ಹೃತಿಕ್ ರೋಷನ್​​ಗೆ ವಿಚಿತ್ರ ರೋಗ; ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸುತ್ತವೆ ಕಾಲುಗಳು – Kannada News | Hrithik Roshan’s Rare Disorder: Legs Randomly ‘Switch Off’ Explained

ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಇತ್ತೀಚೆಗೆ ನಟಿ ಸೋನಾಲಿ ಬೇಂದ್ರೆ ಅವರ ಪತಿ ಗೋಲ್ಡಿ ಬಹ್ಲ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಹೃತಿಕ್ ಗೂನು ಬೆನ್ನು ಹಾಕಿ ನಡೆಯುತ್ತಿರುವುದು ಕಂಡುಬಂದಿತು . ಇದನ್ನು ನೋಡಿ ಫ್ಯಾನ್ಸ್ ಆತಂಕಗೊಂಡರು. ಹೃತಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಅನೇಕ ಜನರು ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಈಗ ಹೃತಿಕ್ ಸ್ವತಃ ಈ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಪೋಸ್ಟ್ ಬರೆದಿದ್ದಾರೆ. ತಾವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹುಟ್ಟಿನಿಂದಲೇ ಕೆಲವು ಸಮಸ್ಯೆಗಳು ಅವರೊಂದಿಗಿವೆ.

ಜನವರಿ 25 ರಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹೃತಿಕ್ ಪೋಸ್ಟ್ ಮಾಡಿ, ‘ನಿನ್ನೆ ನನ್ನ ಎಡ ಮೊಣಕಾಲು ಇದ್ದಕ್ಕಿದ್ದಂತೆ ಆಫ್ ಆದವು. ನಿನ್ನೆಯಿಂದ ನಾನು ಇಡೀ ದಿನ ಕಿರಿಕಿರಿ ಅನುಭವಿಸುತ್ತಿದ್ದೆ. ಇದು ನನ್ನ ದೈನಂದಿನ ಜೀವನ. ನಾವೆಲ್ಲರೂ ನಮ್ಮ ದೇಹದ ಕಾರ್ಯ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ವಾಸಿಸುತ್ತೇವೆ. ಆದರೆ ನನ್ನ ದೇಹವು ತುಂಬಾ ವಿಶಿಷ್ಟ ಮತ್ತು ಆಸಕ್ತಿದಾಯಕವಾಗಿದೆ. ದೇಹದ ಪ್ರತಿಯೊಂದು ಭಾಗವು ಆನ್ ಮತ್ತು ಆಫ್ ಬಟನ್ ಅನ್ನು ಹೊಂದಿರುತ್ತದೆ’ ಎಂದಿದ್ದಾರೆ ಅವರು.

‘ನನ್ನ ಎಡಗಾಲು ಹುಟ್ಟಿನಿಂದಲೇ ಈ ವೈಶಿಷ್ಟ್ಯವನ್ನು ಹೊಂದಿದೆ. ನನ್ನ ಎಡ ಭುಜ ಮತ್ತು ಬಲ ಮೊಣಕಾಲು ಕೂಡ ಈ ವರ್ಗಕ್ಕೆ ಸೇರುತ್ತವೆ. ಅವು ತಕ್ಷಣವೇ ಆಫ್ ಆಗುತ್ತವೆ. ಈ ಸಣ್ಣ ಸೌಲಭ್ಯವು ಹೆಚ್ಚಿನ ಜನರು ಪಡೆಯದ ಅನುಭವಗಳನ್ನು ನನಗೆ ನೀಡಿದೆ. ನನಗೆ ಒಂದು ವಿಶಿಷ್ಟವಾದ ಸಿನಾಪ್ಸ್ ವ್ಯವಸ್ಥೆ ಇದೆ’ ಎಂದಿದ್ದಾರೆ ಅವರು.

‘ನನ್ನ ನಾಲಿಗೆ ಭೋಜನ ಎಂಬ ಪದವನ್ನು ಉಚ್ಚರಿಸಲು ನಿರಾಕರಿಸುತ್ತಿದೆ. ಊಹಿಸಿ.. ನಾನು ಒಂದು ಚಿತ್ರದ ಸೆಟ್‌ನಲ್ಲಿದ್ದೇನೆ. ನ್ಯಾಯಾಲಯದ ಕೋಣೆಯಲ್ಲಿ ಒಂದು ಗಂಭೀರ ದೃಶ್ಯ ನಡೆಯುತ್ತಿದೆ. ನೀವು ಮನೆಗೆ ಭೋಜನಕ್ಕೆ ಬರುತ್ತೀರಾ ಎಂಬಂತಹ ಸಂಭಾಷಣೆ ಇದೆ? ಆದರೆ ನನ್ನ ನಾಲಿಗೆ ‘ಭೋಜನ’ ಎಂಬ ಪದವನ್ನು ಆಫ್ ಮಾಡಿದೆ’ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಚಿತ್ರರಂಗಕ್ಕೆ ಹೊಸ ಡಾನ್ ಆಗ್ತಾರಾ ಹೃತಿಕ್ ರೋಷನ್?

ಅವರು ಈ ವಿಚಿತ್ರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದನ್ನು ಬಿಟ್ಟಿದ್ದಾರೆ. ಇದು ಒಂದು ರೀತಿಯ ವಿಚಿತ್ರ ಅದೃಷ್ಟ ಎಂದು ಭಾವಿಸಿ ಮುಂದುವರಿಯುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:34 am, Tue, 27 January 26

Source link

Namma Metro: ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ! – Kannada News | BMRCL Offers Free Cycle Parking at 9 Bangalore Metro Stations for Last Mile Connectivity

ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ!

ಬೆಂಗಳೂರು, ಜನವರಿ 27: ಮೆಟ್ರೋ ನಿಲ್ದಾಣಗಳಿಗೆ ಲಾಸ್ಟ್–ಮೈಲ್ ಸಂಪರ್ಕವಾಗಿ ಸೈಕ್ಲಿಂಗ್‌ನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಗರದಲ್ಲಿನ ಒಂಬತ್ತು ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ ಒದಗಿಸಲು ನಿರ್ಧರಿಸಿದೆ. ನಿಗಮದ ಈ ಯೋಜನೆಗೆ ಸೈಕಲಿಸ್ಟ್​ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಾರ್ಕಿಂಗ್ ಶುಲ್ಕಕ್ಕಿಂತ ಮೂಲಸೌಕರ್ಯದ್ದೇ ಬಾಧೆ

ಈ ನಿರ್ಧಾರವನ್ನು ಮೆಟ್ರೋ ಪಾರ್ಕಿಂಗ್ ವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಇತ್ತೀಚೆಗೆ ಆಹ್ವಾನಿಸಿರುವ ಟೆಂಡರ್ ಮೂಲಕ ಪ್ರಕಟಿಸಲಾಗಿದೆ. ಫೆಬ್ರವರಿ 9ರವರೆಗೆ ಟೆಂಡರ್ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಬಳಿಕ ಸಂಸ್ಥೆಯನ್ನು ಅಂತಿಮಗೊಳಿಸಲಾಗುವುದು. ಪ್ರಸ್ತುತ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್‌ಗೆ ಗಂಟೆಗೆ ಒಂದು ರೂ. ಮತ್ತು ದಿನಕ್ಕೆ ಗರಿಷ್ಠ 10 ರೂ. ಶುಲ್ಕ ವಿಧಿಸಲಾಗುತ್ತಿದೆ.

ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಹೇಳುವಂತೆ, ಸೈಕಲ್ ಪ್ರಯಾಣಿಕರು ಹೆಚ್ಚು ಬಳಸುವ ನಿಲ್ದಾಣಗಳನ್ನು ಗುರುತಿಸಿ ಈ ಉಚಿತ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸದ್ಯಕ್ಕೆ ಈ ಸೌಲಭ್ಯವು ಕೇವಲ ಒಂಬತ್ತು ನಿಲ್ದಾಣಗಳಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಮುಂದುವರಿಯಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ Namma Metro: ಆರೆಂಜ್ ಲೈನ್ ಮೆಟ್ರೋ ಕಾಮಗಾರಿ; ಬೆಂಗಳೂರಲ್ಲಿ ಮತ್ತೊಂದು ಫ್ಲೈ ಓವರ್ ಡೆಮಾಲಿಷ್?

ಆದರೆ ಸೈಕಲ್ ಪ್ರಯಾಣಿಕರು, ಉಚಿತ ಪಾರ್ಕಿಂಗ್‌ಗಿಂತ ಮೂಲಸೌಕರ್ಯ ಸುಧಾರಣೆ ಹೆಚ್ಚು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಸೈಕಲ್ ಮೇಯರ್ ಎಂದೇ ಪ್ರಸಿದ್ಧರಾದ ಸತ್ಯಾ ಶಂಕರ್, ಪಾರ್ಕಿಂಗ್ ಶುಲ್ಕ ಸಮಸ್ಯೆಯಲ್ಲ, ಸುರಕ್ಷಿತ ಜಾಗದ ಕೊರತೆಯೇ ಮುಖ್ಯ ಅಡಚಣೆ ಎಂದು ಹೇಳಿದ್ದಾರೆ. ಇನ್ನೊಬ್ಬ ಸೈಕ್ಲಿಸ್ಟ್ ಬಿಜು ಚೆರಾಯತ್, ಹಲವೆಡೆ ಸೈಕಲ್ ಲಾಕ್ ಮಾಡಲು ಕಂಬ ಅಥವಾ ಆಧಾರವಿಲ್ಲದಿರುವುದು ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಯಾವೆಲ್ಲಾ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಜಾರಿ

  • ಪರ್ಪಲ್ ಲೈನ್ – ಮೈಸೂರು ರಸ್ತೆ, ಬ್ಯಾಪನಹಳ್ಳಿ
  • ಗ್ರೀನ್ ಲೈನ್ – ಮಡವಾರ, ಪೀಣ್ಯ ಇಂಡಸ್ಟ್ರಿ, ಜೆಪಿ ನಗರ
  • ಯೆಲ್ಲೋ ಲೈನ್ – ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ, ರಾಗಿಗುಡ್ಡ, ಜಯದೇವ ಆಸ್ಪತ್ರೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 11:28 am, Tue, 27 January 26

Source link

ಕೋಗಿಲು ಲೇಔಟ್ ರೀತಿ ನಾಗಮಂಗಲದಲ್ಲೂ ಭಾರಿ ಅಕ್ರಮ: ಆಂಧ್ರ, ಕೇರಳ ಮೂಲದವರಿಗೆ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಹಂಚಿಕೆ ಆರೋಪ – Kannada News | Kogilu Layout Style Land Scam Alleged in Mandya Nagamangala: Fake Documents Used to Allot Land to Migrants

ಮಂಡ್ಯ, ಜನವರಿ 27: ಬೆಂಗಳೂರಿನ (Bangalore) ಕೋಗಿಲು ಲೇಔಟ್ (Kogilu Layout) ರೀತಿಯಲ್ಲೇ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಭಾರೀ ಭೂಮಿ ಅಕ್ರ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾಮಾಜಿಕ ಕಾರ್ಯಕರ್ತ ರವೀಂದ್ರ ಅವರು ಈ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಬಗರ್ ಹುಕುಂ ಯೋಜನೆಯಡಿ ಗರಿಷ್ಠ 4 ಎಕರೆ 38 ಗುಂಟೆ ಮಾತ್ರ ಸಕ್ರಮಗೊಳಿಸಲು ಅವಕಾಶವಿದೆ. ಆದಾಗ್ಯೂ ನಿಯಮಗಳನ್ನು ಉಲ್ಲಂಘಿಸಿ ಕೆಲವರಿಗೆ ಮನಬಂದಂತೆ ಹೆಚ್ಚಿನ ಭೂಮಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಆಂಧ್ರ, ಕೇರಳ ಮೂಲದವರಿಗೆ ಭೂಮಿ ಹಂಚಿಕೆ?

ನಸೀಮ್ ಎಂಬ ವ್ಯಕ್ತಿಗೆ ಸುಮಾರು 9 ಎಕರೆ 27 ಗುಂಟೆ ಜಮೀನು ಹಾಗೂ ಕಲೀಮ್ ಉಲ್ಲಾ ಹೆಸರಿಗೆ ಸುಮಾರು 11 ಎಕರೆ 23 ಗುಂಟೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಆಂಧ್ರ ಪ್ರದೇಶ, ಬೆಂಗಳೂರು ಹಾಗೂ ಕೇರಳ ಮೂಲದವರಿಗೆ ಸಹ ಭೂಮಿ ಹಂಚಿಕೆ ಮಾಡಿರುವ ಆರೋಪವೂ ಕೇಳಿಬಂದಿದೆ.

ಮುಡಾ ಹಗರಣಕ್ಕಿಂತಲೂ ದೊಡ್ಡದೆಂಬ ಆರೋಪ

ಈ ಅಕ್ರಮವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕಿಂತಲೂ ದೊಡ್ಡದಾಗುವ ಸಾಧ್ಯತೆ ಇದೆ ಎಂದು ರವೀಂದ್ರ ಹೇಳಿದ್ದಾರೆ. ಈ ಪ್ರಕರಣದಲ್ಲಿ ಹಲವು ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಭಾಗವಹಿಸಿರುವ ಶಂಕೆ ಇದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣ ಮುಚ್ಚಿಹಾಕಲು ಸ್ಥಳೀಯರಿಂದಲೇ ತನಿಖೆ

ಇನ್ನು ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಅಧಿಕಾರಿಗಳಿಂದಲೇ ತನಿಖೆ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ, ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ರವೀಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೋಗಿಲು ನಿವಾಸಿಗಳು ನಿರಾಶ್ರಿತರಲ್ಲ, ಲಕ್ಷಾಧಿಪತಿಗಳು! ಆರೋಪಿಗಳ ಖಾತೆಯಲ್ಲಿ ನಡೆದಿತ್ತು ಕೋಟಿ-ಕೋಟಿ ವ್ಯವಹಾರ

ಈ ಭೂಮಿ ಹಗರಣದ ಆರೋಪಗಳು ಮಂಡ್ಯ ಜಿಲ್ಲೆ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ನೀವು ಹಳೆಯ ಮನೆ ಖರೀದಿಸುತ್ತಿದ್ದೀರಾ? ಹಾಗಿದ್ರೆ ಮೊದಲು ಈ ಕೆಲಸ ಮಾಡಿ – Kannada News | Vastu Tips for Old Houses: Simple Remedies to Remove Defects and Boost Prosperity

ಹೊಸ ಮನೆ ಕಟ್ಟಲು ಸಾಧ್ಯವಾಗದೇ ಇರುವ ಸಾಕಷ್ಟು ಜನರು ಹಳೆಯ ಮನೆಗಳನ್ನು ಖರೀದಿಸುತ್ತಾರೆ. ಆದರೆ, ಹಳೆಯ ಮನೆಗಳನ್ನು ಖರೀದಿಸುವಾಗ ವಾಸ್ತು ಪ್ರಕಾರ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ಹಳೆಯ ಮನೆಗಳಲ್ಲಿ ವಾಸ್ತು ದೋಷಗಳು ಇರುವುದು ಸಾಮಾನ್ಯ. ಈ ದೋಷಗಳನ್ನು ತೆಗೆದುಹಾಕದಿದ್ದರೆ, ಅವು ಸಂಪತ್ತು, ಶಾಂತಿ ಮತ್ತು ಕುಟುಂಬದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ತಜ್ಞರ ಸಲಹೆಯ ಪ್ರಕಾರ, ಕೆಲವು ಸರಳ ವಾಸ್ತು ಪರಿಹಾರಗಳನ್ನು ಅನುಸರಿಸುವ ಮೂಲಕ ಎಲ್ಲಾ ರೀತಿಯ ದೋಷಗಳನ್ನು ಸುಲಭವಾಗಿ ತೆಗೆದುಹಾಕಬಹುದು. ವಾಸ್ತು ದೋಷಗಳನ್ನು ತಪ್ಪಿಸುವುದರ ಜೊತೆಗೆ, ನೀವು ಸಣ್ಣ ಪರಿಹಾರಗಳೊಂದಿಗೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸಹ ಸೃಷ್ಟಿಸಬಹುದು.

ಹಳೆಯ ಮನೆಯಲ್ಲಿ ಮೊದಲು ಮಾಡಬೇಕಾದ ಕೆಲಸ:

ಮನೆಯಲ್ಲಿ ಯಾವುದೇ ವಾಸ್ತು ದೋಷಗಳಿದ್ದರೆ, ನಿಮಗೆ ಅದರಿಂದ ತೊಂದರೆಯಾಗಬಹುದು. ಆದ್ದರಿಂದ ಅಂತಹ ಮನೆಗೆ ಪ್ರವೇಶಿಸುವ ಮೊದಲು ಆ ಮನೆಗೆ ವಾಸ್ತು ಶಾಂತಿ ಮಾಡುವುದು ಅವಶ್ಯಕ. ವಾಸ್ತು ಶಾಂತಿ ಮಾಡದಿದ್ದರೆ, ಮನೆಗೆ ಪ್ರವೇಶಿಸುವಾಗ ಕನಿಷ್ಠ ಕಲಶ ಪೂಜೆ ಮತ್ತು ಗಣಪತಿ ಪೂಜೆಯನ್ನು ಮಾಡಬೇಕು. ಹೊಸ ಮನೆಯಲ್ಲಿ ಆಹಾರವನ್ನು ದಾನ ಮಾಡಿ. ಇದು ಮನೆಯಲ್ಲಿರುವ ಎಲ್ಲಾ ವಾಸ್ತು ದೋಷಗಳನ್ನು ನಾಶಪಡಿಸುತ್ತದೆ. ಹೊಸ ಮನೆಯನ್ನು ಪ್ರವೇಶಿಸಿದ ನಂತರ, ಎಲ್ಲಾ ವಸ್ತುಗಳನ್ನು ಅವುಗಳ ಸರಿಯಾದ ದಿಕ್ಕಿನಲ್ಲಿ ಇಡಬೇಕು.

ನೀವು ಹಳೆಯ ಮನೆಗೆ ಪ್ರವೇಶಿಸುವ ಮೊದಲು ಮಾಡಬೇಕಾದ ಕೆಲಸವೆಂದರೆ ಮನೆಗೆ ಬಣ್ಣ ಬಳಿಯುವುದು. ಇದು ನಿಮ್ಮ ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಹೊಸ ಬಣ್ಣವು ಮನೆಯ ಮೇಲಿನ ಕಲೆಗಳನ್ನು ತೆಗೆದುಹಾಕುತ್ತದೆ. ಇದು ವಾಸ್ತು ದೋಷಗಳನ್ನು ಸಹ ತೆಗೆದುಹಾಕುತ್ತದೆ. ಹಳೆಯ ಮನೆಯನ್ನು ಖರೀದಿಸುವಾಗ ವಾಸ್ತು ದೋಷಗಳನ್ನು ತಪ್ಪಿಸಲು ವಾಸ್ತು ಶಾಸ್ತ್ರವು ಮತ್ತೊಂದು ಸುಲಭ ಪರಿಹಾರವನ್ನು ಸೂಚಿಸಿದೆ. ಮನೆ ಪ್ರವೇಶಿಸುವ ಮೊದಲು, ಸ್ವಲ್ಪ ಸಾಸಿವೆ ತೆಗೆದುಕೊಂಡು ಮನೆಯ ಸುತ್ತಲೂ ಹಾಕಿ, ಇದರಿಂದಾಗಿ ನಿಮ್ಮ ಮನೆಯನ್ನು ಎಲ್ಲಾ ಕೆಟ್ಟ ಶಕ್ತಿಯಿಂದ ರಕ್ಷಿಸಬಹುದು.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಮನೆಯ ಮುಂಭಾಗ ಮತ್ತು ಪ್ರವೇಶ ದ್ವಾರದ ಪರಿಶೀಲನೆ:

ಮನೆಯ ಪ್ರವೇಶ ದ್ವಾರ ಆಕರ್ಷಕವಾಗಿರಬೇಕು. ಪ್ರವೇಶ ದ್ವಾರದಲ್ಲಿ ಯಾವುದೇ ಕಸ ಅಥವಾ ಕೆಂಪು ವಸ್ತುಗಳು ಇರದಂತೆ ನೋಡಿಕೊಳ್ಳಿ. ಪ್ರವೇಶ ದ್ವಾರದ ಬಳಿ ಅರಿಶಿನ ಮತ್ತು ಕುಂಕುಮ ಪೂಜೆಯ ಚಿಹ್ನೆಗಳನ್ನು ಇಡುವುದು ಒಳ್ಳೆಯದು. ವಾಸ್ತು ಪ್ರಕಾರ, ಪ್ರವೇಶ ದ್ವಾರದ ದಿಕ್ಕು ಸಮೃದ್ಧಿ, ಸಂಪತ್ತು ಮತ್ತು ಶಾಂತಿಗೆ ಕೊಡುಗೆ ನೀಡುತ್ತದೆ.

ಗಿಡಗಳನ್ನು ನೆಡಿ:

ಮನೆಯಲ್ಲಿ ಗಿಡಗಳು ಮತ್ತು ಹೂವುಗಳನ್ನು ಇಡುವುದರಿಂದ ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ವಾಸ್ತು ದೋಷಗಳು ನಿವಾರಣೆಯಾದ ನಂತರ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಆರೋಗ್ಯ ಹೆಚ್ಚಾಗುತ್ತದೆ. ಸೃಜನಶೀಲ ಮತ್ತು ಸಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತವೆ. ಹಳೆಯ ಮನೆಯನ್ನು ಖರೀದಿಸಿದ ನಂತರ, ಸಣ್ಣ ಪರಿಹಾರಗಳ ಮೂಲಕ ವಾಸ್ತು ದೋಷಗಳನ್ನು ತೆಗೆದುಹಾಕುವುದು ಬಹಳ ಮುಖ್ಯ. ಇದು ಸಂಪತ್ತು ಮತ್ತು ಶಾಂತಿಯನ್ನು ಹೆಚ್ಚಿಸುವುದಲ್ಲದೆ, ಮಾನಸಿಕ ಶಕ್ತಿ ಮತ್ತು ಕುಟುಂಬದ ಬಲವನ್ನೂ ಹೆಚ್ಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್ – Kannada News | Darshan Movie Face Color Controversy Sathish explain why

21 ವರ್ಷಗಳ ಹಿಂದೆ ‘ದರ್ಶನ್’ ಹೆಸರಿನ ಚಿತ್ರದಲ್ಲಿ ದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಸತೀಶ್ ಕೂಡ ಇದ್ದರು. ತಮ್ಮನ್ನು ಈ ಸಿನಿಮಾದಲ್ಲಿ ಕಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದರು. ಈಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನ ನೀಡುವಾಗಲೇ ಸಿನಿಮಾದಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಕರೆದು, ‘ನಾನು ಆಗ ಕಪ್ಪಿದ್ನಾ ಅಥವಾ ಬೆಳ್ಳಗಿದ್ನಾ’ ಎಂದು ಕೇಳಿದ್ದಾರೆ. ಇದಕ್ಕೆ ಅವರು ಕಪ್ಪಗೇ ಇದ್ರಲ್ಲ ಸರ್ ಎಂದಿದ್ದಾರೆ. ನಂತರ ಬಣ್ಣ ಹಚ್ಚಿ ಅವರನ್ನು ಕಪ್ಪು ಮಾಡಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Pariksha Pe Charcha 2026: ಈ ಬಾರಿಯ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ಹೊಸ ಮೈಲಿಗಲ್ಲು, 6.76 ಕೋಟಿ ಜನ ಭಾಗಿ – Kannada News | Ariksha Pe Charcha: PM Modi’s Program Transforms Student Stress Management and Life Skills

ದೆಹಲಿ, ಜ.27: ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಹನ ನಡೆಸುವ ಜನಪ್ರಿಯ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ’ (Pariksha Pe Charcha ) 2026′ ರ 9ನೇ ಆವೃತ್ತಿಯು ಅತ್ಯಂತ ಯಶಸ್ವಿಯಾಗಿ ನಡೆದಿದೆ. ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕೊಯಮತ್ತೂರು (ತಮಿಳುನಾಡು), ರಾಯ್‌ಪುರ (ಛತ್ತೀಸ್‌ಗಢ), ದೇವ್ ಮೋಗ್ರಾ (ಗುಜರಾತ್) ಮತ್ತು ಗುವಾಹಟಿ (ಅಸ್ಸಾಂ) ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದ್ದಾರೆ. ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವು 2026ರಲ್ಲಿ ಒಂದು ಹೊಸ ಆಯಾಮವನ್ನು ಪಡೆದುಕೊಂಡಿದೆ. ಈ ವರ್ಷದ ಸಂವಾದವು ನಿಜವಾದ ಅರ್ಥದಲ್ಲಿ ‘ಸಂಪೂರ್ಣ ಭಾರತ’ದ ಧ್ವನಿಯಾಗಿ ಪ್ರತಿಧ್ವನಿಸಿದೆ. 4.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿತ ಮಾಡಿಕೊಂಡಿದ್ದಾರೆ. 2.26 ಕೋಟಿ ಜನರು ಇದರ ತಯಾರಿಯಲ್ಲಿ ಹಾಗೂ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ.

ಈ ವರ್ಷ ಒಟ್ಟು 6.76 ಕೋಟಿ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದಾರೆ. 2025ರ ಫೆಬ್ರವರಿ 10 ರಂದು ದೆಹಲಿಯ ಸುಂದರ್ ನರ್ಸರಿಯಲ್ಲಿ ವಿಶಿಷ್ಟ ಮಾದರಿಯಲ್ಲಿ ನಡೆಯಿತು. ಇದರಲ್ಲಿ ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 36 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕ್ರೀಡೆ, ಮಾನಸಿಕ ಆರೋಗ್ಯ, ಪೌಷ್ಟಿಕಾಂಶ, ತಂತ್ರಜ್ಞಾನ, ಹಣಕಾಸು ಮತ್ತು ಸೃಜನಶೀಲತೆ ಎಂಬ ಏಳು ವಿಷಯಗಳ ಕುರಿತು ಪ್ರಸಿದ್ಧ ವ್ಯಕ್ತಿಗಳು ಪ್ರೇರಣಾದಾಯಕ ಮಾಹಿತಿ ನೀಡಿದರು. 2025ರಲ್ಲಿ ಈ ಕಾರ್ಯಕ್ರಮವು ಜಾಗತಿಕ ಮಟ್ಟಕ್ಕೆ ಬೆಳೆದು, 245 ದೇಶಗಳ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿತು.

ಇದನ್ನೂ ಓದಿ: ಮುಂದಿನ ಶೈಕ್ಷಣಿಕ ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

2018ರಲ್ಲಿ ಕೇವಲ 22,000 ಭಾಗವಹಿಸುವಿಕೆಯಿಂದ ಆರಂಭವಾದ ಈ ಕಾರ್ಯಕ್ರಮವು, ಇಂದು ಕೋಟಿಗಟ್ಟಲೆ ಜನರನ್ನು ತಲುಪುವ ಮೂಲಕ ‘ಜನ್ ಆಂದೋಲನ’ (ಜನ ಚಳವಳಿ) ಆಗಿ ಮಾರ್ಪಟ್ಟಿದೆ. ಇದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸೇರಿ ಒತ್ತಡ ನಿರ್ವಹಣೆ ಮತ್ತು ಜೀವನ ಕೌಶಲ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯೊಂದಿಗೆ ಪರೀಕ್ಷೆಯನ್ನು ಎದುರಿಸುವಂತೆ ಮಾಡುವುದು ಈ ಉಪಕ್ರಮದ ಮುಖ್ಯ ಗುರಿಯಾಗಿದೆ. 1.55 ಕೋಟಿ ಜನರು PPC 2025 ಗೆ ಸಂಬಂಧಿಸಿದ ರಾಷ್ಟ್ರವ್ಯಾಪಿ ಜನ ಆಂದೋಲನ ಚಟುವಟಿಕೆಗಳಲ್ಲಿ ಭಾಗವಹಿಸಿದರು, ಸುಮಾರು 5 ಕೋಟಿ ಇದರಲ್ಲಿ ಭಾಗವಹಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:58 am, Tue, 27 January 26

Source link

ಭಾರತದ ವಿರುದ್ಧದ ಪಂದ್ಯ ಬಾಯ್ಕಾಟ್: ಪಾಕಿಸ್ತಾನ್ ತಂಡದ ಕುತಂತ್ರ – Kannada News | Pakistan planning for India match boycott in T20 World Cup 2026

ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುವುದಿಲ್ಲವೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಬೇಕಿದ್ದರೆ ಫೆಬ್ರವರಿ 15 ರವರೆಗೆ ಕಾಯಲೇಬೇಕು. ಏಕೆಂದರೆ ಭಾರತದ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೆರೆಮರೆಯಲ್ಲೇ ಯೋಜನೆ ರೂಪಿಸುತ್ತಿದೆ. ಇಂತಹದೊಂದು ಕುತಂತ್ರಕ್ಕೆ ಕೈ ಹಾಕಲು ಮುಖ್ಯ ಕಾರಣ ಐಸಿಸಿ ನೀಡಿರುವ ಎಚ್ಚರಿಕೆ.

ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಟ್ಟರೆ ಪಾಕಿಸ್ತಾನ್ ಕೂಡ ವಿಶ್ವಕಪ್ ಟೂರ್ನಿ ಆಡುವುದು ಅನುಮಾನ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೇಳಿತ್ತು. ಪಿಸಿಬಿಯ ಈ ಬೆದರಿಕೆ ಬೆನ್ನಲ್ಲೇ ಐಸಿಸಿ ಖಡಕ್ ಎಚ್ಚರಿಕೆಯನ್ನು ರವಾನಿಸಿತ್ತು. ಈ ಎಚ್ಚರಿಕೆಯ ಸಂದೇಶದಲ್ಲಿ ರವಾನಿಸಲಾದ ಪ್ರಮುಖ ವಿಷಯ ಎಂದರೆ…

  • ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಕೈ ಬಿಡುವುದಾಗಿ ಐಸಿಸಿ ಎಚ್ಚರಿಕೆ ನೀಡಿದೆ.
  • ಅಂತಾರಾಷ್ಟ್ರೀಯ ತಂಡಗಳೊಂದಿಗೆ ಯಾವುದೇ ದ್ವಿಪಕ್ಷೀಯ ಸರಣಿ ಆಡಲು ಕೂಡ ಅವಕಾಶ ನೀಡುವುದಿಲ್ಲ ಎಂದು ಸಹ ಐಸಿಸಿ ತಿಳಿಸಿದೆ.
  • ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಆಡಲು ವಿದೇಶಿ ಆಟಗಾರರಿಗೆ ಎನ್​ಒಸಿ ನೀಡುವುದಿಲ್ಲ ಎಂಬುದನ್ನು ಸಹ ಐಸಿಸಿ ಸ್ಪಷ್ಟಪಡಿಸಿದೆ.

ಅಂದರೆ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಬ್ಯಾನ್ ಆಗುವುದು ಖಚಿತ. ಹೀಗಾಗಿಯೇ ಇದೀಗ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕುತಂತ್ರಕ್ಕೆ ಕೈ ಹಾಕಿದೆ.

ಐಸಿಸಿ ನೀಡಿರುವ ಎಚ್ಚರಿಕೆಯ ಕಾರಣ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿದೆ. ಆದರೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಯೋಜನೆ ರೂಪಿಸುತ್ತಿದೆ.

ಇಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಾಟ್ ಮಾಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕಾರಣಗಳನ್ನು ಹುಡುಕುತ್ತಿದೆ. ಈ ಮೂಲಕ ಟೂರ್ನಿ ಆಯೋಜಿಸುತ್ತಿರುವ ಬಿಸಿಸಿಐಗೆ ಆರ್ಥಿಕ ನಷ್ಟವನ್ನುಂಟು ಮಾಡಲು ಪ್ಲ್ಯಾನ್ ರೂಪಿಸಲಾಗುತ್ತಿದೆ.

ಇದೇ ಕಾರಣದಿಂದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ, ಪಾಕಿಸ್ತಾನ್ ಪ್ರಧಾನಿ ಶಹಬಾಝ್ ಷರೀಫ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಈ ಚರ್ಚೆಯ ವೇಳೆ ನಿಮ್ಮ ಬಳಿಯಿರುವ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿ ಬಳಸಿ ಎಂಬ ಸ್ಪಷ್ಟ ಸಂದೇಶ ಪಾಕ್ ಪ್ರಧಾನಿಯಿಂದ ಸಿಕ್ಕಿದೆ.

ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗಿದ್ದು,  ಈ ಸಭೆಯಲ್ಲಿ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಆಡಬೇಕಾ? ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕಾ ಎಂಬುದು ನಿರ್ಧಾರವಾಗಲಿದೆ.

ಇದನ್ನೂ ಓದಿ: ಸೋಲಿನ ನಡುವೆಯೂ RCB ತಂಡದ ಭರ್ಜರಿ ದಾಖಲೆ

ಅತ್ತ ಟೂರ್ನಿಯಲ್ಲಿ ಆಡದಿದ್ದರೆ ಪಾಕಿಸ್ತಾನ್ ತಂಡವನ್ನು ಬ್ಯಾನ್ ಮಾಡುವುದಾಗಿ ಐಸಿಸಿ ಎಚ್ಚರಿಕೆ ನೀಡಿರುವ ಕಾರಣ, ಫೆಬ್ರವರಿ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಮಾತ್ರ ಬಹಿಷ್ಕರಿಸಿ ಪಾಕಿಸ್ತಾನ್, ಐಸಿಸಿ-ಬಿಸಿಸಿಐಗೆ ಆರ್ಥಿಕ ಹೊಡೆತ ನೀಡಲು ಪ್ಲ್ಯಾನ್ ಹಾಕಿಕೊಳ್ಳಲು ಸಾಧ್ಯತೆ ಹೆಚ್ಚಿದೆ.

Published On – 10:54 am, Tue, 27 January 26

Source link

ಸಂಬಂಧಿಯಿಂದಲೇ ನಟಿ ಕಾವ್ಯಾ ಗೌಡಗೆ ಬಂತು ರೇಪ್ ಬೆದರಿಕೆ; ಪತಿಯ ಮೇಲೆ ಹಲ್ಲೆ – Kannada News | Kavya Gowda’s Husband Somashekhar Attacked Amidst Family Feud: FIR Filed

‘ಗಾಂಧಾರಿ’, ‘ರಾಧಾ ರಮಣ’ ಧಾರಾವಾಹಿಗಳಲ್ಲಿ (Serial Actress) ನಟಿಸಿರೋ ಕಾವ್ಯಾ ಗೌಡ ಅವರು ಇತ್ತೀಚೆಗೆ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೆಲವು ಜಾಹೀರಾತುಗಳಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಈಗ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಹೀಗಿರುವಾಗಲೇ ಕಾವ್ಯ ಗೌಡ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ನಟಿ ಕಾವ್ಯ ಗೌಡ ಗಳಿಸಿರುವ ಜನಪ್ರಿಯತೆಯನ್ನು ಸಿಹಿಸದೆ ಈ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಟಿ ಕಾವ್ಯಾ ಗೌಡ ಅವರು ಕೆಲ ವರ್ಷಗಳ ಹಿಂದೆ ಉದ್ಯಮಿ ಸೋಮಶೇಖರ್ ಅವರನ್ನು ಮದುವೆ ಆಗಿದ್ದಾರೆ. ಸೋಮಶೇಖರ್ ಹಾಗೂ ನಂದೀಶ್ ಸಹೋದರರು. ಸೋಮಶೇಖರ್- ಕಾವ್ಯಾ ದಂಪತಿ ಮತ್ತು ನಂದೀಶ್ -ಪ್ರೇಮಾ ದಂಪತಿ ಒಂದೇ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಕಾವ್ಯಾ ಮತ್ತು ಪ್ರೇಮಾ ಮಧ್ಯೆ ಮನಸ್ತಾಪ ಆಗುತ್ತಲೇ ಇತ್ತು. ಇತ್ತೀಚೆಗೆ ಕಾವ್ಯಾ ಮತ್ತು ಪ್ರೇಮಾ ಸಂಬಂಧಿಕರು ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲಿ ಗಲಾಟೆಯಾಗಿದೆ.

ಆಗ ಸಂಬಂಧಿ ರವಿಕುಮಾರ್, ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದಾನೆ. ಮನೆಗೆ ನುಗ್ಗಿ‌ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಾವ್ಯಾ ಗೌಡಗೆ ರೇಪ್ ಮಾಡೋದಾಗಿ ಬೆದರಿಕೆ ಕೂಡ ಹಾಕಿದ್ದಾನೆ. ಕಾವ್ಯಾ ಮೇಲೂ ಹಲ್ಲೆ ಮಾಡಲಾಗಿದೆ. ಸೋಮಶೇಖರ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾವ್ಯಾ ಅಕ್ಕ ಭವ್ಯಾ ಗೌಡ ಅವರು ಪ್ರೇಮ, ನಂದಿಶ್, ಪ್ರಿಯಾ, ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಒಟ್ಟಿಗೆ ಎರಡೆರಡು ದುಬಾರಿ ಕಾರು ಖರೀದಿಸಿದ ಗೌತಮಿ ಜಾಧವ್

‘ನಿನ್ನನ್ನು ರೇಪ್ ಮಾಡ್ತೇನೆ’ ಎಂದು ಕಾವ್ಯಾಗೆ ರವಿಕುಮಾರ್ ಬೆದರಿಕೆ ಹಾಕಿರುವುದರಿಂದ ಅವರು ತುಂಬಾನೇ ನೊಂದಿದ್ದಾರೆ. ಮಾನಸಿಕವಾಗಿ ಅವರಿಗೆ ಹಿಂಸೆ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೌಂಟುಬಿಕ ಕಲಹ ಬೀದಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:49 am, Tue, 27 January 26

Source link

ಆನೇಕಲ್: ಹಾಡಹಗಲೇ ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಯುವಕನ ಕಿಡ್ನ್ಯಾಪ್ ಯತ್ನ – Kannada News | Film Style Kidnapping Attempt in Anekal: Gang Attacks Youth on Road, Public Intervention Foils Crime

ಆನೇಕಲ್, ಜನರಿ 27: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಯುವಕನನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲೇ ಯುವಕನ ಮೇಲೆ ಹಲ್ಲೆ ನಡೆಸಿ ಕಾರಿನೊಳಗೆ ಹಾಕಿಕೊಳ್ಳಲು ಪುಡಿರೌಡಿಗಳ ಗ್ಯಾಂಗ್ ಪ್ರಯತ್ನಿಸಿದೆ. ಮೂರು ಬೈಕ್ ಹಾಗೂ ಒಂದು ಕಾರಿನಲ್ಲಿ ಬಂದ ಸುಮಾರು ಎಂಟು ಮಂದಿ ಯುವಕರ ಗ್ಯಾಂಗ್, ರಸ್ತೆಯಲ್ಲಿ ಹೋಗುತ್ತಿದ್ದ ಯುವಕನನ್ನು ತಡೆದು ಕಿಡ್ನಾಪ್ ಮಾಡಲು ಯತ್ನಿಸಿದೆ. ‘ಕ್ಷಮಿಸಿ ತಪ್ಪಾಗಿದೆ, ಬಿಡಿ’ ಎಂದು ಯುವಕ ಮನವಿ ಮಾಡಿಕೊಂಡರೂ ಗ್ಯಾಂಗ್ ಆತನನ್ನು ಬಿಡಲಿಲ್ಲ. ಯುವಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಈ ವೇಳೆ ‘ಇತ್ತೀಚೆಗೆ ಆಪರೇಷನ್ ಆಗಿದೆ, ದಯವಿಟ್ಟು ಬಿಡಿ’ ಎಂದು ಯುವಕ ಅಂಗಲಾಚಿ ಕೇಳಿಕೊಂಡಿದ್ದರೂ ಪುಡಿರೌಡಿಗಳ ಗ್ಯಾಂಗ್ ಕಾರಿನೊಳಗೆ ಎಳೆದು ಹಾಕಲು ಪ್ರಯತ್ನಿಸಿದೆ. ಕಿಡ್ನಾಪರ್‌ಗಳ ಕೈನಿಂದ ತಪ್ಪಿಸಿಕೊಳ್ಳಲು ಯುವಕ ನಾನಾ ರೀತಿಯಲ್ಲಿ ಹೋರಾಡಿದ್ದು, ಕಿರುಚಾಡಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಯುವಕನ ಕಿರುಚಾಟ ಕೇಳಿ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿ ಪ್ರಶ್ನೆ ಮಾಡುತ್ತಿದ್ದಂತೆ ಪುಡಿರೌಡಿಗಳ ಗ್ಯಾಂಗ್ ಯುವಕನನ್ನು ಬಿಟ್ಟು ಕಾರು ಮತ್ತು ಬೈಕ್‌ಗಳಲ್ಲಿ ಪರಾರಿಯಾಗಿದೆ. ಸಾರ್ವಜನಿಕರ ಮಧ್ಯಸ್ಥಿಕೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಈ ಚಿತ್ರದಲ್ಲಿ ಅಡಗಿರುವ ಮೂವರು ವ್ಯಕ್ತಿಗಳ ಮುಖಗಳನ್ನು ಪತ್ತೆ ಹಚ್ಚಿ – Kannada News | Optical Illusion: Find the faces of the three people hidden in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಬಹಳಷ್ಟು ಜನಪ್ರಿಯತೆ ಗಳಿಸುತ್ತಿವೆ. ಹೆಚ್ಚಿನವರು ಬಿಡುವು ಸಿಕ್ಕಾಗಲೆಲ್ಲಾ ಇಂತಹ ಒಗಟಿನ ಚಿತ್ರ ಬಿಡಿಸಲು ಆಸಕ್ತಿ ತೋರುತ್ತಾರೆ. ಆದರೆ ಕೆಲವರು ಒಗಟು ಬಿಡಿಸುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವರು ವಿಫಲರಾಗುತ್ತಾರೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರವು ಸುಲಭವಾಗಿ ಕಾಣುತ್ತದೆ. ಆದರೆ ಈ ಚಿತ್ರದಲ್ಲಿರುವ ಮೂವರ ಮುಖಗಳನ್ನು ಗುರುತಿಸಬೇಕು. ಕೇವಲ ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಿ ನೋಡೋಣ.

ಈ ಚಿತ್ರ ನೋಡಿದಾಗ ನಿಮಗೇನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ನೋಡುವಷ್ಟು ಸುಲಭವಾಗಿ ಬಿಡಿಸಲಾಗದು. ಈ ಇಲ್ಯೂಷನ್ ಚಿತ್ರದಲ್ಲಿ ಇಬ್ಬರು ಮಹಿಳೆಯರು ನಿಂತಿದ್ದಾರೆ. ಹಿನ್ನೆಲೆಯಲ್ಲಿ ಮನೆಗಳು, ಸಸ್ಯಗಳು, ಮರಗಳು ಗೋಚರಿಸುತ್ತವೆ. ಆದರೆ ಇಬ್ಬರೂ ಮಹಿಳೆಯರು ಮಾತ್ರವಲ್ಲ ಮೂವರು ವ್ಯಕ್ತಿಗಳ ಮುಖಗಳಿವೆ. ನೀವು 10 ಸೆಕೆಂಡುಗಳಲ್ಲಿ ಆ ಮುಖಗಳನ್ನು ಹುಡುಕಲು ಸಾಧ್ಯವಾದರೆ, ವೀಕ್ಷಣಾ ಕೌಶಲ್ಯಕ್ಕೆ ಅತ್ಯದ್ಭುತ ಎಂದರ್ಥ.

ಇದನ್ನೂ ಓದಿ: ಸಮುದ್ರ ಆಳದಲ್ಲಿರುವ ಮೀನನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ

ಮೂವರು ವ್ಯಕ್ತಿಗಳ ಮುಖಗಳನ್ನು ಗುರುತಿಸಿ

ಈ ಚಿತ್ರದಲ್ಲಿ ಮೂವರು ವ್ಯಕ್ತಿಗಳ ಮುಖಗಳು ಸಂಪೂರ್ಣವಾಗಿ ಬೆರೆತು ಹೋಗಿದೆ. ಹೀಗಾಗಿ ಮುಖಗಳನ್ನು ಗುರುತಿಸುವುದು ನೂರರಲ್ಲಿ ಹತ್ತು ಜನರಿಗೆ ಸಾಧ್ಯವಾಗಬಹುದು. ನೀವು ಕೂಡ ಛಲ ಬಿಡದೇ ಪ್ರಯತ್ನಿಸಿ. ಮುಖಗಳು ಕಾಣಿಸಿಕೊಳ್ಳದಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಈ ಕೆಳಗಿನ ಚಿತ್ರವನ್ನು ಗಮನಿಸಿದರೆ ನಿಮಗೆ ಮೂವರು ವ್ಯಕ್ತಿಗಳ ಮುಖಗಳನ್ನು ಗುರುತಿಸಿರುವುದು ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version