ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 6ರ ದಿನಭವಿಷ್ಯ
ಈ ದಿನ ಯಾವುದೇ ಮುಖ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮೊದಲಿಗೆ ತುಳಸಿ ಗಿಡಕ್ಕೆ ನಮಸ್ಕಾರ ಮಾಡಿಕೊಂಡು ಹೊರಡಿ. ಸಾಧ್ಯವಾದಲ್ಲಿ ನೀರನ್ನು ಗಿಡಕ್ಕೆ ಹಾಕಿದಲ್ಲಿ ಮತ್ತೂ ಒಳ್ಳೆಯದು. ದೀರ್ಘ ಕಾಲದಿಂದ ಬಾಕಿ ಉಳಿದುಹೋಗಿದ್ದ ಕೆಲಸಗಳು ಸರಾಗವಾಗಿ ಆಗಲಿವೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಹಣಕಾಸಿನ ಹರಿವು ನೀವು ನಿರೀಕ್ಷೆಗೂ ಮೀರಿ ಸರಾಗವಾಗಿ ಆಗಲಿದೆ. ನಿಮ್ಮಲ್ಲಿ ಕೆಲವರು ಸಂಗೀತ ಅಥವಾ ಸಂಗೀತದ ಸಾಧನಗಳನ್ನು ಕಲಿಯುವುದಕ್ಕೆ ಸೇರಿಕೊಳ್ಳುವ ನಿರ್ಧಾರ ಮಾಡುವ…