ಕನ್ನಡದಲ್ಲೂ ನಟಿಸಿದ ಕರಿಷ್ಮಾ ತನ್ನಾ ಸಿಹಿ ಸುದ್ದಿ; ಗುರು ಪೂರ್ಣಿಮೆಯಂದು ಹೆಣ್ಣು ಮಗು ಜನನ – Kannada News | Kannada Actress Karishma Tanna And Varun Bangera Welcome Baby Boy On Guru Purnima

ಕನ್ನಡದ ‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರದ ನಟಿ ಕರಿಷ್ಮಾ ತನ್ನಾ ಹಾಗೂ ಅವರ ಪತಿ, ಉದ್ಯಮಿ ವರುಣ್ ಬಂಗೇರಾ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಬುಧವಾರದಂದು ಸೋಶಿಯಲ್ ಮೀಡಿಯಾ ಮೂಲಕ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ಜುಲೈ 29ರ ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ತಮಗೆ ಗಂಡು ಮಗು ಜನಿಸಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಜನನದ ಪೋಸ್ಟರ್ ಹಂಚಿಕೊಂಡಿರುವ ಕರಿಷ್ಮಾ, ‘ಗಂಡು ಮಗು. ಜುಲೈ 29, 2026. ಗುರು ಪೂರ್ಣಿಮೆಯ ಪವಿತ್ರ ದಿನದಂದು ನಮ್ಮ ಬದುಕಿನ ಅತ್ಯಂತ ದೊಡ್ಡ ಆಶೀರ್ವಾದ ನಮ್ಮ ಕೈಸೇರಿದೆ. ಪುಟಾಣಿ ಕಂದ ನಮ್ಮ ಜಗತ್ತಿಗೆ ನಿನಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. ಈ ದಂಪತಿಗೆ ಸೋನು ಸೂದ್, ಖುಷಿ ಕಪೂರ್, ರಿಚಾ ಚಡ್ಡಾ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

ಕನ್ನಡ ಸಿನಿಮಾದ ಕನೆಕ್ಷನ್

ಹಿಂದಿ ಕಿರುತೆರೆ ಹಾಗೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ಕರಿಷ್ಮಾ ತನ್ನಾ ಅವರಿಗೆ ಕನ್ನಡ ಚಿತ್ರರಂಗದ ಜೊತೆಯೂ ಆಪ್ತ ಒಡನಾಟವಿದೆ. ನೆನಪಿರಲಿ ಪ್ರೇಮ್ ನಾಯಕರಾಗಿ ನಟಿಸಿದ್ದ, 2011ರಲ್ಲಿ ತೆರೆಕಂಡ ‘ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಸಿನಿಮಾದಲ್ಲಿ ಕರಿಷ್ಮಾ ತನ್ನಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯ ಕನ್ನಡ ಪ್ರೇಕ್ಷಕರ ಮನಗೆದ್ದಿತ್ತು.

ಇದನ್ನೂ ಓದಿ: ಸಂಜಯ್ ಕಪೂರ್ ಆಸ್ತಿ ವಿವಾದ; ದೆಹಲಿ ಹೈಕೋರ್ಟ್​ನಿಂದ ಕರಿಷ್ಮಾ ಕಪೂರ್ ಮಕ್ಕಳಿಗೆ ಬಿಗ್ ರಿಲೀಫ್

ರಿಯಾಲಿಟಿ ಶೋಗಳ ಸ್ಟಾರ್

ಕರಿಷ್ಮಾ ತನ್ನಾ ಅವರು ಹಿಂದಿಯ ಪ್ರಖ್ಯಾತ ಧಾರಾವಾಹಿಗಳಾದ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಹಾಗೂ ‘ನಾಗಿನ್ 3’ ಮೂಲಕ ಮನೆಮಾತಾಗಿದ್ದಾರೆ. ಇದರೊಂದಿಗೆ ‘ಬಿಗ್ ಬಾಸ್ 8’ ರನ್ನರ್ ಅಪ್ ಆಗಿದ್ದ ಅವರು, ‘ಖತ್ರೋನ್ ಕೆ ಖಿಲಾಡಿ 10’ ರಿಯಾಲಿಟಿ ಶೋನ ವಿನ್ನರ್ ಕೂಡ ಆಗಿದ್ದಾರೆ. ಸಂಜು ಹಾಗೂ ಸೂರಜ್ ಪೇ ಮಂಗಲ್ ಭಾರಿ ಸಿನಿಮಾಗಳಲ್ಲೂ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2022ರಲ್ಲಿ ಉದ್ಯಮಿ ವರುಣ್ ಬಂಗೇರಾ ಅವರನ್ನು ಕರಿಷ್ಮಾ ಮದುವೆಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *