‘ಅಂದು ನೀವೇ ಸಿಎಂ ಆಗಿ ಅಂದಿದ್ದೆ, ಆಗದ್ದಕ್ಕೆ ಕಾಂಗ್ರೆಸ್ಸಿಗರೇ ಕಾರಣ’: ಡಾ. ಪರಮೇಶ್ವರ್ಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್
ಬೆಂಗಳೂರು, ಜೂ.12: ತಮಗೆ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿದ ಕುರಿತು ಸಚಿವ ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ. ‘ಡಾ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಲು ಅವರದೇ ಪಕ್ಷದವರಾದ ಕಾಂಗ್ರೆಸ್ಸಿಗರೇ ನೇರ ಕಾರಣ, ಈ ಬಗ್ಗೆ ಪರಮೇಶ್ವರ್ ಅವರು ನಮ್ಮನ್ನು ಕೇಳುವ ಬದಲು ಮೊದಲು ತಮ್ಮದೇ ಪಕ್ಷದವರ ಜೊತೆ ಕೂತು ಚರ್ಚೆ ಮಾಡಲಿ….