Headlines

ಚಿನ್ನಾಭರಣ ಕದ್ದಿದ್ದ ನೇಪಾಳಿ ಜೋಡಿ ಮಹಾರಾಷ್ಟ್ರಕ್ಕೆ ಎಸ್ಕೇಪ್! – Kannada News | Bengaluru Gold Heist: Nepali Couple Escapes to Nepal After 18 Crore Robbery

ಬೆಂಗಳೂರು, ಫೆಬ್ರುವರಿ 07: ಮಾರತ್‌ಹಳ್ಳಿಯ ಯಮಲೂರಿನಲ್ಲಿರುವ ಬಿಲ್ಡರ್ ಶಿವಕುಮಾರ್ ಅವರ ನಿವಾಸದಲ್ಲಿ ಜನವರಿ 25ರಂದು ನಡೆದ 18 ಕೋಟಿ (Nepali couple robbery) ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬಹಿರಂಗವಾಗಿದೆ. ಕಳ್ಳತನ ಮಾಡಿದ ನೇಪಾಳಿ ಜೋಡಿ ಮಹಾರಾಷ್ಟ್ರದ ಮೂಲಕ ನೇಪಾಳಕ್ಕೆ ಪರಾರಿಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ದರೋಡೆಯಲ್ಲಿ ಮನೆಗೆಲಸದವಳು ಕಮಲಾ ಪ್ರಮುಖ ಪಾತ್ರ ವಹಿಸಿದ್ದಳು. ದಿನೇಶ್ ಮತ್ತು ಕಮಲಾ ಸೇರಿದಂತೆ ನಾಲ್ವರ ಗ್ಯಾಂಗ್ ಈ ಕೃತ್ಯವನ್ನು ಎಸಗಿದೆ. ಕಳ್ಳರು ಮಹಾರಾಷ್ಟ್ರ ಮತ್ತು…

Read More

ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದಕ್ಕೆ ಅಕ್ಕನ ಮಗನನ್ನೇ ಕೊಂದಿದ್ದ ಮಾವನೂ ಆತ್ಮಹತ್ಯೆಗೆ ಶರಣು! – Kannada News | Soladevanahalli Tragedy: Family’s Despair After Murder of Free Fire Addict Leads to Mass Suicide

ಫ್ರೀಫೈರ್ ಗೇಮ್​​ಗೆ ಅಡಿಕ್ಟ್ ಆಗಿದ್ದಕ್ಕೆ ಅಕ್ಕನ ಮಗನನ್ನೇ ಕೊಂದಿದ್ದ ಮಾವನೂ ಆತ್ಮಹತ್ಯೆಗೆ ಶರಣು! ಬೆಂಗಳೂರು, ಫೆಬ್ರವರಿ 07: ನಗರದ ಸೋಲದೇವನಹಳ್ಳಿ (Bengaluru rural) ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ನಡೆದಿದೆ. ಕೆಲ ತಿಂಗಳ ಹಿಂದೆ ಫ್ರೀಫೈರ್ ಗೇಮ್ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ ಸೇರಿ ನಾಲ್ವರು ಸಾವಿಗೆ ಶರಣಾಗಿದ್ದಾರೆ. ಬಾಲಕನ ಸಾವಿನ ಹಿನ್ನೆಲೆ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ…

Read More

ವರ್ಷಗಳಿಂದ ಪರಪ್ಪನ ಅಗ್ರಹಾರ​ ಜೈಲಿನಲ್ಲಿದ್ದ ಶಂಕಿತ ಉಗ್ರ ಚಿಕಿತ್ಸೆ ಫಲಿಸದೆ ಸಾವು! – Kannada News | Suspected Terrorist Sadiq Pasha Dies in Bengaluru Victoria Hospital

ವರ್ಷಗಳಿಂದ ಪರಪ್ಪನ ಅಗ್ರಹಾರ​ ಜೈಲಿನಲ್ಲಿದ್ದ ಶಂಕಿತ ಉಗ್ರ ಸಾವು! ಬೆಂಗಳೂರು, ಫೆಬ್ರವರಿ 07: ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಧಿಕ್ ಪಾಷಾ (47), ಅನಾರೋಗ್ಯದ ಕಾರಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ (ಫೆಬ್ರುವರಿ 06) ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. 6 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಷಾ ಸಾಧಿಕ್ ಪಾಷಾ ಕಳೆದ ಆರು…

Read More

Red Coral Gemstone: ಹವಳ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ; ಇಲ್ಲದಿದ್ದರೆ ಸಮಸ್ಯೆ ಖಂಡಿತಾ! – Kannada News | Wearing Havala: The Significance and Benefits of Wearing Coral

ನವರತ್ನಗಳಲ್ಲಿ ಹವಳವು ಬಹಳ ವಿಶೇಷವಾದ ಒಂದು ಅದೃಷ್ಟ, ಶಕ್ತಿ ಮತ್ತು ಶುಭಕಾರ್ಯಗಳನ್ನು ನೀಡುವ ರತ್ನವಾಗಿದೆ. ಅದರಂತೆ ಹವಳವನ್ನು ಧಾರಣೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಕನಿಷ್ಠ ಎರಡು ಕ್ಯಾರೆಟ್‌ನ ಶುದ್ಧ ಹವಳವನ್ನು ತಮ್ಮ ಜಾತಕಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು. ಇದನ್ನು ಸೂರ್ಯನ ಬೆರಳು ಅಂದರೆ ಉಂಗುರದ ಬೆರಳಿನಲ್ಲಿ ಧರಿಸಬೇಕು. ಹವಳದ ಉಂಗುರವು ಕೆಳಭಾಗದಲ್ಲಿ…

Read More

‘ಆಲ್ಫಾ’ ಟ್ರೇಲರ್​ನಲ್ಲಿ ಗಮನ ಸೆಳೆದ ಹೊಸ ಪ್ರತಿಭೆ ಹೇಮಂತ್; ಕಾರ್ತಿಕ್​ ಮಹೇಶ್​​ಗೆ ನೆಗೆಟಿವ್ ಪಾತ್ರ – Kannada News | Alpha Kannada Movie: Hemanth Kumar Karthik Mahesh Trailer and Release Date Revealed

ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳ ಎಂಟ್ರಿ ಆಗುತ್ತಲೇ ಇರುತ್ತದೆ. ಈಗ ಹೇಮಂತ್ ಕುಮಾರ್ ಹೆಸರಿನ ಹೊಸ ಪ್ರತಿಭೆ ‘ಆಲ್ಫಾ’ ಸಿನಿಮಾ ಮೂಲಕ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಫೆಬ್ರವರಿ 20ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಸಖತ್ ರಾ ಆಗಿದೆ. ಹೇಮಂತ್ ಅವರು ‘ಆಲ್ಫಾ’ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಅವರು ಫೈಟ್,…

Read More

200 ಕ್ಕಿಂತ ಕಡಿಮೆ ಮೊತ್ತಕ್ಕೆ ಮುಂಬೈ ಮತ್ತು ಕರ್ನಾಟಕ ಆಲೌಟ್ – Kannada News | Mumbai vs Karnataka, 4th Quarter Final 1st Innings Highlights

ರಣಜಿ ಟೂರ್ನಿಯ 4ನೇ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳು ಅಲ್ಪ ಮೊತ್ತಕ್ಕೆ ಕುಸಿದಿದೆ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಕೇವಲ 120 ರನ್​ಗಳಿಗೆ ಆಲೌಟ್ ಆಗಿದ್ದರು. ಕರ್ನಾಟಕ ಪರ ವಿಧ್ವತ್ ಕಾವರೇಪ್ಪ, ಪ್ರಸಿದ್ಧ್ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್…

Read More

T20 World Cup 2026: ಇಟಲಿ ಮುಂದೆ ಯುಎಇ ಪಲ್ಟಿ! – Kannada News | T20 World Cup 2026: Italy stuns UAE

ಟಿ20 ವಿಶ್ವಕಪ್​ನ 15ನೇ ಅಭ್ಯಾಸ ಪಂದ್ಯದಲ್ಲಿ ಇಟಲಿ ತಂಡವು ಭರ್ಜರಿ ಜಯ ಸಾಧಿಸಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆದಿರುವ ಇಟಲಿ ತಂಡವು ಯುಎಇ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಮಕಾಡೆ ಮಲಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಟಲಿ ತಂಡದ ಪರ ಆಂಥೊನಿ ಮೊಸ್ಕಾ 22 ಎಸೆತಗಳಲ್ಲಿ 56 ರನ್ ಸಿಡಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಇಟಲಿ ತಂಡವು 20 ಓವರ್​ಗಳಲ್ಲಿ 193…

Read More

ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ, 40-50 ಶಾಸಕರು ಡಿಕೆಶಿಗಾಗಿ ಪ್ರಾಣ ಕೊಡಲೂ ಸಿದ್ಧ: ಬಸವರಾಜ ಶಿವಗಂಗಾ ಸ್ಫೋಟಕ ಹೇಳಿಕೆ – Kannada News | Power sharing deal exists, 40 50 MLAs ready to sacrifice for DK Shivakumar: Basavaraj Shivaganga’s explosive statement

ದಾವಣಗೆರೆ, ಫೆಬ್ರವರಿ 7: ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ನಾಯಕತ್ವ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಮಧ್ಯೆ, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಅಧಿಕಾರ ಹಂಚಿಕೆ ಕುರಿತ ಒಪ್ಪಂದ ಈಗಾಗಲೇ ಆಗಿದೆ ಎಂಬ ಮಾಹಿತಿ ನನಗೆ ಇದೆ ಎಂದು ಅವರು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್‌ನ ಎಲ್ಲ 139 ಬಹುತೇಕ ಶಾಸಕರ ಬೆಂಬಲವಿದೆ. ಇದಕ್ಕೂ…

Read More

Shani Dev: ಶನಿವಾರ ತಪ್ಪಿಯೂ ಕೂಡ ಈ ವಸ್ತು ಖರೀದಿಸಬೇಡಿ; ಸಮಸ್ಯೆ ತಪ್ಪಿದಲ್ಲ! – Kannada News | Shaniwar Shopping: 6 Things You Must NOT Buy on Saturday as per Hindu Astrology for Shani Dev’s Blessings

ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಪ್ರತಿ ದಿನವೂ ಒಂದು ನಿರ್ದಿಷ್ಟ ಗ್ರಹ ಅಥವಾ ದೇವತೆಗೆ ಸಮರ್ಪಿತವಾಗಿದೆ. ಶನಿವಾರವು ಕರ್ಮಫಲದಾತನಾದ ಶನಿದೇವನಿಗೆ ಮೀಸಲಾದ ದಿನ. ಶನಿಯು ನಮ್ಮ ಕರ್ಮಗಳಿಗೆ ತಕ್ಕಂತೆ ಫಲ ನೀಡುವವನು. ಆದ್ದರಿಂದ, ಅವನ ಕೃಪೆಗೆ ಪಾತ್ರರಾಗಲು ಮತ್ತು ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ತಪ್ಪಿಸಲು ಶನಿವಾರದಂದು ಕೆಲವು ವಸ್ತುಗಳನ್ನು ಖರೀದಿಸಬಾರದು ಎಂಬ ಬಲವಾದ ನಂಬಿಕೆ ಇದೆ. ಜ್ಯೋತಿಷ್ಯದ ಪ್ರಕಾರ ಶನಿವಾರ ಯಾವ ವಸ್ತುಗಳನ್ನು ಮನೆಗೆ ತರಬಾರದು ಎಂಬುದರ ಪಟ್ಟಿ ಇಲ್ಲಿದೆ: ಉಪ್ಪನ್ನು ಶನಿವಾರ…

Read More

ಶಾಸಕರು, ರಾಜ್ಯದ ಜನರಿಗೆ ನಾನೇ ಸಿಎಂ ಆಗಬೇಕೆಂದಿದೆ, ಆದರೆ ಅದು… ಡಿಕೆ ಶಿವಕುಮಾರ್ ಹೀಗಂದಿದ್ಯಾಕೆ?

ಮಂಗಳೂರು, ಫೆಬ್ರವರಿ 7: ಸಿಎದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ಯತೀಂದ್ರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಮಂಗಳೂರಿನಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಸಿಎಂ ಆಗಬೇಕು ಎಂಬ ಶಾಸಕರಿಗೆ, ಜನರಿಗೆ ಹಾಗೂ ನಿಮಗೆ ಎಲ್ಲರಿಗೂ ಇದೆ. ಆದರೆ ಅಂತಿಮವಾಗಿ ಪಕ್ಷ ಏನು ಹೇಳುತ್ತದೋ ಅದೇ ಆಗುತ್ತದೆ ಎಂದು ಹೇಳಿದ್ದಾರೆ. ಬಜೆಟ್ ಬಳಿಕ ಸಿಎಂ ಬದಲಾವಣೆ ಬಗ್ಗೆ ಕೇಳಿದಾಗ, ಕಾಲವೇ ಉತ್ತರಿಸಲಿದೆ ಎಂದು…

Read More