ರಾಹುಲ್ ದ್ರಾವಿಡ್ ಔಟ್, ಇಂಗ್ಲೆಂಡ್​ ತಂಡಕ್ಕೆ ಹೊಸ ಕೋಚ್ ಬಹುತೇಕ ಫಿಕ್ಸ್​! – Kannada News | Rahul Dravid Out of England Test Coach Race; Stephen Fleming Frontrunner

ಜಾಗತಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಹಾಗೂ ಚಾಣಾಕ್ಷ ತಂತ್ರಜ್ಞರಲ್ಲಿ ಒಬ್ಬರಾದ ನ್ಯೂಝಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಇಂಗ್ಲೆಂಡ್ ಪುರುಷರ ಟೆಸ್ಟ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ. ಬ್ರಿಟನ್‌ನ ಪ್ರತಿಷ್ಠಿತ ಮಾಧ್ಯಮ ದಿ ಟೆಲಿಗ್ರಾಫ್ ಪ್ರಕಟಿಸಿರುವ ವರದಿಯ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ನಡೆಸಿದ ಸುದೀರ್ಘ ಸಂದರ್ಶನ ಪ್ರಕ್ರಿಯೆಯಲ್ಲಿ ಫ್ಲೆಮಿಂಗ್ ಮುಂಚೂಣಿಗೆ ಬಂದಿದ್ದಾರೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕಲಮ್ ಅವರನ್ನು ವಜಾಗೊಳಿಸಲಾಗಿದ್ದು, ಆ ತೆರವಾದ ಸ್ಥಾನಕ್ಕೆ ಫ್ಲೆಮಿಂಗ್ ಅವರನ್ನು ತರಲು ಇಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕೀ ಭರದ ಸಿದ್ಧತೆ ನಡೆಸಿದ್ದಾರೆ. ಈ ಸಿದ್ಧತೆಯೊಂದಿಗೆ ಸ್ಟೀಫನ್ ಫ್ಲೆಮಿಂಗ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್​ ಆದಂತಾಗಿದೆ.

ರಾಹುಲ್ ದ್ರಾವಿಡ್ ಔಟ್:

ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ರೇಸ್‌ನಿಂದ ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಹಿಂದೆ ಸರಿದಿದ್ದಾರೆ. ಈ ಹಿಂದೆ ಇಂಗ್ಲೆಂಡ್ ತಂಡಕ್ಕೆ ದ್ರಾವಿಡ್ ಕೋಚ್ ಆಗುವುದು ಬಹುತೇಕ ಖಚಿತ ಎನ್ನಲಾಗಿತ್ತು.

ಆದರೆ ರಾಹುಲ್ ದ್ರಾವಿಡ್ ಸದ್ಯಕ್ಕೆ ಯಾವುದೇ ಅಂತರರಾಷ್ಟ್ರೀಯ ತಂಡಕ್ಕೆ ಪೂರ್ಣ ಸಮಯದ ಮುಖ್ಯ ಕೋಚ್ ಆಗಲು ಬಯಸುತ್ತಿಲ್ಲ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನೀಡಿದ ಆಫರ್​ ಅನ್ನು ದ್ರಾವಿಡ್​ ನಿರಾಕರಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನ ಸರಣಿ ಪ್ರವಾಸಗಳಿಂದ ಬಿಡುವು ಬಯಸಿರುವ ದ್ರಾವಿಡ್ ಪ್ರಸ್ತುತ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ನ ‘ಡಬ್ಲಿನ್ ಗಾರ್ಡಿಯನ್ಸ್’ ತಂಡದ ಸಹ-ಮಾಲೀಕರಾಗಿದ್ದಾರೆ. ಹೀಗಾಗಿ ಈ ಲೀಗ್​ನತ್ತ ಹೆಚ್ಚು ಗಮನಹರಿಸಲು ಇಸಿಬಿ ನೀಡಿದ ಕೋಚ್ ಆಫರ್ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ರಾಹುಲ್ ದ್ರಾವಿಡ್ ಕೋಚ್ ರೇಸ್​ನಿಂದ ಹೊರಗುಳಿಯುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೆಸರು ಮುಂಚೂಣಿಗೆ ಬಂದಿದೆ.

17 ವರ್ಷಗಳ ಬಾಂಧವ್ಯಕ್ಕೆ ಬ್ರೇಕ್!

ಸ್ಟೀಫನ್ ಫ್ಲೆಮಿಂಗ್ ಇತ್ತೀಚೆಗಷ್ಟೇ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿ ಆದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಕಳೆದ 17 ವರ್ಷಗಳಿಂದ ಸಿಎಸ್‌ಕೆ ಸಾಮ್ರಾಜ್ಯವನ್ನು ಮುನ್ನಡೆಸಿದ್ದ ಫ್ಲೆಮಿಂಗ್, ತಂಡಕ್ಕೆ 5 ಐಪಿಎಲ್ ಟ್ರೋಫಿ ಹಾಗೂ 2 ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಸಿಎಸ್‌ಕೆ ತೊರೆದ ಬೆನ್ನಲ್ಲೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕೋಚ್ ಆಗಿ ಕಂಬ್ಯಾಕ್ ಮಾಡುತ್ತಿರುವುದು ವಿಶೇಷ.

ಮೆಕಲಮ್-ಫ್ಲೆಮಿಂಗ್ ಜುಗಲ್‌ಬಂದಿ:

ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ಕೋಚ್ ಸ್ಥಾನದಿಂದ ಕಿತ್ತೆಸೆಯಲಾಗಿದ್ದರೂ, ಅವರು ಇಂಗ್ಲೆಂಡ್‌ನ ಏಕದಿನ ಮತ್ತು ಟಿ20 ತಂಡಗಳ ಕೋಚ್ ಆಗಿ ಮುಂದುವರಿಯಲಿದ್ದಾರೆ. ವಿಶೇಷವೆಂದರೆ, ಮೆಕಲಮ್ ಅವರು ನ್ಯೂಝಿಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದೇ ಫ್ಲೆಮಿಂಗ್ ಅವರ ನಾಯಕತ್ವದ ಅಡಿಯಲ್ಲಿ.

“ಸ್ಟೀಫನ್ ಫ್ಲೆಮಿಂಗ್ ಮೈದಾನದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ತಂತ್ರಗಳು ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದವು,” ಎಂದು ಮೆಕಲಮ್ ಈ ಹಿಂದೆ ಹೇಳಿಕೊಂಡಿದ್ದರು. ಹೀಗಾಗಿ, ಈ ಇಬ್ಬರು ಕಿವೀಸ್ ದಿಗ್ಗಜರ ಕಾಂಬಿನೇಷನ್ ಇಂಗ್ಲೆಂಡ್ ಕ್ರಿಕೆಟ್‌ನ ಒಟ್ಟಾರೆ ಪ್ರಗತಿಗೆ ನೆರವಾಗಲಿದೆ ಎಂಬುದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ನ ಹೊಸ ಲೆಕ್ಕಾಚಾರವಾಗಿದೆ.

ಪಾಕಿಸ್ತಾನ್ ಸರಣಿಗೆ ರೂಟ್ ನಾಯಕ:

ಮುಂದಿನ ತಿಂಗಳು ಇಂಗ್ಲೆಂಡ್ ತಂಡವು ಪಾಕಿಸ್ತಾನ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಆದರೆ ಫ್ಲೆಮಿಂಗ್ ಅವರ ಅಧಿಕೃತ ಅವಧಿ ಡಿಸೆಂಬರ್‌ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ಪ್ರವಾಸದಿಂದ ಆರಂಭವಾಗುವ ಸಾಧ್ಯತೆಯಿದೆ. ಹಾಗಾಗಿ, ಇತ್ತೀಚೆಗಷ್ಟೇ ನಾಯಕತ್ವಕ್ಕೆ ದಿಢೀರ್ ವಿದಾಯ ಹೇಳಿದ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ, ಹಿರಿಯ ಆಟಗಾರ ಜೋ ರೂಟ್ ಪಾಕಿಸ್ತಾನ್ ಸರಣಿಗೆ ಹಂಗಾಮಿ ನಾಯಕರಾಗಿ ಮತ್ತು ಮಾಜಿ ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ ಹಂಗಾಮಿ ಕೋಚ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: ಅರ್ಜೆಂಟೀನಾ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಫಿಫಾ!

ಇನ್ನು ಡಿಸೆಂಬರ್​ ವೇಳೆ ಸ್ಟೀಫನ್ ಫ್ಲೆಮಿಂಗ್ ಇಂಗ್ಲೆಂಡ್ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಂಡರೆ, ಮುಂಬರುವ 2027ರ ಪ್ರತಿಷ್ಠಿತ ಆ್ಯಶಸ್ ಸರಣಿಗೂ ಮುನ್ನ ಇಂಗ್ಲೆಂಡ್ ತಂಡವನ್ನು ಹೊಸದಾಗಿ ಕಟ್ಟುವುದು ಅವರ ಮುಂದಿರುವ ಮೊದಲ ದೊಡ್ಡ ಸವಾಲಾಗಿರಲಿದೆ.

Source link

ಮಳೆಯಾಗದಿದ್ದರೆ ಬೆಂಗಳೂರು ನಗರಕ್ಕೆ ನೀರಿನ ಕೊರತೆ: ಕೆಆರ್​ಎಸ್​​ ಸೇರಿ ರಾಜ್ಯದ ಇತರ ಡ್ಯಾಂಗಳ ಇಂದಿನ ಸ್ಥಿತಿ ಏನು? – Kannada News | Water Crisis Looms: BWSSB Warns of Bengaluru Supply Crunch; Latest Updates on KRS, Almatti, and Other Karnataka Dams

ಬೆಂಗಳೂರು, ಜುಲೈ 30: ಸದ್ಯ ಕೆಆರ್​ಎಸ್​​ ಡ್ಯಾಂನಲ್ಲಿರುವ ನೀರು ಬೆಂಗಳೂರಿಗೆ 5-6 ತಿಂಗಳಿಗೆ ಆಗುವಷ್ಟು ಮಾತ್ರ ಇದೆ. ಹೀಗಾಗಿ ಒಂದು ವೇಳೆ ಮಳೆಯಾಗದಿದ್ದರೆ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ.ಎನ್​.ಮಂಜುಳಾ ತಿಳಿಸಿದ್ದಾರೆ. 124.80 ಅಡಿ ಗರಿಷ್ಠ ಮಟ್ಟ (49.452 ಟಿಎಂಸಿ) ಹೊಂದಿರುವ ಡ್ಯಾಂನಲ್ಲಿ ಇಂದು 92.14 ಅಡಿ (17.253 ಟಿಎಂಸಿ) ನೀರಿದ್ದು, 3,258 ಕ್ಯೂಸೆಕ್ ಒಳಹರಿವು ಮತ್ತು 1,699 ಕ್ಯೂಸೆಕ್ ಒಳ ಹರಿವನ್ನು ಡ್ಯಾಂ ಹೊಂದಿದೆ.

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಕಬಿನಿ ಡ್ಯಾಂ

ಮೈಸೂರಿನ ಕಬಿನಿ ಡ್ಯಾಂನಲ್ಲಿ ಇಂದು 77.05 ಅಡಿ (15.39 ಟಿಎಂಸಿ) ನೀರಿದ್ದು, ಕಳೆದ ವರ್ಷ ಇದೇ ದಿನ 81.46 (17.91 ಟಿಎಂಸಿ) ಅಡಿಯಷ್ಟಿತ್ತು. ಜಲಾಶಯಕ್ಕೆ 8,580 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ ನದಿಗೆ 500 ಕ್ಯೂಸೆಕ್​​ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಭಾರೀ ಗಾಳಿ ಮಳೆ, ಒಳನಾಡಿನಲ್ಲೂ ವರ್ಷಧಾರೆಯ ಮುನ್ಸೂಚನೆ

ಆಲಮಟ್ಟಿ ಜಲಾಶಯ

519.60 ಮೀಟರ್ ಗರಿಷ್ಠ ಮಟ್ಟ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಇಂದು 519.25 ಮೀಟರ್ ನೀರಿದೆ. ಒಳ ಹರಿವು 83,386 ಕ್ಯೂಸೆಕ್ ಮತ್ತು 97,078 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ.

ಬಸವಸಾಗರ ಅಣೆಕಟ್ಟು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ 491.55 ಮೀಟರ್ ನೀರಿದ್ದು, ಡ್ಯಾಂನ ಗರಿಷ್ಠ ಮಟ್ಟ 492.25 ಮೀಟರ್ ಆಗಿದೆ. 95,000 ಕ್ಯೂಸೆಕ್ ಒಳಹರಿವು ಮತ್ತು 1,11,000 ಕ್ಯೂಸೆಕ್ ಹೊರ ಹರಿವನ್ನು ಜಲಾಶಯ ಇಂದು ಹೊಂದಿದೆ.

ಹಾರಂಗಿ ಜಲಾಶಯ

2859 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದಲ್ಲಿ ಸದ್ಯ 2857 ಅಡಿ ನೀರಿದೆ. ಜಲಾಶಯದ ಒಳಹರಿವು 4,613 ಕ್ಯೂಸೆಕ್ ಇದ್ದರೆ ಹೊರಹರಿವು 4,854 ಕ್ಯೂಸೆಕ್ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:46 am, Thu, 30 July 26

Source link

ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ: ಅರುಣ್ ಯೋಗಿರಾಜ್ ಕೆತ್ತಿದ ವಿವೇಕಾನಂದರ ಏಕಶಿಲಾ ಮೂರ್ತಿ ಸಿದ್ಧ – Kannada News | PM Modi to Receive Swami Vivekananda Sculpture by Arun Yogiraj During Mysuru Visit

ಮೈಸೂರು, ಜುಲೈ 30: ಪ್ರಧಾನಿ ನರೇಂದ್ರ ಮೋದಿ ಅವರ ಆಗಸ್ಟ್ 1ರ ಮೈಸೂರು ಭೇಟಿಗೆ ವಿಶೇಷ ಉಡುಗೊರೆಯೊಂದು ಸಿದ್ಧವಾಗಿದೆ. ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಯೆಟ್ನಾಂ ಮಾರ್ಬಲ್‌ನಲ್ಲಿ ಕೆತ್ತಿರುವ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಲು ಸಿದ್ಧತೆ ಮಾಡಲಾಗಿದೆ. ಆಗಸ್ಟ್ 1ರಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇದೇ ವೇಳೆ ಅರುಣ್ ಯೋಗಿರಾಜ್ ಕೆತ್ತಿರುವ ವಿವೇಕಾನಂದರ ಮೂರ್ತಿಯನ್ನು ಪ್ರಧಾನಿಗೆ ನೀಡಲಾಗುತ್ತದೆ.

