Bengaluru: ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಜೋಕೆ: ಇನ್ಮುಂದೆ ದಾಖಲಾಗುತ್ತೆ FIR – Kannada News | Bengaluru Traffic Police Begin Registering FIRs for Traffic Violations
ಬೆಂಗಳೂರು, ಜನವರಿ 13: ರಸ್ತೆಯಲ್ಲಿ ಸಂಚಾರ ಪೊಲೀಸರು ಇಲ್ಲ, ಕ್ಯಾಮರಾಗಳ ಕಣ್ಣಿಗೆ ಕಾಣಿಸಲ್ಲ ಎಂದು ಮೊಂಡತನ ಮಾಡಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ಚಾಲನೆ ಮಾಡ್ತಿದ್ದೀರಾ? ಹಾಗಿದ್ರೆ ಸಂಕಷ್ಟ ಎದುರಿಸೋಕೆ ಸಿದ್ಧರಾಗಿ. ಸಂಚಾರ ನಿಯಮಗಳ ಪಾಲನೆ ಮಾಡದಿದ್ರೆ ಇನ್ಮುಂದೆ ದಂಡ ಒಂದೇ ಬೀಳಲ್ಲ, ಕೇಸ್ ಕೂಡ ದಾಖಲಾಗುತ್ತೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ವಿರುದ್ಧ ಬೆಂಗಳೂರಲ್ಲಿ ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಲು ಆರಂಭಿಸಿದ್ದಾರೆ. ಹೌದು, ಸಿಗ್ನಲ್ ಜಂಪ್ ಮಾಡುವುದು, ಏಕಮಾರ್ಗ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು…