ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 

ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರು ಫಿನಾಲೆ ವೀಕ್ ತಲುಪಿದ್ದಾರೆ. ಕಳೆದ ವೀಕೆಂಡ್​​ನಲ್ಲಿ ಗಿಲ್ಲಿ ನಟ ಎವಿಕ್ಷನ್ ಭಾಷಣ ನೀಡಿದ್ದಾರೆ. ‘ಎವಿಕ್ಷನ್ ಆದ್ರೆ ಹೇಗೆ ಮಾತಾಡ್ತೀರಾ’ ಎಂದು ಸುದೀಪ್ ಕೇಳಿದರು. ಗಿಲ್ಲಿ ಅದ್ಭುತವಾಗಿ ಮಾತನಾಡಿದರು. ‘ಸೋಲಬಹುದು, ಸತ್ತಿಲ್ಲ’ ಎಂಬ ಸುದೀಪ್ ಮಾತನ್ನು ನೆನಪಿಸಿಕೊಂಡರು. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..! – Kannada News | WPL 2026: Sneh Rana bowls most expensive over in WPL history

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದ ಹೀನಾಯ ದಾಖಲೆಯೊಂದು ಸ್ನೇಹ್ ರಾಣಾ ಹೆಸರಿಗೆ ಸೇರ್ಪಡೆಯಾಗಿದೆ. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್​ನ ಒಂದು ಓವರ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಭರ್ಜರಿ ದಾಖಲೆಯೊಂದು ಸೋಫಿ ಡಿವೈನ್ ಹೆಸರಿಗೆ ಸೇರ್ಪಡೆಯಾಗಿದೆ.

ಹೌದು, ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಸ್ನೇಹ್ ರಾಣಾ ವಿರುದ್ಧ ಸೋಫಿ ಡಿವೈನ್ ಬರೋಬ್ಬರಿ 32 ರನ್​ ಚಚ್ಚಿದ್ದಾರೆ. ಈ ಪಂದ್ಯದ 6ನೇ ಓವರ್​ನಲ್ಲಿ ದಾಳಿಗಿಳಿದ ರಾಣಾ ಎಸೆತಗಳಿಗೆ ಸೋಫಿ 4,4,6,6,6,6 ಉತ್ತರ ನೀಡಿದ್ದಾರೆ.

ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಸೋಫಿ ಡಿವೈನ್ ತಮ್ಮದಾಗಿಸಿಕೊಂಡಿದ್ದಾರೆ.

ಅತ್ತ ಸ್ನೇಹ್ ರಾಣಾ ವುಮೆನ್ಸ್ ಪ್ರೀಮಿಯರ್​ ಲೀಗ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಬಿಟ್ಟು ಕೊಟ್ಟ ಹೀನಾಯ ದಾಖಲೆಗೆ ಕೊರೊಳೊಡ್ಡಿದ್ದಾರೆ. ಇದಕ್ಕೂ ಮುನ್ನ ಈ ಬೇಡದ ದಾಖಲೆ ಯುಪಿ ವಾರಿಯರ್ಸ್ ತಂಡದ ದೀಪ್ತಿ ಶರ್ಮಾ ಹೆಸರಿನಲ್ಲಿತ್ತು.

2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ದೀಪ್ತಿ ಶರ್ಮಾ 28 ರನ್ ನೀಡುವ ಮೂಲಕ ಈ ಹೀನಾಯ ದಾಖಲೆ ಬರೆದಿದ್ದರು. ಇದೀಗ 32 ರನ್​ ಚಚ್ಚಿಸಿಕೊಳ್ಳುವ ಮೂಲಕ ಸ್ನೇಹ್ ರಾಣಾ ಈ ಬೇಡದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡದಿ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 209 ರನ್​ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 205 ರನ್​ಗಳಿಸಿ 4 ರನ್​ಗಳಿಂದ ಸೋಲೊಪ್ಪಿಕೊಂಡಿತು.

 

 

Source link

ಬೆಂಗಳೂರಿನಲ್ಲಿ ಮಂಗಳೂರು ಮೂಲದ ಟೆಕ್ಕಿ ಕೊಲೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್: ಹತ್ಯೆಗೂ ಮುನ್ನ ರೇಪ್ ಮಾಡಿರುವ ಶಂಕೆ – Kannada News | Another Twist in Bengaluru Techie Murder Case: Police Suspect Assault Before Killing

ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ (Bangalore) ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಹತ್ಯೆ (34) (Techie Murder Case) ಪ್ರಕರಣದ ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ಇದು ಕೇವಲ ಕೊಲೆ ಪ್ರಕರಣವಲ್ಲ, ಹತ್ಯೆಗೂ ಮುನ್ನ ಸಂತ್ರಸ್ತೆ ಮೇಲೆ ಆರೋಪಿ ಅತ್ಯಾಚಾರ ಎಸಗಿರುವ ಸಾಧ್ಯತೆ ಇದೆ ಎಂಬ ಗಂಭೀರ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಕೇರಳ ಮೂಲದ ಕರ್ನಲ್ ಕುರೈ (18) ವಿರುದ್ಧ ಈಗಾಗಲೇ ಕೊಲೆ ಪ್ರಕರಣದ ಜೊತೆಗೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನೂ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬಿಎನ್​ಎಸ್ ಸೆಕ್ಷನ್ 103, 64(2), 67 ಮತ್ತು 238ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ತನಿಖೆ ವೇಳೆ ತಿಳಿದುಬಂದ ಮಾಹಿತಿ ಪ್ರಕಾರ, ಜನವರಿ 3ರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕರ್ನಲ್ ಕುರೈ ಅಪಾರ್ಟ್‌ಮೆಂಟ್‌ನ ಸ್ಲೈಡಿಂಗ್ ವಿಂಡೋ ಮೂಲಕ ಶರ್ಮಿಳಾ ಮನೆಯೊಳಗೆ ನುಗ್ಗಿದ್ದಾನೆ. ಆ ವೇಳೆ ಮನೆಯಲ್ಲಿ ಶರ್ಮಿಳಾ ಒಬ್ಬರೇ ಇದ್ದರು. ಒಳನುಗ್ಗಿದ ಆರೋಪಿ, ಶರ್ಮಿಳಾಳ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದು, ಇದಕ್ಕೆ ಆಕೆ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಪ್ರತಿರೋಧದ ವೇಳೆ ಆರೋಪಿ ಬಲವಂತವಾಗಿ ಆಕೆಯ ಮೇಲೆ ಎರಗಿದ್ದು, ಶರ್ಮಿಳಾ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬಿದ್ದ ಶರ್ಮಿಳಾಳನ್ನು ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಶರ್ಮಿಳಾ ಮೊಬೈಲ್ ಕೊಂಡುಹೋಗಿ ಸಿಕ್ಕಿಬಿದ್ದ ಆರೋಪಿ

ಹತ್ಯೆ ಮಾಡಿದ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರಕ್ತದಲ್ಲಿ ನೆನೆದಿದ್ದ ಬಟ್ಟೆಗಳನ್ನು ಹಾಸಿಗೆಯ ಮೇಲೆ ಹಾಕಿ, ಕೋಣೆಗೆ ಬೆಂಕಿ ಹಚ್ಚಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗುವ ವೇಳೆ ಶರ್ಮಿಳಾಳ ಮೊಬೈಲ್ ಫೋನ್‌ನ್ನು ಕೂಡ ತೆಗೆದುಕೊಂಡು ಹೋಗಿದ್ದಾನೆ. ಅದೇ ಮೊಬೈಲ್‌ ಆಧಾರವಾಗಿಯೇ ಆರೋಪಿ ಕರ್ನಲ್ ಕುರೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ರೇಪ್ ಬಗ್ಗೆ ಕೇಳಿದಾಗ ಆರೋಪಿ ಹೇಳೋದೇನು?

ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ರಾಮಮೂರ್ತಿನಗರ ಪೊಲೀಸರು, ಲೈಂಗಿಕ ದೌರ್ಜನ್ಯ ಕುರಿತು ಪ್ರಶ್ನಿಸಿದಾಗ ‘‘ಗೊತ್ತಿಲ್ಲ’’ ಎಂದು ಆತ ನುಣುಚಿಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸತ್ಯಾಂಶ ತಿಳಿಯಲು ಪೊಲೀಸರು ಎಫ್‌ಎಸ್‌ಎಲ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಿದ್ದಾರೆ.

ಆರಂಭದಲ್ಲಿ ಈ ಘಟನೆ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡ ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಇದು ಪೂರ್ವಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿತ್ತು. ಟೆಕ್ಕಿ ಶರ್ಮಿಳಾಳನ್ನು ವನ್ ಸೈಡೆಡ್ ಲವ್ ಮಾಡಿದ್ದ ಆರೋಪಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬೆಂಕಿ ಹಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್​: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು!

ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್​ಗೆ ಮರಳಿದ ಮಲ್ಲಮ್ಮ; ಅಟ್ಯಾಟ್​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್ – Kannada News | Mallamma Back to Bigg Boss House Dhruvanth Feels Detached to Her

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮನೆಗೆ ಮಲ್ಲಮ್ಮ ಅವರು ಮರಳಿದ್ದಾರೆ. ಈ ಮೊದಲು ಧ್ರುವಂತ್ ಹಾಗೂ ಮಲ್ಲಮ್ಮ ಕ್ಲೋಸ್ ಆಗಿದ್ದರು. ಈ ಕ್ಲೋಸ್​​ನೆಸ್ ಈಗ ಉಳಿದಿಲ್ಲ ಎಂದು ಧ್ರುವಂತ್​​ಗೆ ಅನಿಸಿದೆ. ಈ ವಿಷಯವನ್ನು ಅವರು ಅಶ್ವಿನಿ ಗೌಡ ಬಳಿ ಹೇಳಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರಾದರೂ ನಮಿಸಿದರೆ ರಾಜ್​​ಕುಮಾರ್ ಏನು ಹೇಳುತ್ತಿದ್ದರು? ರಜನಿ ಕೂಡ ಅಚ್ಚರಿಪಟ್ಟರು – Kannada News | Dr. Rajkumar’s Humility: Upendra Reveals Legend’s Timeless Wisdom

ರಾಜ್​​ಕುಮಾರ್ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ವರ್ಷಗಳ ಕಾಲ ಆ್ಯಕ್ಟೀವ್ ಆಗಿದ್ದರು. ಅವರು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚಿತ್ರರಂಗದಲ್ಲಿ ಮೇರು ನಟನಾಗಿ ಮೆರೆದರು. ಅವರಿಗೆ ಸರಿಸಾಟಿಯಾಗಿ ಮತ್ತೋರ್ವ ಹೀರೋ ನಿಲ್ಲೋಕೆ ಸಾಧ್ಯವಿಲ್ಲ. ರಾಜ್​​ಕುಮಾರ್ ಅವರು ಇಷ್ಟು ದೊಡ್ಡ ಹೀರೋ ಆದರು ಎಂದಿಗೂ ಅಹಂನಿಂದ ಮೆರೆದವರು ಅಲ್ಲ. ಇದಕ್ಕೆ ಉಪೇಂದ್ರ ಅವರು ಕೊಟ್ಟ ಒಳ್ಳೆಯ ಉದಾಹರಣೆಯನ್ನು ಇಲ್ಲಿ ನೋಡೋಣ.

ಉಪೇಂದ್ರ ನಟನೆಯ ‘45’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ಶಿವಣ್ಣ, ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರವನ್ನು ಇಡೀ ತಂಡ ಮಾಡಿದೆ. ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜನೆ ಕೂಡ ಅವರದ್ದೇ. ಇಡೀ ತಂಡ ಡಿಕೆಡಿ ವೇದಿಕೆ ಏರಿತ್ತು. ಈ ಸಂದರ್ಭದಲ್ಲಿ ಉಪೇಂದ್ರ ಅವರು ಅಪರೂಪದ ಮಾಹಿತಿ ಹಂಚಿಕೊಂಡಿದ್ದರು.

‘ಶೂಟಿಂಗ್ ವೇಳೆ ರಾಜ್​ಕುಮಾರ್ ಅವರಿಗೆ ರಜನಿ ಮೈಸೂರಲ್ಲಿ ಸಿಕ್ತಿದ್ರಂತೆ. ರಾಜ್​ಕುಮಾರ್​ಗೆ ಎಲ್ಲರೂ ನಮಸ್ಕಾರ ಮಾಡ್ತಿದ್ರಂತೆ. ಇದನ್ನು ನೋಡಿ ರಜನಿಗೆ ಅಚ್ಚರಿ ಆಗಿತ್ತು. ನಿಮಗೆ ಎಲ್ಲರೂ ನಮಸ್ಕಾರ ಮಾಡುತ್ತಾರಲ್ಲ, ಅದು ಹೇಗೆ ಅನಿಸುತ್ತದೆ ಎಂದು ಕೇಳಿದಾಗ, ಅವರು ನಮಸ್ಕಾರ ಮಾಡುತ್ತಿರುವುದು ನನಗಲ್ಲ, ನನ್ನ ಒಳಗೆ ಇರುವ ಕಲಾ ದೇವಿಗೆ ಎಂದು ಹೇಳುತ್ತಿದ್ದರಂತೆ. ಇದು ಅವರ ದೊಡ್ಡ ಗುಣ’ ಎಂದರು ಉಪೇಂದ್ರ.

ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್​​ಕುಮಾರ್ ಮೆಚ್ಚಿದ ‘ಪ್ರಣಯ ಪಯಣ’ ಗೀತೆ; ಡಿ.27ಕ್ಕೆ ಬಿಡುಗಡೆ

ಯಾರಾದರೂ ನಮಸ್ಕಾರ ಮಾಡಿದರೆ ಹೆಮ್ಮೆ ಆಗುತ್ತದೆ. ನನಗೆ ಅವರು ನಮಸ್ಕಾರ ಮಾಡುತ್ತಾರೆ ಎಂದು ಮೆರೆಯುತ್ತಾರೆ. ಆದರೆ, ರಾಜ್​​ಕುಮಾರ್ ಮಾತ್ರ ಆ ರೀತಿ ಆಗಿರಲೇ ಇಲ್ಲ. ಈ ಘಟನೆಯೇ ಅದಕ್ಕೆ ಸಾಕ್ಷಿ
‘ನಾನು ಸಿನಿಮಾ ತಿಳಿದುಕೊಂಡು ಮಾಡಿದ್ರೆ ಏನು ಮಾಡ್ತಿದ್ನೋ ಗೊತ್ತಿಲ್ಲ. ಆದರೆ, ಕಲಿಯದೆ ಮಾಡಿಕೊಂಡು ಹೋದೆ. ಶಕ್ತಿ ಎಲ್ಲವನ್ನೂ ಮಾಡಿಸುತ್ತದೆ ಎಂದು ರಾಜ್​​ಕುಮಾರ್ ಹೇಳುತ್ತಿದ್ದರು. ಕಾರಂತರಿಗೆ ಪ್ರಕೃತಿಯಲ್ಲಿ, ಕುವೆಂಪುಗೆ ಅಕ್ಷರಗಳಲ್ಲಿ ಹಾಗೂ ರಾಜ್​​ಕುಮಾರ್​ಗೆ ಅಭಿಮಾನಿಗಳಲ್ಲಿ ದೇವರು ಕಾಣಿಸಿದರು. ನನಗೆ ಈಗ ಎಲ್ಲ ಕಡೆಗಳಲ್ಲಿ ದೇವರು ಕಾಣಿಸುತ್ತಿದ್ದಾರೆ’ ಎಂದರು ಉಪ್ಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:52 am, Mon, 12 January 26

Source link

Virat Kohli: ಎಷ್ಟಿದೆ ಅಂತ ಗೊತ್ತಿಲ್ಲ, ಎಲ್ಲವನ್ನೂ ಅಮ್ಮನಿಗೆ ಕಳಿಸ್ತೀನಿ..! – Kannada News | I send my awards to my mother, she likes to keeping the awards: Virat Kohli

2026ರ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಭಾರತ ತಂಡ ಶುಭಾರಂಭ ಮಾಡಿದೆ. ಹೀಗೆ ಶುಭಾರಂಭ ಮಾಡಲು ಕಾರಣಕರ್ತರು ವಿರಾಟ್ ಕೊಹ್ಲಿ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 50 ಓವರ್​ಗಳಲ್ಲಿ ಬರೋಬ್ಬರಿ 300 ರನ್​ಗಳಿಸುವಲ್ಲಿ ಯಶಸ್ವಿಯಾದರು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಇನಿಂಗ್ಸ್ ಕಟ್ಟಿದ ಕೊಹ್ಲಿ 91 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 93 ರನ್ ಬಾರಿಸಿ ಔಟಾದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 49 ಓವರ್​ಗಳಲ್ಲಿ 306 ರನ್​ಗಳಿಸಿ 4 ವಿಕೆಟ್​ಗಳ ಜಯ ಸಾಧಿಸಿತು.

ನಿರೀಕ್ಷೆಯಂತೆ ಈ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಹೀಗೆ ಒಲಿದ ಪಂದ್ಯ ಶ್ರೇಷ್ಠ ಪ್ರಶಸ್ತಿ ಎಷ್ಟನೇದು ಎಂಬುದು ಖುದ್ದು ಕೊಹ್ಲಿಗೆ ಗೊತ್ತಿರಲಿಲ್ಲ.

ಪ್ಲೇಯರ್ ಆಫ್ ದಿ ಮ್ಯಾಚ್ ಸ್ವೀಕರಿಸಿದ ಬಳಿಕ ಕೊಹ್ಲಿಗೆ ಇದು ನಿಮ್ಮ ಎಷ್ಟನೆಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಈ ಪ್ರಶ್ನೆಗೆ ನಗುತ್ತಾ ಉತ್ತರರಿಸಿದ ವಿರಾಟ್, ನಿಜವಾಗಿಯೂ ನನಗೆ ಗೊತ್ತಿಲ್ಲ.

ನನಗೆ ಸಿಕ್ಕಾ ಟ್ರೋಫಿಗಳನ್ನು ನಾನು ಗುರುಗಾಂವ್​ನಲ್ಲಿರುವ ನನ್ನ ತಾಯಿಗೆ ಕಳಿಸುತ್ತೇನೆ. ಪ್ರಶಸ್ತಿ ನೋಡಿ ಅವರು ತುಂಬಾ ಹೆಮ್ಮೆಪಡುತ್ತಾರೆ. ಅಲ್ಲದೆ ಅವರು ಈ ಪ್ರಶಸ್ತಿಗಳನ್ನೆಲ್ಲಾ ಇಟ್ಟುಕೊಳ್ಳುತ್ತಾರೆ ಎಂದರು.

ಈ ಮೂಲಕ ತನಗೆ ಸಿಕ್ಕ ಟ್ರೋಫಿಗಳನ್ನು ಅಮ್ಮ ಒಂದು ಕಡೆಗೆ ಜೋಪಾನವಾಗಿ ಜೋಡಿಸುತ್ತಿರುವ ವಿಚಾರವನ್ನು ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿಗೆ ಈವರೆಗೆ ಎಷ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ ಎಂದು ನೋಡಿದರೆ…

  • ಏಕದಿನ ಕ್ರಿಕೆಟ್​ನಲ್ಲಿ ಅವರು 45 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ ಪಡೆದಿರುವ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂಖ್ಯೆ 10.
  • ಟಿ20 ಕ್ರಿಕೆಟ್​ನಲ್ಲಿ 16 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: ಶತಕ ತಪ್ಪಿಸಿ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ

ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 76 ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 71 ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿರುವ ವಿರಾಟ್ ಕೊಹ್ಲಿ ಮುಂಬರುವ ದಿನಗಳಲ್ಲಿ ಸಚಿನ್ ಅವರ ಈ ದಾಖಲೆಯನ್ನು ಅಳಿಸಿ ಹಾಕಿದರೂ ಅಚ್ಚರಿಪಡಬೇಕಿಲ್ಲ.

Source link

ಮಂಡ್ಯ: ಶೋಕಿಗಾಗಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡ ಖತರ್ನಾಕ್ ಕಳ್ಳರು ಅಂದರ್! – Kannada News | Mandya Police Arrest Notorious Chain Snatchers, House Burglars

ಮಂಡ್ಯ, ಜನವರಿ 12: ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ತಾವು ಕೂಲಿ ಕೆಲಸದವರೆಂದು ಹೇಳಿಕೊಂಡು ತಿರುಗುತ್ತಿದ್ದ ಬಂಧಿತರು, ಈ ಹಿಂದೆ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದರು. ಶಿಕ್ಷೆ ಪಡೆದು ಹೊರಬಂದರೂ ಬುದ್ಧಿ ಕಲಿಯದ ಇವರು ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದರು.

ಕೂಲಿಕಾರರೆಂದು ಹೇಳಿಕೊಂಡು ಕಳ್ಳತನ

ಮೈಸೂರಿನ ಸದ್ಧಾಂ ಹುಸೇನ್ ಹಾಗೂ ಸೈಯದ್ ಅಯೂಬ್ ಬಂಧಿತ ಆರೋಪಿಗಳಾಗಿದ್ದು, ಇವರ ಕಳ್ಳತನ ಹಿಸ್ಟರಿ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬಂಧಿತ ಆರೋಪಿಗಳು ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡು ಸಂಚರಿಸುತ್ತಿದ್ದರೂ, ವಾಸ್ತವದಲ್ಲಿ ಶೋಕಿಗಾಗಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದರು. ಇತ್ತೀಚೆಗೆ ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ್ದರು. ಇದೇ ಪ್ರಕರಣದ ತನಿಖೆ ವೇಳೆ ಕೆಲ ಮಹತ್ವದ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದು, ವಿಚಾರಣೆ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗಿವೆ.

ಒಂಟಿ ಮಹಿಳೆಯರೇ ಟಾರ್ಗೆಟ್!

ಈ ಹಿಂದೆ ಬರೋಬ್ಬರಿ 38 ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿ ಹೊರಬಂದಿದ್ದರೂ ಬುದ್ಧಿ ಕಲಿಯದೇ ಮತ್ತೆ ಕಳ್ಳತನಕ್ಕೆ ಇಳಿದಿರುವುದು ಬೆಳಕಿಗೆ ಬಂದಿದೆ. 2025ರಲ್ಲಿಯೇ 8 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಮಂಡ್ಯ ಮಾತ್ರವಲ್ಲದೇ ಮೈಸೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿಯೂ ಕಳ್ಳತನ ನಡೆಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ವಿಶೇಷವಾಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಇವರು, ಮಹಿಳೆಯರ ಕುತ್ತಿಗೆಯಿಂದ ಸರ ಎಗರಿಸುವುದರೊಂದಿಗೆ ಮನೆಗಳಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಗಳ್ಳತನ ಮಾಡುತ್ತಿದ್ದರು. ಇದೀಗ ಕಳ್ಳರನ್ನು ಬಂಧಿಸಿರುವ ಪೊಲೀಸರು ಅವರಿಂದ 31.98 ಲಕ್ಷ ರೂ. ಮೌಲ್ಯದ 253 ಗ್ರಾಂ ಚಿನ್ನ, 17 ಗ್ರಾಂ ಬೆಳ್ಳಿ ಹಾಗೂ ಪಲ್ಸರ್ ಮತ್ತು ಆಕ್ಸಿಸ್ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ – Kannada News | Dhurandhar 2 and Toxic Clash: Aawarapan 2 Delay and Bollywood’s Response to Blockbuster

ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕಳೆದ ವರ್ಷ ಸಾವಿರ ಕೋಟಿ ಗಳಿಸಿದ ಏಕೈಕ ಸಿನಿಮಾ ಅದು. ಈ ಚಿತ್ರವು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಧುರಂಧರ್‌ಗೆ ಪ್ರತಿಸ್ಪರ್ಧಿಯಾಗಿ ಬೇರೆ ಯಾವುದೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಪ್ರತಿದಿನ ಆದಾಯದಲ್ಲಿ ಹೊಸ ಗರಿಷ್ಠ ಮಟ್ಟವನ್ನು ದಾಖಲಿಸುತ್ತಿದೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಆ ಸಮಯದಲ್ಲಿ ‘ಟಾಕ್ಸಿಕ್’ ಕೂಡ ಬಿಡುಗಡೆ ಆಗುತ್ತಿದೆ. ಈ ಕ್ಲ್ಯಾಶ್ ವೇಳೆ ಉಳಿದ ಸಿನಿಮಾಗಳು ಹಿಂದೇಟು ಹಾಕುತ್ತಿವೆ.

ಬಾಲಿವುಡ್‌ನಲ್ಲಿ ‘ಧುರಂಧರ್’ ಚಿತ್ರದ ಕ್ರೇಜ್ ಮತ್ತು ಯಶಸ್ಸನ್ನು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ. ‘ಧುರಂಧರ್’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ‘ಧುರಂಧರ್’ ಚಿತ್ರದ ಮೊದಲ ಭಾಗ ಡಿಸೆಂಬರ್ 5 ರಂದು ಬಿಡುಗಡೆಯಾಯಿತು. ಈಗ ಎರಡನೇ ಭಾಗ ಮಾರ್ಚ್‌ 19ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.

‘ಧುರಂಧರ್’ ಚಿತ್ರದ ಅದ್ಭುತ ಯಶಸ್ಸನ್ನು ನೋಡಿ, ಅನೇಕ ಬಾಲಿವುಡ್ ನಿರ್ಮಾಪಕರು ಮತ್ತು ದೊಡ್ಡ ನಟರು ಸಹ ‘ಧುರಂಧರ್ 2’ ಬಿಡುಗಡೆಯ ಸಮಯದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ.
ಈಗ ಹಿಂದಿಯ, ‘ಆವಾರಾಪನ್ 2’ ಬಿಡುಗಡೆ ವಿಳಂಬವಾಗಲಿದೆ. ಈ ಬಗ್ಗೆ ಚಿತ್ರನಿರ್ಮಾಪಕ ಮುಖೇಶ್ ಭಟ್ ಸ್ಪಷ್ಟನೆ ನೀಡಿದ್ದಾರೆ. ‘ಧುರಂಧರ್ 2 ಅಥವಾ ಯಶ್ ಅಭಿನಯದ ಟಾಕ್ಸಿಕ್ ಚಿತ್ರದೊಂದಿಗಿನ ಸ್ಪರ್ಧೆಯಿಂದಾಗಿ ಆವಾರಪನ್ 2 ತಡವಾಗಿ ಬಿಡುಗಡೆಯಾಗುತ್ತಿಲ್ಲ’ ಎಂದು ಮುಖೇಶ್ ಭಟ್ ಹೇಳಿದ್ದಾರೆ.

‘ಆವಾರಪನ್ 2’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಾಯಕನಾಗಿ ನಟಿಸುತ್ತಿದ್ದಾರೆ. ಆವರಿಗೆ ಆದ ಗಾಯದಿಂದಾಗಿ ಚಿತ್ರದ ಚಿತ್ರೀಕರಣ ಮುಂದೂಡಲಾಗಿತ್ತು. ಇದರಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಮುಖೇಶ್ ಭಟ್ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ತಂಡಗಳು ಡೇಟ್ ಬದಲಿಸಿಕೊಳ್ಳಲು ರೆಡಿ ಇಲ್ಲ. ಈ ಕಾರಣದಿಂದ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಕ್ಲ್ಯಾಶ್ ನಿರೀಕ್ಷಿಸಬಹುದಾಗಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಯಶ್ ಅವರು ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಸಿನಿಮಾನ ತರುವ ನಿರೀಕ್ಷೆಯಲ್ಲಿ ಇದ್ದಾರೆ.  ಈ ಚಿತ್ರ ದೊಡ್ಡ ಬಜೆಟ್ ಸಿನಿಮಾ ಕೂಡ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಫುಡ್ ಡೆಲಿವರಿ ಮಾಡ್ತಿದ್ದಂತೆ ಹೊರಟೇ ಬಿಡ್ತು ರೈಲು, ಕೂಡಲೇ ಕೆಳಗೆ ಹಾರಿದ ಡೆಲಿವರಿ ಏಜೆಂಟ್ – Kannada News | AndhraPradesh: Caught on Camera, Delivery Worker Falls From Moving Train

ಅನಂತಪುರ, ಜನವರಿ 12: ಡೆಲಿವರಿ ಏಜೆಂಟ್(Delivery Agent) ಒಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗೆ ಹಾರಿರುವ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಹಾರ ಡೆಲಿವರಿ ಮಾಡುತ್ತಿದ್ದಂತೆ ರೈಲು ಹೊರಟೇ ಬಿಟ್ಟಿತ್ತು. ಕೂಡಲೇ ಸ್ವಿಗ್ಗಿ ಡೆಲಿವರಿ ಬಾಯ್ ರೈಲಿನಿಂದ ಕೆಳಗೆ ಹಾರಿದ್ದಾರೆ.

ವೀಡಿಯೊದಲ್ಲಿ ಸೆರೆಯಾದ ಈ ಘಟನೆಯು ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ರೈಲು ಚಲಿಸಲು ಪ್ರಾರಂಭಿಸಿದಾಗ 1 ನೇ ಎಸಿ ಕೋಚ್‌ನಲ್ಲಿರುವ ಪ್ರಯಾಣಿಕರಿಗೆ ಆಹಾರವನ್ನು ಕೊಟ್ಟು ನಂತರ ಏಜೆಂಟ್ ಪ್ರಶಾಂತಿ ಎಕ್ಸ್‌ಪ್ರೆಸ್ (18464)ಯಿಂದ ಇಳಿಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ರೈಲು ನಿಲ್ದಾಣದಲ್ಲಿ ಕೇವಲ 1-2 ನಿಮಿಷಗಳ ಕಾಲ ನಿಂತಿತ್ತು.

ಪ್ರಯಾಣಿಕರಿಗೆ ಆಹಾರ ಕೊಟ್ಟು ಹೊರಡಬೇಕು ಅನ್ನುವಷ್ಟರಲ್ಲಿ ರೈಲು ಹೊರಟೇ ಬಿಟ್ಟಿತ್ತು. ರೈಲಿನಿಂದ ಇಳಿಯಲು ಕೆಲವೇ ಕೆಲವು ಸಮಯ ಇತ್ತು. ಕೂಡಲೆ ರೈಲಿನಿಂದ ಹಾರಿ ಕೆಳಗೆ ಬಿದ್ದಿದ್ದಾರೆ. ಬಳಿಕ ಎದ್ದು ನಡೆದುಕೊಂಡು ಹೋಗಿದ್ದಾರೆ.ರೈಲುಗಳಲ್ಲಿ ವಿತರಣಾ ಏಜೆಂಟ್‌ಗಳಿಗೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಮತ್ತಷ್ಟು ಓದಿ: Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

ಸ್ವಿಗ್ಗಿ ಕೂಡ ಪ್ರತಿಕ್ರಿಯಿಸಿ, ಏಜೆಂಟ್ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಡಿಸಿದೆ, ಸುರಕ್ಷತೆಯು ಅವರ ಪ್ರಮುಖ ಆದ್ಯತೆಯಾಗಿದೆ ಮತ್ತು ಪ್ರೋಟೋಕಾಲ್‌ಗಳಲ್ಲಿ ಚಲಿಸುವ ರೈಲುಗಳನ್ನು ಹತ್ತುವುದು ಅಥವಾ ಇಳಿಯುವಂತಿಲ್ಲ ಎಂದು ಹೇಳಿದೆ.

