ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿ ಬಗ್ಗೆ ಸ್ಫೋಟಕ ಹೇಳಿಕೆ – Kannada News | Karnataka Power Tussle: DK SHivakumar Talks In Delhi about Rahul gandhi Met at Mysuru Airport

ನವದೆಹಲಿ, (ಜನವರಿ 16): ಸಂಕ್ರಮಣದ ದಿನ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಆದ್ರೆ ಸಂಕ್ರಾಂತಿಗೆ (Sankranthi) ಕರ್ನಾಟಕ ಕಾಂಗ್ರೆಸ್‌ನಲ್ಲಿ (Karnataka Congress) ಪಥಬದಲಾಗಿ ಕ್ರಾಂತಿಯಾಗುತ್ತೆ ಎನ್ನುವ ಗೊಂದಲಕ್ಕೆ ತೆರೆಬಿದ್ದಿಲ್ಲ. ಅಧಿಕಾರ ಹಂಚಿಕೆಗೆ . ಮೊನ್ನೆ ಮೈಸೂರಿಗೆ (Mysuru) ಬಂದಿದ್ದ ರಾಹುಲ್ ಗಾಂಧಿಯನ್ನು (Rahul Gandhi) ವಿಮಾನ ನಿಲ್ದಾಣದಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ್ರು. ಅದರಲ್ಲೂ ಡಿಕೆಶಿ ಪ್ರತ್ಯೇಕವಾಗಿ ನಿಂತು ಅಧಿಕಾರ ಹಂಚಿಕೆ ಗೊಂದಲವನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು. ಏರ್‌ಪೋರ್ಟ್‌ ರನ್‌ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದರಂತೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು,  ಈ ವೇಳೆ ಮೈಸೂರಿನಲ್ಲಿ ರಾಹುಲ್ ರಹಸ್ಯ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Trigrahi Yoga 2026: 200 ವರ್ಷಗಳ ನಂತರ ಅಪರೂಪದ ತ್ರಿಗ್ರಹಿ ಯೋಗ; ಈ ರಾಶಿಗೆ ಸುವರ್ಣಯುಗ ಪ್ರಾರಂಭ – Kannada News | Rare Trigrahi Yoga Jan 16: Sun, Venus, Mars in Capricorn – Golden Age for 4 Zodiac Signs!

ಜನವರಿ 16 ರಂದು ಸೂರ್ಯ, ಶುಕ್ರ ಮತ್ತು ಮಂಗಳ ಗ್ರಹಗಳು ಮಕರ ರಾಶಿಗೆ ಪ್ರವೇಶಿಸುವುದರೊಂದಿಗೆ ಅಪರೂಪದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. 200 ವರ್ಷಗಳ ನಂತರ ಈ ಯೋಗವು ರೂಪುಗೊಳ್ಳಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದರೊಂದಿಗೆ, ಮಕರ ಸಂಕ್ರಾಂತಿಯ ನಂತರ ಕೆಲ ರಾಶಿಗಳಿಗೆ ಸುವರ್ಣಯುಗ ಪ್ರಾರಂಭವಾಗುತ್ತದೆ. ಆ ರಾಶಿಗಳಿಗೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.

ಮಕರ ಸಂಕ್ರಾಂತಿಯ ನಂತರ ಚಲನೆಯಲ್ಲಿರುವ ಗ್ರಹಗಳ ಸಂಚಾರವು ವಿವಿಧ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ. ಸಂಕ್ರಾಂತಿಯ ನಂತರ, ಶುಕ್ರ, ಮಂಗಳ ಮತ್ತು ಶನಿಯ ಸಂಯೋಗದಿಂದಾಗಿ ಅಪರೂಪದ ಯೋಗವು ರೂಪುಗೊಳ್ಳುತ್ತಿದೆ. ಜನವರಿ 13 ರಂದು ಶುಕ್ರ ಮಕರ ರಾಶಿಯನ್ನು ಪ್ರವೇಶಿಸಿದೆ. ನಂತರ ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದೆ. ಈಗ ಜನವರಿ 16 ರಂದು ಮಂಗಳ ಮಕರ ರಾಶಿಯನ್ನು ಪ್ರವೇಶಿಸಲಿದೆ.

