‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ – Kannada News | Dhurandhar 2 and Toxic Clash: Aawarapan 2 Delay and Bollywood’s Response to Blockbuster

ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕಳೆದ ವರ್ಷ ಸಾವಿರ ಕೋಟಿ ಗಳಿಸಿದ ಏಕೈಕ ಸಿನಿಮಾ ಅದು. ಈ ಚಿತ್ರವು ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಧುರಂಧರ್‌ಗೆ ಪ್ರತಿಸ್ಪರ್ಧಿಯಾಗಿ ಬೇರೆ ಯಾವುದೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಪ್ರತಿದಿನ ಆದಾಯದಲ್ಲಿ ಹೊಸ ಗರಿಷ್ಠ ಮಟ್ಟವನ್ನು ದಾಖಲಿಸುತ್ತಿದೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಆ ಸಮಯದಲ್ಲಿ ‘ಟಾಕ್ಸಿಕ್’ ಕೂಡ ಬಿಡುಗಡೆ ಆಗುತ್ತಿದೆ. ಈ ಕ್ಲ್ಯಾಶ್ ವೇಳೆ ಉಳಿದ ಸಿನಿಮಾಗಳು ಹಿಂದೇಟು ಹಾಕುತ್ತಿವೆ.

ಬಾಲಿವುಡ್‌ನಲ್ಲಿ ‘ಧುರಂಧರ್’ ಚಿತ್ರದ ಕ್ರೇಜ್ ಮತ್ತು ಯಶಸ್ಸನ್ನು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ. ‘ಧುರಂಧರ್’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ‘ಧುರಂಧರ್’ ಚಿತ್ರದ ಮೊದಲ ಭಾಗ ಡಿಸೆಂಬರ್ 5 ರಂದು ಬಿಡುಗಡೆಯಾಯಿತು. ಈಗ ಎರಡನೇ ಭಾಗ ಮಾರ್ಚ್‌ 19ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.

‘ಧುರಂಧರ್’ ಚಿತ್ರದ ಅದ್ಭುತ ಯಶಸ್ಸನ್ನು ನೋಡಿ, ಅನೇಕ ಬಾಲಿವುಡ್ ನಿರ್ಮಾಪಕರು ಮತ್ತು ದೊಡ್ಡ ನಟರು ಸಹ ‘ಧುರಂಧರ್ 2’ ಬಿಡುಗಡೆಯ ಸಮಯದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಿಲ್ಲ.
ಈಗ ಹಿಂದಿಯ, ‘ಆವಾರಾಪನ್ 2’ ಬಿಡುಗಡೆ ವಿಳಂಬವಾಗಲಿದೆ. ಈ ಬಗ್ಗೆ ಚಿತ್ರನಿರ್ಮಾಪಕ ಮುಖೇಶ್ ಭಟ್ ಸ್ಪಷ್ಟನೆ ನೀಡಿದ್ದಾರೆ. ‘ಧುರಂಧರ್ 2 ಅಥವಾ ಯಶ್ ಅಭಿನಯದ ಟಾಕ್ಸಿಕ್ ಚಿತ್ರದೊಂದಿಗಿನ ಸ್ಪರ್ಧೆಯಿಂದಾಗಿ ಆವಾರಪನ್ 2 ತಡವಾಗಿ ಬಿಡುಗಡೆಯಾಗುತ್ತಿಲ್ಲ’ ಎಂದು ಮುಖೇಶ್ ಭಟ್ ಹೇಳಿದ್ದಾರೆ.

‘ಆವಾರಪನ್ 2’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಾಯಕನಾಗಿ ನಟಿಸುತ್ತಿದ್ದಾರೆ. ಆವರಿಗೆ ಆದ ಗಾಯದಿಂದಾಗಿ ಚಿತ್ರದ ಚಿತ್ರೀಕರಣ ಮುಂದೂಡಲಾಗಿತ್ತು. ಇದರಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಮುಖೇಶ್ ಭಟ್ ಹೇಳಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ತಂಡಗಳು ಡೇಟ್ ಬದಲಿಸಿಕೊಳ್ಳಲು ರೆಡಿ ಇಲ್ಲ. ಈ ಕಾರಣದಿಂದ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಕ್ಲ್ಯಾಶ್ ನಿರೀಕ್ಷಿಸಬಹುದಾಗಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಯಶ್ ಅವರು ದೊಡ್ಡ ಮಟ್ಟದಲ್ಲಿ ‘ಟಾಕ್ಸಿಕ್’ ಸಿನಿಮಾನ ತರುವ ನಿರೀಕ್ಷೆಯಲ್ಲಿ ಇದ್ದಾರೆ.  ಈ ಚಿತ್ರ ದೊಡ್ಡ ಬಜೆಟ್ ಸಿನಿಮಾ ಕೂಡ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಫುಡ್ ಡೆಲಿವರಿ ಮಾಡ್ತಿದ್ದಂತೆ ಹೊರಟೇ ಬಿಡ್ತು ರೈಲು, ಕೂಡಲೇ ಕೆಳಗೆ ಹಾರಿದ ಡೆಲಿವರಿ ಏಜೆಂಟ್ – Kannada News | AndhraPradesh: Caught on Camera, Delivery Worker Falls From Moving Train

ಅನಂತಪುರ, ಜನವರಿ 12: ಡೆಲಿವರಿ ಏಜೆಂಟ್(Delivery Agent) ಒಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗೆ ಹಾರಿರುವ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಹಾರ ಡೆಲಿವರಿ ಮಾಡುತ್ತಿದ್ದಂತೆ ರೈಲು ಹೊರಟೇ ಬಿಟ್ಟಿತ್ತು. ಕೂಡಲೇ ಸ್ವಿಗ್ಗಿ ಡೆಲಿವರಿ ಬಾಯ್ ರೈಲಿನಿಂದ ಕೆಳಗೆ ಹಾರಿದ್ದಾರೆ.

ವೀಡಿಯೊದಲ್ಲಿ ಸೆರೆಯಾದ ಈ ಘಟನೆಯು ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ರೈಲು ಚಲಿಸಲು ಪ್ರಾರಂಭಿಸಿದಾಗ 1 ನೇ ಎಸಿ ಕೋಚ್‌ನಲ್ಲಿರುವ ಪ್ರಯಾಣಿಕರಿಗೆ ಆಹಾರವನ್ನು ಕೊಟ್ಟು ನಂತರ ಏಜೆಂಟ್ ಪ್ರಶಾಂತಿ ಎಕ್ಸ್‌ಪ್ರೆಸ್ (18464)ಯಿಂದ ಇಳಿಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ರೈಲು ನಿಲ್ದಾಣದಲ್ಲಿ ಕೇವಲ 1-2 ನಿಮಿಷಗಳ ಕಾಲ ನಿಂತಿತ್ತು.

ಪ್ರಯಾಣಿಕರಿಗೆ ಆಹಾರ ಕೊಟ್ಟು ಹೊರಡಬೇಕು ಅನ್ನುವಷ್ಟರಲ್ಲಿ ರೈಲು ಹೊರಟೇ ಬಿಟ್ಟಿತ್ತು. ರೈಲಿನಿಂದ ಇಳಿಯಲು ಕೆಲವೇ ಕೆಲವು ಸಮಯ ಇತ್ತು. ಕೂಡಲೆ ರೈಲಿನಿಂದ ಹಾರಿ ಕೆಳಗೆ ಬಿದ್ದಿದ್ದಾರೆ. ಬಳಿಕ ಎದ್ದು ನಡೆದುಕೊಂಡು ಹೋಗಿದ್ದಾರೆ.ರೈಲುಗಳಲ್ಲಿ ವಿತರಣಾ ಏಜೆಂಟ್‌ಗಳಿಗೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಮತ್ತಷ್ಟು ಓದಿ: Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್

ಸ್ವಿಗ್ಗಿ ಕೂಡ ಪ್ರತಿಕ್ರಿಯಿಸಿ, ಏಜೆಂಟ್ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಡಿಸಿದೆ, ಸುರಕ್ಷತೆಯು ಅವರ ಪ್ರಮುಖ ಆದ್ಯತೆಯಾಗಿದೆ ಮತ್ತು ಪ್ರೋಟೋಕಾಲ್‌ಗಳಲ್ಲಿ ಚಲಿಸುವ ರೈಲುಗಳನ್ನು ಹತ್ತುವುದು ಅಥವಾ ಇಳಿಯುವಂತಿಲ್ಲ ಎಂದು ಹೇಳಿದೆ.

ವಿಡಿಯೋ

ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ. ಗ್ರಾಹಕರು ತಮ್ಮ ಆಹಾರವನ್ನು ರೈಲಿನ ಬಾಗಿಲು, ಪ್ಲಾಟ್‌ಫಾರ್ಮ್‌ನಿಂದ ಪಡೆದುಕೊಳ್ಳಲು ಸ್ಪಷ್ಟವಾಗಿ ತಿಳಿಸಬೇಕು. ಡೆಲಿವರಿ ಏಜೆಂಟ್ ಚಲಿಸುವ ಅಥವಾ ಕಿಕ್ಕಿರಿದ ರೈಲುಗಳ ಒಳಗೆ ಪ್ರತ್ಯೇಕ ಆಸನಗಳಿಗೆ ಆಹಾರವನ್ನು ತಲುಪಿಸಲು ಒತ್ತಾಯಿಸಬಾರದು ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

ಗುಜರಾತ್ ಜೈಂಟ್ಸ್ ತಂಡದಿಂದ 210 ರನ್​ಗಳ ಗುರಿ… ಕೊನೆಯ ಮೂರು ಓವರ್​ಗಳಲ್ಲಿ 48 ರನ್​ಗಳ ಅವಶ್ಯಕತೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು 18ನೇ ಓವರ್​ನಲ್ಲಿ ಕಲೆಹಾಕಿದ್ದು ಬರೋಬ್ಬರಿ 19 ರನ್​​ಗಳು. 19ನೇ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್​ಗಳಿಂದ ಮೂಡಿಬಂದ ಸ್ಕೋರ್​ ಬರೋಬ್ಬರಿ 22 ರನ್​​ಗಳು. ಅದರಂತೆ ಅಂತಿಮ ಓವರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೇವಲ 7 ರನ್​​ಗಳ ಅವಶ್ಯಕತೆ.

ಕ್ರೀಸ್​ನಲ್ಲಿದದ್ದು ಲಾರಾ ವುಲ್​ಫರ್ಟ್ ಹಾಗೂ ಜೆಮಿಮಾ ರೊಡ್ರಿಗಸ್. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಖಚಿತ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅನುಭವಿ ಆಟಗಾರ್ತಿ ಸೋಫಿ ಡಿವೈನ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

20ನೇ ಓವರ್​ನ ಮೊದಲ ಎಸೆತದಲ್ಲಿ ಸೋಫಿ ಡಿವೈನ್ ನೀಡಿದ್ದು ಕೇವಲ 1 ರನ್ ಮಾತ್ರ. ಇನ್ನು ಎರಡನೇ ಎಸೆತದಲ್ಲಿ ಜೆಮಿಮಾ ರೊಡ್ರಿಗಸ್ ವಿಕೆಟ್ ಕಬಳಿಸಿದರು. ಮೂರನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ನಾಲ್ಕನೇ ಎಸೆತದಲ್ಲಿ ಮರಿಝನ್ನೆ ಕಪ್ ಒಂದು ರನ್ ಕಲೆಹಾಕಿದರು. ಐದನೇ ಎಸೆತದಲ್ಲಿ ಲಾರಾ ವುಲ್​ಫರ್ಟ್​ ವಿಕೆಟ್ ಪಡೆದರು. ಆರನೇ ಎಸೆತದಲ್ಲಿ ಯಾವುದೇ ರನ್ ನೀಡದೇ ಗುಜರಾತ್ ಜೈಂಟ್ಸ್ ತಂಡಕ್ಕೆ 4 ರನ್​​ಗಳ ರೋಚಕ ಜಯ ತಂದುಕೊಟ್ಟರು.

ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು ಸೋಲುವ ಪಂದ್ಯವನ್ನು ಗೆಲ್ಲುವ ಮೂಲಕ 2 ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗೆಲ್ಲಬಹುದಾಗಿದ್ದ ಮ್ಯಾಚ್​ನಲ್ಲೂ ಸೋತಿದೆ.

 

Source link

National Youth Day 2026: ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದೇ ಯುವ ದಿನವನ್ನು ಆಚರಿಸುವುದೇಕೆ ಗೊತ್ತಾ? – Kannada News | National Youth Day 2026: Know about the history and significance of National Youth Day

ಸ್ವಾಮಿ ವಿವೇಕಾನಂದರ (Swami Vivekananda) ತತ್ವಗಳು ಮತ್ತು ಅವರ ಬದುಕಿನ ಹಾದಿ, ಆದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿ. ದೇಶದ ಅಭಿವೃದ್ಧಿಯು ಯುವಕರಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ಅವರು ತಮ್ಮ ಅಮೂಲ್ಯವಾದ ಆಲೋಚನೆಗಳು ಮತ್ತು ಸ್ಫೂರ್ತಿದಾಯಕ ಮಾತುಗಳೊಂದಿಗೆ ಯುವಕರನ್ನು ಮುಂದುವರೆಯಲು ಪ್ರೋತ್ಸಾಹಿಸುತ್ತಿದ್ದರು. ಆಧ್ಯಾತ್ಮಿಕ ಲೋಕದ ಮಹಾನ್‌ ಚೇತನ, ಭವ್ಯ ಭಾರತದ ಹೆಮ್ಮೆಯ ಪುತ್ರ, ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದರ ಈ ತತ್ವಾದರ್ಶಗಳು ಇಂದಿಗೂ ಎಂದೆಂದಿಗೂ ಜೀವಂತ. ಇಂದಿಗೂ ಅದೆಷ್ಟೋ ಜನ ವಿವೇಕಾನಂದರ ಮಾತುಗಳ ಸ್ಪೂರ್ತಿಯ ನೆರಳಲ್ಲಿ ಸಾಗುತ್ತಿದ್ದಾರೆ. ಹೀಗೆ ದೇಶದ ಯುವಕರಿಗೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ತಿಳಿಸುವ ಮೂಲಕ ಸರಿಯಾದ ದಾರಿಯಲ್ಲಿ ಸಾಗುವಂತೆ ದಾರಿ ತೋರಿಸುವ ಉದ್ದೇಶದಿಂದ ಈ ಮಹಾನ್‌ ವ್ಯಕ್ತಿಯ ಜನ್ಮ ದಿನವಾದ ಜನವರಿ 12 ರಂದು  ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಯುವ ದಿನದ ಇತಿಹಾಸವೇನು?

ಒಂದು ದೇಶದ ಅಭಿವೃದ್ಧಿಯು ಆ ದೇಶದ ಯುವ ಜನತೆಯ ಮೇಲೆ ಅವಲಂಬಿತವಾಗಿದೆ. ಹೀಗಿರುವಾಗ ಸರಿಯಾದ ದಾರಿಯಲ್ಲಿ ಸಾಗಲು ಯುವ ಜನತೆಯನ್ನು ಪ್ರೇರೇಪಿಸಲು ಸರಿಯಾದ ಮಾರ್ಗದರ್ಶನ ನೀಡುವುದು ಬಹಳ ಮುಖ್ಯವಾಗಿದೆ. ಈ ಉದ್ದೇಶದಿಂದ ಭಾರತ ಸರ್ಕಾರವು 1984 ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ಬಳಿಕ 1985 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ರಾಷ್ಟ್ರೀಯ ಯುವ ದಿನವನ್ನು ಏಕೆ ಆಚರಿಸಲಾಗುತ್ತದೆ?

ಯುವಕರನ್ನು ದೇಶದ ಭವಿಷ್ಯ ಎಂದು ಕರೆಯಲಾಗುತ್ತದೆ. ಯಾವುದೇ ರಾಷ್ಟ್ರದ ಪ್ರಗತಿಯು ಅಲ್ಲಿನ ಯುವಕರ ಚಿಂತನೆ ಮತ್ತು ದಕ್ಷತೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಯುವಜನರು ಸರಿಯಾದ ಮಾರ್ಗದರ್ಶನ ಪಡೆಯುವುದು ಬಹಳ ಮುಖ್ಯವಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ಹಿಂದಿ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?

ರಾಷ್ಟ್ರೀಯ ಯುವ ದಿನದ ಮಹತ್ವವೇನು?

  • ರಾಷ್ಟ್ರೀಯ ಯುವ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಸ್ವಾಮಿ ವಿವೇಕಾನಂದರ ಚಿಂತನೆಗಳು, ಮೌಲ್ಯಗಳು ಮತ್ತು ಆದರ್ಶಗಳನ್ನು ಪ್ರಚಾರ ಮಾಡುವುದು ಮತ್ತು ಅವರ ಆಲೋಚನೆಗಳ ಬಗ್ಗೆ ದೇಶದ ಯುವ ಜನತೆಗೆ ತಿಳಿಸಿ ಅವರು ದೇಶದ ಪ್ರಗತಿಗೆ ಕೊಡುಗೆ ನೀಡಲು ಪ್ರೇರೇಪಿಸುವುದು ಮತ್ತು ವಿವೇಕಾನಂದರ ಆದರ್ಶಗಳನ್ನು ಅನುಸರಿಸಲು ಯುವಜನರನ್ನು ಪ್ರೇರೇಪಿಸುವುದು.
  • ಭಾರತದ ಯುವಜನರಿಗೆ ಸ್ಫೂರ್ತಿ ನೀಡುವುದು ಮತ್ತು ಅವರ ಜೀವನ ಗುರಿಗಳ ಬಗ್ಗೆ ಅರಿವು ಮೂಡಿಸುವುದು ರಾಷ್ಟ್ರೀಯ ಯುವ ದಿನದ ಉದ್ದೇಶವಾಗಿದೆ.
  • ರಾಷ್ಟ್ರೀಯ ಯುವ ದಿನವು ಯುವಜನರಿಗೆ ತಮ್ಮ ಧ್ವನಿ ಎತ್ತಲು, ತಮ್ಮ ಸಮಸ್ಯೆಗಳು ಮತ್ತು ಕಳವಳಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ಜೊತೆಗೆ ಅವರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.
  • ಈ ದಿನದಂದು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಭಾಷಣ, ಯುವ ಸಮ್ಮೇಳನಗಳು, ವಿಚಾರಗೋಷ್ಠಿಗಳು ಸೇರಿದಂತೆ ಅನೇಕ ಸ್ಪರ್ಧೆಗಳು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ – Kannada News | Leopard Spotted Near Nandi Hills Road, Tourists Asked to Stay Alert

ಚಿಕ್ಕಬಳ್ಳಾಪುರ, ಜನವರಿ 12: ನಂದಿಗಿರಿಧಾಮದ ಬಳಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ನಂದಿ ಹಿಲ್ಸ್​ಗೆ ಬರುವ ಪ್ರವಾಸಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗಿರಿಧಾಮದ ಕಣಿವೆ ಬಸವಣ್ಣ ದೇವಸ್ಥಾನದ ಬಳಿ ಭಾನುವಾರ ರಾತ್ರಿ ಚಿರತೆ ಕಾಣಿಸಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಚಿರತೆ ಸಂತತಿ ಹೆಚ್ಚಳವಾಗಿದ್ದು, ಪ್ರತಿದಿನ ಒಂದಿಲ್ಲೊಂದು ಕಡೆ ಕಾಣಿಸುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ – Kannada News | Bengaluru temperature: Bengaluru Chill Intensifies, City Shivers

ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ

ಬೆಂಗಳೂರು, ಜನವರಿ 12: ಬೆಂಗಳೂರು ಕಳೆದ ಮೂರು–ನಾಲ್ಕು ದಿನಗಳಿಂದ ಮೈಕೊರೆಯುವ ಚಳಿಯಿಂದ (Weather Forecast) ಕಂಪಿಸುತ್ತಿದೆ. ಇಂದು ಕೂಡಾ ಇಡೀ ದಿನ ಮೋಡಮುಸುಕಿದ ವಾತಾವರಣದ ಜೊತೆಗೆ ತೀವ್ರ ಚಳಿ ಕಂಡುಬಂದಿದ್ದು, ಸಿಟಿ ಜನರು ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಅದರೊಂದಿಗೆ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣವಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶೀತಗಾಳಿ ಹೆಚ್ಚಾಗಿ ತೀವ್ರ ಚಳಿ

ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಎಲ್ಲ ಸಮಯದಲ್ಲೂ ಚಳಿಯ ಪ್ರಭಾವ ಇದ್ದು, ಬೆಚ್ಚನೆಯ ಉಡುಪು, ಸ್ವೆಟರ್, ಜಾಕೆಟ್, ಕ್ಯಾಪ್ ಧರಿಸಿ ಜನರು ಪಾರ್ಕ್‌ಗಳಲ್ಲಿ ವಾಕಿಂಗ್ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಲಾಲ್‌ಬಾಗ್ ಸೇರಿದಂತೆ ವಿವಿಧ ಉದ್ಯಾನಗಳಲ್ಲಿ ಯುವಕರು, ಗೃಹಿಣಿಯರು ಹಾಗೂ ವಯೋವೃದ್ಧರು ಚಳಿಯ ನಡುವೆಯೂ ವಾಕ್ ಮಾಡಿ ಎಂಜಾಯ್ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ನಿನ್ನೆ 14 ಡಿಗ್ರಿಗೆ ಇಳಿಕೆಯಾಗಿತ್ತು. ಹವಾಮಾನ ಇಲಾಖೆ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಡಿಪ್ರೆಶನ್‌ನಿಂದ ಶೀತಗಾಳಿ ಹೆಚ್ಚಾಗಿ ಚಳಿ ತೀವ್ರವಾಗಿದೆ. ತುಂತುರು ಮಳೆಯೂ ಕೆಲವೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ವಯೋವೃದ್ಧರು ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಳಿವಿನಂಚಿನಲ್ಲಿ ದೇಶಿ ಅಕ್ಕಿ ತಳಿ ಮುಗದ ಸಿರಿ, ಸುಗಂಧ: ಔಷಧೀಯ ಗುಣ, ಪೌಷ್ಟಿಕಾಂಶಗಳ ಕಣಜವೇ ಇದರಲ್ಲಿದೆಯಂತೆ! – Kannada News | Endangered Native Rice Varieties Mugada Siri and Mugada Sugandha Face Extinction in Karnataka

ಅಳಿವಿನಂಚಿನಲ್ಲಿ ದೇಶಿ ಅಕ್ಕಿ ತಳಿ ಮುಗದ ಸಿರಿ, ಸುಗಂಧ

ಧಾರವಾಡ, ಜನವರಿ 12: ಇಡೀ ಕಿತ್ತೂರು ಸೀಮೆಯನ್ನೇ ಘಮದಲ್ಲಿ ಮುಳುಗಿಸುತ್ತಿದ್ದ ಧಾರವಾಡ (Dharawad) ಸಮೀಪದ ಮುಗದ ಗ್ರಾಮದ ಮುಗದ ಸಿರಿ ಮತ್ತು ಮುಗದ ಸುಗಂಧ ಎಂಬ ಎರಡು ದೇಶಿ ಭತ್ತದ ತಳಿಗಳು ಇದೀಗ ಕಾಲನ ಗರ್ಭ ಸೇರುತ್ತಿವೆ. ಈ ತಳಿಗಳೀಗ ಕೇವಲ ಕೃಷಿ ಸಂಶೋಧನಾ ಕೇಂದ್ರದ ಪ್ಯಾಕೇಟಿನಲ್ಲಿ ನೋಡಲು ಉಳಿದಿವೆ. ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ಗೋವಾ ಸೇರಿದಂತೆ ಕೊಂಕಣ ಭಾಗದ ಜನರ ಪ್ರಧಾನ ಆಹಾರವೇ ಆಗಿದ್ದ ದೇಶಿ ಭತ್ತದ ತಳಿಗಳ ಪೈಕಿ ಇವು ಮುಂಚೂಣಿಯಲ್ಲಿದ್ದವು. ಮುಗದ ಸಿರಿ ಮತ್ತು ಸುಗಂಧ ಭತ್ತ ಕಳೆದ ಹತ್ತು ವರ್ಷದಲ್ಲಿ ಶೇ 70 ಬಿತ್ತನೆ ಪ್ರದೇಶವನ್ನೇ ಕಳೆದುಕೊಂಡಾಗಿದೆ. ಉಚಿತ ಅಕ್ಕಿ ಹಂಚಿಕೆಯ ಪ್ರಭಾವದಿಂದಾಗಿ ದೇಶಿ ಅಕ್ಕಿಯ ಬೆಲೆಯೇ ಪ್ರಪಾತಕ್ಕೆ ಹೋಗಿದೆ. ಅದರಲ್ಲೂ, ಈ ಭಾಗದ ವಿಶೇಷ ತಳಿಯಾಗಿದ್ದ ಮುಗದ ಸಿರಿ ಮತ್ತು ಮುಗದ ಸುಗಂಧ ಅನ್ನೋ ತಳಿಗಳು ಇದೀಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಈ ತಳಿಗಳು ಸಂಪೂರ್ಣವಾಗಿ ನಶಿಸಿ ಹೋಗೋ ಸ್ಥಿತಿಗೆ ಬಂದಿವೆ.

ಪೌಷ್ಟಿಕಾಂಶಗಳ ಕಣಜವೇ ಆಗಿದ್ದ ಮುಗದ ಸಿರಿ, ಸುಗಂಧ

ಪೌಷ್ಟಿಕಾಂಶಗಳ ಕಣಜವೇ ಆಗಿರುವ ಮುಗದ ಸಿರಿ, ಸುಗಂಧ ಭತ್ತದ ಅಕ್ಕಿ ಉಣ್ಣುವ ಮನುಷ್ಯರಷ್ಟೇ ಅಲ್ಲ, ಜಾನುವಾರುಗಳು, ಪಶುಪಕ್ಷಿಗಳು ಕೂಡ ಸದೃಢವಾಗಿ ಬಿಡುತ್ತಿದ್ದವು. ಅಷ್ಟೊಂದು ಫೈಬರ್ ‌ಸೇರಿ ಇತರ ಖನಿಜಾಂಶಗಳಿರುವ ಈ ಅಕ್ಕಿ ಒಂದು ಕಾಲದಲ್ಲಿ ಬಿರಿಯಾನಿಗೆ ಬಳಕೆಯಾಗುತ್ತಿತ್ತು. ಎಷ್ಟೋ ಸಲ ಮುಂಬೈ, ಗೋವಾ ಮತ್ತು ಹೈದರಾಬಾದ್​ನಿಂದ ಬರುವ ವ್ಯಾಪಾರಿಗಳು ಈ ಭತ್ತ ಖರೀದಿಸುತ್ತಿದ್ದರು. ಆದರೆ ಇದೀಗ ರೈತರು ಬೇರೆ ಬೇರೆ ಬೆಳೆಗಳ ಬೆನ್ನು ಹತ್ತಿ ಈ ತಳಿಗಳನ್ನು ನಿರ್ಲಕ್ಷಿಸಿದ್ದಾರೆ.

ಭತ್ತದ ತಳಿ ನಶಿಸಲು ಸಕ್ಕರೆ ಕಾರ್ಖಾನೆಗಳೇ ಕಾರಣ!

ಈ ಪ್ರದೇಶದಲ್ಲಿ ತಲೆ ಎತ್ತಿರುವ ಸಕ್ಕರೆ ಕಾರ್ಖಾನೆಗಳೇ ಈ ತಳಿ ನಶಿಸಿ ಹೋಗಲು ಕಾರಣವಾಗಿವೆ. ದೇಶಿ ಭತ್ತದ ತಳಿಗಳನ್ನು ಬೆಳೆಯುತ್ತಿದ್ದ ಭೂಮಿಯಲ್ಲಿ ಇದೀಗ ಕಬ್ಬಿನ ಬೆಳೆ ಹೆಚ್ಚಾಗಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಮತ್ತು ಕಳೆನಾಶಕಗಳ ಬಳಕೆ ಹೆಚ್ಚುತ್ತಿದ್ದು ಪರಿಸರ ಸ್ನೇಹಿ ಭತ್ತದ ನಾಡೆಲ್ಲವೂ ವಿಪರೀತ ಭೂ ಮತ್ತು ಜಲಮಾಲಿನ್ಯದ ಬೀಡಾಗುತ್ತಿದೆ. ಒಂದು ದಶಕದಲ್ಲಿ 50 ಸಾವಿರ ಹೆಕ್ಟೇ‌ರ್​ನಷ್ಟು ಪ್ರದೇಶದಲ್ಲಿ ಭತ್ತದ ಬದಲು ಕಬ್ಬು ಬೆಳೆ ಆವರಿಸಿಕೊಂಡಿದೆ.

ಭತ್ತದ ತಳಿ ನಾಶಕ್ಕೆ ಕಾರಣವೇನು?

ದೇಶಿ ಭತ್ತಕ್ಕೆ ಮಾರುಕಟ್ಟೆ ಕುಸಿತ, ಉಚಿತವಾಗಿ ಅಕ್ಕಿ ವಿತರಣೆ ಪರಿಣಾಮ, ಕಬ್ಬಿಗೆ ಮಾರು ಹೋದ ರೈತರು, ಕೂಲಿಯಾಳುಗಳ ಕೊರತೆ, ಆಧುನಿಕ ಜೀವನ ಶೈಲಿಯ ಫಾಸ್ಟ್ ಫುಡ್ ಸಂಸ್ಕೃತಿಗೆ ಮಾರುಹೋದ ಪರಿಣಾಮವೇ ಈ ತಳಿಗಳು ನಶಿಸಿ ಹೋಗಲು ಕಾರಣವಾಗಿದೆ ಎಂದು ಅಭುಪ್ರಾಯಪಟ್ಟಿದ್ದಾರೆ ಕೃಷಿ ತಜ್ಞ ಡಾ. ಪ್ರಕಾಶ ಭಟ್.

ಇದನ್ನೂ ಓದಿ: ಬೀದರ್​​ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ

ಈ ತಳಿಗಳೊಂದಿಗೆ ಕಿತ್ತೂರು ಸೀಮೆಯಲ್ಲಿ 200ಕ್ಕೂ ಅಧಿಕ ತಳಿಯ ದೇಶಿ ಭತ್ತಗಳನ್ನು ಜನ ಸಾಂಪ್ರದಾಯಿಕ ಕೃಷಿ ವಿಧಾನದ ಮೂಲಕ ಬೆಳೆಯುತ್ತಿದ್ದರು. ಈ ಎಲ್ಲ ತಳಿಗಳು ಮಳೆಯಾಶ್ರಿತ ಮತ್ತು ಬಿತ್ತನೆ ಪದ್ಧತಿಯಲ್ಲಿ ಬೆಳೆಯುವಂತಹದ್ದಾಗಿವೆ. ಕಾಗಸಾಳಿ, ಅಂತರಸಾಳಿ, ಕುಂಕುಮಸಾಳಿ, ಕೊಂಕಣಸಾಳಿ, ದೊಡಗ್ಯಾ, ಬಂಗಾರಕಡ್ಡಿ, ಗಂಧಸಾಳಿ, ಮುಗದಸಿರಿ, ಮನಸೂರ ಸಾಳಿ ಹೀಗೆ ದೇಶಿ ತಳಿಯ ಮೂಲ ಭತ್ತದ ತಳಿಗಳೇ ಇದೀಗ ಕಣ್ಮರೆಯಾಗುತ್ತಿವೆ. ಒಟ್ಟಿನಲ್ಲಿ ಅದ್ಭುತವಾಗಿರುವ ತಳಿಗಳು ಆಧುಕಿನ ಕೃಷಿ ಪದ್ಧತಿಯ ಹೊಡೆತಕ್ಕೆ ನಲುಗಿ, ಇದೀಗ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಸೂರಜ್​​ಗೆ ಸೀರಿಯಲ್ ಆಫರ್; ‘ಪವಿತ್ರ ಬಂಧನ’ದ ಕಥೆ ಏನು? – Kannada News | Bigg Boss Suraj Lands Lead Role in ‘Pavitra Bandhana’ Serial

ಬಿಗ್ ಬಾಸ್​ ಅಲ್ಲಿ ಚಾಕೋಲೇಟ್ ಹೀರೋ ಆಗಿ ಮಿಂಚಿದವರು ಸೂರಜ್. ಅವರು ವೃತ್ತಿಯಲ್ಲಿ ಈ ಮೊದಲು ಬಾಣಸಿಗ ಆಗಿದ್ದರು. ಆ ಬಳಿಕ ಅವರು ಮಾಡೆಲಿಂಗ್ ಆರಂಭಿಸಿದರು. ನಂತರ ಬಿಗ್ ಬಾಸ್ ಆಫರ್ ಕೂಡ ಪಡೆದರು. ಇಷ್ಟೆಲ್ಲ ಸಾಧನೆ ಮಾಡಿದ ಸೂರಜ್ ಅವರಿಗೆ ಈಗ ಸೀರಿಯಲ್ ಆಫರ್ ಬಂದಿದೆ. ‘ಪವಿತ್ರ ಬಂಧನ’ ಅನ್ನೋದು ಧಾರಾವಾಹಿಯ ಹೆಸರು. ಶೀಘ್ರವೇ ಧಾರಾವಾಹಿ ಪ್ರಸಾರ ಕಾಣಲಿದೆ.

ಸೂರಜ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಹೈಲೈಟ್ ಆದರು. ಅವರು ಹೀರೋ ಎಂದೇ ಕೆಲವರು ಭಾವಿಸಿದ್ದು ಇದೆ. ಆದರೆ, ಅವರ ಕ್ಷೇತ್ರವೇ ಬೇರೆ. ಬಿಗ್ ಬಾಸ್​ಗೆ ಸೇರುವಾಗ ಅವರ ಹಿಂಬಾಲಕರ ಸಂಖ್ಯೆ ಕೇವಲ 18 ಸಾವಿರ ಇತ್ತು. ಈಗ ಮೂರುವರೆ ಲಕ್ಷಕ್ಕೆ ಏರಿಕೆ ಆಗಿದೆ. ಈ ಜನಪ್ರಿಯತೆಯಿಂದಲೇ ಅವರಿಗೆ ಸೀರಿಯಲ್ ಆಫರ್ ಸಿಕ್ಕಿದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್

‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಸೂರಜ್ ಅವರು ದೇವದತ್ ದೇಶ್​ಮುಖ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಕಥೆಯ ನಾಯಕಿ. ದೇವದತ್ ಹಾಗೂ ತಿಲಕ್ ಅಣ್ಣ-ತಮ್ಮ. ಇಬ್ಬರೂ ತುಂಬಾನೇ ಕ್ಲೋಸ್. ತಿಲಕ್ ಹಾಗೂ ಕಥಾ ನಾಯಕಿ ಪವಿತ್ರಾ ಪ್ರೀತಿಸುತ್ತಿರುತ್ತಾರೆ. ಆದರೆ, ಆಕೆ ದೇವದತ್​​ನ ಮದುವೆ ಆಗೋ ಪರಿಸ್ಥಿತಿ ಬರುತ್ತದೆ. ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಕಂಡರೇ ಆಗೋದಿಲ್ಲ. ಆದಾರೂ ಮದುವೆ ಆಗುತ್ತಾರೆ. ಇದು ಧಾರಾವಾಹಿಯ ಕಥೆ.

ಸೂರಜ್ ಅವರಿಗೆ ಧಾರಾವಾಹಿ ಆಫರ್ ಸಿಕ್ಕಿರೋದಕ್ಕೆ ಅವರು ಖುಷಿಪಟ್ಟಿದ್ದಾರೆ. ಬಿಗ್ ಬಾಸ್ ಬಳಿಕ ಇಷ್ಟು ದೊಡ್ಡ ಆಫರ್ ಕೈ ಸೇರಿದೆ. ಧಾರಾವಾಹಿಯಲ್ಲಿ ಅವರು ಯಾವ ರೀತಿಯಲ್ಲಿ ನಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಅನೇಕರ ಬದುಕನ್ನು ಬದಲಾಯಿಸುತ್ತದೆ. ಸೂರಜ್ ಬದುಕನ್ನು ಕೂಡ ಈ ರಿಯಾಲಿಟಿ ಶೋ ಬದಲಿಸಿದೆ. ವೈಲ್ಡ್ ಕಾರ್ಡ್ ಮೂಲಕ ಅವರು ಎಂಟ್ರಿ ಕೊಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:35 am, Mon, 12 January 26

Source link

Video: ಜಮ್ಮು-ಕಾಶ್ಮೀರದ ಗಡಿಯಲ್ಲಿ ಐದು ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

ಶ್ರೀನಗರ, ಜನವರಿ 12: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆಯ ಬಳಿ ಡ್ರೋನ್ ಚಟುವಟಿಕೆ ಹೆಚ್ಚುತ್ತಿದೆ. ಗಣರಾಜ್ಯೋತ್ಸವಕ್ಕೂ ಮುನ್ನ ಪಾಕಿಸ್ತಾನ ಭಾರತದ ಗಡಿಗಳ ಬಳಿ ಡ್ರೋನ್ ಚಟುವಟಿಕೆಯನ್ನು ಹೆಚ್ಚಿಸಿದ್ದು, ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರವಹಿಸಿವೆ. ಭದ್ರತಾ ಸಂಸ್ಥೆಗಳ ಪ್ರಕಾರ, ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿಯ ವಿವಿಧ ಪ್ರದೇಶಗಳಲ್ಲಿ ಒಟ್ಟು ಐದು ಡ್ರೋನ್‌ಗಳು ಪತ್ತೆಯಾಗಿವೆ. ಪೂಂಚ್, ನೌಶೇರಾ, ಧರ್ಮಶಾಲಾ, ರಾಮಗಢ ಮತ್ತು ಪರಾಖ್ ಪ್ರದೇಶಗಳಲ್ಲಿ ಡ್ರೋನ್ ಕಾಣಿಸಿಕೊಂಡ ವರದಿಯಾಗಿದೆ.

ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ಡ್ರೋನ್ ಪತ್ತೆಯಾಗಿದೆ. ಭಾರತೀಯ ಸೇನೆಯು ತಕ್ಷಣ ಪ್ರತಿಕ್ರಿಯಿಸಿ ಅದರ ಮೇಲೆ ಗುಂಡು ಹಾರಿಸಿತು. ಎಲ್ಲಾ ಡ್ರೋನ್‌ಗಳು ಪಾಕಿಸ್ತಾನದಿಂದ ಬಂದು ಕೆಲವು ನಿಮಿಷಗಳ ಕಾಲ ಭಾರತದ ಭೂಪ್ರದೇಶದ ಮೇಲೆ ಸುಳಿದಾಡಿದ ನಂತರ ಹಿಂತಿರುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ, ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿಯ ಘಗ್ವಾಲ್‌ನ ಪಲೋರಾ ಗ್ರಾಮದಲ್ಲಿ ಪಾಕಿಸ್ತಾನದಿಂದ ಡ್ರೋನ್ ಮೂಲಕ ಬೀಳಿಸಲಾದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?

ಬೆಂಗಳೂರು, ಜನವರಿ 12: ಪ್ರತಿದಿನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಶುಕ್ರವಾರವನ್ನು ವಿಶೇಷವಾಗಿ ಮಹಾಲಕ್ಷ್ಮಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಹಾಲಕ್ಷ್ಮಿಯ ಅನುಗ್ರಹ ಪಡೆಯಲು ಹಲವು ಧಾರ್ಮಿಕ ಆಚರಣೆಗಳನ್ನು ಪಾಲಿಸಲಾಗುತ್ತದೆ. ಶುಕ್ರವಾರದಂದು ಹುಳಿ ಪದಾರ್ಥಗಳನ್ನು ಸೇವಿಸುವುದರಿಂದ ದೂರವಿರುವುದು ಹಿಂದೂ ಸಂಪ್ರದಾಯದಲ್ಲಿ ಮಹತ್ವ ಪಡೆದಿದೆ.

ಮಹಾಲಕ್ಷ್ಮಿ ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ. ಶುಕ್ರವಾರದಂದು ಈ ದೇವಿಗೆ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸುವುದು ಅತ್ಯಂತ ಶುಭಕರ. ಹುಣಸೆಹಣ್ಣು, ನಿಂಬೆಹಣ್ಣು, ಉಪ್ಪಿನಕಾಯಿ, ವಿನೆಗರ್, ಕಿತ್ತಳೆ ಹಣ್ಣಿನಂತಹ ಹುಳಿ ಪದಾರ್ಥಗಳನ್ನು ಸೇವಿಸದೆ ಪೂಜೆ ಮಾಡಿದಾಗ ಮಹಾಲಕ್ಷ್ಮಿ ಶೀಘ್ರವಾಗಿ ಒಲಿಯುತ್ತಾಳೆ ಎಂದು ನಂಬಲಾಗಿದೆ. ಇದು ಧನಾತ್ಮಕ ಶಕ್ತಿಗಳನ್ನು ಆಕರ್ಷಿಸಲು ಮತ್ತು ದೈವಿಕ ಕೃಪೆಗೆ ಪಾತ್ರರಾಗಲು ಸಹಕಾರಿ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹುಳಿ ಪದಾರ್ಥಗಳಿಂದ ದೂರವಿರುವುದು ಉತ್ತಮ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Exit mobile version