ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್ – Kannada News | Threatening case against Yash mother Pushpa Arunkumar supporters in Hassan

ಹಾಸನದ ದೇವರಾಜ್ ಹಾಗೂ ಯಶ್ ತಾಯಿ (Yash Mother) ಪುಷ್ಪ ಅರುಣ್​​ಕುಮಾರ್ ನಡುವೆ ಆಸ್ತಿ ವಿಚಾರವಾಗಿ ವಿವಾದ ಏರ್ಪಟ್ಟಿದೆ. ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದೆ. ಆ ಬಗ್ಗೆ ದೇವರಾಜ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಪುಷ್ಪಾ (Pushpa Arunkumar) ಮೇಡಂ ಹಾಗೂ ಅವರ ಪಕ್ಕದಲ್ಲಿ ಇರುವ ಒಬ್ಬ ವೆಯ್ಟ್ ಮೆಜರ್​​ಮೆಂಟ್ ಇನ್ಸ್​​ಪೆಕ್ಟರ್ ನಟರಾಜು ಹಾಗೂ ದುರ್ಗಾ ಪ್ರಸಾದ್ ಎಂಬುವವರು ನನ್ನ ಮೇಲೆ ಹಾಗೂ ನನ್ನ ಬೆಂಬಲಿಗರ ಮೇಲೆ ದೂರು ಕೊಟ್ಟಿದ್ದರು. ನಾವು ಅವರ ಮೇಲೆ ಬೆದರಿಕೆ ಹಾಕಿದ್ದೇವೆ ಅಂತ ದೂರು ಕೊಟ್ಟಿದ್ದಾರೆ. ನಾನು ಯಾವುದೇ ರೀತಿಯಲ್ಲೂ ಅವರಿಗೆ ಅಡ್ಡಿ ಮಾಡಿಲ್ಲ. ಅವರೇ ನನಗೆ ತೊಂದರೆ ಕೊಡುತ್ತಿದ್ದಾರೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಆ ಜಾಗಕ್ಕೆ ಹೋಗಿದ್ದಾರೆ. ಅದನ್ನು ನಾವು ಕೇಳಲು ಹೋದಾಗ ನಟರಾಜು ಹಾಗೂ ದುರ್ಗಾ ಪ್ರಸಾದ್ ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಅವರ ಮೇಲೆ ನಾನು ದೂರು ನೀಡುತ್ತೇನೆ’ ಎಂದು ದೇವರಾಜ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಜನವರಿ ತಿಂಗಳ ಎರಡನೇ ವಾರದ ಭವಿಷ್ಯ ತಿಳಿಯಿರಿ – Kannada News | January 2nd Week Horoscope 2026: Zodiac Predictions and Financial Fortunes

ಜನವರಿ ತಿಂಗಳ ಎರಡನೇ ವಾರ ವಿಶೇಷವಾಗಿ ಅಲೌಕಿಕ ಸಂಪತ್ತು ಪಡೆಯಬೇಕೆನ್ನುವ, ಆಸೆ ಕುತೂಹಲ. ಪರರ ಸಂಪತ್ತಿಗೂ ಬಯಕೆ ಅಧಿಕವಾಗಲಿದೆ. ದಾನ, ಧರ್ಮದಿಂದ ಎಲ್ಲವನ್ನೂ ಸರಿಮಾಡಿಕೊಳ್ಳುವ ಮಾರ್ಗ ಸಿಗಲಿದೆ. ಶುಭವಾಗಲಿ ಎಲ್ಲರಿಗೂ

ಮೇಷ ರಾಶಿ:

ಈ ವಾರ ಸಮಯ ಅಚಾನಕ್ ತಿರುವು ತರುತ್ತದೆ. ಆತುರ ತಪ್ಪಿಸಿ ನಿರೀಕ್ಷೆ ಇಡಿ. ತಡವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಲಾಭ ಕೊಡುತ್ತವೆ. ಧೈರ್ಯಕ್ಕಿಂತ ಸಂಯಮ ಮುಖ್ಯ.

ವೃಷಭ ರಾಶಿ:

ಈ ವಾರದಲ್ಲಿ ನಿಧಾನವಾದ ಕಾಲಪ್ರವಾಹ ನಿಮ್ಮ ಪಾಲಿಗೆ ಅನುಕೂಲ. ತಾಳ್ಮೆಯಿಂದ ಮಾಡಿದ ಕೆಲಸ ಶಾಶ್ವತ ಫಲ ನೀಡುತ್ತದೆ. ಹಣಕಾಸಿನಲ್ಲಿ ಸ್ಥಿರತೆ. ಸಮಯವನ್ನು ಒತ್ತಾಯಿಸಬೇಡಿ.

ಮಿಥುನ ರಾಶಿ:

ಎರಡನೇ ವಾರ ಮಾತು, ಮಾಹಿತಿ, ಸಂದೇಶಗಳ ಮೂಲಕ ಅವಕಾಶಗಳು ಬರುತ್ತವೆ. ಸರಿಯಾದ ಕ್ಷಣದಲ್ಲಿ ಮಾತನಾಡಿದರೆ ಲಾಭ. ಅಸಮಯದ ಮಾತು ಗೊಂದಲ ಉಂಟುಮಾಡುತ್ತದೆ.

ಕರ್ಕಾಟಕ ರಾಶಿ:

ಈ ರಾಶಿಗೆ ಎರಡನೇ ವಾರ ಭಾವನಾತ್ಮಕತೆಯಿಂದ ಪ್ರಭಾವ ಜಾಸ್ತಿ. ಮನಸ್ಸು ಒಪ್ಪಿದ ಸಮಯದಲ್ಲೇ ಕಾರ್ಯಸಾಧನೆ. ಒತ್ತಾಯದ ಕೆಲಸ ವಿಫಲ. ಕುಟುಂಬ ವಿಚಾರಗಳು ಮನಸ್ಸನ್ನು ಆವರಿಸುತ್ತವೆ.

ಸಿಂಹ ರಾಶಿ:

ಈ ವಾರ ನಾಯಕತ್ವ ವಿಜೃಂಭಿಸುವ ಸಮಯ. ಮುನ್ನಡೆಸಿದರೆ ಫಲ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಅಹಂಕಾರ ಹೆಚ್ಚಾದರೆ ಹಿನ್ನಡೆ. ಗೌರವ, ಅಧಿಕಾರ ಸಂಬಂಧಿತ ವಿಚಾರಗಳು ಮುನ್ನೆಲೆ.

ಕನ್ಯಾ ರಾಶಿ:

ಬುಧನ ಆಧಿಪತ್ಯದ ಈ ರಾಶಿಗೆ ಸೂಕ್ಷ್ಮತೆಯನ್ನು ಪರೀಕ್ಷಿಸುವ ಕಾಲ. ಸಣ್ಣ ತಪ್ಪಿಗೂ ಹೆಚ್ಚು ಪರಿಣಾಮ. ಸಮಯಪಾಲನೆ, ಕ್ರಮಬದ್ಧತೆ ಜಯ ತರುತ್ತದೆ. ಕೆಲಸದ ಒತ್ತಡ ಹೆಚ್ಚಾದರೂ ಫಲ ಸಿಗುತ್ತದೆ.

ತುಲಾ ರಾಶಿ:

ನಿಮಗೆ ಈ ವಾರ ಸಮತೋಲನದ ಅವಶ್ಯಕತೆ ಹೆಚ್ಚು. ಎರಡು ವಿಷಯಗಳ ನಡುವೆ ತೀರ್ಮಾನ ಅಗತ್ಯ. ತೂಕ ಹಾಕಿ ನಿರ್ಧಾರ ತೆಗೆದುಕೊಂಡರೆ ಲಾಭ. ಸಂಬಂಧಗಳಲ್ಲಿ ಸಂಯಮ ಬೇಕು.

ವೃಶ್ಚಿಕ ರಾಶಿ:

ಜನವರಿಯ ಎರಡನೇ ವಾರ ಗುಪ್ತವಾಗಿರುವ ಕಾಲದ ಪ್ರಭಾವವನ್ನು ಎದುರಿಸುವಿರಿ. ಮೌನವಾಗಿ ಮಾಡಿದ ಪ್ರಯತ್ನಗಳಿಗೆ ಬೆಂಬಲ. ರಹಸ್ಯ ಯೋಜನೆಗಳು ಫಲ ಕೊಡುತ್ತವೆ. ಬಹಿರಂಗ ಮಾತುಗಳಿಂದ ದೂರವಿರುವುದು ಒಳಿತು.

ಧನು ರಾಶಿ:

ಈ ವಾರ ವಿಸ್ತಾರವಾಗಿ ಹರಡಿದ ನಿಮ್ಮ ಸಮಯವನ್ನು ಏನು ಮಾಡಬೇಕು ಎಂಬ ಜಿಜ್ಞಾಸೆ. ಮುಂದಿನ ದಿನಗಳ ಯೋಜನೆಗಳು ಮಹತ್ವದವು. ಈಗ ಮಾಡಿದ ಪ್ರಯತ್ನಗಳ ಫಲ ತಡವಾಗಿ ಬರುತ್ತದೆ. ಆತುರಕ್ಕಿಂತ ದೃಷ್ಟಿಕೋನ ಮುಖ್ಯ.

ಮಕರ ರಾಶಿ:

ನೀವು ಈ ವಾರದಲ್ಲಿ ಶ್ರಮ, ಶಿಸ್ತಿನ ಬಗ್ಗೆ ಗಮನ ಹರಿಸುವ ಕಾಲ. ಸಮಯಕ್ಕೆ ಮಾಡಿದ ಕಠಿಣ ಪರಿಶ್ರಮ ಗೌರವ ತರುತ್ತದೆ. ಸುಲಭ ದಾರಿ ಹಾನಿಕರ. ಜವಾಬ್ದಾರಿಗಳು ಹೆಚ್ಚಾದರೂ ಸ್ಥಿರತೆ ಸಿಗುತ್ತದೆ.

ಕುಂಭ ರಾಶಿ:

ಶನಿಯ ಆಧಿಪತ್ಯದ ಈ ರಾಶಿಯವರಿಗೆ ಅನಿರೀಕ್ಷಿತ ಬದಲಾವಣೆಯ ಸಮಯ ಎದುರಾಗುವುದು. ನಿರೀಕ್ಷಿಸದ ಅವಕಾಶಗಳು ಬರುತ್ತವೆ. ರೂಢಿ ಯೋಚನೆ ಬಿಡಿ. ಬದಲಾವಣೆ ಸ್ವೀಕರಿಸಿದರೆ ಲಾಭ ಸಾಧ್ಯ.

ಮೀನ ರಾಶಿ:

ಆಂತರಿಕ ಜ್ಞಾನ ಕಾರ್ಯನಿರ್ವಹಿಸಿಲಿದ್ದು, ಅದನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕು. ಮನಸ್ಸಿನ ಸೂಚನೆ ಅನುಸರಿಸಿದರೆ ಯಶಸ್ಸು. ಹೊರಗಿನ ಸಲಹೆಗಿಂತ ಸ್ವಂತ ಅನುಭವ ಮುಖ್ಯವಾಗುತ್ತದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು – Kannada News | After 3 new FTAs in 2025, India looking for more trade deals

ನವದೆಹಲಿ, ಜನವರಿ 11: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ (India US trade deal) ಮಾಡಿಕೊಳ್ಳಲು ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆ ಫಲಪ್ರದವಾಗುವ ಲಕ್ಷ ಸದ್ಯಕ್ಕಂತೂ ಕಾಣುತ್ತಿಲ್ಲ. ಅಮೆರಿಕವು ಭಾರತಕ್ಕೆ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿರುವುದರಿಂದ ಈ ಟ್ರೇಡ್ ಡೀಲ್ ಮಹತ್ವದ್ದು. ಭಾರತಕ್ಕೆ ಹಲವು ಬಿಲಿಯನ್ ಡಾಲರ್​ಗಳಷ್ಟು ರಫ್ತಿಗೆ ಸಂಚಕಾರವಾಗಲಿದೆ. ಹೀಗಾಗಿ, ಭಾರತವು ಈ ನಷ್ಟ ಭರಿಸಲು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ. ಕಳೆದ ವರ್ಷವೇ ಮೂರು ಟ್ರೇಡ್ ಡೀಲ್ ಕುದುರಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.

ಭಾರತದ ಆರ್ಥಿಕತೆಯು ಈಗ ಹೆಚ್ಚಾಗಿ ಅನುಭೋಗ ಮತ್ತು ಸರ್ವಿಸ್ ಸೆಕ್ಟರ್ ಮೇಲೆ ಅವಲಂಬಿತವಾಗಿದೆ. ಜಿಡಿಪಿ ಇನ್ನಷ್ಟು ವೇಗದಲ್ಲಿ ಬೆಳೆಯಬೇಕಾದರೆ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಕೊಡುಗೆ ಹೆಚ್ಚಬೇಕು. ಅದಕ್ಕೆ ರಫ್ತು ಹೆಚ್ಚಾಗಬೇಕು. ಹೀಗಾಗಿ, ಭಾರತವು ಅಮೆರಿಕದ ಟ್ಯಾರಿಫ್ ಹೊಡೆತದ ನಷ್ಟವನ್ನು ಸರಿದೂಗಿಸಲು ಪರ್ಯಾಯ ಮಾರುಕಟ್ಟೆ ಹುಡುಕುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು

ಕಳೆದ ವರ್ಷ ಬ್ರಿಟನ್, ನ್ಯೂಜಿಲ್ಯಾಂಡ್ ಮತ್ತು ಓಮನ್ ದೇಶ ಜೊತೆ 2025ರಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಆಸ್ಟ್ರೇಲಿಯಾದೊಂದಿಗಿನ ವ್ಯಾಪಾರ ಒಪ್ಪಂದವೂ ಜಾರಿಯಾಗಿದೆ. ಯೂರೋಪಿಯನ್ ಯೂನಿಯನ್, ಯೂರೇಶಿಯನ್ ಎಕನಾಮಿಕ್ ಯೂನಿಯನ್, ಮೆಕ್ಸಿಕೋ, ಚಿಲಿ, ಸೌತ್ ಅಮೆರಿಕನ್ ಮೆರ್ಕೋಸುರ್ ಟ್ರೇಡ್ ಬ್ಲಾಕ್ ಮೊದಲಾದ ದೇಶಗಳು ಮತ್ತು ಗುಂಪುಗಳ ಜೊತೆ ಭಾರತವು ಟ್ರೇಡ್ ಡೀಲ್​ಗೆ ಮಾತುಕತೆ ನಡೆಸುತ್ತಿದೆ.

ಸಮಗ್ರ ಆರ್ಥಿಕ ಸಹಭಾಗಿತ್ವದ ಚೌಕಟ್ಟಿನಡಿ (ಸಿಇಪಿಎ) ಭಾರತ ಹಲವಾರು ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ದಕ್ಷಿಣ ಏಷ್ಯಾ, ಪಶ್ಚಿಮ ಏಷ್ಯಾ ಹೀಗೆ ವಿವಿಧ ಪ್ರದೇಶಗಳ ದೇಶಗಳೊಂದಿಗೆ ವ್ಯಾಪಾರ ಒಪ್ಪಂದವಾಗಿವೆ. ಈಗ ಈ ಒಪ್ಪಂದದ ವ್ಯಾಪ್ತಿ ಮತ್ತು ಆಳವನ್ನು ಹೆಚ್ಚಿಸಲು ಭಾರತ ಪ್ರಯತ್ನಿಸುತ್ತಿದೆ. ಇದರಲ್ಲಿ ಸಫಲವಾದರೆ, ಹೆಚ್ಚಿನ ಸರಕುಗಳನ್ನು ಟ್ಯಾರಿಫ್ ರಹಿತವಾಗಿ ಅಥವಾ ಕಡಿಮೆ ಟ್ಯಾರಿಫ್​ನಲ್ಲಿ ರಫ್ತು ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಭಾರತ ಮತ್ತು ಅಮೆರಿಕ ನಡುವೆ ಕ್ರಿಯೆ, ಪ್ರತಿಕ್ರಿಯೆ…

ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ಜೊತೆ ಯಾವ ದೇಶಗಳೂ ವ್ಯಾಪಾರ ಮಾಡಬಾರದು ಎಂಬುದು ಅಮೆರಿಕದ ಇರಾದೆ. ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ತೈಲ ಆಮದು ಮಾಡಿಕೊಂಡಿದ್ದು ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ, ಶೇ. 50ರಷ್ಟು ಟ್ಯಾರಿಫ್ ಹಾಕಿದೆ. ಮುಂದೆ ಶೇ. 500 ಟ್ಯಾರಿಫ್ ಹಾಕುವ ಬೆದರಿಕೆಯನ್ನೂ ಒಡ್ಡಿದೆ. ಹೀಗಾಗಿ, ಭಾರತವೂ ಕೂಡ ಪರ್ಯಾಯ ಮಾರುಕಟ್ಟೆ ಅವಲೋಕಿಸುವುದು ಅನಿವಾರ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 1:36 pm, Sun, 11 January 26

Source link

ಚಿನ್ನದ ನಿಧಿಯನ್ನು ಸರ್ಕಾರಕ್ಕೆ ನೀಡಿದ್ದೇ ತಪ್ಪಾಯ್ತಾ? ಬೀದಿಗೆ ಬೀಳುವ ಭಯದಲ್ಲಿ ಕುಟುಂಬ

ಗದಗ, ಜ.11: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ ಪತ್ತೆಯಾದ ಘಟನೆ ಇದೀಗ ಹೊಸದೊಂದು ಸಮಸ್ಯೆಗೆ ಕಾರಣವಾಗಿದೆ. ಪ್ರಾಮಾಣಿಕತೆ ಮೆರೆದ ಕುಟುಂಬ ನಿಧಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರೂ, ಈಗ ಆ ಕುಟುಂಬಕ್ಕೆ ಭಯ ಮತ್ತು ಆತಂಕ ಶುರುವಾಗಿದೆ. ನಿಧಿ ಸಿಕ್ಕಿದ ಸ್ಥಳವನ್ನು ನಿಷಿದ್ಧ ಪ್ರದೇಶವೆಂದು ಘೋಷಿಸಿರುವ ಕಾರಣ, ಅವರು ಕಟ್ಟುತ್ತಿದ್ದ ಮನೆ ಅರ್ಧಕ್ಕೆ ನಿಂತಿದೆ. ಹೀಗಾಗಿ, ವಾಸಕ್ಕೆ ಮನೆಯಿಲ್ಲದೆ ಕುಟುಂಬ ಬೀದಿಗೆ ಬಂದಂತಾಗಿದ್ದು, ಎಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿದೆ. ಮನೆಯ ಯಜಮಾನ ಮೃತಪಟ್ಟಿದ್ದು, ಕುಟುಂಬದಲ್ಲಿ ತಾಯಿ ಮತ್ತು ಚಿಕ್ಕ ಮಗನಿದ್ದಾನೆ. ಈ ಬಡ ಕುಟುಂಬಕ್ಕೆ ಈಗ ಆಸರೆ ಇಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಸದಸ್ಯರು ಮತ್ತು ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರ ಮಾನವೀಯ ದೃಷ್ಟಿಯಿಂದ ಕುಟುಂಬಕ್ಕೆ ಒಂದು ನಿವೇಶನ ಅಥವಾ ಮನೆಯನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುಟುಂಬದವರು ಚಿನ್ನದ ಆಸೆಯನ್ನು ಬಿಟ್ಟು, ನಮಗೆ ಮನೆ ಬೇಕು ಎಂದು ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ಟಿವಿ9 ಜತೆಗೆ ಮಾತನಾಡಿ ಕುಟುಂಬದವರು , “ನಮ್ಮ ಅಣ್ಣನ ಮನೆ ಅಥವಾ ಸಣ್ಣ ಮಾವನ ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದೇವೆ. ಚಿನ್ನದ ನಿಧಿ ನಮಗೆ ಬೇಡ, ಸರ್ಕಾರ ನಮಗೆ ಬದುಕಲು ಒಂದು ಮನೆ ನೀಡಿದರೆ ಸಾಕು. ಮಗನಿಗೆ ಶಿಕ್ಷಣ ಕೊಡಿಸಿ, ಅವನ ಭವಿಷ್ಯ ರೂಪಿಸಲು ಸಹಾಯ ಮಾಡಿ” ಎಂದು ಬೇಡಿಕೊಂಡಿದ್ದಾರೆ. ನಿಧಿ ಸಿಕ್ಕಾಗ ನಾವು ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ಊಹಿಸಿರಲಿಲ್ಲ, ಹೊಲ ಮಾರಿ ಮನೆ ಕಟ್ಟಲು ಆರಂಭಿಸಿದ್ದೇವೆ ಎಂದು ಕುಟುಂಬದ ಹಿರಿಯ ಸದಸ್ಯರೊಬ್ಬರು ನೋವಿನಿಂದ ತಿಳಿಸಿದ್ದಾರೆ. ಚಿನ್ನ ದೊರೆತಿದ್ದರೂ, ಅದು ಇವರಿಗೆ ನೆಮ್ಮದಿ ನೀಡುವ ಬದಲು ಕಷ್ಟ ತಂದಿದೆ. ಹೀಗಾಗಿ, ಸರ್ಕಾರವು ಕೂಡಲೇ ಸ್ಪಂದಿಸಿ ಆ ಕುಟುಂಬಕ್ಕೆ ಸೂಕ್ತ ನೆರವು ನೀಡಬೇಕೆಂದು ಇಡೀ ಲಕ್ಕುಂಡಿ ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಟಾಸ್ ಗೆದ್ದ ಟೀಮ್ ಇಂಡಿಯಾ: ಹೀಗಿದೆ ಪ್ಲೇಯಿಂಗ್ XI – Kannada News | India vs new zealand 1st odi playing 11

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಿದೆ. ವಡೋದರದಲ್ಲಿ ಬಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಇನ್ನು ಈ ಪಂದ್ಯದ ಮೂಲಕ ಶುಭ್​ಮನ್ ಗಿಲ್ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಂದರೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಗಿಲ್ ಅಲಭ್ಯರಾಗಿದ್ದರು. ಹೀಗಾಗಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು.

ಇದೀಗ ಶುಭ್​ಮನ್ ಗಿಲ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿದೆ. ಅದರಂತೆ ಭಾರತ ತಂಡದ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.

ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಕೂಡ ಈ ಪಂದ್ಯದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಅದರಂತೆ ಇಂದಿನ ಪಂದ್ಯದಲ್ಲಿ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ನ್ಯೂಝಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್(ನಾಯಕ), ಝಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

ಇದನ್ನೂ ಓದಿ: ಸಿಕ್ಸರ್​ಗಳ ಸುರಿಮಳೆ… ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣ

ನ್ಯೂಝಿಲೆಂಡ್ ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಝ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.

Source link

ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ? ಸಂಶೋಧಕ ಅಪ್ಪಣ್ಣ ಏನು ಹೇಳುತ್ತಾರೆ ನೋಡಿ – Kannada News | Gold Treasure Found: Lakkundi Gold Treasure: Unravelling the 11th 12th Century Mystery

ಗದಗ, ಜನವರಿ 11:  ಐತಿಹಾಸಿಕ ಹಿನ್ನೆಲೆಯ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾದ ಚಿನ್ನದ ನಿಧಿಯ ಬಗ್ಗೆ ಸಂಶೋಧಕ ಅಪ್ಪಣ್ಣ ಹಂಜೆ ಮಹತ್ವದ ಮಾಹಿತಿ ನೀಡಿದ್ದು, ಈ ಚಿನ್ನಾಭರಣಗಳು ಸುಮಾರು 11 ಅಥವಾ 12ನೇ ಶತಮಾನಕ್ಕೆ ಸಂಬಂಧಿಸಿವೆ ಎಂದು ಹೇಳಿದ್ದಾರೆ. ಲಕ್ಕುಂಡಿಯಲ್ಲಿ ದೊರೆತ ಈ ಅಭರಣಗಳ ಸ್ವರೂಪವನ್ನು ಪರಿಶೀಲಿಸಿದಾಗ, ಅವು ಅರಸು ಮನೆತನ ಅಥವಾ ಉನ್ನತ ವರ್ಗಕ್ಕೆ ಸೇರಿದವುಗಳಾಗಿರದೆ, ಸಾಮಾನ್ಯ ಕುಟುಂಬದ ವ್ಯಕ್ತಿಯೊಬ್ಬರು ಸುರಕ್ಷತೆಗಾಗಿ ಸಂರಕ್ಷಿಸಿಟ್ಟಿದ್ದಾಗಿ ಕಂಡುಬರುತ್ತದೆ. ಲಕ್ಕುಂಡಿಯ ಹಿಂದಿನ ಸಮೃದ್ಧ ಇತಿಹಾಸ, ಅಲ್ಲಿ ಸಿಕ್ಕಿರುವ 150ಕ್ಕೂ ಹೆಚ್ಚು ಶಾಸನಗಳು, ದೇವಾಲಯಗಳು ಹಾಗೂ ಪುರಾತತ್ವ ಅವಶೇಷಗಳು ಈ ಪ್ರದೇಶದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಈ ನಿಧಿ ಆ ಪ್ರಾಚೀನ ಕಾಲದ ಜೀವನಶೈಲಿ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ ಎಂದು ಸಂಶೋಧಕ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಸೋಮನಾಥನ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು, ಆದರೆ ಸೋಮನಾಥ ಅಲ್ಲೇ ನಿಂತಿದ್ದಾನೆ: ಮೋದಿ – Kannada News | Empires Faded, Somnath Endured: Modi Invokes History in Strong Message

ಅಹಮದಾಬಾದ್, ಜನವರಿ 11: ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯ(Somnath Temple)ದ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು. ಆದರೆ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಘಜ್ನಿ 1026ರಲ್ಲಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಚಿನ್ನಾಭರಣಗಳನ್ನೆಲ್ಲಾ ದೋಚಿದ್ದ ಈ ಘಟನೆ ನಡೆದು ಸಾವಿರ ವರ್ಷಗಳೇ ಸಂದಿವೆ.

ಇದೀಗ ಪ್ರಧಾನಿ ಮೋದಿ ಆ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಬಂದವರು ದಾಳಿ ಮಾಡಿ ಹೋಗಿ ಮಸಣ ಸೇರಿದರು ಆದರೆ ಸೋಮನಾಥ ಮಾತ್ರ ಅಲ್ಲೇ ಹಾಗೆಯೇ ನಿಂತಿದ್ದಾನೆ ಎಂದರು.
ಸೋಮನಾಥನ ಪವಿತ್ರ ವಿಗ್ರಹವನ್ನು ನಾಶಪಡಿಸಲಾಯಿತು. ಸೋಮನಾಥದ ಇತಿಹಾಸವನ್ನು ಮರೆಮಾಡಲಾಗಿದೆ, ಧಾರ್ಮಿಕ ಮತಾಂಧತೆಯನ್ನು ಸರಳ ದರೋಡೆ ಎಂದು ಚಿತ್ರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ನಾವು ಜೀವಿಗಳಲ್ಲಿಯೂ ಶಿವನನ್ನು ನೋಡುವ ಜನರು, ಸೋಮನಾಥ ದೇವಾಲಯದ ಶೌರ್ಯದ ಗಾಥೆ 1000 ವರ್ಷಗಳನ್ನು ಪೂರೈಸಿದ್ದರೆ, ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ 75 ವರ್ಷಗಳು ಪೂರ್ಣಗೊಂಡಿವೆ. ನಮ್ಮ ಪೂರ್ವಜರು ತಮ್ಮ ಭಗವಾನ್ ಶಿವನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು.

ಗುಜರಾತ್ ಭೇಟಿಯ ಎರಡನೇ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥದಲ್ಲಿ ಶೌರ್ಯ ಯಾತ್ರೆಯಲ್ಲಿ ಭಾಗವಹಿಸಿದರು. ಸೋಮನಾಥ ದೇವಾಲಯವನ್ನು ರಕ್ಷಿಸುವಲ್ಲಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ವೀರ ಯೋಧರಿಗೆ ಗೌರವ ಸಲ್ಲಿಸಲು ಈ ವಿಧ್ಯುಕ್ತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಶೌರ್ಯ ಯಾತ್ರೆಯು ಶೌರ್ಯ, ಧೈರ್ಯ ಮತ್ತು ತ್ಯಾಗದ ಸಂಕೇತವೆಂದು ಪರಿಗಣಿಸಲಾದ 108 ಕುದುರೆಗಳನ್ನು ಹೊಂದಿರುವ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿತ್ತು.

ಮತ್ತಷ್ಟು ಓದಿ: ಸೋಮನಾಥ ದೇವಾಲಯದ ಮೇಲೆ 1026ರಿಂದ ಎಷ್ಟು ಬಾರಿ ನಡೆದಿತ್ತು ದಾಳಿ ಮತ್ತು ಯಾವಾಗ? ಇಲ್ಲಿದೆ ಮಾಹಿತಿ

ಇದರ ನಂತರ, ಪ್ರಧಾನಿ ಮೋದಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
1000 ವರ್ಷಗಳ ಹಿಂದೆ ಭಾರತದ ಮೇಲೆ ದಂಡೆತ್ತಿ ಬಂದವರು ತಾವು ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದರು, ಆದರೆ ಇಂದಿಗೂ ಸೋಮನಾಥ ದೇವಾಲಯದಲ್ಲಿ ಹಾರುತ್ತಿರುವ ಧ್ವಜವು ಭಾರತದ ಶಕ್ತಿ ಏನೆಂದು ಹೇಳುತ್ತಿದೆ ಎಂದು ಹೇಳಿದರು.

ದುರದೃಷ್ಟವಶಾತ್, ಸೋಮನಾಥದ ಪುನರ್ನಿರ್ಮಾಣವನ್ನು ವಿರೋಧಿಸಿದ ಅದೇ ಶಕ್ತಿಗಳು ನಮ್ಮ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಸರ್ದಾರ್ ಪಟೇಲ್ ಸೋಮನಾಥವನ್ನು ಪುನರ್ನಿರ್ಮಿಸಲು ಪ್ರತಿಜ್ಞೆ ಮಾಡಿದಾಗ (1951 ರಲ್ಲಿ), ಅವರನ್ನು ತಡೆಯಲು ಪ್ರಯತ್ನಗಳು ನಡೆದವು. ಇಂದೂ ಕೂಡ ನಾವು ಜಾಗರೂಕರಾಗಿರಬೇಕು ಮತ್ತು ಒಗ್ಗಟ್ಟಿನಿಂದ ಇರಬೇಕು. ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ನಾವು ಜಾಗರೂಕರಾಗಿರಬೇಕು ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎರಡು ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್​​ – Kannada News | Meghashree Challenges Husband Manjunaths Allegations in Wilson Garden Case

ಬೆಂಗಳೂರು, ಜನವರಿ 11: ಮಂಜುನಾಥ್​​ ಮತ್ತು ಮೇಘಶ್ರೀ ದಂಪತಿ ನಡುವಿನ ಕಲಹ ತಾರಕಕ್ಕೇರಿದೆ. ಪತಿ ಸೈಕೋ ರೀತಿ ವರ್ತಿಸ್ತಾನೆ ಎಂದು ಮೇಘಶ್ರೀ ಮಾಡಿದ್ದ ಆರೋಪಗಳಿಗೆ ಮಂಜುನಾಥ್​​ ಕೌಂಟರ್​​ ಕೊಟ್ಟಿದ್ದರು. ಆಕೆಗೆ ಅನೇಕ ಮದುವೆಗಳಾಗಿವೆ. ತಾನು ಕೂಡ ಆಕೆಗೆ 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್​​ಗಳನ್ನು ನೀಡಿರೋದಾಗಿ ತಿಳಿಸಿದ್ದರು. ಆದ್ರೀಗ ಮಂಜುನಾಥ್​​ ಆರೋಪವನ್ನು ಮೇಘಶ್ರೀ ಅಲ್ಲಗಳೆದಿದ್ದಾರೆ. ಮಂಜುನಾಥ್​​ಗೆ ತನ್ನ ಹಿಂದಿನ ಎರಡು ವಿವಾಹ ವಿಚ್ಛೇದನಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು ಎಂದಿದ್ದಾರೆ. ಅಲ್ಲದೆ, ಆತ ತನ್ನ ವಿರುದ್ದ ಸುಳ್ಳು ಆರೋಪಗಳನ್ನ ಮಾಡುವುದ ಮುಂದುವರೆಸಿದರೆ ಕ್ರಮ ತೆಗೆದುಕೊಳ್ತೀನಿ.  ಹೆಸರು ಬರೆದಿಟ್ಟು ಮುಂದೆ ಏನ್ ಮಾಡ್ಬೇಕೋ ಯೋಚ್ನೆ ಮಾಡ್ತೀನಿ ಎಂದಿದ್ದಾರೆ. ಜೊತೆಗೆ ಆತನೇ
ತನ್ನಿಂದ ಐದು ಲಕ್ಷ ಹಣ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ಪ್ರೀತಿಸಿದವರ ವಶೀಕರಣಕ್ಕೆ ಆನ್‌ಲೈನ್‌ನಲ್ಲಿ ಉಡದ ಜನನಾಂಗ ಮಾರಾಟ ಮಾಡುತ್ತಿದ್ದ ಮಾಂತ್ರಿಕ – Kannada News | Bengaluru godman arrested for selling monitor lizard parts online

ಬೆಂಗಳೂರು, ಜ.11: ಬೆಂಗಳೂರಿನಲ್ಲಿ ಮಾಂತ್ರಿಕನೊಬ್ಬ ಉಡದ (Monitor lizard )ಜನನಾಂಗಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರೀತಿಗಾಗಿ ವಶೀಕರಣ, ಪ್ರೇಮ ವಿವಾಹದ ಕಲಹಗಳಿಗೆ ಈ ಹಲ್ಲಿಯ ಜನನಾಂಗವನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ. ಮಾಂತ್ರಿಕ ಶಕ್ತಿ ಇದೆ ಎಂದು ಹೇಳಿಕೊಂಡು ಜನರನ್ನು ನಂಬಿಸುತ್ತಿದ್ದ, ಪ್ರೇಮಿಗಳ ನಡುವಿನ ಘರ್ಷಣೆಯನ್ನು ಪರಿಹರಿಸಬಹುದು ಎಂದು ಹೇಳಿ ಪ್ರತಿ ತುಂಡನ್ನು 10,000 ರೂ.ಗೆ ಮಾರಾಟ ಮಾಡಿದನೆಂದು ವರದಿಯಾಗಿದೆ. ಈ ಬಗ್ಗೆ ಸುಳಿವು ಸಿಕ್ಕ ತಕ್ಷಣ, ಎನ್‌ಜಿಒವೊಂದು ತನಿಖೆ ಮಾಡಲು ವೈಯಕ್ತಿಕ ಸಮಸ್ಯೆ ಎಂದು ನಟಿಸಿ, ಈ ವ್ಯಕ್ತಿಯ ಬಳಿ ಹೋಗಿದ್ದಾರೆ. ಈ ವೇಳೆ ಈ ದೇವಮಾನವನ ಸತ್ಯ ಬಯಲಾಗಿದೆ. ದೇವಮಾನವ ತನ್ನ ವನ್ಯಜೀವಿ ಉತ್ಪನ್ನಗಳ ಸಂಗ್ರಹವನ್ನು ಎನ್‌ಜಿಒ ಪ್ರತಿನಿಧಿಗೆ ತೋರಿಸಿದ್ದಾನೆ. ನಂತರ ಈ ವಿಷಯವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‌ಐ) ವರದಿ ಮಾಡಲಾಯಿತು. ನಂತರ ಅವರನ್ನು ದಾಳಿ ಮಾಡಿ, ಸ್ವಯಂ ಘೋಷಿತ ದೇವಮಾನವನ ಬಂಧನ ಮಾಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮೂರ್ತಿ (45) ಎಂದು ಗುರುತಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೃದು ಹವಳ ಮತ್ತು ಇತರ ವನ್ಯಜೀವಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದ, ಅದೃಷ್ಟ ಮತ್ತು ಸಮೃದ್ಧಿಗಾಗಿ ಮೃದುವಾದ ಹವಳವನ್ನು ತಾಲಿಸ್ಮನ್ ಆಗಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅನೇಕರು ಇದರ ಮಾರಾಟದ ಹಕ್ಕನ್ನು ಪಡೆದಿದ್ದರು. ಮೂರ್ತಿ ಈ ವನ್ಯಜೀವಿ ಉತ್ಪನ್ನಗಳನ್ನು ತಮಿಳುನಾಡು ಮತ್ತು ಇತರ ಪ್ರದೇಶಗಳಲ್ಲಿನ ಹಕ್ಕಿ ಪಿಕ್ಕಿ ಸಮುದಾಯದ ಸಂಪರ್ಕಗಳ ಮೂಲಕ ಪಡೆಯುತ್ತಿದ್ದ ಎಂದು ಹೇಳಲಾಗಿದೆ. ದೇಶಾದ್ಯಂತ ಸುಮಾರು 25,000 ಜನ ಈತನ ಭಕ್ತರಾಗಿದ್ದರು. ಅವರಲ್ಲಿ ಹಲವರು ಪ್ರೀತಿ ಅಥವಾ ವೈಯಕ್ತಿಕ ಸಮಸ್ಯೆಗಳಿಗಾಗಿ ಮೂರ್ತಿಯನ್ನು ಸಂಪರ್ಕಿಸಿದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಶಾನಿಯ ಆಸೆಯಿಂದ ಬೆತ್ತಲೆಯಾದ ಬೆಂಗಳೂರಿನ ಯುವಕ: ಖಾತೆಯಿಂದ ಹೋಯಿತು ಲಕ್ಷ ಲಕ್ಷ ಹಣ!

ಮೂರ್ತಿ ಆನ್‌ಲೈನ್ ವ್ಯವಹಾರದ ಬಗ್ಗೆ ಎನ್‌ಜಿಒ ಕೇರ್‌ಗೆ ಗುಪ್ತಚರ ಮಾಹಿತಿ ಬಂದ ನಂತರ ಕಾರ್ಯಾಚರಣೆ ಆರಂಭವಾಯಿತು. ಎನ್‌ಜಿಒ ಸದಸ್ಯರೊಬ್ಬರು ಮೂರ್ತಿಯ ಕ್ಲೈಂಟ್‌ನಂತೆ ನಟಿಸಿ ನಂತರ ನಾಗಶೆಟ್ಟಿಹಳ್ಳಿಯಲ್ಲಿರುವ ಮನೆಗೆ ಭೇಟಿ ನೀಡಿ, ನಂತರ ಪುರಾವೆಗಳನ್ನು ಸಂಗ್ರಹಿಸಲು ಸಹಾಯ ಮಾಡಿದ್ದಾರೆ. ದಾಳಿಯ ಸಮಯದಲ್ಲಿ, ಅಧಿಕಾರಿಗಳು 206 ಮಾನಿಟರ್ ಹಲ್ಲಿ ಜನನಾಂಗಗಳು, 1.5 ಕೆಜಿ ಮೃದು ಹವಳ, ಹುಲಿ ಚರ್ಮ ಮತ್ತು ಇತರ ಧಾರ್ಮಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರ್ತಿ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಶಪಡಿಸಿಕೊಂಡ ವನ್ಯಜೀವಿ ಉತ್ಪನ್ನಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಬನ್ನೇರುಘಟ್ಟ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ? ಯಾವ ರಾಶಿಗೆ ಶುಭ, ಯಾರಿಗೆ ಅಶುಭ? – Kannada News | First Solar Eclipse 2026: Date, Zodiac Impacts and Hindu Significance