ಈ ಮೂರು ಗ್ರಹಗಳು ಮಕರ ರಾಶಿಗೆ ಪ್ರವೇಶಿಸುತ್ತಿದ್ದಂತೆ, ಅಪರೂಪದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. 200 ವರ್ಷಗಳ ನಂತರ ಈ ಯೋಗವು ರೂಪುಗೊಳ್ಳಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದರೊಂದಿಗೆ, ಮಕರ ರಾಶಿಯ ನಂತರ ಅನೇಕ ರಾಶಿಗಳಿಗೆ ಸುವರ್ಣಯುಗ ಪ್ರಾರಂಭವಾಗಲಿದೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ತ್ರಿಗ್ರಹಿ ಯೋಗವು ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಸೂರ್ಯನ ನೇರ ಅಂಶವು ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ನೀವು ನಿಮ್ಮ ವೃತ್ತಿಜೀವನದಲ್ಲಿ ಶ್ರೇಷ್ಠರಾಗುವಿರಿ. ದೊಡ್ಡ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ನಿಮ್ಮ ವೃತ್ತಿಪರ ಜೀವನದಲ್ಲಿನ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ನೀವು ಹಳೆಯ ಸಾಲಗಳನ್ನು ತೀರಿಸುವಿರಿ. ನೀವು ಈಗಾಗಲೇ ಮಾಡುತ್ತಿರುವ ಕೆಲಸದಿಂದ ಆದಾಯ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಸಂಕ್ರಾಂತಿಯ ನಂತರ, ಎಲ್ಲವೂ ನಿಮ್ಮ ಪರವಾಗಿ ಬದಲಾಗುತ್ತದೆ. ನಿಮ್ಮ ಕುಟುಂಬವು ಸಮಸ್ಯೆಗಳಿಂದ ಮುಕ್ತವಾಗುತ್ತದೆ. ಸಂಪತ್ತು ಮತ್ತು ಅದೃಷ್ಟ ಒಟ್ಟಿಗೆ ಬರುತ್ತದೆ.

ವೃಶ್ಚಿಕ ರಾಶಿ:

ತ್ರಿಗ್ರಹಿ ಯೋಗವು ವೃಶ್ಚಿಕ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತರುತ್ತದೆ. ನೀವು ನಿಮ್ಮ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ನಿಮಗೆ ಹೊಸ ಆದಾಯ ಮತ್ತು ಲಾಭಗಳು ಸಿಗುತ್ತವೆ. ನಿಮ್ಮ ವೃತ್ತಿಪರ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಜಂಟಿ ವ್ಯವಹಾರಗಳ ಮೂಲಕ ನೀವು ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ನಿಮ್ಮ ಸಹೋದ್ಯೋಗಿಗಳ ಬೆಂಬಲ ನಿಮಗೆ ಇರುತ್ತದೆ. ವಿದೇಶಕ್ಕೆ ಹೋಗಲು ನಿಮಗೆ ಹೆಚ್ಚಿನ ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಮದುವೆಯಲ್ಲಿನ ಅಡೆತಡೆಗಳು ದೂರವಾಗುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಧನು ರಾಶಿ:

ತ್ರಿಗ್ರಹಿ ಯೋಗವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಶುಭ ಸಮಯದಲ್ಲಿ, ನೀವು ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ನೀವು ವೃತ್ತಿಪರವಾಗಿ ಪ್ರಗತಿ ಸಾಧಿಸುವಿರಿ. ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಜೀವನವು ಸಂತೋಷವಾಗಿರುತ್ತದೆ.

ಮಕರ ರಾಶಿ:

ಮಕರ ರಾಶಿಯವರಿಗೆ ತ್ರಿಗ್ರಹಿ ಯೋಗವು ಅನೇಕ ಪ್ರಯೋಜನಗಳನ್ನು ತರುತ್ತದೆ. ಈ ಅವಧಿಯಲ್ಲಿ ಅವಿವಾಹಿತರು ಉತ್ತಮ ಸಂಬಂಧಗಳನ್ನು ಕಂಡುಕೊಳ್ಳುತ್ತಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಹೊಸದಾಗಿ ಮದುವೆಯಾದವರು ಮಕ್ಕಳ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:47 pm, Fri, 16 January 26

Source link

ವಿಚಾರಣೆ ನೆಪದಲ್ಲಿ ಕ್ಯಾನ್ಸರ್​​ ರೋಗಿ ಮೇಲೆ ಕ್ರೌರ್ಯ?: ಖಾಕಿ ಏಟಿಗೆ ಮುರೀತಾ ವ್ಯಕ್ತಿ ಮೂಳೆ? – Kannada News | Torture Allegations Against Yadgir Police: Cancer Patient Suffers Broken Leg After Interrogation Assault

ಕ್ಯಾನ್ಸರ್​​ ರೋಗಿ ಮೇಲೆ ನಡೆದಿರುವ ಹಲ್ಲೆ

ಯಾದಗಿರಿ, ಜನವರಿ 16: ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋಗಿ ಕ್ಯಾನ್ಸರ್​​ ರೋಗಿಗೆ ಬಾಸುಂಡೆ ಬರುವ ರೀತಿ ಪೊಲೀಸರು ಹೊಡೆದ ಪರಿಣಾಮ ಆತನ ಕಾಲು ಮುರಿದಿರುವ ಆರೋಪ ಯಾದಗಿರಿಯಲ್ಲಿ ಕೇಳಿಬಂದಿದೆ. ಕೆಂಭಾವಿ ನಿವಾಸಿ ಮೆಹಬೂಬ್ ಎಂಬರಿಗೆ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ಘಟನೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಪೊಲೀಸರ ಏಟಿನಿಂದ ಗಾಯಗೊಂಡಿರುವ ಮಹೆಬೂಬ್​​ನ ಕಲಬುರಗಿಯ ಜಿಮ್ಸ್​​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

5 ತಿಂಗಳು ಹಿಂದಿನ ಪ್ರಕರಣದ ವಿಚಾರಣೆ

ಮೆಹಬೂಬ್​​ ಮತ್ತು ಉತ್ತರ ಪ್ರದೇಶ ಮೂಲದ ಸಾಹಿಲ್ ಎಂಬಾತ ಸೇರಿ ಜಾತ್ರೆಗಳಲ್ಲಿ ಆಟಿಕೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ಆಗಸ್ಟ್​​ ವೇಳೆಗೆ ಆಟೋದಿಂದ ಬಿದ್ದು ಸಾಹಿಲ್ ಮೃತಪಟ್ಟಿದ್ದ. ಕಳೆದ ಐದು ತಿಂಗಳ ಹಿಂದೆ ನಡೆದಿರೋ ಅಪಘಾತದ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ಮೆಹಬೂಬ್​​ನ ವಿಚಾರಣೆಗೆಂದು ಪೊಲೀಸರು ಕರೆದಿದ್ದರು. ಆದರೆ ಪೊಲೀಸರ ಕೈಗೆ ಸಿಗದೆ ಮೆಹಬೂಬ್​​ ಓಡಾಡಿಕೊಂಡಿದ್ದ ಎನ್ನಲಾಗಿದೆ. ಕೊನೆಗೂ ಕೈಗೆ ಸಿಕ್ಕ ಆತನನ್ನು ಠಾಣೆಗೆ ಕರೆದೊಯ್ದಿದ್ದ ಪೊಲೀಸರು, ವಿಚಾರಣೆ ನೆಪದಲ್ಲಿ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:  ಬಾಲಕಿ ಕಣ್ಣೆದುರೇ ತಂದೆಯ ಕೊಲೆ ಪ್ರಕರಣ; ನಿಗೂಢ ಕೊಲೆಯ ಸುಳಿವು ನೀಡಿದ್ದ ಕಾರು! ಕೊನೆಗೂ ಬಲೆಗೆ ಬಿದ್ದ ಹಂತಕರು

ಮೆಹಬೂಬ್ ಬ್ಲಡ್​​ ಕ್ಯಾನ್ಸರ್ ರೋಗಿ

ಇನ್ನು ಪೊಲೀಸರು ನೀಡಿದ ಹೊಡೆತದ ಏಟಿಗೆ ಮೆಹಬೂಬ್​​ ಕಾಲುಗಳು ಮತ್ತು ಹಿಮಭಾಗದಲ್ಲಿ ಬಾಸುಂಡೆಗಳು ಮೂಡಿವೆ. ಈಗಾಗಲೇ ಮೆಹಬೂಬ್​​ ಬ್ಲಡ್​​ ಕ್ಯಾನ್ಸರ್​​ನಿಂದ ಬಳಲುತ್ತಿರುವ ರೋಗಿಯಾಗಿದ್ದು, ಪೊಲೀಸರು ನಡೆಸುವ ಕ್ರೌರ್ಯಕ್ಕೆ ಆತನ ಕಾಲು ಮೂಳೆ ಮುರಿದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ನಡೆಸಿರುವ ಹಲ್ಲೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊಹ್ಲಿಯೊಂದಿಗೆ ಜಗಳ ಮಾಡಿಕೊಂಡಿದ್ದ ಸ್ಟಾರ್ ವೇಗಿ ಟಿ20 ವಿಶ್ವಕಪ್​ನಿಂದ ಔಟ್

Source link

‘ದೈಹಿಕ ವಂಚನೆ ವಂಚನೆಯೇ’; ಕಾಜೋಲ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ನಟಿ – Kannada News | Gautami Kapoor Rejects Kajol Twinkle’s Infidelity Stance: Modern Relationships

ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ತಮ್ಮ ‘ಟೂ ಮಚ್’ ಎಂಬ ಟಾಕ್ ಶೋನಲ್ಲಿ ಆಧುನಿಕ ಮದುವೆ, ಸಂಬಂಧಗಳು ಮತ್ತು ಮೋಸದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಈ ಜೋಡಿ ಕೆಲವು ಹೇಳಿಕೆಗಳನ್ನು ನೀಡಿತ್ತು.ದೈಹಿಕ ಸಂಬಂಧಗಳಲ್ಲಿ ದ್ರೋಹವು ಯಾವಾಗಲೂ ಸಂಬಂಧವನ್ನು ಕೊನೆಗೊಳಿಸುವುದಿಲ್ಲ ಎಂದು ಇಬ್ಬರೂ ಹೇಳಿದ್ದರು. ಇದರಿಂದಾಗಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್ ಎದುರಿಸಬೇಕಾಯಿತು.

ಈಗ ಪ್ರಸಿದ್ಧ ಟಿವಿ ನಟಿ ಗೌತಮಿ ಕಪೂರ್ ಈ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಗೌತಮಿ ಅವರನ್ನು ದೈಹಿಕ ವಂಚನೆ ಅಥವಾ ಸಂಬಂಧಗಳಲ್ಲಿ ದ್ರೋಹವನ್ನು ಕ್ಷಮಿಸಬಹುದೇ ಎಂದು ಕೇಳಲಾಯಿತು. ಇದಕ್ಕೆ ಅವರು ಇಲ್ಲ ಎಂದು ಉತ್ತರಿಸಿದ್ದಾರೆ.

‘ನಾನು ದೈಹಿಕ ಮತ್ತು ಭಾವನಾತ್ಮಕ ದ್ರೋಹವು ದ್ರೋಹವೇ. ನಾನು ಜನರ ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಆದರೆ ನನ್ನ ಗಡಿಗಳು ತುಂಬಾ ಸ್ಪಷ್ಟವಾಗಿವೆ. ಅದು ದೈಹಿಕ, ಭಾವನಾತ್ಮಕ, ಆಧ್ಯಾತ್ಮಿಕ ಅಥವಾ ಇನ್ನೇನಾದರೂ ಆಗಿರಬಹುದು. ದ್ರೋಹವು ದ್ರೋಹವಾಗಿದೆ. ನಾನು ಅವರಿಬ್ಬರ ದೃಷ್ಟಿಕೋನಗಳನ್ನು ಗೌರವಿಸುತ್ತೇನೆ, ಆದರೆ ಇವು ನನ್ನ ಆಲೋಚನೆಗಳು. ಅದರಲ್ಲಿ ನನಗೆ ಯಾವುದೇ ತಪ್ಪಿಲ್ಲ’ ಎಂದಿದ್ದಾರೆಅವರು.

‘ನಾನು ತುಂಬಾ ಪೊಸೆಸಿವ್ ವ್ಯಕ್ತಿ. ನಿಜ ಹೇಳಬೇಕೆಂದರೆ, ನಾನು ನನ್ನ ಗಂಡ, ಸ್ನೇಹಿತರು, ಮಕ್ಕಳು ಮತ್ತು ಅಷ್ಟೇ ಅಲ್ಲ, ನನ್ನ ತಂಡ, ನನ್ನ ಸುತ್ತಮುತ್ತಲಿನ ಜನರ ಬಗ್ಗೆಯೂ ತುಂಬಾ ಪೊಸೆಸಿವ್ ಆಗಿರುತ್ತೇನೆ. ಆ ಸಂಬಂಧದಲ್ಲಿ ನೀವು ಬಹಳಷ್ಟು ಹೂಡಿಕೆ ಮಾಡಿದಾಗ, ಅದು ನಿಮ್ಮಲ್ಲಿ ಪೊಸೆಸಿವ್ ಭಾವನೆಯನ್ನು ಉಂಟುಮಾಡುತ್ತದೆ. ನಾನು ತುಂಬಾ ಪ್ರಾಮಾಣಿಕನಾಗಿರುವುದರಿಂದ, ಅದಕ್ಕಾಗಿಯೇ ನಾನು ಪ್ರತಿ ಸಂಬಂಧದಲ್ಲೂ ನನ್ನ 500 ಪ್ರತಿಶತವನ್ನು ನೀಡುತ್ತೇನೆ. ಒಮ್ಮೆ ದ್ರೋಹ ಸಂಭವಿಸಿದರೆ, ಅದು ದೊಡ್ಡ ಹೊರೆಯಾಗುತ್ತದೆ. ಅದು ದೈಹಿಕವಾಗಿದ್ದರಿಂದ ನಾನು ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದು ಇತರರಿಗೆ ಸರಿಯಾಗಿರಬಹುದು, ಆದರೆ ನನಗೆ ಅಲ್ಲ,” ಎಂದು ಗೌತಮಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂಬಂಧವು ದೈಹಿಕ ದ್ರೋಹದಿಂದ ಕೊನೆಗೊಳ್ಳುವುದಿಲ್ಲ ಎಂದು ಕಾಜೋಲ್ ಹೇಳಿದ್ದರು.

ಇದನ್ನೂ ಓದಿ: ‘ಕುಚ್​ ಕುಚ್ ಹೋತಾ ಹೈ’ ಹಾಡಿಗೆ ಕುಣಿದ ಶಾರುಖ್-ಕಾಜೋಲ್: ವಿಡಿಯೋ

‘ಗೌತಮಿ ತಾಳ್ಮೆಯ ಕೊರತೆ ಇದೆ ಎಂದು ವಿವರಿಸಿದರು. ‘ಹಿಂದೆ, ಜನರು ಈ ಸಮಸ್ಯೆಯನ್ನು ಪರಿಹರಿಸೋಣ ಎಂದು ಹೇಳುತ್ತಿದ್ದರು. ಇಂದು, ಜನರು ಮೊದಲ ಜಗಳದಲ್ಲೇ ಮುರಿದು ಬೀಳುತ್ತಾರೆ. ಇದಕ್ಕೆ ಕಾರಣವೆಂದರೆ ನಿಮ್ಮ ಸಹಿಷ್ಣುತೆ ಕಡಿಮೆಯಾಗುತ್ತಿದೆ. ನಿಮಗೆ ಹಲವು ಆಯ್ಕೆಗಳಿವೆ, ಹಲವು ಆಕರ್ಷಣೆಗಳಿವೆ. ನಾನು ಬೇಗನೆ ಬಿಟ್ಟುಕೊಡುವ ಪೀಳಿಗೆಯವನಲ್ಲ. ನೀವು ಸರಿಯಾದ ಕಾರಣಗಳಿಗಾಗಿ ಮದುವೆಯಾಗುತ್ತಿದ್ದರೆ, ಬಹುಶಃ ನಿಮಗೆ ಇನ್ನೊಂದು ಅವಕಾಶ ನೀಡಬಹುದು. ಇಂದಿನ ಪೀಳಿಗೆ ಸಮಯ, ತಾಳ್ಮೆ ಮತ್ತು ಸಂಬಂಧಗಳನ್ನು ಯಶಸ್ವಿಗೊಳಿಸುವ ಸಾಮರ್ಥ್ಯದ ಕೊರತೆಯೊಂದಿಗೆ ಹೋರಾಡುತ್ತಿದೆ’ ಎಂದು ಗೌತಮಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯನೆ ಪ್ರವಾಸಿಗರಿಗೆ ಕಾಶ್ಮೀರಿ ವ್ಯಕ್ತಿ ಕೊಟ್ಟ ಉತ್ತರ ಕೇಳಿ – Kannada News | I am also Indian, Boatman’s Clever Comeback Leaves Tourist Smiling in Kashmir

ಕಾಶ್ಮೀರ, ಜನವರಿ 16: ಪ್ರವಾಸಿಗರೊಬ್ಬರಿಗೆ ಕಾಶ್ಮೀರದ ವ್ಯಕ್ತಿಯೊಬ್ಬರು ಕೊಟ್ಟಿರುವ ಉತ್ತರ ಎಲ್ಲೆಡೆ ವೈರಲ್ ಆಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಘಟನೆ ಇದು. ಇಬ್ಬರು ಪ್ರವಾಸಿಗರು ಬೋಟ್​​ನಲ್ಲಿ ಕುಳಿತಿರುತ್ತಾರೆ. ಆಗ ಟೂರಿಸ್ಟ್ ಗೈಡ್ ಆ ಇಬ್ಬರು ಪ್ರವಾಸಿಗರ ಬಳಿ ನೀವು ಎಲ್ಲಿಂದ ಬಂದವರು ಎನ್ನುವ ಪ್ರಶ್ನೆ ಕೇಳುತ್ತಾರೆ, ಆ ಅದರಲ್ಲಿ ಒಬ್ಬ ನಾವು ಭಾರತೀಯರು ಎಂದು ಹೇಳುತ್ತಾರೆ, ಅದಕ್ಕೆ ನಗ್ಗ ಗೈಡ್ ನಾವೇನು ಪಾಕಿಸ್ತಾನದವರಾ ನಾವೂ ಭಾರತೀಯರೇ, ನಾವು ನಿಜವಾದ ಹಿಂದೂಸ್ತಾನಿಗಳು ಎಂದು ಹೇಳುತ್ತಾರೆ ಆಗ ಪ್ರವಾಸಿಗರೂ ಕೂಡ ನಕ್ಕು ಸುಮ್ಮನಾಗುತ್ತಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಬಾಸ್​​ನ ಗಿಲ್ಲಿನೇ ಗೆಲ್ಲೋದು; ಟೇಬಲ್ ತಟ್ಟಿ ಭವಿಷ್ಯ ನುಡಿದ ಶಿವಣ್ಣ – Kannada News | Gilli’s Bigg Boss Win Predicted by Shivrajkumar: Viral Video and Their Special Bond

ಶಿವರಾಜ್​​ಕುಮಾರ್ (Shivarajkumar) ಹಾಗೂ ಗಿಲ್ಲಿ ನಟನ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಗಿಲ್ಲಿಯ ಪರಿಚಯ ಶಿವರಾಜ್​​ಕುಮಾರ್ ಅವರಿಗೆ ಆಗಿತ್ತು. ಈ ಸಂದರ್ಭದಲ್ಲಿ ಗಿಲ್ಲಿಯನ್ನು ನೋಡಿ ಶಿವಣ್ಣ ಇಂಪ್ರೆಸ್ ಆಗಿದ್ದರು. ಈಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್​​ಕುಮಾರ್ ಭವಿಷ್ಯ ನುಡಿದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಗಿಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಗಿಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಗಿಲ್ಲಿ ಟ್ಯಾಲೆಂಟ್ ನೋಡಿ ಶಿವಣ್ಣನಿಗೆ ಖುಷಿ ಆಗಿತ್ತು. ಈಗ ಗಿಲ್ಲಿ ಬಿಗ್ ಬಾಸ್​​ನಲ್ಲಿದ್ದಾರೆ. ಅಶ್ವಿನಿ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ರಘು ಹಾಗೂ ಧನುಶ್ ಜೊತೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಗೆಲುವು ಗಿಲ್ಲಿಗೆ ಸಿಗಲಿದೆ ಎಂಬುದು ಶಿವಣ್ಣನ ಅಭಿಪ್ರಾಯ.

ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ, ‘ಗಿಲ್ಲಿಯೇ ಗೆಲ್ಲೋದು’ ಎಂದು ಟೇಬಲ್ ತಟ್ಟಿ ಹೇಳಿದ್ದಾರೆ ಶಿವಣ್ಣ. ಇಷ್ಟೇ ಅಲ್ಲ, ಶಿವರಾಜ್​​ಕುಮಾರ್ ಅವರು ಗಿಲ್ಲಿಗೆ ಆಲ್​ ದಿ ಬೆಸ್ಟ್ ಕೂಡ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಗಿಲ್ಲಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಈ ಮೊದಲು ಗಿಲ್ಲಿ ಬಗ್ಗೆ ಮಾತನಾಡಿದ್ದ ಶಿವಣ್ಣ, . ‘ಗಿಲ್ಲಿನ ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು. ಗಿಲ್ಲಿ ನೋಡಿದಾಗಲೆಲ್ಲ ತಮಿಳಿನ ಹಾಸ್ಯ ನಟ ಚಂದ್ರಬಾಬುನ ನೆನಪಾಗುತ್ತಾರೆ. ಚಂದ್ರಬಾಬು ಅದ್ಭುತ ಕಾಮಿಡಿಯನ್. ಗಿಲ್ಲಿ ಜೊತೆ ಖಂಡಿತವಾಗಿಯೂ ಒಂದು ಸಿನಿಮಾ ಮಾಡುತ್ತೇನೆ’ ಎಂದಿದ್ದರು ಶಿವಣ್ಣ.

ಇದನ್ನೂ ಓದಿ: ನಟ ಶಿವರಾಜ್​​ಕುಮಾರ್ ಸಾವು ಗೆದ್ದು ಒಂದು ವರ್ಷ; ಅಂದು ನಡೆದಿದ್ದೇನು?

ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದ ಜೋಗಿ ಪ್ರೇಮ್ ಅವರು ಗಿಲ್ಲಿಗೆ ವಿಶೇಷ ಪ್ರೀತಿ ತೋರಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೋಗುವಾಗ, ‘ಹೊರಗೆ ಬಂದ್ಮೇಲೆ ಸಿಗು’ ಎಂದಿದ್ದರು. ಹೀಗಾಗಿ, ಪ್ರೇಮ್ ಕೂಡ ಗಿಲ್ಲಿಗೆ ಸಿನಿಮಾದಲ್ಲಿ ಒಂದು ಪಾತ್ರ ಕೊಡಬಹುದು ಎಂದು ಅನೇಕರು ಊಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:54 pm, Fri, 16 January 26

Source link

ಮೊದಲ ಬಾಲಿವುಡ್ ಸಿನಿಮಾ ಮೂಲಕ ಸಂಪ್ರದಾಯ ಮುರಿದ ಸಾಯಿ ಪಲ್ಲವಿ: ಅಭಿಮಾನಿಗಳು ಒಪ್ಪುತ್ತಾರಾ? – Kannada News | Sai Pallavi’s first Bollywood movie Ek Din teaser released

ನಟಿ ಸಾಯಿ ಪಲ್ಲವಿ (Sai Pallavi) ದಕ್ಷಿಣದ ಸ್ಟಾರ್ ನಟಿ. ತಮ್ಮ ಅದ್ಭುತ ನಟನೆ, ನೃತ್ಯ ಮತ್ತು ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಾಯಿ ಪಲ್ಲವಿ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ವ್ಯಕ್ತಿತ್ವದಿಂದಲೂ ಗಮನ ಸೆಳೆಯುತ್ತಾರೆ. ಇತರೆ ಸಮಕಾಲೀನ ನಟಿಯರಂತೆ ಗ್ಲಾಮರಸ್ ಮಾತ್ರ, ಮರ ಸುತ್ತುವ ಪಾತ್ರಗಳಲ್ಲಿ ಮಾತ್ರ ನಟಿಸದೆ ಸಮಾಜಕ್ಕೆ ಸಂದೇಶ ನೀಡುವ, ನಟನೆಗೆ ಒತ್ತು ಇರುವ ಪಾತ್ರಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಸಾಯಿ ಪಲ್ಲವಿ ಮೊದಲ ಬಾರಿ ಬಾಲಿವುಡ್​ಗೆ ಕಾಲಿಟ್ಟಿದ್ದು, ಮೊದಲ ಹೆಜ್ಜೆಯಲ್ಲೇ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಜೊತೆಗೆ ಮೊದಲ ಬಾಲಿವುಡ್ ಸಿನಿಮಾ ಮೂಲಕ ಇಷ್ಟು ವರ್ಷ ಪಾಲಿಸಿಕೊಂಡು ಬಂದ ಸಂಪ್ರದಾಯವೊಂದನ್ನು ಮುರಿದಿದ್ದಾರೆ.

ಸಾಯಿ ಪಲ್ಲವಿ ಹಿಂದಿಯ ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವುದು ತಿಳಿದೇ ಇದೆ. ಆದರೆ ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಸಿನಿಮಾ ಇದಲ್ಲ ಬದಲಿಗೆ ಆಮಿರ್ ಖಾನ್ ಪುತ್ರನ ಜೊತೆಗೆ ನಟಿಸಿರುವ ‘ಏಕ್ ದಿನ್’. 2024 ರ ಆರಂಭದಲ್ಲೇ ಚಿತ್ರೀಕರಣ ಶುರುವಾದರೂ ಬಹಳ ತಡವಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಸಾಯಿ ಪಲ್ಲವಿ ಸಖತ್ ಗಮನ ಸೆಳೆಯುತ್ತಿದ್ದಾರೆ.

ಆಮಿರ್ ಖಾನ್ ಪುತ್ರ ಝುನೈದ್ ಖಾನ್ ನಾಯಕನಾಗಿ ಸಾಯಿ ಪಲ್ಲವಿ ನಾಯಕಿಯಾಗಿರುವ ‘ಏಕ್ ದಿನ್’ ಸಿನಿಮಾ ಅಪ್ಪಟ ಪ್ರೇಮಕಥಾ ಸಿನಿಮಾ ಆಗಿದ್ದು, ಇಬ್ಬರು ಭಾರತೀಯರು ದೂರದ ಜಪಾನ್​ನಲ್ಲಿ ಪರಸ್ಪರ ಪ್ರೀತಿಗೆ ಬೀಳುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಜಪಾನ್​​ನಲ್ಲಿಯೇ ಚಿತ್ರೀಕರಿಸಲಾಗಿದ್ದು, ಸಿನಿಮಾದ ಟೀಸರ್​​ನಲ್ಲಿ ಜಪಾನ್​ ಸುಂದರ ತಾಣಗಳು ಅದ್ಭುತವಾಗಿ ಕಾಣುತ್ತಿವೆ.

ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?

‘ಏಕ್ ದಿನ್’ ಸಿನಿಮಾ, ಹೆಸರಿನಂತೆ ಒಂದೇ ದಿನದಲ್ಲಿ ನಡೆಯುವ ಕತೆ ಎನ್ನಲಾಗುತ್ತಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಾಯಿ ಪಲ್ಲವಿ ತಮ್ಮ ನಟನೆ, ಕ್ಯೂಟ್​​ನೆಸ್​​ನಿಂದ ಗಮನ ಸೆಳೆಯುತ್ತಿದ್ದಾರೆ. ಝುನೈದ್ ಖಾನ್ ಸಹ ಪ್ರಬುದ್ಧ ನಟನೆ ನೀಡಿದಂತೆ ಟೀಸರ್​​ನಲ್ಲಿ ಕಾಣುತ್ತಿದೆ. ಸಿನಿಮಾದ ಕತೆ ಇಬ್ಬರು ಪ್ರಬುದ್ಧರ ನಡುವೆ ನಡೆಯುವ ಪ್ರೇಮಕತೆಯನ್ನು ಒಳಗೊಂಡಿದೆಯಂತೆ.

‘ಏಕ್ ದಿನ್’ ಸಿನಿಮಾವನ್ನು ಸುನಿಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ರಾಮ್ ಸಂಪತ್ ಸಂಗೀತವಿದೆ. ಈ ಸಿನಿಮಾ 2016ರಲ್ಲಿ ಬಿಡುಗಡೆ ಆಗಿದ್ದ ಥಾಯ್ ಸಿನಿಮಾದ ರೀಮೇಕ್ ಆಗಿದೆ. ಅಸಲಿಗೆ ಸಾಯಿ ಪಲ್ಲವಿ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಈ ಹಿಂದೆ ರೀಮೇಕ್ ಸಿನಿಮಾ ಎಂಬ ಕಾರಣಕ್ಕೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶವನ್ನು ನಿರಾಕರಿಸಿದ್ದರು. ಖುದ್ದು ವೇದಿಕೆ ಮೇಲೆ ತಾವು ರೀಮೇಕ್ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಥಾಯ್ ಭಾಷೆಯ ‘ಒನ್ ಡೇ’ ಸಿನಿಮಾದ ರೀಮೇಕ್​​ನಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ‘ಏಕ್ ದಿನ್’ ಸಿನಿಮಾ ಮೇ 1 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾಸನದಲ್ಲಿ ಕಾಡಾನೆಗಳ ತುಂಟಾಟ! ಪರಸ್ಪರ ಕೋರೆ ಮರ್ದಿಸಿದ ಗಜಪಡೆ – Kannada News | Alur Elephant Operation: Wild elephant’s Playful Start Before Rogue Capture

ಹಾಸನ, ಜನವರಿ 16: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೊಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಶೋಭಾ ಎಂಬ ಮಹಿಳೆ ಬಲಿಯಾದ ಘಟನೆಗೆ ಸಂಬಂಧಿಸಿ, ಹಂತಕ ಆನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಧನಂಜಯ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಹಾಗೂ ಸುಗ್ರೀವ ಎಂಬ ಐದು ಸಾಕಾನೆಗಳು ಆಲೂರು ತಾಲ್ಲೂಕಿನ ಬೈರಾಪುರ ತಾತ್ಕಾಲಿಕ ಆನೆ ಶಿಬಿರಕ್ಕೆ ಆಗಮಿಸಿವೆ. ಕಾರ್ಯಾಚರಣೆ ಆರಂಭಕ್ಕೂ ಮುನ್ನ ಸಾಕಾನೆಗಳ ತುಂಟಾಟ ಎಲ್ಲರ ಗಮನ ಸೆಳೆದಿದ್ದು, ಧನಂಜಯ ಹಾಗೂ ಅಯ್ಯಪ್ಪ ಆನೆಗಳು ಪರಸ್ಪರ ಮುಖಾಮುಖಿಯಾಗಿ ಕೋರೆ ಮರ್ದಿಸಿ ಹುಡುಗಾಟ ನಡೆಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ನಿಂದನೆ ಪ್ರಕರಣ: ಬ್ಯಾನರ್ ತೆಗೆಸೋಕೆ ಇತ್ತು ಬಲವಾದ ಕಾರಣ

ಚಿಕ್ಕಬಳ್ಳಾಪುರ, ಜನವರಿ 16: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯ ಕೋಟೆ ಸರ್ಕಲ್‌ನಲ್ಲಿ ಅಳವಡಿಸಿದ್ದ ಅಕ್ರಮ ಬ್ಯಾನರ್ ತೆರವುಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಒಂದು ಚಲನಚಿತ್ರದ ಪ್ರಮೋಷನ್‌ಗಾಗಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಈ ಬ್ಯಾನರ್‌ನಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಗಾಳಿಗೆ ಅದು ಬೈಕ್ ಸವಾರರ ಮುಖಕ್ಕೆ ಅಪ್ಪಳಿಸಿ ಗಾಯಗೊಳಿಸುವ ಸಾಧ್ಯತೆಯೂ ಇತ್ತು ಎಂದು ಸ್ಥಳೀಯರು ಮತ್ತು ನಗರಸಭೆ ಸಿಬ್ಬಂದಿ ತಿಳಿಸಿದ್ದಾರೆ.

ಸಾರ್ವಜನಿಕ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರ ಸೂಚನೆ ಮೇರೆಗೆ ಸಿಬ್ಬಂದಿ ಬ್ಯಾನರ್ ಅನ್ನು ತೆರವುಗೊಳಿಸಿದ್ದರು. ಈ ಕ್ರಮದಿಂದ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಆಕ್ರೋಶಗೊಂಡಿದ್ದು, ಪೌರಾಯುಕ್ತ ಅಮೃತಾಗೌಡ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕದ್ದರು ಎಂದು ಆರೋಪಿಸಲಾಗಿದೆ. ಈ ಘಟನೆಯು ಶಿಡ್ಲಘಟ್ಟದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜೀವ್ ಗೌಡರ ವರ್ತನೆಯನ್ನು ಜನ ಖಂಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version