ನವೀಕರಿಸಬಹುದಾದ ಇಂಧನ: 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅಗತ್ಯ; ಪ್ರಲ್ಹಾದ್ ಜೋಶಿ – Kannada News | Renewable energy: India needs 300 billion US dollars investment; Pralhad Joshi
ಬೆಂಗಳೂರು, ಜನವರಿ 11: ಭಾರತ (India) ನವೀಕರಿಸಬಹುದಾದ ಇಂಧನ ಸಾಮರ್ಥ್ಯ 266 ಗಿಗಾವ್ಯಾಟ್ ದಾಟಿದ್ದಲ್ಲದೆ, ದೇಶವನ್ನು ಜಾಗತಿಕ ನಾಯಕ ಸ್ಥಾನದಲ್ಲಿರಿಸಿದೆ. ಜಾಗತಿಕ ಇಂಧನ ಪರಿವರ್ತನೆಗೆ ಅಭೂತಪೂರ್ವ ಹೂಡಿಕೆ ಮತ್ತು ಸಹಕಾರದ ಅಗತ್ಯವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಯುಎಇಯ ಅಬುಧಾಬಿಯಲ್ಲಿ ನಡೆದ 16ನೇ ಐಆರ್ಇಎನ್ಎ ಅಸೆಂಬ್ಲಿಯ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತಕ್ಕೆ 2030ರ ವೇಳೆಗೆ ಸುಮಾರು 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯ…