ನಾಲಗೆ ಹರಿಬಿಟ್ಟ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ ಪ್ರೇಮ್ – Kannada News | Director Prem gave complaint against Kanakapura Srinivas
ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakpura Srinivas) ಕೆಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ವೀರಾವೇಷದಿಂದ ಮಾತನಾಡಿದ್ದರು. ಚಿತ್ರರಂಗದಲ್ಲಿ ಇರುವವರೆಲ್ಲರೂ ತಮಗೆ ಮೋಸ ಮಾಡಿದ್ದಾರೆ, ತಮ್ಮನ್ನು ಹೊರತಾಗಿ ಚಿತ್ರರಂಗದಲ್ಲಿರುವವರೆಲ್ಲ ದುರುಳರು ಎಂಬ ರೀತಿ ಮಾತನಾಡಿದ್ದರು. ಪ್ರೇಮ್, ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ. ಖುದ್ದಾಗಿ ಫಿಲಂ ಚೇಂಬರ್ಗೆ…