42 ವರ್ಷದ ಬಳಿಕ ಸಿಕ್ಕಿತು ನ್ಯಾಯ! ಅಲಹಾಬಾದ್ ಹೈಕೋರ್ಟ್ನಿಂದ 100 ವರ್ಷದ ಕೊಲೆ ಆರೋಪಿ ಖುಲಾಸೆ – Kannada News | Justice after 42 years Allahabad High Court acquits 100 year old man convicted for murder
ಅಲಹಾಬಾದ್, ಫೆಬ್ರವರಿ 5: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವ ಪ್ರಕರಣವೂ ಬಹಳ ಬೇಗ ಇತ್ಯರ್ಥವಾಗುವುದಿಲ್ಲ ಎಂಬ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಈ ರೀತಿಯ ವಿಳಂಬದ ನ್ಯಾಯದಿಂದಾಗಿ ತಪ್ಪು ಮಾಡಿರದ ಆರೋಪಿಗಳು ತೀವ್ರ ತೊಂದರೆ ಅನುಭವಿಸಿದ ಉದಾಹರಣೆಗಳೂ ಇವೆ. ಈ ರೀತಿಯ ನ್ಯಾಯಾಂಗದ ವಿಳಂಬದ ದೀರ್ಘಾವಧಿಯ ಪರಿಣಾಮವನ್ನು ಒತ್ತಿಹೇಳುವ ಮಹತ್ವದ ತೀರ್ಪೊಂದು ಹೊರಬಿದ್ದಿದ್ದು, ಅಲಹಾಬಾದ್ ಹೈಕೋರ್ಟ್ (Allahabad High Court) 1982ರ ಹಿಂದಿನ ಕೊಲೆ ಪ್ರಕರಣದಲ್ಲಿ 100 ವರ್ಷದ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ…