U19 World Cup 2026: ಅತಿ ವೇಗದ, ಅತಿ ಕಿರಿಯ; ವಿಶ್ವದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ

Source link

ಬೆಂಗಳೂರು: 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ನಾಚಿಗೇಡಿನ ವಿಷಯ; ಸಿಎಂ ಸಿದ್ದರಾಮಯ್ಯ – Kannada News | Bengaluru: It Is Shameful That Police Are Involved in 88 Criminal Cases, Says CM Siddaramaiah

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ

ಬೆಂಗಳೂರು, ಜನವರಿ 17: ಅಪರಾಧವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಕಳೆದ ಸಾಲಿನಲ್ಲಿ 88 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರೇ (police) ಭಾಗಿಯಾಗಿರುವುದು ನಾಚಿಗೇಡಿನ ವಿಷಯ. ಇದು ಸರ್ಕಾರಕ್ಕೆ ಮಾತ್ರವಲ್ಲ, ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಿಡಿಸಿದ್ದಾರೆ.

ಇಂದು ಬೆಂಗಳೂರಿನ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರ ಕಚೇರಿಯಲ್ಲಿ ಆಯೋಜಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕೆಲವು ಪೊಲೀಸ್​​ ಠಾಣೆಗಳು ಉತ್ತಮ ಕೆಲಸ ಮಾಡುತ್ತಿವೆ. ಇನ್ನೂ ಕೆಲವು ಠಾಣೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪೊಲೀಸ್​​ ಅಧಿಕಾರಿಗಳಿಗೆ ಗೊತ್ತಾಗದೇ ಕ್ರೈಂ ನಡೆಯಲು ಸಾಧ್ಯವಿಲ್ಲ, ಪೊಲೀಸರು ಬಲಾಢ್ಯರ ಕೈಗೊಂಬೆಯಂತೆ ಕೆಲಸ ಮಾಡಬಾರದು. ರಾಯಚೂರಿನ ಕವಿತಾಳ ಠಾಣೆ ದೇಶದಲ್ಲೇ 3ನೇ ಸ್ಥಾನ ಪಡೆದುಕೊಂಡಿದೆ‌ ಎಂದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​

ನಮ್ಮಲ್ಲಿ ಕಳ್ಳತನ, ಸುಲಿಗೆ, ದರೋಡೆ ಪ್ರಕರಣ ಕಡಿಮೆ ಆಗುತ್ತಿದೆ. ಆದರೆ ಸೈಬರ್ ಕ್ರೈಂ ಮತ್ತು ಡ್ರಗ್ಸ್ ಪೆಡ್ಲಿಂಗ್ ಜಾಸ್ತಿ‌ ಆಗುತ್ತಿದೆ. ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕೆಂದು ನಮ್ಮ ಸರ್ಕಾರದಿಂದ ಹೋರಾಟ ಮಾಡಲಾಗುತ್ತಿದೆ. ಪೊಲೀಸರು ಸರಿಯಾಗಿ ಕೆಲಸ ಮಾಡಿದರೆ ಎಲ್ಲವನ್ನೂ ಮಟ್ಟಹಾಕಬಹುದು ಎಂದಿದ್ದಾರೆ.

ಕರ್ನಾಟಕ ಪೊಲೀಸರು ಏಕೆ ಮಾಡುತ್ತಿಲ್ಲ: ಸಿಎಂ ಪ್ರಶ್ನೆ

ಡ್ರಗ್ಸ್ ಮುಕ್ತಮಾಡಲು ವ್ಯಸನಿ ವಿಚಾರಣೆ ಮಾಡಿದರೆ ಮೂಲ ಮಾಹಿತಿ ಸಿಗುತ್ತದೆ. ಪೆಡ್ಲರ್​ ವಿಚಾರಣೆ ‌ಮಾಡಿದರೆ ಎಲ್ಲಿಂದ ಡ್ರಗ್ಸ್​ ಬಂತು ಅಂತಾ ಗೊತ್ತಾಗುತ್ತೆ‌. ಅಪರಾಧದಲ್ಲಿ ಭಾಗಿಯಾದ ವಿದೇಶಿಯರನ್ನು ಅವರ ದೇಶಕ್ಕೆ ವಾಪಸ್ ಕಳಿಸುವ ಕೆಲಸ ಮಾಡುತ್ತೇವೆ. ಪಿಐ, ಪಿಎಸ್​​ಐ ಸೇರಿ ಎಲ್ಲರ ಮೇಲೂ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು. ಮಹಾರಾಷ್ಟ್ರದ ಪೊಲೀಸರು ಬಂದು ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಮಾಡಿದ್ದಾರೆ. ಅದನ್ನು ಕರ್ನಾಟಕ ಪೊಲೀಸರು ಏಕೆ ಮಾಡುತ್ತಿಲ್ಲ. ಈ ರೀತಿ ಇನ್ಮುಂದೆ ಆಗಬಾರದು ಅಂತಾ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮನೆ ಮನೆಗೆ ಪೊಲೀಸ್ ಕಾರ್ಯಕ್ಕೆ ಮೂರನೇ ಸ್ಥಾನ

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಸೈಬರ್ ಕ್ರೈಂ ತಡೆಗೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಮನೆ ಮನೆಗೆ ಪೊಲೀಸ್ ಕಾರ್ಯಕ್ಕೆ ನಮಗೆ ದೇಶದಲ್ಲಿ ಮೂರನೇ ಸ್ಥಾನ ಬಂದಿದೆ ಎಂದು ಹೇಳಿದರು.

ವರದಿ: ವಿಕಾಸ್​ ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Weekly Career Horoscope Jan 18 25, 2026: Navigate Job Challenges and Achieve Success

18 ರಿಂದ 25 ರವರೆಗೆ ಉದ್ಯೋಗದಲ್ಲಿ ಹಲವಾರು ತಿರುವುಗಳು ಬರಲಿವೆ. ಸಮಸ್ಯೆಗಳನ್ನು ಬೆನ್ನೇರಿ ಹೊರಟರೆ ನಿಮ್ಮನ್ನು ಪ್ರಪಾತಕ್ಕೆ ಬೀಳಿಸಬಹುದು‌. ಎಷ್ಟು ಬೇಕೋ ಅಷ್ಟಕ್ಕೆ ಸ್ಪಂದಿಸಿ, ನಿಮ್ಮ ಗುರಿಯತ್ತ ಇರಿ.

