ಅಮೆರಿಕದ ನಿಷೇಧದ ನಡುವೆಯೂ ರಷ್ಯನ್ ತೈಲ ಖರೀದಿ ಮುಂದುವರಿಸಲಿರುವ ಭಾರತ – Kannada News | India Continues Russia Oil Imports Despite US Sanctions for Energy Security
ನವದೆಹಲಿ, ಏಪ್ರಿಲ್ 17: ಅಮೆರಿಕದ ನಿಷೇಧ ಕ್ರಮ ಜಾರಿಯಲ್ಲಿದ್ದರೂ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಲಿದೆ ಎಂದು ದಿ ಮಿಂಟ್ನಲ್ಲಿ ವರದಿಯಾಗಿದೆ. ಅಧಿಕೃತ ಮೂಲಗಳು ತಿಳಿಸಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಆದರೆ, ಭಾರತದ ವತಿಯಿಂದ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ಬಿಡುಗಡೆ ಆಗಿಲ್ಲ. ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಲಾಗುತ್ತಿರುವುದು ದೇಶದ ಹಿತದೃಷ್ಟಿಯಿಂದ ತೆಗೆದುಕೊಂಡ ಸ್ವಂತ ನಿರ್ಧಾರವೇ ಹೊರತು ಇನ್ನೊಂದು ರಾಷ್ಟ್ರದ ಕೃಪೆಯಿಂದಲ್ಲ ಎಂಬರ್ಥದಲ್ಲಿ ಸರ್ಕಾರವು ಈ ಹಿಂದೆ ಹೇಳಿದ್ದಿದೆ. ಇರಾನ್ ಯುದ್ಧ ಶುರುವಾದ…