ಮಕ್ಕಳು ಸಿರಪ್ ತೆಗೆದುಕೊಂಡ ತಕ್ಷಣ ವಾಂತಿ ಮಾಡಿದ್ರೆ ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ – Kannada News | Kids Vomiting After Syrup: Warning Signs
ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲುವುದಿಲ್ಲ. ಜ್ವರ, ಕೆಮ್ಮು ಬಂದಾಗಲೆಲ್ಲಾ ಮಕ್ಕಳಷ್ಟೇ ನೋವನ್ನು ಪೋಷಕರು ಅನುಭವಿಸುತ್ತಾರೆ. ಮಕ್ಕಳಲ್ಲಿ ಏನಾದರೂ ಸ್ವಲ್ಪ ಬದಲಾವಣೆಯಾದರೂ ಕೂಡ ಚಿಂತೆಯಾಗುತ್ತದೆ. ಹಾಗಾಗಿ ತಕ್ಷಣ ಔಷಧ ನೀಡುವುದು ಒಳ್ಳೆಯದು. ಸಾಮಾನ್ಯವಾಗಿ ಮಕ್ಕಳಿಗೆ ಮಾತ್ರೆಗಳನ್ನು ನುಂಗಲು ಸಾಧ್ಯವಾಗದ ಕಾರಣ, ಹೆಚ್ಚಾಗಿ ಸಿರಪ್‌ಗಳನ್ನು (Syrup) ನೀಡಲಾಗುತ್ತದೆ. ಆದರೆ ಕೆಲವು ಮಕ್ಕಳು ಅವುಗಳನ್ನು ತೆಗೆದುಕೊಂಡ ತಕ್ಷಣ ವಾಂತಿ ಮಾಡುತ್ತಾರೆ. ಈ ಕಾರಣದಿಂದಾಗಿ, ಪೋಷಕರು ಹೆಚ್ಚು ಚಿಂತೆಗೀಡಾಗುತ್ತಾರೆ. ಮತ್ತೊಂದು ಡೋಸ್ ನೀಡಬೇಕೇ ಅಥವಾ ಬೇಡವೇ ಎಂಬ ಗೊಂದಲ…