ಇರಾನ್ ಮತ್ತೆ ಮಾತುಕತೆಗೆ ಬರಲಿ, ಬರ್ದೇ ಇರ್ಲಿ ಡೋಂಟ್ ಕೇರ್: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಏಪ್ರಿಲ್ 13: ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಅಮೆರಿಕ-ಇರಾನ್ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೆ ಗುಡುಗಿದ್ದಾರೆ. ಇರಾನ್ ಮಾತುಕತೆಗೆ ಮರಳುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನನಗೆ ಕಿಂಚಿತ್ತೂ ಕಳವಳವಿಲ್ಲ ಎಂದು ಹೇಳಿದ್ದಾರೆ. ಫ್ಲೋರಿಡಾದಿಂದ ಹಿಂದಿರುಗಿದ ನಂತರ ಜಂಟಿ ಬೇಸ್ ಆಂಡ್ರ್ಯೂಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದರು. ಇರಾನ್ ಮಾತುಕತೆಯ ಮೇಜಿಗೆ ಮರಳುತ್ತದೆಯೋ ಇಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಅವರು…