳಿದುಬರುತ್ತದೆ.

ಸದ್ಯ ಈ ಪ್ರಕರಣದ ತನಿಖೆ ನಡೆಸಲು ಎಸ್​ಐಟಿ ರಚಿಸಲಾಗಿದೆ. ಸಂದೀಪ್ ಮಿಟ್ಕೆ ಈ ಎಸ್​ಐಟಿ ತಂಡದ ನೇತೃತ್ವ ವಹಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs RR: ರಾಜಸ್ಥಾನಕ್ಕೆ ಮುಳುವಾದ ಅತಿಯಾದ ಆತ್ಮವಿಶ್ವಾಸ; ಸನ್‌ರೈಸರ್ಸ್ ವಿರುದ್ಧ ಹೀನಾಯ ಸೋಲು

ಬಲಿಷ್ಠ ಬ್ಯಾಟಿಂಗ್ ಹಾಗೂ ತನ್ನ ಮಾರಕ ಬೌಲಿಂಗ್ ದಾಳಿಯಿಂದ 2026 ರ ಐಪಿಎಲ್‌ನಲ್ಲಿ ಏಕೈಕ ಅಜೇಯ ತಂಡವಾಗಿ ಉಳಿದಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು 57 ರನ್​​ಗಳಿಂದ ಹೀನಾಯವಾಗಿ ಸೋಲಿಸುವಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಯಶಸ್ವಿಯಾಗಿದೆ. ರಾಜಸ್ಥಾನ್ ತಂಡವನ್ನು ಸನ್‌ರೈಸರ್ಸ್ ತಂಡ ಸೋಲಿಸಿತು ಎನ್ನುವುದಕ್ಕಿಂತ, ಸನ್‌ರೈಸರ್ಸ್ ತಂಡದ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಇಬ್ಬರು ಯುವ ವೇಗಿಗಳಾದ ಪ್ರಫುಲ್ ಹಿಂಗೆ ಹಾಗೂ ಸಕೀಬ್ ಹುಸೇನ್ ಅವರ ಮಾರಕ ದಾಳಿಗೆ ರಾಜಸ್ಥಾನ್ ಮಂಡಿಯೂರಿತು ಎಂದರೆ ತಪ್ಪಾಗಲಾರದು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 216 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ಇಬ್ಬರು ಯುವ ವೇಗಿಗಳ ದಾಳಿಗೆ ತತ್ತರಿಸಿ 156 ರನ್​ಗಳಿಗೆ ಆಲೌಟ್ ಆಯಿತು. ಸನ್‌ರೈಸರ್ಸ್ ಪರ ಪ್ರಫುಲ್ 4 ವಿಕೆಟ್ ಪಡೆದರೆ, ಸಕೀಬ್ 4 ವಿಕೆಟ್ ಕಬಳಿಸಿದರು.

Source link

Exit mobile version