ಚೈತ್ರಾ ಕುಂದಾಪುರ ಅವರು ಎರಡನೇ ಬಾರಿಗೆ ಬಿಗ್ ಬಾಸ್ ಮನೆ ಸೇರಿದ್ದಾರೆ. ಈ ಸೀಸನ್ ಅಲ್ಲಿ ಅತಿಥಿಯಾಗಿ ದೊಡ್ಮನೆಗೆ ತೆರಳಿದ್ದ ಅವರು ನಂತರ ಸ್ಪರ್ಧಿ ಆದರು. ಈಗ ಅವರು ದೊಡ್ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಆದರೆ, ಈ ವಾರ ಅವರು ನಡೆದುಕೊಂಡ ರೀತಿ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿವೆ. ಕಳೆದ ಸೀಸನ್ ಆಟವನ್ನೇ ಚೈತ್ರಾ ರಿಪೀಟ್ ಮಾಡುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರು ಕಳೆದ ಸೀಸನ್ ಅಲ್ಲಿ ಅನೇಕ ಬಾರಿ ಅತ್ತಿದ್ದು ಇದೆ. ಈ ಸಂದರ್ಭದಲ್ಲಿ ಅವರು ದೇವರಿಗೆ ದೀಪ ಹಚ್ಚಿ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳುತ್ತಿದ್ದರು. ಅವರು ಬಂದು ಕೆಲ ವಾರ ಕಳೆದಿದ್ದರು ಈ ರೀತಿ ಎಂದಿಗೂ ಮಾಡಿರಲಿಲ್ಲ. ಆದರೆ, ಈ ವಾರ ಅವರು ಆ ರೀತಿ ನಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ರಜತ್ ಅವರ ಮಾತು.
ರಜತ್ ಅವರು ಈ ವಾರ ಚೈತ್ರಾ ಕುಂದಾಪುರ ಜೊತೆ ಜಗಳ ಆಡಿದರು. ಆಟದ ಮಧ್ಯೆ ಅವರನ್ನು ಸುಳ್ಳಿ ಎಂದು ಕರೆದರು. ಕಳೆದ ಸೀಸನ್ ಅಲ್ಲಿ ಅನೇಕರು ಚೈತ್ರಾ ಅವರನ್ನು ಸುಳ್ಳಿ ಎಂದು ಕರೆದಿದ್ದು ಇದೆ. ಈ ಬಾರಿಯೂ ಅದೇ ಟ್ಯಾಗ್ನಿಂದ ಚೈತ್ರಾನ ಕರೆದಿದ್ದಕ್ಕೆ ಅವರಿಗೆ ಬೇಸರ ಆಗಿದೆ. ಅವರು ಗಳಗಳನೆ ಕಣ್ಣೀರು ಹಾಕಿದ್ದಾರೆ.
ಗಿಲ್ಲಿ ಹಾಗೂ ರಜತ್ ಅವರು ಸೋಫಾ ಏರಿಯಾದಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ದೇವರ ಎದುರು ಬಂದು ಕಣ್ಣೀರು ಹಾಕಿದ್ದಾರೆ. ಕುಂಕುಮ ಹಚ್ಚಿಕೊಳ್ಳುವಾಗ ಅವರು ಗಿಲ್ಲಿ ಹಾಗೂ ರಜತ್ ಕಡೆ ನೋಡಿದ್ದಾರೆ. ಅವರು ತಮ್ಮನ್ನೇ ನೋಡುತ್ತಿದ್ದಾರೆ ಎಂಬುದನ್ನು ಚೈತ್ರಾ ಖಚಿತ ಮಾಡಿಕೊಂಡಂತಿತ್ತು. ಈ ವಿಷಯವನ್ನು ರಾಶಿಕಾ ಕೂಡ ದೊಡ್ಮನೆಯಲ್ಲಿ ಚರ್ಚೆ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಮಾಡಲಾಗಿದೆ.
ಪುಣ್ಯವಂತರಿಗೆ ಮಾತ್ರ ಹೆಣ್ಣು ಮಗು (girl baby) ಹುಟ್ಟೋದು. ಹೆಣ್ಣು ಮಕ್ಕಳನ್ನು ಪಡೆಯಲು ನೂರು ಜನ್ಮದ ಪುಣ್ಯ ಮಾಡಿರಬೇಕು, ಹೀಗೆ ನಾನಾ ರೀತಿಯ ಮಾತುಗಳನ್ನು ಹೇಳುವುದನ್ನು ನೀವು ಕೇಳಿರುತ್ತೀರಿ. ಹೀಗಾಗಿ ಮನೆಗೆ ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಮನೆ ಮಂದಿಯೆಲ್ಲಾ ಖುಷಿಯಿಂದಲೇ ಕುಣಿದು ಸಂಭ್ರಮಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇಲ್ಲೊಬ್ಬ ಅಪ್ಪನ (father) ಖುಷಿಯೂ ಎಲ್ಲೇ ಮೀರಿದೆ. ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆಯಲ್ಲೇ ತಂದೆಯೂ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಣ್ಣು ಮಗಳಿಗೆ ಅಪ್ಪನಾದೆ ಎನ್ನುವ ತಂದೆಯ ಖುಷಿಯ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
Positive fan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಸ್ಪತ್ರೆಯ ಚಿತ್ರಣ ಕಾಣಬಹುದು. ನವಜಾತ ಶಿಶುವನ್ನು ಎತ್ತಿಕೊಂಡು ಮಹಿಳೆಯೂ ಖುಷಿಯಿಂದಲೇ ಬರುತ್ತಿರುವುದನ್ನು ನೋಡಬಹುದು. ಆ ಮಹಿಳೆಯ ಸುತ್ತಲಿದ್ದ ಮಹಿಳೆಯರು ಕೂಡ ಖುಷಿಯಿಂದಲೇ ಡ್ಯಾನ್ಸ್ ಮಾಡುತ್ತಿದ್ದಾರೆ. ಇತ್ತ ತಂದೆಯೂ ಹೆಣ್ಣು ಮಗು ಹುಟ್ಟಿತು ಎನ್ನುವ ಖುಷಿಗೆ ಆಸ್ಪತ್ರೆಯಲ್ಲೇ ಕುಣಿದಾಡಿರುವುದನ್ನು ಕಾಣಬಹುದು.
ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂದು ನಾನು ನೋಡಿದ ಅತ್ಯುತ್ತಮ ವಿಷಯ ಎಂದಿದ್ದಾರೆ. ಮತ್ತೊಬ್ಬರು, ಜೀವನದಲ್ಲಿ ಗೆದ್ದಂತಹ ಅನುಭವ, ಅವರ ನಗುವೇ ಎಲ್ಲಾ ಹೇಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಮಗಳ ಆಗಮನವನ್ನು ಎಲ್ಲರಿಗೂ ಸಂಭ್ರನಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್
ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್ ಸಿಗ್ನಲ್ ದೊರೆತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂತರ, ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಬೆಂಗಳೂರು ಪೊಲೀಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಕಟ್ಟುನಿಟ್ಟಾದ 17 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸಜ್ಜಾಗಿದ್ದಾರೆ.
ಗೃಹ ಇಲಾಖೆ ಸಿದ್ಧಪಡಿಸಿರುವ ಈ ಷರತ್ತುಗಳ ಕುರಿತು ಕೆಎಸ್ಸಿಎ ಪದಾಧಿಕಾರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ತಂಡ ಗೃಹ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಿದೆ. ಪೊಲೀಸ್ ಕಮಿಷನರ್ ಅವರು ನ್ಯಾ. ಮೈಕಲ್ ಡಿ ಕುನ್ಹಾ ಸಮಿತಿ ವರದಿಯ ಶಿಫಾರಸುಗಳನ್ನು ಆಧರಿಸಿ, ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ 17 ಷರತ್ತುಗಳನ್ನು ವಿಧಿಸಿದ್ದಾರೆ. ಕೆಎಸ್ಸಿಎ ಈ ಷರತ್ತುಗಳನ್ನು ಈಡೇರಿಸಿದ ತಕ್ಷಣವೇ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ವೇಳೆಗೆ ಎಲ್ಲವರೂ ಸರಿಯಾಗುವ ನಿರೀಕ್ಷೆ ಇದೆ.
17 ಅಂಶಗಳ ಮಾರ್ಗಸೂಚಿ ಬಿಡುಗಡೆ: ಏನೇನಿವೆ?
ಮಾರ್ಗಸೂಚಿಗಳಲ್ಲಿನ ಪ್ರಮುಖ ಅಂಶಗಳೆಂದರೆ, ಸ್ಟೇಡಿಯಂ ಒಳಗೆ ಮತ್ತು ಹೊರಗೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳ ಸುಧಾರಣೆ. ಪ್ರಸ್ತುತ, ಟಿಕೆಟ್ ವಿತರಣೆ ಮತ್ತು ಪ್ರೇಕ್ಷಕರ ಕ್ಯೂಗಳು ಫುಟ್ಪಾತ್ಗಳ ಮೇಲೆ ನಡೆಯುತ್ತಿದ್ದು, ಇದು ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಹಾಗೆಯೇ, ಸ್ಟೇಡಿಯಂನ ಎಲ್ಲಾ ಗೇಟ್‌ಗಳನ್ನು ಕನಿಷ್ಠ ಆರು ಅಡಿ ಅಗಲಕ್ಕೆ ವಿಸ್ತರಿಸಬೇಕು. ಸದ್ಯದ ಕಿಕ್ಕಿರಿದ ಗೇಟ್‌ಗಳು ಮತ್ತು ಅಸಮವಾದ ಪ್ರವೇಶ ಮಾರ್ಗಗಳು ಅಪಾಯವನ್ನುಂಟುಮಾಡುತ್ತವೆ.
ಇದಲ್ಲದೆ, ಅಗ್ನಿಶಾಮಕ ಸುರಕ್ಷತೆಗಾಗಿ ಪ್ರತ್ಯೇಕ ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಸ್ಟೇಡಿಯಂ ಒಳಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಬೇಕು. ಸ್ಟೇಡಿಯಂ ಒಳಗೆ ಪ್ರವೇಶಿಸುವ ಪ್ರೇಕ್ಷಕರ ನೈಜ-ಸಮಯದ ಸಂಖ್ಯೆಯನ್ನು (ರಿಯಲ್ ಟೈಮ್ ಕೌಂಟ್) ನಿಖರವಾಗಿ ಇಟ್ಟುಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು. ಟಿಕೆಟ್‌ಗಳನ್ನು ಸ್ಟೇಡಿಯಂ ಒಳಗೆ ವಿತರಿಸಲು ಪ್ರತ್ಯೇಕ ಸ್ಥಳಗಳನ್ನು ಗೊತ್ತುಪಡಿಸಬೇಕು. ಸ್ಟೇಡಿಯಂ ಸುತ್ತಲಿನ ಪಾರ್ಕಿಂಗ್, ಪಿಕ್‌ಅಪ್ ಮತ್ತು ಡ್ರಾಪ್ ವ್ಯವಸ್ಥೆಗಳನ್ನು ಸುಧಾರಿಸಬೇಕು.
ಈ ಎಲ್ಲಾ ಬದಲಾವಣೆಗಳಿಗೆ ಗಣನೀಯ ಪ್ರಮಾಣದ ಕಾಮಗಾರಿಗಳನ್ನು ನಡೆಸಬೇಕಾದ ಅಗತ್ಯವಿದೆ. ಇವುಗಳನ್ನು ಪೂರ್ಣಗೊಳಿಸಲು ಸುಮಾರು ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಮ್ಮೆ ಎಲ್ಲಾ ಕೆಲಸಗಳು ಪೂರ್ಣಗೊಂಡರೆ, ಬಹುಶಃ ಮಾರ್ಚ್ ತಿಂಗಳ ವೇಳೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲು ಸಂಪೂರ್ಣ ಅವಕಾಶ ಸಿಗಲಿದೆ. ಇದು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದ್ದು, ಸುರಕ್ಷಿತ ವಾತಾವರಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮೈಸೂರು, ಡಿಸೆಂಬರ್ 19: ಕ್ಷುಲ್ಲಕ ಕಾರಣಕ್ಕೆ ವೈದ್ಯನ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಕ್ಲಿನಿಕ್ ಹೊರಭಾಗ ಚಪ್ಪಲಿ ಬಿಟ್ಟು ಬನ್ನಿ ಅಂತಾ ಹೇಳಿದಕ್ಕೆ ಶಿಶು ಆಸ್ಪತ್ರೆಯ ವೈದ್ಯ ಡಾ.ಅನೂಪ್ ಮೇಲೆ ಹಲ್ಲೆ ನಡೆಸಲಾಗಿದೆ. ರುಬಿಯಾಜ್ ಷರೀಫ್, ಆತನ ತಂದೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ರುಬಿಯಾಜ್ ಷರೀಫ್ರ 3 ವರ್ಷದ ಮಗು ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆಸ್ಪತ್ರೆಗೆ ಆತ ಬಂದಿದ್ದ. ಈ ವೇಳೆ ಚಪ್ಪಲಿ ಧರಿಸಿಯೇ ಒಳಬಂದ ಹಿನ್ನೆಲೆ ಅದನ್ನು ಹೊರಗೆ ಬಿಡುವಂತೆ ವೈದ್ಯ ಅನೂಪ್ ಮನವಿ ಮಾಡಿದ್ದರು. ಚಪ್ಪಲಿ ಹೊರಗೆ ಬಿಡುವುದಿಲ್ಲ ಅಂತಾ ಗಲಾಟೆ ಮಾಡಿ ಹಲ್ಲೆ ನಡೆಸಲಾಗಿದೆ. ವೈದ್ಯ ಅನೂಪ್ ಮೇಲಿನ ಹಲ್ಲೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಧರ್ಮೇಂದ್ರ ಮತ್ತು ನಟಿ ಹೇಮಾ ಮಾಲಿನಿ 45 ವರ್ಷಗಳ ಕಾಲ ಒಟ್ಟಿಗೆ ಇದ್ದವರು. ಧರ್ಮೇಂದ್ರ ನವೆಂಬರ್ 24 ರಂದು ಕೊನೆಯುಸಿರೆಳೆದರು. ನಂತರ ನವೆಂಬರ್ 27 ರಂದು, ಡಿಯೋಲ್ ಕುಟುಂಬವು ಹೇಮಾ ಮಾಲಿನಿಯನ್ನು ನಿರ್ಲಕ್ಷಿಸಿ ಸಂತಾಪ ಸೂಚಿಸುವ ಸಭೆಯನ್ನು ಆಯೋಜಿಸಿತು. ಹೇಮಾ ಮಾಲಿನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸಹ ಸಂತಾಪ ಸೂಚಿಸುವ ಸಭೆಯಲ್ಲಿ ಕಾಣಿಸಲಿಲ್ಲ. ಅಷ್ಟೇ ಅಲ್ಲ, ಅಂತ್ಯಕ್ರಿಯೆ ನಡೆಯುತ್ತಿರುವಾಗ ಹೇಮಾ ಮಾಲಿನಿ ನೇರವಾಗಿ ಸ್ಮಶಾನಕ್ಕೆ ತಲುಪಿದರು. ಧರ್ಮೇಂದ್ರ ಅವರ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿರುವುದಕ್ಕೆ ಇದಕ್ಕೆ ಕಾರಣ. ಈಗ ಬರಹಗಾರ್ತಿ ಶೋಭಾ ಡೇ ಈ ಬಗ್ಗೆ ಮಾತನಾಡಿದ್ದಾರೆ.
ಶೋಭಾ ಡೇ ಅವರು ಬರ್ಖಾ ದತ್ ಅವರೊಂದಿಗಿನ ಸಂದರ್ಶನದಲ್ಲಿ ಡಿಯೋಲ್ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಶೋಭಾ. ‘ಈ ನಿರ್ಧಾರವು ತುಂಬಾ ಜಟಿಲ ಮತ್ತು ಕಷ್ಟಕರವಾಗಿದ್ದಿರಬೇಕು. ಧರ್ಮೇಂದ್ರ ಅವರ ಕುಟುಂಬವು ಹೇಮಾ ಮಾಲಿನಿಯನ್ನು ಎಲ್ಲದರಿಂದ ದೂರವಿಟ್ಟಿತು. ಹೇಮಾ ಮಾಲಿನಿ ತಮ್ಮ ಜೀವನದ 45 ವರ್ಷಗಳನ್ನು ಕಳೆದ ವ್ಯಕ್ತಿ. ಅವರು ಪ್ರೀತಿಸಿದ ವ್ಯಕ್ತಿ. ಅವರ ಜೀವನವನ್ನು ಶ್ರೀಮಂತಗೊಳಿಸಿದ ವ್ಯಕ್ತಿ. ಆದರೆ, ಈಗ ಹೇಮಾ ಮಾಲಿನಿ ಅವರನ್ನು ಡಿಯೋಲ್ ಕುಟುಂ ಎಲ್ಲದರಿಂದ ದೂರವಿಟ್ಟರು’ ಎಂದಿದ್ದಾರೆ ಶೋಭಾ.
‘ಧರ್ಮೇಂದ್ರ ಮತ್ತು ಹೇಮಾ ಮಾಲಿನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಡೀ ಪರಿಸ್ಥಿತಿ ಅವರಿಗೆ ತುಂಬಾ ಭಯಾನಕವಾಗಿದ್ದಿರಬೇಕು. ಆದರೆ ಅವರು ಎಲ್ಲವನ್ನೂ ತಮ್ಮ ಖಾಸಗಿ ಜೀವನದಲ್ಲಿಯೇ ಇಟ್ಟುಕೊಂಡಿದ್ದರು. ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಮಾಡಿದಾಗಲೆಲ್ಲಾ, ಅವರು ಅದನ್ನು ಅತ್ಯಂತ ಘನತೆಯಿಂದ ಮಾಡಿದರು ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.
‘ಹೇಮಾ ಮಾಲಿನಿ ಸ್ವತಃ ಪ್ರಭಾವಿ ವ್ಯಕ್ತಿ, ಆದ್ದರಿಂದ ಸಾರ್ವಜನಿಕ ಪ್ರದರ್ಶನಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪ್ರದರ್ಶಿಸುವ ಬದಲು ತನ್ನ ಘನತೆಯನ್ನು ಕಾಪಾಡಿಕೊಳ್ಳುವ ಅವರ ನಿರ್ಧಾರವು ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದೆ. ಧರ್ಮೇಂದ್ರ ಅವರ ಮರಣದ ನಂತರ, ಹೇಮಾ ಮಾಲಿನಿ ಸಿಂಪತಿ ತೆಗೆದುಕೊಳ್ಳುವ ಅವಕಾಶ ಇತ್ತು. ಮಾಧ್ಯಮಗಳು ಸಹ ಈ ಬಗ್ಗೆ ವರದಿ ಮಾಡಲು ಬಯಸಿದ್ದವು. ಆದರೆ ಅವರು ಯಾವಾಗಲೂ ಎಲ್ಲವನ್ನೂ ರಹಸ್ಯವಾಗಿಟ್ಟರು. ಅವರು ತಮ್ಮ ಘನತೆಯನ್ನು ಉಳಿಸಿಕೊಂಡರು’ ಎಂದು ಶೋಭಾ ಡೇ ಹೇಳಿದರು.
ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಸಮವಂತೆ!
ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ (Bengaluru Air Quality ಹೇಳುವಷ್ಟೇನು ಬದಲಾವಣೆ ಕಂಡಿಲ್ಲ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯಕ್ಕೂ ಕೊಡುಗೆ ನೀಡುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಉಸಿರಾಡುವ ಜನರು ದಿನಕ್ಕೆ 3.2 ಸಿಗರೇಟ್ ಸೇದಿದಷ್ಟೇ ಹಾನಿ ಅನುಭವಿಸುತ್ತಿದ್ದಾರೆ ಎಂದು AQI ತಿಳಿಸಿದೆ. ಇದು ಹೀಗೆ ಮುಂದುವರೆದರೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿ ಜನರ ಜೀವಕ್ಕೇ ಕುತ್ತು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರನ್ನೂ ಮೀರಿಸಿದ ಬಳ್ಳಾರಿಯ ಕಳಪೆ ಏರ್ ಕ್ವಾಲಿಟಿ
ಕಳೆದ ಒಂದು ವಾರದಿಂದ ಹದಗೆಟ್ಟ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಆಗುತ್ತಿಲ್ಲ. ಈ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಗುಣಮಟ್ಟ 78 ಇದ್ದರೆ ಗರಿಷ್ಠ 200ರ ಗಡಿ ದಾಟಿತ್ತು. ಇದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿತ್ತು. ಇಂದು ಈ ಗಾಳಿಯ ಗುಣಮಟ್ಟ 173 ಇದ್ದು, ಸ್ವಲ್ಪ ಸುಧಾರಿಸಿಕೊಂಡಿದ್ದರೂ ಈ ಹಿಂದೆ ತಜ್ಞರು ಹೇಳಿದಂತೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹೀಗೆ ಮುಂದುವರಿದರೆ ದೆಹಲಿಯ ಪರಿಸ್ಥಿತಿ ಎದುರಾಗಬಹುದು. ಬೆಂಗಳೂರು ಮಾತ್ರವಲ್ಲದೇ ಇತರ ಶಹರದಲ್ಲಿಯೂ ಕಳಪೆ ಗುಣಮಟ್ಟದ ಗಾಳಿಯ ಸಮಸ್ಯೆ ಎದುರಾಗಿದ್ದು, ಬಳ್ಳಾರಿಯಲ್ಲಂತೂ 224ರ ಮಟ್ಟಿಗೆ ಏರ್ ಕ್ವಾಲಿಟಿ ಹಾಳಾಗಿತ್ತು. ಇಂದೂ 197ರಲ್ಲಿಯುವ ಬಳ್ಳಾರಿಯ ಗಾಳಿಯ ಗುಣಮಟ್ಟ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಜನರ ಆರೋಗ್ಯದ ಮೇಲೆ ನೇರ ಪರಿಣಾಮ
ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 87ಕ್ಕೆ ತಲುಪಿದ್ದು, PM10 ಪ್ರಮಾಣ 113ಕ್ಕೆ ಇಳಿದಿದೆ. ಈ ಎರಡರಿಂದಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಭಯ ಹೆಚ್ಚುತ್ತಿದ್ದು, ಜನರು WHO ಮಾರ್ಗಸೂಚಿಯನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index):
ಬೆಂಗಳೂರು – 173
ಮಂಗಳೂರು – 111
ಮೈಸೂರು – 126
ಬೆಳಗಾವಿ – 154
ಕಲಬುರ್ಗಿ – 68
ಶಿವಮೊಗ್ಗ – 81
ಬಳ್ಳಾರಿ – 197
ಹುಬ್ಬಳ್ಳಿ- 91
ಉಡುಪಿ – 88
ವಿಜಯಪುರ – 153
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ ಗುಣ ಮಟ್ಟದ ಗಾಳಿಯು- 0-50, ಮಧ್ಯಮ – 50-100, ಕಳಪೆ – 100-150, ಅನಾರೋಗ್ಯಕರ – 150-200, ಗಂಭೀರ – 200 – 300 ಹಾಗೂ ಅಪಾಯಕಾರಿ ಗುಣ ಮಟ್ಟದ ಗಾಳಿಯು 300 -500+ ಇರುತ್ತದೆ.
