ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಯೆಲ್ಲೋ ಲೈನ್‌ನಲ್ಲಿ ಇಂದಿನಿಂದ 7ನೇ ರೈಲು ಸಂಚಾರ – Kannada News | Good News for Namma Metro Commuters: 7th Train Starts Operations on Yellow Line from Today
ಬೆಂಗಳೂರು, ಜನವರಿ 15: ನಮ್ಮ ಮೆಟ್ರೋ (Namma Metro) ಯೆಲ್ಲೋ ಲೈನ್‌ನಲ್ಲಿ ಇಂದಿನಿಂದ ಮತ್ತೊಂದು ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ. ಆರ್.ವಿ.ರೋಡ್–ಬೊಮ್ಮಸಂದ್ರ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸೇವೆಗೆ ಸೇರ್ಪಡೆಯಾಗಿದ್ದು, ಇದರಿಂದ ಪ್ರಯಾಣಿಕರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ಬೆಳಗ್ಗೆ 6 ಗಂಟೆಯಿಂದಲೇ ಯೆಲ್ಲೋ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತಿದ್ದು, ರೈಲುಗಳ ಸಂಚಾರದ ನಡುವಿನ ಅಂತರ ಕಡಿಮೆಯಾಗಿದೆ. ಈವರೆಗೆ ಈ ಮಾರ್ಗದಲ್ಲಿ ಪ್ರತಿ 13 ನಿಮಿಷಕ್ಕೊಮ್ಮೆ ಒಂದು ಮೆಟ್ರೋ ರೈಲು ಸಂಚರಿಸುತ್ತಿತ್ತು. ಇದೀಗ 7ನೇ…