ಕಲಬುರಗಿ: 44 ಸಲ ಸಂಚಾರಿ ನಿಯಮ ಉಲ್ಲಂಘನೆ; 23,500 ರೂ ದಂಡ ತೆತ್ತ ಆಟೋ ಚಾಲಕ – Kannada News | Auto Driver Fined 23,500 for 44 Traffic Rule Violations, Vehicle Seized
ಕಲಬುರಗಿ, ಮೇ 08: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ (Auto driver) ಸಂಚಾರಿ ಪೋಲಿಸರು ಬರೋಬ್ಬರಿ 23,500 ರೂ. ದಂಡ (fine) ವಿಧಿಸಿರುವಂತಹ ಘಟನೆ ನಡೆದಿದೆ. ಶಹಬಾದ್ ಪಟ್ಟಣದ ನಿವಾಸಿ ಆಗಿರುವ ಆಟೋ ಚಾಲಕ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಮತ್ತು ಮೊಬೈಲ್ ಬಳಕೆ ಸೇರಿದಂತೆ 44 ಸಲ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಸಾವಿರಾರು ರೂ. ದಂಡ ವಿಧಿಸಿರುವ ಕಲಬುರಗಿ ಸಂಚಾರಿ ಠಾಣೆ-2 ಪೊಲೀಸರು, ಸದ್ಯ ಆಟೋ ಕೂಡ ಜಪ್ತಿ ಮಾಡಿಕೊಂಡಿದ್ದಾರೆ….