ಮೇಷ ರಾಶಿ :

ಈ ವಾರ ಕೆಲಸದಲ್ಲಿ ಚಟುವಟಿಕೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿಗಳು ನಿಮ್ಮ ಸಾಮರ್ಥ್ಯ ಪರೀಕ್ಷಿಸಬಹುದು. ಆತುರದ ನಿರ್ಧಾರ ತಪ್ಪಿಸಿ. ಹಿರಿಯರ ಮಾರ್ಗದರ್ಶನ ಲಾಭಕರ. ಸ್ವಂತ ಪ್ರಯತ್ನದಿಂದ ಅವಕಾಶಗಳನ್ನು ರೂಪಿಸಬಹುದು. ಅಧಿಕಾರಿಗಳ ಗಮನ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.

ವೃಷಭ ರಾಶಿ:

ಮೂರನೇ ವಾರದಲ್ಲಿ ವೃತ್ತಿಯಲ್ಲಿ ನಿಧಾನವಾದರೂ ಸ್ಥಿರ ಪ್ರಗತಿ ಕಾಣುತ್ತದೆ. ಹಣಕಾಸು ಸಂಬಂಧಿತ ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಶ್ರಮಕ್ಕೆ ತಕ್ಷಣ ಫಲ ಕಾಣಿಸದಿದ್ದರೂ ನಿರಾಶರಾಗಬೇಡಿ. ವಾರಾಂತ್ಯಕ್ಕೆ ಒತ್ತಡ ಕಡಿಮೆಯಾಗುತ್ತದೆ. ಸ್ಥಿರತೆ ನಿಮ್ಮ ಬಲ.

ಮಿಥುನ ರಾಶಿ:

ನಿಮಗೆ ಈ ವಾರ ಸಂವಹನ, ಸಭೆ, ಬರವಣಿಗೆ, ಮಾರ್ಕೆಟಿಂಗ್ ಕೆಲಸಗಳಲ್ಲಿ ಯಶಸ್ಸು. ಹೊಸ ಸಂಪರ್ಕಗಳು ಭವಿಷ್ಯಕ್ಕೆ ಉಪಯುಕ್ತ. ಕೆಲಸದ ಒತ್ತಡ ಇದ್ದರೂ ಬುದ್ಧಿಚಾತುರ್ಯದಿಂದ ನಿಭಾಯಿಸುತ್ತೀರಿ. ಸಂದರ್ಶನ ಅಥವಾ ಪ್ರಸ್ತಾವನೆಗೆ ಉತ್ತಮ ಸಮಯ. ಏಕಾಗ್ರತೆ ಕಾಪಾಡಿಕೊಳ್ಳಿ.

ಕರ್ಕಟಕ ರಾಶಿ:

ನಾಲ್ಕನೇ ರಾಶಿಗೆ ಈ ವಾರ ಕೆಲಸದ ಸ್ಥಳದಲ್ಲಿ ಭಾವನಾತ್ಮಕತೆ ಹೆಚ್ಚಾಗಬಹುದು. ಸಹೋದ್ಯೋಗಿಗಳ ಮಾತುಗಳಿಂದ ಬೇಸರವಾಗುವ ಸಾಧ್ಯತೆ. ಶಾಂತವಾಗಿ ಕಾರ್ಯನಿರ್ವಹಿಸಿದರೆ ಸಮಸ್ಯೆ ತೀರಿಕೊಳ್ಳುತ್ತದೆ. ಕುಟುಂಬ ಬೆಂಬಲ ಮನೋಬಲ ನೀಡುತ್ತದೆ. ಹೊಣೆಗಾರಿಕೆ ಹೆಚ್ಚಾದರೂ ನಿಮ್ಮ ಶ್ರಮ ಗುರುತಿಸಲಾಗುತ್ತದೆ.

ಸಿಂಹ ರಾಶಿ:

ನಿಮ್ಮ ನೇತೃತ್ವದ ಗುಣ ಮೆಚ್ಚುಗೆ ಪಡೆಯುವ ವಾರ. ಗೌರವ, ಪ್ರಶಂಸೆ ದೊರೆಯಬಹುದು. ಅಧಿಕಾರ ಸಂಬಂಧಿತ ಕೆಲಸಗಳಲ್ಲಿ ಮುನ್ನಡೆ. ಆದರೆ ಅಹಂಕಾರ ಮತ್ತು ತ್ವರಿತ ನಿರ್ಧಾರ ತಪ್ಪಿಸಿ. ತಂಡದ ಸಹಕಾರದಿಂದ ದೊಡ್ಡ ಗುರಿ ಸಾಧಿಸುವ ಅವಕಾಶ ಇದೆ. ವೃತ್ತಿಯಲ್ಲಿ ಹೆಸರು ಹೆಚ್ಚಾಗುತ್ತದೆ.

ಕನ್ಯಾ ರಾಶಿ:

ನೀವು ಈ ವಾರ ಯೋಜನೆ, ಲೆಕ್ಕಪತ್ರ, ದಾಖಲೆ ಕೆಲಸಗಳಲ್ಲಿ ಒತ್ತಡದಿಂದ ಇರುವಿರಿ. ಸೂಕ್ಷ್ಮ ಪರಿಶೀಲನೆ ನಿಮ್ಮ ಶಕ್ತಿಯಾಗುತ್ತದೆ. ಕೆಲಸದ ಒತ್ತಡ ಇದ್ದರೂ ಫಲ ತೃಪ್ತಿದಾಯಕ. ಆರೋಗ್ಯದ ಕಡೆ ಸ್ವಲ್ಪ ಗಮನ ಅಗತ್ಯ. ಶಿಸ್ತು ಮತ್ತು ಸಮಯಪಾಲನೆ ನಿಮಗೆ ಪ್ರಗತಿಯ ದಾರಿ ತೋರಿಸುತ್ತದೆ.

ತುಲಾ ರಾಶಿ:

ಇದು ನಿಮಗೆ ಪಾಲುದಾರಿಕೆ ಮತ್ತು ಸಾಮೂಹಿಕ ಕಾರ್ಯದಲ್ಲಿ ಲಾಭ ನೀಡುವ ವಾರ. ಮಾತುಕತೆ, ಒಪ್ಪಂದಗಳಲ್ಲಿ ಜಯ. ನಿರ್ಧಾರಗಳಲ್ಲಿ ಸ್ಪಷ್ಟತೆ ಇರಲಿ. ವಿಳಂಬ ಮಾಡಿದರೆ ಅವಕಾಶ ಕೈತಪ್ಪಬಹುದು. ಸಮತೋಲನದ ನಿಲುವು ವೃತ್ತಿಯಲ್ಲಿ ಗೌರವ ತರುತ್ತದೆ. ಕಾನೂನು ಅಥವಾ ಕಲಾತ್ಮಕ ಕ್ಷೇತ್ರಗಳಲ್ಲಿ ಬೆಳವಣಿಗೆ.

ವೃಶ್ಚಿಕ ರಾಶಿ:

ನಿಮ್ಮ ಅತಿಯಾದ ಒಳಗಿನ ಒತ್ತಡ ಕೆಲಸದಲ್ಲಿ ಪ್ರತಿಫಲಿಸಬಹುದು. ಮೌನವಾಗಿ ಮಾಡಿದ ಶ್ರಮ ಫಲ ನೀಡುತ್ತದೆ. ಆಂತರಿಕ ರಾಜಕೀಯದಿಂದ ದೂರವಿರುವುದು ಒಳಿತು. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಂಶೋಧನೆ, ತನಿಖೆ ಅಥವಾ ತಾಂತ್ರಿಕ ಕೆಲಸಗಳಲ್ಲಿ ಮುನ್ನಡೆ ಸಾಧ್ಯ.

ಧನು ರಾಶಿ:

ಈ ವಾರ ಯಾರದೋ ಮೂಲಕ ಹೊಸ ಅವಕಾಶಗಳ ಸೂಚನೆ ಸಿಗುತ್ತದೆ. ತರಬೇತಿ, ಪ್ರಯಾಣ ಅಥವಾ ವಿದೇಶಿ ಸಂಪರ್ಕ ಲಾಭಕರ. ಭವಿಷ್ಯದ ವೃತ್ತಿಗೆ ಸ್ಪಷ್ಟ ದಿಕ್ಕು ದೊರೆಯುತ್ತದೆ. ಉತ್ಸಾಹ ಹೆಚ್ಚಾಗುತ್ತದೆ. ಆದರೆ ಅತಿಯಾದ ನಿರೀಕ್ಷೆ ತಪ್ಪಿಸಿ. ಕಲಿಕೆ ಮತ್ತು ಜ್ಞಾನ ವೃದ್ಧಿಗೆ ಉತ್ತಮ ವಾರ.

ಮಕರ ರಾಶಿ:

ಬೇಸರದಿಂದ ಇರುವ ನಿಮಗೆ ಈ ವಾರ ಶ್ರಮಕ್ಕೆ ಫಲ ದೊರೆಯುವ ಸಮಯ. ಹಿರಿಯರ ವಿಶ್ವಾಸ ಮತ್ತು ಬೆಂಬಲ ಸಿಗುತ್ತದೆ. ಹುದ್ದೆ ಅಥವಾ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ. ಕೆಲಸದ ಒತ್ತಡ ಇದ್ದರೂ ಸಹನೆ ನಿಮ್ಮ ಗೆಲುವು. ಸರ್ಕಾರಿ ಅಥವಾ ಆಡಳಿತ ಕ್ಷೇತ್ರದಲ್ಲಿ ಪ್ರಗತಿ ಕಾಣಿಸುತ್ತದೆ.

ಕುಂಭ ರಾಶಿ:

ನಿಮ್ಮ ಹೊಸ ಆಲೋಚನೆಗಳು ಮತ್ತು ವಿಭಿನ್ನ ಪ್ರಯತ್ನಗಳು ಮೆಚ್ಚುಗೆ ಪಡೆಯುತ್ತವೆ. ತಂತ್ರಜ್ಞಾನ, ವಿಜ್ಞಾನ, ಇನೋವೇಶನ್ ಕ್ಷೇತ್ರದಲ್ಲಿ ಮುನ್ನಡೆ. ತಂಡದಲ್ಲಿ ನಿಮ್ಮ ಪಾತ್ರ ಮಹತ್ವ ಪಡೆಯುತ್ತದೆ. ದೊಡ್ಡ ಪ್ರಯಾಣದ ಭಂಗ ತಪ್ಪಿಸಿದರೆ ದೊಡ್ಡ ಸಾಧನೆ ಸಾಧ್ಯ. ಸಾಮಾಜಿಕ ಕಾರ್ಯಗಳಿಂದ ಹೆಸರು ಬರುತ್ತದೆ.

ಮೀನ ರಾಶಿ:

ಈ ವಾರ ಸೃಜನಶೀಲತೆ ಮತ್ತು ಕಲ್ಪನೆ ಕೆಲಸಕ್ಕೆ ಹೊಸ ರೂಪ ನೀಡುತ್ತದೆ. ಕಲೆ ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೃಪ್ತಿ. ನಿರ್ಧಾರಗಳಲ್ಲಿ ಗೊಂದಲ ಸಾಧ್ಯ, ಸ್ಪಷ್ಟ ಗುರಿ ಹಿಡಿಯಿರಿ. ಶಾಂತ ಮನಸ್ಸಿನಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

U19 World Cup 2026: ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ – Kannada News | U19 World Cup: Pakistan Crushed by England in Opening Match; Top Order Fails

ಅಂಡರ್ 19 ವಿಶ್ವಕಪ್‌ನಲ್ಲಿ (U19 World Cup 2026) ತನ್ನ ಮೊದಲ ಪಂದ್ಯವನ್ನು ಇಂಗ್ಲೆಂಡ್‌ ವಿರುದ್ಧ ಆಡಿದ್ದ ಪಾಕಿಸ್ತಾನ (Pakistan U19 vs England U19) ತಂಡ ಹೀನಾಯ ಸೋಲು ಅನುಭವಿಸಿದೆ. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್ 210 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಈ ಸಣ್ಣ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿದೆ 173 ರನ್‌ಗಳಿಗೆ ಆಲೌಟ್ ಆಗಿ 37 ರನ್‌ಗಳ ಅಂತರದಿಂದ ಸೋಲನುಭವಿಸಿತು. ಪಾಕಿಸ್ತಾನದ ಸೋಲಿಗೆ ತಂಡದ ಬ್ಯಾಟ್ಸ್‌ಮನ್‌ಗಳು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ವಿಶೇಷವಾಗಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪರಿಣಾಮಕಾರಿಯಾಗಲಿಲ್ಲ. ಸಮೀರ್ ಮಿನ್ಹಾಸ್, ಮೊಹಮ್ಮದ್ ಶಯಾನ್, ಉಸ್ಮಾನ್ ಖಾನ್, ಅಹ್ಮದ್ ಹುಸೇನ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದು ತಂಡದ ಸೋಲಿಗೆ ಕಾರಣವಾಯಿತು.

ಪಾಕಿಸ್ತಾನದ ಅಗ್ರ ಕ್ರಮಾಂಕ ವಿಫಲ

ಇಂಗ್ಲೆಂಡ್‌ ನೀಡಿದ 210 ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಸಮೀರ್ ಮಿನ್ಹಾಸ್ ನಾಲ್ಕನೇ ಓವರ್‌ನಲ್ಲಿಯೇ ಔಟಾದರು. ಸಮೀರ್ ಮಿನ್ಹಾಸ್ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು ತಂಡದ ಇನ್ನಿಂಗ್ಸ್ ಕುಸಿಯುವಂತೆ ಮಾಡಿತು. ಮೊಹಮ್ಮದ್ ಶಯಾನ್ 7 ರನ್​ಗಳಿಗೆ ಔಟಾದರೆ, ಉಸ್ಮಾನ್ ಖಾನ್ 6 ರನ್, ಅಹ್ಮದ್ ಹುಸೇನ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡದ ನಾಯಕ ಫರ್ಹಾನ್ ಯೂಸುಫ್ 65 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಇತ್ತ ಇಂಗ್ಲೆಂಡ್‌ನ ವೇಗಿಗಳಾದ ಅಲೆಕ್ಸ್ ಗ್ರೀನ್, ಜೇಮ್ಸ್ ಮಿಂಟೊ ಮತ್ತು ರಾಲ್ಫಿ ಆಲ್ಬರ್ಟ್ ತಲಾ 2 ವಿಕೆಟ್ ಪಡೆದು, ಪಾಕಿಸ್ತಾನವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಕ್ಯಾಲೆಬ್ ಫಾಕ್ನರ್ ಅರ್ಧಶತಕ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ನ ಬ್ಯಾಟಿಂಗ್ ಕೂಡ ಕಳಪೆಯಾಗಿತ್ತು. ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕ್ಯಾಲೆಬ್ ಫಾಕ್ನರ್ ಪಾಕಿಸ್ತಾನಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ 73 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 66 ರನ್ ಗಳಿಸಿದರು. ಆರಂಭಿಕ ಬೆನ್ ಡಾಕಿನ್ಸ್ ಕೂಡ 33 ರನ್ ಗಳಿಸುವ ಮೂಲಕ ತಂಡದ ಇನ್ನಿಂಗ್ಸ್​ಗೆ ಜೀವ ತುಂಬಿದರು.

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ

ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು

ತನ್ನ ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಈಗ ಉಳಿದಿರುವ ಎರಡೂ ಗುಂಪು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಮುಂದಿನ ಪಂದ್ಯ ಜನವರಿ 19 ರಂದು ಸ್ಕಾಟ್ಲೆಂಡ್ ವಿರುದ್ಧ ಆಡಿರುವ ಪಾಕಿಸ್ತಾನ, ತನ್ನ ಕೊನೆಯ ಲೀಗ್ ಪಂದ್ಯವನ್ನು ಜನವರಿ 22 ರಂದು ಜಿಂಬಾಬ್ವೆ ವಿರುದ್ಧ ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:58 pm, Sat, 17 January 26

Source link

ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ – Kannada News | PM Modi interacts with students and loco pilots in Vande Bharat Sleeper Train

ಮಾಲ್ಡಾ, ಜನವರಿ 17: ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳದ ಮಾಲ್ಡಾದಿಂದ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಹಸಿರು ನಿಶಾನೆ ತೋರಿದರು. ಈ ಸ್ಲೀಪರ್ ರೈಲು ಸೇವೆಯು ಹೌರಾವನ್ನು ಕಾಮಾಕ್ಯ (ಗುವಾಹಟಿ) ಜೊತೆ ಸಂಪರ್ಕಿಸುತ್ತದೆ. ಈ ವಿಶೇಷವಾದ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಲೋಕೋ ಪೈಲಟ್‌ಗಳು ಮತ್ತು ರೈಲ್ವೆ ಸಿಬ್ಬಂದಿಯೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಈ ಯೋಜನೆಯಲ್ಲಿ ಭಾಗಿಯಾಗಿರುವ ರೈಲ್ವೆ ಸಿಬ್ಬಂದಿಯ ಪ್ರಯತ್ನಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಂದೇ ಭಾರತ್ ಸ್ಲೀಪರ್ ರೈಲು ಭಾರತದಲ್ಲಿ ದೀರ್ಘ ಪ್ರಯಾಣವನ್ನು ಹೆಚ್ಚು ಆರಾಮದಾಯಕ, ಅದ್ಭುತ ಮತ್ತು ಸ್ಮರಣೀಯವಾಗಿಸುತ್ತದೆ ಎಂದು ಹೇಳಿದರು. “ಇಂದು ಪಶ್ಚಿಮ ಬಂಗಾಳದ ಪ್ರಗತಿಯನ್ನು ವೇಗಗೊಳಿಸುವ ಅಭಿಯಾನವು ಮಾಲ್ಡಾದಿಂದ ಇನ್ನಷ್ಟು ವೇಗವನ್ನು ಪಡೆದುಕೊಂಡಿದೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ಸಲಿಂಗಕಾಮಿಗಳು ಜಿಮ್​​​​ಗೆ ಬರಬಾರದು”: ವಿವಾದ ಸೃಷ್ಟಿಸಿದ ಬೆಂಗಳೂರಿನ ಜೆಸ್ಟ್ ಫಿಟ್‌ನೆಸ್ ಸ್ಟುಡಿಯೋ ಪೋಸ್ಟರ್​​ – Kannada News | Bengaluru Gym’s Anti Gay Poster Draws Widespread Criticism

