Headlines

ಬಾಗಲಕೋಟೆ: ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು

ಬಾಗಲಕೋಟೆ, ಏಪ್ರಿಲ್ 9: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುತ್ತಿದೆ. ಹೆಚ್. ವೈ. ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಈ ಕ್ಷೇತ್ರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ತೀವ್ರ ಪ್ರಚಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರು ದಿನಗಳ ಕಾಲ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಮಾಡಿದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮಾಜಿ ಸಿಎಂ…

Read More

ಬೆಂಗಳೂರು: ನಡುರಸ್ತೆಯಲ್ಲೇ ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್ – Kannada News | Viral Video: Two Young Women Thrash Youth in the Middle of Koramangala Road Over Pub Dispute

ಬೆಂಗಳೂರು, ಏಪ್ರಿಲ್ 24: ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಹೈಡ್ರಾಮಾವೊಂದು ನಡೆದಿದೆ. ಯುವಕನೊಬ್ಬ ತಮಗೆ ಕಿರಿಕಿರಿ ನೀಡಿದ್ದಾನೆ ಎಂದು ಆರೋಪಿಸಿ ಇಬ್ಬರು ಯುವತಿಯರು ಆತನಿಗೆ ನಡುರಸ್ತೆಯಲ್ಲೇ ಪೊಲೀಸರೆದುರೇ ಮನಬಂದಂತೆ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಪಬ್‌ವೊಂದರ ಒಳಗೆ ಯುವಕ ತಮಗೆ ತೊಂದರೆ ನೀಡಿದ್ದಾನೆ ಎಂದು ಆಕ್ರೋಶಗೊಂಡ ಯುವತಿಯರು, ಆತನನ್ನು ರಸ್ತೆಗೆ ಎಳೆದು ತಂದು ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಯುವತಿಯರನ್ನು ತಡೆಯಲು ಪ್ರಯತ್ನಿಸಿ, ‘ಹೊಡೆಯಬೇಡಿ, ಠಾಣೆಗೆ ಬಂದು ದೂರು ನೀಡಿ’ ಎಂದು ಎಷ್ಟೇ ಮನವಿ ಮಾಡಿದರೂ ಕೇಳದ…

Read More

ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಲಿರುವ ಕಮಲ್ ಹಾಸನ್ – Kannada News | Kamal Haasan and Vetrimaran joining hands for a movie

ಕಮಲ್ ಹಾಸನ್ (Kamal Haasan), ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟ. ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಸಿನಿಮಾಗಳು, ಸಂದೇಶ ಹೊಂದಿದ ಸಿನಿಮಾಗಳು ಹೀಗೆ ಅನೇಕ ಮಾದರಿಯ ಸಿನಿಮಾಗಳಲ್ಲಿ ನಟಿಸಿ ಎಲ್ಲರದಲ್ಲೂ ಟಾಪ್ ಎನಿಸಿಕೊಂಡಿದ್ದಾರೆ. ಆದರೆ ಕಮಲ್ ನಟನೆಯ ಕೊನೆಯ ಸಿನಿಮಾ ‘ಥಗ್ ಲೈಫ್’ ಸಿನಿಮಾ ದೊಡ್ಡ ಫ್ಲಾಪ್ ಆಗಿದೆ. ಆದರೆ ಇದೀಗ ಬಲು ಚರ್ಚಿತ, ಸ್ಟಾರ್ ನಿರ್ದೇಶಕರ ಸಿನಿಮಾನಲ್ಲಿ ನಟಿಸಲು ಕಮಲ್ ಹಾಸನ್ ಸಜ್ಜಾಗುತ್ತಿದ್ದಾರೆ. ಕಮಲ್ ಅಭಿಮಾನಿಗಳ ಜೊತೆಗೆ ಸಿನಿಮಾ ಪ್ರೇಮಿಗಳಿಗೂ ಸಹ ಈ ಸುದ್ದಿ…

Read More

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಬ್ರೆಜಿಲ್ ಅಧ್ಯಕ್ಷ ಲುಲಾ ಖಂಡನೆ – Kannada News | Brazilian President Lula Condemns Terror Attacks In Kashmir Watch Video

ನವದೆಹಲಿ, ಫೆಬ್ರವರಿ 21: ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ನವದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಬ್ರೆಜಿಲ್ ಅಧ್ಯಕ್ಷ ಲುಲಾ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗಳನ್ನು ಬಲವಾಗಿ ಖಂಡಿಸಿದ್ದಾರೆ. “ಭಯೋತ್ಪಾದನೆ ಯಾವುದೇ ರಾಷ್ಟ್ರೀಯತೆ ಅಥವಾ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಅವರು ಹೇಳಿದ್ದಾರೆ. ಭಾರತ-ಬ್ರೆಜಿಲ್ ಒಗ್ಗಟ್ಟನ್ನು ಬಲಪಡಿಸಿದ ಅವರು, ಭಯೋತ್ಪಾದನೆಯ ವಿರುದ್ಧದ ಜಾಗತಿಕ ಪ್ರಯತ್ನಗಳು ನಿರ್ದಿಷ್ಟ ಸಮುದಾಯಗಳು ಅಥವಾ ರಾಷ್ಟ್ರಗಳೊಂದಿಗೆ ಹಿಂಸಾಚಾರವನ್ನು…

Read More

ಮಳೆ ಅಬ್ಬರಕ್ಕೆ ಕೆಜಿಎಫ್​​ನಲ್ಲಿ ಕುಸಿದ ಕಟ್ಟಡದ ಗೋಡೆ: 7 ಮಂದಿ ಬದುಕಿದ್ದೇ ಪವಾಡ!

ಕೋಲಾರ, ಮೇ 30: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಸಾಲು ಸಾಲು ಅವಾಂತರಗಳಿಗೆ ಕಾರಣವಾಗಿದ್ದು, ಕೆಜಿಎಫ್ ನಗರದಲ್ಲಿ ವರುಣಾರ್ಭಟಕ್ಕೆ ಕಟ್ಟಡವೊಂದು ಕುಸಿದಿರುವ ಘಟನೆ ನಡೆದಿದೆ. ಈ ವೇಳೆ ಅಲ್ಲೇ ಇದ್ದ 7 ಜನರು ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದರೆ. ಮಾರಿಕುಪ್ಪಂನ ಕೃಷ್ಣಮೂರ್ತಿ ಎಂಬುವರ ಮನೆ ಕುಸಿದಿದ್ದು, ಮನೆಯ ಒಂದು ಬದಿಯ ಗೋಡೆ ಸಂಪೂರ್ಣವಾಗಿ ನಾಶವಾಗಿದೆ. ಅತ್ತ ರಾಬರ್ಟ್ ಸನ್ ಪೇಟೆಯಲ್ಲಿ ಬೃಹತ್ ಮರಗಳು ಧರೆಗುರುಳಿದ್ದರೂ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಸ್ಥಳಗಳಿಗೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿರುವ ಆರೋಪ…

Read More

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?

ನವದೆಹಲಿ, ಮಾರ್ಚ್ 27: ಭಾರತ ಈ ತಿಂಗಳು (ಮಾರ್ಚ್) ಆಪರೇಷನ್ ಊರ್ಜಾ ಸುರಕ್ಷಾ (Operation Oorja Suraksha) ಆರಂಭಿಸಿದೆ. ಭಾರತೀಯ ನೌಕಾಪಡೆಯ ವಿಶೇಷ ಕಾರ್ಯಾಚರಣೆಯಾದ ಇದರಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಭಾರತೀಯ ತೈಲ ನೌಕೆಗಳ ಸಾಗಣೆಗೆ ರಕ್ಷಣೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಯುದ್ಧದ ಬಳಿಕ ಹಾರ್ಮುಜ್ ಜಲಸಂಧಿಯು ಅಕ್ಷರಶಃ ಇರಾನ್ ಹತೋಟಿಯಲ್ಲಿದೆ. ಭಾರತ ಸೇರಿದಂತೆ ಕೆಲವೇ ಆಯ್ದ ದೇಶಗಳ ತೈಲ ಹಡಗುಗಳಿಗೆ ಸಾಗಲು ಇರಾನ್ ಅನುಮತಿ ಕೊಟ್ಟಿದೆ. ಆದರೂ ತ್ರಿವರ್ಣ ಧ್ವಜ ಲಾಂಛನದ ತೈಲ ಹಡಗುಗಳಿಗೆ…

Read More

ಒಂದಾ ಇಬ್ಬರು ದುಡಿಯಬೇಕು, ಇಲ್ಲ ಊರು ಬಿಡಬೇಕು: ಬೆಂಗಳೂರು ಮದುವೆಯಾದವರಿಗೆ ದುಬಾರಿ  – Kannada News | Bengaluru Couples’ Financial Reality: High Living Costs and The Challenge of Saving in Metro City

ಬೆಂಗಳೂರಿನ ಖರ್ಚು, ಹಾಗೂ ಸಂಬಳದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮ ಚರ್ಚೆಯಾಗಿದೆ. ಈ ಹಿಂದೆ ಐಟಿ ಉದ್ಯೋಗಿಗಳು ರಾಜಧಾನಿಯಲ್ಲಿ ಜೀವನ ವೆಚ್ಚದ ಬಗ್ಗೆ ಭಾರೀ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ದಂಪತಿಗಳು ಈ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಬೆಂಗಳೂರಿನ ದಂಪತಿಗಳಿಬ್ಬರು ಎದುರಿಸುತ್ತಿರುವ ಆರ್ಥಿಕ ಒತ್ತಡಗಳನ್ನು ವಿವರಿಸುವ ಪೋಸ್ಟ್ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಅಭಿಷೇಕ್ ಸಿಂಗ್ ಎಂಬವವರು ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಸ್ನೇಹಿತನ ಕಥೆಯನ್ನು ಮತ್ತು ಮದುವೆಯ ನಂತರ ಅವರು ಮಾಡಬೇಕಾದ…

Read More

ಶ್ವಾಸಕೋಶ ಸಮಸ್ಯೆಗಳಿಗೆ ಶ್ವಾಸರಿ ವಟೀ; ಪತಂಜಲಿಯ ಈ ಆಯುರ್ವೇದ ಔಷಧದ ಪ್ರಯೋಜನ ಮತ್ತು ಬಳಕೆ ವಿಧಾನ ತಿಳಿಯಿರಿ – Kannada News | Patanjali Swasari Vati helpful in treating lung related problems

ಕಳೆದ ಕೆಲವು ವರ್ಷಗಳಿಂದ ಮಾಲಿನ್ಯದ ಸಮಸ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಚಳಿಗಾಲದಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಮಾಲಿನ್ಯವು ಆಸ್ತಮಾ, ಬ್ರಾಂಕೈಟಿಸ್ ಮತ್ತು ಸಿಒಪಿಡಿಯಂತಹ ಕಾಯಿಲೆಗಳ ಹೆಚ್ಚಳಕ್ಕೂ ಕಾರಣವಾಗಿದೆ. ಶ್ವಾಸಕೋಶದ ಸೋಂಕುಗಳು ಇದಕ್ಕೆ ಕಾರಣ. ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಗೆ ಔಷಧವನ್ನು ಪತಂಜಲಿ ಅಭಿವೃದ್ಧಿಪಡಿಸಿದೆ. ಇದನ್ನು ಶ್ವಾಸರಿ ವಟಿ ಎಂದು ಕರೆಯಲಾಗುತ್ತದೆ. ಈ ಔಷಧಿ ಶ್ವಾಸಕೋಶಗಳಿಗೆ ಪ್ರಯೋಜನಕಾರಿ ಎಂದು ಪತಂಜಲಿ (Patanjali) ಹೇಳಿಕೊಂಡಿದೆ. ಇದನ್ನು ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಇದನ್ನು ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಎನ್ನಲಾಗುತ್ತಿದೆ. ಶ್ವಾಸಾರಿ ವಟೀ…

Read More

ಪ್ಲೇ-ಆಫ್ ರೇಸ್‌ನಿಂದ ಹೊರಬೀಳುವ ಭೀತಿಯಲ್ಲಿ ಪಂಜಾಬ್; ಸೋಲಿಗೆ ಅಯ್ಯರ್ ದೂರಿದ್ದು ಯಾರನ್ನ? – Kannada News | PBKS Playoff Hopes Dim: Iyer Blames Poor Bowling After Delhi Capitals Defeat

ಧರ್ಮಶಾಲಾದಲ್ಲಿ ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋತಿದೆ. ಆರಂಭದಲ್ಲಿ ಒಂದೇ ಒಂದು ಸೋಲನ್ನು ಕಾಣದೆ ನಾಗಾಲೋಟ ಮುಂದುವರಿಸಿದ್ದ ಈ ತಂಡ ಈಗ ಸತತ ನಾಲ್ಕನೇ ಸೋಲನ್ನು ಕಂಡಿದೆ. ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ತಂಡದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಸೋಲಿಗೆ ತಂಡದ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನವೇ ನೇರ ಕಾರಣ ಎಂದು ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿದ್ದಾರೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್, ಪ್ರಿಯಾಂಶ್…

Read More

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ! – Kannada News | Kunigal Tragedy: Father Kills Two Sons and Commits Suicide Over Wife’s affair

ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ! Image Credit source: google Gemini ತುಮಕೂರು, ಮೇ 02: ಚಿನ್ನಾಭರಣ ಸಹಿತ ಪರಾರಿಯಾದ ಹೆಂಡತಿಯ (Wife) ನಡತೆಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನಿಬ್ಬರು ಪುಟ್ಟ ಮಕ್ಕಳನ್ನೂ ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಅಮಾನವೀಯ ಘಟನೆ ತುಮಕೂರು (Tumkuru) ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ…

Read More