ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಶ್ರೀಮಂತಿಕೆ, ಸಂಬಂಧಗಳು ಮಾತ್ರವಲ್ಲ ನಮಗೆ ಸರಿಯಾದ ಮಾರ್ಗವನ್ನು ತೋರಿಸುವ ಅನೇಕ ಜೀವನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಜೊತೆಗೆ ಇತರರನ್ನು ಕುರುಡಾಗಿ ನಂಬಿದಾಗ ಉಂಟಾಗುವ ಕೆಲವು ಅಪಾಯಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಇತರರನ್ನು ಕುರುಡಾಗಿ ನಂಬುವ, ಸದಾ ಇತರರ ಮಾತನ್ನೇ ಕೇಳುವ ಅಭ್ಯಾಸ ಒಬ್ಬ ವ್ಯಕ್ತಿಗಿದ್ದರೆ, ಅವನು ವೇಗವಾಗಿ ವಿನಾಶದತ್ತ ಸಾಗುತ್ತದೆ ಎಂಬುದನ್ನು ಸಹ ಎಚ್ಚರಿಸಿದ್ದಾರೆ. ಹಾಗಿದ್ರೆ ಈ ಒಂದು ತಪ್ಪಿನಿಂದ ಜೀವನದಲ್ಲಿ ಏನೆಲ್ಲಾ ಅಪಾಯಗಳು ಎದುರಾಗುತ್ತವೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
ಇತರರ ಮಾತನ್ನು ಕೇಳುವುದರಿಂದ ಜೀವನ ಹೇಗೆಲ್ಲಾ ಹಾಳಾಗುತ್ತದೆ ಗೊತ್ತಾ?
ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಇತರರನ್ನು ಕುರುಡಾಗಿ ನಂಬಿದಾಗ, ಆತ ಬೇಗನೆ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಕೆಲವೊಮ್ಮೆ, ಜನರು ತಮ್ಮ ಮಾತುಗಳ ಹಿಂದೆ ಸ್ವಾರ್ಥ, ಕೆಟ್ಟ ಉದ್ದೇಶಗಳನ್ನು ಇಟ್ಟುಕೊಂಡಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಮಾತುಗಳನ್ನು ನಂಬಿ ತಪ್ಪು ದಿಕ್ಕಿನಲ್ಲಿ ಮುಂದುವರಿದರೆ, ಅದರಿಂದ ನಿಮ್ಮ ಸಂಪೂರ್ಣ ಜೀವನವೇ ಹಾಳಾಗುತ್ತದೆ.
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ: ಆಚಾರ್ಯ ಚಾಣಕ್ಯರು ಹೇಳುವಂತೆ, ಒಬ್ಬ ವ್ಯಕ್ತಿಯು ಇತರರ ಸಲಹೆಗೆ ಮಣಿದು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ, ಆತ ಸಣ್ಣ ಕೆಲಸಗಳಿಗೂ ಇತರರನ್ನು ಅವಲಂಬಿಸಲು ಪ್ರಾರಂಭಿಸುತ್ತಾನೆ. ಇದು ಆತನ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುವುದು ತುಂಬಾನೇ ಮುಖ್ಯ.
ಇದನ್ನೂ ಓದಿ: ಗಂಡನಾದವನು ತನ್ನ ಹೆಂಡತಿಯ ಬಳಿ ಆಡುವ ಈ ಮಾತುಗಳು ಸುಂದರ ಸಂಬಂಧವನ್ನೇ ಹಾಳು ಮಾಡುತ್ತದೆ
ಆತ್ಮವಿಶ್ವಾಸದ ನಷ್ಟ: ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಎಲ್ಲದಕ್ಕೂ ಇತರರನ್ನು ಅವಲಂಬಿಸಲು ಪ್ರಾರಂಭಿಸಿದಾಗ, ಇತರರ ಮಾತನ್ನೇ ಕೇಳಿ ಮುಂದೆ ಸಾಗಿದಾಗ ಆತನ ಆತ್ಮವಿಶ್ವಾಸವು ಬೇಗನೆ ಕುಸಿಯುತ್ತದೆ. ಒಂದು ನಿರ್ದಿಷ್ಟ ಹಂತದ ನಂತರ, ಆತ ತನ್ನಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ ಮತ್ತು ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇತರರ ಅಭಿಪ್ರಾಯಗಳನ್ನು ಮಾತ್ರ ಅವಲಂಬಿಸಲು ಪ್ರಾರಂಭಿಸುತ್ತಾನೆ. ಈ ಅಭ್ಯಾಸವು ಕೊನೆಗೆ ವ್ಯಕ್ತಿಯ ವ್ಯಕ್ತಿತ್ವವನ್ನೇ ದುರ್ಬಲಗೊಳಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