ಬೆಂಗಳೂರು, ಜ.17: ಬೆಂಗಳೂರಿನ ಜಿಮ್ (Bengaluru Gym)​​ ಒಂದರಲ್ಲಿ ವಿಚಿತ್ರ ಪೋಸ್ಟ್​​ವೊಂದನ್ನು ಹಾಕಿದ್ದಾರೆ. ಇದೀಗ ಈ ಪೋಸ್ಟರ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ನಗರದ ಜಿಮ್​​ವೊಂದರಲ್ಲಿ ಸಲಿಂಗಕಾಮಿಗಳಿಗೆ ತೂಕ ಇಳಿಸಿಕೊಳ್ಳಲು ಅವಕಾಶ ಇಲ್ಲ ಎಂಬ ಪೋಸ್ಟರ್​​ ಹಾಕಿದ್ದಾರೆ. ಇದೀಗ ಇದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜಿಮ್​​ ಮಾಲೀಕರ​​​​ ವಿರುದ್ಧ ಅಕ್ರೋಶ ವ್ಯಕ್ತವಾಗಿದೆ. ಜೆಸ್ಟ್ ಫಿಟ್‌ನೆಸ್ ಸ್ಟುಡಿಯೋ ಈ ಪೋಸ್ಟ್​​ನ್ನು ಹಾಕಿದೆ ಎಂದು ಹೇಳಲಾಗಿದೆ. ಈ ಪೋಸ್ಟರ್​​ನ್ನು ತಕ್ಷಣವೇ ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ. ಟೈಮ್ಸ್ ನೌ ವರದಿ ಮಾಡಿರುವ ಪ್ರಕಾರ, ಯಾವುದೇ ಸಮುದಾಯವನ್ನು ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಜೆಸ್ಟ್ ಫಿಟ್‌ನೆಸ್ ಸ್ಟುಡಿಯೋ ಹೇಳಿಕೆ ನೀಡಿದೆ. ಜತೆಗೆ ಕ್ಷಮೆಯನ್ನು ಕೇಳಿದೆ ಎಂದು ಹೇಳಲಾಗಿದೆ. ಪೋಸ್ಟ್ ಈಗಾಗಲೇ ಆನ್‌ಲೈನ್‌ನಲ್ಲಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು, ಅನೇಕ ನೆಟ್ಟಿಗರು ಹೋಮೋಫೋಬಿಕ್ ಬಗ್ಗೆ ಹೇಳಿಕೆ ನೀಡಿದ ಜಿಮ್​ನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ.

ಈ ಪೋಸ್ಟ್​​ನ್ನು ರೆಡ್ಡಿಟ್‌ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ‘ಗೇ’ ಪದವನ್ನು ಹೀಗೆ ಬಳಸುವುದು ಸರಿಯಲ್ಲ. ಇದು ಅವಮಾನದ ಸಂಗತಿ ಎಂದು ಈ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​​ನ್ನು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್​​​ನಲ್ಲಿರುವ ಜೆಸ್ಟ್ ಫಿಟ್‌ನೆಸ್ ಸ್ಟುಡಿಯೋದಲ್ಲಿ ಹಾಕಲಾಗಿದೆ. ಇಂತಹ ಅಸಂಬದ್ಧ ಪೋಸ್ಟರ್​​​ಗಳನ್ನು ಹಾಕಲು ಯಾರೂ ಅಧಿಕಾರ ನೀಡಿದ್ದು, ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. HSR ಲೇಔಟ್‌ನ ಅತ್ಯಂತ ಪ್ರಸಿದ್ಧ ಜಿಮ್‌ನಲ್ಲಿ ಇಂತಹ ಪೋಸ್ಟರ್​​​ಗಳನ್ನು ಹಾಕುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ತೂಕ ಇಳಿಸಿಕೊಳ್ಳಲು ಎಲ್ಲರೂ ಕಷ್ಟ ಪಡುತ್ತಾರೆ. ಆದರೆ ಗೇ ಎನ್ನುವ ಕಾರಣಕ್ಕೆ ಈ ರೀತಿ ಪೋಸ್ಟರ್​​​ಗಳನ್ನು ಹಾಕಿ ಅವಮಾನ ಮಾಡುವುದು ಸರಿಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ‘ಇಲ್ಲೇ ನಿನ್ನ ಹೆಣ ಬೀಳತ್ತೆ!’ ಸಿಎಂ ತವರಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ!

ಇಲ್ಲಿದೆ ನೋಡಿ ವೈರಲ್​​ ಪೋಸ್ಟ್:

Blatant homophobia at a gym in HSR. Can’t believe this is real
byu/skullkeeper0023 inbangalore

ಈ ಜಿಮ್ ನಡೆಸುವವರು ಅನಕ್ಷರಸ್ಥರು ಎಂಬುದನ್ನು ಈ ಪೋಸ್ಟರ್​​​ ತೋರಿಸುತ್ತದೆ. ಈ ವ್ಯಕ್ತಿ ಮೆದುಳಿಲ್ಲ, ಕೇವಲ ಸ್ನಾಯುಗಳು ಮಾತ್ರ ಇದೆ ಎಂದು ಟೀಕಿಸಿದ್ದಾರೆ. ಈ ಜಿಮ್​​ನ್ನು ಬಹಿಷ್ಕಾರ ಮಾಡಿ. ಕೆಟ್ಟದಾಗಿ ರೇಟ್ ಮಾಡಿ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾನು ಈ ಜಿಮ್‌ಗೆ ಒಂದು ವರ್ಷ ಹೋಗಿದ್ದೆ. ಅಲ್ಲಿನ ಜನರು ಮತ್ತು ತರಬೇತುದಾರರು ಸಂಪೂರ್ಣವಾಗಿ ಹುಚ್ಚರು. ಇದು ನಿಜಕ್ಕೂ ತುಂಬಾ ಅವಮಾನ ವಿಚಾರ ಎಂದು ಹೇಳಿದ್ದಾರೆ. ಸಲಿಂಗಕಾಮಿ ಕೂಡ ಮನುಷ್ಯರಲ್ಲವೇ? ಈ ಪೋಸ್ಟರ್​​ ಹಾಕಿದವನಿಗೆ ಬಾಲ್​​​​​​​​​….. ಕ್ಷಮಿಸಿ ಮೆದುಳು ಇಲ್ಲ ಎಂದು ಮತ್ತೊಬ್ಬರು ತಮಾಷೆಯಾಗಿ ಕಮೆಂಟ್​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:37 pm, Sat, 17 January 26

Source link

ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ – Kannada News | Man Roams Middle of Road with Machete After Refuses to Give alcohol

ಬೆಂಗಳೂರು, ಜನವರಿ 17: ಪರಿಚಯಸ್ಥ ಎಣ್ಣೆ ಕೊಡಿಸಿಲ್ಲ ಎಂದು ಮಚ್ಚು ಹಿಡಿದು ವ್ಯಕ್ತಿ ಓರ್ವ ನಡುರಸ್ತೆಯಲ್ಲೇ ಪುಂಡಾಟ ಮೆರೆದಿರುವಂತಹ ಘಟನೆ ಬೆಂಗಳೂರು ಬಳಿಯ ಆನೇಕಲ್ ತಾಲೂಕಿನ ಗೌರೇನಹಳ್ಳಿಯಲ್ಲಿ ನಡೆದಿದೆ. ಗೌರೇನಾಹಳ್ಳಿ ಗ್ರಾಮದ ಬಸವರಾಜ್​​​​ ಎಂಬಾತ ಕುಡಿದ ಅಮಲಿನಲ್ಲಿ ಮಚ್ಚು ಹಿಡಿದು ದಾಂದಲೆ ಮಾಡಿದ್ದಾರೆ. ಪರಿಚಯಸ್ಥ ಪ್ರಕಾಶ್​ಗೆ ಬಸವರಾಜ್​​ ಮಚ್ಚು ಹಿಡಿದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸವರಾಜ್ ಮಚ್ಚುಹಿಡಿದು ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪುಂಡರ ಹಾವಳಿಗೆ ಕಡಿವಾಣ ಹಾಕದ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Viral: ಬೆಂಗಳೂರಿಗೆ ಬಂದ ಬಳಿಕ ಸ್ನೇಹಿತರನ್ನು ಮಾಡಿಕೊಳ್ಳಲು ಈ ಟ್ರಿಕ್ಸ್‌ ಬಳಸಿದೆ ಎಂದ ಯುವತಿ – Kannada News | Bengaluru: Founder reveals the secret to making friends in Bengaluru

ಬೆಂಗಳೂರು, ಜನವರಿ 17: ಓದು ಮುಗಿಸಿ ಉದ್ಯೋಗಕ್ಕೆಂದು ದೂರದ ಊರಿಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕು. ಹೊಸ ಊರ ಜನರು ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಅಪರಿಚಿತರ ಜತೆಗೆ ಸ್ನೇಹ (friendship) ಬೆಳೆಸಿಕೊಳ್ಳಲು ಹಿಂದೇಟು ಹಾಕುವುದಿದೆ. ಪ್ರಾರಂಭದ ದಿನಗಳಲ್ಲಿ ಒಂಟಿ ಭಾವ ಕಾಡುತ್ತದೆ. ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡ ಸಂಸ್ಥಾಪಕಿಯೊಬ್ಬರಿಗೆ ಅದೇ ರೀತಿಯ ಅನುಭವವಾಗಿತ್ತಂತೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ತಮ್ಮ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸುರಭಿ ಜೈನ್ (Surbhi Jain) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬೆಂಗಳೂರಿಗೆ ಬಂದ ಪ್ರಾರಂಭದ ದಿನಗಳು ಹೇಗಿದ್ದವು, ಹೇಗೆ ಸ್ನೇಹಿತರನ್ನು ಮಾಡಿಕೊಂಡೆ ಎನ್ನುವುದನ್ನು ವಿವರಿಸಿರುವುದನ್ನು ಕಾಣಬಹುದು. ಈ ಪೋಸ್ಟ್ ನಲ್ಲಿ ನೀವು ಯಾವುದೇ ನಗರಕ್ಕೆ ಹೊಸಬರಾಗಿದ್ದರೆ, ಇದು ನಿಮಗಾಗಿ. 2020 ರಲ್ಲಿ ನಾನು ಬೆಂಗಳೂರಿಗೆ ಸ್ಥಳಾಂತರಗೊಂಡಾಗ, ನನಗೆ ಯಾರ ಪರಿಚಯವೂ ಇರಲಿಲ್ಲ. ಕೆಲವೇ ಕೆಲವು ಪರಿಚಿತ ಮುಖಗಳಷ್ಟೇ ಇದ್ದವು, ಆದರೆ ಅವರಲ್ಲಿ ಹೆಚ್ಚಿನವರು ನಾನು ಇರುವ ಸ್ಥಳಕ್ಕಿಂತ ದೂರದಲ್ಲಿಯೇ ವಾಸಿಸುತ್ತಿದ್ದರು. ಹೊಸದನ್ನು ಪ್ರಾರಂಭಿಸುವ ದೊಡ್ಡ ಕನಸುಗಳೊಂದಿಗೆ ನಾನು ನಗರಕ್ಕೆ ಬಂದಿದ್ದೆ. ನಾನು ಒಂದು ಕಂಪನಿಯನ್ನು ಸೇರಿಕೊಂಡೆ. ನನ್ನ ಸಹೋದ್ಯೋಗಿಗಳು ಒಳ್ಳೆಯವರಾಗಿದ್ದರು, ಆದರೆ ಅವರು ಸಹೋದ್ಯೋಗಿಗಳಷ್ಟೇ ಆಗಿದ್ದರು, ನಿಮಗೆ ತಿಳಿದಿದೆಯೇ?. ಕಚೇರಿಯಲ್ಲಿ ಸಣ್ಣ ಸಣ್ಣ ಮಾತುಗಳು ಅಂತರವನ್ನು ಕಡಿಮೆ ಮಾಡಿತು. ಜ್ಯೂಸ್ ಕುಡಿಯಲು ಅಥವಾ ಕಾಫಿಗಾಗಿ ಭೇಟಿಯಾಗುವುದಕ್ಕಿಂತ ಜನರೊಂದಿಗೆ ಈ ರೀತಿ ಸಂಪರ್ಕ ಸಾಧಿಸುವುದು ತುಂಬಾ ಉತ್ತಮವಾಯಿತು ಎಂದು ಹೇಳಿದ್ದಾರೆ.

 ವೈರಲ್‌ ಪೋಸ್ಟ್‌ ಇಲ್ಲಿದೆ

ಇದು ವಿಭಿನ್ನವೆನಿಸಿತು, ನಾನು ಪ್ರತಿದಿನ ಎದುರು ನೋಡುತ್ತಿದ್ದ ವಿಷಯವಾಯಿತು. ಇದರಿಂದ ಹಗುರವಾದ ಮನಸ್ಸಿನೊಂದಿಗೆ ಹಿಂತಿರುಗಬಹುದು. ಕಾಫಿ ಅಥವಾ ಜ್ಯೂಸ್ ಕುಡಿಯಲು ಹೋದಾಗ ನೀವು ಮತ್ತೆ ಮತ್ತೆ ಅದೇ ಮುಖಗಳನ್ನು ನೋಡಲು ಪ್ರಾರಂಭಿಸುತ್ತೀರಿ. ಆಗ ಸ್ನೇಹವು ಪ್ರಾರಂಭವಾಗುತ್ತದೆ. ಅಪರಿಚಿತ ಭಾವವು ನಿಧಾನವಾಗಿ ಸ್ನೇಹಕ್ಕೆ ತಿರುಗುತ್ತದೆ ದೊಡ್ಡ ನಗರವು ಮನೆಯಂತೆ ಭಾಸವಾಗಲು ಪ್ರಾರಂಭಿಸುತ್ತದೆ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ಪ್ರೇಯಸಿ ಜನ್ಮ ದಿನದ ಹಿನ್ನೆಲೆ 26 ಕಿ.ಮೀ. ಓಡಿದ ಯುವಕ; ವಿಡಿಯೋ ವೈರಲ್​​

ಜನವರಿ 14 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ ಇಪ್ಪತ್ತ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ನಿಜ, ಸರ್ಜಾಪುರ ಪ್ರದೇಶದಲ್ಲಿ ಸಕ್ರಿಯವಾಗಿರುವ ಬಹುತೇಕ ಎಲ್ಲಾ ಕ್ರಿಕೆಟ್ ಆಟಗಾರರನ್ನು ನಾನು ಬಲ್ಲೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಗಂಭೀರವಾದ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಂಗಾತಿಯನ್ನು ಹುಡುಕುತ್ತಿದ್ದರೆ, ಶನಿವಾರ ಬೆಳಿಗ್ಗೆ ಓಟ, ನಡಿಗೆ ಅಥವಾ ವ್ಯಾಯಾಮಕ್ಕೆ ಹೋಗಿ. ನಿಮಗೆ ನಿಮ್ಮದೇ ಆದ ವ್ಯಕ್ತಿ ಸಿಗಬಹುದು ಎಂದಿದ್ದಾರೆ. ಮತ್ತೊಬ್ಬರು ಒಳ್ಳೆಯ ಸಲಹೆ, ನಾನು ಕೂಡ ಈ ರೀತಿ ಸ್ನೇಹಿತರನ್ನು ಮಾಡಿಕೊಳ್ಳುವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:20 pm, Sat, 17 January 26

Source link

ಮತ್ತೊಂದು ‘ಪುಷ್ಪ’ ಚಿತ್ರ? ಆನೆ ದಂತದ ಕಳ್ಳಸಾಗಣೆಯ ಕಥೆ ‘ಕಾಟಾಳನ್’ – Kannada News | Kattalan Movie Teaser: Ivory Smuggling and Action Saga Multi Language Release details

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ರಕ್ತ ಚಂದನದ ಕಳ್ಳ ಸಾಗಣೆಯ ಕಥೆಯನ್ನು ಹೇಳಲಾಗಿತ್ತು. ಈಗ ‘ಕಾಟಾಳನ್’ ಹೆಸರಿನ ಮಲಯಾಳಂ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಆನೆ ದಂತದ ಕಳ್ಳ ಸಾಗಣೆಯ ಕರಾಳ ಜಗತ್ತನ್ನು ತೆರೆದಿಡಲು ನಿರ್ದೇಶಕರು ಪ್ರಯತ್ನಿಸಿದಂತಿದೆ. ಇದರ ಜೊತೆಗೆ ಭರ್ಜರಿ ಆ್ಯಕ್ಷನ್ ಕೂಡ ಸಿನಿಮಾದಲ್ಲಿ ಇರಲಿದೆ.

‘ಕಾಟಾಳನ್’ ಸಿನಿಮಾದ ಟೀಸರ್ ರಿಲೀಸ್ ಬಿಡುಗಡೆ ಕಂಡಿದೆ. ಇದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಈ ಸಿನಿಮಾ ಮೇ 14ರಂದು ರಿಲೀಸ್ ಆಗಲಿದೆ. ‘ಕಾಟಾಳನ್’ ಮಲಯಾಳಂ ಚಿತ್ರ. ಈ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಕಾಣಲಿದೆ ಎಂಬುದು ವಿಶೇಷ.

ಈ ಚಿತ್ರದಲ್ಲಿ ಪಾತ್ರಗಳ ಜೊತೆಗೆ ಆನೆಗಳು ಕೂಡ ಹೈಲೈಟ್ ಆಗಿವೆ. ಆನೆಗಳ ಜೊತೆಗಿನ ಸಾಹಸ ದೃಶ್ಯ ಟೀಸರ್​​​ನಲ್ಲಿ ಗಮನ ಸೆಳೆದಿವೆ. ದಂತದ ಕಳ್ಳಸಾಗಣೆ ವಿಷಯ ಕೂಡ ಹೈಲೈಟ್ ಆಗಿದೆ. ಸಾಮಾನ್ಯವಾಗಿ ಆನೆಗಳ ಜೊತೆಗಿನ ಸೆಣೆಸಾಟ ಎಂದಾಗ ಗ್ರಾಫಿಕ್ಸ್ ಬಳಸುತ್ತಾರೆ. ಆದರೆ, ನೈಜವಾಗಿ ಇದನ್ನು ಚಿತ್ರೀಕರಿಸಲಾಗಿದೆ. ಅಂತರಾಷ್ಟ್ರೀಯ ಸ್ಟಂಟ್ ಕೋ-ಆರ್ಡಿನೇಟರ್ ಕೇಚಾ ಖಾನ್ಫಕ್ಡಿ ನೇತೃತ್ವದಲ್ಲಿ ಥೈಲ್ಯಾಂಡ್‌ನಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

‘ಕಾಟಾಳನ್’ ಸಿನಿಮಾನ ಪೌಲ್ ಜಾರ್ಜ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಂಟನಿ ವರ್ಗೀಸ್, ‘ಪುಷ್ಪ’ ಖ್ಯಾತಿಯ ತೆಲುಗು ನಟ ಸುನೀಲ್, ಕಬೀರ್ ಸಿಂಗ್, ದುಶಾರಾ ವಿಜಯನ್ ಮೊದಲಾದವರು ನಟಿಸಿದ್ದಾರೆ. ಯಾವುದೇ ಸಿನಿಮಾ ಯಶಸ್ಸು ಕಾಣಬೇಕು ಎಂದರೆ ಸಂಗೀತದ ಪಾತ್ರ ದೊಡ್ಡದಿರುತ್ತದೆ. ಈ ಚಿತ್ರಕ್ಕೆ ಕನ್ನಡದ ಬಿ. ಅಜನೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೀಸರ್​​ನ ಹಿನ್ನೆಲೆ ಸಂಗೀತ ಗಮನ ಸೆಳೆಯುವ ರೀತಿಯಲ್ಲಿದೆ.

ಇದನ್ನೂ ಓದಿ: Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ

ಕ್ಯೂಬ್ ಎಂಟರ್​​​ಟೇನ್​​​ಮೆಂಟ್ ಬ್ಯಾನರ್ ಅಡಿಯಲ್ಲಿ ಶರೀಫ್‌ ಮೊಹಮ್ಮದ್ ಚಿತ್ರ ನಿರ್ಮಿಸಿದ್ದಾರೆ. ಸಿನಿಮಾ ರಿಲೀಸ್​​ಗೂ ಮೊದಲೇ ಸದ್ದು ಮಾಡುತ್ತಿದ್ದು, ಒಟಿಟಿ ಹಾಗೂ ಟಿವಿ ಹಕ್ಕಿಗೆ ಬೇಡಿಕೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಕಲ್ಟ್’ ಟ್ರೈಲರ್ ರಿಲೀಸ್: ಇದು ಭಗ್ನ ಪ್ರೇಮಿಯ ಕತೆ – Kannada News | Zaid Khan starrer Cult Kannada Movie trailer released

ಸಚಿವ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ (Zaid Khan) ನಟಿಸಿರುವ ‘ಕಲ್ಟ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾದ ಪೋಸ್ಟರ್​​ನಿಂದ ಸಖತ್ ಗಮನ ಸೆಳೆದಿದ್ದ ‘ಕಲ್ಟ್’ ಸಿನಿಮಾಕ್ಕೆ ಮಲೈಕಾ ವಸುಪಾಲ್ ನಾಯಕಿ. ಝೈದ್ ಖಾನ್ ಮತ್ತು ಮಲೈಕಾ ಅವರು ಸಿನಿಮಾಕ್ಕೆ ಭರ್ಜರಿ ಪ್ರಚಾವನ್ನು ಸಹ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಭಾವುಕ ದೃಶ್ಯಗಳಿಂದ ಟ್ರೈಲರ್ ಗಮನ ಸೆಳೆಯುತ್ತಿದೆ.

‘ಕಲ್ಟ್’ ಟ್ರೈಲರ್ ನೋಡಿದರೆ ಇದು ಪಕ್ಕಾ ಭಗ್ನ ಪ್ರೇಮಿಯ ಕತೆ ಎಂಬುದು ತಿಳಿಯುತ್ತದೆ. ಝೈದ್ ಖಾನ್ ಮಾಧವ ಪಾತ್ರದಲ್ಲಿ ನಟಿಸಿದ್ದರೆ ಮಲೈಕಾ ಗೀತಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ರಚಿತಾ ರಾಮ್ ಸಹ ನಟಿಸಿದ್ದು, ಅವರುದ್ದ ಕೇವಲ ಅತಿಥಿ ಪಾತ್ರ ಮಾತ್ರವೇ ಅಲ್ಲ ಎಂಬುದು ಟ್ರೈಲರ್​​ನಲ್ಲಿಯೇ ತಿಳಿದು ಬರುತ್ತಿದೆ. ಪ್ರೀತಿಯನ್ನು ಕಳೆದುಕೊಂಡು ಮದ್ಯದ ದಾಸನಾದ ಯುವಕನ ಪಾತ್ರದಲ್ಲಿ ಝೈದ್ ಖಾನ್ ನಟಿಸಿದ್ದಾರೆ.

ಸಿನಿಮಾದಲ್ಲಿ ಪ್ರೇಮಿಯಾಗಿ, ಭಗ್ನ ಪ್ರೇಮಿಯಾಗಿ ಹೀಗೆ ಎರಡು ಶೇಡ್​​ನಲ್ಲಿ ಝೈದ್ ಖಾನ್ ಕಾಣಿಸಿಕೊಂಡಿರುವುದು ಟ್ರೈಲರ್​​ನಲ್ಲಿಯೇ ತಿಳಿದು ಬರುತ್ತಿದೆ. ಮಲೈಕಾ ವಸುಪಾಲ್ ಟ್ರೈಲರ್​​ನಲ್ಲಿ ಕಡಿಮೆ ಕಾಣಿಸಿಕೊಂಡರೂ ಸಹ ಬಲು ಅಂದವಾಗಿ ಕಾಣುತ್ತಾರೆ. ರಚಿತಾ ರಾಮ್ ಅವರ ಪಾತ್ರ ಬೋಲ್ಡ್ ಆಗಿರುವ ಜೊತೆಗೆ ಪ್ರಬುದ್ಧತೆಯನ್ನೂ ಒಳಗೊಂಡಿರುವುದು ಟ್ರೈಲರ್​​ನಿಂದ ತಿಳಿದು ಬರುತ್ತಿದೆ. ಕೆಲವು ಆಕ್ಷನ್ ಸೀನ್​​ಗಳನ್ನು ಟ್ರೈಲರ್​​ನಲ್ಲಿ ತೋರಿಸಲಾಗಿದ್ದು, ಆಕ್ಷನ್ ಒಳ್ಳೆಯ ಗುಣಮಟ್ಟದಿಂದ ಕೂಡಿರುವುದು ಕಾಣುತ್ತಿದೆ.

ಇದನ್ನೂ ಓದಿ:‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ?

ಒಟ್ಟಾರೆಯಾಗಿ ‘ಕಲ್ಟ್’ ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಸಿನಿಮಾನಲ್ಲಿ ಪ್ರೀತಿ, ರೊಮ್ಯಾನ್ಸ್, ಆಕ್ಷನ್, ಭಗ್ನ ಪ್ರೇಮ, ಭಗ್ನ ಪ್ರೇಮದ ಬಳಿಕ ಮತ್ತೆ ಪ್ರೇಮದಲ್ಲಿ ಬೀಳುವುದು, ಮಗ ವ್ಯಸನಗಳಿಗೆ ದಾಸನಾದರೆ ಪೋಷಕರು ಅನುಭವಿಸುವ ನೋವು, ಝೈದ್ ಖಾನ್ (ಮಾಧವ) ಭಗ್ನ ಪ್ರೇಮಿ ಯಾಕಾದ, ರಚಿತಾ ರಾಮ್ ಪಾತ್ರ, ಮಾಧವನ ಹುಡುಕಿ ಬರುವುದೇಕೆ? ಇನ್ನೂ ಹಲವು ಅಂಶಗಳು, ಕುತೂಹಲಗಳು ಸಿನಿಮಾನಲ್ಲಿ ಇರುವಂತಿದೆ.

‘ಕಲ್ಟ್’ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಎ ಹರ್ಷ ಕೊರಿಯೋಗ್ರಫಿ ಮಾಡಿದ್ದಾರೆ. ಝೈದ್ ಖಾನ್, ಮಲೈಕಾ ಹಾಗೂ ರಚಿತಾ ರಾಮ್ ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು ಇನ್ನೂ ಕೆಲ ಒಳ್ಳೆಯ ನಟ-ನಟಿಯರಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಲೋಕಿ ಸಿನಿಮಾಸ್. ಜನವರಿ 23ರಂದು ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:49 pm, Sat, 17 January 26

Source link

Exit mobile version