ಬೆಂಗಳೂರಿನ ಚಿಕ್ಕಪೇಟೆಯ ಹಾರ್ಡ್‌ವೇರ್ ಗೋಡೌನ್‌ಗೆ ಬೆಂಕಿ! – Kannada News | Chickpet Hardware Warehouse Fire in Bengaluru: 175 Shops Engulfed
ಬೆಂಗಳೂರು, ಫೆಬ್ರವರಿ 25: ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಇರುವ ಹಾರ್ಡ್‌ವೇರ್ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಒಟ್ಟು 175 ಅಂಗಡಿ ಮಳಿಗೆಗಳಿದ್ದವು. ಕೆಳಮಹಡಿಯಲ್ಲಿನ ಹಾರ್ಡ್‌ವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಮೇಲಿನ ಅಂತಸ್ತುಗಳಿಗೆ ವ್ಯಾಪಿಸಿದೆ ಎಂದು ಹೇಳಲಾಗಿದೆ. ಕಟ್ಟಡದಲ್ಲಿ ಪ್ಲಾಸ್ಟಿಕ್, ಫ್ಯಾನ್ಸಿ ಸಾಮಗ್ರಿಗಳು, ಬಟ್ಟೆ ಹಾಗೂ ಸುಡುವಂತಹ ಇತರೆ ವಸ್ತುಗಳಿದ್ದ ಕಾರಣ ಬೆಂಕಿ ವೇಗವಾಗಿ ಹರಡಿದೆ. ಅಗ್ನಿ ಅವಘಡದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ದಟ್ಟ ಹೊಗೆ…