ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಮಲ್ಲಿಕಾರ್ಜುನ ಖರ್ಗೆ – Kannada News | AICC President Mallikarjun kharge asks to Siddaramaiah And DK Shivakumar to development In North Karnataka

ಕಲಬುರಗಿ, (ಜನವರಿ 12): ಉತ್ತರ ಕರ್ನಾಟದ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಅವರು ತೀಕ್ಷ್ಣವಾಗಿ ಟಾಂಗ್ ಕೊಟ್ಟಿದ್ದಾರೆ. ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಖರ್ಗೆ, ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿ.ಕೆ.ಶಿವಕುಮಾರ್​ ಹೇಳುತ್ತಾರೆ. ನೀವು ಇಲ್ಲಿ ಹುಟ್ಟುವುದು ಬೇಡ. ನಾವು ಅಲ್ಲಿ ಹುಟ್ಟುವುದು ಬೇಡ. ನಿಮ್ಮ ಮೈಸೂರು, ಬೆಂಗಳೂರಿನ ರೀತಿ ಅಭಿವೃದ್ಧಿ ಮಾಡಿ ಸಾಕು. ಮುಖ್ಯಮಂತ್ರಿ ಹಾಗೂ ಡಿಸಿಎಂ ಈ ಭಾಗದ ಬಗ್ಗೆ ಗಮನ ಕೊಡಿ. ದೆಹಲಿಯಿಂದ ಬಂದು ನಾನು ಜನರಿಗೆ ಪ್ರಚೋದನೆ ಕೊಡ್ತಿಲ್ಲ. ಅದರ ಬದಲಾಗಿ ನಿಮ್ಮ ಭಾಗದಷ್ಟೇ ನಮ್ಮ ಭಾಗವನ್ನು ಅಭಿವೃದ್ಧಿ ಮಾಡಿ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs UPW Live Score, WPL 2026: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ – Kannada News | RCB vs UPW Live Score today WPL 2026 match scorecard, Women’s Premier League Royal Challengers Bengaluru vs UP Warriorz Match 05 In Kannada

ಮಹಿಳಾ ಪ್ರೀಮಿಯರ್ ಲೀಗ್ 2026 ರ ಐದನೇ ಪಂದ್ಯವು ಜನವರಿ 12, ಸೋಮವಾರ ನವಿ ಮುಂಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವೆ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಗೆಲುವಿನ ಗುರಿಯಲ್ಲಿದ್ದರೆ, ಯುಪಿ ವಾರಿಯರ್ಸ್​ ಮೊದಲ ಗೆಲುವಿಗೆ ಎದುರು ನೋಡುತ್ತಿದೆ.

Source link

RCB vs UPW Live Score, WPL 2026: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ – Kannada News | Royal challengers bengaluru vs up warriorz live score wpl 2026 match scorecard online at dr dy patil sports academy navi mumbai in kannada

ಮಹಿಳಾ ಪ್ರೀಮಿಯರ್ ಲೀಗ್ 2026 ರ ಐದನೇ ಪಂದ್ಯವು ಜನವರಿ 12, ಸೋಮವಾರ ನವಿ ಮುಂಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವೆ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಗೆಲುವಿನ ಗುರಿಯಲ್ಲಿದ್ದರೆ, ಯುಪಿ ವಾರಿಯರ್ಸ್​ ಮೊದಲ ಗೆಲುವಿಗೆ ಎದುರು ನೋಡುತ್ತಿದೆ.

Source link

ಮುಂದಿನ ವರ್ಷ ದೆಹಲಿಗೆ ಟ್ರಂಪ್ ಭೇಟಿ ಸಾಧ್ಯತೆ, ಭಾರತ ನಮ್ಮ ಅತ್ಯಗತ್ಯ ಪಾಲುದಾರ; ಅಮೆರಿಕದ ರಾಯಭಾರಿ ಹೇಳಿದ್ದೇನು? – Kannada News | Donald Trump and PM Modi friendship is real India essential partner says US ambassador

ನವದೆಹಲಿ, ಜನವರಿ 12: ಭಾರತ ಮತ್ತು ಅಮೆರಿಕದ ನಡುವೆ ಭಾರತಕ್ಕೆ ನಿಯೋಜನೆಯಾಗಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ನೀಡಿರುವ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. “ಭಾರತ ಇಂದಿಗೂ ಅಮೆರಿಕಕ್ಕೆ ಅತ್ಯಗತ್ಯ ಪಾಲುದಾರನಾಗಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನಡುವಿನ ಸ್ನೇಹ ತುಂಬಾ ನೈಜವಾದುದು. ಭಾರತಕ್ಕಿಂತ ಹೆಚ್ಚು ಅಗತ್ಯ ಪಾಲುದಾರ ಅಮೆರಿಕಕ್ಕೆ ಬೇರಾವುದೂ ಇಲ್ಲ” ಎಂದು ಗೋರ್ ಹೇಳಿದ್ದಾರೆ.

“ಭಾರತದಂತೆ ಬೇರೆ ಯಾವುದೇ ರಾಷ್ಟ್ರ ಅಮೆರಿಕಕ್ಕೆ ಅತ್ಯಗತ್ಯವಾಗಿಲ್ಲ. ಇಂದಿನಿಂದ (ಜನವರಿ 12) ಅಮೆರಿಕ ಮತ್ತು ಭಾರತ ತಮ್ಮ ಮುಂದಿನ ಸುತ್ತಿನ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಪುನರಾರಂಭಿಸಲಿವೆ” ಎಂದು ಅವರು ಘೋಷಿಸಿದರು. ಅಮೆರಿಕ ರಾಯಭಾರ ಕಚೇರಿಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿಯೂ ಆಗಿರುವ ಗೋರ್, ಮುಂದಿನ ವರ್ಷದ ವೇಳೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು

ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಗೋರ್, ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸ್ನೇಹ ಅತ್ಯಂತ ಸತ್ಯವಾದುದು. ನಿಜವಾದ ಸ್ನೇಹಿತರು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಅವರು ಹೇಳಿದರು.

“ಭಾರತ ವಿಶ್ವದ ಅತಿದೊಡ್ಡ ರಾಷ್ಟ್ರ. ಆದ್ದರಿಂದ ಇದನ್ನು ಅಂತಿಮ ಗೆರೆಯನ್ನು ದಾಟಿಸುವುದು ಸುಲಭದ ಕೆಲಸವಲ್ಲ, ಆದರೆ ನಾವು ಅಲ್ಲಿಗೆ ತಲುಪಲು ನಿರ್ಧರಿಸಿದ್ದೇವೆ” ಎಂದು ಗೋರ್ ಹೇಳಿದ್ದಾರೆ. “ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ. ಪ್ರಧಾನಿ ಮೋದಿ ಅವರೊಂದಿಗಿನ ಟ್ರಂಪ್ ಸ್ನೇಹವು ಅತ್ಯಂತ ನಿಜವೆಂದು ನಾನು ದೃಢೀಕರಿಸಬಲ್ಲೆ” ಎಂದು ಗೋರ್ ಒತ್ತಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ – Kannada News | Kodi Mutt seer’s prediction on Karnataka CM change: Will Ugadi decide Siddaramaiah’s future?

ರಾಯಚೂರು, ಜನವರಿ 12: ಸಂಕ್ರಾಂತಿ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ಸಂಬಂಧ ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ, ಯುಗಾದಿ ಅಲ್ಲ, ಬಜೆಟ್‌ವರೆಗೂ ಏನೂ ಮಾಡಲಾಗಲ್ಲ ಎಂದು ಕಾಗಿನೆಲೆ ಕನಕಪೀಠದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಜ್ಯೋತಿಷ್ಯದಲ್ಲಿ ನಂಬುವ ಜನ ಸಂಕ್ರಾಂತಿ, ಯುಗಾದಿ ಅಂತಾ ಹೇಳ್ತಾರೆ. ಸಂಕ್ರಾಂತಿಯಲ್ಲಿ ಸೂರ್ಯ, ಯುಗಾದಿಯಲ್ಲಿ ಚಂದ್ರನನ್ನು ಹಿಡಿದು ಜ್ಯೋತಿಷ್ಯ ಹೇಳುತ್ತಾರೆ. ಯುಗಾದಿ ಹಬ್ಬ ಮುಗಿಯುವವರೆಗೂ ಸಿದ್ದರಾಮಯ್ಯ ಇರಲಿದ್ದು, ಮುಂದಿನದು ಯುಗಾದಿ ನೋಡಿಕೊಂಡು ಹೇಳಬೇಕು ಎಂದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಡದಲ್ಲಿರುವ ವಿಚಾರವಾಗಿಯೂ ಮಾತನಾಡಿದ ಅವರು, ಆತ ಒಳ್ಳೆಯ ಕಾರ್ಯಕರ್ತ, ಸಂಘಟನೆ ಮನುಷ್ಯ, ಹೋರಾಟಗಾರ. ಆದ್ರೆ ಇಲ್ಲಿ ಸಂಘಟನೆ ಪ್ರಶ್ನೆ ಬರುವುದಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡ್ತಾರಾ? ಇಲ್ಲವಾ? ಅನ್ನೋದನ್ನ ನೋಡಿ ಹೇಳ್ತೇನೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರಶ್ರೀ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡರೆ ಆತಂಕ ಬೇಡ, ತಕ್ಷಣ ಹೀಗೆ ಮಾಡಿ ಸಾಕು – Kannada News | Try these remedies if fish bone stuck in your throat

ಮೀನಿನಲ್ಲಿ (fish) ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ವಿಟಮಿನ್ ಬಿ2, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಅಯೋಡಿನ್, ಪ್ರೋಟೀನ್ ಇದ್ದು, ಇವು ಮೆದುಳು, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ತುಂಬಾನೇ ಸಹಕಾರಿ. ಇದೇ ಕಾರಣಕ್ಕೆ ನಾನ್‌ವೆಜ್‌ ಪ್ರಿಯರು ಹೆಚ್ಚು ಮೀನು ಸೇವನೆ ಮಾಡುತ್ತಾರೆ. ಆದ್ರೆ ಕೆಲವೊಂದು ಬಾರಿ ಮೀನು ತಿನ್ನುವಾಗ ಅದರ ಮುಳ್ಳು ಗಂಟಲಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೌದು ಈ ಸಣ್ಣ ಮುಳ್ಳುಗಳು ಗಂಟಲಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಆತಂಕ ಪಡುವ ಬದಲು, ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಮೀನಿನ ಮುಳ್ಳನ್ನು ಬಲು ಸುಲಭವಾಗಿ ತೆಗೆದುಹಾಕಬಹುದು.

ಗಂಟಲಲ್ಲಿ ಸಿಲುಕಿದ ಮೀನಿನ ಮುಳ್ಳನ್ನು ತೆಗೆದು ಹಾಕಲು ಸರಳ ಪರಿಹಾರ:

ಜೋರಾಗಿ ಕೆಮ್ಮಲು ಪ್ರಯತ್ನಿಸಿ: ಕೆಲವೊಮ್ಮೆ ಮೀನಿನ ಮುಳ್ಳು  ಗಂಟಲಿನ ಹಿಂಭಾಗದಲ್ಲಿ ಅಥವಾ ಟಾನ್ಸಿಲ್‌ಗಳ ಬಳಿ ಸಿಲುಕಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಲಘುವಾಗಿ ಅಲ್ಲ, ಜೋರಾಗಿ ಕೆಮ್ಮಲು ಪ್ರಯತ್ನಿಸಿ. ಕೆಮ್ಮುವ ಬಲವು ಮುಳ್ಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

ಒಂದು ತುಂಡು ಬ್ರೆಡ್ ಅಥವಾ ಅನ್ನವನ್ನು ನುಂಗಿ: ಇದನ್ನು ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಪರಿಗಣಿಸಲಾಗಿದೆ. ಗಂಟಲಲ್ಲಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ  ಒಂದು ಸಣ್ಣ ತುಂಡು ಬ್ರೆಡ್ ಅಥವಾ ಒಂದು ತುತ್ತು ಅನ್ನವನ್ನು ಹೆಚ್ಚು ಅಗಿಯದೆ ನುಂಗಿ. ಹೀಗೆ ಮಾಡುವುದರಿಂದ ಅನ್ನದೊಂದಿಗೆ ಗಂಟಲಲ್ಲಿ ಸಿಲುಕಿದ ಮುಳ್ಳು ಸಹ ಜಾರಿ ಹೋಗುತ್ತದೆ.

ಮಾಗಿದ ಬಾಳೆಹಣ್ಣುಗಳನ್ನು ತಿನ್ನಿರಿ: ನಿಮ್ಮ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿಕೊಂಡರೆ, ಮಾಗಿದ ಬಾಳೆಹಣ್ಣನ್ನು ತಿನ್ನಲು ಪ್ರಯತ್ನಿಸಿ. ಬಾಳೆಹಣ್ಣಿನ ದೊಡ್ಡ ತುಂಡನ್ನು ಕೆಲವು ಸೆಕೆಂಡುಗಳ ಕಾಲ ಬಾಯಿಯಲ್ಲಿ ಹಿಡಿದುಕೊಳ್ಳಿ, ಇದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನೀವು ಬಾಳೆಹಣ್ಣನ್ನು ನುಂಗಿದಾಗ, ಮುಳ್ಳು ಬಾಳೆಹಣ್ಣಿನೊಂದಿಗೆ ಜಾರಿ ಹೋಗುತ್ತದೆ.

ಬೆಚ್ಚಗಿನ ನೀರು ಕುಡಿಯಿರಿ: ಉಗುರು ಬೆಚ್ಚಗಿನ ನೀರು ಕುಡಿಯಿರಿ. ಸ್ನಾಯುಗಳಲ್ಲಿ ಆಳವಾಗಿ ಸಿಲುಕಿಕೊಂಡಿರುವ ಸಣ್ಣ ಮುಳ್ಳನ್ನು ಸಹ ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತದೆ, ಏಕೆಂದರೆ ಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ ನೀರು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದು ಮುಳ್ಳು ಕೆಳಕ್ಕೆ ಜಾರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ನೆಲ ಒರೆಸುವ ನೀರಿಗೆ ಎರಡು ವಸ್ತುಗಳನ್ನು ಸೇರಿಸಿ

ಜೇನುತುಪ್ಪ ಸೇವಿಸಿ: ಜೇನುತುಪ್ಪವು ನೈಸರ್ಗಿಕ ಲೂಬ್ರಿಕಂಟ್ ಅಂಶವನ್ನು ಹೊಂದಿದೆ. ಒಂದು ಅಥವಾ ಎರಡು ಟೀ ಚಮಚ ಜೇನುತುಪ್ಪವನ್ನು ನುಂಗುವುದರಿಂದ  ಗಂಟಲಲ್ಲಿ ಸಿಲುಕಿದ ಮುಳ್ಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಜೇನುತುಪ್ಪದ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಗಂಟಲು ನೋವು, ನೋವು ಮತ್ತು ಸೋಂಕುಗಳಿಂದ ಪರಿಹಾರವನ್ನು ನೀಡುತ್ತದೆ.

ಕಾರ್ಬೊನೇಟೆಡ್ ಪಾನೀಯಗಳನ್ನು ಪ್ರಯತ್ನಿಸಿ: ಕೆಲವೊಮ್ಮೆ ಕೋಕ್ ಅಥವಾ ಪೆಪ್ಸಿಯಂತಹ ತಂಪು ಪಾನೀಯಗಳು ಸಹ ಸಹಾಯ ಮಾಡಬಹುದು. ಈ ಪಾನೀಯಗಳ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲೀಯ ಸ್ವಭಾವವು ಗಂಟಲಲ್ಲಿ ಸಿಲುಕಿದ ಮುಳ್ಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಈ ಎಲ್ಲಾ ಸಲಹೆಗಳನ್ನು ಪಾಲಿಸಿದ ಹೊರತಾಗಿಯೂ ಮುಳ್ಳು ಗಂಟಲಲ್ಲಿ ಹಾಗೆಯೇ ಅಂಟಿಕೊಂಡಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಇಲ್ಲದಿದ್ದರೆ ನಿಮಗೆ ಸೋಂಕು ತಗುಲಬಹುದು. ಮತ್ತು ಗಂಟಲು ನೋವು, ಊತ, ಸೋಂಕು ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಹದಲ್ಲಿರುವ ಮಚ್ಚೆಗಳಲ್ಲಿ ಈ ಬದಲಾವಣೆ ಆದ್ರೆ ನಿರ್ಲಕ್ಷ್ಯ ಮಾಡಬೇಡಿ – Kannada News | New Moles: Check Causes & Risks

ದೇಹದಲ್ಲಿ ಮಚ್ಚೆಗಳು ಹೆಚ್ಚಾಗಲು ಕಾರಣImage Credit source: Getty Images

ದೇಹದ ಮೇಲೆ ಹುಟ್ಟುಮಚ್ಚೆಗಳು (Moles) ಇರುವುದು ಸಾಮಾನ್ಯ. ಕೆಲವರಿಗೆ ಅವು ಸೌಂದರ್ಯದ ಪ್ರತಿಕವಾಗಿರಬಹುದು, ಇನ್ನು ಕೆಲವರಿಗೆ ಅಸಹ್ಯ ಎನಿಸಿರಬಹುದು. ಆದರೆ ಹೊಸ ಮಚ್ಚೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಅಥವಾ ಹುಟ್ಟಿನಿಂದ ಬಂದ ಮಚ್ಛೆಗಳು ಗಾತ್ರದಲ್ಲಿ ದೊಡ್ಡದಾದಾಗ ಭಯವಾಗುತ್ತದೆ. ಇದು ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದೇ ಎಂದು ಆಶ್ಚರ್ಯವಾಗುತ್ತದೆ. ಆದರೆ ಮಚ್ಚೆಗಳು ಬೆಳೆಯುವುದಕ್ಕೆ ಕಾರಣವೇನು, ಯಾವ ಸಮಯದಲ್ಲಿ ವೈದ್ಯರ ಸಂಪರ್ಕ ಮಾಡಬೇಕು ಎಂದು ಎಂದಾದರೂ ಯೋಚಿಸಿದ್ದೀರಾ… ಕೆಲವೊಮ್ಮೆ ಚಿಕ್ಕ ಮಚ್ಚೆಗಳಿಂದ ಏನಾಗುತ್ತದೆ ಎಂದು ನಿರ್ಲಕ್ಷ್ಯ ಮಾಡುತ್ತೇವೆ. ಇಂತಹ ಅಸಡ್ಡೆಯೇ ಮುಂದೊಂದು ದಿನ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಮಚ್ಚೆ ಎಂದರೇನು?

ನಮ್ಮ ಚರ್ಮದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯ ಇರುವುದರಿಂದ ಮಚ್ಚೆಗಳು ರೂಪುಗೊಳ್ಳುತ್ತವೆ. ಚರ್ಮದ ಮೇಲಿನ ಮೆಲನೋಸೈಟ್ಗಳು ಎಂಬ ಜೀವಕೋಶಗಳು ಒಂದೇ ಸ್ಥಳದಲ್ಲಿ ಒಟ್ಟುಗೂಡಿದಾಗ ಮತ್ತು ಅತಿಯಾದ ವರ್ಣದ್ರವ್ಯವನ್ನು ಉತ್ಪಾದಿಸಿದಾಗ, ಅದು ಸಣ್ಣ ಚುಕ್ಕೆಯಂತೆ ಕಾಣುತ್ತದೆ. ಇವು ಕಪ್ಪು, ಕಂದು, ತಿಳಿ ಗುಲಾಬಿ ಅಥವಾ ನೀಲಿ ಬಣ್ಣದ್ದಾಗಿರಬಹುದು.

ದೇಹದಲ್ಲಿ ಮಚ್ಚೆಗಳು ಹೆಚ್ಚಾಗಲು ಕಾರಣವೇನು?

  • ಒಬ್ಬ ವ್ಯಕ್ತಿಯ ದೇಹದ ಮೇಲೆ ಸರಾಸರಿ 10 ರಿಂದ 40 ಮಚ್ಚೆಗಳು ಇರುವುದು ಸಾಮಾನ್ಯ. ಅದಕ್ಕಿಂತ ಜಾಸ್ತಿ ಇದ್ದಲ್ಲಿ ನಿರ್ಲಕ್ಸ್ಯ ಮಾಡಬಾರದು.
  • ಕುಟುಂಬದ ಸದಸ್ಯರಲ್ಲಿ ಹೆಚ್ಚಿನ ಮಚ್ಚೆಗಳಿದ್ದರೆ, ಅದು ಮುಂದಿನ ಪೀಳಿಗೆಗೆ ಹರಡುವ ಸಾಧ್ಯತೆ ಇರುತ್ತದೆ.
  • ಪ್ರೌಢಾವಸ್ಥೆ ಅಥವಾ ಗರ್ಭಾವಸ್ಥೆಯಲ್ಲಿ ಸಂಭವಿಸುವ ಹಾರ್ಮೋನುಗಳಲ್ಲಿನ ಬದಲಾವಣೆಗಳು ಹೊಸ ಮಚ್ಚೆಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು.
  • ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಮೆಲನಿನ್ ಉತ್ಪಾದನೆಯನ್ನು ವೇಗಗೊಳಿಸುತ್ತವೆ. ಅದಕ್ಕಾಗಿಯೇ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ದೇಹದ ಭಾಗಗಳಲ್ಲಿ ಮಚ್ಚೆಗಳು ಹೆಚ್ಚಾಗಿ ಕಂಡುಬರುತ್ತವೆ.
  • ವಯಸ್ಸು ಹೆಚ್ಚಾದಂತೆ, ಚರ್ಮದಲ್ಲಿ ಆಗುವಂತಹ ಬದಲಾವಣೆಗಳು ಮಚ್ಚೆಗಳ ಹೆಚ್ಚಳಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವವರಿಗೆ ಯಶಸ್ಸು ಖಂಡಿತಾ!

ಮಚ್ಚೆಗಳು ಅಪಾಯಕಾರಿಯಾಗುವುದು ಯಾವಾಗ?

  • ಹೆಚ್ಚಿನ ಮಚ್ಚೆಗಳು ನಿರುಪದ್ರವಿಗಳು. ಆದರೆ ಮಚ್ಚೆ ಇದ್ದಕ್ಕಿದ್ದಂತೆ ಗಾತ್ರದಲ್ಲಿ ಹೆಚ್ಚಾದರೆ ವೈದ್ಯರ ಸಂಪರ್ಕ ಮಾಡಬೇಕು.
  • ಒಂದು ಮಚ್ಚೆಯಲ್ಲಿ ಎರಡು ಅಥವಾ ಮೂರು ಬಣ್ಣಗಳು ಕಾಣಿಸಿಕೊಂಡರೆ ಅಥವಾ ಅದು ಗಾಢ ಬಣ್ಣಕ್ಕೆ ತಿರುಗಿದರೆ.
  • ಮಚ್ಚೆಯ ಸ್ಥಳದಲ್ಲಿ ನಿರಂತರ ತುರಿಕೆ ಅಥವಾ ನೋವು ಇದ್ದರೆ.
  • ಮಚ್ಚೆ ಯಾವುದೇ ಗಾಯವಿಲ್ಲದೆ ರಕ್ತಸ್ರಾವವಾಗಿದ್ದರೆ ಅಥವಾ ಸೋರುತ್ತಿದ್ದರೆ ನಿರ್ಲಕ್ಷ್ಯ ಮಾಡಬಾರದು.

ಅಂತಹ ಬದಲಾವಣೆಗಳು ಚರ್ಮದ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳಾಗಿರಬಹುದು. ಆದ್ದರಿಂದ, ಅವುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:09 pm, Mon, 12 January 26

Source link

ಮೊಮ್ಮಗನ ಎದುರಲ್ಲೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಸಂಬಂಧಿ? – Kannada News | Nelamangala Axe Murder: Elderly Woman Hacked to Death in Kuduragere

ನೆಲಮಂಗಲ, ಜನವರಿ 12: ಬೆಂಗಳೂರು ಉತ್ತರ ತಾಲೂಕಿನ ಕುದುರಗೆರೆ ಗ್ರಾಮದ ನಡು ರಸ್ತೆಯಲ್ಲಿ ಇಂದು ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯ (old woman) ಬರ್ಬರವಾಗಿ ಹತ್ಯೆ (murder) ಮಾಡಿರುವ ಘಟನೆ ನಡೆದಿದೆ. ದ್ರಾಕ್ಷಾಣಮ್ಮ(55) ಕೊಲೆಯಾದ ವೃದ್ಧೆ. ಮೊಮ್ಮಗನ ಮುಂದೆಯೇ ಅಜ್ಜಿಯನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಂಬಂಧಿಯಿಂದಲೇ ಕೊಲೆ ಶಂಕೆ 

ಇನ್ನು ಕೊಲೆಯಾದ ದ್ರಾಕ್ಷಾಣಮ್ಮ ಅವರ ಪತಿ ನಾಗರಾಜು 8 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಮೊಮ್ಮಗನನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಯಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಸಕ್ಕರೆ ಕಾರ್ಖಾನೆ ಕ್ರಷಿಂಗ್​ ಬೆಲ್ಟ್​ನಲ್ಲಿ ಸಿಲುಕಿ ಕಾರ್ಮಿಕ ಸಾವು

ಸಕ್ಕರೆ ಕಾರ್ಖಾನೆ ಕ್ರಷಿಂಗ್​ ಬೆಲ್ಟ್​ನಲ್ಲಿ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಅಮ್ಮಿನಭಾವಿ ಗ್ರಾಮದ ಕಾರ್ಮಿಕ ಸಚಿನ್ ದ್ಯಾಮಣ್ಣಿ(36) ಮೃತ ಕಾರ್ಮಿಕ.

ಇದನ್ನೂ ಓದಿ: ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು

ಕ್ರಷಿಂಗ್​ ಬೆಲ್ಟ್​ನಲ್ಲಿ ಸುಣ್ಣ ಹಾಕುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. 10 ದಿನದ ಹಿಂದೆ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು. ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ಕಾನೂನು ವಿವಿಯಲ್ಲಿ ಕೆಲಸ ಮಾಡ್ತಿದ್ದ ಇಂಜಿನಿಯರ್​​ ಕೊಲೆ

ಹುಬ್ಬಳ್ಳಿ ನಗರದ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಕ್ಯಾಂಪಸ್​ನಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಮೂಲತ ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ನಿವಾಸಿಯಾಗಿದ್ದ 60 ವರ್ಷದ ವಿಠ್ಠಲ್ ರಾಠೋಡ್ ಕೊಲೆಯಾದ ವ್ಯಕ್ತಿ. ಇವರು ಕಾನೂನು ವಿವಿಯ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಕಾಮಗಾರಿಯ ಉಪ ಗುತ್ತಿಗೆಯನ್ನು ಪಡೆದಿದ್ದರು.

ಇದನ್ನೂ ಓದಿ: ಅಶ್ಲೀಲವಾಗಿ ಮೆಸೇಜ್​​, ವರದಕ್ಷಿಣೆ ಕಿರುಕುಳ: ಪೊಲೀಸ್​​ ಪತಿ ಕಾಟಕ್ಕೆ ಪತ್ನಿ ಕಂಗಾಲು

ಕುಟುಂಬದ ಮಾತು ಕೇಳಿ ಪೊಲೀಸರು ಅಸಹಜವಾದ ಸಾವು ಅಂದುಕೊಂಡಿದ್ದರು. ಆದರೆ ವಿಚಾರಣೆ ವೇಳೆ ವಿಠ್ಠಲ್ ರಾಠೋಡ್​​ನದ್ದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಅನ್ನೋದು ದೃಢಪಟ್ಟಿದೆ. ಕೊಲೆ ಮಾಡಿದ್ದು ಬೇರಾರು ಅಲ್ಲಾ, ಕೊಲೆಯಾದ ವಿಠ್ಠಲ್ ರಾಠೋಡ್ ಕೆಲಸ ನೀಡಿದ್ದ ಕಾರ್ಮಿಕರು ಎಂದು ಗೊತ್ತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜರ್ಮನಿ ಅಧ್ಯಕ್ಷ ಫ್ರೆಡರಿಚ್ ಮೆರ್ಜ್ ಮತ್ತು ನರೇಂದ್ರ ಮೋದಿಯಿಂದ ಸಿಇಒಗಳ ಸಭೆ – Kannada News | German Chancellor Merz and PM Modi participate in India German CEOs forum at Ahmedabad

ಅಹ್ಮದಾಬಾದ್, ಜನವರಿ 12: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಜರ್ಮನ್ ಚಾನ್ಸಲರ್ ಫ್ರೆಡರಿಚ್ ಮೆರ್ಜ್ (Friedrich Merz) ಅವರು ಎರಡೂ ದೇಶಗಳ ಸಿಇಒಗಳ ಸಭೆಯಲ್ಲಿ ಪಾಲ್ಗೊಂಡರು. ಗುಜರಾತ್​ನ ಅಹ್ಮದಾಬಾದ್​ನಲ್ಲಿ ನಡೆದ ಭಾರತ ಜರ್ಮನಿ ಸಿಇಒ ಫೋರಂನಲ್ಲಿ ಈ ಸಭೆ ನಡೆದಿದೆ. ಭಾರತ ಮತ್ತು ಜರ್ಮನಿ ನಡುವಿವ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗಿರುವುದು ತಿಳಿದುಬಂದಿದೆ.

ಫ್ರೆಡರಿಚ್ ಮೆರ್ಜ್ ಅವರು ಭಾರತಕ್ಕೆ ಎರಡು ದಿನಗಳ ಭೇಟಿ ಮಾಡಿದ್ದಾರೆ. ಮೆರ್ಜ್ ಅವರು ಜರ್ಮನ್ ಚಾನ್ಸಲರ್ ಆಗಿದ್ದು 2025ರ ಮೇ 6ರಂದು. ಚಾನ್ಸಲರ್ ಆಗಿ ಭಾರತಕ್ಕೆ ಮಾತ್ರವಲ್ಲ ಏಷ್ಯಾಗೆ ನೀಡಿರುವ ಮೊದಲ ಭೇಟಿ ಇದು.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ಜರ್ಮನಿ ಮತ್ತು ಭಾರತದ ಸ್ನೇಹ ಸಂಬಂಧದ ಬಗ್ಗೆ ಮೋದಿ ಮಾತು

ಭಾರತ ಮತ್ತು ಜರ್ಮನಿ ದೇಶಗಳ ಸಂಬಂಧಕ್ಕೆ ಪ್ಲಾಟಿನಂ ಜೂಬಿಲಿ (70 ವರ್ಷ) ಸಂಭ್ರಮ ಇದೆ. ಎರಡೂ ದೇಶಗಳ ನಡುವಿನ ಕಾರ್ಯತಂತ್ರಾತ್ಮಕ ಸಹಭಾಗಿತ್ವಕ್ಕೆ ಸಿಲ್ವರ್ ಜೂಬಿಲಿ (25 ವರ್ಷ) ಸಂಭ್ರಮ ಇದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ನಮ್ಮ ಸಂಬಂಧಕ್ಕೆ ಪ್ಲಾಟಿಯಂನ ಸ್ಥಾಯತ್ವ ಮತ್ತು ಬೆಳ್ಳಿಯ ಹೊಳಪು ಇದೆ ಎಂದಾಯಿತು. ಭಾರತ ಹಾಗೂ ಜರ್ಮನಿ ನಡುವಿನ ಸಹಭಾಗಿತ್ವ ಸುಲಲಿತವಾದುದು. ಪರಸ್ಪರ ನಂಬಿಕೆ ಮತ್ತು ಮೌಲ್ಯಗಳ ತಳಹದಿಯಲ್ಲಿ ನಿರ್ಮಾಣವಾದಂತಹ ಹೊಂದಾಣಿಕೆ ಅದು. ಪ್ರತಿಯೊಂದು ಸೆಕ್ಟರ್​ನಲ್ಲೂ ಪರಸ್ಪರ ಅನುಕೂಲವಾಗುವ ಅವಕಾಶಗಳಿವೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸಂಶೋಧನೆಗಳಲ್ಲಿ ಜೊತೆಗಾರಿಕೆ ಇದೆ. ಇದರಿಂದ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಎಡೆ ಆಗುತ್ತಿದೆ’ ಎಂದು ಇಂಡಿಯಾ ಜರ್ಮನಿ ಸಿಇಒ ಫೋರಂ ಸಭೆಯಲ್ಲಿ ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನವೆಂಬರ್​ನಲ್ಲಿ 0.7 ಪ್ರತಿಶತ ಇದ್ದ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 1.3ಕ್ಕೆ ಏರಿಕೆ

‘ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವೆ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳುತ್ತೆ. ನಮ್ಮ ವ್ಯಾಪಾರ, ಹೂಡಿಕೆ ಮತ್ತು ಪಾರ್ಟ್ನರ್​ಶಿಪ್​ಗೆ ಹೊಸ ಅಧ್ಯಾಯ ಆರಂಭವಾಗುತ್ತದೆ. ಇಲ್ಲಿಂದ ನಿಮಗೆ ದಾರಿ ಸ್ಪಷ್ಟವಾಗಿರುತ್ತದೆ. ಜರ್ಮನ್​ನ ಪ್ರಿಸಿಶನ್ ಮತ್ತು ಇನ್ನೋವೇಶನ್​ಗಳೊಂದಿಗೆ ಭಾರತದ ವೇಗ ಮತ್ತು ವ್ಯಾಪಕತೆಯು ಸೇರಬೇಕು. ನೀವು ಭಾರತದಲ್ಲಿ ಉತ್ಪಾದನೆ ಮಾಡಬೇಕು. ಆಂತರಿಕ ಬೇಡಿಕೆಯ ಅನುಕೂಲ ನಿಮಗೆ ಇರುತ್ತದೆ. ತಡೆಯಿಲ್ಲದ ರಫ್ತು ಕೂಡ ಸಾಧ್ಯವಾಗುತ್ತದೆ’ ಎಂದು ಜರ್ಮನ್ ಸಿಇಒಗಳಿಗೆ ಮೋದಿ ಭರವಸೆ ಮತ್ತು ಆಫರ್ ಕೊಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bagalkote: ‘ಸುಗ್ಗಿಹುಗ್ಗಿ’ ಹೆಸರಲ್ಲಿ ಸಂಕ್ರಾಂತಿ ಸಂಭ್ರಮ; ಇಲ್ಲಿವೆ ಅಂದದ ಚಿತ್ರಗಳು

Source link

Exit mobile version