ಶಿವಮೊಗ್ಗ, (ಫೆಬ್ರವರಿ 06): ಬೆಂಗಳೂರು ನಮ್ಮ ಮೆಟ್ರೊ (Bengaluru Namma Metro) ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಬಿಎಂಆರ್ಸಿಎಲ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯನವರ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದೆ ಎಂದು ಬಿಜೆಪಿ(BJP) ನಾಯಕರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರು, ಎಲ್ಲಾ ಏರಿಕೆ ಮಾಡುವುದು ಕೇಂದ್ರ ಸರ್ಕಾರದ ಎಂದು ತಿರುಗೇಟು ನೀಡುತ್ತಿದ್ದಾರೆ. ಹೀಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಇದರ ಮಧ್ಯೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಹ ರಾಜ್ಯ ಸರ್ಕಾರದ ವಿರುದ್ಧವೇ ಆರೋಪಿಸಿದ್ದಾರೆ. ಇನ್ನು ಒಂದು ವೇಳೆ ಕೇಂದ್ರ ಸರ್ಕಾರವೇ ಮೆಟ್ರೋ ಟಿಕೆಟ್ ದರ ಏರಿಸಿದ್ದೇ ಆದ್ರೆ 24 ಗಂಟೆಯೊಳಗೆ ಕಡಿಮೆ ಮಾಡಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.
ಹೈದರಾಬಾದ್, ಫೆಬ್ರುವರಿ 6: ಈ ಬಾರಿಯ ಕೇಂದ್ರ ಬಜೆಟ್ನಲ್ಲಿ (2026-27) ಮುಂದಿನ 25 ವರ್ಷಕ್ಕೆ ದೇಶದ ಬೆಳವಣಿಗೆಗೆ ಬುನಾದಿ ಹಾಕುವ ಕೆಲಸ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅಭಿಪ್ರಾಯಪಟ್ಟಿದ್ದಾರೆ. ನಾಂಪಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜೋಶಿ, 2047ರ ವಿಕಸಿತ ಭಾರತದ ಆಶಯ ಈಡೇರಿಸಲು ಬಜೆಟ್ ಕೆಲಸ ಮಾಡುತ್ತದೆ ಎಂದಿದ್ದಾರೆ.
‘2013ರಲ್ಲಿ ವಿಶ್ವದ ಐದು ಶಿಥಿಲ ಆರ್ಥಿಕತೆಗಳಲ್ಲಿ ಭಾರತವೂ ಒಂದೆನಿಸಿತ್ತು. ಅಭಿವೃದ್ಧಿಶೀಲ ಮಾರುಕಟ್ಟೆಗಳು ತಮ್ಮ ಬೆಳವಣಿಗೆಗೆ ವಿದೇಶೀ ಬಂಡವಾಳದ ಮೇಲೆ ಅವಲಂಬಿತವಾಗಿದ್ದವು. ಆ ಪರಿಸ್ಥಿತಿಯಿಂದ ಈಗ 2047ಕ್ಕೆ ವಿಕಸಿತ ಭಾರತದ ಆಶಯದತ್ತ ಸಾಗುತ್ತಿದ್ದೇವೆ’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
‘ವಿಶ್ವ ಶ್ರೇಣಿಯಲ್ಲಿ ಬದಲಾವಣೆ ಆಗುತ್ತದೆ. ಭಾರತವು ಈ ಬದಲಾವಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ನಾವು ನಾಲ್ಕನೇ ಅತಿದೊಡ್ಡ ಹಾಗೂ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿದ್ದೇವೆ. ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ’ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಎಐ ಕ್ಷೇತ್ರದ ಮಹತ್ವವನು ಒತ್ತಿ ಹೇಳಿದ ಗ್ರಾಹಕ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ, ಎಐ ಕ್ರಾಂತಿಯನ್ನು ವಿದ್ಯುತ್ ಮತ್ತು ಇಂಟರ್ನೆಟ್ ಕ್ರಾಂತಿಗೆ ಹೋಲಿಕೆ ಮಾಡಿದ್ದಾರೆ. ಹಾಗೆಯೇ, ತಮ್ಮ ಸರ್ಕಾರವು ಎಐ ಮಿಷನ್ಗೆ ನೀಡಿರುವ ಮಹತ್ವವನ್ನೂ ಎತ್ತಿ ತೋರಿಸಿದ್ದಾರೆ.
ಕ್ರಿಟಿಕಲ್ ಮಿನರಲ್ ಅಥವಾ ಮುಖ್ಯ ಖನಿಜಗಳು ಸೆಮಿಕಂಡಕ್ಟರ್, ಎಐ, ನವೀಕರಣ ಇಂಧನ, ಹಸಿರು ಇಂಧನದಂತಹ ಪ್ರಮುಖ ಸೆಕ್ಟರ್ಗಳಿಗೆ ಬಹಳ ಮಹತ್ವದ್ದಾಗಿದ್ದು, ಸರ್ಕಾರ ಕ್ರಿಟಿಕಲ್ ಮಿನರಲ್ಸ್ ಮಿಷನ್ ಜಾರಿಗೆ ತಂದಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
‘ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿ, ಲಾಜಿಸ್ಟಿಕ್ಸ್ ಕ್ಷಮತೆ, ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್, ಎಐ, ನವೀಕರಣ ಇಂಧನ, ತಂತ್ರಜ್ಞಾನ ಪ್ರಭಾವಿತ ಬೆಳವಣಿಗೆಗೆ ಒತ್ತು ಕೊಡುತ್ತಾ ಭಾರತವು ಆರ್ಥಿಕ ಪ್ರಗತಿ ಸಾಧಿಸುತ್ತಿರುವುದನ್ನು ಈ ಬಾರಿಯ ಬಜೆಟ್ನಲ್ಲಿ ಕಾಣಬಹುದು. ರಾಜ್ಯಗಳಿಗೆ ಸಾಕಷ್ಟು ಫಂಡಿಂಗ್ ಕೊಡಲಾಗಿದ್ದು, ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲು ರಾಜ್ಯಗಳನ್ನು ಶಕ್ತಗೊಳಿಸಲಾಗಿದೆ’ ಎಂದು ಹೊಸ ಮತ್ತು ನವೀಕರಣ ಇಂಧನ ಸಚಿವರಾದ ಅವರು ತಿಳಿಸಿದ್ದಾರೆ.
ಪ್ರಲ್ಹಾದ್ ಜೋಶಿ ಅವರು ನಾಂಪಲ್ಲಿಯಲ್ಲಿ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಜೋಶಿ, 2047ರ ವಿಕಸಿತ ಭಾರತದ ದೂರಗಾಮಿ ಗುರಿಯ ಮುಂದುವರಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಲ್ಹಾದ್ ಜೋಶಿ ಅವರ ಎಕ್ಸ್ ಪೋಸ್ಟ್ಗಳು
Addressed the Vyapari Samvad at Nampally, Hyderabad, engaging with traders and industry representatives on the transformative vision of the Union Budget 2026–27 and India’s development trajectory. @sayedzafarBJP, National Spokesperson and other leaders of BJP Telangana were also… pic.twitter.com/h380hzdf3f
In a press conference at Hyderabad, shared the key highlights of the Union Budget 2026–27 ,along with a special focus on Telangana’s development priorities. The discussion also highlighted takeaways for Telangana’s growth, including investments in high-speed corridors,… pic.twitter.com/IPNhWFZKrm
ಸರಳ ವಿಧಾನಗಳು, ಕಾನೂನು, ನೀತಿ ಸುಧಾರಣೆಗಳ ವ್ಯಾಪಾರ ವಾತಾವರಣ ಸುಲಭಗೊಳಿಸಲಾಗಿದೆ. ವ್ಯಾಪಾರಿಗಳು, ಎಂಎಸ್ಎಂಇಗಳು, ಉದ್ಯಮಗಳಿಗೆ ಶಕ್ತಿ ತುಂಬಲಾಗಿದೆ ಎಂದು ಪ್ರಲ್ಹಾದ್ ಜೋಶಿ ವಿಶ್ಲೇಷಿಸಿದ್ದಾರೆ.
ಶಾರುಖ್ ಖಾನ್ (Shah Rukh Khan) ಪ್ರಸ್ತುತ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳ ಮೂಲಕ ಸತತ ಮೂರು ಬ್ಲಾಕ್ ಬಸ್ಟರ್ ನೀಡಿದ ಶಾರುಖ್ ಖಾನ್ ಇದೀಗ ‘ಕಿಂಗ್’ ಸಿನಿಮಾ ಮೂಲಕ ಅದೇ ಮ್ಯಾಜಿಕ್ ಅನ್ನು ಪುನರಾವರ್ತನೆ ಮಾಡುವ ಭರವಸೆಯಲ್ಲಿದ್ದಾರೆ. ಸಿನಿಮಾದ ಸಣ್ಣ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಇದೀಗ ‘ಕಿಂಗ್’ ಬಳಿಕ ಶಾರುಖ್ ಖಾನ್ ನಟಿಸಲಿರುವ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದ್ದು, ತಮ್ಮದೇ ಕಲ್ಟ್ ಕ್ಲಾಸಿಕ್ ಸಿನಿಮಾದ ಸೀಕ್ವೆಲ್ನಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
2004ರ ಬ್ಲಾಕ್ಬಸ್ಟರ್ ಸಿನಿಮಾ ‘ಮೈ ಹೂ ನಾ’ ಶಾರುಖ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾ ಕಲ್ಟ್ ಎನಿಸಿಕೊಂಡಿದೆ. ಆ ಸಿನಿಮಾದ ಹಾಸ್ಯ, ಪಾತ್ರಗಳ ಸ್ಟೈಲ್, ಹಾಡುಗಳಂತೂ ಇಂದಿಗೂ ಜನಪ್ರಿಯ. ಶಾರುಖ್ ಖಾನ್ ಅವರ ಆಪ್ತ ಗೆಳತಿ ಫರಾಹ್ ಖಾನ್ ನಿರ್ದೇಶಿಸಿದ್ದ ‘ಮೈ ಹೂ ನಾ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ಕನ್ನೇ ಮಾಡಿತ್ತು. ಇದೀಗ ಶಾರುಖ್ ಖಾನ್ ‘ಮೈ ಹೂ ನ 2’ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ.
ಈಗ ಹರಿದಾಡುತ್ತಿರುವ ವರದಿಗಳ ಪ್ರಕಾರ, ಫರಾಹ್ ಖಾನ್ ‘ಮೈ ಹೂ ನಾ 2’ ಸಿನಿಮಾಕ್ಕಾಗಿ ಕಥೆಯನ್ನು ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ ಈ ಬಾರಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 2004ರ ‘ಮೈ ಹೂ ನಾ’ ಅಣ್ಣ-ತಮ್ಮನ ಕತೆ ಆಗಿತ್ತು. ಆದರೆ ಈ ಬಾರಿಯ ಸಿನಿಮಾನಲ್ಲಿ ಶಾರುಖ್ ಖಾನ್ ಅವರೇ ಎರಡು ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಎರಡು ವಿಭಿನ್ನ ಶೇಡ್ಗಳಿರುವ ಪಾತ್ರಗಳನ್ನು ಫರಾಹ್ ಖಾನ್ ಸೃಷ್ಟಿಸಿದ್ದು, ಈಗಾಗಲೇ ಕಿಂಗ್ ಖಾನ್ಗೆ ಈ ಐಡಿಯಾವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಶಾರುಖ್ ಕೂಡ ಈ ಹೊಸ ಪ್ರಯೋಗಕ್ಕೆ ಅತೀವ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತದೆ. ಆಕಾಶ್ ಕೌಶಿಕ್ ಅವರು ಸಿನಿಮಾದ ಚಿತ್ರಕತೆ ರಚಿಸುತ್ತಿದ್ದಾರೆ.
2004ರ ‘ಮೈ ಹೂ ನಾ’ ಸಿನಿಮಾದ ರೀತಿಯೇ ಸೀಕ್ವೆಲ್ ಸಹ ದೇಶಭಕ್ತಿಯ ಹಿನ್ನೆಲೆಯನ್ನೇ ಹೊಂದಿರುತ್ತದೆ. ಭಾರತಕ್ಕೆ ಎದುರಾಗುವ ಹೊಸ ಸವಾಲು ಮತ್ತು ಅದನ್ನು ಎದುರಿಸುವ ಮೇಜರ್ ರಾಮ್ ಪ್ರಸಾದ್ ಶರ್ಮಾ ಅವರ ಸಾಹಸಗಾಥೆ ಸಿನಿಮಾದಲ್ಲಿ ಇರಲಿದೆ. ಆದರೆ ಈ ಬಾರಿ ಸಾಹಸದ ಜೊತೆಗೆ ಹಾಸ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಇಮ್ಮಡಿಯಾಗಿರಲಿವೆ. ಜೊತೆಗೆ ಹಾಡುಗಳು ಸಹ ಸಖತ್ ಆಗಿಯೇ ಇರಲಿವೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಶಾರುಖ್ ಖಾನ್ ಸದ್ಯ ತಮ್ಮ ’ಕಿಂಗ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೆಲಸಗಳು 2026ರ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಆನಂತರವೇ ಅವರು ‘ಮೈ ಹೂ ನಾ 2’ ಚಿತ್ರದ ಸಂಪೂರ್ಣ ಸ್ಕ್ರಿಪ್ಟ್ ಕೇಳಲಿದ್ದಾರೆ. ಸ್ಕ್ರಿಪ್ಟ್ ಅಂತಿಮಗೊಂಡ ಬಳಿಕವೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಕರಾವಳಿ ಭಾಗದಲ್ಲಿ ಆರಾಧಿಸಲ್ಪಡುವ, ಶಿವಗಣಕ್ಕೆ ಸೇರಿದವನೆಂದು ನಂಬುವ ಗುಳಿಗ ಅತ್ಯಂತ ಕೋಪಿಷ್ಟ. ಕ್ಷೇತ್ರ ರಕ್ಷಕನಾಗಿ ಪಂಜುರ್ಲಿ ದೈವದ ಜೊತೆಗೂಡಿ ಆರಾಧನೆ ಪಡೆಯುವ ಈ ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ಹೀಗೇ ನರ್ತನ ಸೇವೆ ಮಾಡುವುದಿದೆ. ಆದರೆ ಕರಾವಳಿಯ ಒಂದು ಕಡೆ ಮಾತ್ರ ಏಕೈಕ ನವ ಗುಳಿಗ ಸೇವೆ ನಡೆಯುತ್ತದೆ.
ಶಿವಮೊಗ್ಗ, (ಫೆಬ್ರವರಿ 06): ಸದ್ಯ ಬೆಂಗಳೂರು. ಮೈಸೂರು (Bengaluru And Mysuru) ಡ್ರಗ್ಸ್ ಫ್ಯಾಕ್ಟರಿ ಪತ್ತೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ (Shivamogga) ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಲಕ್ಷ್ಮಣಪ್ಪ ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಇದರ ಜೊತೆಗೆ ನಾಡ ಬಂದೂಕು ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಪೆಂಟರ್ ವೃತ್ತಿಯ ಲಕ್ಷ್ಮಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕಾರ್ಪೆಂಟರ್ ಆಗಿದ್ದ ಲಕ್ಷ್ಮಣಪ್ಪ, ತನ್ನ ಮನೆಯ ಪಕ್ಕದ ಹಳೆ ಮನೆಯಲ್ಲಿ ಬಂದೂಕು ತಯಾರಿಸುತ್ತಿದ್ದ . ಇದುವರೆಗೆ 7 ಸಿಂಗಲ್ ಬ್ಯಾರಲ್ ಬಂದೂಕುಗಳನ್ನು ತಯಾರಿಸಿಟ್ಟಿದ್ದಾನೆ. ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಗಳ ಬೇಟೆಗಾಗಿ ಬಳಸುವ ಉದ್ದೇಶದಿಂದ ಈ ನಾಡ ಬಂದೂಕುಗಳನ್ನು ಸಿದ್ಧಪಡಿಸಿ ನೀಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಖಚಿತ ಮಾಹಿತಿ ಮೇರೆಗೆ ಶಿಕಾರಿಪುರ ಪೊಲೀಸರು ದಾಳಿ ಮಾಡಿದಾಗ 7 ನಾಡ ಬಂದೂಕುಗಳು ಪತ್ತೆಯಾಗಿವೆ. ಇನ್ನು ತನಿಖೆಯ ವೇಳೆ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಯ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಬಂದೂಕುಗಳಿಗೆ ಅಗತ್ಯವಿರುವ ಟ್ರಿಗರ್, ಟ್ರಿಗರ್ ಗಾರ್ಡ್, ಬಿಡಿ ಭಾಗಗಳು ಹಾಗೂ ಹಳೆಯ ಸ್ಟೀರಿಂಗ್ಗಳನ್ನು ಶಿವಮೊಗ್ಗದ ವಿವಿಧ ಗುಜರಿ ಅಂಗಡಿಗಳಿಂದ ಖರೀದಿಸಲಾಗುತ್ತಿತ್ತು. ಬಂದೂಕಿಗೆ ಬೇಕಾದ ಮರದ ಹಿಡಿಕೆಗಳನ್ನು ಲಕ್ಷ್ಮಣಪ್ಪ ತಾನೇ ತಯಾರಿಸುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಸದ್ಯ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯಡಿ ಲಕ್ಷ್ಮಣಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ನವದೆಹಲಿ, ಫೆಬ್ರುವರಿ 6: ಅಧಿಕ ಹಣದುಬ್ಬರ, ಮಂದ ಬೆಳವಣಿಗೆ, ಸಾಲದ ಹೊರೆ, ಪರಾವಲಂಬನೆ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಆಂತರಿಕ ಕ್ಷೋಭೆ ಹೆಚ್ಚುತ್ತಿದೆ. ಅಲ್ಲಿಯ ಜನರಿಗೆ ಸರಿಯಾದ ಕೆಲಸ ಇಲ್ಲದೇ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಪಾಕಿಸ್ತಾನದ ಮಾಧ್ಯಮಗಳಲ್ಲೇ ಬಂದ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಜನರು ರಸ್ತೆಯ ಮೋರಿಯ ಮ್ಯಾನ್ಹೋಲ್ ಮುಚ್ಚಳವನ್ನೂ ಬಿಡದೆ ಕಳ್ಳತನ ಮಾಡುತ್ತಿರುವ ಘಟನೆಗಳು ಹೆಚ್ಚುತ್ತಿವೆಯಂತೆ.
ಕಬ್ಬಿಣದ ಈ ಮುಚ್ಚಳಗಳು ಬಹಳ ತೂಕವಿದ್ದು, ಅವನ್ನು ಮಾರಿ ಜನರು ಹಣ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕಳ್ಳತನ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುತ್ತಿಲ್ಲ, ಸರ್ವೇಸಾಮಾನ್ಯ ಘಟನೆಗಳೇ ಆಗಿಹೋಗಿವೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮಾರ್ಯಂ ಷರೀಫ್ ಅವರೇ ಖುದ್ದಾಗಿ ವಿಡಿಯೋ ಮೆಸೇಜ್ ನೀಡಿ ಕಳ್ಳರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
‘ಮ್ಯಾನ್ಹೋಲ್ಗಳ ಮುಚ್ಚಳವನ್ನು ಬೆಳಗ್ಗೆ ಹಾಕಿರುತ್ತೇವೆ. ರಾತ್ರಿ ಮುಗಿಯುವುದರೊಳಗೆ ಅದು ಕಳ್ಳತನ ಆಗಿರುತ್ತದೆ. ಈ ಮುಚ್ಚಳವನ್ನು ಕಳ್ಳತನ ಮಾಡಬೇಡಿ. ಕಳ್ಳತನ ಮಾಡಿದರೆ, ಅಥವಾ ಅದನ್ನು ಮಾರಿದರೆ ಅಥವಾ ಖರೀದಿಸಿದರೆ ಅಂಥವರಿಗೆ 1-10 ವರ್ಷ ಜೈಲು ಶಿಕ್ಷೆ ನೀಡುವಂತಹ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಈ ಕಳ್ಳತನದಿಂದಾಗಿ ಯಾರಿಗಾದರೂ ಸಾವಾದರೆ, ಅಪರಾಧಿಗೆ 10 ವರ್ಷ ಜೈಲುಶಿಕ್ಷೆ ಹಾಗೂ 30-50 ಲಕ್ಷ ರೂ ದಂಡ ಹಾಕಲಾಗುವುದು ಎಂದು ಮಾರ್ಯಮ್ ಷರೀಫ್ ತಮ್ಮ ವಿಡಿಯೋ ಮೆಸೇಜ್ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಾರ್ಯಮ್ ಶರೀಫ್ ಮಾತನಾಡಿರುವ ವಿಡಿಯೋ
Pakistan, already reeling under a severe economic crisis, is now seeing people steal manhole covers just to earn scrap money — a clear sign of a full-blown crisis.
Alarmed by rising thefts, Punjab govt introduces a new law: stealing, selling or buying manhole covers means 1–10… pic.twitter.com/SLAKgyvQMb
ಭಿಕ್ಷೆ ಬೇಡಿ, ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎನ್ನುತ್ತಿರುವ ಪ್ರಧಾನಿ
ಹಣಕ್ಕಾಗಿ ಜಗತ್ತಿನ ಮುಂದೆ ಭಿಕ್ಷೆ ಎತ್ತುವಾಗ ನಾಚಿಕೆಯಿಂದ ತಲೆ ತಗ್ಗಿಸುವಂತಾಗುತ್ತದೆ. ಸಾಲ ಪಡೆಯುವುದೆಂದರೆ ಸ್ವಾಭಿಮಾನ ಬಿಟ್ಟುಕೊಟ್ಟಂತೆ ಅನಿಸುತ್ತೆ. ಅವರು ಹೇಳುವ ಯಾವುದೇ ಕೆಲಸವನ್ನೂ ಇಲ್ಲ ಎನ್ನಲು ಆಗುವುದೇ ಇಲ್ಲ ಎಂದು ವಾರದ ಹಿಂದೆ ಪಾಕಿಸ್ತಾನ ಪ್ರಧಾನಿ ಶಾಹಬಾಜ್ ಷರೀಫ್ ಅಳಲು ತೋಡಿಕೊಂಡಿದ್ದರು.
ಸಾಲದ ಹೊರೆಯಲ್ಲಿರುವ ಪಾಕಿಸ್ತಾನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದೆ. ಸಾಲದ ಬಡ್ಡಿ ಪಾವತಿಸಲು ದುಡ್ಡಿಲ್ಲದೆ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಪದೇ ಪದೇ ಐಎಂಎಫ್ ಮುಂದೆ ಸಾಲಕ್ಕಾಗಿ ಪಾಕಿಸ್ತಾನ ಕೈ ಚಾಚುವಂತಾಗಿದೆ. ಚೀನಾ ಜೊತೆಗೆ ಸೇರಿ ಜಂಟಿಯಾಗಿ ತಯಾರಿಸಲಾಗುತ್ತಿರುವ ಯುದ್ಧವಿಮಾನ ಇತ್ಯಾದಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮಾರಾಟಕ್ಕಿಟ್ಟು ಸಾಲ ತೀರಿಸಲು ಪಾಕಿಸ್ತಾನ ಹೆಣಗುತ್ತಿದೆ.
ಗಿಲ್ಲಿ ನಟ (Gilli Nata), ಪ್ರಸ್ತುತ ಕರ್ನಾಟಕದ ಜನಪ್ರಿಯ ಸೆಲೆಬ್ರಿಟಿ. ಬಿಗ್ಬಾಸ್ ಕನ್ನಡ ಸೀಸನ್ 12 ಗೆದ್ದಿರುವ ಗಿಲ್ಲಿಗೆ ಎಲ್ಲಿಲ್ಲದ ಜನಪ್ರಿಯತೆ ದೊರೆತಿದೆ. ಗಿಲ್ಲಿ ಹೋದಲ್ಲೆಲ್ಲ ಅಭಿಮಾನಿಗಳು ಸೇರುತ್ತಿದ್ದಾರೆ, ಜಯಕಾರಗಳನ್ನು ಹಾಕುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಗಿಲ್ಲಿ ತೋರಿದ ಪ್ರತಿಭೆಯ ಪ್ರದರ್ಶನ ಅವರಿಗೆ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿದೆ. ಬಿಗ್ಬಾಸ್ ಗೆಲುವು ಗಿಲ್ಲಿಗೆ ಹಲವು ಹೊಸ ಅವಕಾಶಗಳನ್ನು ಸಹ ತಂದುಕೊಡುತ್ತಿದೆ. ಇವುಗಳ ಜೊತೆಗೆ ಗಿಲ್ಲಿಗೆ ಇದೀಗ ಹೊಸ ಸಂಕಷ್ಟವೊಂದು ಶುರುವಾಗಿದೆ. ಗಿಲ್ಲಿ ವಿರುದ್ಧ ದೂರೊಂದು ದಾಖಲಾಗಿದ್ದು, ಗಿಲ್ಲಿ ನಟಿಸಿರುವ ಸಿನಿಮಾ ಒಂದರ ನಿರ್ಮಾಪಕರು ಗಿಲ್ಲಿ ನಟ ವಿರುದ್ಧ ದೂರು ನೀಡಿದ್ದಾರೆ.
ಗಿಲ್ಲಿ, ಬಿಗ್ಬಾಸ್ಗೆ ಹೋಗುವ ಮುಂಚೆ ‘ಸರ್ಕಾರಿ ಶಾಲೆ ಎಚ್8’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ಸಿನಿಮಾ ಬಿಡುಗಡೆ ಇಂದು (ಫೆಬ್ರವರಿ 6) ಆಗಿದೆ. ಈ ಹಂತದಲ್ಲಿ ಗಿಲ್ಲಿಯ ವಿರುದ್ಧ ಸಿನಿಮಾದ ನಿರ್ಮಾಪಕ ತೇಜಸ್ವಿ ಎಸ್ ಅವರು ಫಿಲಂ ಚೇಂಬರ್ಗೆ ದೂರು ನೀಡಿದ್ದಾರೆ. ಗಿಲ್ಲಿ, ಸಂಭಾವನೆ ಪಡೆದು ಸಿನಿಮಾನಲ್ಲಿ ನಟಿಸಿದ್ದಾರೆ ಆದರೆ ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಸಿನಿಮಾನಲ್ಲಿ ನಾವು ಗಿಲ್ಲಿಗೆ ಪ್ರಮುಖ ಪಾತ್ರ ನೀಡಿದ್ದೀವಿ, ಬಿಗ್ಬಾಸ್ಗೆ ಹೋಗುವ ಮುಂಚೆಯೇ ಅವರು ಕೇಳಿದಷ್ಟು ಸಂಭಾವನೆಯನ್ನು ಸಹ ಕೊಟ್ಟಿದ್ದೀವಿ. ಆದರೆ ಅವರು ಸಿನಿಮಾದ ಪ್ರಚಾರಕ್ಕೆ ಬರುತ್ತಿಲ್ಲ. ಎಷ್ಟು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ, ಕನಿಷ್ಟ ನಮ್ಮ ಸಿನಿಮಾದ ಬಗ್ಗೆ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಸಹ ಹಂಚಿಕೊಂಡಿಲ್ಲ ಎಂದು ನಿರ್ಮಾಪಕ ಆರೋಪ ಮಾಡಿದ್ದಾರೆ. ದೂರು ಸ್ವೀಕಾರ ಮಾಡಿರುವ ಚೇಂಬರ್, ಗಿಲ್ಲಿಯನ್ನು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
‘ಸರ್ಕಾರಿ ಶಾಲೆ ಎಚ್8’ ಸಿನಿಮಾವು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಗಿಲ್ಲಿ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಕತೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿರುವುದು ಗುಣ ಹರಿಯಬ್ಬೆ. ಗುಣ ಹರಿಯಬ್ಬೆ, ಮೇಘಶ್ರೀ ಮತ್ತು ಜನಪದ ಕಲಾವಿದ ಮೋಹನ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಜೊತೆಗೆ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್, ಸುಚೇಂದ್ರ ಪ್ರಸಾದ್, ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿ ವಿಶ್ವ, ಜೋತಿರಾಜ್ ಮತ್ತು ನಮ್ರತಾ ಈ ಸಿನಿಮಾನಲ್ಲಿ ನಟಿಸಿದ್ದಾರೆ. ‘ಸರ್ಕಾರಿ ಶಾಲೆ ಎಚ್8’ ಸಿನಿಮಾ ಇಂದು (ಫೆಬ್ರವರಿ 6) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ಹರಾರೆಯಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಫೈನಲ್ನಲ್ಲಿ (U19 World Cup Final) ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಬರೋಬ್ಬರಿ 411 ರನ್ ಕಲೆಹಾಕಿದೆ. ಈ ಮೂಲಕ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ನಲ್ಲಿ ಅತಿದೊಡ್ಡ ಮೊತ್ತ ಕಲೆಹಾಕಿದ ವಿಶ್ವ ದಾಖಲೆ ನಿರ್ಮಿಸಿದೆ. ಈ ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಇದುವರೆಗೂ ಯಾವ ತಂಡಕ್ಕೂ 300 ರನ್ಗಳ ಗಡಿ ದಾಟಲೂ ಸಾಧ್ಯವಾಗಿರಲಿಲ್ಲ. ಆದರೆ ಟೀಂ ಇಂಡಿಯಾ 400 ರನ್ಗಳ ಗಡಿ ದಾಟಿ ನೂತನ ದಾಖಲೆ ನಿರ್ಮಿಸಿದೆ. ಟೀಂ ಇಂಡಿಯಾ ಇಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ವೈಭವ್ ಸೂರ್ಯವಂಶಿ (Vaibhav Suryavanshi) ಈ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ ಬರೋಬ್ಬರಿ 175 ರನ್ ಕಲೆಹಾಕಿದರು.
ಇಂಗ್ಲೆಂಡ್ ದಾಖಲೆ ಉಡೀಸ್
ಫೈನಲ್ನಲ್ಲಿ 411 ರನ್ ಕಲೆಹಾಕುವ ಮೂಲಕ ಟೀಂ ಇಂಡಿಯಾ ಈ ಆವೃತ್ತಿಯಲ್ಲಿ ಅತಿದೊಡ್ಡ ಮೊತ್ತ ಕಲೆಹಾಕಿದ್ದ ಇಂಗ್ಲೆಂಡ್ ದಾಖಲೆಯನ್ನು ಮುರಿದಿದೆ. ಇದೇ ಆವೃತ್ತಿಯಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್ಗಳಿಗೆ 404 ರನ್ ಕಲೆಹಾಕಿತ್ತು. ಇನ್ನು ಅಂಡರ್ 19 ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಟೀಂ ಇಂಡಿಯಾ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 2002 ರಲ್ಲಿ ಕೀನ್ಯಾ ತಂಡದ ವಿರುದ್ಧ 480 ರನ್ ಕಲೆಹಾಕಿತ್ತು. ಅದು ಈವರೆಗಿನ ದಾಖಲೆಯಾಗಿದೆ.
ಭಾರತಕ್ಕೆ ವೈಭವ್ ಆಸರೆ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಭಾರತ ಕಳಪೆ ಆರಂಭ ಪಡೆಯಿತು. ಆರನ್ ಜಾರ್ಜ್ 9 ರನ್ಗಳಿಗೆ ಔಟಾದರು. ಆ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ನಾಯಕ ಆಯುಷ್ ಮ್ಹಾತ್ರೆ 90 ಎಸೆತಗಳಲ್ಲಿ ಎರಡನೇ ವಿಕೆಟ್ಗೆ 142 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಮ್ಹಾತ್ರೆ 51 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ಗಳನ್ನು ಒಳಗೊಂಡಂತೆ 53 ರನ್ ಬಾರಿಸಿದರೆ, ವೈಭವ್ 32 ಎಸೆತಗಳಲ್ಲಿ ಅರ್ಧಶತಕ ಮತ್ತು 55 ಎಸೆತಗಳಲ್ಲಿ ಶತಕ ಪೂರೈಸಿದರು. ನಂತರ 71 ಎಸೆತಗಳಲ್ಲಿ 150 ರನ್ ಪೂರ್ಣಗೊಳಿಸಿದ ವೈಭವ್ ಅಂತಿಮವಾಗಿ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್ಗಳ ಸಹಾಯದಿಂದ 175 ರನ್ ಬಾರಿಸಿ ಔಟಾದರು.
ಇದೇ ವೇಳೆ ವೈಭವ್ 39 ಎಸೆತಗಳಲ್ಲಿ ವೇದಾಂತ್ ತ್ರಿವೇದಿ ಅವರೊಂದಿಗೆ ಮೂರನೇ ವಿಕೆಟ್ಗೆ 89 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವೈಭವ್ ವಿಕೆಟ್ ಪತನವಾದಾಗ ತಂಡದ ಮೊತ್ತ 251 ರನ್ ಆಗಿತ್ತು. ಇದರ ನಂತರ ಉಳಿದ 7 ಆಟಗಾರರು ಸ್ಕೋರ್ ಬೋರ್ಡ್ಗೆ 160 ರನ್ ಸೇರಿಸಿದರು. ವೇದಾಂತ್ 36 ಎಸೆತಗಳಲ್ಲಿ 32 ರನ್ ಗಳಿಸಿದರೆ, ವಿಹಾನ್ ಮಲ್ಹೋತ್ರಾ 36 ಎಸೆತಗಳಲ್ಲಿ 30 ರನ್ ಬಾರಿಸಿದರು. ಅಭಿಗ್ಯಾನ್ ಕುಂಡು 31 ಎಸೆತಗಳಲ್ಲಿ 40 ರನ್, ಅಂಬ್ರಿಸ್ ಕೇವಲ 18 ರನ್, ಕನಿಷ್ಕ್ ಚೌಹಾಣ್ 20 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದರು. ಇಂಗ್ಲೆಂಡ್ ಪರ ಜೇಮ್ಸ್ ಮಿಂಟೊ ಮೂರು ವಿಕೆಟ್ ಪಡೆದರೆ, ಸೆಬಾಸ್ಟಿಯನ್ ಮಾರ್ಗನ್ ಮತ್ತು ಅಲೆಕ್ಸ್ ಗ್ರೀನ್ ತಲಾ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ದೇಶದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳಲ್ಲಿ ಒಂದಾಗಿದ್ದು, ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 5,138 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುವ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 8 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರಾಜ್ಯವಾರು ಹುದ್ದೆಗಳ ಹಂಚಿಕೆ ಮಾಡಲಾಗಿದ್ದು, ಕರ್ನಾಟಕದಲ್ಲಿ 64, ತೆಲಂಗಾಣದಲ್ಲಿ 69, ಆಂಧ್ರಪ್ರದೇಶದಲ್ಲಿ 56, ತಮಿಳುನಾಡಿನಲ್ಲಿ 121, ಕೇರಳದಲ್ಲಿ 83, ಒಡಿಶಾದಲ್ಲಿ 142 ಮತ್ತು ಪಾಂಡಿಚೇರಿಯಲ್ಲಿ 2 ಹುದ್ದೆಗಳು ಲಭ್ಯವಿವೆ. ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ವಯೋಮಿತಿ 20 ರಿಂದ 28 ವರ್ಷಗಳ ನಡುವೆ ಇರಬೇಕು. ಸರ್ಕಾರಿ ನಿಯಮಗಳ ಪ್ರಕಾರ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳು ರೂ. 800 ಪಾವತಿಸಬೇಕಾಗಿದ್ದು, SC, ST, PWBD ಮತ್ತು ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ ರೂ. 200 ಮಾತ್ರ ವಿಧಿಸಲಾಗಿದೆ. ಅಂತಿಮ ಆಯ್ಕೆ ಆನ್ಲೈನ್ ಲಿಖಿತ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ರೂ. 12,300 ರಿಂದ ರೂ. 15,000 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.
ಒಟ್ಟಿನಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಪಡೆಯಲು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳಿಗೆ ಬಲವಾದ ನೆಲೆ ನಿರ್ಮಿಸಿಕೊಳ್ಳಲು ಇದು ಒಂದು ಸುವರ್ಣಾವಕಾಶವಾಗಿದೆ. ಆಸಕ್ತರು ಅಧಿಕೃತ ಅಧಿಸೂಚನೆಯನ್ನು ಗಮನವಾಗಿ ಓದಿ, ಅಂತಿಮ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸುವುದು ಉತ್ತಮ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಫೆಬ್ರವರಿ 6: ಪಂಜಾಬ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಮತ್ತು ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ನವಜೋತ್ ಕೌರ್ ಸಿಧು (Navjot Kaur Sidhu) ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಘೋಷಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಶಿಸ್ತು ಎಲ್ಲಕ್ಕಿಂತ ಮುಖ್ಯ. ಕಾಂಗ್ರೆಸ್ ಹಾಕಿದ ಗೆರೆ ದಾಟುವವರು, ಪಕ್ಷದ ವಿರುದ್ಧ ಕೆಲಸ ಮಾಡುವ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದ ನವಜೋತ್ ಸಿಂಗ್ ಸಿಧು ಅವರ ಪತ್ನಿಯಾಗಿರುವ ನವಜೋತ್ ಕೌರ್ ಸಿಧು ಕಾಂಗ್ರೆಸ್ ಪಕ್ಷ ತೊರೆದ ಕೆಲವು ದಿನಗಳ ನಂತರ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ನವಜೋತ್ ಕೌರ್ ಸಿಧು ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದಿದ್ದರು ಎಂದು ಆರೋಪಿಸಲಾಗಿದೆ. ಪಕ್ಷದ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದೆ, ನವಜೋತ್ ಕೌರ್ ಸಿಧು ಅವರು ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ನಂತರ ಅವರ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಈ ಹಿಂದೆ “ಪಂಜಾಬ್ ಮುಖ್ಯಮಂತ್ರಿಯಾಗಲು 500 ಕೋಟಿ ರೂ. ಸೂಟ್ಕೇಸ್ ನೀಡಬೇಕು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನ ಉಚ್ಚಾಟಿಸಲಾಗಿದೆ.
ಇದರ ನಡುವೆ ನವಜೋತ್ ಸಿಂಗ್ ಸಿಧು ಹಾಗೂ ನವಜೋತ್ ಕೌರ್ ಸಿಧು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳಿವೆ. ಆದರೆ, ಈ ಬಗ್ಗೆ ನವಜೋತ್ ಸಿಂಗ್ ಸಿಧು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೊಂದೆಡೆ, ಸಿಧು ದಂಪತಿ ಬಿಜೆಪಿಗೆ ಸೇರುವ ಬಗ್ಗೆ ಮಾತುಕತೆಗಳು ಭರದಿಂದ ಸಾಗುತ್ತಿವೆ ಎನ್ನಲಾಗಿದೆ. ನವಜೋತ್ ಕೌರ್ ಸಿಧು ಇತ್ತೀಚೆಗೆ ಸರಣಿ ಟ್ವೀಟ್ಗಳಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಹೊಗಳುತ್ತಿದ್ದಾರೆ. ಆದರೆ, ಇತ್ತೀಚೆಗೆ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಮನೋರಂಜನ್ ಕಾಲಿಯಾ ಸಿಧು ದಂಪತಿಗೆ ಬಿಜೆಪಿಯ ಬಾಗಿಲು ಮುಚ್ಚಲಾಗಿದೆ ಎಂದು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