ನಟ ದರ್ಶನ್ ಹಾಗೂ ಮಗ ವಿನೀಶ್ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಧವ್ಯ ಇದೆ. ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಗೆಳೆಯನ ರೀತಿ ವಿನೀಶ್ನ ದರ್ಶನ್ ಟ್ರೀಟ್ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಫೋಟೋಗಳು ವೈರಲ್ ಆಗುತ್ತವೆ.
ಈಗ ದರ್ಶನ್ ಹಾಗೂ ವಿನೀಶ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ದರ್ಶನ್ ಹಾಗೂ ವಿನೀಶ್ ಲುಕ್ ಹಾಗೂ ಖದರ್ ಒಂದೇ ರೀತಿ ಇದೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.
ವಿನೀಶ್ ಅವರಿಗೆ ಸ್ವಲ್ಪ ವಿಜಯಲಕ್ಷ್ಮೀ ಅವರ ಹೋಲಿಕೆ ಇದೆ. ಆದರೆ ಎತ್ತರ ಮಾತ್ರ ದರ್ಶನ್ ಅವರದ್ದೇ ಬಂದಿದೆ. ಅವರು ದರ್ಶನ್ ರೀತಿಯೇ ಕಟ್ಟುಮಸ್ತಾಗಿ ಕಾಣಿಸುತ್ತಿದ್ದಾರೆ. ಈ ಸಂದರ್ಭದ ಫೋಟೋನ ‘ಡೆವಿಲ್’ ತಂಡ ಹಂಚಿಕೊಂಡಿದೆ.
ಅಂದಹಾಗೆ, ಇದು ‘ಡೆವಿಲ್’ ಸಿನಿಮಾ ಶೂಟ್ ಸಂದರ್ಭದಲ್ಲಿ ತೆಗೆದ ಫೋಟೋ. ರಾಜಸ್ಥಾನದಲ್ಲಿ ತಂಡ ಬೀಡುಬಿಟ್ಟಾಗ ವಿನೀಶ್ ಕೂಡ ದರ್ಶನ್ ಜೊತೆ ತೆರಳಿದ್ದರು. ತಂದೆಯ ರೀತಿಯೇ ಶರ್ಟ್ ಧರಿಸಿ ಅವರು ಗಮನ ಸೆಳೆದಿದ್ದಾರೆ.
ದರ್ಶನ್ ಅವರಿಗೆ ಕುದುರೆ ಎಂದರೆ ಸಖತ್ ಇಷ್ಟ. ಅವರು ಕುದುರೆ ಸವಾರಿ ಮಾಡುತ್ತಾರೆ. ತಮ್ಮ ಫಾರ್ಮ್ಹೌಸ್ನಲ್ಲಿ ಕುದುರೆಗಳನ್ನು ಅವರು ಸಾಕಿದ್ದಾರೆ. ವಿನೀಶ್ ಕೂಡ ಕುದುರೆ ಸವಾರಿ ಮಾಡಬಲ್ಲರು ಎಂಬುದು ವಿಶೇಷ. ಆ ಸಂದರ್ಭದ ಫೋಟೋನ ವಿನೀಶ್ ಈ ಮೊದಲು ಹಂಚಿಕೊಂಡಿದ್ದರು.
ಬಾಗಲಕೋಟೆ, ಡಿಸೆಂಬರ್ 19: ಅಪ್ರಾಪ್ತೆ ಮೇಲೆ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿಅತ್ಯಾಚಾರ ಪ್ರಕರಣ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತೆಯದ್ದು ಎನ್ನಲಾದ ವಿಡಿಯೋವಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಸರು ಕೆಡಿಸುವ ಉದ್ದೇಶದಿಂದ ನಾನು ಹಾಗೆಲ್ಲ ಹೇಳಿದ್ದೇನೆ, ನನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಅಪ್ರಾಪ್ತೆ ಹೇಳಿರೋದು ವಿಡಿಯೋದಲ್ಲಿದೆ.
ಮ್ಯೂಸಿಕ್ ಮೈಲಾರಿ ಅಣ್ಣ, ಲತಾ, ಶ್ರಾವಣಿ ಮತ್ತು ಡ್ಯಾನ್ಸರ್ ರುಕ್ಕು ಬಗ್ಗೆ ನಾನು ಏನೇನೋ ಮಅತಾಡಿದ್ದೇನೆ. ಅವರ ಹೆಸರು ಕೆಡಿಸುವ ಜೊತೆಗೆ, ನಾನು ಹೆಸರು ಮಾಡುವ ಉದ್ದೇಶದಿಂದ ಆ ರೀತಿ ಹೇಳಿದ್ದು, ನನ್ನದು ತಪ್ಪಾಗಿದೆ. ನನ್ನ ಕ್ಷಮಿಸಿ ಎಂದು ಯುವತಿ ಕೈಮುಗಿದು ಹೇಳಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಪ್ರಾಪ್ತೆಯ ವಿರುದ್ದ ಮೈಲಾರಿ ಅಭಿಮಾನಿಗಳು ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಕ್ಷಮೆ ಕೇಳಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯುವಕನೊಬ್ಬನ ಜೊತೆ ಇರುವ ಮತ್ತೂ ತಪ್ಪಾಯಿತು ಎಂದು ಹೇಳಿರುವ ವಿಡಿಯೋ ಈಗಿನದ್ದಲ್ಲ. ನನ್ನ ಮೇಲೆ ಅತ್ಯಾಚಾರ ನಡೆದ ಬಳಿಕ ಎರಡನೇ ದಿನ ಮಾಡಿರೋದು. ಬೆಂಕಿ ಲತಾ ಡ್ಯಾನ್ಸರ್, ರುಕ್ಕು ಸಿಂಗರ್, ಡಿಜೆ ಮಾಂತೇಶ್ ಗೋಕಾಕ್ ಅವರು ಬಂದು ನನಗೆ ಹೊಡೆದು ಆ ವಿಡಿಯೋ ವಿಡಿಯೋ ಮಾಡಿಸಿದ್ದರು. ಅದೇ ವಿಡಿಯೋವನ್ನೀಗ ಕೆಲವರು ಇನ್ಸ್ಟಾಗ್ರಾಮ್ನಲ್ಲಿ ಎಡಿಟ್ ಮಾಡಿ ಹಾಕ್ತಿದಾರೆ. ಈ ರೀತಿ ವಿಡಿಯೋ ಸೇರ್ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುತ್ತೇನೆ. ನಾನೊಬ್ಬ ದಲಿತ ಹುಡುಗಿಯಾಗಿದ್ದು, ನನಗೆ ನ್ಯಾಯ ಬೇಕು. ಆ ವಿಡಿಯೋ ಈಗಿನದ್ದು ಅಂತ ಯಾರು ತಿಳಿದುಕೊಳ್ಳಬೇಡಿ. ನನಗೆ ನ್ಯಾಯ ಕೊಡಿಸಿ, ಸಪೋರ್ಟ್ ಮಾಡಿ ಎಂದು ಯುವತಿ ಕೈ ಮುಗಿದು ಕೇಳಿಕೊಂಡಿದ್ದಾಳೆ.
ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮ್ಯೂಸಿಕ್ ಮೈಲಾರಿ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಪೋಕ್ಸೊ ಪ್ರಕರಣ ದಾಖಲಾಗಿದೆ. ಕೇಸ್ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಮೈಲಾರಿ ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿರುವಾಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದ. ಮಹಾಲಿಂಗಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ನೀವು ಶಿವನ ಭಕ್ತರಾಗಿದ್ದರೆ, ನಿಮ್ಮ ಶುಕ್ರ ಮತ್ತು ಚಂದ್ರನನ್ನು ಬಲಪಡಿಸಲು ಯಾವ ಶಿವಲಿಂಗವನ್ನು ಮನೆಗೆ ತರಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ವಾಸ್ತವವಾಗಿ, ಬೆಳ್ಳಿಯ ಶಿವಲಿಂಗವು ನಿಮ್ಮ ಜೀವನಕ್ಕೆ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಬೆಳ್ಳಿ ಶುಕ್ರ ಮತ್ತು ಚಂದ್ರನನ್ನು ಸಂಕೇತಿಸುತ್ತದೆ. ಬೆಳ್ಳಿಯ ಶಿವಲಿಂಗವು ಈ ಎರಡು ಶುಭ ಗ್ರಹಗಳ ಶಕ್ತಿಯನ್ನು ಸಂಕೇತಿಸುತ್ತದೆ. ನಿಯಮಿತ ಪೂಜೆಯು ಆಧ್ಯಾತ್ಮಿಕ ಪ್ರಯೋಜನಗಳನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯ ಮತ್ತು ಆರ್ಥಿಕ ಶಾಂತಿಯಂತಹ ಲೌಕಿಕ ಪ್ರಯೋಜನಗಳನ್ನು ಸಹ ನೀಡುತ್ತದೆ.
ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದಾಗುವ ಪ್ರಯೋಜನಗಳು:
ಶಿವಲಿಂಗದ ಪೂಜೆಯಲ್ಲಿ ಬೆಳ್ಳಿಗೆ ವಿಶೇಷ ಸ್ಥಾನವಿದೆ. ಬೆಳ್ಳಿಯನ್ನು ಪೂಜಿಸುವುದರಿಂದ ಅನೇಕ ಶುಭ ಫಲಿತಾಂಶಗಳು ದೊರೆಯುತ್ತವೆ:
ಸಂಪತ್ತು: ಬೆಳ್ಳಿ ಶುಕ್ರ ಮತ್ತು ಚಂದ್ರರನ್ನು ಸಂಕೇತಿಸುತ್ತದೆ, ಆದ್ದರಿಂದ ಬೆಳ್ಳಿಯ ಶಿವಲಿಂಗವನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ.
ಮಾನಸಿಕ ಶಾಂತಿ: ಬೆಳ್ಳಿ ಮನಸ್ಸನ್ನು ಶಾಂತಗೊಳಿಸುವ ಅದ್ಭುತ ಗುಣವನ್ನು ಹೊಂದಿದೆ. ಇದನ್ನು ಪೂಜಿಸುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ.
ಆರೋಗ್ಯ ಪರಿಹಾರ: ಬೆಳ್ಳಿ ಶಿವಲಿಂಗಕ್ಕೆ ನಿಯಮಿತವಾಗಿ ಅಭಿಷೇಕ ಮಾಡುವುದು ಮತ್ತು ಅದಕ್ಕೆ ತೀರ್ಥಯಾತ್ರೆಯಲ್ಲಿ ಭಾಗವಹಿಸುವುದರಿಂದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ.
ಕೆಲವು ವಿಶೇಷ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದ ತ್ವರಿತ ಪರಿಹಾರ ಪಡೆಯಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಜಾತಕದಲ್ಲಿ ಚಂದ್ರ ದೋಷ: ಜಾತಕದಲ್ಲಿ ಚಂದ್ರ ದುರ್ಬಲವಾಗಿರುವವರು ತೀವ್ರ ಮಾನಸಿಕ ಒತ್ತಡ, ಆತಂಕ ಅಥವಾ ನಿದ್ರಾಹೀನತೆಯಿಂದ ಬಳಲುತ್ತಾರೆ. ಬೆಳ್ಳಿ ಶಿವಲಿಂಗವನ್ನು ಪೂಜಿಸುವುದರಿಂದ ಅವರ ಮನಸ್ಸು ಸ್ಥಿರಗೊಳ್ಳುತ್ತದೆ ಮತ್ತು ಚಂದ್ರ ದೋಷ ದೂರವಾಗುತ್ತದೆ.
ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳು: ಸಂತಾನ ಭಾಗ್ಯಕ್ಕಾಗಿ ದಂಪತಿಗಳು, ಪ್ರತಿ ಸೋಮವಾರ ಬೆಳ್ಳಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
ಆರ್ಥಿಕ ತೊಂದರೆಗಳು: ಭಾರೀ ಸಾಲದ ಹೊರೆಯಿಂದ ಬಳಲುತ್ತಿರುವವರು ಮತ್ತು ವ್ಯವಹಾರದಲ್ಲಿ ಆಗಾಗ್ಗೆ ನಷ್ಟವನ್ನು ಎದುರಿಸುತ್ತಿರುವವರು ಅಡೆತಡೆಗಳನ್ನು ತೆಗೆದುಹಾಕಿ ಮತ್ತು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬೆಳ್ಳಿ ಶಿವಲಿಂಗವನ್ನು ಪೂಜಿಸಬಹುದು.
ಭಯ ಮತ್ತು ಆತಂಕ: ಅಪರಿಚಿತವಾದ ಯಾವುದೋ ವಿಷಯದ ಬಗ್ಗೆ ನಿರಂತರ ಭಯ ಅಥವಾ ಆತಂಕದಿಂದ ಬಳಲುತ್ತಿರುವವರು ಬೆಳ್ಳಿಯ ರೂಪದಲ್ಲಿ ಶಿವನನ್ನು ಪೂಜಿಸುವುದರಿಂದ ಅಪಾರ ಧೈರ್ಯ ಮತ್ತು ಮಾನಸಿಕ ಸ್ಥಿರತೆಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಲಿಯುಗದಲ್ಲಿ ಎಂದಿಗೂ ಬಾಡದ ಅರಳಿ ವೃಕ್ಷದ ಹಿಂದಿನ ರಹಸ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಮಹತ್ವವಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ನುಡಿಯಂತೆ, ವೃಕ್ಷಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬುದು ಪಾರಂಪರಿಕ ನಂಬಿಕೆ. ಪೂಜ್ಯನೀಯ ವೃಕ್ಷಗಳಲ್ಲಿ, ಆಯುರ್ವೇದ ಗುಣಗಳನ್ನು ಹೊಂದಿರುವ ಮರಗಳಲ್ಲಿ, ದೇವತಾ ವೃಕ್ಷಗಳಲ್ಲಿ ಅರಳಿ ಮರಕ್ಕೆ ಅಗ್ರಸ್ಥಾನವಿದೆ. ಅನೇಕ ದೇವರುಗಳಿಗೆ ಪ್ರತೀಕವಾಗಿ ವೃಕ್ಷಗಳನ್ನು ಪೂಜಿಸುವ ಪದ್ಧತಿ ನಮ್ಮಲ್ಲಿದೆ. ಆದರೆ, ಅರಳಿ ಮರ ಎಂದಿಗೂ ಬಾಡುವುದಿಲ್ಲ ಅಥವಾ ಒಣಗುವುದಿಲ್ಲ ಎಂಬ ಕುತೂಹಲಕಾರಿ ವಿಷಯಕ್ಕೆ ಒಂದು ಪೌರಾಣಿಕ ಹಿನ್ನೆಲೆಯಿದೆ.
ಈ ಪ್ರಶ್ನೆಗೆ ಇತಿಹಾಸವನ್ನು ಅವಲೋಕಿಸಿದಾಗ ಒಂದು ಸ್ವಾರಸ್ಯಕರ ಕಥೆ ಹೊರಬರುತ್ತದೆ. ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ದೇವಿ ವನವಾಸದಲ್ಲಿದ್ದಾಗ ಗಯಾ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅಲ್ಲಿ ಫಲ್ಗುಣಿ ನದಿಯ ದಡದಲ್ಲಿ ಸೀತಾ ದೇವಿಯನ್ನು ಕೂರಿಸಿ, ರಾಮ ಮತ್ತು ಲಕ್ಷ್ಮಣರು ಆಹಾರ ಅರಸಿ ಕಾಡಿಗೆ ತೆರಳುತ್ತಾರೆ. ಆ ಸಮಯದಲ್ಲಿ, ಫಲ್ಗುಣಿ ನದಿಯಿಂದ ಒಂದು ಕೈ ಆಚೆಗೆ ಬಂದು ಆಹಾರಕ್ಕಾಗಿ ಕೇಳುತ್ತದೆ. ಸೀತಾ ದೇವಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ತನ್ನಲ್ಲಿ ಯಾವುದೇ ಆಹಾರವಿಲ್ಲದಿದ್ದಾಗ, ತನ್ನ ದೈವಿಕ ಶಕ್ತಿಯಿಂದ ನದಿಯ ದಡದಲ್ಲಿರುವ ಮಣ್ಣನ್ನೇ ಅನ್ನವನ್ನಾಗಿ ಪರಿವರ್ತಿಸಿ ಆ ಕೈಗೆ ನೀಡುತ್ತಾಳೆ. ಈ ಘಟನೆಗೆ ಸಾಕ್ಷಿಯಾಗಿ, ರಾಮ-ಲಕ್ಷ್ಮಣರು ಮರಳಿದಾಗ ಹೇಳಲು, ಸೀತಾ ದೇವಿ ಐದು ಅಂಶಗಳನ್ನು ಸಾಕ್ಷಿ ಹೇಳಲು ಕೇಳುತ್ತಾಳೆ. ಅವುಗಳಲ್ಲಿ ಫಲ್ಗುಣಿ ನದಿ, ಒಂದು ಹಸು, ತುಳಸಿ ಗಿಡ, ಅರಳಿ ಮರ, ಮತ್ತು ಅಗ್ನಿ ದೇವರು ಸೇರಿದ್ದರು.