ಈ ವಿಶೇಷ ಮೂರ್ತಿಯು 8.5 ಕೆ.ಜಿ. ತೂಕ ಮತ್ತು 1.5 ಅಡಿ ಎತ್ತರ ಹೊಂದಿದೆ. ವಿಯೆಟ್ನಾಂ ಮಾರ್ಬಲ್‌ನಲ್ಲಿ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಕೇವಲ 15 ದಿನಗಳಲ್ಲಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಪೂರ್ಣಗೊಳಿಸಿದ್ದಾರೆ. ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೋರಿಯಲ್‌ನ ಮಾದರಿಯನ್ನು ಆಧರಿಸಿ ಮೂರ್ತಿಯ ವಿನ್ಯಾಸ ರೂಪಿಸಲಾಗಿದೆ. ಪ್ರಧಾನಿ ಮೋದಿ ಅವರು ಸುಲಭವಾಗಿ ಕೈಯಲ್ಲಿ ಹಿಡಿದುಕೊಳ್ಳುವಂತೆ ಮೂರ್ತಿಯ ತೂಕವನ್ನು 10 ಕೆ.ಜಿಗಿಂತ ಕಡಿಮೆ ಇರುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಶಿಲ್ಪಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಅರುಣ್ ಯೋಗಿರಾಜ್ ತಿಳಿಸಿದ್ದಾರೆ. ಇದೀಗ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಪ್ರಧಾನಿಗೆ ನೀಡುವ ಅವಕಾಶ ಕಲ್ಪಿಸಿರುವ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸ್ ಪರೀಕ್ಷೆಗೆ ಟಫ್ ರೂಲ್ಸ್: ಮಾಂಗಲ್ಯಸರ, ಜನಿವಾರಕ್ಕೆ ಓಕೆ; ಕಳ್ಳದಾರಿ ಹಿಡಿದ್ರೆ ಲೈಫ್‌ಟೈಮ್ ಡಿಬಾರ್ – Kannada News | Exam Integrity: Karnataka Implements Strict Measures for Fair Competitive Exams and Police Recruitment

ಬೆಂಗಳೂರು, ಜು.30: ಪರೀಕ್ಷೆಯಲ್ಲಿ ಆಗುವ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಮಸೂದೆಯೊಂದನ್ನು ಪರಿಚಯಿಸಿದೆ. ಈ ಮೂಲಕ ಪರೀಕ್ಷೆಯಲ್ಲಾಗುವ ಮೋಸಗಳನ್ನು ತಡೆಯಬಹುದು. ಇದೀಗ ಇದರ ಬೆನ್ನಲ್ಲೇ ಕರ್ನಾಟದಲ್ಲೂ ಪೊಲೀಸ್​​​ ಇಲಾಖೆ, ಇತರ ಸ್ಪರ್ಧಾತ್ಮಕ ಪರೀಕ್ಷೆಯೂ ನಡೆಯುವ ಅಕ್ರಮಗಳನ್ನು ತಡೆಯಲು ಸರ್ಕಾರ ಹೊಸ ಕ್ರಮವನ್ನು ತಂದಿದೆ.

KPSC ನೇಮಕಾತಿ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮುಂಬರುವ 3,991 ಪೊಲೀಸ್ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಗಸ್ಟ್ 2ರ ಭಾನುವಾರದಂದು ರಾಜ್ಯದ 800ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಒಟ್ಟು 4.54 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಯಾವುದೇ ಗೋಲ್‌ಮಾಲ್ ನಡೆಯದಂತೆ ತಡೆಯಲು KKEA ಅಭೂತಪೂರ್ವ ಬಿಗಿ ನಿಯಮಗಳನ್ನು ಜಾರಿಗೆ ತಂದಿದೆ.

ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಬಂದ ತಕ್ಷಣ, ಪ್ರಿನ್ಸಿಪಾಲ್ ನೇತೃತ್ವದಲ್ಲಿ ಕೇಂದ್ರದ ಐದು ವಿದ್ಯಾರ್ಥಿಗಳ ಸಮಕ್ಷಮದಲ್ಲೇ ಪ್ರಶ್ನೆಪತ್ರಿಕೆಯ ಸಿಲ್ಡ್ ಬಾಕ್ಸ್ ತೆರೆಯಲಾಗುತ್ತದೆ. ಪ್ರಶ್ನೆಪತ್ರಿಕೆ ಬಾಕ್ಸ್ ಓಪನ್ ಮಾಡುವುದರಿಂದ ಹಿಡಿದು ಪರೀಕ್ಷಾ ಕೊಠಡಿಗೆ ತಲುಪುವವರೆಗೆ ಅಭ್ಯರ್ಥಿಗಳ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ.

ಕಟ್ಟುನಿಟ್ಟಿನ ವಸ್ತ್ರಸಂಹಿತೆ

ಪರೀಕ್ಷಾ ಕೊಠಡಿಯೊಳಗೆ ಕಿವಿಯೋಲೆ, ವಾಚ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಗೆ ಕಡ್ಡಾಯವಾಗಿ ಅವಕಾಶವಿಲ್ಲ. ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿಗೆ ಗೌರವ ನೀಡಿ ಮಾಂಗಲ್ಯಸರ, ಮೂಗುತಿ, ಜನಿವಾರ ಮತ್ತು ಶಿವದಾರಕ್ಕೆ ಅವಕಾಶ ನೀಡಲಾಗಿದೆ. ಯಾವುದೇ ಕೇಂದ್ರದಲ್ಲಿ ಇವುಗಳನ್ನು ತೆಗೆಸುವಂತಿಲ್ಲ ಎಂದು ಸೂಚಿಸಲಾಗಿದೆ. ಕಿವಿ ಭಾಗದಲ್ಲಿ ಬ್ಲೂಟೂತ್ ಅಥವಾ ಇಯರ್‌ಫೋನ್ ಸಾಧನ ಬಳಸಿ ಅಕ್ರಮ ಎಸಗುವುದನ್ನು ತಡೆಯಲು ಸೂಕ್ಷ್ಮ ಕೇಂದ್ರಗಳಲ್ಲಿ ENT (ಕಿವಿ, ಮೂಗು, ಗಂಟಲು) ವೈದ್ಯರನ್ನು ತಪಾಸಣೆಗೆ ನೇಮಿಸಲಾಗಿದೆ.

OMR ಶೀಟ್‌ನ ಹೊಸ ನಿಯಮ: 5ನೇ ಕಾಲಂ ಕಡ್ಡಾಯ

ಪರೀಕ್ಷೆ ಮುಗಿದ ಅರ್ಧ ಗಂಟೆಯ ಒಳಗಾಗಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು (OMR ಶೀಟ್) KEA ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದು OMR ಶೀಟ್‌ನಲ್ಲಿ ಖಾಲಿ ಬಿಡುವ ಹಾಗಿಲ್ಲ. ಉತ್ತರ ಗೊತ್ತಿಲ್ಲದಿದ್ದರೆ 5ನೇ ಕಾಲಂ ಅನ್ನು ಫಿಲ್ ಮಾಡಬೇಕು. ಹಾಗೂ OMR ಶೀಟ್‌ನಲ್ಲಿ ಯಾವುದೇ ಉತ್ತರ ಅಥವಾ 5ನೇ ಕಾಲಂ ಅನ್ನು ಫಿಲ್ ಮಾಡದೇ ಖಾಲಿ ಬಿಟ್ಟರೆ 1/4 (0.25) ಅಂಕ ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ: ಹೆಚ್‌ಎಂಟಿ ಜಮೀನು ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಡೆ: ಮರ ಕತ್ತರಿಸದಂತೆ ಹೆಚ್‌ಎಂಟಿಗೂ ಸೂಚನೆ

ಹೈಟೆಕ್ ಸೆಕ್ಯುರಿಟಿ ಹಾಗೂ ಸಿಸಿಟಿವಿ ಕಣ್ಗಾವಲು:

ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಲೈವ್ ವೆಬ್‌ಕಾಸ್ಟಿಂಗ್ ಇರಲಿದ್ದು, ನೆಟ್‌ವರ್ಕ್ ಜಾಮರ್‌ಗಳನ್ನು ಅಳವಡಿಸಲಾಗಿದೆ. ಬಯೋಮೆಟ್ರಿಕ್ ಹಾಜರಾತಿಗಾಗಿ ಫಿಂಗರ್‌ಪ್ರಿಂಟ್ ಮತ್ತು ಮುಖ ಗುರುತಿಸುವ ತಂತ್ರಜ್ಞಾನ ಬಳಸಲಾಗುತ್ತಿದೆ. ಪರೀಕ್ಷೆ ಪ್ರಾರಂಭವಾಗುವ 1 ಗಂಟೆ ಮುಂಚಿತವಾಗಿಯೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗಿರಬೇಕು. ಪರೀಕ್ಷಾ ಮೇಲ್ವಿಚಾರಣೆಗೆ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರನ್ನು ನಿಯೋಜಿಸಲು KEA ಕ್ರಮಕೈಗೊಂಡಿದೆ.

216 ಕಳಂಕಿತ ಅಭ್ಯರ್ಥಿಗಳಿಗೆ ಶಾಶ್ವತ ನಿಷೇಧ, KEA ಗೆ ಬ್ಲ್ಯಾಕ್‌ಲಿಸ್ಟ್ ಪಟ್ಟಿ ಸಲ್ಲಿಕೆ

ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅವ್ಯವಹಾರ ಮತ್ತು ಅಕ್ರಮ ಎಸಗಿ ಸಿಕ್ಕಿಬಿದ್ದಿರುವ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್ ಇಲಾಖೆ ಚಾಟಿ ಬೀಸಿದೆ. ಕಳಂಕಿತ ಅಭ್ಯರ್ಥಿಗಳು ಭವಿಷ್ಯದಲ್ಲಿ ಸರ್ಕಾರಿ ಹುದ್ದೆಯ ಯಾವುದೇ ನೇಮಕಾತಿ ಪರೀಕ್ಷೆಗಳಲ್ಲಿ ಪಾಲ್ಗೊಳ್ಳದಂತೆ ಶಾಶ್ವತ ನಿಷೇಧ ಹೇರಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್, ಸಶಸ್ತ್ರ , ಕೆಎಸ್‌ಆರ್‌ಪಿ ಹಾಗೂ ಕೆಎಸ್‌ಐಎಸ್ಎಫ್ (KSISF) ಘಟಕಗಳ ಒಟ್ಟು 7,905 ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ಆಯೋಜಿಸಲಾಗಿರುವ ಪರೀಕ್ಷೆಗಳಿಗೆ ಕಳಂಕಿತರು ಮತ್ತೆ ಅರ್ಜಿ ಸಲ್ಲಿಸುವುದನ್ನು ತಡೆಯಲು ಪೊಲೀಸ್ ನೇಮಕಾತಿ ವಿಭಾಗವು ಮುಂಜಾಗ್ರತಾ ಕ್ರಮವಾಗಿ 216 ಆರೋಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಹಸ್ತಾಂತರಿಸಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಟ್ರೈಲರ್ ಬೆಳಿಗ್ಗೆ 4:15ಕ್ಕೆ ಬಿಡುಗಡೆ ಮಾಡಿದ್ದೇಕೆ? ಆ ಸಮಯದ ವಿಶೇಷತೆ ಏನು? – Kannada News | Why Ramayana movie trailer released at early morning

ಸಿನಿಮಾ (Cinema) ಟ್ರೈಲರ್​​ ಗಳನ್ನು ಬಿಡುಗಡೆ ಮಾಡುವಾಗ ಹೆಚ್ಚು ಎಂಗೇಜಿಂಗ್ ಸಮಯವನ್ನು ಆಯ್ಕೆ ಮಾಡಲಾಗುತ್ತದೆ. ಬೆಳಿಗ್ಗೆ ಅಥವಾ ಸಂಜೆ ಹೀಗೆ ಜನ ತುಸು ಫ್ರೀ ಆಗಿ ಇರುವ ಸಮಯ ನೋಡಿ ಟ್ರೈಲರ್ ಅಥವಾ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ರಣಬೀರ್ ಕಪೂರ್ ಮತ್ತು ಯಶ್ ಅವರ ‘ರಾಮಾಯಣ’ ಚಿತ್ರದ ಟ್ರೈಲರ್ ಅನ್ನು ಬೆಳಿಗಿನ ಜಾವ 4:15 ಕ್ಕೆ ಬಿಡುಗಡೆ ಮಾಡಲಾಗಿದೆ. ಚಿತ್ರತಂಡವು ಈ ಸಮಯವನ್ನೇ ಟ್ರೈಲರ್ ಬಿಡುಗಡೆಗೆ ನಿಗದಿ ಮಾಡಿದ್ದು ಏಕೆ? ಆ ಸಮಯದಲ್ಲಿ ಏನಾದರೂ ವಿಶೇಷತೆ ಇದೆಯೇ?

ಪ್ರೈಮ್‌ಟೈಮ್‌ನಲ್ಲಿ ಟ್ರೈಲರ್ ಅನ್ನು ಬಿಡುಗಡೆ ಮಾಡುವ ಬದಲು, ಭಾರತದಲ್ಲಿ ಬಹುತೇಕರು ಸಿಹಿ ನಿದ್ದೆಯಲ್ಲಿರುವ ಸಮಯದಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಯ್ತು. ಆದರೆ ಚಿತ್ರತಂಡ ಆ ಸಮಯದಲ್ಲಿಯೇ ಟ್ರೈಲರ್ ರಿಲೀಸ್ ಮಾಡಲು ಪ್ರಮುಖವಾದ ಕಾರಣ ಇದೆ. ‘ರಾಮಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಬ್ರಾಹ್ಮಿ ಮುಹೂರ್ತದಲ್ಲಿ. ಹಿಂದೂ ಸಂಪ್ರದಾಯದಲ್ಲಿ ದಿನದ ಅತ್ಯಂತ ಮಂಗಳಕರ ಸಮಯಗಳಲ್ಲಿ ಒಂದೆಂದು ಬ್ರಹ್ಮ ಮುಹೂರ್ತನ್ನು ಪರಿಗಣಿಸಲಾಗುತ್ತದೆ. ಹಾಗಾಗಿ ಅದೇ ಸಮಯದಲ್ಲಿ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಬ್ರಹ್ಮ ಮುಹೂರ್ತದಲ್ಲಿ ವಿಶ್ವಾದ್ಯಂತ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಘೋಷಿಸಿದರು. ಇದು ಅಸಾಂಪ್ರದಾಯಿಕ ಮಾರ್ಕೆಟಿಂಗ್ ತಂತ್ರದಂತೆ ತೋರಬಹುದಾದರೂ, ಈ ಸಮಯವು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ರಾಮಾಯಣವು ಹಿಂದೂ ಧರ್ಮದ ಅತ್ಯಂತ ಪವಿತ್ರ ಮಹಾಕಾವ್ಯ ಆಗಿದ್ದು, ಅಂಥಹಾ ಮಾಹಾ ಕಾವ್ಯ ಆಧಿರಿಸಿದ ಸಿನಿಮಾದ ಟ್ರೈಲರ್ ಅನ್ನು ಹಿಂದೂ ಧರ್ಮದ ಪ್ರಕಾರ ಒಳ್ಳೆಯ ಸಮಯದಲ್ಲಿಯೇ ಬಿಡುಗಡೆ ಮಾಡಬೇಕು ಎಂಬುದು ನಿರ್ಮಾಪಕರ ಆಸೆ ಆಗಿತ್ತು.

ಇದನ್ನೂ ಓದಿ:‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ

ಬ್ರಹ್ಮ ಮುಹೂರ್ತವು ಹಿಂದೂ ತತ್ವಶಾಸ್ತ್ರದಲ್ಲಿ ಒಂದು ಪ್ರಮುಖ ಪರಿಕಲ್ಪನೆಯಾಗಿದೆ, ಇದು ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ 36 ನಿಮಿಷಗಳ ಮೊದಲು ಸಂಭವಿಸುತ್ತದೆ. ನಿರ್ದಿಷ್ಟ ಸ್ಥಳದಲ್ಲಿ ಸೂರ್ಯೋದಯವನ್ನು ಅವಲಂಬಿಸಿ ನಿಖರವಾದ ಸಮಯವು ಬದಲಾಗುತ್ತದೆಯಾದರೂ, ಬ್ರಹ್ಮ ಮುಹೂರ್ತದ ಅವಧಿಯು ಸರಿಸುಮಾರು 48 ನಿಮಿಷಗಳಾಗಿರುತ್ತದೆ. ‘ಬ್ರಹ್ಮ’ ಎಂಬುದು ಪರಮ ಚೈತನ್ಯ ಅಥವಾ ಸೃಷ್ಟಿಕರ್ತನನ್ನು ಸೂಚಿಸಲು ಬಳಸುವ ಪದವಾಗಿದೆ, ಆದರೆ “ಮುಹೂರ್ತ” ಎಂದರೆ ಸಮಯದ ಒಂದು ಘಟಕ. ಆದ್ದರಿಂದ, ಬ್ರಹ್ಮ ಮುಹೂರ್ತವನ್ನು ಆಧ್ಯಾತ್ಮಿಕ ಸಾಧನೆಗಳಿಗೆ ಅತ್ಯಂತ ಸೂಕ್ತವಾದ ಸಮಯವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧಾರ್ಮದಲ್ಲಿ ಈ ಸಮಯದಲ್ಲಿ ಬಹಳ ಉನ್ನತವಾದ ಸ್ಥಾನ ಮತ್ತು ಮಹತ್ವವಿದೆ.

ಹಿಂದೂ ಧರ್ಮದ ಬೋಧನೆಗಳ ಪ್ರಕಾರ, ಬ್ರಹ್ಮ ಮುಹೂರ್ತವು ಸಾತ್ವಿಕ ಗುಣದಿಂದ, ಅಂದರೆ ಶುದ್ಧತೆ ಮತ್ತು ಮಾನಸಿಕ ಸಮತೋಲನದ ಸ್ಥಿತಿಯಿಂದ ಕೂಡಿದೆ ಎಂದು ನಂಬಲಾಗಿದೆ. ಈ ಸಮಯದಲ್ಲಿ ವಾತಾವರಣವು ತುಸು ಶಾಂತವಾಗಿರುತ್ತದೆ ಮತ್ತು ಗಮನವನ್ನು ಬೇರೆಡೆ ಸೆಳೆಯುವ ಅಡಚಣೆಗಳು ಕಡಿಮೆ ಇರುತ್ತವೆ. ಇದು ಮನಸ್ಸು ಮತ್ತು ಆತ್ಮ ಎರಡಕ್ಕೂ ಪ್ರಯೋಜನಕಾರಿಯಾದ ಚಟುವಟಿಕೆಗಳಿಗೆ ಅತ್ಯುತ್ತಮ ಸಮಯವೆಂದು ನಂಬಲಾಗಿದೆ. ಹಾಗಾಗಿ ಈ ಸಮಯದಲ್ಲಿಯೇ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Career Advice: ಉದ್ಯೋಗ ಬಿಡುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ಕೆಲಸ ಬಿಡುವ ಮುನ್ನ ಈ ವಿಷಯ ತಪ್ಪದೇ ತಿಳಿಯಿರಿ – Kannada News | Career advice planning to quit your job make sure you check these things first

ಉದ್ಯೋಗ ಬಿಡುವ ಯೋಚನೆಯಲ್ಲಿದ್ದೀರಾ? Image Credit source: iStock/leremy

ಇತ್ತೀಚಿನ ದಿನಗಳಲ್ಲಿ ಹಲವು ಉದ್ಯೋಗಿಗಳು ಕೆಲಸದ ಒತ್ತಡ, ಕಡಿಮೆ ಸಂಬಳ, ವೃತ್ತಿಯಲ್ಲಿ ಬೆಳವಣಿಗೆಯ ಕೊರತೆ ಅಥವಾ ಸ್ವಂತ ಉದ್ಯಮ ಆರಂಭಿಸುವ ಕನಸಿನ ಕಾರಣದಿಂದ ಉದ್ಯೋಗಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಕೋಪದಲ್ಲಿ ಅಥವಾ ಆತುರದಲ್ಲಿ ಕೆಲಸ ಬಿಡುವುದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ರಾಜೀನಾಮೆ ನೀಡುವ ಮುನ್ನ ಈ ಪ್ರಮುಖ ವಿಷಯಗಳನ್ನು ಗಮನದಲ್ಲಿಡಿ.

6 ರಿಂದ 12 ತಿಂಗಳ ತುರ್ತು ನಿಧಿ ಇರಲಿ:

ಕೆಲಸ ಬಿಟ್ಟ ತಕ್ಷಣ ಹೊಸ ಉದ್ಯೋಗ ಅಥವಾ ಆದಾಯ ಸಿಗುತ್ತದೆ ಎನ್ನುವ ಖಾತರಿ ಇರುವುದಿಲ್ಲ. ಆದ್ದರಿಂದ ಕುಟುಂಬದ ಖರ್ಚುಗಳನ್ನು ನಿಭಾಯಿಸಲು ಕನಿಷ್ಠ 6 ರಿಂದ 12 ತಿಂಗಳ ತುರ್ತು ನಿಧಿಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. “ಮೊದಲು ಕೆಲಸ ಬಿಡೋಣ, ನಂತರ ನೋಡೋಣ” ಎಂಬ ಯೋಚನೆ ಒಳ್ಳೆಯದಲ್ಲ. ಕೆಲಸ ಬಿಟ್ಟ ನಂತರ ಏನು ಮಾಡಬೇಕು, ಎಲ್ಲಿಂದ ಆದಾಯ ಬರುತ್ತದೆ ಎಂಬ ಬಗ್ಗೆ ಸ್ಪಷ್ಟ ಯೋಜನೆ ಇರಬೇಕು.

ಸಾಲ ಮತ್ತು EMI ಬಗ್ಗೆ ಯೋಚಿಸಿ:

ಹೋಮ್ ಲೋನ್, ಕಾರ್ ಲೋನ್, ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಸಾಲ ಇದ್ದರೆ, ಕೆಲಸ ಬಿಡುವ ಮೊದಲು ಹಣಕಾಸಿನ ಪರಿಸ್ಥಿತಿಯನ್ನು ಸರಿಯಾಗಿ ಲೆಕ್ಕ ಹಾಕಿ. ಆದಾಯವಿಲ್ಲದ ಸಮಯದಲ್ಲೂ EMI ಪಾವತಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ರಾಜೀನಾಮೆ ನಿಮ್ಮೊಬ್ಬರ ನಿರ್ಧಾರ ಮಾತ್ರವಲ್ಲ. ಮಕ್ಕಳ ಶಿಕ್ಷಣ, ಮನೆಯ ಖರ್ಚು, ಪೋಷಕರ ಆರೋಗ್ಯ ಸೇರಿದಂತೆ ಹಲವು ಜವಾಬ್ದಾರಿಗಳಿರುತ್ತವೆ. ಆದ್ದರಿಂದ ಕುಟುಂಬದವರೊಂದಿಗೆ ಮಾತನಾಡಿ ಅವರ ಅಭಿಪ್ರಾಯವನ್ನೂ ತಿಳಿದುಕೊಳ್ಳಿ.

ಆರೋಗ್ಯ ವಿಮೆ ಮತ್ತು ಟರ್ಮ್ ಇನ್ಶೂರೆನ್ಸ್ ಇರಲಿ:

ಕಂಪನಿಯ ಆರೋಗ್ಯ ವಿಮೆ ಕೆಲಸ ಬಿಟ್ಟ ನಂತರ ನಿಲ್ಲಬಹುದು. ಆದ್ದರಿಂದ ಕೆಲಸ ಬಿಡುವ ಮುನ್ನ ವೈಯಕ್ತಿಕ ಆರೋಗ್ಯ ವಿಮೆ ಹಾಗೂ ಟರ್ಮ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಉತ್ತಮ. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಕೌಶಲ್ಯಗಳಿಗೆ ಹೆಚ್ಚು ಬೇಡಿಕೆ ಇದೆ. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಕೌಶಲ್ಯ ಅಥವಾ ಪ್ರಮಾಣಪತ್ರಗಳನ್ನು ಪಡೆದುಕೊಂಡರೆ ಹೊಸ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ.

ಕೋಪದಲ್ಲಿ ರಾಜೀನಾಮೆ ನೀಡಬೇಡಿ:

ಬಾಸ್ ಜೊತೆಗಿನ ಭಿನ್ನಾಭಿಪ್ರಾಯ ಅಥವಾ ಕೆಲಸದ ಒತ್ತಡದಿಂದ ತಕ್ಷಣ ರಾಜೀನಾಮೆ ನೀಡುವುದು ಸರಿಯಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಶಾಂತವಾಗಿ ಯೋಚಿಸಿ ನಂತರ ನಿರ್ಧಾರ ಕೈಗೊಳ್ಳಿ. ಕೆಲಸ ಬಿಡುವುದರಿಂದ PF ಉಳಿತಾಯ ಮತ್ತು ನಿವೃತ್ತಿ ಯೋಜನೆ ಮೇಲೆ ಪರಿಣಾಮ ಬೀಳಬಹುದು. ಜೊತೆಗೆ ಉದ್ಯೋಗದಲ್ಲಿ ಉಂಟಾಗುವ Career Gap ಬಗ್ಗೆ ಮುಂದಿನ ಸಂದರ್ಶನಗಳಲ್ಲಿ ಪ್ರಶ್ನೆಗಳು ಬರಬಹುದು. ಆದ್ದರಿಂದ ಅದಕ್ಕೂ ಸಿದ್ಧರಾಗಿರಿ.

ರಾಜೀನಾಮೆಗೂ ಮುನ್ನ ಈ ಆಯ್ಕೆಗಳನ್ನೂ ಪರಿಶೀಲಿಸಿ:

ಕೆಲಸ ಬಿಡುವ ಮೊದಲು ಸಂಸ್ಥೆಯೊಳಗಿನ ಬೇರೆ ವಿಭಾಗಕ್ಕೆ ವರ್ಗಾವಣೆ, ಮನೆಯಿಂದ ಕೆಲಸ (Work From Home), ಕೆಲಸದ ಸಮಯದಲ್ಲಿ ಬದಲಾವಣೆ ಅಥವಾ ಕೆಲ ದಿನಗಳ ರಜೆ ಪಡೆಯುವ ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿ. ಕೆಲವೊಮ್ಮೆ ಇಂತಹ ಆಯ್ಕೆಗಳು ಕೆಲಸ ಬಿಡುವ ಅಗತ್ಯವನ್ನೇ ತಪ್ಪಿಸಬಹುದು.

ಉದ್ಯೋಗ ಬದಲಾಯಿಸುವುದು ಅಥವಾ ಹೊಸ ಜೀವನ ಆರಂಭಿಸುವುದು ತಪ್ಪಲ್ಲ. ಆದರೆ ಯಾವುದೇ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ. ಸರಿಯಾದ ಯೋಜನೆ, ಸಾಕಷ್ಟು ಉಳಿತಾಯ ಮತ್ತು ಕುಟುಂಬದ ಬೆಂಬಲದೊಂದಿಗೆ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ಯಾವುದೇ ಪಶ್ಚಾತ್ತಾಪ ಇರುವುದಿಲ್ಲ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಕನ್ನಡದಲ್ಲೂ ನಟಿಸಿದ ಕರಿಷ್ಮಾ ತನ್ನಾ ಸಿಹಿ ಸುದ್ದಿ; ಗುರು ಪೂರ್ಣಿಮೆಯಂದು ಹೆಣ್ಣು ಮಗು ಜನನ – Kannada News | Kannada Actress Karishma Tanna And Varun Bangera Welcome Baby Boy On Guru Purnima

ಕನ್ನಡದ ‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರದ ನಟಿ ಕರಿಷ್ಮಾ ತನ್ನಾ ಹಾಗೂ ಅವರ ಪತಿ, ಉದ್ಯಮಿ ವರುಣ್ ಬಂಗೇರಾ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಬುಧವಾರದಂದು ಸೋಶಿಯಲ್ ಮೀಡಿಯಾ ಮೂಲಕ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ಜುಲೈ 29ರ ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ತಮಗೆ ಗಂಡು ಮಗು ಜನಿಸಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಜನನದ ಪೋಸ್ಟರ್ ಹಂಚಿಕೊಂಡಿರುವ ಕರಿಷ್ಮಾ, ‘ಗಂಡು ಮಗು. ಜುಲೈ 29, 2026. ಗುರು ಪೂರ್ಣಿಮೆಯ ಪವಿತ್ರ ದಿನದಂದು ನಮ್ಮ ಬದುಕಿನ ಅತ್ಯಂತ ದೊಡ್ಡ ಆಶೀರ್ವಾದ ನಮ್ಮ ಕೈಸೇರಿದೆ. ಪುಟಾಣಿ ಕಂದ ನಮ್ಮ ಜಗತ್ತಿಗೆ ನಿನಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. ಈ ದಂಪತಿಗೆ ಸೋನು ಸೂದ್, ಖುಷಿ ಕಪೂರ್, ರಿಚಾ ಚಡ್ಡಾ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

ಕನ್ನಡ ಸಿನಿಮಾದ ಕನೆಕ್ಷನ್

ಹಿಂದಿ ಕಿರುತೆರೆ ಹಾಗೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ಕರಿಷ್ಮಾ ತನ್ನಾ ಅವರಿಗೆ ಕನ್ನಡ ಚಿತ್ರರಂಗದ ಜೊತೆಯೂ ಆಪ್ತ ಒಡನಾಟವಿದೆ. ನೆನಪಿರಲಿ ಪ್ರೇಮ್ ನಾಯಕರಾಗಿ ನಟಿಸಿದ್ದ, 2011ರಲ್ಲಿ ತೆರೆಕಂಡ ‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಸಿನಿಮಾದಲ್ಲಿ ಕರಿಷ್ಮಾ ತನ್ನಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯ ಕನ್ನಡ ಪ್ರೇಕ್ಷಕರ ಮನಗೆದ್ದಿತ್ತು.

ಇದನ್ನೂ ಓದಿ: ಸಂಜಯ್ ಕಪೂರ್ ಆಸ್ತಿ ವಿವಾದ; ದೆಹಲಿ ಹೈಕೋರ್ಟ್​ನಿಂದ ಕರಿಷ್ಮಾ ಕಪೂರ್ ಮಕ್ಕಳಿಗೆ ಬಿಗ್ ರಿಲೀಫ್

ರಿಯಾಲಿಟಿ ಶೋಗಳ ಸ್ಟಾರ್

ಕರಿಷ್ಮಾ ತನ್ನಾ ಅವರು ಹಿಂದಿಯ ಪ್ರಖ್ಯಾತ ಧಾರಾವಾಹಿಗಳಾದ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಹಾಗೂ ‘ನಾಗಿನ್ 3’ ಮೂಲಕ ಮನೆಮಾತಾಗಿದ್ದಾರೆ. ಇದರೊಂದಿಗೆ ‘ಬಿಗ್ ಬಾಸ್ 8’ ರನ್ನರ್ ಅಪ್ ಆಗಿದ್ದ ಅವರು, ‘ಖತ್ರೋನ್ ಕೆ ಖಿಲಾಡಿ 10’ ರಿಯಾಲಿಟಿ ಶೋನ ವಿನ್ನರ್ ಕೂಡ ಆಗಿದ್ದಾರೆ. ಸಂಜು ಹಾಗೂ ಸೂರಜ್ ಪೇ ಮಂಗಲ್ ಭಾರಿ ಸಿನಿಮಾಗಳಲ್ಲೂ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2022ರಲ್ಲಿ ಉದ್ಯಮಿ ವರುಣ್ ಬಂಗೇರಾ ಅವರನ್ನು ಕರಿಷ್ಮಾ ಮದುವೆಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಹಾರದ ಮಾಜಿ ಸಿಎಂ ನಿತೀಶ್ ಕುಮಾರ್ ನಿವಾಸದ ಹೊರಗೆ ಭಾರಿ ಗುಂಡಿನ ದಾಳಿ: ಇಬ್ಬರು ಯುವಕರಿಗೆ ಗಂಭೀರ ಗಾಯ – Kannada News | Gunfire Near Nitish Kumar’s Residence Leaves Two Youths Critically Injured in Patna

ಪಾಟ್ನಾ, ಜುಲೈ 30: ಬಿಹಾರದ ರಾಜಧಾನಿ ಪಾಟ್ನಾ ಸಮೀಪದ ಭಕ್ತಿಯಾರ್‌ಪುರದಲ್ಲಿ ಹಾಡಹಗಲೇ ಭಾರಿ ಗುಂಡಿನ ದಾಳಿ(Firing) ನಡೆದಿದ್ದು, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದ ಮುಂಭಾಗದಲ್ಲೇ ಹಾಗೂ ಭಕ್ತಿಯಾರ್‌ಪುರ ಪೊಲೀಸ್ ಠಾಣೆಯಿಂದ ಕೇವಲ 50 ಮೀಟರ್ ಅಂತರದಲ್ಲಿ ಈ ಕೃತ್ಯ ನಡೆದಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾನಾಪೂರ, ದೇದಾರ್ ಗ್ರಾಮದ ನಿವಾಸಿಗಳಾದ ವಿಶಾಲ್ ಕುಮಾರ್ ಹಾಗೂ ಅಭಿಷೇಕ್ ಕುಮಾರ್ ಎಂಬ ಯುವಕರು ಗಂಗಾ ಘಾಟ್‌ನಲ್ಲಿ ಆರತಿ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದರು.

ನಿತೀಶ್ ಕುಮಾರ್ ಅವರ ನಿವಾಸದ ಬಳಿ ಮೊಂಚಾಗಿಯೇ ಸಂಚು ಹೂಡಿ ಕಾಯುತ್ತಿದ್ದ ಅಪರಿಚಿತ ದುಷ್ಕರ್ಮಿಗಳು, ಯುವಕರು ಹತ್ತಿರ ಬರುತ್ತಿದ್ದಂತೆ ದಿಢೀರ್ ಗುಂಡಿನ ಮಳೆ ಕರೆದಿದ್ದಾರೆ. ಈ ಭೀಕರ ದಾಳಿಯಲ್ಲಿ ವಿಶಾಲ್ ಅವರ ಬೆನ್ನಿಗೆ ಹಾಗೂ ಅಭಿಷೇಕ್ ಅವರ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ರಕ್ತಸ್ರಾವವಾಗುತ್ತಿದ್ದರೂ ಧೈರ್ಯ ಗೆಡದ ಯುವಕರು, ಬೈಕ್ ಬಿಟ್ಟು ತಾವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲುಪಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ಗಂಭೀರ ಸ್ಥಿತಿಯಲ್ಲಿದ್ದ ಅವರಿಬ್ಬರನ್ನು ತಕ್ಷಣವೇ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (PMCH) ರವಾನಿಸಲಾಗಿದೆ.

ವಿಐಪಿ ನಿವಾಸಕ್ಕೆ ಬಿಗಿ ಭದ್ರತೆ: ಮಾಜಿ ಸಿಎಂ ನಿವಾಸದ ಮುಂದೆಯೇ ಘಟನೆ ನಡೆದ ಹಿನ್ನೆಲೆಯಲ್ಲಿ ಇಡೀ ಪ್ರದೇಶದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಒಂದು ಖಾಲಿ ಶೆಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ಪಡೆಗಳನ್ನು ರಚಿಸಲಾಗಿದೆ.

ಮತ್ತಷ್ಟು ಓದಿ: ‘ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಅಮಿತ್ ಶಾ ಆದೇಶ’; ರಾಹುಲ್ ಗಾಂಧಿ ಆರೋಪಕ್ಕೆ ರಣರಂಗವಾದ ಸಂಸತ್

ಸ್ಥಳೀಯ ಶಾಸಕ ಅರುಣ್ ಕುಮಾರ್ ಶಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಈ ಗುಂಡಿನ ದಾಳಿಯ ಹಿಂದೆ ವೈಯಕ್ತಿಕ ದ್ವೇಷ ಅಥವಾ ಹಳೆಯ ವೈಷಮ್ಯ ಇರುವ ಶಂಕೆ ವ್ಯಕ್ತವಾಗಿದ್ದು, ರೌಡಿ ಶೀಟರ್‌ಗಳ ಕೈವಾಡದ ಕುರಿತೂ ತನಿಖೆ ನಡೆಸಲಾಗುತ್ತಿದೆ.

ವಿಐಪಿ ಪ್ರದೇಶ ಹಾಗೂ ಪೊಲೀಸ್ ಠಾಣೆಯ ತೀರ ಹತ್ತಿರದಲ್ಲೇ ಈ ರೀತಿ ಹಾಡಹಗಲೇ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆದಿರುವುದು ರಾಜ್ಯ ಸರ್ಕಾರದ ಭದ್ರತಾ ವ್ಯವಸ್ಥೆಯನ್ನು ಅಣಕಿಸುವಂತಿದ್ದು, ವಿಪಕ್ಷಗಳು ಬಿಹಾರದಲ್ಲಿ ‘ಅರಾಜಕತೆ’ ಹೆಚ್ಚಾಗಿದೆ ಎಂದು ಸರ್ಕಾರದ ವಿರುದ್ಧ ಹರಿದಾಯುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಕೈಗೆ ಗಾಯ ಮಾಡಿಕೊಂಡ ಸೊಸೆಗೆ ಅಡುಗೆ ಮಾಡಲು ಸಹಾಯ ಮಾಡಿದ ಮಾವ – Kannada News | Father in law kneads chapati dough for daughter in law who injured her hand.

ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳಿಗೆ ತಂದೆ ತಾಯಿಯಂತೆ (father- mother) ಪ್ರೀತಿಸುವ ಅತ್ತೆ ಮಾವ ಸಿಕ್ಕರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಇದೀಗ ಸೊಸೆಯೊಬ್ಬಳಿಗೆ (daughter in law) ತಂದೆಯಂತೆ ಪ್ರೀತಿ ಮಾಡುವ ಮಾವ ಸಿಕ್ಕಿದ್ದಾನೆ. ಹೌದು, ಕೈಗೆ ಗಾಯ ಮಾಡಿಕೊಂಡ ಸೊಸೆಯೊಬ್ಬಳು ಅಡುಗೆ ಮಾಡಲು ಕಷ್ಟ ಪಡುತ್ತಿದ್ದರೆ ಮಾವ ಆಕೆಗೆ ಸಹಾಯ ಮಾಡಿದ್ದಾನೆ. ಮಾವನೇ ಚಪಾತಿ ಹಿಟ್ಟು ನಾದುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮಾವನ ಒಳ್ಳೆಯ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ.

ಅಂಕಿತಾ ಶುಕ್ಲ (Ankita Shukla) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಗನೊಬ್ಬ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಮಾವ ಹಾಗೂ ಸೊಸೆಯ ಬಾಂಧವ್ಯವನ್ನು ಸೆರೆ ಹಿಡಿದಿದ್ದಾನೆ. ಸೊಸೆ ಕೈಗೆ ಗಾಯ ಮಾಡಿಕೊಂಡು ಕುಳಿತುಕೊಂಡಿದ್ದಾಳೆ. ಇತ್ತ ಮಾವ ಸೊಸೆಯ ಪಕ್ಕದಲ್ಲೇ ಕುಳಿತಿಕೊಂಡು ಚಪಾತಿ ಹಿಟ್ಟು ನಾದುವುದರಲ್ಲಿ ಬ್ಯುಸಿಯಾಗಿದ್ದಾನೆ. ತನ್ನ ಮಗ ವಿಡಿಯೋ ಮಾಡುವುದನ್ನು ಕಂಡು, ಅವಳು ಕೈಗೆ ಗಾಯ ಮಾಡಿಕೊಂಡಿದ್ದಾಳೆ. ಹೀಗಾಗಿ ಸೊಸೆಗೆ ಸಹಾಯ ಮಾಡುವುದು ಕುಟುಂಬ ಸದಸ್ಯರಾಗಿ ನಮ್ಮ ಕರ್ತವ್ಯ. ನಾವು ಒಬ್ಬರನ್ನೊಬ್ಬರು ಬೆಂಬಲಿಸದಿದ್ದರೆ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೇಗೆ ಇರುತ್ತದೆ ಎಂದು ಮಾವ ತನ್ನ ಮಗನಿಗೆ ಹೇಳುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಪ್ಪ ಎಲ್ಲಿ ಎಂದು ಕೇಳ್ಬೇಡ, ಅಮ್ಮನನ್ನ ಚೆನ್ನಾಗಿ ನೋಡಿಕೋ, ಕ್ಯಾನ್ಸರ್​ನಿಂದ ಕಣ್ಮುಚ್ಚುವ ಮುನ್ನ ಮಗನಿಗೆ ಧೈರ್ಯ ತುಂಬಿದ ತಂದೆ

