ನಿರ್ಮಲಾ ಸೀತಾರಾಮನ್​ಗಿದು 9ನೇ ಬಜೆಟ್; ಅವರ ಹಿಂದಿನ ಬಜೆಟ್​ಗಳ ವಿಶೇಷತೆಯೇನು? – Kannada News | From 2019 to 2025, Nirmala Sitharaman’s previous 8 budgets and highlights

2019-20ರ ಬಜೆಟ್: ಮೋದಿ 3.0 ಸರ್ಕಾರದಲ್ಲಿ ಹಣಕಾಸು ಮಂತ್ರಿ ಹೊಣೆ ಪಡೆದ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಬಜೆಟ್ ಮಂಡನೆ. ಕುಂಠಿತ ಆರ್ಥಿಕ ಪ್ರಗತಿ, ಅಧಿಕ ನಿರುದ್ಯೋಗ, ಅನುಭೋಗದಲ್ಲಿ ಇಳಿಕೆ ಇತ್ಯಾದಿ ಆರ್ಥಿಕ ಸವಾಲುಗಳ ಸಂದರ್ಭದಲ್ಲಿ ಬಜೆಟ್ ರೂಪಿಸುವ ಸವಾಲು ಅವರದ್ದಾಗಿತ್ತು. ಬಂಡವಾಳ ಹಿಂತೆಗೆತ, ಅಧಿಕ ಟ್ಯಾಕ್ಸ್ ಸರ್ಚಾರ್ಜ್ ಇತ್ಯಾದಿ ಕ್ರಮಗಳಿಂದ ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಂಡರು. ಮುಂದಿನ ಐದು ವರ್ಷಕ್ಕೆ ಹಲವು ಲಕ್ಷ ಕೋಟಿ ರೂಗಳ ಹೂಡಿಕೆ ಯೋಜನೆ ಪ್ರಕಟಿಸಿದರು. ಬಜೆಟ್ ಪತ್ರವನ್ನು ಸೂಟ್​ಕೇಸ್​ನಲ್ಲಿ ಕೊಂಡೊಯ್ಯುವ ಸಂಪ್ರದಾಯ ಮುರಿದು, ಸಾಂಪ್ರದಾಯಿಕ ಚೀಲದಲ್ಲಿ ಮುಂಗಡಪತ್ರ ಒಯ್ದರು.

Source link

ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ – Kannada News | Rashika Shetty Express Shock Over Gilli Nata Craze

ರಾಶಿಕಾ ಶೆಟ್ಟಿ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅವರು ಈಗ ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಗಿಲ್ಲಿ ಫ್ಯಾನ್ಸ್ ಇಷ್ಟು ಹಿರಿದಾಗಿದೆ ಎಂಬ ವಿಷಯ ಗೊತ್ತಿರಲಿಲ್ಲ ಎಂದಿದ್ದಾರೆ ಅವರು. ಪ್ರತಿ ವ್ಯಕ್ತಿ ಕೂಡ ಇದನ್ನೇ ಹೇಳುತ್ತಿದ್ದಾರೆ. ಅಭಿಮಾನಿ ಬಳಗ ನೋಡಿ ಸ್ವತಃ ಗಿಲ್ಲಿಗೆ ಅಚ್ಚರಿ ಆಗಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗರಿಗೆ ಶುಭ ಸುದ್ದಿ: ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಿದ BMRCL – Kannada News | BMRCL Invites Civil Tenders for Bengaluru Orange Line Metro

ಬೆಂಗಳೂರು, ಜನವರಿ 13: ಜೆ.ಪಿ. ನಗರ, ಹೊಸಕೆರೆಹಳ್ಳಿ, ನಾಗರಭಾವಿ ಜನರಿಗೆ ಬಿಎಂಆರ್​​ಸಿಎಲ್ ಗುಡ್​​ನ್ಯೂಸ್​​ ಕೊಟ್ಟಿದೆ.​​ ಬೆಂಗಳೂರಿನ ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಲಾಗಿದ್ದು, ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿವರೆಗಿನ‌ ಕಾಮಗಾರಿಯನ್ನು ಇದು ಒಳಗೊಂಡಿದೆ. ಫೆಬ್ರವರಿ 20ರಿಂದ 25ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, ಮೂರು ಪ್ಯಾಕೇಜ್ನಲ್ಲಿ BMRCL ಸಿವಿಲ್​​ ಟೆಂಡರ್​​ ಕರೆದಿದೆ. ಮೂರು ಪ್ಯಾಜೇಜ್​​ಗಳಿಗೂ ಪ್ರತ್ಯೇಕ ಬಜೆಟ್​​ ನೀಡಲಾಗಿದೆ.

ಪ್ಯಾಕೇಜ್ 1 ಜೆ.ಪಿ ನಗರ 4ನೇ ಹಂತದಿಂದ ಕಾಮಾಕ್ಯವರೆಗೆ ಡಬಲ್ ಡೆಕ್ಕರ್ ಹಾಗೂ ಡಾಲರ್ಸ್ ಕಾಲೋನಿ ಫ್ಲೈಓವರ್‌ ತೆರವು‌ ಒಳಗೊಂಡು ಒಟ್ಟು ಜೆ.ಪಿ. ನಗರ 5ನೇ ಹಂತ, ಜೆ.ಪಿ. ನಗರ, ಕಾದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್ ನಿಲ್ದಾಣಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್​​ನ ಮೊತ್ತ 1,375 ಕೋಟಿ ರೂಪಾಯಿಗಳು. ಹೊಸಕೆರಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ ಡಬಲ್ ಡೆಕ್ಕರ್​​ನ ಪ್ಯಾಕೇಜ್ 2 ಒಳಗೊಂಡಿದೆ. 1,396 ಕೋಟಿ ಮೊತ್ತದ ಈ ಪ್ಯಾಕೇಜ್​​ ಹೊಸಕೆರಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ಸರ್ಕಲ್ ನಿಲ್ದಾಣಗಳು ಸೇರಿವೆ.

ಇದನ್ನೂ ಓದಿ: ಆರೆಂಜ್ ಲೈನ್​ಗಾಗಿ 6500 ಮರ ಕಡಿಯಲು ಮುಂದಾದ ನಮ್ಮ ಮೆಟ್ರೋ; ಪರಿಸರ ಹೋರಾಟಗಾರರ ಜತೆ ಅಧಿಕಾರಿಗಳ ಸಭೆ

ಪ್ಯಾಕೇಜ್ 3ರ ಕಾರಿಡಾರ್ 1 ವಿನಾಯಕ ಲೇಔಟ್‌ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ವರೆಗೆ ಒಟ್ಟು 3 ನಿಲ್ದಾಣಗಳನ್ನು ಒಳಗೊಂಡಿದೆ. ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, BDA ಕಾಂಪ್ಲೆಕ್ಸ್ ನಾಗರಭಾವಿ ನಿಲ್ದಾಣ ಇದರಲ್ಲಿ ಸೇರಿವೆ. ಹಾಗೆಯೇ ಪ್ಯಾಕೇಜ್ 3ರ ಕಾರಿಡಾರ್ 2 ಸುಂಕದಕಟ್ಟೆ ನಿಲ್ದಾಣ , ಸುಂಕದಕಟ್ಟೆ ಡಿಪೋ ಪ್ರವೇಶ ಮಾರ್ಗ ಮತ್ತು ನಿರ್ಗಮನ ಮಾರ್ಗ ಒಳಗೊಂಡಿದ್ದು, ಇದರ ಒಟ್ಟು ಮೊತ್ತ 1415 ಕೋಟಿ ರೂಪಾಯಿಗಳಾಗಿವೆ.

ನಮ್ಮ ಮೆಟ್ರೋದ ಮೂರನೇ ಹಂತದ ಪ್ರಾಜೆಕ್ಟ್​​ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಮಾತ್ರ ಇನ್ನೂ ಆರಂಭವಾಗಿರಲಿಲ್ಲ. 2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇನ್ನೂ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ ಎಂಬ ಬೇಸರ ಸಿಲಿಕಾನ್​​ ಸಿಟಿ ಮಂದಿಯನ್ನು ಕಾಡಿತ್ತು. ಈ ನಡುವೆ BMRCL ಶುಭ ಸುದ್ದಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಏನಾದರೂ ತಗೊಳ್ಳಿ ಪ್ಲೀಸ್, ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ – Kannada News | Watch: Shop Assistant Breaks Down After Customer Walks Away

ಜೈಪುರ, ಜನವರಿ 13: ಯಾವುದೇ ಅಂಗಡಿಗೆ ಹೋದಾಗ ಅಲ್ಲಿರುವ ವಸ್ತುಗಳು ಇಷ್ಟವಾಗಬೇಕಂತೇನಿಲ್ಲ, ಖರೀದಿ ಮಾಡಬೇಕಂತಲೂ ಇಲ್ಲ. ಆದರೆ ಗಂಟೆಗಟ್ಟಲೆ ಅದು ತೋರಿಸಿ, ಇದು ತೋರಿಸಿ ಎಂದು ಸಿಬ್ಬಂದಿಯ ಸಮಯ ಹಾಳು ಮಾಡಿ, ಏನೂ ಕೊಳ್ಳದೆ ಹೊರಟಾಗ ಅವರಿಗೆ ಬೇಸರವಾಗದೇ ಇದ್ದೀತೆ. ಅಂಥದ್ದೇ ಘಟನೆ ಜೈಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ಜೈಪುರದ ಅಂಗಡಿಗೆ ಹೋಗಿ ಗಂಟೆಗಟ್ಟಲೆ ಸಮಯ ಹಾಳು ಮಾಡಿ ಕೊನೆಗೆ ಏನೂ ಕೊಳ್ಳದೆ ಹೊರಟಾಗ ಮಹಿಳಾ ವ್ಯಾಪಾರಿ ಗ್ರಾಹಕರ ಕಾಲಿಗೆ ಬಿದ್ದು ಏನಾದರೂ ಖರೀದಿ ಮಾಡುವಂತೆ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ ನಟ? ರನ್ನರ್ ಅಪ್ ಸ್ಥಾನ ಫಿಕ್ಸ್? – Kannada News | Gilli Bigg Boss Kannada Journey: Will History Repeat? Winner or Runner up Like Arun Sagar?

ಅದು 2013ರ ಸಮಯ. ಆಗತಾನೇ ಬಿಗ್ ಬಾಸ್ (Bigg Boss) ಕನ್ನಡಕ್ಕೆ ಬಂತು. ಕಿಚ್ಚ ಸುದೀಪ್ ಅವರು ಇದರ ಹೋಸ್ಟ್ ಆದರು. ಈಟಿವಿ ಕನ್ನಡದಲ್ಲಿ ಶೋ ಪ್ರಸಾರ ಕಂಡಿತು. 15 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದರು. ಈ ಪೈಕಿ ವಿಜಯ್ ರಾಘವೇಂದ್ರ ಗೆಲುವು ಕಂಡರೆ, ಅರುಣ್ ಸಾಗರ್ ರನ್ನರ್ ಅಪ್ ಆದರು. ಅರುಣ್ ಸಾಗರ್ ನಿಜವಾದ ವಿನ್ನರ್ ಆಗಬೇಕಿತ್ತು ಎಂಬುದು ವೀಕ್ಷಕರ ಅಭಿಪ್ರಾಯ ಆಗಿತ್ತು. ಈಗ ಈ ಸಾಲಿಗೆ ಗಿಲ್ಲಿ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಗಿಲ್ಲಿ ನಟ ಅವರು ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳಲ್ಲಿ ಅವರು ರಂಜಿಸಿದ್ದಾರೆ. ಈಗ ಬಿಗ್ ಬಾಸ್​​ಗೆ ಬಂದು ಅವರು ಮನರಂಜನೆ ನೀಡುತ್ತಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಆದರೆ, ಕೊನೆಯ ವಾರಗಳಲ್ಲಿ ಟ್ರೆಂಡ್ ಬದಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಕಳೆದ ವಾರ ಸೀಸನ್ ಚಪ್ಪಾಳೆಯನ್ನು ಸುದೀಪ್ ಅವರು ಧ್ರುವಂತ್​​ಗೆ ನೀಡಿದರು. ಇಡೀ ಸೀಸನ್ ಉದ್ದಕ್ಕೂ ಮನರಂಜನೆ ನೀಡಿದ್ದು ಗಿಲ್ಲಿ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಗಿಲ್ಲಿಗೆ ಚಪ್ಪಾಳೆ ಸಿಗುತ್ತಿದ್ದಂತೆ, ಗಿಲ್ಲಿ ಬಳಿ ಮಾತನಾಡಿದ್ದ ರಘು, ‘ಧ್ರುವಂತ್ ಈ ಬಾರಿ ವಿನ್ ಆದರೂ ಆಗಬಹುದು’ ಎಂದಿದ್ದರು. ಇನ್ನು, ಅಶ್ವಿನಿ ಕೂಡ ಒಳ್ಳೆಯ ಸ್ಪರ್ಧೆಯನ್ನೇ ನೀಡುತ್ತಿದ್ದು, ಅವರಿಗೂ ವಿಜಯಲಕ್ಷ್ಮೀ ಒಲಿಯಬಹುದು ಎಂಬುದು ಕೆಲವರ ಅಭಿಪ್ರಾಯ.

ಇದನ್ನೂ ಓದಿ: ಬಿಗ್ ಬಾಸ್ ಎದುರು ವಿಚಿತ್ರ ಆಸೆ ಹೇಳಿಕೊಂಡ ಗಿಲ್ಲಿ ನಟ; ಈಡೇರುತ್ತಾ ಬಯಕೆ?

ಇನ್ನು ಗಿಲ್ಲಿ ಅವರದ್ದು ಒಂದು ಕರಾಳ ಇತಿಹಾಸ ಇದೆ. ಅವರು ಸಾಕಷ್ಟು ಶೋಗಳನ್ನು ಮಾಡಿದ್ದರು ಕೂಡ ಯಾವುದನ್ನೂ ವಿನ್ ಆಗಿಲ್ಲ. ಎಲ್ಲ ಕಡೆಗಳಲ್ಲಿ ರನ್ನರ್ ಅಪ್ ಆಗಿದ್ದೇ ಹೆಚ್ಚು. ಈ ಶೋನಲ್ಲೂ ಇತಿಹಾಸ ಮರುಕಳಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಹಾಗಾದಲ್ಲಿ ಅವರು ಮತ್ತೋರ್ವ ಅರುಣ್ ಸಾಗರ್ ಆಗುತ್ತಾರೆ ಎಂಬುದು ಫ್ಯಾನ್ಸ್ ಅಭಿಪ್ರಾಯ. ಅರ್ಹರಿಗೆ ಗೆಲುವು ಸಿಗಬೇಕು ಎಂಬುದು ವೀಕ್ಷಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:45 pm, Tue, 13 January 26

Source link

ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ! ಮುತ್ತು, ಹವಳ, ನೀಲಮಣಿ ಸೇರಿ ಏನೇನು ಸಿಕ್ತು? ಇಲ್ಲಿದೆ ನೋಡಿ – Kannada News | Ancient Treasure Unearthed Again in Lakkundi Village, Gadag: Pearls, Coral, Blue Sapphire and Rare Artifacts Found

ಗದಗ, ಜನವರಿ 13: ಅರ್ಧ ಕೆಜಿ ಚಿನ್ನಾಭರಣಗಳ ನಿಧಿ ಸಿಕ್ಕಿ ರಾಜ್ಯವೇ ಕುತೂಹಲದಿಂದ ನೋಡುವಂತಾಗಿರುವ ಗದಗದ ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು ಪತ್ತೆಯಾಗಿವೆ. ಗ್ರಾಮದ ಬಸಪ್ಪ ಬಡಿಗೇರ ಎಂಬವರಿಗೆ ಮುತ್ತು, ಹವಳ, ನೀಲಮಣಿ, ಸ್ಫಟಿಕ, ಬಿಳಿ ಹವಳ, ಕರಿಪುಕ್ಕಾ ಸೇರಿದಂತೆ ಹಲವು ವಸ್ತುಗಳುಳ್ಳ ನಿಧಿ ದೊರೆತಿದೆ. ಬಸಪ್ಪ ಬಡಿಗೇರ ಗ್ರಾಮದಲ್ಲಿ ಹಲವು ವರ್ಷಗಳಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಮಳೆ ಬಂದ ನಂತರ ಗ್ರಾಮದಲ್ಲಿ ಶೋಧ ಮಾಡುತ್ತಾರೆ. ಈ ಹಿಂದೆ ಸಾಕಷ್ಟು ಪುರಾತನ ಕಾಲದ ವಸ್ತುಗಳು ಅವರಿಗೆ ಸಿಕ್ಕಿದ್ದವು ಎನ್ನಲಾಗಿದೆ. ಅವುಗಳನ್ನೆಲ್ಲ ಅವರು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಇದೀಗ, ಲಕ್ಕುಂಡಿಯಲ್ಲಿ ಅಪಾರ ಚಿನ್ನ ಇದೆ ಎನ್ನುವ ನಂಬಿಕೆ ಬೆನ್ನಲ್ಲೇ ಪುರಾತನ ವಸ್ತುಗಳು ಪತ್ತೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯಪ್ರಜ್ಞೆಯಿಂದ ಮಗಳ ಕಾಪಾಡಿದ ತಾಯಿ – Kannada News | Seconds That Saved a Child, A Mother’s Quick Move Goes Viral

ಅಪಹರಣಕಾರರ ಕೈಗೆ ಸಿಗುವ ಮುನ್ನವೇ ತಾಯಿಯೊಬ್ಬಳು ತನ್ನ ಮಗಳನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸುಮಾರು 5-6 ವರ್ಷ ವಯಸ್ಸಿನ ಬಾಲಕಿ ಮನೆಯ ಹೊರಗೆ ಆಟವಾಡುತ್ತಿರುವಾಗ ಬಿಳಿ ವ್ಯಾನ್ ನಿಧಾನವಾಗಿ ಡ್ರೈವ್‌ವೇ ಮೂಲಕ ಹಾದುಹೋಗುವುದನ್ನು ತಾಯಿ ಗಮನಿಸಿದ್ದಾಳೆ, ಬಳಿಕ ಮಗಳನ್ನು ಕರೆದಾಗ ಬಾಲಕಿ ತಾಯಿಯ ಬಳಿ ಓಡಿ ಬಂದಿದ್ದಾಳೆ. ಮುಂದಕ್ಕೆ ಹೋಗಿದ್ದ ವ್ಯಾನ್ ಮತ್ತೆ ನಿಧಾನವಾಗಿ ಹಿಂದಕ್ಕೆ ಬಂದಿದೆ. ಆದರೆ ಅಷ್ಟರಲ್ಲಿ ಮಗಳು ತಾಯಿಯ ತೋಳಿನಲ್ಲಿದ್ದಳು. ಸಮಯಪ್ರಜ್ಞೆಯಿಂದ ಮಗಳು ಕಿಡ್ನ್ಯಾಪ್ ಆಗುವುದನ್ನು ಆಕೆ ತಪ್ಪಿಸಿದ್ದಳು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Makar Sankranti 2026: ಜಾತಕದಲ್ಲಿ ಸೂರ್ಯ ದೋಷ ಇದ್ದರೆ ಸಂಕ್ರಾಂತಿಯಂದು ಈ ಪರಿಹಾರ ತಪ್ಪದೇ ಮಾಡಿ – Kannada News | Makar Sankranti 2026: Surya dosha remedies and auspicious rituals for 14 January

ಮಕರ ಸಂಕ್ರಾಂತಿ ಸನಾತನ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಹತ್ವದ ಹಬ್ಬವಾಗಿ ಪರಿಗಣಿಸಲಾಗುತ್ತದೆ. ಇದು ಕೇವಲ ಋತುಮಾನ ಬದಲಾವಣೆಯ ಸುಗ್ಗಿ ಹಬ್ಬವಷ್ಟೇ ಅಲ್ಲ, ಸೂರ್ಯ ದೇವರನ್ನು ಆರಾಧಿಸಿ ಜೀವನದ ಅಡೆತಡೆಗಳನ್ನು ನಿವಾರಿಸುವ ವಿಶೇಷ ದಿನವೂ ಹೌದು. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪವಿತ್ರ ಸಂದರ್ಭದಲ್ಲಿ, ಸೂರ್ಯನ ಶಕ್ತಿ ಭೂಮಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಜಾತಕದಲ್ಲಿ ಸೂರ್ಯ ದೋಷವಿದ್ದರೆ, ವ್ಯಕ್ತಿಯ ಜೀವನದಲ್ಲಿ ಆರೋಗ್ಯ ಸಮಸ್ಯೆಗಳು, ಸಂಬಂಧಗಳಲ್ಲಿ ಕಲಹ ಮತ್ತು ವೃತ್ತಿಜೀವನದಲ್ಲಿ ಅಡೆತಡೆಗಳು ಎದುರಾಗುತ್ತವೆ ಎಂದು ಧಾರ್ಮಿಕವಾಗಿ ನಂಬಲಾಗುತ್ತದೆ.

ಇದೇ ಕಾರಣಕ್ಕಾಗಿ ಮಕರ ಸಂಕ್ರಾಂತಿಯಂದು ಸೂರ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಸೂರ್ಯನನ್ನು ಆರಾಧಿಸುವುದರಿಂದ ಪಾಪಗಳು ಕ್ಷಯವಾಗುತ್ತವೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಸಂಕ್ರಾಂತಿಯಂದು ಮಾಡುವ ಪೂಜೆಗಳು ಮತ್ತು ಧಾರ್ಮಿಕ ಆಚರಣೆಗಳು ಮನಸ್ಸಿಗೆ ಶಾಂತಿ, ದೇಹಕ್ಕೆ ಆರೋಗ್ಯ ಮತ್ತು ಬದುಕಿಗೆ ಸ್ಥಿರತೆ ತರುತ್ತವೆ ಎಂದು ಹೇಳಲಾಗುತ್ತದೆ.

ಸೂರ್ಯ ದೋಷ ನಿವಾರಣೆಗೆ ಮಕರ ಸಂಕ್ರಾಂತಿ ದಿನವನ್ನು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ. ಈ ದಿನ ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಂಡು ಸ್ನಾನ ಮಾಡಿ, ಶುದ್ಧ ವಸ್ತ್ರಗಳನ್ನು ಧರಿಸಿ ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಶ್ರೇಷ್ಠವೆಂದು ವಿದ್ವಾಂಸರು ಸಲಹೆ ನೀಡುತ್ತಾರೆ. ಸಾಧ್ಯವಾದರೆ ಗಂಗಾಜಲ ಅಥವಾ ಪವಿತ್ರ ಕೆರೆಯ ನೀರಿನಿಂದ ಸ್ನಾನ ಮಾಡುವುದು ವಿಶೇಷ ಫಲ ನೀಡುತ್ತದೆ. ನಂತರ ತಾಮ್ರದ ಪಾತ್ರೆಯಲ್ಲಿ ನೀರು, ಕೆಂಪು ಹೂವುಗಳು, ಧಾನ್ಯಗಳು ಹಾಗೂ ಬೆಲ್ಲವನ್ನು ಇಟ್ಟು ಸೂರ್ಯನಿಗೆ ಅರ್ಪಿಸಿ ಪ್ರಾರ್ಥನೆ ಸಲ್ಲಿಸಬೇಕು. ಈ ಸಮಯದಲ್ಲಿ ಸೂರ್ಯ ಮಂತ್ರ ಅಥವಾ ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಜಪಿಸುವುದು ಅತ್ಯಂತ ಫಲಪ್ರದವೆಂದು ನಂಬಲಾಗಿದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಮಕರ ಸಂಕ್ರಾಂತಿಯಂದು ದಾನ ಮತ್ತು ಸೇವೆಗೆ ಕೂಡ ಅಪಾರ ಮಹತ್ವವಿದೆ. ಎಳ್ಳು, ಬೆಲ್ಲ, ಧಾನ್ಯಗಳು, ಬಟ್ಟೆ ಅಥವಾ ಆಹಾರವನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಸೂರ್ಯ ದೋಷದ ಪರಿಣಾಮ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ದಾನವು ಪುಣ್ಯವನ್ನು ಹೆಚ್ಚಿಸುವುದರ ಜೊತೆಗೆ ಜೀವನದಲ್ಲಿನ ಸಂಕಷ್ಟಗಳು ಮತ್ತು ಅಡೆತಡೆಗಳನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ. ದಿನನಿತ್ಯವೂ ಸೂರ್ಯನಿಗೆ ಜಲಾರ್ಪಣೆ ಮಾಡಿ ಮಂತ್ರ ಜಪ ಮಾಡುವ ಅಭ್ಯಾಸವು ಸೂರ್ಯನ ಕೃಪೆಯನ್ನು ಪಡೆಯಲು ಸಹಾಯಕವಾಗುತ್ತದೆ.

ಈ ರೀತಿಯಾಗಿ ಮಕರ ಸಂಕ್ರಾಂತಿಯಂದು ಸೂರ್ಯ ದೇವರನ್ನು ಶ್ರದ್ಧೆಯಿಂದ ಪೂಜಿಸುವುದರಿಂದ ಸೂರ್ಯ ದೋಷ ನಿವಾರಣೆಯಾಗುತ್ತದೆ ಮತ್ತು ವೃತ್ತಿ, ಗೌರವ, ಆರೋಗ್ಯ ಹಾಗೂ ಕುಟುಂಬ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎಂದು ವಿದ್ವಾಂಸರು ಹೇಳುತ್ತಾರೆ. ಮನೆಯ ಪೂಜಾ ಮಂಟಪದಲ್ಲಿ ತಾಮ್ರದ ಸೂರ್ಯ ಮೂರ್ತಿಯನ್ನು ಇಟ್ಟು ನಿಯಮಿತವಾಗಿ ಪೂಜಿಸುವುದರಿಂದ ಜೀವನದಲ್ಲಿ ಸ್ಥಿರತೆ, ಸಮೃದ್ಧಿ ಮತ್ತು ಶಾಂತಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಉಪವಿಭಾದಲ್ಲಿ 34 ಮಂದಿ ಬಾಂಗ್ಲಾ ಅಕ್ರಮ ವಲಸಿಗರು ಪತ್ತೆ – Kannada News | 34 Illegal Bangladeshi Migrants Detained in Bengaluru’s Electronic City Sub Division, Police Crackdown Intensifies

ಬೆಂಗಳೂರು, ಜನವರಿ 13: ಬೆಂಗಳೂರಿನ (Bangalore) ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ಶಂಕಿತ ಅಕ್ರಮ ಬಾಂಗ್ಲಾ ವಲಸಿಗರ (Bangadesh Immigrants) ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಿ ಒಟ್ಟು 34 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಆಧಾರದ ಮೇಲೆ ಕಳೆದ ಒಂದು ವಾರದಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಳಿ ನಡೆಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7ಕ್ಕೂ ಹೆಚ್ಚು, ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16, ಹಾಗೂ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಂದಿ ಶಂಕಿತ ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದವರು ಅಕ್ರಮವಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸಿರುವ ಆರೋಪ ಎದುರಿಸುತ್ತಿದ್ದು ನಕಲಿ ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಸೃಷ್ಟಿಸಿಕೊಂಡು ಇಲ್ಲಿಗೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನವರು ಗುಜರಿ ಗೋದಾಮುಗಳ ಶೆಡ್‌ಗಳಲ್ಲಿ ವಾಸವಿದ್ದು, ಕೆಲವರು ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೂ ಕೆಲವರು ರಾತ್ರಿ ಸಮಯದಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ವಶಕ್ಕೆ ಪಡೆದ ಎಲ್ಲ ಶಂಕಿತರನ್ನು ದಾಖಲೆಗಳ ಪರಿಶೀಲನೆಗಾಗಿ ಎಫ್‌ಆರ್‌ಆರ್‌ಒ (Foreigners Regional Registration Office) ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ತಿಳಿಸಿದ್ದಾರೆ.

ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳು ವಶಕ್ಕೆ

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮದಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯಲಾದವರನ್ನು ಡೊವ್ಯಾರೋ(34) ಹಾಗೂ ಮಾನ್ಯುಯಲ್ ನಾಜುಬಿ (32) ಎಂದು ಗುರುತಿಸಲಾಗಿದೆ. ಬಾಂಗ್ಲಾ ವಲಸಿಗರು ವಾಸ ಇರುವ ಬಗ್ಗೆ ದೂರು ಬಂದ ಹಿನ್ನೆಲೆ ಜಿಗಣಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ನೈಜೀರಿಯಾ ಪ್ರಜೆಗಳು ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಜೈ ಬಾಂಗ್ಲಾ: ದೇಶ ವಿರೋಧಿ ಘೋಷಣೆ ಕೂಗಿದ ಆರೋಪ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮುಸ್ಲಿಂ ಮಹಿಳೆಯ ಬಂಧನ

ಕೋಗಿಲು ಲೇಔಟ್​​ನಲ್ಲಿ ಬಾಂಗ್ಲಾ ಅಕ್ರಮ ವಲಸಿಗರಿಲ್ಲ: ಪರಮೇಶ್ವರ್

ಕೋಗಿಲು ಲೇಔಟ್​ನಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಇರಲಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ವಾಸವಿದ್ದವರ ಪಟ್ಟಿ ಪಡೆದು ನೋಡಿದ್ದೇವೆ, ಅದರಲ್ಲಿ ಬಾಂಗ್ಲಾದವರಿಲ್ಲ. ಬಾಂಗ್ಲಾದೇಶದವರು ಇದ್ದಾರೆ ಎಂಬುದು ಸತ್ಯಕ್ಕೆ ದೂರವಾಗಿದೆ ಎಂದು ಪರಮೇಶ್ವರ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಗೂ ಗೆದ್ದ ಚಿರಂಜೀವಿ: ‘ಶಂಕರ ವರ ಪ್ರಸಾದ್’ ಗಳಿಸಿದ್ದೆಷ್ಟು? – Kannada News | Megastar Chiranjeevi starrer Mana Shankara Vara Prasad Garu movie first day collection

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ತೆಲುಗು ಚಿತ್ರರಂಗದ ಲಿಜೆಂಡ್​ಗಳಲ್ಲಿ ಒಬ್ಬರು. ರಾಜಕೀಯಕ್ಕೆ ಹೋಗಿ ಚಿತ್ರರಂಗದಿಂದ ದೂರಾಗಿದ್ದ ಚಿರಂಜೀವಿ ಬಳಿಕ ರಾಜಕೀಯ ತೊರೆದು ಸಂಪೂರ್ಣವಾಗಿ ಮತ್ತೆ ಚಿತ್ರರಂಗಕ್ಕೆ ತೊಡಗಿಸಿಕೊಂಡರು. ಆದರೆ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. 2019ರ ಬಳಿಕ ಚಿರಂಜೀವಿ ನಟಿಸಿದ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ನಾಲ್ಕೂ ಸಿನಿಮಾಗಳು ಸೋತಿದ್ದವು. ಇದೀಗ ಕೊನೆಗೂ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಗೆಲುವು ಸಾಧಿಸಿದ್ದಾರೆ ನಟ ಚಿರಂಜೀವಿ.

ಅನಿಲ್ ರವಿಪುಡಿ ನಿರ್ದೇಶನದ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಜನವರಿ 12 ರಂದು ಬಿಡುಗಡೆ ಆಗಿದ್ದು, ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಸಿನಿಮಾ ನೋಡಿದ ಬಹುತೇಕ ಮಂದಿ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಸಂಕ್ರಾಂತಿಗೆ ಬಿಡುಗಡೆ ಆದ ಪಕ್ಕಾ ಎಂಟರ್ಟೈನರ್’ ಎಂದು ವಿಮರ್ಶಕರು ಸಹ ಕೊಂಡಾಡಿದ್ದಾರೆ. ಆ ಮೂಲಕ ಈ ಸಂಕ್ರಾಂತಿಗೆ ತೆಲುಗು ಚಿತ್ರರಂಗದಲ್ಲಿ ಹಿಟ್ ಸಿನಿಮಾ ಆಗುವ ಎಲ್ಲ ಲಕ್ಷಣಗಳನ್ನು ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್’ ಸಿನಿಮಾ ತೋರಿಸಿದೆ.

‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಸುಮಾರು 38 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಭಾರತದ ಬಾಕ್ಸ್ ಆಫೀಸ್​ ಲೆಕ್ಕಾಚಾರವಾಗಿದೆ. ಸಿನಿಮಾ ಅಡ್ವಾನ್ಸ್ ಬುಕಿಂಗ್​​ನಿಂದಲೇ ಸುಮಾರು 10-12 ಕೋಟಿ ಗಳಿಕೆ ಮಾಡಿತ್ತು. ಬಳಿಕ ಸಿನಿಮಾ ಬಿಡುಗಡೆ ಆದ ದಿನ ಅಂದರೆ ಸೋಮವಾರದಂದು 28.7 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಆ ಮೂಲಕ ಭಾರತದ ಬಾಕ್ಸ್ ಆಫೀಸ್​ ಕಲೆಕ್ಷನ್ ಮೊದಲ ದಿನ ಸುಮಾರು 40 ಕೋಟಿ ವರೆಗೂ ಆಗಿದೆ. ವಿದೇಶಗಳಲ್ಲಿ ವಿಶೇಷವಾಗಿ ಉತ್ತರ ಅಮೆರಿಕದಲ್ಲಿ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿದ್ದು, ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸುಮಾರು 15 ಕೋಟಿ ಗಳಿಕೆ ಆಗಿದೆ ಎನ್ನಲಾಗುತ್ತಿದೆ. ಆ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 55 ಕೋಟಿ ದಾಟಿದೆ.

ಇದನ್ನೂ ಓದಿ:ಈ ವರ್ಷವೂ ಬಿಡುಗಡೆ ಆಗಲ್ಲ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ

ಚಿರಂಜೀವಿಯ ಈ ಹಿಂದಿನ ಸಿನಿಮಾ ‘ಭೋಲಾ ಶಂಕರ್’ ಗಳಿಸಿದ್ದ ಒಟ್ಟು ಮೊತ್ತವೇ 45 ಕೋಟಿ ಆಗಿತ್ತು. ಆದರೆ ಈ ಮೊತ್ತವನ್ನು ಮೊದಲ ದಿನವೇ ಹಿಂದಿಕ್ಕಿದೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ. ಚಿರಂಜೀವಿಯ ಈ ಹಿಂದಿನ ಕೆಲ ಸಿನಿಮಾಗಳಿಗೆ ಹೋಲಿಸಿದರೆ ಯಾವುದೇ ಅತಿಯಾದ ಆಕ್ಷನ್ ಇಲ್ಲದೆ, ಅತಿಯಾದ ಸಾಮಾಜಿಕ ಸಂದೇಶ, ಒಣ ಭಾಷಣಗಳು ಇಲ್ಲದೆ, ಕೇವಲ ಮನೊರಂಜನೆಗಾಗಿ ಮಾಡಿದ ಸಿನಿಮಾ ಇದಾಗಿದ್ದು, ಇದೇ ಕಾರಣಕ್ಕೆ ಜನರಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಭರಪೂರ ಹಾಸ್ಯ, ಅದರಲ್ಲೂ ಸ್ವತಃ ಚಿರಂಜೀವಿಯೇ ಹಾಸ್ಯ ದೃಶ್ಯಗಳಲ್ಲಿ ನಟಿಸಿರುವುದು ಪ್ರೇಕ್ಷಕರಿಗೆ ಬಹುವಾಗಿ ಹಿಡಿಸಿದೆ.

ಸಿನಿಮಾನಲ್ಲಿ ಚಿರಂಜೀವಿ ಜೊತೆಗೆ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಸಹ ನಟಿಸಿದ್ದು ಸಿನಿಮಾಕ್ಕೆ ಪಾಸಿಟಿವ್ ಆಗಿ ಪರಿಣಮಿಸಿದೆ. ಸಿನಿಮಾನಲ್ಲಿ ನಯನತಾರಾ ಮತ್ತು ಕ್ಯಾತರೀನ್ ಥೆರೆಸಾ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಅನಿಲ್ ರವಿಪುಡಿ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆದ ಅನಿಲ್ ರವಿಪೂಡಿ ನಿರ್ದೇಶನದ ಎಲ್ಲ ಸಿನಿಮಾಗಳು ಹಿಟ್ ಆಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version