ಹಿಂದೂ ಧರ್ಮದಲ್ಲಿ ಗ್ರಹಣಗಳಿಗೆ ಸಾಕಷ್ಟು ಆಧ್ಯಾತ್ಮಿಕ ಮಹತ್ವವಿದೆ. ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಜೊತೆಗೆ ಗ್ರಹಣವು 12 ರಾಶಿಗಳ ಪೈಕಿ ಕೆಲವು ರಾಶಿಗೆ ಶುಭವಾದರೆ, ಇನ್ನೂ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಮತ್ತು ಯಾವ ರಾಶಿಗೆ ಶುಭ, ಯಾರಿಗೆ ಅಶುಭ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ?

2026ರ ಮೊದಲ ಸೂರ್ಯ ಗ್ರಹಣವು ಫೆಬ್ರವರಿ 17ರಂದು ಮಂಗಳವಾರ ಬಂದಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ, ಈ ಗ್ರಹಣದ ಸೂತಕ ಅವಧಿಯು ಇರುವುದಿಲ್ಲ.

ಮೇಷ ರಾಶಿ:

ಫೆಬ್ರವರಿ 17 ರಂದು, ಮಾಘ ಬಹುಳ ಅಮಾವಾಸ್ಯೆಯ ದಿನದಂದು, ಕುಂಭ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ, ಮೇಷ ರಾಶಿಯ ಜನರು ಮತ್ತು ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸಬೇಕು. ಮಾನಸಿಕ ಒತ್ತಡ ಹೆಚ್ಚಾಗಬಹುದು. ಆದ್ದರಿಂದ ಗಾಯತ್ರಿ ಮಂತ್ರವನ್ನು ಪಠಿಸಿ.

ಸಿಂಹ ರಾಶಿ:

ವರ್ಷದ ಮೊದಲ ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಅಶುಭ. ಈ ರಾಶಿಯ ಅಧಿಪತಿ ಸೂರ್ಯ ದೇವರು. ಆದ್ದರಿಂದ, ಸೂರ್ಯಗ್ರಹಣವು ಸಿಂಹ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ನಾಯಕತ್ವ ಕಳೆದುಕೊಳ್ಳಬಹುದು. ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮೀನ ರಾಶಿ:

ಮೀನ ರಾಶಿಯವರಿಗೆ ಮೊದಲ ಸೂರ್ಯಗ್ರಹಣ ಅಶುಭ. ಭೂ ವಿವಾದ ಉಂಟಾಗಬಹುದು. ಬಜೆಟ್ ಮೇಲೆ ಪರಿಣಾಮ ಬೀರಬಹುದು. ನೀವು ಉಳಿತಾಯ ಮಾಡಬೇಕು, ಇಲ್ಲದಿದ್ದರೆ ಸಾಲ ಮಾಡಬೇಕಾಗಬಹುದು.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ವರ್ಷದ ಮೊದಲ ಸೂರ್ಯಗ್ರಹಣ ಹಲವು ವಿಧಗಳಲ್ಲಿ ಅಶುಭ. ಉದ್ಯೋಗದಲ್ಲಿ ಬದಲಾವಣೆಗಳ ಸೂಚನೆಗಳಿವೆ, ಅಧಿಕಾರಿಗಳೊಂದಿಗೆ ವಾದಗಳು ಉಂಟಾಗಬಹುದು. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.

ವರ್ಷದ ಮೊದಲ ಸೂರ್ಯಗ್ರಹಣ ಈ ರಾಶಿಗೆ ಶುಭ:

ಮಿಥುನ ರಾಶಿ ಮತ್ತು ಮಕರ ರಾಶಿಯವರಿಗೆ ಈ ಸೂರ್ಯಗ್ರಹಣವು ಹಲವು ವಿಧಗಳಲ್ಲಿ ಶುಭಕರವಾಗಿರುತ್ತದೆ. ಪ್ರಯಾಣಕ್ಕೆ ಅವಕಾಶಗಳಿವೆ, ಆದರೆ ಜಾಗರೂಕರಾಗಿರಿ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಈ ಸಮಯ ವ್ಯವಹಾರಕ್ಕೆ ಅನುಕೂಲಕರವಾಗಿರುತ್ತದೆ. ಮಕರ ರಾಶಿಯವರಿಗೆ ಸೂರ್ಯಗ್ರಹಣವು ಹಲವು ವಿಧಗಳಲ್ಲಿ ಶುಭವಾಗಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರು ಆರ್ಥಿಕ ಲಾಭವನ್ನು ಕಾಣುತ್ತಾರೆ. ಖರ್ಚುಗಳು ಹೆಚ್ಚಾಗಿದ್ದರೂ ಹಣದ ಹರಿವಿಗೆ ಕೊರತೆಯಾಗದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:29 pm, Sun, 11 January 26

Source link

Exit mobile version