ಈ ವಿಡಿಯೋ ಇದುವರೆಗೆ 4 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇಂತಹ ಮಾವನನ್ನು ಪಡೆದ ನೀನೇ ಪುಣ್ಯವಂತೆ ಎಂದಿದ್ದಾರೆ. ಮತ್ತೊಬ್ಬರು, ಎಲ್ಲರಿಗೂ ಇಂತಹ ಒಳ್ಳೆಯ ಮಾವ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮಾವನು ಒಬ್ಬ ತಂದೆಯಾಗಿರುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಶದಲ್ಲೇ ಮೊದಲ ಬಾರಿಗೆ 138 ರೈತರಿಗೆ ‘ಕೃಷಿ ಋಷಿ’ ಪ್ರಮಾಣಪತ್ರ; 7 ಗಣ್ಯರಿಗೆ ಗೌರವ ಡಾಕ್ಟರೇಟ್ – Kannada News | SSSIHE Muddenahalli Honors 138 Farmers with ‘Krushi Rishi’ for Traditional Farming Expertise

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ

ಮುದ್ದೇನಹಳ್ಳಿ, ಜು.30: ದೇಶದಲ್ಲೇ ಮೊದಲ ಬಾರಿಗೆ 138 ರೈತರಿಗೆ ವಿಶ್ವವಿದ್ಯಾಲಯದ ವತಿಯಿಂದ ‘ಕೃಷಿ ಋಷಿ’ ಪ್ರಮಾಣಪತ್ರ ಪ್ರದಾನ ಮಾಡುವ ಮೂಲಕ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ (SSSIHE) 5ನೇ ಘಟಿಕೋತ್ಸವವು ವಿಶಿಷ್ಟ ಮೈಲಿಗಲ್ಲು ಸಾಧಿಸಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಗ್ರಾಮದ ಪ್ರೇಮಾಮೃತಂ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 119 ವಿದ್ಯಾರ್ಥಿಗಳಿಗೆ ಪದವಿ, 24 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ವಿವಿಧ ಕ್ಷೇತ್ರಗಳ 7 ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಚಿಕ್ಕಮಗಳೂರು, ತುಮಕೂರು (ತಿಪಟೂರು) ಹಾಗೂ ಹಾಸನ (ಅರಸೀಕೆರೆ) ಭಾಗಗಳ 138 ರೈತರ ಪರಂಪರಾಗತ ಕೃಷಿ ಜ್ಞಾನ ಮತ್ತು ನೈಸರ್ಗಿಕ ಕೃಷಿ ಕೊಡುಗೆಯನ್ನು ಗುರುತಿಸಿ ‘ಕೃಷಿ ಋಷಿ’ ಪ್ರಮಾಣಪತ್ರ ವಿತರಿಸಲಾಯಿತು.

ವಿಶೇಷ ಸಾಧಕರಿಗೆ ಗೌರವ ಡಾಕ್ಟರೇಟ್:

ಪದ್ಮವಿಭೂಷಣ ಪುರಸ್ಕೃತ ವಿಜ್ಞಾನಿ ಡಾ. ಆರ್.ಎ. ಮಶೇಲ್ಕರ್

ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್

ತಾಳಯೋಗಿ ಪಂಡಿತ್ ಸುರೇಶ್ ತಳವಳ್ಕರ್

ಯುಪಿ ಸಿಎಂ ಸಲಹೆಗಾರ ಡಾ. ಜಿ.ವಿ. ಸಿಂಗ್
(ಅನುಪಸ್ಥಿತಿಯಲ್ಲಿ: ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್, ಡಾ. ಸೌಮ್ಯ ಸ್ವಾಮಿನಾಥನ್, ಡಾ. ಇಂದುಮತಿ ರಾವ್)

2019ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವು ಶಿಕ್ಷಣ, ವಸತಿ ಮತ್ತು ಆಹಾರವನ್ನು ಉಚಿತವಾಗಿ ಒದಗಿಸುತ್ತಿದೆ. ಈ ಬಾರಿ ಪದವಿ ಪಡೆದ 119 ವಿದ್ಯಾರ್ಥಿಗಳಲ್ಲಿ ಶೇ.60ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.85ರಷ್ಟು ಮಂದಿ BPL ಕುಟುಂಬ ಹಿನ್ನೆಲೆಯವರಾಗಿದ್ದಾರೆ. ರೈತರಿಗೆ ಮಣ್ಣಿನ ಆರೋಗ್ಯ ಹಾಗೂ ಸುಸ್ಥಿರ ಕೃಷಿ ಕುರಿತು ಮಾಹಿತಿ ನೀಡುವ ‘ಉರ್ವರಾ’ ಶೈಕ್ಷಣಿಕ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ: ಸ್ವಕ್ಷೇತ್ರದಲ್ಲಿ ಸೂರ್ಯ, ಜೊತೆಗೆ ಬುಧ, ಕೇತು ಯೋಗ… ಬದಲಾಗದಲಿದೆ ಈ ರಾಶಿಯವರ ಭಾಗ್ಯ…

“ಪರಂಪರಾಗತ ಕೃಷಿ ಜ್ಞಾನಕ್ಕೆ ಶೈಕ್ಷಣಿಕ ವಲಯದಲ್ಲಿ ಮನ್ನಣೆ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ. ಮುಂದಿನ ಘಟಿಕೋತ್ಸವದ ವೇಳೆಗೆ ಕನಿಷ್ಠ 2,000 ರೈತರಿಗೆ ‘ಕೃಷಿ ಋಷಿ’ ಪ್ರಮಾಣಪತ್ರ ನೀಡುವ ಗುರಿ ಹೊಂದಿದ್ದೇವೆ.” ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, “ವಿಕಸಿತ ಭಾರತದ ನಿರ್ಮಾಣದಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು. ಸತ್ಯ ಸಾಯಿ ವಿಶ್ವವಿದ್ಯಾಲಯದ ಈ ಉಚಿತ ಶಿಕ್ಷಣ ಸೇವೆ ಹಾಗೂ ರೈತರನ್ನು ಗೌರವಿಸುವ ಕಲ್ಪನೆ ಶ್ಲಾಘನೀಯ.” ಎಂದು ಹೇಳಿದರು.

ಇನ್ನು ಗುರುಪೂರ್ಣಿಮೆ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮಾಮೃತ ಪ್ರಕಾಶನದ ವತಿಯಿಂದ 19 ಭಾಷೆಗಳಲ್ಲಿ 40 ಪುಸ್ತಕಗಳು ಹಾಗೂ ಆಡಿಯೋಬುಕ್‌ಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಗುರು-ಶಿಷ್ಯರ ಸಂಬಂಧವನ್ನು ಸಾರುವ, ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಪ್ರಸ್ತುತಪಡಿಸಿದ ‘ಸ್ಫೂರ್ತಿಕಿರಣ’ ವಿಶೇಷ ಸಂಗೀತ ವಿಡಿಯೊ ಬಿಡುಗಡೆಯಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version