ಶಾಲೆಯ ಮೇಲ್ಛಾವಣಿ ಕುಸಿತImage Credit source: tv9 kannada
ಕಲಬುರಗಿ, ಜೂನ್ 14: ಎರಡು ದಿನದ ಹಿಂದಷ್ಟೇ ನಗರದ ಪಿಯು ಕಾಲೇಜು ಮೇಲ್ಛಾವಣಿ ಕುಸಿದು (roof collapse) ನಾಲ್ವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಆಳಂದ ತಾಲೂಕಿನ ಸಂಗೋಳಗಿ(ಸಿ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದೆ. ಆದರೆ ಭಾನುವಾರ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ.
ಮುಖ್ಯಾಂಶಗಳು
- ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ
- ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಅನಾಹುತ
- ಭಾನುವಾರ ಶಾಲೆಗೆ ರಜೆ ಹಿನ್ನೆಲೆ ತಪ್ಪಿದ ಅನಾಹುತ
ಏಕಾಏಕಿ ಕುಸಿದ ಕಾಲೇಜು ಮೇಲ್ಛಾವಣಿಯ ಪ್ಲಾಸ್ಟರ್
ಇನ್ನು ಎರಡು ದಿನದ ಹಿಂದಷ್ಟೇ ನಗರದಲ್ಲಿ ಪಿಯು ಕಾಲೇಜು ಮೇಲ್ಛಾವಣಿ ಒಂದು ಕುಸಿದಿತ್ತು. ಲೆಕ್ಷರರ್ ಪಾಠ ಮಾಡುತ್ತಿಗಾಗಲೇ ಮೇಲ್ಛಾವಣಿಯ ಪ್ಲಾಸ್ಟರ್ ಏಕಾಏಕಿ ಕುಸಿದು ಬಿದ್ದಿತ್ತು. ಸಣ್ಣಪುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದು, ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ಜಸ್ಟ್ ಮಿಸ್ ಆಗಿತ್ತು.
ವಿದ್ಯಾರ್ಥಿನಿಯರ ಮೇಲೆ ಬಿದ್ದ ಮೇಲ್ಛಾವಣಿ ಪ್ಲಾಸ್ಟರ್
ಕಲಬುರಗಿ ನಗರದ ಸರ್ಕಾರಿ ಕಾಲೇಜಿನಲ್ಲಿ ಈ ಅನಾಹುತ ನಡೆದಿತ್ತು. ಬೆಳಗ್ಗೆ ಎಂದಿನಂತೆ ಪಿಯುಸಿ ಪ್ರಥಮ ವರ್ಷ ವಾಣಿಜ್ಯ ವಿಭಾಗದ ಸುಮಾರು 80 ವಿದ್ಯಾರ್ಥಿನಿಯರು ತರಗತಿಗೆ ಬಂದಿದ್ದರು. ಪ್ರಾದ್ಯಾಪಕರೂ ಕ್ಲಾಸ್ಗೆ ಎಂಟ್ರಿ ಕೊಟ್ಟು ಪಾಠ ಶುರುಮಾಡಿದ್ದರು. ಆದರೆ ಕೆಲವೇ ಕೆಲವು ಕ್ಷಣಗಳಲ್ಲಿ ಮೇಲ್ಛಾವಣಿ ಪ್ಲಾಸ್ಟರ್ ದೊಪ್ಪೆಂದು ವಿದ್ಯಾರ್ಥಿನಿಯರ ಮೇಲೆ ಬಿದ್ದಿತ್ತು. ವಿದ್ಯಾರ್ಥಿನಿಯರಾದ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಹಾಗೂ ದಿವ್ಯಾ ಗಾಯಗೊಂಡಿದ್ದರು. ಇನ್ನು ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಲಸ ನಿರ್ವಹಿಸಿದ ಏಜೆನ್ಸಿ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಠ ಕೇಳುವಾಗಲೇ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ
ಅಂದಾಗೆ ಈ ಕಟ್ಟಡ ಕಟ್ಟಿ ಕೇವಲ 8 ವರ್ಷವಷ್ಟೇ ಆಗಿದೆ. ಕೆಲ ದಿನಗಳ ಹಿಂದೆಯೂ ಇದೇ ರೀತಿ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿತ್ತು. ಕಾಲೇಜ್ನ ಬಹುತೇಕ ಕೊಠಡಿಗಳು ಹೀಗೆ ಬೀಳುವ ಹಂತ ತಲುಪಿದೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಪಾಠ ಕೇಳುವ ಸ್ಥಿತಿ ಎದುರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.