ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1 – Kannada News | Four Team India stars claim Number 1 spot in ICC Rankings

ಐಸಿಸಿ ಪ್ರಕಟಿಸಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಪೈಕಿ ಏಕದಿನ ಹಾಗೂ ಟಿ20 ಕ್ರಿಕೆಟ್‌ನ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಇಬ್ಬರು ಯುವ ದಾಂಡಿಗರು ವಿಶ್ವದ ನಂ. 1 ಸ್ಥಾನ ಅಲಂಕರಿಸಿದ್ದರೆ, ಟೆಸ್ಟ್ ಕ್ರಿಕೆಟ್‌ನ ಬೌಲಿಂಗ್ ಹಾಗೂ ಆಲ್‌ರೌಂಡರ್ ವಿಭಾಗಗಳಲ್ಲಿ ಮತ್ತಿಬ್ಬರು ಅನುಭವಿ ಆಟಗಾರರು ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿ ಈ ಕೆಳಗಿನಂತಿದೆ… (PC: Getty Images)

Source link

ಅಧಿವೇಶನ ಆರಂಭಕ್ಕೂ ಮುನ್ನವೇ ಜಟಾಪಟಿ: ಸಭಾಪತಿ ಹೊರಟ್ಟಿಗೆ ಶಾಕ್​​ ಕೊಡುತ್ತಾ ಕಾಂಗ್ರೆಸ್​​? – Kannada News | Pre Session Politics: Council Chairman Basavaraj Horatti Dismisses Resignation Rumors Amid Congress Pressure

ಬೆಂಗಳೂರು, ಜುಲೈ 30: ಕರ್ನಾಟಕದಲ್ಲಿ ಮಳೆಗಾಲದ ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಆಗಸ್ಟ್ 13ರಿಂದ ಆಗಸ್ಟ್ 27ರವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಈ ನಡುವೆ ಸಭಾಪತಿ ಬದಲಾವಣೆಯ ವಿಚಾರ ಭಾರಿ ಚರ್ಚೆಯಾಗುತ್ತಿದ್ದು, ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಸವರಾಜ ಹೊರಟ್ಟಿ ಅವರಿಗೆ ಸಿಎಂ ಡಿಕೆ ಶಿವಕುಮಾರ್​​ ಮನವಿ ಮಾಡಿದ್ದಾರೆಂಬ ಸುದ್ದಿ ಹರಿದಾಡತೊಡಗಿದೆ. ಆದರೆ ಈ ವದಂತಿಗಳಿಗೆ ಸ್ವತಃ ಹೊರಟ್ಟಿ ಅವರೇ ಸ್ಪಷ್ಟನೆ ನೀಡಿದ್ದು, ನಾನು ಆಸ್ಪತ್ರೆಯಲ್ಲಿದ್ದಾಗ ಆರೋಗ್ಯ ವಿಚಾರಿಸಲು ಸಿಎಂ ಕರೆ ಮಾಡಿದ್ದರು. ಆದ್ರೆ ರಾಜೀನಾಮೆ ಬಗ್ಗೆ ಸಿಎಂ ಡಿಕೆಶಿ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

‘ರಾಜೀನಾಮೆ ಕೇಳಿದರೆ ತಕ್ಷಣ ನೀಡುತ್ತೇನೆ’

ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ತಕ್ಷಣ ನೀಡುತ್ತೇನೆ, ಕುರ್ಚಿಗೆ ಅಂಟಿಕೊಂಡು ಕೂರುವುದಿಲ್ಲ. 1956ರಿಂದ ಇಲ್ಲಿಯವರೆಗೆ ಎಲ್ಲರೂ ತಮ್ಮ ಅವಧಿ ಮುಗಿಸಿದ್ದಾರೆ. ಸರ್ಕಾರ ಬದಲಾವಣೆ ಆದಾಗ ಸಭಾಪತಿ ಬದಲಾವಣೆ ಮಾಡಿಲ್ಲ.
2028ರ ಜುಲೈವರೆಗೂ ನನ್ನ ಅವಧಿ ಇದೆ. ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಿದ ಉದಾಹರಣೆ ಇಲ್ಲ. ಇಬ್ಬರು ವಿಧಾನಪರಿಷತ್​ನ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟದ್ದು, ಅವರೇ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದ್ರೆ ಅವರು ಸಭಾಪತಿ ಆಗಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್; ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ

ಇದೇ ವಿಚಾರವಾಗಿ ನಿನ್ನೆಯೂ ಪ್ರತಿಕ್ರಿಯಿಸಿದ್ದ ಹೊರಟ್ಟಿ, ಸಭಾಪತಿಯಾದವರು ಯಾವುದೇ ಪಕ್ಷದವರಾದರೂ ಸಂವಿಧಾನದ ಪ್ರಕಾರ ನಡೆಯಬೇಕಾಗುತ್ತದೆ. ತಾನು ಭಾರತ ದೇಶದಲ್ಲಿಯೇ ಅತ್ಯಂತ ಹಿರಿಯ ಸಭಾಪತಿಯಾಗಿದ್ದು, 48 ವರ್ಷ ಸುದೀರ್ಘವಾದಂತ ಅನುಭವವಿದೆ. ನನ್ನನ್ನು ಅವರು ಚೇಂಜ್ ಮಾಡುತ್ತಾರೆಂದರೆ, ಮಾಡಲಿ. ಅವಿಶ್ವಾಸ ನಿರ್ಣಯ ಏತಕ್ಕೆ ಮಂಡಿಸುತ್ತಾರೆ ಎಂದಾದರೆ ಕಾರಣ ಬೇಕಲ್ಲ? ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಒಂದು ಭ್ರಷ್ಟಾಚಾರ ಮಾಡಿರಬೇಕು, ಪಕ್ಷಪಾತ ಮಾಡಿರಬೇಕು. ಈ ಕಾರಣರಿಂದ ನಿಮ್ಮ ಮೇಲೆ ನಮಗೆ ವಿಶ್ವಾಸ ಇಲ್ಲ, ಹೀಗಾಗಿ ನಿಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಎನ್ನಬಹುದು. ಆದರೆ ನನ್ನ ಮೇಲೆ ಯಾವ ಆರೋಪ ಮಾಡುತ್ತೀರಿ ಎಂದವರು ಪ್ರಶ್ನಿಸಿದ್ದರು.