ವಿಡಿಯೋ ಇಲ್ಲಿದೆ ನೋಡಿ:
ರಾಮ-ಲಕ್ಷ್ಮಣರು ಮರಳಿದಾಗ, ಸೀತಾ ದೇವಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ಆದರೆ ರಾಮ-ಲಕ್ಷ್ಮಣರು ಇದನ್ನು ನಂಬುವುದಿಲ್ಲ. ಸತ್ಯವನ್ನು ಸಾಕ್ಷಿ ಹೇಳಲು ಕೇಳಿದಾಗ, ಫಲ್ಗುಣಿ ನದಿ ಮೌನ ವಹಿಸುತ್ತದೆ. ಆಗ ಸೀತಾ ದೇವಿ “ನಿನಗೆ ನೀರಿನ ಕೊರತೆ ಉಂಟಾಗಲಿ” ಎಂದು ಶಪಿಸುತ್ತಾಳೆ. ಇಂದಿಗೂ ಫಲ್ಗುಣಿ ನದಿ ಒಳಪ್ರವಾಹದಿಂದ ಹರಿಯುತ್ತದೆ. ನಂತರ ಹಸು ಸಾಕ್ಷಿ ಹೇಳಲು ಹಿಂದೇಟು ಹಾಕಿದಾಗ, ಸೀತಾ ದೇವಿ “ನೀನು ಜನರಿಗೆ ಆಹಾರವಾಗಿ ಮಾತ್ರ ಉಳಿಯಲಿ” ಎಂದು ಶಾಪ ನೀಡುತ್ತಾಳೆ. ಇಂದಿಗೂ ಗಯಾ ಕ್ಷೇತ್ರದಲ್ಲಿ ಪಿಂಡಗಳನ್ನು ಹಸುಗಳಿಗೆ ಆಹಾರವಾಗಿ ನೀಡುವ ಪದ್ಧತಿಯಿದೆ. ತುಳಸಿ ಗಿಡ ಕೂಡ ಸಾಕ್ಷಿ ಹೇಳಲು ಹಿಂಜರಿದಾಗ, “ನೀನು ಎಲ್ಲೆಂದರಲ್ಲಿ ಬೆಳೆದು ಬೆಳೆಯುವ ಗಿಡವಾಗಲಿ” ಎಂದು ಶಾಪ ನೀಡುತ್ತಾಳೆ. ಅಗ್ನಿ ದೇವರೂ ಕೂಡ ಸಾಕ್ಷಿ ನುಡಿಯಲಿಲ್ಲ.
ಆದರೆ, ಅರಳಿ ಮರ ಮಾತ್ರ ಸತ್ಯವನ್ನು ನಿಷ್ಠೆಯಿಂದ ನುಡಿಯುತ್ತದೆ. ಸೀತಾ ದೇವಿ ಪ್ರಸನ್ನಳಾಗಿ, ಅರಳಿ ಮರಕ್ಕೆ ಮಹಾನ್ ವರವನ್ನು ನೀಡುತ್ತಾಳೆ. “ಕಲಿಯುಗದಲ್ಲಿ ನೀನು ಎಂದಿಗೂ ಬಾಡದೆ, ಸದಾ ಹಸಿರಾಗಿ ಇರುವೆ. ನಿನ್ನಲ್ಲಿ ದೇವಾನುದೇವತೆಗಳು ನೆಲೆಸುವರು” ಎಂದು ಆಶೀರ್ವದಿಸುತ್ತಾಳೆ. ಅಂದಿನಿಂದ, ಅರಳಿ ಮರಕ್ಕೆ ಅಮರತ್ವದ ವರ ದೊರೆತು, ಅದು ಎಂದಿಗೂ ಬಾಡುವುದಿಲ್ಲ ಎಂಬ ನಂಬಿಕೆ ಇದೆ. ಅರಳಿ ಮರ 24 ಗಂಟೆಯೂ ಪ್ರಾಣವಾಯುವನ್ನು ಹೊರಸೂಸುತ್ತದೆ ಎಂದು ಆಧುನಿಕ ವಿಜ್ಞಾನವೂ ಒಪ್ಪುತ್ತದೆ. ಇತಿಹಾಸದಲ್ಲಿ ಅನೇಕ ದೃಷ್ಟಾಂತ ಕಥೆಗಳ ಮುಖೇನ ಅರಳಿ ಮರದಲ್ಲಿ ದೇವತೆಗಳು ವಾಸವಾಗಿದ್ದಾರೆಂದು ಹೇಳಲಾಗುತ್ತದೆ. ಅರಳಿ ಮರವನ್ನು ಸ್ಪರ್ಶಿಸುವುದರಿಂದ ಅಥವಾ ಅದರ ಹತ್ತಿರ ಓಡಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಚೇತರಿಕೆ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಇದು ಕೇವಲ ನಂಬಿಕೆಯಷ್ಟೇ ಅಲ್ಲದೆ, ವೈಜ್ಞಾನಿಕವಾಗಿ ಸಸ್ಯದ ಗುಣಧರ್ಮಗಳಲ್ಲೂ ಅಡಗಿದೆ. ಹೀಗೆ ಅರಳಿ ಮರ ಸದಾ ಹಸಿರಾಗಿರುವುದು ಇತಿಹಾಸ ಮತ್ತು ನಂಬಿಕೆಯ ಆಧಾರದ ಮೇಲೆ ನಿಂತಿದೆ ಎಂದು ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