ಎಂಗೇಜ್ಮೆಂಟ್ ಆಗಿ ಮದುವೆಯಾಗದಿದ್ರೆ ಯಾವ ದೋಷ ಉಂಟಾಗುತ್ತೆ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.ನಾತನ ಸಂಸ್ಕೃತಿಯಲ್ಲಿ ವಿವಾಹವನ್ನು ಕೇವಲ ಎರಡು ವ್ಯಕ್ತಿಗಳ ನಡುವಿನ ಒಪ್ಪಂದವಾಗಿ ನೋಡಲಾಗುವುದಿಲ್ಲ, ಬದಲಿಗೆ ಎರಡು ಕುಟುಂಬಗಳನ್ನು, ಆತ್ಮಗಳನ್ನು ಬೆಸೆಯುವ ಪವಿತ್ರ ಸಂಸ್ಕಾರವಾಗಿ ಪರಿಗಣಿಸಲಾಗುತ್ತದೆ. ವಿವಾಹದ ಮೊದಲ ಹೆಜ್ಜೆಯಾದ ನಿಶ್ಚಿತಾರ್ಥ ಅಥವಾ ನಿಶ್ಚಯ ತಾಂಬೂಲಕ್ಕೆ ಅತೀವ ಮಹತ್ವವಿದೆ. ಈ ಸಮಯದಲ್ಲಿ ಭಗವಂತನನ್ನು, ಸರ್ವ ದೇವತೆಗಳನ್ನು, ಮಂಗಳಕರ ವಸ್ತುಗಳಾದ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಅರಿಶಿನ, ಕುಂಕುಮಗಳನ್ನು ಸಾಕ್ಷಿಯಾಗಿಟ್ಟು ವಾಗ್ದಾನ ಮಾಡಲಾಗುತ್ತದೆ. ಒಮ್ಮೆ ನಿಶ್ಚಯ ತಾಂಬೂಲವನ್ನು ಸ್ವೀಕರಿಸಿ, ನಂತರ ವಿವಿಧ ಕಾರಣಗಳಿಂದ ಅದನ್ನು ತಿರಸ್ಕರಿಸಿದರೆ, ಅದು ಮಹಾಪಾಪ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.