ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?
ಮೊರಾದಾಬಾದ್, ಏಪ್ರಿಲ್ 06: ಅಂದು ಮನೆಯಲ್ಲಿ ಎರಡೆರಡು ಮದುವೆ(Marriage), ಮನೆಯ ತುಂಬಾ ನೆಂಟರಿಷ್ಟರು ತುಂಬಿದ್ದರು. ಎಲ್ಲಾ ವಿಧಿ ವಿಧಾನಗಳು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಮದುವೆಯಲ್ಲಾ ಮುಗಿದ ಬಳಿಕ ತಂದೆ ಮಗಳನ್ನು ವರನ ಜತೆ ಕಳುಹಿಸಲು ನಿರಾಕರಿಸಿದ್ದಷ್ಟೇ ಅಲ್ಲದೆ ಈ ಮದುವೆ ಮುರಿದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಅಂದು ಎರಡು ವಿವಾಹಗಳು ನೆರವೇರಿದ್ದವು. ಮದುವೆಯ ವಿಧಿ ವಿಧಾನಗಳು ಮುಗಿದಿದ್ದವು. ಆದರೆ ತಂದೆ ವಧುವನ್ನು ಬೀಳ್ಕೊಡಲು ನಿರಾಕರಿಸಿದ್ದಾರೆ. ವರನ ತಪ್ಪಿನಿಂದಾಗಿ ಮದುವೆ ಮೆರವಣಿಗೆ ವಧು ಇಲ್ಲದೆ…