ಸೋಮಾವತಿ ನದಿಗೆ ಬಿದ್ದ ಕಾರು: ಕೊಚ್ಚಿಕೊಂಡು ಹೋಗುತ್ತಿದ್ದ ದಂಪತಿಯನ್ನ ಉಳಿಸಿದ ಬಂಡೆ – Kannada News | Car falls into somavati river, locals rescued Bengaluru Couple from Water at Kalasa

ಚಿಕ್ಕಮಗಳೂರು, (ಆಗಸ್ಟ್ 15): ಜಿಲ್ಲೆಯ ಕಳಸ (Kalasa) ತಾಲೂಕಿನ ಗಣಪತಿ ಕಟ್ಟೆ ಬಳಿ ಕಾರೊಂದು ಸೋಮಾವತಿ ನದಿಗೆ (Somavati River) ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು (Bengaluru) ಮೂಲದ ದಂಪತಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕಾರಿಗೆ ಬಂಡೆಯೊಂದು ಅಡ್ಡ ಸಿಕ್ಕಿದ್ದರಿಂದ ದಂಪತಿಯ ಜೀವ ಉಳಿದಿದೆ. ಬಂಡೆ ಅಡ್ಡ ಸಿಗದೇ ಇದ್ದಿದ್ದರೆ ಕಾರಿನ ಸಮೇತ ದಂಪತಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಇನ್ನೂ ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ಕಾರಿಗೆ ಹಗ್ಗ ಕಟ್ಟಿ ಮೇಲೆಳೆದು ದಂಪತಿಯ ಪ್ರಾಣ ರಕ್ಷಿಸಿದ್ದಾರೆ. ಸೋಮಾವತಿ ನದಿಗೆ ತಡೆಗೋಡೆ ಇಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ. ಈ ಹಿಮದೆಯೂ ಸಹ ಮುರ್ನಾಲ್ಕು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ: ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ; ಓರ್ವನ ಬಂಧನ – Kannada News | Kolar Independence Day: Man Arrested for Sword Display and Alleged Disrespect to National Flag

ಕೋಲಾರ, ಆಗಸ್ಟ್​​​ 15: ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ವೇಳೆ ಖಡ್ಗ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಡಿ ಮಹಾಲಕ್ಷ್ಮೀ ಬಡಾವಣೆ ನಿವಾಸಿ ಮೊಹಮ್ಮದ್ ಪೀರ್ ಅಲಿಯಾಸ್ ಜಾವಾ ಎಂಬಾತನನ್ನು ಕೋಲಾರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧ್ವಜಾರೋಹಣದ ಸಂದರ್ಭದಲ್ಲಿ ಮುಸ್ತಫಾ ಎಂಬುವರಿಗೆ ಉಡುಗೊರೆಯಾಗಿ ನೀಡಲು ಆರೋಪಿ ಈ ಖಡ್ಗವನ್ನು ತಂದಿದ್ದ ಎನ್ನಲಾಗಿದ್ದು, ಸಾರ್ವಜನಿಕವಾಗಿ ಖಡ್ಗ ಪ್ರದರ್ಶಿಸಿ ಧ್ವಜಕ್ಕೆ ಅಪಚಾರ ಎಸಗಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Varamahalakshmi festival 2026: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿ – Kannada News | Clean your house like this before Varamahalakshmi festival

ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಅಥವಾ ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿನಕ್ಕಿಂತ ಬರುವ ಶುಕ್ರವಾರದಂದು ವರಮಹಾಲಕ್ಷ್ಮಿ (Varamahalakshmi) ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಅಧಿದೇವತೆಯಾದ ಲಕ್ಷ್ಮಿಯನ್ನು ಆರಾಧಿಸುವ ಹಬ್ಬ. ಈ ಹಬ್ಬದ ದಿನ ಅನೇಕರು ಲಕ್ಷ್ಮೀದೇವಿಯನ್ನು ಮನೆಯಲ್ಲಿ ಕೂರಿಸಿ ಪೂಜಿಸುತ್ತಾರೆ. ಲಕ್ಷ್ಮೀ ದೇವಿಯನ್ನು ಮನೆಯೊಳಗೆ ಬರಮಾಡಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ಮನೆಯನ್ನು ಸ್ವಚ್ಛಗೊಳಿಸುತ್ತಾರೆ, ಹೌದು ವರಮಹಾಲಕ್ಷ್ಮಿ ಹಬ್ಬ ಬಂದರೆ ಸಾಕು, ಪ್ರತಿಯೊಬ್ಬರೂ ಸಹ ಮನೆಯನ್ನು ಡೀಪ್‌ ಕ್ಲೀನ್‌ ಮಾಡುತ್ತಾರೆ. ಆದರೆ ಹೊರಗೆ ಕೆಲಸಕ್ಕೆ ಹೋಗುವ ಅನೇಕರಿಗೆ ಸರಿಯಾಗಿ ಮನೆ ಕ್ಲೀನ್‌ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸಿಂಪಲ್‌ ಸಲಹೆಗಳನ್ನು ಪಾಲಿಸುವ ಮೂಲಕ ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಬಲು ಸುಲಭವಾಗಿ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.

ಕ್ಲೀನಿಂಗ್‌ ಕೆಲಸ ಯಾವಾಗ ಪ್ರಾರಂಭಿಸಬೇಕು?

ಪ್ರತಿಯೊಬ್ಬರೂ ವರಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಹಬ್ಬಕ್ಕೆ ಇನ್ನೇನು ಐದಾರು ದಿನ ಇರುವಾಗ ಕ್ಲೀನಿಂಗ್‌ ಕಾರ್ಯ ಆರಂಭಿಸಿದರೆ, ಒತ್ತಡದ ಜೊತೆಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಹ ಸಾಧ್ಯವಾಗುವುದಿಲ್ಲ. ಹಬ್ಬ ಸಮೀಪಿಸುತ್ತಿದ್ದಂತೆ ಕೆಲಸಗಳನ್ನು ಮುಂದೂಡುವುದರಿಂದ ನಿಮ್ಮ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಆದ್ದರಿಂದ ನೀವು 10-12 ದಿನಗಳ ಮುಂಚಿತವಾಗಿ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಬೇಕು.

ಮನೆ ಕ್ಲೀನಿಂಗ್‌ ಎಲ್ಲಿಂದ ಆರಂಭಿಸಬೇಕು?

ಮೊದಲು ನಿಮ್ಮ ಕ್ಲೋಸೆಟ್‌ಗಳನ್ನು ಸ್ವಚ್ಛಗೊಳಿಸಿ ಮತ್ತು ಜೋಡಿಸಿ. ನೀವು ಹಾಕದ ಹಳೆಯ ಬಟ್ಟೆಗಳಿದ್ದರೆ ಅದನ್ನು ಬೆರೆಯೇ ಇಟ್ಟು ಯಾರಿಗಾದರೂ ನೀಡಿ, ಇದರಿಂದ ಕ್ಲೋಸೆಟ್‌ಗಳಲ್ಲಿ ಸಾಕಷ್ಟು ಜಾಗ ಕೂಡ ಲಭ್ಯವಾಗುತ್ತದೆ. ನಂತರ ಕಿಟಕಿ ಪರದೆಗಳು ಮತ್ತು ಕಾರ್ಪೆಟ್‌ಗಳನ್ನು ಮುಂಚಿತವಾಗಿ ತೊಳೆಯಿರಿ. ಅವುಗಳನ್ನು ಚೆನ್ನಾಗಿ ಒಣಗಲು ಬಿಡಿ, ಮನೆ ಸಂಪೂರ್ಣ ಸ್ವಚ್ಛವಾದ ಬಳಿಕ ಪರದೆ ಕಾರ್ಪೆಟ್‌ಗಳನ್ನು ಜೋಡಿಸಿಡಿ. ಜೊತೆಗೆ ಅಲಂಕಾರಿಕ ವಸ್ತುಗಳನ್ನು ಸಹ ಮೊದಲೇ ಸ್ವಚ್ಛಗೊಳಿಸಿಡಿ.

ಹಳೆಯ ವಸ್ತುಗಳನ್ನೆಲ್ಲಾ ಹೊರಗಿಡಿ:

ಸಾಮಾನ್ಯವಾಗಿ ಹಳೆಯ ವಸ್ತುಗಳು, ಮುರಿದ ವಸ್ತುಗಳನ್ನೆಲ್ಲಾ ಮೂಲೆಗೆ ಎಸೆದು ಬಿಡುತ್ತೇವೆ. ಮನೆ ಸ್ವಚ್ಛಗೊಳಿಸುವಾಗ ಮೊದಲು ಅವುಗಳನ್ನು ಮನೆಯಿಂದ ಹೊರಗೆ ಹಾಕಿ. ಹೌದು ಮುರಿದ ವಸ್ತುಗಳು, ಗಾಜು ಏನಾದರೂ ಇದ್ದರೆ ಅದನ್ನು ಕಸದ ಬುಟ್ಟಿಗೆ ಹಾಕಿ, ಹಳೆಯ ಬಟ್ಟೆಗಳನ್ನು ಯಾರಿಗಾದರೂ ನೀಡಿ. ಹೀಗೆ ಮಾಡುವುದರಿಂದ ಅರ್ಧ ಶುಚಿಗೊಳಿಸುವಿಕೆ ಸುಲಭವಾಗುತ್ತದೆ, ಮನೆಯಲ್ಲಿ ಸಕಾರಾತ್ಮಕತೆಯೂ ನೆಲೆಸುತ್ತದೆ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಕ್ಲೀನಿಂಗ್‌ ಕೆಲಸವನ್ನು ವಿಭಾಗಿಸಿ:

ಹಬ್ಬದ ಒಂದೆರಡು ದಿನಕ್ಕಿಂತ ಮುಂಚೆ ಮನೆ ಸ್ವಚ್ಛಗೊಳಿಸಲು ಆರಂಭಿಸಿದರೆ ಖಂಡಿತವಾಗಿಯೂ ಆಯಾಸ ಹೆಚ್ಚಾಗುತ್ತದೆ. ಆದ್ದರಿಂದ ಹಬ್ಬಕ್ಕೆ 10-12 ದಿನಕ್ಕೂ ಮುಂಚೆಯೇ ಕ್ಲೀನಿಂಗ್‌ ಕೆಲಸ ಆರಂಭಿಸಿ, ಒಂದೇ ದಿನ ಎಲ್ಲಾ ಕೆಲಸವನ್ನು ಮಾಡುವ ಬದಲು  ಒಂದು ದಿನ ಲಿವಿಂಗ್‌ ರೂಮ್‌, ಇನ್ನೊಂದು ದಿನ ಅಡುಗೆ ಕೋಣೆ, ಮತ್ತೊಂದು ದಿನ ಸ್ಟೋರ್‌ ಕ್ಲೀನಿಂಗ್‌ ಈ ರೀತಿ ಕೆಲಸವನ್ನು ವಿಭಜಿಸಿ, ಹೀಗೆ ಮಾಡುವುದರಿಂದ ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಒತ್ತಡವಿಲ್ಲ ಸಂಪೂರ್ಣ ಮನೆ ಸ್ವಚ್ಛವಾಗಿರುತ್ತದೆ.

ಕ್ಲೀನಿಂಗ್‌ ಕೆಲಸವನ್ನು ಸುಲಭಗೊಳಿಸುವುದು ಹೇಗೆ?

ಇಡೀ ಮನೆಯನ್ನು ಸ್ವಚ್ಛಗೊಳಿಸುವುದು ಸವಾಲಿನ ಕೆಲಸವೇ ಸರಿ. ಈ ಸವಾಲಿನ ಕೆಲಸವನ್ನು ಮೋಜಿನಿಂದ ಸುಲಭವಾಗಿ ಮಾಡಿಮುಗಿಸಬಹುದು. ಒಬ್ಬರೇ ಮನೆ ಕ್ಲೀನ್‌ ಮಾಡುವ ಬದಲು ಕುಟುಂಬ ಸದಸ್ಯರೊಂದಿಗೆ ಸೇರಿ ಮಾರಾಡುತ್ತಾ ಕೆಲಸ ಮಾಡಿ. ನೀವು ಮಕ್ಕಳನ್ನು ಸಹ ಸಣ್ಣ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳಬಹುದು.  ಒಬ್ಬರೇ ಕೆಲಸ ಮಾಡುತ್ತಿದ್ದೀರಿ ಎಂದಾದರೇ ಸಂಗೀತವನ್ನು ಆಲಿಸುತ್ತಾ ಕ್ಲೀನ್‌ ಮಾಡಿ. ಇದರಿಂದ ಯಾವುದೇ ಬೇಸರ, ಆಯಾಸವಿಲ್ಲದೆ ಕ್ಲೀನಿಂಗ್‌ ಕೆಲಸವೆಲ್ಲಾ ಬೇಗ ಮುಗಿದುಹೋಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ, ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ಖಾದರ್ – Kannada News | Will Not Withdraw Gutka Ban Order Says Minister UT Khader

ಬೆಂಗಳೂರು, (ಆಗಸ್ಟ್ 15): ಕರ್ನಾಟಕದಲ್ಲಿ ನಿಕೋಟಿನ್​​​​ ಯುಕ್ತ ಗುಟ್ಕಾ, ಪಾನ್​​​ ಮಸಾಲ (Gutka And Pan Masala) ನಿಷೇಧಿಸುವ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆದಿವೆ. ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಕೆಲ ಶಾಸಕರು, ಸಿಎಂ ಡಿಕೆ ಶಿವಕುಮಾರ್​​​​​​​ (DK Shivakumar) ಅವರನ್ನ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಂ, ಆದೇಶ ವಾಪಸ್​ ತೆಗೆದುಕೊಳ್ಳಲು ಆರೋಗ್ಯ ಇಲಾಖೆ ಆಯುಕ್ತರಿಗೆ ಸೂಚಿಸಿದ್ದರು. ಆದ್ರೆ, ಇದೀಗ ಆರೋಗ್ಯ ಸಚಿವ ಯುಟಿ ಖಾದರ್ (UT Khader), ನಾನು ಆದೇಶ ಮಾಡಿದ್ದು ಮಾತ್ರ, ಅದನ್ನು ವಾಪಸು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯುಟಿ ಖಾದರ್, ಪಾನ್ ಮಸಾಲಾದಲ್ಲಿ ನಿಕೋಟಿನ್ ಇರಬಾರದು ಎಂಬ ಆದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದಾಗಿ ಅಡಿಕೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ಇಲಾಖೆ ಮತ್ತು ಸರ್ಕಾರ ಅಡಿಕೆ‌ ಬೆಳೆಗಾರರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಪಾನ್ ಮಸಾಲದಲ್ಲಿ ನಿಕೋಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರಿಗೆ ಏನೂ ಸಮಸ್ಯೆ ಆಗುವುದಿಲ್ಲ.‌ ನಾನು ಆ ಆದೇಶವನ್ನು ವಾಪಸ್​ ಪಡೆದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ

ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸ ಹಿಂದೆಯೂ ಮಾಡಿಲ್ಲ, ಈಗಲೂ ಮಾಡಲ್ಲ, ಮುಂದೆಯೂ ಮಾಡಲ್ಲ. ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಈ ತೀರ್ಮಾನದಿಂದ ಬೆಲೆ ಹೆಚ್ಚಾಗುತ್ತದೆ. ಗುಟ್ಕಾಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ನೇಪಾಳ, ಬಾಂಗ್ಲಾದೇಶದಿಂದ ಆಮದು ಮಾಡಿ ಬಳಕೆ ಮಾಡುತ್ತಾರೆ. ಗುಟ್ಕಾ, ನಿಕೊಟಿನ್ ನಿಷೇಧದಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.ಅಂದು ನಾನು ಗುಟ್ಕಾ ನಿಷೇಧ ಮಾಡುವಾಗ ಇದೇ ವಿಚಾರ ಮುನ್ನಲೆಗೆ ಬಂದಿತ್ತು. ಆಗ ನಾನು ಬಲವಾಗಿ ಅದನ್ನು ಸಮರ್ಥಿಸಿಕೊಂಡಿದ್ದೆ, ಸಿಎಂ‌ ಕೂಡಾ ಸಮರ್ಥಿಸಿದ್ದರು. ಅಡಿಕೆ ಬೆಲೆ ಕುಸಿತ ಆಗುವುದಿಲ್ಲ‌ ಎಂದಿದ್ದೆವು‌ . ಮೂರು ತಿಂಗಳ ಬಳಿಕ ಅಡಿಕೆ ಬೆಲೆ ಹೆಚ್ಚಾಗಿತ್ತು. ಹಾಗಾಗಿ ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ತೀರ್ಮಾನದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಅಡಿಕೆ ವ್ಯಾಪಾರಿಗಳಿಗೂ ಯಾವುದೇ ತೊಂದರೆ ಇಲ್ಲ . ಮೂರು ತಿಂಗಳು ಸಮಯಾವಕಾಶ ಕೊಟ್ಟು ನೋಡಿ. ಸಿಎಂ ಅವರು ಈ ಬಗ್ಗೆ ಚರ್ಚೆ ಮಾಡಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ತೀರ್ಮಾನ ಅಂದಿದ್ದಾರೆ. ಅಡಿಕೆ ಬೆಳೆಗಾರರಿಗೂ ತೊಂದರೆ ಆಗಬಾರದು ಎಂದು ಸಿಎಂ ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:06 pm, Sat, 15 August 26

Source link

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ: ಘಟನೆಯ ಸ್ಫೋಟಕ ಅಂಶ ಬಿಚ್ಚಿಟ್ಟ ಅರಣ್ಯ ಸಚಿವ ರಾಮಲಿಂಗಾರೆಡ್ಡಿ – Kannada News | Three Killed in Forest Staff Firing: Forest Minister Ramalinga Reddy Reveals Shocking Details of Incident

ಬೆಂಗಳೂರು, ಆಗಸ್ಟ್​​ 15: ಚಾಮರಾಜನಗರದಲ್ಲಿ (chamarajanagar) ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಬಲಿಯಾಗಿದ್ದಾರೆ. ಹನೂರು ತಾಲೂಕಿನ ಹೊಳೆದಟ್ಟಿ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ, ಮೂವರು ಸಾವನ್ನಪ್ಪಿದ್ದು (death), ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ‘ಸಿಎಂ ಡಿಕೆ ಶಿವಕುಮಾರ್​ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಸಮಗ್ರ ತನಿಖೆಯ ಬಳಿಕವೇ ಸಂಪೂರ್ಣ ಸತ್ಯಾಂಶ ಹೊರಬರಲಿದೆ’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.

ವರದಿ ಕೈಸೇರಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಕ್ರಮ: ರಾಮಲಿಂಗಾರೆಡ್ಡಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ‘ಬೆಳಗ್ಗೆ ಕೋಲಾರಕ್ಕೆ ತೆರಳುತ್ತಿದ್ದ ವೇಳೆ ನನಗೆ ಘಟನೆಯ ಮಾಹಿತಿ ಲಭಿಸಿತು. ನಾಲ್ವರು ನಾಡಬಂದೂಕು ಹಿಡಿದು ಇಡೀ ರಾತ್ರಿ ಪ್ರಾಣಿಗಳನ್ನು ಬೇಟೆಯಾಡಿ, ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಶೇಖರಪ್ಪ, ರೋಹಿತ್ ಹಾಗೂ ಶಿವರಾಜ್ ಅವರನ್ನು ತಡೆದಿದ್ದಾರೆ’ ಎಂದರು.

ಎರಡೂ ಕಡೆಯಿಂದ ಫೈರಿಂಗ್

ಇನ್ನು ಈ ವೇಳೆ ‘ಬೇಟೆಗಾರರ ಬಳಿ‌ ಎರಡು ಲೈಸೆನ್ಸ್ ಇಲ್ಲದ ನಾಡಬಂದೂಕು ಇತ್ತು. ಸಿಬ್ಬಂದಿಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ಹಂತದಲ್ಲಿ ಎರಡೂ ಕಡೆಯ ನಡುವೆ ಫೈರಿಂಗ್ ನಡೆದಿದ್ದು, ಅಂಟೋನಿಸ್ವಾಮಿ, ಜಾನ್ ಪೀಟರ್ ಹಾಗೂ ಸವಾರಿಯಪ್ಪನ್ ಎಂಬುವವರು ಮೃತಪಟ್ಟಿದ್ದಾರೆ. ಮಹಿಮ್ ದಾಸ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮದ ಜನರು ಹೇಳುವುದು ಬೇರೆ ಇದೆ. ನಾಲ್ಕು ಬ್ಯಾಗ್ ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಚಾಮರಾಜನಗರ ಅರಣ್ಯದಲ್ಲಿ ಎನ್‌ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ

‘ಇನ್ನು ಪ್ರಕರಣದ ಮಧ್ಯಂತರ ತನಿಖಾ ವರದಿ ಕೈಸೇರಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು. ಹಾಗೆಯೇ ತನಿಖಾ ವರದಿಯ ಆಧಾರದ ಮೇಲೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರವಾಗಿಯೂ ಚರ್ಚೆ ನಡೆಸಲಾಗುವುದು’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 38ಕ್ಕೆ ಏರಿಕೆ – Kannada News | 7.7 magnitude earthquake hits in Indonesia 38 dead in tsunami warning issued

ಬಾಲಿ, ಆಗಸ್ಟ್ 15: ಇಂಡೋನೇಷ್ಯಾದಲ್ಲಿ (Indonesia Earthquake) ಸಂಭವಿಸಿದ 7.7 ತೀವ್ರತೆಯ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇಂದು ಮುಂಜಾನೆ ಉಂಟಾದ ಈ ಪ್ರಬಲ ಭೂಕಂಪದ ಕುರಿತು ಸ್ಥಳೀಯ ರಕ್ಷಣಾ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಮುದ್ರದಾಳದಲ್ಲಿ ಸಂಭವಿಸಿದ ಈ ಭೂಕಂಪದ ನಂತರ ಆಗ್ನೇಯ ಏಷ್ಯಾದ ಇಂಡೋನೇಷ್ಯಾ ದೇಶದ ಹಲವು ಭಾಗಗಳಲ್ಲಿ ಸುನಾಮಿ ಅಲೆಗಳು ಕಂಡುಬಂದವು.

ಬಂದರು ನಗರಿ ಮಾಉಮೇರೆಯಲ್ಲಿ (Maumere) ರಕ್ಷಣಾ ಸಿಬ್ಬಂದಿ 38 ಶವಗಳನ್ನು ಹೊರಗೆ ತಂದಿದ್ದಾರೆ ಎಂದು ಎಎಫ್‌ಪಿ (AFP) ವರದಿ ಮಾಡಿದೆ. ಜೊತೆಗೆ 13 ಜನರು ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಇಬ್ಬರು ಸಿಲುಕಿಕೊಂಡಿದ್ದಾರೆ. ಮಾಉಮೇರೆಯು ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದಲ್ಲಿರುವ ಸಿಕ್ಕಾ ರೇಜೆನ್ಸಿಯ ಪ್ರಮುಖ ಪಟ್ಟಣವಾಗಿದೆ.

ಇದನ್ನೂ ಓದಿ: ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ; 3,000ಕ್ಕೂ ಹೆಚ್ಚು ಜನ ನಾಪತ್ತೆ

ಭೂಕಂಪದ ಕೇಂದ್ರಬಿಂದುವಿಗೆ ಅತ್ಯಂತ ಹತ್ತಿರದಲ್ಲಿದ್ದ ನಗೆಕಿಯೊ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ರಕ್ಷಣಾ ತಂಡಗಳಿಗೆ ಆ ಸ್ಥಳವನ್ನು ತಲುಪಲು ಸಾಧ್ಯವಾಗಿಲ್ಲ. ಭೂಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದ್ದು, ಮತ್ತೊಂದು ರಕ್ಷಣಾ ತಂಡವು ದೋಣಿಯ ಮೂಲಕ ಆ ಪ್ರದೇಶವನ್ನು ತಲುಪಲು ಯತ್ನಿಸುತ್ತಿದೆ.