ವಿಡಿಯೋ

ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ. ಗ್ರಾಹಕರು ತಮ್ಮ ಆಹಾರವನ್ನು ರೈಲಿನ ಬಾಗಿಲು, ಪ್ಲಾಟ್‌ಫಾರ್ಮ್‌ನಿಂದ ಪಡೆದುಕೊಳ್ಳಲು ಸ್ಪಷ್ಟವಾಗಿ ತಿಳಿಸಬೇಕು. ಡೆಲಿವರಿ ಏಜೆಂಟ್ ಚಲಿಸುವ ಅಥವಾ ಕಿಕ್ಕಿರಿದ ರೈಲುಗಳ ಒಳಗೆ ಪ್ರತ್ಯೇಕ ಆಸನಗಳಿಗೆ ಆಹಾರವನ್ನು ತಲುಪಿಸಲು ಒತ್ತಾಯಿಸಬಾರದು ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

ಗುಜರಾತ್ ಜೈಂಟ್ಸ್ ತಂಡದಿಂದ 210 ರನ್​ಗಳ ಗುರಿ… ಕೊನೆಯ ಮೂರು ಓವರ್​ಗಳಲ್ಲಿ 48 ರನ್​ಗಳ ಅವಶ್ಯಕತೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು 18ನೇ ಓವರ್​ನಲ್ಲಿ ಕಲೆಹಾಕಿದ್ದು ಬರೋಬ್ಬರಿ 19 ರನ್​​ಗಳು. 19ನೇ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್​ಗಳಿಂದ ಮೂಡಿಬಂದ ಸ್ಕೋರ್​ ಬರೋಬ್ಬರಿ 22 ರನ್​​ಗಳು. ಅದರಂತೆ ಅಂತಿಮ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೇವಲ 7 ರನ್​​ಗಳ ಅವಶ್ಯಕತೆ.

ಕ್ರೀಸ್​ನಲ್ಲಿದದ್ದು ಲಾರಾ ವುಲ್​ಫರ್ಟ್ ಹಾಗೂ ಜೆಮಿಮಾ ರೊಡ್ರಿಗಸ್. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅನುಭವಿ ಆಟಗಾರ್ತಿ ಸೋಫಿ ಡಿವೈನ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

20ನೇ ಓವರ್​ನ ಮೊದಲ ಎಸೆತದಲ್ಲಿ ಸೋಫಿ ಡಿವೈನ್ ನೀಡಿದ್ದು ಕೇವಲ 1 ರನ್ ಮಾತ್ರ. ಇನ್ನು ಎರಡನೇ ಎಸೆತದಲ್ಲಿ ಜೆಮಿಮಾ ರೊಡ್ರಿಗಸ್ ವಿಕೆಟ್ ಕಬಳಿಸಿದರು. ಮೂರನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ನಾಲ್ಕನೇ ಎಸೆತದಲ್ಲಿ ಮರಿಝನ್ನೆ ಕಪ್ ಒಂದು ರನ್ ಕಲೆಹಾಕಿದರು. ಐದನೇ ಎಸೆತದಲ್ಲಿ ಲಾರಾ ವುಲ್​ಫರ್ಟ್​ ವಿಕೆಟ್ ಪಡೆದರು. ಆರನೇ ಎಸೆತದಲ್ಲಿ ಯಾವುದೇ ರನ್ ನೀಡದೇ ಗುಜರಾತ್ ಜೈಂಟ್ಸ್ ತಂಡಕ್ಕೆ 4 ರನ್​​ಗಳ ರೋಚಕ ಜಯ ತಂದುಕೊಟ್ಟರು.

ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು ಸೋಲುವ ಪಂದ್ಯವನ್ನು ಗೆಲ್ಲುವ ಮೂಲಕ 2 ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆಲ್ಲಬಹುದಾಗಿದ್ದ ಮ್ಯಾಚ್​ನಲ್ಲೂ ಸೋತಿದೆ.

 

Source link

Exit mobile version