‘ಬಿಜೆಪಿಯಿಂದ ಆಯ್ಕೆಯಾದವರನ್ನ ಒಪ್ಪಲ್ಲ’

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಪರಿಷತ್​​ನ ಕಾಂಗ್ರೆಸ್​​ ಸದಸ್ಯ ನಾಗರಾಜ್​​ ಯಾದವ್​​, ಸಭಾಪತಿಗಳು ರಾಜಕೀಯ ಹೇಳಿಕೆಯನ್ನ ಕೊಟ್ಟಿದ್ದಾರೆ. ಸಭಾಪತಿ ಸ್ಥಾನಕ್ಕೆ ಯಾರು ಅವಿಶ್ವಾಸ ಮಂಡನೆ ಮಾಡಿಲ್ಲ ಅನ್ನೋದು ಸತ್ಯಕ್ಕೆ ದೂರವಾದದ್ದು. 2015ರಲ್ಲಿ ಡಿ.ಎಚ್ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ಮಂಡಿಸಲಾಗಿತ್ತು. ಬಿಜೆಪಿಯಿಂದ ಆಯ್ಕೆಯಾಗಿರುವ ಹೊರಟ್ಟಿಯವರು ಮೆಜಾರಿಟಿ ಇಲ್ಲದಿದ್ದಾಗ ರಾಜೀನಾಮೆ ಕೊಡುವುದು ಒಳ್ಳೆಯದು. ಬಿಜೆಪಿಯಿಂದ ಆಯ್ಕೆಯಾದವರನ್ನ ನಾವು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:41 pm, Thu, 30 July 26

Source link

RWF Recruitment 2026: ಬೆಂಗಳೂರು ರೈಲ್ವೆ ವೀಲ್ ಫ್ಯಾಕ್ಟರಿಯಲ್ಲಿ ಉದ್ಯೋಗವಕಾಶ; ಗುಮಾಸ್ತ, ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಆಹ್ವಾನ – Kannada News | RWF Recruitment 2026: Government Job Opportunities in Bengaluru for 10th, ITI, 2nd PUC Pass Candidates

ರೈಲ್ವೆ ವೀಲ್ ಫ್ಯಾಕ್ಟರಿಯಲ್ಲಿ ಉದ್ಯೋಗ

ಬೆಂಗಳೂರಿನ ರೈಲ್ವೆ ಇಲಾಖೆಯು ರೈಲ್ವೆ ವೀಲ್ ಫ್ಯಾಕ್ಟರಿ (RWF) ಯಲ್ಲಿ ವಿವಿಧ ಗುಮಾಸ್ತ ಮತ್ತು ಟೆಕ್ನಿಷಿಯನ್ ಗೇಡ್ 3 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ 10ನೇ ತರಗತಿ, ITI, ಮತ್ತು 2nd PUC ಪಾಸ್ ಮಾಡಿದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಇದು ಮಹತ್ವದ ಸುವರ್ಣಾವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕು.

ಇಲಾಖೆ ಮತ್ತು ಹುದ್ದೆಗಳ ವಿವರ:

ರೈಲ್ವೆ ವೀಲ್ ಫ್ಯಾಕ್ಟರಿ (RWF)ಯು ಭಾರತೀಯ ರೈಲ್ವೆ ಇಲಾಖೆಯ ಅಡಿಯಲ್ಲಿ ಬರುವ ಒಂದು ಪ್ರಮುಖ ಘಟಕವಾಗಿದೆ. ಪ್ರಸ್ತುತ, ಈ ಇಲಾಖೆಯಲ್ಲಿ ಗುಮಾಸ್ತ ಮತ್ತು ಟೆಕ್ನಿಷಿಯನ್ ಗೇಡ್ 3 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳು ದೇಶದ ರೈಲ್ವೆ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಅವಶ್ಯಕವಾಗಿವೆ.

ಒಟ್ಟು ಹುದ್ದೆಗಳ ಸಂಖ್ಯೆ:

ಪ್ರಸ್ತುತ ಅಧಿಸೂಚನೆಯ ಅಡಿಯಲ್ಲಿ ಒಟ್ಟು 15 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತವೆ.

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ITI (ಕೈಗಾರಿಕಾ ತರಬೇತಿ ಸಂಸ್ಥೆ) ಅಥವಾ 2nd PUC (ದ್ವಿತೀಯ ಪದವಿ ಪೂರ್ವ ಕಾಲೇಜು) ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು. ಇಲಾಖೆಯ ನಿಯಮಗಳ ಅನುಸಾರ, ನಿಗದಿತ ಮಾನದಂಡಗಳನ್ನು ಪೂರೈಸುವ ಮೂಲಕ ಅರ್ಜಿದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಅವಶ್ಯಕ.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 25 ವರ್ಷಗಳಾಗಿ ನಿಗದಿಪಡಿಸಲಾಗಿದೆ. ರೈಲ್ವೆ ವೀಲ್ ಫ್ಯಾಕ್ಟರಿ ಇಲಾಖೆಯ ನಿಯಮಗಳ ಪ್ರಕಾರ, ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ಆಕರ್ಷಕ ವೇತನ ಶ್ರೇಣಿ ಇರುತ್ತದೆ. ವೇತನದ ಕುರಿತು ನಿಖರ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಕ್ರೀಡಾ ಸಾಧನೆ, ದಾಖಲಾತಿ ಪರಿಶೀಲನೆ, ಕ್ರೀಡಾ ಪ್ರಯೋಗ (Sports Trial) ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕ್ರೀಡಾ ಕೋಟಾ ಅಡಿಯಲ್ಲಿ ಈ ನೇಮಕಾತಿ ನಡೆಯುವುದರಿಂದ ಕ್ರೀಡಾ ಸಾಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಉದ್ಯೋಗ ಸ್ಥಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಸ್ಥಳವನ್ನು ನೀಡಲಾಗುತ್ತದೆ. ಇದು ಸ್ಥಳೀಯರಿಗೆ ತಮ್ಮದೇ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಜುಲೈ​​ 25 ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 24 ಆಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸುವ ಮೂಲಕ ಈ ಸರ್ಕಾರಿ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ, ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಕಡ್ಡಾಯ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ತಂಜಾವೂರಿನಲ್ಲಿ ಸಿಲಿಂಡರ್ ಸ್ಫೋಟ: ಬೆಂಕಿ ನಂದಿಸಲು ಹೋದ 10 ಜನರಿಗೆ ಸುಟ್ಟ ಗಾಯ, 7 ಮಂದಿ ಸ್ಥಿತಿ ಗಂಭೀರ – Kannada News | Thanjavur Cylinder Blast: 10 Injured, 7 Critical in House Fire Tragedy

ತಂಜಾವೂರು, ಜುಲೈ 30: ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಓಣಂ ಬಳಿಯ ಲಕ್ಷ್ಮಿಪುರಂ ಗ್ರಾಮದಲ್ಲಿ ಭೀಕರ ಅಗ್ನಿ ಅನಾಹುತ(Fire Accident) ಸಂಭವಿಸಿದೆ. ಹುಲ್ಲಿನ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾಗ ಎಲ್‌ಪಿಜಿ (LPG) ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು, 15 ವರ್ಷದ ಬಾಲಕಿ ಸೇರಿದಂತೆ ಕನಿಷ್ಠ 10 ಜನರಿಗೆ ಸುಟ್ಟ ಗಾಯಗಳಾಗಿವೆ.

ದುರಂತ ಸಂಭವಿಸಿದ್ದು ಹೇಗೆ?
ರೈತ ಮುರುಗಯನ್ ಎಂಬುವವರ ಕುಟುಂಬವು ತಮ್ಮ ಹುಲ್ಲಿನ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ನೆರೆಹೊರೆಯವರು ತಕ್ಷಣವೇ ಕುಟುಂಬಸ್ಥರನ್ನು ಮನೆಯಿಂದ ಸುರಕ್ಷಿತವಾಗಿ ಹೊರತರಲು ಸಹಾಯ ಮಾಡಿದ್ದಾರೆ. ಅಗ್ನಿಶಾಮಕ ವಾಹನ ಬರುವುದು ತಡವಾಗುತ್ತದೆ ಎಂದು ಸ್ಥಳೀಯರು ಬಕೆಟ್‌ಗಳಲ್ಲಿ ನೀರು ತಂದು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಅಡುಗೆಮನೆಯೊಳಗೆ ಸಿಲಿಂಡರ್ ಇರುವುದು ಯಾರಿಗೂ ತಿಳಿದಿರಲಿಲ್ಲ. ಜನರು ಜಮಾಯಿಸಿದ ಬೆನ್ನಲ್ಲೇ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ರೈತ ಮುರುಗಯನ್ ಹಾಗೂ ಅವರ 15 ವರ್ಷದ ಮಗಳು ಅಭಿನಯ ಸೇರಿದಂತೆ ಕಾಸಿನಾಥನ್, ರಾಜಶೇಖರ್, ಪಳನಿವೇಲ್, ವೆಂಬಯ್ಯನ್, ಕಲೈಯರಸಿ, ಭುವನೇಶ್ವರನ್, ಸೆಲ್ವರಾಜ್ ಮತ್ತು ಕಲಿಯಮ್ಮಾಳ್ ಸುಟ್ಟ ಗಾಯಗಳಿಂದ ನರಳಿದ್ದಾರೆ. ಪ್ರತ್ಯಕ್ಷದರ್ಶಿ ದುರ್ಗಾದೇವಿ ಎಂಬುವವರು ಮಾತನಾಡಿ, “ಗಂಡಸರು ನೀರು ತಂದು ಬೆಂಕಿ ಆರಿಸಲು ಹೋದಾಗ ಸಿಲಿಂಡರ್ ಇರುವುದು ಗೊತ್ತಿರಲಿಲ್ಲ. ಕೆಲವರ ದೇಹ ಶೇಕಡಾ 80 ಕ್ಕಿಂತ ಹೆಚ್ಚು ಸುಟ್ಟುಹೋಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಆಕ್ಸಿಜನ್ ಸಿಲಿಂಡರ್ ಸ್ಫೋಟ: ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ಅವಘಡ

ಆಸ್ಪತ್ರೆಗೆ ದಾಖಲು ಹಾಗೂ ಪೊಲೀಸ್ ತನಿಖೆ
ಗಾಯಾಳುಗಳನ್ನು ತಕ್ಷಣವೇ ರಕ್ಷಿಸಿ ಮೂವರನ್ನು ಪಟ್ಟುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ಹಾಗೂ ತೀವ್ರ ಸುಟ್ಟ ಗಾಯಗಳಾಗಿರುವ 7 ಜನರನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಆಸ್ಪತ್ರೆಯ ಬಳಿ ಗಾಯಾಳುಗಳ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ತಿರುಓಣಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ – Kannada News | Spider Man Brand New Day movie twitter review in Kannada

ಹಾಲಿವುಡ್​ನ (Hollywood) ಬಹು ನಿರೀಕ್ಷಿತ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಇಂದು (ಜುಲೈ 30) ಭಾರತದಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಸಿನಿಮಾದ ಟ್ರೈಲರ್ ಸಹ ಸಖತ್ ಸದ್ದು ಮಾಡಿತ್ತು. ಭಾರತದಲ್ಲಿ ಭಾರಿ ಮುಂಗಡ ಬುಕಿಂಗ್ ಅನ್ನು ಈ ಸಿನಿಮಾ ಬಾಚಿಕೊಂಡಿತ್ತು. ಮೊದಲ ದಿನ ದಾಖಲೆಯ ಕಲೆಕ್ಷನ್ ಅನ್ನು ಈ ಸಿನಿಮಾ ಭಾರತದಲ್ಲಿ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಹಲವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ನೀವು ನೋಡಲು ಬಯಸುವ ಎಲ್ಲವೂ ‘ಸ್ಪೈಡರ್ ಮ್ಯಾನ್’ ಸಿನಿಮಾನಲ್ಲಿದೆ. ಈ ಚಿತ್ರದ ಭಾವನಾತ್ಮಕ ಅಂಶವು ಅದ್ಭುತವಾಗಿದೆ, ಸಿನಿಮಾನಲ್ಲಿ ಒಂಟಿತನವನ್ನು ತೋರಿಸಿರುವ ರೀತಿ, ಒಂಟಿತನದ ಬಗ್ಗೆ ಹೇಳಿರುವ ಅಂಶಗಳು ನೆನಪುಳಿಯುತ್ತವೆ. ಕೊನೆಯಲ್ಲಿ, ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದನ್ನು ಈ ಸಿನಿಮಾ ಕೊಡುತ್ತದೆ. ಇದು ಅತ್ಯಂತ ಶಕ್ತಿಶಾಲಿ ಮತ್ತು ಚೆನ್ನಾಗಿ ಸಂಯೋಜಿಸಲ್ಪಟ್ಟಿರುವ ‘ಸ್ಪೈಡರ್ ಮ್ಯಾನ್’ ಸಿನಿಮಾ. ಈ ಚಿತ್ರವು ಮಾರ್ವೆಲ್ ನ ಈ ವರೆಗಿನ ಕೆಲ ಅತ್ಯುತ್ತಮ ಆಕ್ಷನ್‌ ದೃಶ್ಯಗಳನ್ನು ಹೊಂದಿದೆ. ಸಿನಿಮಾ ನಿಧಾನವಾಗಿ ಪ್ರಾರಂಭವಾಗುತ್ತದೆ, ಆದರೆ ನಂತರ ಮುಂದಿನ ಅರ್ಧವು ಅದನ್ನು ಸರಿದೂಗಿಸುತ್ತದೆ’ ಎಂದಿದ್ದಾರೆ ಕಾರ್ಲ್. ಸಿನಿಮಾಕ್ಕೆ 8.50 ಅಂಕಗಳನ್ನು ನೀಡಿದ್ದಾರೆ.

ಶ್ರೀಧರ್ ಪಿಳ್ಳೈ ಎಂಬುವರು ಟ್ವೀಟ್ ಮಾಡಿ, ‘ಹಿಂದಿನ ಸ್ಪೈಡರ್ ಮ್ಯಾನ್ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಅನುಭವವನ್ನು ಈ ಸಿನಿಮಾ ನೀಡುತ್ತದೆ. ಇದು ಪೀಟರ್‌ನ ಒಂಟಿತನ ಮತ್ತು ಮಾನವ ದುರ್ಬಲತೆಯ ಬಗ್ಗೆ ಆಳವಾಗಿ ಮಾತನಾಡುತ್ತದೆ. ರೋಮಾಂಚಕಾರಿ ಆಕ್ಷನ್ ಮತ್ತು ಅದ್ಭುತವಾದ ವಿಎಫ್​​ಎಕ್ಸ್ ಅನ್ನು ಒಳಗೊಂಡಿದೆ. ಟಾಮ್ ಹಾಲೆಂಡ್ ಗಾಢವಾದ, ಹೆಚ್ಚು ಪ್ರಬುದ್ಧ ನೆಟನೆ ಮಾಡಿದ್ದಾರೆ. ಸ್ಯಾಡಿ ಸಿಂಕ್ ಅದ್ಭುತವಾಗಿದೆ, ಹಲ್ಕ್ ಸೀಕ್ವೆನ್ಸ್‌ಗಳು ಸಖತ್ ಆಗಿವೆ, ಆಕ್ಷನ್ ಅಂತೂ ಅದ್ಭುತವಾಗಿವೆ’ ಎಂದಿದ್ದಾರೆ.

ರಮೇಶ್ ಬಾಲಾ ಟ್ವೀಟ್ ಮಾಡಿದ್ದು, ‘ಇದೊಂದು ಫನ್ ಆಕ್ಷನ್ ಡ್ರಾಮಾ, ಸ್ಪೈಡರ್ ಮ್ಯಾನ್ ಅಭಿಮಾನಿಗಳು ಸಿನಿಮಾದಿಂದ ಏನೇನು ಬಯಸಿದ್ದರೊ ಅದೆಲ್ಲವೂ ಇದರಲ್ಲಿ ಸಿಗುತ್ತದೆ. ಹಲ್ಕ್ ಅದ್ಭುತ, ಆಕ್ಷನ್ ದೃಶ್ಯಗಳಂತೂ ಸೂಪರ್, ಟಾಮ್ ಹಾಲೆಂಡ್ ಮತ್ತು ಜೆಂಡೆಯಾ ನಡುವಿನ ದೃಶ್ಯಗಳು ಭಾವನಾತ್ಮಕವಾಗಿವೆ. ವಿಲನ್ ಮತ್ತು ಸಪೋರ್ಟಿಂಗ್ ಪಾತ್ರಗಳು ಸಹ ನೆನಪುಳಿಯುತ್ತವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಅಮೆರಿಕದಿಂದ ಮನೆಗೆ ಮರಳಿದ ಮಗಳು, ಯುವತಿಯ ಸರ್ಪ್ರೈಸ್ ವಿಸಿಟ್‌ಗೆ ಮನೆ ಮಂದಿ ಭಾವುಕ – Kannada News | Parents shed tears upon seeing their daughter return home from America without giving any clues

ಹೆತ್ತವರು ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಓದಿಗಾಗಿ, ಉದ್ಯೋಗಕ್ಕಾಗಿ ದೂರದ ಊರಿಗೆ ಕಳುಹಿಸಿಕೊಡುತ್ತಾರೆ. ಮಕ್ಕಳು ಮನೆಗೆ ಬರುತ್ತಾರೆ ಎಂದು ತಿಳಿದರೆ ಅವರ ಖುಷಿಗೆ ಪಾರಾವೇ ಇರಲ್ಲ. ಆದರೆ ಯುವತಿಯೊಬ್ಬಳು ಮನೆ ಮಂದಿಗೆ ಯಾವುದೇ ರೀತಿ ಸುಳಿವು ನೀಡದೇನೇ ಮೂರು ವರ್ಷಗಳ ಬಳಿಕ ಅಮೆರಿಕದಿಂದ (America) ಮನೆಗೆ ಮರಳಿದ್ದಾಳೆ. ಆಕೆಯನ್ನು ಕಂಡ ಮನೆ ಮಂದಿಯೆಲ್ಲರೂ ಖುಷಿಯಿಂದ ಕುಣಿದಾಡಿರುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರ ಕಣ್ಣು ತುಂಬಿ ಬಂದಿದೆ.

ಮೈತ್ರಿ ಪಟೇಲ್ (Maitri Patel) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತಕ್ಕೆ ಮರಳುವ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ಅದ್ಭುತ ಕ್ಷಣಗಳು. ಈ ಪ್ರತಿಕ್ರಿಯೆಗಳು ತುಂಬಾ ಅಮೂಲ್ಯ! ಈ ಕ್ಷಣಕ್ಕೆ ಸಾಕ್ಷಿಯಾಗಲು ತುಂಬಾ ಸಮಯ ಕಾಯುತ್ತಿದ್ದೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಈ ಯುವತಿಯೂ ಅಮೆರಿಕದಿಂದ ಭಾರತಕ್ಕೆ ಮರಳುವುದನ್ನು ಕಾಣಬಹುದು. ಮೂರು ವರ್ಷಗಳ ಬಳಿಕ ಮನೆಗೆ ಮರಳಿದ್ದು ಸರ್ಪ್ರೈಸ್ ವಿಸಿಟ್ ನೀಡಿದ್ದಾಳೆ. ಸುಳಿವು ನೀಡದೇ ಮನೆಗೆ ಬಂದ ಮಗಳನ್ನು ಕಂಡು ಹೆತ್ತವರು ಹಾಗೂ ಮನೆ ಮಂದಿಯೆಲ್ಲಾ ಖುಷಿಯಿಂದಲೇ ಅಪ್ಪಿ ಮುದ್ದಾಡಿದ್ದಾರೆ. ಯುವತಿಯ ಭಾವನಾತ್ಮಕ ಪುನರ್ಮಿಲನದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಭಾರತಕ್ಕೆ ಹೋಲಿಸಿದ್ರೆ ಸ್ವಿಟ್ಜರ್‌ಲ್ಯಾಂಡ್‌ ಬಲು ದುಬಾರಿ; ಕಾಸ್ಟ್ಲಿ ಜೀವನಶೈಲಿ ಬಗ್ಗೆ ವಿವರಿಸಿದ ದಂಪತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮನೆ ಮಂದಿಯ ಖುಷಿಗೆ ಪಾರಾವೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮನೆಗೆ ಮರಳುವಾಗ ಆಗುವ ಖುಷಿಯೇ ಬೇರೆ, ವಿವರಿಸಲು ಪದಗಳು ಸಾಲಲ್ಲ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡುವಾಗ ಕಣ್ಣೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KPSC ಅಕ್ರಮದ ವಿರುದ್ಧ ಸಿಡಿದೆದ್ದ ಎಬಿವಿಪಿ: ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ – Kannada News | KPSC Scam: ABVP Protest KPSC Recruitment Scam Bengaluru Veterinary Officer PDO Irregularities

ಬೆಂಗಳೂರಿನಲ್ಲಿ ಎಬಿವಿಪಿ ಭಾರೀ ಪ್ರತಿಭಟನೆImage Credit source: tv9

ಬೆಂಗಳೂರು, ಜುಲೈ 30: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿಗಳಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಬೆಂಗಳೂರಿನಲ್ಲಿ ಗುರುವಾರ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಎಸ್ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಶು ವೈದ್ಯಾಧಿಕಾರಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು.

ಬೆಂಗಳೂರಿನ ಕೆಪಿಎಸ್ಸಿ ಕಚೇರಿಯ ಮುಂದೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪರಿಸ್ಥಿತಿಯನ್ನು ನಿಯಂತ್ರಿಸಲು 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಪ್ರತಿಭಟನಾಕಾರರು ಕಚೇರಿ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ತಳ್ಳಾಟ ಹಾಗೂ ನೂಕಾಟ ಸಂಭವಿಸಿದೆ. ಮುತ್ತಿಗೆ ಯತ್ನದ ನಂತರ, ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಎಬಿವಿಪಿ ಪ್ರತಿಭಟನೆಯ ವಿಡಿಯೋ


ಈ ನೇಮಕಾತಿ ಹಗರಣಗಳು ರಾಜ್ಯಮಟ್ಟದಲ್ಲಿ ದೊಡ್ಡ ಚರ್ಚೆಗೆ ಒಳಗಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಪ್ರಸ್ತುತ ಈ ಕುರಿತು ತನಿಖೆ ನಡೆಯುತ್ತಿದೆ. ಇದೇ ಸಂದರ್ಭಲ್ಲಿ, ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕೆಪಿಎಸ್ಸಿ ನೇಮಕಾತಿಗಳಲ್ಲಿ ಪದೇ ಪದೇ ಅಕ್ರಮಗಳು ನಡೆಯುತ್ತಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಕೆಪಿಎಸ್ಸಿ ಕಚೇರಿಯ ಸುತ್ತ ಬಿಗಿ ಭದ್ರತೆ

ಮತ್ತೊಮ್ಮೆ ಮುತ್ತಿಗೆ ಹಾಕುವ ಸಾಧ್ಯತೆಗಳನ್ನು ಮನಗಂಡ ಪೊಲೀಸರು ಕೆಪಿಎಸ್ಸಿ ಕಚೇರಿಯ ಮುಂಭಾಗದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ವಿಧಾನಸೌಧದ ಸಮೀಪವಿರುವ ಕೆಪಿಎಸ್ಸಿ ಕಚೇರಿಯಿಂದ ಸಿಐಡಿ ಕಚೇರಿಗೆ ಹೋಗುವ ದ್ವಾರದವರೆಗೂ ಸಂಪೂರ್ಣವಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಚೇರಿಯ ಸಿಬ್ಬಂದಿಗಳಿಗೆ ಹಾಗೂ ಅನಿವಾರ್ಯ ಕೆಲಸದ ನಿಮಿತ್ತ ಬಂದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಕೆಪಿಎಸ್​ಸಿ ಅಕ್ರಮ: ರಾಜ್ಯಾದ್ಯಂತ ವ್ಯಾಪಕ ಆಕ್ರೋಶ

ರಾಜ್ಯಾದ್ಯಂತ ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ವಿಚಾರವಾಗಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿವೆ. ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸುತ್ತಿವೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಕೆಪಿಎಸ್ಸಿ ಕಚೇರಿ ಮತ್ತು ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vande Bharat Loco Pilot: ವಂದೇ ಭಾರತ್ ರೈಲಿನ ಲೋಕೋ ಪೈಲಟ್ ಆಗುವುದೇಗೆ? ಅರ್ಹತೆ, ಸಂಬಳ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ – Kannada News | How to Become a Vande Bharat Loco Pilot? Direct Recruitment, Eligibility, and Salary Details

