ಮುದಾದ ಮಗುವಿಗೆ ಜನ್ಮ: ಕರುಳ ಬಳ್ಳಿ ಕಣ್ತುಂಬಿಕೊಳ್ಳುವ ಮೊದಲೇ ತಾಯಿ ದುರಂತ ಸಾವು – Kannada News | A mother dies In Hassan Hims after delivery, family alleges hospital negligence
ಹಾಸನ, (ಫೆಬ್ರವರಿ 24): ಹೆರಿಗೆ ನಂತರ ಬಾಣಂತಿ ಸಾವನ್ನಪ್ಪಿರುವ ಘಟನೆ ಹಾಸನದ (Hassan) ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ ಎನ್ನುವ ಮಹಿಳೆ ಹೆರಿಗೆಗೆಂದು ಹಾಸನದ ಹಿಮ್ಸ್ ಆಸ್ಪತ್ರೆ (Hims Hospital) ದಾಖಲಾಗಿದ್ದರು. ಆದ್ರೆ, ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿ ಶೃತಿ (30) ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಣಂತಿ ಶೃತಿ ಸಾವಿಗೆ ಹಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶೃತಿ ಸಂಬಂಧಿಕರು ಹಾಗೂ ಪತಿ ಆರೋಪಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸರಿಯಾಗಿ ಚಿಕಿತ್ಸೆ…