ನಗೆಕಿಯೊ ಪ್ರದೇಶದಲ್ಲಿ ಸುಮಾರು 2,000 ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ ಹಲವಾರು ಮನೆಗಳು, ಗೋದಾಮುಗಳು ಮತ್ತು ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs SL: ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಕನ್ನಡಿಗ ದೇವದತ್ ಪಡಿಕ್ಕಲ್ – Kannada News | Devdutt Padikkal’s Maiden Test Century: India vs Sri Lanka Galla Test Hero

ಭಾರತ ಹಾಗೂ ಶ್ರೀಲಂಕಾ ನಡುವೆ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಸಾಯಿ ಸುದರ್ಶನ್ ಗಾಯದಿಂದ ಸರಣಿಯಿಂದ ಹೊರಗುಳಿದ ಕಾರಣ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಪಡೆದುಕೊಂಡಿರುವ ಪಡಿಕ್ಕಲ್ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್ ವಿಕೆಟ್ ಬಳಿಕ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್ ಮೊದಲ ದಿನದಾಟದ ಎರಡನೇ ಸೆಷನ್​ನಲ್ಲಿ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕವೂ ತಾಳ್ಮೆಯ ಆಟ ಮುಂದುವರೆಸಿದ ಪಡಿಕ್ಕಲ್ 134 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಪೂರೈಸಿದರು.

Source link

RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು – Kannada News | RSS Was Never Registered, Nor Will It Be: BL Santosh Hits back at Priyank Kharge

ಬೆಂಗಳೂರು, (ಆಗಸ್ಟ್ 15): ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಪೂರ್ವನುಮತಿ ಕಡ್ಡಾಯಗೊಳಿಸವು ಸಂಬಂಧ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದು, ಈ ಮೂಲಕ ಆರ್​​​​​ಎಸ್​​​​​ಎಸ್​​ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ. ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ನಾಯಕರ ನಡುವಿನ ಆರೋಪ ಪ್ರತ್ಯಾರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಪ್ರತಿಕ್ರಿಯಿಸಿದ್ದು, ಸಂಘ ನೋಂದಣಿ ಮಾಡುವ ಅವಶ್ಯಕತೆ ಇಲ್ಲ. ಆರ್​ಎಸ್​​ಎಸ್​ ರಿಜಿಸ್ಟ್ರೇಷನ್ ಆಗಿರಲಿಲ್ಲ, ಮುಂದೆಯೂ ಆಗಲ್ಲ ಎಂದು ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಬ್ಲಾಕ್ ಬಸ್ಟರ್ ಸಿನಿಮಾಗಳು, ಇಲ್ಲಿದೆ ಪಟ್ಟಿ

Source link

IND vs SL: ಪಡಿಕ್ಕಲ್- ರಾಹುಲ್ ಅರ್ಧಶತಕ; 2ನೇ ಸೆಷನ್​ ಮುಕ್ತಾಯ

ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ, ಮೊದಲ ದಿನದಾಟದ ಎರಡನೇ ಸೆಷನ್ ಅಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿದೆ. ತಂಡದ ಪರ ಇಬ್ಬರು ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದ್ದು, ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಮೊದಲ ಸೆಷನ್​​ನಲ್ಲಿ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು. ಅದಾದ ಬಳಿಕ ಜೊತೆಯಾಗಿರುವ ರಾಹುಲ್ ಹಾಗೂ ಪಡಿಕ್ಕಲ್ ತಂಡವನ್ನು 200 ರನ್​ಗಳ ಸನಿಹಕ್ಕೆ ತಂದಿದ್ದಾರೆ. ಚಹಾ ವಿರಾಮದ ವೇಳೆಗೆ ರಾಹುಲ್ 77 ರನ್ ಹಾಗೂ ಪಡಿಕ್ಕಲ್ 84 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

Source link

Exit mobile version