ಲೋಕೋ ಪೈಲಟ್ ಆಗಲು ಬೇಕಾದ ವಿದ್ಯಾರ್ಹತೆ

ಭಾರತೀಯ ರೈಲ್ವೆಯ ಅತ್ಯಂತ ಪ್ರತಿಷ್ಠಿತ ಸೆಮಿ-ಹೈಸ್ಪೀಡ್ ರೈಲುಗಳಲ್ಲಿ ಒಂದಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ದೆಹಲಿ–ಹಿಮಾಚಲ ಪ್ರದೇಶ ಮಾರ್ಗದ ನಂಗಲ್ ಅಣೆಕಟ್ಟು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ನಿಲುಗಡೆ ಹಾಗೂ ಮುಂಬೈ–ನಾಂದೇಡ್ ಮಾರ್ಗದಲ್ಲಿ ಓವರ್‌ಹೆಡ್ ಉಪಕರಣಗಳ (OHE) ದೋಷದಿಂದ ರೈಲು ವಿಳಂಬವಾದ ಘಟನೆಗಳು ಸುದ್ದಿಯಲ್ಲಿದ್ದವು. ಇದರ ನಡುವೆ, ಯುವಜನತೆಯಲ್ಲಿ ಒಂದು ಕುತೂಹಲಕಾರಿ ಪ್ರಶ್ನೆ ಮನೆಮಾಡಿದೆ. ವಂದೇ ಭಾರತ್ ರೈಲನ್ನು ಓಡಿಸುವ ಲೋಕೋ ಪೈಲಟ್ (Loco Pilot) ಆಗುವುದು ಹೇಗೆ? ಅದಕ್ಕೆ ನೇರ ನೇಮಕಾತಿ ಇದೆಯೇ ಮತ್ತು ಅವರಿಗೆ ಸಿಗುವ ಸಂಬಳವೆಷ್ಟು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಕ್ರಿಯೆ:

ಅನೇಕರು ವಂದೇ ಭಾರತ್ ಲೋಕೋ ಪೈಲಟ್ ಹುದ್ದೆಗೆ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದು ಭಾವಿಸುತ್ತಾರೆ. ಆದರೆ, ಭಾರತೀಯ ರೈಲ್ವೆ ಈ ಹುದ್ದೆಗೆ ಯಾವುದೇ ನೇರ ನೇಮಕಾತಿ ನಡೆಸುವುದಿಲ್ಲ. ಮೊದಲು ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿ (RRB) ನಡೆಸುವ ಪರೀಕ್ಷೆಯ ಮೂಲಕ ಸಹಾಯಕ ಲೋಕೋ ಪೈಲಟ್ (Assistant Loco Pilot – ALP) ಹುದ್ದೆಗೆ ಆಯ್ಕೆಯಾಗಬೇಕು. ನಂತರ ಹಲವು ವರ್ಷಗಳ ಸೇವಾ ಅನುಭವ, ಉತ್ತಮ ಕಾರ್ಯಕ್ಷಮತೆ ಮತ್ತು ಸುರಕ್ಷತಾ ದಾಖಲೆ ಆಧರಿಸಿ ಹಿರಿಯ ಲೋಕೋ ಪೈಲಟ್ ಆಗುವ ಅವಕಾಶ ಸಿಗುತ್ತದೆ. ಬಳಿಕ ವಿಶೇಷ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರನ್ನು ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳ ಚಾಲನೆಗೆ ನಿಯೋಜಿಸಲಾಗುತ್ತದೆ.

ಲೋಕೋ ಪೈಲಟ್ ಆಗಲು ಬೇಕಾದ ವಿದ್ಯಾರ್ಹತೆ:

ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  • 10ನೇ ತರಗತಿ ಉತ್ತೀರ್ಣರಾಗಿರಬೇಕು.
  • ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಪ್ರಮಾಣಪತ್ರ ಹೊಂದಿರಬೇಕು.
  • ಅಥವಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಮುಂತಾದ ವಿಭಾಗಗಳಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು.
  • ಸಾಮಾನ್ಯವಾಗಿ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು.
  • ರೈಲ್ವೆ ನಿಗದಿಪಡಿಸಿರುವ ವೈದ್ಯಕೀಯ ಪರೀಕ್ಷೆ ಹಾಗೂ ದೃಷ್ಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕು.

ವಂದೇ ಭಾರತ್ ಲೋಕೋ ಪೈಲಟ್ ಆಗುವ ಪ್ರಕ್ರಿಯೆ:

ವಂದೇ ಭಾರತ್ ರೈಲಿನ ಲೋಕೋ ಪೈಲಟ್ ಆಗುವುದು ಒಂದು ಹಂತ ಹಂತದ ಪ್ರಕ್ರಿಯೆಯಾಗಿದೆ. ಮೊದಲು ALP ಆಗಿ ನೇಮಕಗೊಂಡು ಸಾಮಾನ್ಯ ರೈಲುಗಳನ್ನು ಚಾಲನೆ ಮಾಡುವ ಅನುಭವ ಪಡೆಯಬೇಕು. ಬಳಿಕ ಉತ್ತಮ ಸೇವಾ ದಾಖಲೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಬಡ್ತಿ ಸಿಗುತ್ತದೆ. ವಿಶೇಷ ತಾಂತ್ರಿಕ ತರಬೇತಿ ಪೂರ್ಣಗೊಳಿಸಿದ ನಂತರವೇ ವಂದೇ ಭಾರತ್ ಸೇರಿದಂತೆ ಪ್ರೀಮಿಯಂ ರೈಲುಗಳನ್ನು ಓಡಿಸುವ ಜವಾಬ್ದಾರಿ ನೀಡಲಾಗುತ್ತದೆ.

ಲೋಕೋ ಪೈಲಟ್‌ಗೆ ಎಷ್ಟು ಸಂಬಳ ಸಿಗುತ್ತದೆ?

ಸಹಾಯಕ ಲೋಕೋ ಪೈಲಟ್‌ನ ಆರಂಭಿಕ ಮೂಲ ವೇತನ 19,900 ರೂ. ಆಗಿರುತ್ತದೆ. ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ ಸೇರಿದಂತೆ ಇತರ ಸೌಲಭ್ಯಗಳನ್ನು ಸೇರಿಸಿದರೆ ಮಾಸಿಕ ಆದಾಯ ಸುಮಾರು ₹35,000 ರಿಂದ ₹40,000 ವರೆಗೆ ಇರಬಹುದು. ಅನುಭವ ಹೆಚ್ಚಿದಂತೆ ಮತ್ತು ಹಿರಿಯ ಹುದ್ದೆಗೆ ಬಡ್ತಿ ಪಡೆದ ನಂತರ ಸಂಬಳವೂ ಹೆಚ್ಚುತ್ತದೆ. ವಿಶೇಷವಾಗಿ ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳನ್ನು ಚಾಲನೆ ಮಾಡುವ ಅನುಭವಿ ಲೋಕೋ ಪೈಲಟ್‌ಗಳು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವ ಸಾಧ್ಯತೆ ಇದೆ.

ಲೋಕೋ ಪೈಲಟ್‌ಗಳಿಗೆ ಸಿಗುವ ಇತರ ಸೌಲಭ್ಯಗಳು:

ಸಂಬಳದ ಜೊತೆಗೆ ಭಾರತೀಯ ರೈಲ್ವೆ ತನ್ನ ನೌಕರರಿಗೆ ಹಲವು ಆಕರ್ಷಕ ಸೌಲಭ್ಯಗಳನ್ನು ಒದಗಿಸುತ್ತದೆ.

  • ತುಟ್ಟಿ ಭತ್ಯೆ (DA)
  • ಮನೆ ಬಾಡಿಗೆ ಭತ್ಯೆ (HRA)
  • ಸಾರಿಗೆ ಭತ್ಯೆ
  • ರಾತ್ರಿ ಕರ್ತವ್ಯ ಭತ್ಯೆ
  • ವೈದ್ಯಕೀಯ ಸೌಲಭ್ಯಗಳು
  • ಪಿಂಚಣಿ ಸೌಲಭ್ಯ
  • ರೈಲ್ವೆ ಪ್ರಯಾಣ ರಿಯಾಯಿತಿ
  • ಸಂಬಳ ಸಹಿತ ರಜೆ
  • ಉದ್ಯೋಗ ಭದ್ರತೆ
  • ಬಡ್ತಿ ಮತ್ತು ವೃತ್ತಿ ಬೆಳವಣಿಗೆಗೆ ಉತ್ತಮ ಅವಕಾಶ

ಯುವಕರಲ್ಲಿ ಹೆಚ್ಚುತ್ತಿರುವ ಆಸಕ್ತಿ:

ದೇಶಾದ್ಯಂತ ವಂದೇ ಭಾರತ್ ರೈಲುಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ರೈಲುಗಳನ್ನು ಚಾಲನೆ ಮಾಡುವ ಲೋಕೋ ಪೈಲಟ್ ಹುದ್ದೆಯ ಮೇಲೂ ಯುವಕರ ಆಸಕ್ತಿ ಹೆಚ್ಚುತ್ತಿದೆ. ನೇರ ನೇಮಕಾತಿ ಇಲ್ಲದಿದ್ದರೂ, ಸಹಾಯಕ ಲೋಕೋ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿ ಅನುಭವ ಮತ್ತು ತರಬೇತಿಯ ಮೂಲಕ ವಂದೇ ಭಾರತ್ ಲೋಕೋ ಪೈಲಟ್ ಆಗುವ ಅವಕಾಶವನ್ನು ಭಾರತೀಯ ರೈಲ್ವೆ ಒದಗಿಸುತ್ತಿದೆ. ಇದರಿಂದ ಈ ಕ್ಷೇತ್ರವು ಸರ್ಕಾರಿ ಉದ್ಯೋಗ ಬಯಸುವ ಯುವಕರಿಗೆ ಉತ್ತಮ ವೃತ್ತಿ ಆಯ್ಕೆಯಾಗಿ ಪರಿಣಮಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 1:17 pm, Thu, 30 July 26

Source link

‘ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ; ಯಶ್ ರೌದ್ರಾವತಾರ ನೋಡಿ ನೆಟ್ಟಿಗರು ಹೇಳಿದ್ದಿಷ್ಟು – Kannada News | Ramayana Trailer Response: Fans Hail Rocking Star Yash’s Dominance As Ravana In Theatres

‘ರಾಕಿಂಗ್ ಸ್ಟಾರ್ ಯಶ್​..’2 ಈ ಹೆಸರು ಈಗ ವಿಶ್ವಮಟ್ಟದಲ್ಲಿ ತಿಳಿದಿದೆ. ಕಿರುತೆರೆ ಮೂಲಕ ಜರ್ನಿ ಆರಂಭಿಸಿ, ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಏನಾದರೂ ಮಾಡಿಯೇ ಮಾಡುತ್ತೇನೆ ಎಂದು ಅವರು ಬಲವಾಗಿ ಅಂದುಕೊಂಡಿದ್ದರು. ‘ಕೆಜಿಎಫ್’ ಚಿತ್ರದ ಮೂಲ ಅದನ್ನು ಸಾಧಿಸಿದರು. ಅಲ್ಲಿಗೆ ಅವರು ನಿಲ್ಲಿಸಲಿಲ್ಲ. ‘ಕೆಜಿಎಫ್ 2’ ಮಾಡಿದರು. ಈಗ ‘ಟಾಕ್ಸಿಕ್’ ರಿಲೀಸ್​​ಗೆ ರೆಡಿ ಆಗುತ್ತಿದ್ದಾರೆ. ಇದರ ಜೊತೆಗೆ ‘ರಾಮಾಯಣ’ ಟ್ರೇಲರ್ ಮೂಲಕ ಧೂಳೆಬ್ಬಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಈ ಟ್ರೇಲರ್ ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭರ್ಜರಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಡೀ ಟ್ರೇಲರ್‌ನಲ್ಲಿ ಲಂಕೇಶ್ವರ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಸಂಪೂರ್ಣ ಅಧಿಪತ್ಯ ಎದ್ದು ಕಾಣುತ್ತಿದೆ ಎಂದು ಅನೇಕರು ಬಣ್ಣಿಸುತ್ತಿದ್ದಾರೆ.

ರೋಮಾಂಚನ ಮೂಡಿಸಿದ ಯಶ್ ಕಣ್ಣುಗಳು

ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರು ಯಶ್ ಅವರ ನಟನೆಗೆ ಫುಲ್ ಫಿದಾ ಆಗಿದ್ದಾರೆ. ‘ಇಡೀ ರಾಮಾಯಣ ಟ್ರೇಲರ್‌ನಲ್ಲಿ ಅತ್ಯಂತ ರೋಮಾಂಚನ ನೀಡಿದ ಕ್ಷಣ ಎಂದರೆ ಅದು ಯಶ್ ಅವರ ರಾವಣನ ಅವತಾರ. ಅವರ ಕಣ್ಣುಗಳಲ್ಲಿನ ತೀವ್ರತೆ, ಗಾಂಭೀರ್ಯದ ವ್ಯಕ್ತಿತ್ವ ಮತ್ತು ಪರದೆಯ ಮೇಲಿನ ಅವರ ಅಪ್ರತಿಮ ಕ್ರೌರ್ಯದ ನಟನೆ ಎಂದಿಗೂ ಮರೆಯಲಾಗದ ಮೊದಲ ಆಕರ್ಷಣೆ’ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್​​ನಲ್ಲಿ ಪ್ರಮುಖ ಪಾತ್ರವೇ ಮಿಸ್; ಅಭಿಮಾನಿಗಳ ಬೇಸರ

ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಗ್ಯಾರಂಟಿ

ಚಿತ್ರಮಂದಿರಗಳಲ್ಲಿ ಟ್ರೇಲರ್ ಪ್ರದರ್ಶನವಾಗುವಾಗ ರಾವಣನ ಎಂಟ್ರಿ ದೃಶ್ಯಕ್ಕೆ ಪ್ರೇಕ್ಷಕರಿಂದ ಹುಚ್ಚೆದ್ದು ಕೂಗಿದ್ದಾರೆ. ‘ಯಶ್ ಅವರು ಇಡೀ ಟ್ರೇಲರ್ ಅನ್ನು ಅತ್ಯಂತ ಸುಲಭವಾಗಿ ಡಾಮಿನೇಟ್ ಮಾಡಿದ್ದಾರೆ’ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ಭವ್ಯ ವಿಶ್ಯುಯಲ್ ವೈಭವ ಹಾಗೂ ಯಶ್ ಅವರ ರೌದ್ರಾವತಾರವನ್ನು ನೋಡುತ್ತಿದ್ದರೆ, ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ, ಸುನಾಮಿ ಎಬ್ಬಿಸುವುದು ಖಚಿತ ಎಂದು ಸಿನಿವಿಶ್ಲೇಷಕರು ಹಾಗೂ ಪ್ರೇಕ್ಷಕರು ಜಂಟಿಯಾಗಿ ಭವಿಷ್ಯ ನುಡಿಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ಮಾಡಿ

Source link

ಸಾರಿಗೆ ಸಚಿವರನ್ನೇ ಬಸ್​​ನಿಂದ ಕೆಳಗಿಳಿಸಿದ್ದ ಪ್ರಕರಣ: ಬಿಎಂಟಿಸಿ ನಿರ್ವಾಹಕನ ಅಮಾನತು ಆದೇಶ ಹಿಂಪಡೆಯುವಂತೆ ಸೂಚನೆ – Kannada News | Transport Minister Byrathi Suresh Directs Revocation of BMTC Conductor’s Suspension After Apology

ಬಿಎಂಟಿಸಿ ನಿರ್ವಾಹಕನ ಆದೇಶ ಹಿಂಪಡೆಯುವಂತೆ ಸೂಚನೆ

ಬೆಂಗಳೂರು, ಜುಲೈ 30: ರಿಯಾಲಿಟಿ ಚೆಕ್​​ ನಡೆಸಲೆಂದು ಬಿಎಂಟಿಸಿ ಬಸ್​​ ಏರಿದ್ದ ವೇಳೆ ಚಿಲ್ಲರೆ ನೀಡದ ಕಾರಣ ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನೇ ಬಸ್‌ನಿಂದ ಇಳಿಯುವಂತೆ ಹೇಳಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಬಿಎಂಟಿಸಿ ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಸೂಚಿಸಲಾಗಿದೆ. ಬುಧವಾರ ನಿರ್ವಾಹಕ ರಾಮಕೃಷ್ಣ ಅವರು ಸಚಿವರನ್ನು ಭೇಟಿ ಮಾಡಿ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ ಹಿನ್ನೆಲೆ ಅವರ ಅಮಾನತನ್ನು ರದ್ದುಗೊಳಿಸಲು ಅಧಿಕಾರಿಗಳಿಗೆ ಬೈರತಿ ಸುರೇಶ್ ನಿರ್ದೇಶನ ನೀಡಿದ್ದಾರೆ.

ಚಾಲಕರು, ನಿರ್ವಾಹಕರಿಗೆ ಸಚಿವರ ಖಡಕ್​​ ವಾರ್ನಿಂಗ್​​

ಇದೇ ವೇಳೆ ಬಿಎಂಟಿಸಿ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಎಲ್ಲ ಚಾಲಕರು ಮತ್ತು ನಿರ್ವಾಹಕರಿಗೆ ಸಚಿವ ಬೈರತಿ ಸುರೇಶ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ಚಿಲ್ಲರೆ ಹಣದ ಕೊರತೆಯನ್ನು ನೆಪವನ್ನಾಗಿ ಮಾಡಿಕೊಂಡು ಪ್ರಯಾಣಿಕರಿಗೆ ತೊಂದರೆ ನೀಡಬಾರದು. ಎಲ್ಲ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ದುರ್ವರ್ತನೆ ಕುರಿತ ದೂರುಗಳು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಭೈರತಿ ಸುರೇಶ್​​ ರಿಯಾಲಿಟಿ ಚೆಕ್ ವೇಳೆ ಉದ್ಧಟತನ: ಬಿಎಂಟಿಸಿ ಬಸ್ ಕಂಡಕ್ಟರ್ ಅಮಾನತು

ಜುಲೈ 11ರಂದು ಸಚಿವ ಬೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ವೇಷಧರಿಸಿ ಬಿಎಂಟಿಸಿ ಬಸ್‌ಗಳಲ್ಲಿ ಅಚ್ಚರಿಯ ಪರಿಶೀಲನೆ ನಡೆಸಿದ್ದರು. ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಯತ್ತ ತೆರಳುತ್ತಿದ್ದ ಬಸ್‌ನಲ್ಲಿ ₹6 ಟಿಕೆಟ್‌ಗಾಗಿ ₹100 ನೋಟು ನೀಡಿದಾಗ, ನಿರ್ವಾಹಕರು ಚಿಲ್ಲರೆ ಇಲ್ಲವೆಂದು ಹೇಳಿ ಬಸ್‌ನಿಂದ ಇಳಿಯುವಂತೆ ಸೂಚಿಸಿದ್ದರೆಂದು ಆರೋಪಿಸಲಾಗಿತ್ತು. ಈ ಘಟನೆಯ ಬಳಿಕ ನಿರ್ವಾಹಕರನ್ನು ಅಮಾನತು ಮಾಡಿರೋದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಹಲವರು, ಬಿಎಂಟಿಸಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿರುವ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸಚಿವರೇ ಬಳಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ಮತ್ತೊಂದೆಡೆ, ಕೇವಲ ಈ ಕಾರಣಕ್ಕೆ ನಿರ್ವಾಹಕರನ್ನು ಅಮಾನತುಗೊಳಿಸಿರುವುದು ಕಠಿಣ ಕ್ರಮ ಎಂದು ಕೆಲವರು ಟೀಕಿಸಿದರೆ, ಸಾಮಾನ್ಯ ಪ್ರಯಾಣಿಕರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಕ್ರಮ ಸಮರ್ಥನೀಯ ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version