ಬೆಂಗಳೂರು ಚಿತ್ರೋತ್ಸವ: ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡದೆ ಲಾಸ್ಟ್ ಲ್ಯಾಂಡ್, ಸಬರ್ ಬೊಂದಾ, ವನ್ಯಾ – Kannada News | Lost Land movie gets Best Film award in 17th Bengaluru International Film Festival
ಸಿನಿಮಾಸಕ್ತರಿಗೆ ದೇಶ-ವಿದೇಶದ ನೂರಾರು ಸಿನಿಮಾಗಳ ವೀಕ್ಷಣೆಗೆ ವೇದಿಕೆ ಕಲ್ಪಿಸಿದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival) ಶುಕ್ರವಾರ (ಫೆಬ್ರವರಿ 6) ಅಂತ್ಯಗೊಂಡಿದೆ. ಜಪಾನ್ ದೇಶದ ‘ಲಾಸ್ಟ್ ಲ್ಯಾಂಡ್’, ಮರಾಠಿಯ ‘ಸಬರ್ ಬೊಂದಾ’ ಹಾಗೂ ಕನ್ನಡದ ‘ವನ್ಯಾ’ ಸಿನಿಮಾಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ವಿಜೇತರಿಗೆ ಪಾರಿತೋಷಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಅತ್ಯುತ್ತಮ…