Headlines

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಕರ್ನಾಟಕ ಹೈಕೋರ್ಟ್​ – Kannada News | Karnataka High Court: POCSO Accused Not Entitled to Statutory Bail if Probe Delays

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಸಿಗದು ‘ಡಿಫಾಲ್ಟ್ ಜಾಮೀನು’: ಹೈ ಕೋರ್ಟ್​ Image Credit source: istockphoto.com ಬೆಂಗಳೂರು, ಏಪ್ರಿಲ್ 17: ಬಿಎನ್‌ಎಸ್‌ಎಸ್‌ನ ಸೆಕ್ಷನ್ 193(2) ರ ಪ್ರಕಾರ, ಪೋಕ್ಸೊ (POCSO) ಕಾಯ್ದೆಯಡಿಯಲ್ಲಿ ಆರೋಪಿಯು 60 ದಿನಗಳಲ್ಲಿ ತನಿಖೆ ಪೂರ್ಣಗೊಳ್ಳದಿದ್ದರೆ ಶಾಸನಬದ್ಧ ಜಾಮೀನಿಗೆ ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾನೂನುಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳ್ಳದ ಕಾರಣ ಗೋವಿಂದ ಎಂಬವರು ಡೀಫಾಲ್ಟ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶ ಹೊರಡಿಸಿದ್ದಾರೆ. ಕೋರ್ಟ್​…

Read More

ಭಾರಿ ಗಾತ್ರದ ಹಾವನ್ನು ನುಂಗುತ್ತಿದ್ದ ಮತ್ತೊಂದು ಹಾವು! ಉರಗ ರಕ್ಷಕರಿಂದ ರಕ್ಷಣೆ, ಮೈಜುಮ್ಮೆನ್ನಿಸುವ ವಿಡಿಯೋ ಇಲ್ಲಿದೆ ನೋಡಿ

ಕೋಲಾರ, ಮಾರ್ಚ್​ 30: ಕೋಲಾರ ಜಿಲ್ಲೆಯ ದೊಡ್ಡಹಸಾಳ ಗ್ರಾಮದ ಬಳಿ ಹಾವೊಂದು ಮತ್ತೊಂದು ಭಾರಿ ಗಾತ್ರದ ಹಾವನ್ನೇ ನುಂಗಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ನಾಗರಾಜ್, ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ಮತ್ತೊಂದು ಹಾವಿನ ಬಾಯಿಗೆ ಆಹಾರವಾಗುತ್ತಿದ್ದ ಹಾವನ್ನು ಸುರಕ್ಷಿತವಾಗಿ ಬಿಡಿಸುವಲ್ಲಿ ನಾಗರಾಜ್ ಯಶಸ್ವಿಯಾಗಿದ್ದಾರೆ. ಉರಗ ರಕ್ಷಕನ ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ  …

Read More

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿ ಬಂತು ಬೃಹದಾಕಾರದ ಬಲೂನ್​! – Kannada News | Bengaluru Airport security breach: Giant Balloon on Runway, Air Disaster Averted by a Whisker

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿ ಬಂತು ಬೃಹದಾಕಾರದ ಬಲೂನ್​! ದೇವನಹಳ್ಳಿ, ಫೆಬ್ರವರಿ 09: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ಮತ್ತೊಂದು ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 5ರಂದು ವಿಮಾನ ನಿಲ್ದಾಣದ ರನ್‌ವೇ ಪ್ರದೇಶಕ್ಕೆ ಹಾರಿ ಬಂದ ಬೃಹತ್ ಬಲೂನ್ ಆತಂಕ ಸೃಷ್ಟಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಏರ್ಪೋರ್ಟ್​ ರನ್​ವೇಗೆ ಬೀದಿ ನಾಯಿಗಳು ಲಗ್ಗೆಯಿಟ್ಟಿದ್ದು ನಿಲ್ದಾಣದ ಭದ್ರತಾ ಲೋಪದ ಕುರಿತಾಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು….

Read More

ಪಂಜಾಬ್ ಕಿಂಗ್ಸ್ ಔಟ್: ಶ್ರೇಯಸ್ ಅಯ್ಯರ್ ಸಹೋದರಿ ಶ್ರೇಷ್ಠಾ ಖಡಕ್ ತಿರುಗೇಟು! – Kannada News | Shreyas Iyer’s sister Shresta Iyer hits back at online abuse

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಿಂದ ಪಂಜಾಬ್ ಕಿಂಗ್ಸ್ ತಂಡವು ಕೇವಲ ಒಂದು ಅಂಕದ ಅಂತರದಿಂದ ಹೊರಬಿದ್ದಿದೆ. ಅಂದರೆ ಪ್ಲೇಆಫ್​ಗೇರಿರುವ ರಾಜಸ್ಥಾನ್ ರಾಯಲ್ಸ್ 16 ಅಂಕಗಳಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡ 15 ಅಂಕಗಳೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಹೀಗೆ ಪಂಜಾಬ್ ಕಿಂಗ್ಸ್​ ಹೊರಬಿದ್ದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್​ ಆನ್​ಲೈನ್​ನಲ್ಲಿ ತೀವ್ರ ಕಿರುಕುಳ ಎದುರಿಸಿದ್ದಾರೆ. ತಮ್ಮ ವಿರುದ್ಧ ಹರಿದುಬರುತ್ತಿರುವ ಈ ಅತಿರೇಕಕ್ಕೆ ಖುದ್ದು ಶ್ರೇಷ್ಠಾ ಅಯ್ಯರ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ…

Read More

ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಬೆಂಗಳೂರು, (ಏಪ್ರಿಲ್ 03): ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರು (Lokayukta retired justice santosh hegde ) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು (ಏಪ್ರಿಲ್ 03) ಸ್ಕೌಟ್ಸ್ & ಗೈಡ್ಸ್ ಆಯುಕ್ತ PGR ಸಿಂಧ್ಯಾಗೆ ಅಭಿನಂದನಾ ಸಮಾರಂಭದಲ್ಲಿ ಸಂತೋಷ್ ಹೆಗ್ಡೆ ಭಾಗವಹಿಸಿದ್ದು, ಈ ವೇಳೆ ಭಾಷಣ ಮಾಡುವಾಗ ಅಸ್ವಸ್ಥಗೊಂಡಿದ್ದಾರೆ. ಬಳಿಕ ಭಾಷಣ ಮುಗಿಸಿ ವೇದಿಕೆ ಮೇಲಿನ ಕುರ್ಚಿ…

Read More

ಡಿಪೋ ಮ್ಯಾನೇಜರ್ ಕಿರುಕುಳ: ನೇಣಿಗೆ ಕೊರಳೊಡ್ಡಿದ KSRTC ಚಾಲಕ, ಬಸ್​​​​ನಲ್ಲೇ ಶವ ರವಾನೆ – Kannada News | Shivamogga: KSRTC Driver Suicide; Harassment by Manager Alleged

ಶಿವಮೊಗ್ಗ, ಜನವರಿ 08: ಕೆಎಸ್​ಆರ್​ಟಿಸಿ ಬಸ್ ಚಾಲಕ (KSRTC Driver) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ನಡೆದಿದೆ. ನಾಗಪ್ಪ (54) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ. ಡ್ಯೂಟಿ ನೀಡದೇ ಡಿಪೋ ಮ್ಯಾನೇಜರ್​​ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿದೆ. ಸದ್ಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡ್ಯೂಟಿ ನೀಡಿದೆ ಡಿಪೋ ಮ್ಯಾನೇಜರ್​​ ಕಿರುಕುಳ ಮೃತ ಕೆಎಸ್ಆರ್​​ಟಿಸಿ ಬಸ್​​ ಚಾಲಕ ನಾಗಪ್ಪ, ಶಿವಮೊಗ್ಗ ಜಿಲ್ಲೆಯ ಸಾಗರ…

Read More

ಕಲಬುರಗಿಯಲ್ಲಿ ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ: ಭಾನುವಾರ ಹಿನ್ನೆಲೆ ತಪ್ಪಿದ ಅನಾಹುತ – Kannada News | Another Government School Roof Collapse: Sunday Prevented a Major Disaster

ಶಾಲೆಯ ಮೇಲ್ಛಾವಣಿ ಕುಸಿತImage Credit source: tv9 kannada ಕಲಬುರಗಿ, ಜೂನ್​​ 14: ಎರಡು ದಿನದ ಹಿಂದಷ್ಟೇ ನಗರದ ಪಿಯು ಕಾಲೇಜು ಮೇಲ್ಛಾವಣಿ ಕುಸಿದು (roof collapse) ನಾಲ್ವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಆಳಂದ ತಾಲೂಕಿನ ಸಂಗೋಳಗಿ(ಸಿ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದೆ. ಆದರೆ ಭಾನುವಾರ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ. ಮುಖ್ಯಾಂಶಗಳು ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ ಒಂದು ಘಟನೆ…

Read More

ಕೊಪ್ಪಳ: 21 ಸಾವಿರ ರೂ. ಲಂಚ ಪಡೆಯುವಾಗ ಲೋಕಯುಕ್ತ ಕೈಗೆ ಸಿಕ್ಕಿಬಿದ್ದ ಎಸ್‌ಡಿಎ ರಂಜಿತ್ – Kannada News | Lokayukta Raid Koppal: RTO Clerk Ranjith Caught Taking Bribe for Showroom License

ಕೊಪ್ಪಳ, ಏ.29: ರಾಜ್ಯದ ಹಲವು ಕಡೆ ಲೋಕಯುಕ್ತ ದಾಳಿಗಳು ನಡೆಯುತ್ತಿದೆ. ಭಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಕೊಪ್ಪಳದ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ದ್ವಿತೀಯ ದರ್ಜೆ ಸಹಾಯಕ (SDA) ರಂಜಿತ್ ಎಂಬುವವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶೋರೂಮ್ ಟ್ರೇಡ್ ಲೈಸೆನ್ಸ್ ನೀಡಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಈ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ದೂರುದಾರರಾದ ನಯೀಮ್ ಎಂಬುವವರು ಕುಷ್ಟಗಿ, ಕಾರಟಗಿ ಹಾಗೂ ಹುಲಿಗಿಯಲ್ಲಿ ಹೊಸ ಶೋರೂಮ್‌ಗಳನ್ನು ತೆರೆಯಲು ಪರವಾನಿಗೆ (Trade License)…

Read More

Bengaluru Metro: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು ಹೆಚ್ಚಳ? – Kannada News | Karnataka Governmnet Green Signal to bengaluru Namma Metro ticket Price Hike, here Is How Much Jump

ಬೆಂಗಳೂರು, (ಫೆಬ್ರವರಿ 04): ಸಿಲಿಕಾನ್ ಸಿಟಿ ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಮೊನ್ನೆ ಅಷ್ಟೇ ಬೋರ್ಡ್​​ ಮೀಟಿಂಗ್​ನಲ್ಲಿ ಶೇಕಡಾ 5ರಷ್ಟು ಮೆಟ್ರೋ ದರ ಏರಿಕೆ ಒಪ್ಪಿಗೆ ಬಳಿಕ ಬಿಎಂಆರ್​ಸಿಎಲ್ ಸಲ್ಲಿಸಿದ್ದ ಪ್ರಸ್ತಾವನೆಗೆ ಇಂದು (ಫೆಬ್ರವರಿ 04) ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.  ಹೀಗಾಗಿ ಇದೇ ಫೆಬ್ರವರಿ 9ರಿಂದ ಶೇಕಡಾ 5ರಷ್ಟು ನಮ್ಮ ಮೆಟ್ರೋ ಟಿಕೆಟ್​ ದರ ಹೆಚ್ಚಳವಾಗಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಎಂಆರ್​​​ಸಿಎಲ್…

Read More

ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಲ್ಲು ತಂದೆ ಸಲೀಂ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಹಾಗೂ ಹಿರಿಯ ಕಥೆ ಬರಹಗಾರ ಸಲೀಮ್ ಖಾನ್ (Salim Khan) ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ತಿಂಗಳು ಮಿದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ಅವರು ಆಸ್ಪತ್ರೆ ಸೇರಿದ್ದರು. ಇಂದು ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ಇದರಿಂದ ಅವರ ಅಭಿಮಾನಿಗಳು ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ. ಸಲೀಮ್ ಖಾನ್ ಅವರಿಗೆ 90 ವರ್ಷ. ಚಿತ್ರರಂಗದಲ್ಲಿ ಸಲೀಮ್-ಜಾವೇದ್ ಜೋಡಿ ಎಂದೇ ಇದು ಫೇಮ್ ಆಗಿತ್ತು. ಶೋಲೆ, ದೀವಾರ್, ‘ಡಾನ್’…

Read More