ಬಿ-ಖಾತಾದಿಂದ ಎ-ಖಾತಾಗೆ ಕನ್ವರ್ಟ್​ ಆಗಲು ನಿಯಮವನ್ನು ಕಠಿಣಗೊಳಿಸಿದ ಜಿಬಿಎ; ಯಾವೆಲ್ಲಾ ದಾಖಲೆಗಳು ಬೇಕು? – Kannada News | Bangalore A Khata Rules: E Khata Mandatory for B Khata Apartment Conversion

ಬಿ-ಖಾತಾ ಹೊಂದಿರುವ ಅಪಾರ್ಟ್​ಮೆಂಟ್ ಮಾಲೀಕರು ಎ-ಖಾತಾಗೆ ಕನ್ವರ್ಟ್​ ಆಗೋದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಜನವರಿ 12: ನವೆಂಬರ್ 1 ರಿಂದ ಬಿ-ಖಾತಾ ಆಸ್ತಿ ದಾಖಲೆಗಳ ಎ-ಖಾತಾ ಪರಿವರ್ತನೆಗೆ ಇ- ಖಾತಾ ಹೊಂದಿರುವುದು ಅಗತ್ಯ ಎಂದು GBA ಹೇಳಿತ್ತು. ಈ ಹಿನ್ನೆಲೆ ರಾಜ್ಯದಲ್ಲಿ ಆಸ್ತಿ ನೋಂದಣಿ ಹಾಗೂ ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಎ-ಖಾತಾ ನೀಡುವ ಪ್ರಕ್ರಿಯೆಗೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ . ಈ ನಿಯಮಗಳು ವಿಶೇಷವಾಗಿ ಬಿ-ಖಾತಾ ಹೊಂದಿರುವ ಅನುಮೋದಿತ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್​ಗಳಿಗೆ ಮಹತ್ವದ್ದಾಗಿವೆ.

ಇ-ಖಾತಾ ದೊರಕಿದ ನಂತರವೇ ಎ-ಖಾತಾಗೆ ಅರ್ಜಿ

ಅಧಿಕಾರಿಗಳು ಹೇಳುವಂತೆ ಅನುಮೋದಿತ ಲೇಔಟ್‌ಗಳು ಹಾಗೂ ಅನುಮೋದಿತ ಕಟ್ಟಡಗಳಲ್ಲಿನ ಫ್ಲಾಟ್ ಮಾಲೀಕರು ಈಗ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಮೊದಲು ಪ್ರತಿಯೊಬ್ಬ ಫ್ಲಾಟ್ ಮಾಲೀಕರು ಕಡ್ಡಾಯವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಇ-ಖಾತಾ ಪಡೆಯಬೇಕು. ಇ-ಖಾತಾ ದೊರಕಿದ ನಂತರವೇ ಎ-ಖಾತಾ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಪ್ರತ್ಯೇಕ ಫ್ಲಾಟ್ ಮಾಲೀಕರಿಂದ ವೈಯಕ್ತಿಕ ಅರ್ಜಿಯೇ ಕಡ್ಡಾಯವಾಗಿದೆ.

ಇದನ್ನೂ ಓದಿ B ಖಾತೆಯಿಂದ A ಖಾತೆಗೆ ಕನ್ವರ್ಟ್​ ಮಾಡಲು ಬೇಕೇ ಬೇಕು E ಖಾತೆ

ಪರಿಷ್ಕೃತ ವ್ಯವಸ್ಥೆಯಡಿ ಮಾಲೀಕರು ತಮ್ಮ ಮಾಲೀಕತ್ವದ ದಾಖಲೆಗಳು ಹಾಗೂ ಆಸ್ತಿ ತೆರಿಗೆ ಪಾವತಿ ವಿವರಗಳನ್ನು ಅಪ್‌ಲೋಡ್ ಮಾಡಿ ಇ-ಖಾತಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹತೆಗೆ ಪ್ರಸ್ತುತ ವರ್ಷದ ಆಸ್ತಿ ತೆರಿಗೆಯ ಸಂಪೂರ್ಣ ಪಾವತಿ, ಮಂಜೂರಾದ ಕಟ್ಟಡ ಯೋಜನೆ ಹಾಗೂ ಬಿ-ಖಾತಾ ಹೊಂದಿರುವ ಭೂಮಿಯ ದಾಖಲೆಗಳನ್ನು ಹೊಂದಿರುವುದು ಅಗತ್ಯವಾಗಿದೆ. 1961ರ ಪುರಸಭೆ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ ಅಪಾರ್ಟ್‌ಮೆಂಟ್‌ಗಳನ್ನೂ ಎ-ಖಾತಾಗೆ ಪರಿಗಣಿಸಬಹುದು. ಆದರೆ ಉಲ್ಲಂಘನೆಯ ಪ್ರಮಾಣದ ಆಧಾರದಲ್ಲಿ ದಂಡ ವಿಧಿಸಲಾಗುತ್ತದೆ. ಪ್ರಮುಖ ನಿರ್ಮಾಣ ಉಲ್ಲಂಘನೆಗಳಿದ್ದರೆ ಮಾರ್ಗದರ್ಶನ ಮೌಲ್ಯದ ಶೇಕಡಾ 5 ರಿಂದ 50 ರವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಕೈ ಶಾಸಕಿ – Kannada News | Congress MLA Nayana Motamma Hits Back Against Obscene Commenters In Instagram

ಚಿಕ್ಕಮಗಳೂರು, (ಜನವರಿ 12):  ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಖುದ್ದು ‘ಕೈ’ ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿದ್ದು, ಪರ್ಸನಲ್ ಮತ್ತು ರಾಜಕೀಯ ವಿಚಾರವಾಗಿ 2 ಇನ್​​ಸ್ಟಾಗ್ರಾಮ್ ಖಾತೆ ಇದೆ. ಈ ನಡುವೆ ಪರ್ಸನಲ್ ಖಾತೆಗೆ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ವ್ಯಾಯಾಮ ಮಾಡಿದ್ರೂ ತಪ್ಪು, ಬರ್ತ್​​ಡೇ ಆಚರಿಸಿದ್ರೆ ತಪ್ಪಾ? ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿ ಎತ್ತಿದ್ದೇನೆ.ಅಶ್ಲೀಲ ಕಮೆಂಟ್ ಸಂಬಂಧ ಕಾರ್ಯಕರ್ತರು ದೂರು ನೀಡಿದ್ದಾರೆ.ಈಗಾಗಲೇ ಆರೋಪಿಗಳನ್ನು ಅರೆಸ್ಟ್​ ಕೂಡ ಮಾಡಿದ್ದಾರೆ. ನಾನು ಧೈರ್ಯವಾಗಿ ಜೀವನ ಮಾಡ್ತೇನೆ, ನನಗೆ ಯಾರ ಭಯವಿಲ್ಲ ಎಂದು ಗುಡುಗಿದರು.

ಇದನ್ನೂ ಓದಿ: ನಟಿಯರಾಯ್ತು ಈಗ ರಾಜಕಾರಣಿಗಳ ಸರದಿ; ಮೂಡಿಗೆರೆ ಶಾಸಕಿ ನಯನಾ ಮೋಟಮ್ಮಗೂ ಅಶ್ಲೀಲ ಕಾಮೆಂಟ್ ಕಾಟ! ಆರೋಪಿ ಅರೆಸ್ಟ್

ರಾಜಕೀಯಕ್ಕೆ ಪ್ರವೇಶ ಮಾಡುವ ಮುನ್ನ ನಾನು ಹೇಗಿದ್ದೆನೋ ಅದೇ ರೀತಿ ಈಗಲೂ ಇರಲು ಪ್ರಯತ್ನ ಮಾಡುತ್ತೇನೆ. ರಾಜಕೀಯ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇರಬಾರದು. ನಮ್ಮ ವೈಯಕ್ತಿಕ ಜೀವನ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು . ನನ್ನ ಬಟ್ಟೆಗಳ ಬಗ್ಗೆ ಇನ್​​ಸ್ಟಾಗ್ರಾಮ್ ಎಂಎಲ್ಎ ಹಾಗೂ ಗುಂಡಿ ಮುಚ್ಚಿಲ್ಲ ಎಂದು ಪರ್ಸನಲ್ ಆಗಿ ಟಾರ್ಗೆಟ್ ಮಾಡ್ತಾರೆ. ರಾಜ್ಯದಲ್ಲಿ 11 ಮಹಿಳಾ ಶಾಸಕರಿದ್ದೇವೆ. ನನ್ನ ಇನ್​​ಸ್ಟಾಗ್ರಾಮ್, ಫೇಸ್​​​ಬುಕ್​ ಖಾತೆ ಜನರಿಗೆ ಇಟ್ಟಿದ್ದೇನೆ. ಇದು ತಪ್ಪಾ? ಪಾರದರ್ಶಕವಾಗಿ ಜೀವನ ಮಾಡುವುದು ತಪ್ಪಾ? ಇದೆ ಕಾರಣಕ್ಕೆ ರಾಜಕಾರಣಿಗಳು ವೈಯಕ್ತಿಕ ಜೀವನ ಮುಚ್ಚಿಡ್ತಾರೆ . ನಾವು ಸಾರ್ವಜನಿಕ ಜೀವನದಲ್ಲಿದ್ದೇನೆ, ಜಿಗುಪ್ಸೆ ಮತ್ತು ಹಿಂಸೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Hubli: ಮರಣ ತಂದ ಮಹಿಳೆ ಸಂಗ; ಕೊನೆಗೂ ಬದುಕಲಿಲ್ಲ ಎಂಜಿನಿಯರ್​​! – Kannada News | Hubballi Engineer Killed: Vittal Rathod Dies Due to Illicit Affair Attack

ಮೃತ ವ್ಯಕ್ತಿ ಮತ್ತು ಬಂಧಿತ ಆರೋಪಿಗಳು.

ಹುಬ್ಬಳ್ಳಿ, ಜನವರಿ 12: ಮಹಿಳೆಯೋರ್ವಳ ಜೊತೆಗೆ ಅಕ್ರಮ ಸಂಬಂಧದ ಕಾರಣ ಆಕೆಯ ಕುಟುಂಬಸ್ಥರಿಂದ ಗಂಭೀರ ಹಲ್ಲೆಗೆ ಒಳಗಾಗಿದ್ದ ಹುಬ್ಬಳ್ಳಿ ಕಾನೂನು ವಿಶ್ವ ವಿದ್ಯಾಲಯದ ಎಂಜಿನಿಯರ್​​ ವಿಠ್ಠಲ್​​ ​​​​​ ರಾಠೋಡ್(60) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿಯ ನವನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಡಿ.10ರಂದು ವಿಠ್ಠಲ್​​ ಅವರ ಮೇಲೆ ಹಲ್ಲೆ ನಡೆದಿತ್ತು.

ಹಲ್ಲೆ ನಡೆಸಿ ನಾಟಕವಾಡಿದ್ದ ಆರೋಪಿಗಳು

ಕಾನೂನು ವಿವಿಯಲ್ಲಿ ಗುತ್ತಿಗೆ ಕೆಲಸ ಪಡೆದಿದ್ದ ವಿಠ್ಠಲ್ ರಾಠೋಡ್ ಬಳಿ 4-5 ವರ್ಷಗಳಿಂದ ಛತ್ತೀಸ್​ಗಢ ಮೂಲದ ಕುಟುಂಬವೊಂದು ಕೆಲಸ ಮಾಡುತ್ತಿತ್ತು. ಆ ಪೈಕಿ ವಿಮಾಲ ಜೊತೆ ವಿಠ್ಠಲ್ ರಾಠೋಡ್ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಚಾರಕ್ಕೆ ಅನೇಕ ಬಾರಿ ಜಗಳ ಕೂಡ ನಡೆದಿತ್ತು. ಜನವರಿ 10ರ ರಾತ್ರಿ ಕೂಡ ಇದೇ ವಿಚಾರಕ್ಕೆ ಮತ್ತೆ ಗಲಾಟೆಯಾಗಿದ್ದು, ಆ ವೇಳೆ ವಿಠ್ಠಲ್ ಮೇಲೆ ಮೇಘವ್ ಮತ್ತು ಭಗವಾನದಾಸ್ ಹಲ್ಲೆ ಮಾಡಿದ್ದರು. ಬಳಿಕ ಮದ್ಯ ಸೇವಿಸಿ ಬಿದ್ದು ವಿಠ್ಠಲ್ ಗಾಯಗೊಂಡಿರೋದಾಗಿ ಬಿಂಬಿಸಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಕಳೆದೆರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆಗೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಮೂಲದ ಟೆಕ್ಕಿ ಕೊಲೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್; ಹತ್ಯೆಗೂ ಮುನ್ನ ರೇಪ್ ಮಾಡಿರುವ ಶಂಕೆ

ಘಟನೆ ಬಗ್ಗೆ ಅನುಮಾನಗೊಂಡು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣದ ರಹಸ್ಯ ಬಯಲಾಗಿದೆ. ಛತ್ತೀಸ್​ಗಢ ಮೂಲದ ದಂಪತಿ ಮತ್ತು ಮಗ ಸೇರಿ ವಿಜಯಪುರದ ಅರಕೇರಾ ತಾಂಡಾ ಮೂಲದ ನಿವಾಸಿ ವಿಠ್ಠಲ್​​ರನ್ನು ಕೊಂದಿದ್ದು, ಪ್ರಕರಣ ಸಂಬಂಧ ಮೇಘವ, ಭಗವಾನದಾಸ್ ಹಾಗೂ ವಿಮಲಾಳನ್ನು ಬಂಧಿಸಲಾಗಿದೆ. ಈ ಬಗ್ಗೆ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ? – Kannada News | Toxic Movie Teaser vulgar Comment Should be removed Complaint register In Women’s Commission

ಯೂಟ್ಯೂಬ್​​ನಲ್ಲಿ ರಿಲೀಸ್ ಆದ‘ಟಾಕ್ಸಿಕ್’ ಸಿನಿಮಾದ ಟೀಸರ್ ಸಾಕಷ್ಟು ಸದ್ದು ಮಾಡಿತ್ತು. ಈ ಟೀಸರ್​​ನ ಅಲ್ಲಿ ಹಸಿಬಿಸಿ ದೃಶ್ಯಗಳು ಇದ್ದವು. ಈ ಸಂಬಂಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಆಗಿದೆ. ‘ನಾನು ಹಸಿಬಿಸಿ ದೃಶ್ಯ ಮಾಡೋದಿಲ್ಲ ಎಂದು ಯಶ್ ಈ ಮೊದಲು ಹೇಳಿದ್ದರು. ಆದರೆ, ಈಗ ರಿಲೀಸ್ ಆಗಿರುವ ಟಾಕ್ಸಿಕ್ ಅದಕ್ಕೆ ವಿರುದ್ಧವಾಗಿದೆ. ಕುಟುಂಬದವರು ಕುಳಿತು ಟೀಸರ್​​ನ ನೋಡೋಕೆ ಆಗುತ್ತಾ? ಅದನ್ನು ತೆಗೆದು ಹಾಕಿ’ ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಒತ್ತಾಯಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಸಾಧನೆ: ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ ನಿರ್ಮಾಣದಲ್ಲಿ 4 ಗಿನ್ನಿಸ್ ದಾಖಲೆ – Kannada News | India’s NHAI Sets New World Records in Rapid Road Building for Economic Corridor

ಬೆಂಗಳೂರು, ಜ.12: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬೆಂಗಳೂರು-ಕಡಪ-ವಿಜಯವಾಡವನ್ನು ಸಂಪರ್ಕಿಸುವ ಆರ್ಥಿಕ ಕಾರಿಡಾರ್ (NH-544G) ನಿರ್ಮಾಣ ಮಾಡುವ ಕಾರ್ಯದಲ್ಲಿ ಮಹತ್ವ ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ವಿಶ್ವ ದಾಖಲೆಯ ಪುಟ ಸೇರಿದೆ ಎಂದು ಕೇಂದ್ರ ಸಾರಿಗೆ ಸಚಿವ ನೀತಿನ್​​ ಗಡ್ಕರಿ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಟ್ಟು ನಾಲ್ಕು ಗಿನ್ನೆಸ್ ದಾಖಲೆಗಳನ್ನು ಮಾಡಿದೆ. ಜನವರಿ 6 ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ಬಳಿ ಎರಡು ಗಿನ್ನೆಸ್ ವಿಶ್ವ ದಾಖಲೆ ಮಾಡಿತ್ತು. ಇದೀಗ ತನ್ನದೇ ದಾಖಲೆಗಳನ್ನು ಮುರಿದು ಮತ್ತೆರಡು ದಾಖಲೆಗಳನ್ನು ಮಾಡಿದೆ. ಇದೀಗ ಈ ದಾಖಲೆ ಮೂಲಕ ದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಎಷ್ಟು ನಿಷ್ಠೆಯನ್ನು ಹಾಗೂ ವೇಗವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದ ಮೊದಲ ದಾಖಲೆ ಪ್ರಕಾರ, 24 ಗಂಟೆಯಲ್ಲಿ 9.63 ಕಿಮೀ ಉದ್ದದ 3 ಲೇನ್ ಅಗಲದ ಬಿಟುಮಿನಸ್ ಕಾಂಕ್ರೀಟ್ ಅನ್ನು ನಿರಂತರವಾಗಿ ಹಾಕಿದ್ದಾರೆ. ಎರಡನೇ ದಾಖಲೆ 24 ಗಂಟೆಗಳಲ್ಲಿ 10,655 ಮೆಟ್ರಿಕ್ ಟನ್‌ ನಿರಂತರವಾಗಿ ಬಿಟುಮಿನಸ್ ಕಾಂಕ್ರೀಟ್ ಹಾಕಿರುವುದು. ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಆರ್ಥಿಕ ಕಾರಿಡಾರ್‌ ಜಾಗತಿಕವಾಗಿ ಮೊದಲ ಬಾರಿಗೆ ವಿಶ್ವ ದಾಖಲೆಯನ್ನು ಮಾಡಿದೆ. ಇದೀಗ ಜನವರಿ 11ರಂದು ಮತ್ತೆರಡು ದಾಖಲೆಗಳು ಇದಕ್ಕೆ ಸೇರಿಕೊಂಡಿದೆ. 57,500 ಮೆಟ್ರಿಕ್ ಟನ್ ಬಿಟುಮಿನಸ್ ಕಾಂಕ್ರೀಟ್ ಹಾಕುವ ಮೂಲಕ ಮೂರನೇ ದಾಖಲೆಯನ್ನು ಮಾಡಿದೆ. 156 ಕಿ.ಮೀ. ನಿರಂತರ ಡಾಂಬರು ಹಾಕುವ ಮೂಲಕ ನಾಲ್ಕನೇ ದಾಖಲೆಯನ್ನು ಮಾಡಿದೆ. ಈ ಎರಡು ದಾಖಲೆಗಳು ಈ ಹಿಂದಿನ ದಾಖಲೆಯನ್ನು ಮುರಿದಿದೆ.

ಇದನ್ನೂ ಓದಿ: ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್​​ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ?

ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್‌ನ ಪ್ಯಾಕೇಜ್ -2 ಮತ್ತು ಪ್ಯಾಕೇಜ್ -3 ರಲ್ಲಿ ಈ ವೇಗ ನಿರ್ಮಾಣ ಕಾರ್ಯವನ್ನು ಮಾಡಲಾಗಿದೆ. ಮೆಸರ್ಸ್ ರಾಜ್‌ಪಥ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಈ ಸಾಧನೆಯನ್ನು ಮಾಡಲಾಗಿದೆ. ಈ ವೇಗದ ನಿರ್ಮಾಣ ಕಾರ್ಯಕ್ಕೆ 70 ಟಿಪ್ಪರ್‌ಗಳು, 5 ಹಾಟ್ ಮಿಕ್ಸ್ ಪ್ಲಾಂಟ್‌, ಡಾಂಬರು ಪೇವರ್​​​​, 17 ರೋಲರುಗಳನ್ನು ಬಳಸಿಕೊಳ್ಳಲಾಗಿದೆ. ಇನ್ನು ಈ ನಿರ್ಮಾಣ ಕಾರ್ಯಕ್ಕೆ ಬೇಕಾದ ಸಲಕರಣೆಗಾಗಿ ಬೇರೆ ಬೇರೆ ಕಂಪನಿಗಳ ಜತೆಗೆ ಒಪ್ಪಂದವನ್ನು ಕೂಡ ಮಾಡಲಾಗಿದೆ. ಈ ಕಂಪನಿಗಳ ಮೂಲಕ ನಿರ್ಮಾಣ ಕಾರ್ಯದ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರ ಜತೆಗೆ ಸುರಂಗ, ಅರಣ್ಯ ಪ್ರದೇಶ, ಇತರ ಸೌಲಭ್ಯಗಳಿಗಾಗಿ ಸುರಕ್ಷಿತ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಈ ಯೋಜನೆ ಬೆಂಗಳೂರು ಮತ್ತು ವಿಜಯವಾಡ ನಡುವಿನ ಸಂಪರ್ಕಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಲಿದೆ ಎಂದು ಹೇಳಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ’: ರಾಜ್ಯ ಪುರಾತತ್ವ ಇಲಾಖೆ – Kannada News | Lakkundi Gold Treasure: A Fifth Share for Finders Under Indian Treasure Trove Act

ಗದಗ, ಜನವರಿ 12: ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ತಮ್ಮ ಮನೆಗೆ ಅಡಿಪಾಯ ಹಾಕುವಾಗ ಸಿಕ್ಕ ನಿಧಿಯನ್ನು ತಾಯಿ-ಮಗ ಸರ್ಕಾರಕ್ಕೊಪ್ಪಿಸಿದ್ದರು. ಮನೆಯ ಜಾಗದಲ್ಲಿ ಸಿಕ್ಕ ಚಿನ್ನ ನಿಧಿಯೇ ಅಲ್ಲ, ಅದು ಕುಟುಂಬಕ್ಕೇ ಸೇರಿದ್ದೆಂದು ತಜ್ಞರು ಹೇಳಿದ್ದರು. ಈ ಮಾತು ಕೇಳಿದ ಬಡ ಕುಟುಂಬವೂ ಕೊಟ್ಟ ಬಂಗಾವರನ್ನು ವಾಪಸ್ ಕೇಳಿದ. ಇದೆಲ್ಲದರ ನಡುವೆ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿಯಮಗಳ ಪ್ರಕಾರ, ನಿಧಿ ಕಂಡ ಕುಟುಂಬಕ್ಕೆ ಅದರ ಮೌಲ್ಯದ ಐದನೇ ಒಂದು ಭಾಗದಷ್ಟು (ಶೇ 20) ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತವು ನಿಧಿಯ ಮೌಲ್ಯವನ್ನು ನಿರ್ಧರಿಸಿದ ನಂತರ, ಆ ಮೌಲ್ಯದ ಐದನೇ ಒಂದು ಭಾಗವನ್ನು ಹಣಕಾಸಿನ ರೂಪದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಇದು ಭಾರತೀಯ ನಿಧಿ ಕಾಯಿದೆ 1878 ರ ಅಡಿಯಲ್ಲಿರುವ ನಿಯಮವಾಗಿದ್ದು, ಪ್ರಾಮಾಣಿಕವಾಗಿ ನಿಧಿ ವರದಿ ಮಾಡಿದವರಿಗೆ ಪರಿಹಾರ ನೀಡುವ ವ್ಯವಸ್ಥೆ ಇದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

 

Source link

ಟೀಮ್ ಇಂಡಿಯಾಗೆ ಯುವ ಆಟಗಾರ ಎಂಟ್ರಿ

Source link

ಅರ್ಧ ಕೆಜಿ ಚಿನ್ನದ ನಿಧಿ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರನ ಅಳಲು – Kannada News | Gadag Lakkundi Gold Treasure Found case: Family That Handed Over Half Kg Gold to Government Has No House

ಗದಗ, ಜನವರಿ 12: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಪಾಯದ ಕೆಲಸದ ವೇಳೆ ಅರ್ಧ ಕೆಜಿ ಚಿನ್ನದ ನಿಧಿ ದೊರೆತ ವಿಚಾರ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಕುಟುಂಬದ ಪರಿಸ್ಥಿತಿ ಈಗ ಸಂಕಷ್ಟದಲ್ಲಿದೆ. ನಿಧಿ ಪತ್ತೆಯಾದ ಸ್ಥಳದ ಮಾಲೀಕರಾಗಿರುವ ಮಹಿಳೆಯ ಸಹೋದರ ಗುಡದಪ್ಪ ಮಾತನಾಡಿ, ತಂಗಿ ಗಂಡನನ್ನು ಕಳೆದುಕೊಂಡು ಮನೆಯಿಲ್ಲದೆ ತಮ್ಮೊಂದಿಗೆ ವಾಸಿಸುತ್ತಿದ್ದಾಳೆ. ಕುಟುಂಬಕ್ಕೆ ವಾಸಿಸಲು ಸ್ವಂತ ಮನೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಳೆ ಎಂದರು.

ಗುಡದಪ್ಪ ಪ್ರಕಾರ, ನಿಧಿ ಹಸ್ತಾಂತರ ಮಾಡಿದ ಬಳಿಕವೂ ಅಧಿಕಾರಿಗಳಿಂದ ಯಾವುದೇ ಸ್ಪಷ್ಟವಾದ ಭರವಸೆ ಸಿಕ್ಕಿಲ್ಲ. ಅಧಿಕಾರಿಗಳು ಭೇಟಿ ನೀಡಿದ್ದರೂ ನಂತರ ಹಿರಿಯ ಅಧಿಕಾರಿಗಳು ಅವರ ಕಡೆಗೆ ತಿರುಗಿಯೂ ನೋಡಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ಆ ಕುಟುಂಬಕ್ಕೆ ಚಿನ್ನದ ಆಸೆ ಇಲ್ಲ. ತಂಗಿ ಮತ್ತು ಅವರ ಮಗನಿಗೆ ಒಂದು ಮನೆ ಮತ್ತು ನಿವೇಶನ ದೊರಕಿಸಿಕೊಡಬೇಕೆಂದು ಸರ್ಕಾರಕ್ಕೆ ಗುಡದಪ್ಪ ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ ‘ರಾಷ್ಟ್ರಭಾಷೆ’ಯ ಚರ್ಚೆ! – Kannada News | Sanjay Bangar Sparks ‘Rashtrabhasha’ Debate on KL Rahul

ವಡೋದರಾದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್​ಗೆ ತಮಿಳಿನಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಸುಂದರ್​ಗೆ ಚೆಂಡನ್ನು ಹೇಗೆ ಎಸೆಯಬೇಕೆಂದು ತಮಿಳಿನಲ್ಲಿ ಹೇಳುತ್ತಿರುವ ಕೆಎಲ್ ರಾಹುಲ್ ಧ್ವನಿ ಸ್ಟಂಪ್ ಮೈಕ್​ನಲ್ಲಿ ಸೆರೆಯಾಗಿದೆ.

ಅತ್ತ ಕೆಎಲ್ ರಾಹುಲ್​ಗೆ ತಮಿಳು ಬರುತ್ತಿದ್ದು, ಇತ್ತ ತಮಿಳುನಾಡು ಮೂಲದ ಕ್ರಿಕೆಟಿಗನೊಂದಿಗೆ ತಮಿಳಿನಲ್ಲೇ ಸಂಬೋಧಿಸುತ್ತಿದ್ದರು. ಇದನ್ನು ಕೇಳಿದ ಕಾಮೆಂಟೇಟರ್ ವರುಣ್ ಆರೋನ್, ಸುಂದರ್​ ಜೊತೆ ಕೆಎಲ್ ರಾಹುಲ್ ತಮಿಳಿನಲ್ಲಿ ಮಾತನಾಡಬೇಕಾಗುತ್ತದೆ. ಇದರಿಂದ ಅವರಿಗೆ ಬೇಗ ಅರ್ಥವಾಗುತ್ತಿದೆ ಎಂದರು.

ಅಲ್ಲದೆ ಸಹ ಕಾಮೆಂಟೇಟರ್ ಆಗಿದ್ದ ಸಂಜಯ್ ಬಂಗಾರ್​ಗೆ ಕೆಎಲ್ ರಾಹುಲ್ ಸುಂದರ್​​ ಜೊತೆ ತಮಿಳಿನಲ್ಲಿ ಮಾತನಾಡುತ್ತಿರುವುದರಿಂದ ಹೆಚ್ಚು ಸಹಕಾರಿಯಾಗುತ್ತಿದೆಯಲ್ಲವೇ ಎಂದು ಪ್ರಶ್ನಿಸಿದರು.

ಈ ವೇಳೆ ಸಂಜಯ್ ಬಂಗಾರ್, ನಾನು ರಾಷ್ಟ್ರ ಭಾಷೆಯನ್ನು ನಂಬುತ್ತೇನೆ ಎನ್ನುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದರು. ಅಂದರೆ ಇಲ್ಲಿ ಸಂಜಯ್ ಬಂಗಾರ್ ಈಗಲೂ ಹಿಂದಿ ರಾಷ್ಟ್ರ ಭಾಷೆ ಎಂಬ ಗುಂಗಿನಲ್ಲಿರುವುದು ಸ್ಪಷ್ಟ.

ಆದರೆ ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ ಎಂಬ ಸಾಮಾನ್ಯ ಅರಿವು ಸಂಜಯ್ ಬಂಗಾರ್​ಗೆ ಇದ್ದಂತಿಲ್ಲ. 2010 ರಲ್ಲಿ ಗುಜರಾತ್ ಹೈಕೋರ್ಟ್, ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಲು ಯಾವುದೇ ಅಧಿಕೃತ ದಾಖಲೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದಾಗ್ಯೂ ಲೈವ್ ಕಾಮೆಂಟ್ರಿಯಲ್ಲಿ ರಾಷ್ಟ್ರಭಾಷೆ ಮೇಲೆ ನಂಬಿಕೆಯಿದೆ ಎನ್ನುವ ಮೂಲಕ ಸಂಜಯ್ ಬಂಗಾರ್ ತಮ್ಮ ಅಜ್ಞಾನವನ್ನು ತೆರೆದಿಟ್ಟಿದ್ದಾರೆ.

 

 

Source link

ಮೊಬೈಲ್, ಇಂಟರ್ನೆಟ್ ಬಳಸೋದೆ ಇಲ್ವಂತೆ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ – Kannada News | Silence as Strategy: Why NSA Ajit Doval Keeps His Phone Switched Off

ನವದೆಹಲಿ, ಜನವರಿ 12: ಭಾರತದ ಭದ್ರತಾ ಸಲಹೆಗಾರ(NSA) ಅಜಿತ್ ದೋವಲ್(Ajit Doval) ಮೊಬೈಲ್, ಇಂಟರ್ನೆಟ್ ಬಳಸುವುದೇ ಇಲ್ವಂತೆ. ಭದ್ರತಾ ಸಲಹೆಗಾರರಾಗಿ ಮೊಬೈಲ್ ಅನ್ನೇ ಬಳಸುವುದಿಲ್ಲ ಎಂದರೆ ಹೇಗೆ ಸಂವಹನ ನಡೆಸುತ್ತಾರೆ ಎನ್ನುವ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜ. ಆದರೆ ಸಾಮಾನ್ಯ ಜನರಿಗೆ ತಿಳಿದಿಲ್ಲದ ಇತರ ಸಂವಹನ ವಿಧಾನಗಳಿವೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಡೆವಲಾಪ್ ಇಂಡಿಯಾ ಯುವ ನಾಯಕರ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವೈಯಕ್ತಿಕ ಅಗತ್ಯಗಳನ್ನು ಹೊರತುಪಡಿಸಿ ನಾನು ಇಂಟರ್ನೆಟ್ ಅಥವಾ ಫೋನ್ ಬಳಸುವುದಿಲ್ಲ ಎಂಬುದು ನಿಜ. ನಾನು ಅವುಗಳಿಲ್ಲದೆ ಕಾರ್ಯ ನಿರ್ವಹಿಸುತ್ತೇನೆ. ವಿದೇಶದಲ್ಲಿ ಯಾರನ್ನಾದರೂ ಸಂಪರ್ಕಿಸಬೇಕಾದಾಗ ನಾನು ಸಾಂದರ್ಭಿಕವಾಗಿ ಅವುಗಳನ್ನು ಬಳಸುತ್ತೇನೆ, ಇದರ ಹೊರತಾಗಿ, ಸಾಮಾನ್ಯ ಜನರಿಗೆ ತಿಳಿದಿಲ್ಲದ ಇತರ ಸಂವಹನ ಸಾಧನಗಳಿವೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಸ್ಮರಿಸಿದ ದೋವಲ್, ಸ್ವತಂತ್ರ ಭಾರತದಲ್ಲಿ ಜನಿಸಿರುವ ನೀವು ಅದೃಷ್ಟವಂತರು. ನಾನು ಗುಲಾಮ ಭಾರತದಲ್ಲಿ ಜನಿಸಿದ್ದೇನೆ. ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಲೆಕ್ಕವಿಲ್ಲದಷ್ಟು ಕಷ್ಟಗಳನ್ನು ಸಹಿಸಿಕೊಂಡರು ಎಂದು ಹೇಳಿದರು. ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು, ಸುಭಾಷ್ ಚಂದ್ರ ಬೋಸ್ ತಮ್ಮ ಜೀವನದುದ್ದಕ್ಕೂ ಹೋರಾಡಿದರು ಮತ್ತು ದೇಶ ಸ್ವತಂತ್ರವಾಗುವ ಮೊದಲು ಮಹಾತ್ಮ ಗಾಂಧಿಯವರು ಸತ್ಯಾಗ್ರಹವನ್ನು ಆಶ್ರಯಿಸಬೇಕಾಯಿತು ಎಂದು ಅವರು ಹೇಳಿದರು.

ನಾವು ನಮ್ಮ ಇತಿಹಾಸಕ್ಕೆ ಉತ್ತರಿಸಬೇಕು ಮತ್ತು ದೇಶವನ್ನು ಮತ್ತೆ ಶ್ರೇಷ್ಠವನ್ನಾಗಿ ಮಾಡಬೇಕು, ಗಡಿ ಭದ್ರತೆಯ ವಿಷಯದಲ್ಲಿ ಮಾತ್ರವಲ್ಲ, ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ ಮತ್ತು ಪ್ರತಿಯೊಂದು ಅಂಶದಲ್ಲೂ ಕೂಡ ಎಂದು ಅವರು ಹೇಳಿದರು. ಯುವಕರನ್ನು ಭವಿಷ್ಯದ ನಾಯಕರು ಎಂದು ಬಣ್ಣಿಸಿದ ಅವರು, ಬಲವಾದ ನಾಯಕತ್ವದ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಉದಾಹರಣೆಯನ್ನು ಉಲ್ಲೇಖಿಸಿದರು.

ಮತ್ತಷ್ಟು ಓದಿ: ಗಡಿಯಾಚೆಗಿನ ಭಯೋತ್ಪಾದನೆ ಮಾನವೀಯತೆಯ ವಿರುದ್ಧದ ಅಪರಾಧ; SCO ಸಭೆಯಲ್ಲಿ ಅಜಿತ್ ದೋವಲ್ ಕಳವಳ

ಜಗತ್ತಿನಲ್ಲಿ ಹೆಚ್ಚಿನ ಸಂಘರ್ಷಗಳು ಭದ್ರತೆಗೆ ಸಂಬಂಧಿಸಿದ ಕಾರಣಗಳಿಂದ ಉಂಟಾಗುತ್ತವೆ,ಪ್ರತಿಯೊಬ್ಬರ ಜೀವನವೂ ಸ್ಮಾರ್ಟ್‌ಫೋನ್‌ಗಳು ಮತ್ತು ಇಂಟರ್ನೆಟ್‌ನ ಸುತ್ತ ಸುತ್ತುತ್ತಿರುವ ಈ ಡಿಜಿಟಲ್ ಯುಗದಲ್ಲಿ, ದೇಶದ ಅತ್ಯಂತ ಶಕ್ತಿಶಾಲಿ ಭದ್ರತಾ ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಈ ಹೇಳಿಕೆ ಆಘಾತಕಾರಿಯಾಗಿದೆ.

ಇದು ಉದ್ದೇಶಪೂರ್ವಕ ಭದ್ರತಾ ನೀತಿಯಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಭಯೋತ್ಪಾದನೆ, ರಹಸ್ಯ ಕಾರ್ಯಾಚರಣೆಗಳು, ಕಾರ್ಯತಂತ್ರದ ನಿರ್ಧಾರಗಳು ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಕಾರ್ಯಾಚರಣೆಗಳಿರುತ್ತವೆ. ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಬಹುದು, ಸ್ಥಳಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಸಂಭಾಷಣೆಗಳನ್ನು ತಡೆಹಿಡಿಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಣ್ಣದೊಂದು ನಿರ್ಲಕ್ಷ್ಯವೂ ಸಹ ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯನ್ನುಂಟುಮಾಡಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version