ಬೆಂಗಳೂರಿಗರಿಗೆ ಶುಭ ಸುದ್ದಿ: ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಿದ BMRCL – Kannada News | BMRCL Invites Civil Tenders for Bengaluru Orange Line Metro
ಬೆಂಗಳೂರು, ಜನವರಿ 13: ಜೆ.ಪಿ. ನಗರ, ಹೊಸಕೆರೆಹಳ್ಳಿ, ನಾಗರಭಾವಿ ಜನರಿಗೆ ಬಿಎಂಆರ್ಸಿಎಲ್ ಗುಡ್ನ್ಯೂಸ್ ಕೊಟ್ಟಿದೆ. ಬೆಂಗಳೂರಿನ ಬಹು ನಿರೀಕ್ಷಿತ ಆರೆಂಜ್ ಲೈನ್ ಮೆಟ್ರೋಗೆ ಸಿವಿಲ್ ಟೆಂಡರ್ ಆಹ್ವಾನಿಸಲಾಗಿದ್ದು, ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿವರೆಗಿನ ಕಾಮಗಾರಿಯನ್ನು ಇದು ಒಳಗೊಂಡಿದೆ. ಫೆಬ್ರವರಿ 20ರಿಂದ 25ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, ಮೂರು ಪ್ಯಾಕೇಜ್ನಲ್ಲಿ BMRCL ಸಿವಿಲ್ ಟೆಂಡರ್ ಕರೆದಿದೆ. ಮೂರು ಪ್ಯಾಜೇಜ್ಗಳಿಗೂ ಪ್ರತ್ಯೇಕ ಬಜೆಟ್ ನೀಡಲಾಗಿದೆ. ಪ್ಯಾಕೇಜ್ 1 ಜೆ.ಪಿ ನಗರ 4ನೇ ಹಂತದಿಂದ ಕಾಮಾಕ್ಯವರೆಗೆ ಡಬಲ್…